Tag: 50th birthday

  • ಒಳ್ಳೆತನದಲ್ಲಿ ಅಪ್ಪು ಸರ್ ಯಾವಾಗಲೂ ಜೀವಂತವಾಗಿರುತ್ತಾರೆ: ಅನುಶ್ರೀ

    ಒಳ್ಳೆತನದಲ್ಲಿ ಅಪ್ಪು ಸರ್ ಯಾವಾಗಲೂ ಜೀವಂತವಾಗಿರುತ್ತಾರೆ: ಅನುಶ್ರೀ

    ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ನಿರೂಪಕಿ ಅನುಶ್ರೀ (Anushree), ನಮ್ರತಾ ಗೌಡ, ‘ಬಿಗ್ ಬಾಸ್’ ರಂಜಿತ್ ಕಂಠೀರವ ಸ್ಟುಡಿಯೋದಲ್ಲಿನ ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ಅನುಶ್ರೀ ಮಾಧ್ಯಮಕ್ಕೆ ಮಾತನಾಡಿ, ಒಳ್ಳೆತನದಲ್ಲಿ ಅಪ್ಪು ಸರ್ ಯಾವತ್ತಿಗೂ ಜೀವಂತವಾಗಿರುತ್ತಾರೆ ಎಂದು ಪುನೀತ್ ಅವರನ್ನು ಸ್ಮರಿಸಿದ್ದಾರೆ.

    ಅನುಶ್ರೀ ಮಾತನಾಡಿ, ಅಪ್ಪು ಸ್ಮಾರಕಕ್ಕೆ ಇವತ್ತು ಜಾತ್ರೆ ಹಾಗೇ ಜನ ಸೇರಿದ್ದಾರೆ. ಈ ರೀತಿ 50ನೇ ವರ್ಷದ ಹುಟ್ಟುಹಬ್ಬ ಯಾರಿಗೂ ಆಗಿರಲಿಲ್ಲ. ಲಕ್ಷಾಂತರ ಜನ ಅವರ ಹೆಸರನ್ನು ಕೂಗೋ ರೀತಿ ನೋಡಿದ್ರೆ ನಿಜಕ್ಕೂ ಅಪ್ಪು ಸರ್ ಇದೆನ್ನೆಲ್ಲಾ ಕೇಳಿಸಿಕೊಳ್ತಾರೆ ಎಂದಿದ್ದಾರೆ. ಇದನ್ನೂ ಓದಿ:ಅಪ್ಪು ಕೇವಲ ಹೆಸರಲ್ಲ, ಕನ್ನಡಿಗರಿಗೆ ಅದೊಂದು ಭಾವನೆ: ಶ್ರೀದೇವಿ ಭೈರಪ್ಪ

    ದಿನದಿಂದ ದಿನಕ್ಕೆ ಅಪ್ಪು ಸರ್ ಮೇಲಿನ ಅಭಿಮಾನಿಗಳ ಅಭಿಮಾನ ಜಾಸ್ತಿ ಆಗ್ತಿದೆ. ಸೂರ್ಯ ಚಂದ್ರ ಇರೋವರೆಗೂ ಅಪ್ಪು ಸರ್ ಅಭಿಮಾನಿಗಳ ಪ್ರೀತಿ ಯಾವತ್ತಿಗೂ ಗ್ರೇಟ್ ಆಗಿರುತ್ತದೆ. ಆ ಎಲ್ಲಾ ಅಭಿಮಾನಿಗಳಲ್ಲಿ ನಾನು ಒಬ್ಬಳು. ಸುಖದಲ್ಲಿ ತುಂಬಾ ಜನ ನಿಮ್ಮೊಂದಿಗೆ ಬಂದು ನಿಲ್ಲಬಹುದು. ಆದರೆ ಕಷ್ಟದಲ್ಲಿ ನಿಮ್ಮೊಂದಿಗೆ ನಿಲ್ಲವವರೇ ನಿಜವಾದ ಹೀರೋ. ನನ್ನೊಂದಿಗೆ ನನ್ನ ಕಷ್ಟದಲ್ಲಿ ನಿಂತಿದ್ದು ಅಪ್ಪು ಸರ್. ಅದನ್ನು ನಾನ್ ಯಾವತ್ತು ಮರೆಯೊಲ್ಲ. ನಾನು ಮಾಡೋ ಪ್ರತಿ ಕೆಲಸವನ್ನು ಅವರು ಪ್ರಶಂಸಿಸುತ್ತಿದ್ದರು. ಇವತ್ತಿಗೂ ಅವರನ್ನು ನೆನಪು ಮಾಡಿಕೊಂಡ್ರೆ ಸಾಕಷ್ಟು ವಿಚಾರಗಳು ನೆನಪಾಗುತ್ತದೆ ಎಂದು ಪುನೀತ್‌ರನ್ನು ನೆನೆದು ನಟಿ ಭಾವುಕರಾಗಿದ್ದಾರೆ.

    ಮೊನ್ನೆ ‘ಅಪ್ಪು’ ಸಿನಿಮಾ ನೋಡಿದಾಗ ಶುರುವಿನಲ್ಲಿ ಅವರಿಲ್ಲ ಅಂತ ಎಲ್ಲೂ ಅನಿಸಲಿಲ್ಲ. ಕಡೆಯಲ್ಲಿ ಸಿನಿಮಾ ಮುಗಿತಾ ಮತ್ತೆ ಒಂದು ವರ್ಷ ಕಾಯಬೇಕಾ ಅನಸ್ತು. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರೂ ಮಾನಸಿಕವಾಗಿ ನಮ್ಮ ಜೊತೆ ಇರುತ್ತಾರೆ. ಒಳ್ಳೆತನದಲ್ಲಿ ಅಪ್ಪು ಸರ್ ಯಾವತ್ತಿಗೂ ಜೀವಂತವಾಗಿರುತ್ತಾರೆ ಎಂದರು.

    ಬಳಿಕ ಅಭಿಮಾನಿಗಳು ತಂದ ಕೇಕ್ ಅನ್ನು ಅಪ್ಪು ಸ್ಮಾರಕದ ಬಳಿ ಅನುಶ್ರೀ ಕತ್ತರಿಸಿದರು. ಫ್ಯಾನ್ಸ್‌ಗೆ ತಿನ್ನಿಸಿ ಸಂಭ್ರಮಿಸಿದರು.

  • ಕರಣ್ ಜೋಹರ್ ಬರ್ತ್‌ಡೇ ಪಾರ್ಟಿಯಲ್ಲಿ ಸಿನಿ ತಾರೆಯರ ದಂಡು

    ಕರಣ್ ಜೋಹರ್ ಬರ್ತ್‌ಡೇ ಪಾರ್ಟಿಯಲ್ಲಿ ಸಿನಿ ತಾರೆಯರ ದಂಡು

    ಬಾಲಿವುಡ್‌ನ ಪ್ರತಿಭಾವಂತ ನಿರ್ಮಾಪಕ ಕರಣ್ ಜೋಹರ್ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಕರಣ್ ಹುಟ್ಟುಹಬ್ಬದ ಸಂಭ್ರಮಕ್ಕೆ ಇಡೀ ಚಿತ್ರರಂಗವೇ ಸಾಕ್ಷಿಯಾಗಿದೆ. ಪಾರ್ಟಿಗೆ ಆಗಮಿಸಿ ನಿರ್ಮಾಪಕ ಕರಣ್‌ಗೆ ಶುಭಹಾರೈಸಿದ್ದಾರೆ. ಯಾರೆಲ್ಲ ತಾರೆಯರು ಬರ್ತ್‌ಡೇ ಸಂಭ್ರಮಕ್ಕೆ ಸಾಕ್ಷಿಯಾದರು.. ಇಲ್ಲಿದೆ ಡಿಟೈಲ್ಸ್

    ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಿರೂಪಕನಾಗಿ ಹಿಂದಿ ಚಿತ್ರರಂಗಕ್ಕೆ ಕೊಟ್ಟಿರೋ ಕೊಡುಗೆ ಅಪಾರ. ಇನ್ನು ಮೇ 25ರಂದು 50ನೇ ವರ್ಷಕ್ಕೆ ಕರಣ್ ಜೋಹರ್ ಕಾಲಿಟ್ಟಿದ್ದಾರೆ.

    ಆಫ್‌ ಸೆಂಚುರಿ ಭಾರಿಸಿರೋ ಕರಣ್ ಬರ್ತಡೇಯನ್ನ ಅದ್ದೂರಿಯಾಗಿ ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಆಚರಿಸಲಾಯ್ತು. ಒಂದ್ ಕಡೆ ಕರಣ್ ಹುಟ್ಟುಹಬ್ಬ ಅನ್ನೋ ಖುಷಿಯಾಗಿದ್ರೆ, ಬರ್ತ್‌ಡೇಗೆ ಮತ್ತಷ್ಟು ಹೊಳಪು ತುಂಬಲು ಬಾಲಿವುಡ್ ಮತ್ತು ಸೌತ್ ಸಿನಿರಂಗದ ತಾರೆಯರೆಲ್ಲ ಜೊತೆಯಾಗಿದ್ದೆ ಮತ್ತೊಂದು ವಿಶೇಷ. ಇದನ್ನೂ ಓದಿ: ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಕರಣ್ ಜೋಹರ್ ಹುಟ್ಟುಹಬ್ಬದ ಪಾರ್ಟಿಗೆ ಸಲ್ಮಾನ್ ಖಾನ್,ಕರೀನಾ ಮತ್ತು ಸೈಫ್ ಆಲಿಖಾನ್, ವಿಕ್ಕಿ ಮತ್ತು ಕತ್ರಿನಾ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ, ಟೈಗರ್ ಶ್ರಾಫ್, ಸಿದ್ಧಾರ್ಥ್ ಮತ್ತು ಪ್ರಿಯಾಂಕಾ ಚೋಪ್ರಾ, ವರುಣ್ ಧವನ್, ಕಿಯಾರಾ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್, ರಣ್‌ಬೀರ್ ಕಪೂರ್ ಮತ್ತು ನೀತು ಕಪೂರ್ ಹೀಗೆ ಸಾಕಷ್ಟು ಸ್ಟಾರ್ಸ್ ಈ ಪಾರ್ಟಿಗೆ ಭಾಗವಹಿಸಿದ್ದರು.

    ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.