Tag: 500

  • ಹಳೇ 500, 1000 ರೂ. ನೋಟುಗಳನ್ನ ಎಕ್ಸ್ ಚೇಂಜ್ ಮಾಡಲು ಬಂದ ಮೂವರ ಬಂಧನ- 1.95 ಕೋಟಿ ರೂ. ಹಳೇನೋಟು ವಶ

    ಹಳೇ 500, 1000 ರೂ. ನೋಟುಗಳನ್ನ ಎಕ್ಸ್ ಚೇಂಜ್ ಮಾಡಲು ಬಂದ ಮೂವರ ಬಂಧನ- 1.95 ಕೋಟಿ ರೂ. ಹಳೇನೋಟು ವಶ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಳೇ ನೋಟುಗಳ ಎಕ್ಸ್ ಚೇಂಜ್ ದಂಧೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ನೋಟ್ ಬ್ಯಾನ್ ಆಗಿ 16 ತಿಂಗಳು ಕಳೆದು ಹೋದ್ರೂ ಹಳೇ ನೋಟುಗಳ ಅಕ್ರಮ ಬದಲಾವಣೆ ಮಾತ್ರ ಇನ್ನೂ ನಿಂತಿಲ್ಲ.

    ಕಳೆದ ರಾತ್ರಿ ಹಳೇ 1000 ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನ ಎಕ್ಸ್ ಚೇಂಜ್ ಮಾಡಲು ಬಂದ ಮೂವರನ್ನ ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅರೋಪಿಗಳ ಬಳಿ 1.95 ಕೋಟಿ ಹಳೇ ನೋಟುಗಳು ಪತ್ತೆಯಾಗಿದ್ದು, ಇವರು ಮಧ್ಯವರ್ತಿಯೊಬ್ಬನ ಮೂಲಕ ಹೊಸ ನೋಟುಗಳಿಗೆ ಎಕ್ಸ್ ಚೇಂಜ್ ಮಾಡಲು ಬಂದಿದ್ದರು ಎನ್ನಲಾಗಿದೆ.

    ಕೊತ್ತನೂರು ಮುಖ್ಯರಸ್ತೆಯ ಗೋಲ್ಡನ್ ಪಾಮ್ ಅಪಾರ್ಟ್‍ಮೆಂಟ್ ನಲ್ಲಿ ವ್ಯವಹಾರ ಕುದುರಿಸಿದ್ದ ಇವರು ಹೊಸ ನೋಟು ಎಕ್ಸ್ ಚೇಂಜ್ ಮಾಡುತ್ತಿದ್ದ ಮತ್ತೊಬ್ಬ ಮಧ್ಯವರ್ತಿಗಾಗಿ ಕಾಯುತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊತ್ತನೂರು ಪೊಲೀಸರು, ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನೋಟು ಎಕ್ಸ್ ಚೇಂಜ್ ದಂಧೆ ಬೆಳಕಿಗೆ ಬಂದಿದೆ.

    ಇಷ್ಟು ದೊಡ್ಡ ಪ್ರಮಾಣದ ಹಳೇ ನೋಟುಗಳನ್ನ ಎಲ್ಲಿಂದ ತಂದಿದ್ದಾರೆ ಮತ್ತು ಯಾರಿಗೆ ಸೇರಿದ್ದು ಎಂಬುದನ್ನ ಪೊಲೀಸರು ಪತ್ತೆ ಹಚ್ಚಲು ಮುಂದಾಗಿದ್ದಾರೆ.

    ಸಾಂದರ್ಭಿಕ ಚಿತ್ರ
  • ಆನೇಕಲ್ ಬಳಿ 500, 2000 ರೂ. ಖೋಟಾ ನೋಟು ಮುದ್ರಿಸ್ತಿದ್ದವರನ್ನ ಬಂಧಿಸಿದ ಕೇರಳ ಪೊಲೀಸರು

    ಆನೇಕಲ್ ಬಳಿ 500, 2000 ರೂ. ಖೋಟಾ ನೋಟು ಮುದ್ರಿಸ್ತಿದ್ದವರನ್ನ ಬಂಧಿಸಿದ ಕೇರಳ ಪೊಲೀಸರು

    ಬೆಂಗಳೂರು: ನೋಟ್‍ಬ್ಯಾನ್ ಆಗಿ ಬುಧವಾರ ಒಂದು ವರ್ಷ ಪೂರೈಸುತ್ತಿರೋ ಹೊತ್ತಲ್ಲೇ ಆನೇಕಲ್ ಬಳಿ ಖೋಟಾನೋಟು ದಂಧೆ ನಡೆಸುತ್ತಿದ್ದ ವಿಚಾರ ಬಯಲಾಗಿದೆ. ಖೋಟಾ ನೋಟು ಮುದ್ರಿಸುತ್ತಿದ್ದ 3 ಆರೋಪಿಗಳನ್ನ ಕೇರಳ ಪೊಲೀಸರು ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ರಾಮಸಾಗರದಲ್ಲಿ ಬಂಧಿಸಿದ್ದಾರೆ.

    ಓಲ್ಡ್ ಜೋಸೆಫ್(30)ಖೋಟಾ ನೋಟು ಪ್ರಿಂಟ್ ಮಾಡುತಿದ್ದ. ಬಂಧಿತ ಆರೋಪಿಗಳು ಕೇರಳ ಮೂಲದವರಾಗಿದ್ದಾರೆ. ರಾಮಸಾಗರದ ನಾರಾಯಣ ರೆಡ್ಡಿ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಸೀರೆ ವ್ಯಾಪಾರ ಮಾಡುವುದಾಗಿ ಮನೆ ಬಾಡಿಗೆ ಪಡೆದಿದ್ದರು ಎಂದು ತಿಳಿದುಬಂದಿದೆ.

    ಬಂಧಿತರು ಹೊಸ 2000 ಸಾವಿರ ರೂ. ಹಾಗು 500 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿದ್ದರು. ಸದ್ಯ ಕೇರಳ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದು, ಸುಮಾರು 50 ಲಕ್ಷ ರೂ. ಖೋಟಾ ನೋಟು ಹಾಗು ಪ್ರಿಂಟಿಂಗ್ ಮಿಷೀನ್ ವಶಕ್ಕೆ ಪಡೆದಿದ್ದಾರೆ.

    ಆನೇಕಲ್ ತಾಲೂಕಿನ ಸೂರ್ಯ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • 500, 1000 ರೂ. ನೋಟು ವಿನಿಮಯ: ರಾಯಚೂರಿನಲ್ಲಿ ಮೂವರ ಬಂಧನ

    500, 1000 ರೂ. ನೋಟು ವಿನಿಮಯ: ರಾಯಚೂರಿನಲ್ಲಿ ಮೂವರ ಬಂಧನ

    – 16.70 ಲಕ್ಷ ರೂಪಾಯಿ ಹಳೆಯ ನೋಟು, ಒಂದು ಕಾರು ಜಪ್ತಿ

    ರಾಯಚೂರು: ರದ್ದಾಗಿರುವ 500, 1000 ಮುಖಬೆಲೆಯ ನೋಟುಗಳ ವಿನಿಮಯ ಮಾಡುತ್ತಿದ್ದ ಮೂವರು ದಂಧೆಕೋರರನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ.

    ನಗರದ ಪಶ್ಚಿಮ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಮೂರು ಜನ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಧಾರವಾಡ ಮೂಲದ ರವಿಕುಮಾರ್, ರಾಯಚೂರಿನ ಅನ್ವರ್, ಮಾನ್ವಿಯ ಪರಶುರಾಮ ನೋಟು ವಿನಿಮಯ ವೇಳೆ ಸಿಕ್ಕಿಬಿದ್ದ ಆರೋಪಿಗಳು. ಬಂಧಿತರಿಂದ ಒಟ್ಟು 16 ಲಕ್ಷ 70 ಸಾವಿರ ರೂಪಾಯಿ ಹಳೆಯ ನೋಟುಗಳನ್ನ ಜಪ್ತಿ ಮಾಡಲಾಗಿದೆ. ಇದರಲ್ಲಿ 3 ಲಕ್ಷ 82 ಸಾವಿರ ರೂಪಾಯಿ ಸಾವಿರ ರೂಪಾಯಿ ಮುಖಬೆಲೆಯ ನೋಟು, 12 ಲಕ್ಷ 88 ಸಾವಿರ ರೂಪಾಯಿ 500 ರೂಪಾಯಿ ಮುಖಬೆಲೆಯ ನೋಟುಗಳಾಗಿವೆ.

    ರಾಯಚೂರಿನ ಮಂತ್ರಾಲಯ ರಸ್ತೆಯ ಅತಿಥಿ ಹೋಟೆಲ್ ಎದುರು ಆರೋಪಿಗಳು ಹಣ ವಿನಿಮಯಕ್ಕೆ ಮುಂದಾಗಿದ್ದರು. ದಾಳಿ ವೇಳೆ ಪೊಲೀಸರು ಆರೋಪಿಗಳ ಕಾರನ್ನೂ ಜಪ್ತಿ ಮಾಡಿದ್ದಾರೆ. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.