Tag: 56th birthday

  • ಬುರ್ಜ್‌ ಖಲೀಫಾ ಮೇಲೆ ಶಾರೂಖ್‌ ಖಾನ್‌ಗೆ ವರ್ಣರಂಜಿತ ಬರ್ತ್‌ ಡೇ ವಿಶ್‌

    ಬುರ್ಜ್‌ ಖಲೀಫಾ ಮೇಲೆ ಶಾರೂಖ್‌ ಖಾನ್‌ಗೆ ವರ್ಣರಂಜಿತ ಬರ್ತ್‌ ಡೇ ವಿಶ್‌

    ದುಬೈ: ಜೀವನದಲ್ಲಿ 56ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್‌ ಖ್ಯಾತ ನಟ ಶಾರೂಖ್‌ ಖಾನ್‌ ಅವರಿಗೆ ವಿಶ್ವದ ಅತ್ಯಂತ ಎತ್ತರದ ಕಟ್ಟಡ ದುಬೈನ ಬುರ್ಜ್‌ ಖಲೀಫಾ ಮೇಲೆ ಮಂಗಳವಾರ ರಾತ್ರಿ ವರ್ಣರಂಜಿತ ದೀಪಾಲಂಕಾರದೊಂದಿಗೆ ಶುಭಾಶಯ ತಿಳಿಸಲಾಯಿತು.

    ಶಾರೂಖ್ ಖಾನ್‌ ಅಭಿನಯದ ಸಿನಿಮಾದ ಹಾಡು, ಅವರ ಫೋಟೊ ಹಾಗೂ “ಜನ್ಮದಿನದ ಶುಭಾಶಯಗಳು ಶಾರೂಖ್ ಖಾನ್‌.. ವಿ ಲವ್‌ ಯು” ಎಂಬ ಸಾಲುಗಳು ಬುರ್ಜ್‌ ಖಲೀಫಾ ಕಟ್ಟಡ ಮೇಲೆ ವರ್ಣ ರಂಜಿತವಾಗಿ ರಾರಾಜಿಸಿದವು. ಈ ವಿಡಿಯೊವನ್ನು ಎಮರ್‌ ಪ್ರಾಪರ್ಟೀಸ್‌ ಸ್ಥಾಪಕ ಮೊಹಮದ್‌ ಅಲ್ಬರ್‌ ಅವರು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದು, ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ತಾರೆಯರು ಒಗ್ಗಟ್ಟಾಗಿರೋಣ: ಎಲ್ಲ ನಟರಿರುವ ಫೋಟೊ ಹಂಚಿಕೊಂಡು ಜಗ್ಗೇಶ್‌ ಕರೆ

    ಕಳೆದ ವರ್ಷವೂ ಬುರ್ಜ್‌ ಖಲೀಫಾ ಶಾರೂಖ್ ಖಾನ್‌ ಅವರ ಹುಟ್ಟುಹಬ್ಬದಂದು ವರ್ಣ ರಂಜಿತವಾಗಿ ಶುಭಾಶಯ ತಿಳಿಸಿತ್ತು. ಆಗ ವಿಡಿಯೊ ಹಂಚಿಕೊಂಡು ಶಾರೂಖ್, “ವಿಶ್ವದ ಅತ್ಯಂತ ಎತ್ತರದ ಕಟ್ಟಡದ ಪರದೆಯ ಮೇಲೆ ನನ್ನನ್ನು ನೋಡಲು ಸಂತೋಷವಾಗಿದೆ. ಸ್ನೇಹಿತ ಮೊಹಮದ್‌ ಅಲಬ್ಬರ್‌ ನನ್ನ ಮುಂದಿನ ಚಿತ್ರಕ್ಕೂ ಮುಂಚೆಯೇ ನನ್ನನ್ನು ದೊಡ್ಡ ಪರದೆಯ ಮೇಲೆ ಬಿಂಬಿಸಿದ್ದಾರೆ. ನಿಮ್ಮೆಲ್ಲರಿಗೂ ಪ್ರೀತಿಪೂರ್ವಕ ಧನ್ಯವಾದಗಳು. ನನ್ನ ಮಕ್ಕಳು ಇದರಿಂದ ಪುಳಕಿತರಾಗಿದ್ದಾರೆ. ನಾನು ಇದನ್ನು ಪ್ರೀತಿಸುತ್ತೇನೆ” ಎಂದು ಖುಷಿ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ʼಪುನೀತ ನೆನಪು’ ದುಬೈ ಕನ್ನಡಿಗಾಸ್ ಫೆಡರೇಷನ್ ವತಿಯಿಂದ ಅಪ್ಪುಗೆ ನುಡಿನಮನ

    ನಟ ಶಾರೂಖ್‌ ಖಾನ್‌ ಅವರು ನ.2ರಂದು ತಮ್ಮ 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಸಹ ವಿಶಿಷ್ಟವಾಗಿ ತಮ್ಮ ನೆಚ್ಚಿನ ನಟನ ಜನ್ಮದಿನ ಆಚರಿಸಿದ್ದಾರೆ.