Tag: 500ರೂ.

  • ಟೊಮೆಟೋ ಮಾರಿದ್ದಕ್ಕೆ ರೈತನಿಗೆ ಸಿಕ್ತು 500ರೂ. ನಕಲಿ ನೋಟು!

    ಟೊಮೆಟೋ ಮಾರಿದ್ದಕ್ಕೆ ರೈತನಿಗೆ ಸಿಕ್ತು 500ರೂ. ನಕಲಿ ನೋಟು!

    ರಾಮನಗರ: ರೈತನೋರ್ವ ತಾನು ಬೆಳೆದ ಟೊಮೆಟೋವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ವೇಳೆ ಬಂದ ಹಣದಲ್ಲಿ ನಕಲಿ ಜೆರಾಕ್ಸ್ ನೋಟೊಂದು ಪತ್ತೆಯಾಗಿರುವ ಘಟನೆ ರಾಮನಗರದಲ್ಲಿ ನಡೆದಿದೆ.

    ರಾಮನಗರದ ಕೃಷಿ ಮಾರುಕಟ್ಟೆಗೆ ಚನ್ನಪಟ್ಟಣದ ರೈತ ಸುಜೀವನ್‍ಕುಮಾರ್ ಎಂಬುವವರು ಸುಮಾರು 30 ಕ್ರೇಟ್ ಟೊಮೆಟೋವನ್ನ ತಂದಿದ್ರು. ತಾವು ತಂದಿದ್ದ ಎಲ್ಲ ಟೊಮೆಟೋವನ್ನು ಮಾರಾಟ ಮಾಡಿದ ವೇಳೆ ವರ್ತಕ ಹಣವನ್ನ ನೀಡಿದ್ದಾನೆ. ವರ್ತಕನಿಂದ ಹಣ ಪಡೆದ ಬಳಿಕ ಹಣ ಎಣಿಸಿಕೊಳ್ಳುವ ವೇಳೆ ಜೆರಾಕ್ಸ್ ನೋಟು ಪತ್ತೆಯಾಗಿದೆ.

    500 ರೂಪಾಯಿಯ ಜೆರಾಕ್ಸ್ ನೋಟು ಪತ್ತೆಯಾದ ಬಳಿಕ ಹಣ ನೀಡಿದ ವರ್ತಕನ ಹುಡುಕಾಟ ಸಹ ನಡೆಸಿದ್ದಾರೆ. ನಂತರ ರೈತ ಸುಜೀವನ್ ಕುಮಾರ್ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ತಮಗೆ 500 ರೂಪಾಯಿಯ ಜೆರಾಕ್ಸ್ ನೋಟು ಬಂದ ಬಗೆಯನ್ನು ವಿವರಿಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

    ಬೆಳಗ್ಗೆ ಮಾರುಕಟ್ಟೆಯಲ್ಲಿ ಹಣ ನೀಡಿದ ವರ್ತಕ ಯಾರೆಂದು ಪತ್ತೆ ಹಚ್ಚುವಂತೆ ರೈತ ಆಗ್ರಹಿಸಿದ್ದಾರೆ. ಅಲ್ಲದೇ ಮಾರುಕಟ್ಟೆಯಲ್ಲಿ ಖೋಟಾನೋಟುಗಳ ಹಾವಳಿ ಹೆಚ್ಚಾಗುತ್ತಿದೆ ಕೂಡಲೇ ಪೊಲೀಸ್ರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯ ಮಾಡಿದ್ದಾರೆ.

  • ಕೊಪ್ಪಳ: ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು 2000 ರೂ. ನಕಲಿ ನೋಟು

    ಕೊಪ್ಪಳ: ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು 2000 ರೂ. ನಕಲಿ ನೋಟು

    ಕೊಪ್ಪಳ: ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ 500 ಹಾಗೂ 2 ಸಾವಿರ ರೂ. ನಕಲಿ ನೋಟುಗಳು ಪತ್ತೆಯಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಇಲ್ಲಿನ ಗಂಗಾವತಿ ನಗರದ ಹಿರೇಜಂತಕಲ್ ಐತಿಹಾಸಿಕ ದೇವಸ್ಥಾನದ ಪ್ರಸನ್ನ ಪಂಪಾತಿಯ ಕಾಣಿಕೆ ಹುಂಡಿಯಲ್ಲಿ ಈ ನೋಟುಗಳು ದೊರೆತಿವೆ. ದೇವಸ್ಥಾನದ ಆಡಳಿತಾಧಿಕಾರಿ ಗಂಗಾವತಿಯ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲಿ ಕಾಣಿಕೆ ಹುಂಡಿಯಲ್ಲಿನ ಹಣ ಸಂಗ್ರಹಿಸಲು ಮುಂದಾಗಿದ್ರು. ನಂವೆಬರ್ 8 ರಂದು 500 ಮತ್ತು 1000 ಮುಖಬೆಲೆಯ ನೋಟುಗಳು ನಿಷೇಧವಾಗಿದೆ. ಆದ್ರೆ ಹುಂಡಿ ತೆಗೆದಾಗ ನಿಷೇಧಿತ 500 ರೂಪಾಯಿ ಹಾಗೂ ನಕಲಿ 2 ಸಾವಿರ ಮುಖಬೆಲೆಯ ನೋಟುಗಳು ಪತ್ತೆಯಾಗಿದೆ.

    ಹುಂಡಿಯಲ್ಲಿ ಪತ್ತೆಯಾದ 2000 ಮುಖಬೆಲೆಯ ಹಾಗೂ ಹಳೇ 500 ರೂ. ನೋಟು ಮಕ್ಕಳು ಆಡುವ ಆಟಿಕೆ ನೋಟುಗಳಾಗಿವೆ. ಆಟಿಕೆಯ ಎರಡು ಸಾವಿರದ ನೋಟು ಗಾತ್ರದಲ್ಲಿ ಚಿಕ್ಕದಾಗಿದ್ದು, ಬಹುತೇಕ ಅಸಲಿ ನೋಟಿನ ವಿನ್ಯಾಸವನ್ನೇ ಹೋಲುತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಕ್ಕಳು ಹುಂಡಿಯಲ್ಲಿ ಆಟಿಕೆ ನೋಟುಗಳನ್ನು ಹಾಕಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹುಂಡಿಯಲ್ಲಿ ಒಟ್ಟು 38,770 ರೂಪಾಯಿ ಹಣ ಸಂಗ್ರಹವಾಗಿದ್ದು, ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ತಹಶೀಲ್ದಾರ್ ಎಲ್.ಡಿ ಚಂದ್ರಕಾಂತ್ ಮಾಹಿತಿ ನೀಡಿದ್ರು.