Tag: 500 ರೂ.

  • ಶೀಘ್ರವೇ ಬರಲಿದೆ 200, 500 ಮುಖಬೆಲೆಯ ಹೊಸ ನೋಟುಗಳು

    ಶೀಘ್ರವೇ ಬರಲಿದೆ 200, 500 ಮುಖಬೆಲೆಯ ಹೊಸ ನೋಟುಗಳು

    ನವದೆಹಲಿ: ಶೀಘ್ರವೇ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ 200 ಮತ್ತು 500 ಮುಖಬೆಲೆಯ ನೋಟುಗಳನ್ನು ಪರಿಚಯಿಸಲಿದೆ.

    ಮಹಾತ್ಮ ಗಾಂಧೀಜಿ ಭಾವಚಿತ್ರದ ಜೊತೆಗೆ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಸಹಿ ಈ ನೋಟ್ ನಲ್ಲಿ ಇರಲಿದೆ. ಶಕ್ತಿಕಾಂತ್ ದಾಸ್ ಅವರ ಸಹಿ, ಸೀರಿಸ್ ಹೊರತುಪಡಿಸಿ ಸದ್ಯ ಚಾಲ್ತಿಯಲ್ಲಿರುವ ನೋಟ್ ಗಳಿಗೂ ಹೊಸ ನೋಟ್‍ಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಆರ್ ಬಿಐ ತಿಳಿಸಿದೆ.

    ಹೊಸ ನೋಟುಗಳು ಬಿಡುಗಡೆಯಾದ ಬಳಿಕವೂ ಹಳೆಯ ನೋಟುಗಳು ಚಾಲ್ತಿಯಲ್ಲಿರಲಿವೆ. ಆದರೆ ಆರ್ ಬಿಐ ಈ ಹೊಸ ನೋಟುಗಳನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎನ್ನುವ ವಿಚಾರವನ್ನು ಪ್ರಕಟಿಸಿಲ್ಲ.

  • ಆರ್‍ಬಿಐನಿಂದ ಹೊಸ ಬ್ಯಾಚ್‍ನ 500 ರೂ. ನೋಟ್ ಬಿಡುಗಡೆ

    ಆರ್‍ಬಿಐನಿಂದ ಹೊಸ ಬ್ಯಾಚ್‍ನ 500 ರೂ. ನೋಟ್ ಬಿಡುಗಡೆ

    ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಬ್ಯಾಚ್‍ನ 500 ರೂ. ನೋಟ್‍ಗಳನ್ನ ಬಿಡುಗಡೆ ಮಾಡುತ್ತಿದೆ.

    ಈ ಹೊಸ ನೋಟ್‍ಗಳು ಹಳೇ ನೋಟಿನ ವಿನ್ಯಾಸದಲ್ಲೇ ಇದ್ದು, ಹೊಸ ನೋಟಿನ ನಂಬರ್ ಪ್ಯಾನೆಲ್‍ನಲ್ಲಿ ‘A’ ಅಕ್ಷರ ಇರಲಿದೆ.

    ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ಆರ್‍ಬಿಐ, ಹೊಸ ಬ್ಯಾಚ್‍ನ 500 ರೂ. ನೋಟ್ ಬಿಡುಗಡೆ ಮಾಡಲಾಗುತ್ತಿದ್ದು, ಈ ನೋಟ್‍ಗಳಲ್ಲಿ ಎರಡೂ ನಂಬರ್ ಪ್ಯಾನೆಲ್‍ನಲ್ಲಿ ‘A’ ಅಕ್ಷರ ಹಾಗೂ ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಇರಲಿದೆ. ಹಿಂಭಾಗದಲ್ಲಿ ಮುದ್ರಣದ ವರ್ಷ 2017 ಇರುವ ನೋಟ್‍ಗಳನ್ನ ವಿತರಿಸಲಾಗುತ್ತಿದೆ ಎಂದು ತಿಳಿಸಿದೆ.

    ಈ ಹೊಸ 500 ರೂ. ನೋಟಿನ ವಿನ್ಯಾಸ ಈಗಾಗಲೇ ವಿತರಿಸಲಾಗಿರುವ ಮಹಾತ್ಮ ಗಾಂಧಿ ಸೀರೀಸ್‍ನ ನೋಟಿನಂತೆಯೇ ಇದೆ ಎಂದು ಆರ್‍ಬಿಐ ತಿಳಿಸಿದೆ.

    ನವೆಂಬರ್ 8ರಂದು ನೋಟ್‍ಬ್ಯಾನ್ ಆದ ನಂತರ ಹಳೇ 500 ಹಾಗೂ 1000 ರೂ. ನೋಟ್‍ಗಳನ್ನ ರದ್ದು ಮಾಡಿ ಹೊಸ 500 ಹಾಗೂ 2000 ರೂ. ಮುಖಬೆಲೆಯ ನೋಟುಗಳನ್ನ ಪರಿಸಚಯಿಸಲಾಗಿತ್ತು. ಪ್ರಸ್ತುತ 500 ರೂ. ನೋಟಿನ ಮುಂಭಾಗದಲ್ಲಿ ಎಡ ಭಾಗದಲ್ಲಿ ಮೇಲೆ ಹಾಗೂ ಬಲಭಾಗದಲ್ಲಿ ಕೆಳಗೆ ಇರುವ ಎರಡೂ ನಂಬರ್ ಪ್ಯಾನೆಲ್‍ನಲ್ಲಿ ‘E’ ಅಕ್ಷರವಿದೆ. ಅಲ್ಲದೆ ಮಹಾತ್ಮ ಗಾಂಧಿಯ ಭಾವಚಿತ್ರ, ಅಶೋಕ ಸ್ತಂಭ, ಬ್ಲೀಡ್ ಲೈನ್‍ಗಳು, ಬಲಭಾಗದಲ್ಲಿ 500 ಎಂಬ ಮುದ್ರಣ ಹಾಗೂ ಊರ್ಜಿತ್ ಪಟೇಲ್ ಅವರ ಸಹಿ ಇದೆ. ನೋಟಿನ ಹಿಂಭಾಗದಲ್ಲಿ ಸ್ವಚ್ಛ ಭಾರತದ ಲಾಂಛನ, ಕೆಂಪು ಕೋಟೆಯ ಚಿತ್ರ ಹಾಗೂ ನೋಟು ಮುದ್ರಣದ ವರ್ಷ ಇದೆ.

    ‘A’ ಅಕ್ಷರವಿರುವ ಹೊಸ ನೋಟುಗಳ ಜೊತೆಗೆ ಪ್ರಸ್ತುತ ಇರುವ ನೋಟುಗಳು ಕೂಡ ಚಾಲ್ತಿಯಲ್ಲಿರಲಿದೆ ಎಂದು ಆರ್‍ಬಿಐ ತಿಳಿಸಿದೆ.

  • ಮಂಡ್ಯ: ಭಕ್ತ ಮಂಗಳಾರತಿ ತಟ್ಟೆಯಿಂದ ಹಣ ಎಗರಿಸೋ ವೀಡಿಯೋ ವೈರಲ್!

    ಮಂಡ್ಯ: ಭಕ್ತ ಮಂಗಳಾರತಿ ತಟ್ಟೆಯಿಂದ ಹಣ ಎಗರಿಸೋ ವೀಡಿಯೋ ವೈರಲ್!

    ಮಂಡ್ಯ: ದೇವರ ಪೂಜೆಗೆಂದು ಬಂದ ಭಕ್ತ ಮಹಾಶಯನೊಬ್ಬ ಮಂಗಳಾರತಿ ತಟ್ಟೆಯಲ್ಲಿದ್ದ ಹಣಕ್ಕೆ ಆಸೆಬಿದ್ದು ದೇವರನ್ನೇ ಮರೆತು ಹಣ ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೂರು ದಿನಗಳ ಹಿಂದೆ ಮಂಡ್ಯ ಜಿಲ್ಲೆ, ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಭಕ್ತಮಹಾಶಯನೊಬ್ಬ ಬಂದಿದ್ದಾನೆ. ದೇವರಿಗೆ ಕೈಮುಗಿಯಲು ನಿಂತ ಭಕ್ತನಿಗೆ ಪಕ್ಕದಲ್ಲೇ ಇದ್ದ ಮಂಗಳಾರತಿ ತಟ್ಟೆ ಕಣ್ಣಿಗೆ ಬಿದ್ದಿದೆ. ಅಷ್ಟಕ್ಕೆ ಭಕ್ತ ಮಹಾಶಯನ ಭಕ್ತಿ ಹಾರಿ ಹೋಗಿ ತನ್ನ ಸುತ್ತಮುತ್ತ ಯಾರಾದರೂ ಇದ್ದಾರ ಅಂತಾ ಗಮನಿಸಿದ್ದಾನೆ. ಬಳಿಕ ದೇವರಲ್ಲಿ ಬೇಡಿಕೊಳ್ಳುವವನ ರೀತಿ ಮಂಗಳಾರತಿ ತಟ್ಟೆ ಬಳಿ ಕುಳಿತಿದ್ದಾನೆ. ತನ್ನನ್ನು ಯಾರೂ ನೋಡುತ್ತಿಲ್ಲ ಎಂದು ಖಾತ್ರಿಯಾದ ನಂತರ ಮಂಗಳಾರತಿ ತಟ್ಟೆಯಲ್ಲಿದ್ದ ಐನೂರು ರೂಪಾಯಿ ನೋಟು ಎಗರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

    ಭಕ್ತ ಮಹಾಶಯನ ಕೃತ್ಯ ದೇವಾಲಯದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲೆಯಾದ್ಯಂತ ವಿಡಿಯೋ ವೈರಲ್ ಆಗಿದೆ.

    https://www.youtube.com/watch?v=Wv1R74u0OC8&feature=youtu.be

  • ಮಂತ್ರಾಲಯ ಮಠದ ಹುಂಡಿಗೆ ಬಿತ್ತು ನಿಷೇಧಿತ ಲಕ್ಷಾಂತರ ರೂ.!

    ರಾಯಚೂರು: ಮಂತ್ರಾಲಯ ಶ್ರೀಗುರು ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿಗಳಿಗೆ ಈಗಲೂ ಭಕ್ತರು ಲಕ್ಷಾಂತರ ರೂಪಾಯಿ ರದ್ದಾದ 500, 1000 ರೂ ಮುಖಬೆಲೆ ನೋಟುಗಳನ್ನೇ ಹಾಕುತ್ತಿದ್ದಾರೆ. ಜನವರಿ ಅಂತ್ಯಕ್ಕೆ ಎಣಿಸಲಾದ ಮಠದ ಹುಂಡಿಗಳ ಒಂದು ತಿಂಗಳ ಒಟ್ಟು ಕಾಣಿಕೆ 1 ಕೋಟಿ 49 ಲಕ್ಷ ರೂಪಾಯಿ ಇದ್ದು, ಇದರಲ್ಲಿ 4 ಲಕ್ಷ 28 ಸಾವಿರದ 500 ರೂಪಾಯಿ ರದ್ದಾದ ನೋಟುಗಳಿವೆ. 1000 ರೂ. ಮುಖಬೆಲೆಯ 157 ನೋಟು ಹಾಗೂ 500 ರೂ. ಮುಖಬೆಲೆಯ 543 ನೋಟುಗಳಿವೆ.

    ಕಳೆದ ವರ್ಷ ಡಿಸೆಂಬರ್ ನಲ್ಲಿ 14 ಲಕ್ಷ 74 ಸಾವಿರ ರೂಪಾಯಿ ರದ್ದಾದ ನೋಟುಗಳು ಪತ್ತೆಯಾಗಿದ್ದವು. ಹಳೆಯ ನೋಟುಗಳು ಕಳೆದ ತಿಂಗಳಿಗಿಂತ 10 ಲಕ್ಷ ರೂಪಾಯಷ್ಟು ಕಡಿಮೆಯಾದ್ರು, ನೋಟು ಬದಲಾವಣೆ ಮಠಕ್ಕೆ ತಲೆನೋವಾಗಿದೆ. ಚೆನೈನ ಆರ್ ಬಿ ಐ ಕಚೇರಿಗೆ ಮಠದ ಆಡಳಿತ ಮಂಡಳಿ ಪತ್ರ ಬರೆದಿದ್ದು, ಮಾಹಿತಿ ಬಂದ ಬಳಿಕ ಹಣ ಬದಲಾವಣೆ ಮಾಡಲಾಗುವುದು ಅಂತ ಮಠದ ವ್ಯವಸ್ಥಾಪಕ ಶ್ರೀನಿವಾಸರಾವ್ ತಿಳಿಸಿದ್ದಾರೆ.

    ಇನ್ನೂ ದೊಡ್ಡ ಮೊತ್ತದ ನೋಟುಗಳು ರದ್ದಾಗಿರುವುದು ಮಠದ ಆದಾಯದ ಮೇಲೆ ಇದುವರೆಗೆ ಯಾವುದೇ ಪರಿಣಾಮ ಬೀರಿಲ್ಲ. ಪ್ರತಿ ತಿಂಗಳು ಸರಾಸರಿ 1 ಕೋಟಿ 30 ಲಕ್ಷದಷ್ಟು ಕಾಣಿಕೆ ಸಂಗ್ರಹವಾಗುತ್ತಲೇ ಇದೆ. ನಗದು ಕಾಣಿಕೆ ಜೊತೆಗೆ ಜನವರಿ ತಿಂಗಳಲ್ಲಿ ಭಕ್ತರು 76 ಗ್ರಾಂ ಚಿನ್ನ. 650 ಗ್ರಾಂ.ಬೆಳ್ಳಿ ಹಾಗೂ 2764 ರೂ.ವಿದೇಶಿ ಕರೆನ್ಸಿಯನ್ನೂ ದೇಣಿಗೆಯಾಗಿ ನೀಡಿದ್ದಾರೆ.