Tag: 50 Paise

  • 50 ಪೈಸೆ ಸಾಲಕ್ಕೆ ನೋಟಿಸ್ ಕಳುಹಿಸಿದ ಬ್ಯಾಂಕ್

    50 ಪೈಸೆ ಸಾಲಕ್ಕೆ ನೋಟಿಸ್ ಕಳುಹಿಸಿದ ಬ್ಯಾಂಕ್

    – ತಂದೆ ಕಟ್ಟಲೂ ತೆರಳಿದರೂ ಸ್ವೀಕರಿಸಿಲ್ಲ

    ಜೈಪುರ: 50 ಪೈಸೆ ಸಾಲ ಉಳಿಸಿಕೊಂಡಿದ್ದಕ್ಕಾಗಿ ಬ್ಯಾಂಕ್ ನೋಟಿಸ್ ಕಳುಹಿಸಿದ್ದು, ಕಟ್ಟಲು ಬ್ಯಾಂಕಿಗೆ ತೆರಳಿದರೆ ಹಣ ಪಡೆಯಲು ನಿರಾಕರಿಸಿದೆ.

    ಈ ಘಟನೆ ರಾಜಸ್ಥಾನದ ಜುಂಜುನು ಜಿಲ್ಲೆಯ ಖೇಟ್ರಿ ಗ್ರಾಮದಲ್ಲಿ ನಡೆದಿದ್ದು, ಬಾಕಿ ಉಳಿದಿರುವ 50 ಪೈಸೆಯನ್ನು ಕಟ್ಟುವಂತೆ ಬ್ಯಾಂಕ್ ಜಿತೇಂದ್ರ ಸಿಂಗ್ ಅವರ ಮನೆಗೆ ರಾತ್ರಿ ವೇಳೆ ನೋಟಿಸ್ ಅಂಟಿಸಿದೆ.

    ನೋಟಿಸ್ ಸ್ವೀಕರಿಸಲು ಸಿಂಗ್ ನಿರಾಕರಿಸಿದ್ದು, ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಸಿಂಗ್ ಬೆನ್ನು ಮೂಳೆ ಮುರಿತದಿಂದ ಬಳಲುತ್ತಿದ್ದು, ಬಾಕಿ ಹಣವನ್ನು ಲೋಕ್ ಅದಾಲತ್ ವೇಳೆ ಕಟ್ಟಲು ಸಾಧ್ಯವಾಗಿಲ್ಲ. ನಂತರ ಅವರ ತಂದೆ ವಿನೋದ್ ಸಿಂಗ್ ಅವರು ಬ್ಯಾಂಕ್ ಬಳಿ ತೆರಳಿ ಹಣ ಕಟ್ಟಲು ಹೋಗಿದ್ದಾರೆ. ಆದರೆ ಅಧಿಕಾರಿಗಳು ಸ್ವೀಕರಿಸಿದೆ, ಹಾಗೆ ಕಳುಹಿಸಿದ್ದಾರೆ.

    ನನ್ನ ಮಗನ ಬೆನ್ನು ಮೂಳೆ ಮುರಿದಿದೆ. ಹಣ ಪಾವತಿಸಲು ಅವನು ಬ್ಯಾಂಕಿಗೆ ಬರಲು ಸಾಧ್ಯವಿಲ್ಲ ಹೀಗಾಗಿ ನಾನು ಬಂದಿದ್ದೇನೆ ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದೆ. ಆದರೂ ಬ್ಯಾಂಕ್ ಅಧಿಕಾರಿಗಳು ಹಣವನ್ನು ಸ್ವೀಕರಿಸಲಿಲ್ಲ ಎಂದು ವಿನೋದ್ ಸಿಂಗ್ ಅಳಲು ತೋಡಿಕೊಂಡಿದ್ದಾರೆ.

    50 ಪೈಸೆಗೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದು, ನಮ್ಮ ಕಕ್ಷಿದಾರರು ಹಣ ಕಟ್ಟಿ ಬ್ಯಾಂಕಿನಿಂದ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್(ಎನ್‍ಒಸಿ) ತರಲು ಹೋಗಿದ್ದಾರೆ. ಆದರೆ ಬ್ಯಾಂಕಿನವರು ಹಣ ಸ್ವೀಕರಿಸಲು ನಿರಾಕರಿಸಿದ್ದಾರೆ. ಹೀಗಾಗಿ ಬ್ಯಾಂಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಮೆಟ್ಟಿಲೇರುತ್ತೇವೆ ಎಂದು ವಕೀಲ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.