Tag: 5 states assembly election

  • ಕೆಲವೊಬ್ಬರು ಸುಧಾರಿಸಲು ಸಾಧ್ಯವಿಲ್ಲ ಬಿ. ಎಲ್. ಸಂತೋಷ್ ವ್ಯಂಗ್ಯ

    ಕೆಲವೊಬ್ಬರು ಸುಧಾರಿಸಲು ಸಾಧ್ಯವಿಲ್ಲ ಬಿ. ಎಲ್. ಸಂತೋಷ್ ವ್ಯಂಗ್ಯ

    ನವದೆಹಲಿ: ಕೆಲವೊಬ್ಬರು ಸುಧಾರಿಸುವುದು ಸಾಧ್ಯವಿಲ್ಲ ಎಂದು ಎಸ್‍ಪಿ ಅಧ್ಯಕ್ಷನಿಗೆ ಪರೋಕ್ಷವಾಗಿ ವ್ಯಂಗ್ಯವಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ವ್ಯಂಗ್ಯವಾಡಿದ್ದಾರೆ.

    ಪಂಚ ರಾಜ್ಯಗಳ ವಿಧಾನಸಭೆಯ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಬಿ. ಎಲ್. ಸಂತೋಷ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ಗೆ ಸೋಲು

    ಈ ವೇಳೆ ಬಿಜೆಪಿಯ ಗೆಲುವಿನ ಬಗ್ಗೆ ಯಾವಾಗಲೂ ಟೀಕೆ ಮಾಡುವ ಪ್ರತಿಪಕ್ಷಗಳ ವಿರುದ್ಧ ಸಿಡಿದ ಅವರು, ದೇವ ಭೂಮಿಯಲ್ಲಿ ಬಿಜೆಪಿಯು ಗೆಲುವಿನ ನಾಗಾಲೋಟದತ್ತ ಸಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿದ್ದು, ಗಣರಾಜ್ಯವನ್ನು ಕಿತ್ತೊಗೆಯಲಾಗುತ್ತಿದೆ. ಗಡಿನಾಡು ಪಂಜಾಬ್‍ನಲ್ಲಿ ಆಮ್ ಆದ್ಮಿಯು ಗೆಲುವಿನತ್ತ ಸಾಗುತ್ತಿದೆ. ಪರ್ಯಾಯ ಆಡಳಿತದ ಭರವಸೆ, ಆಶಾವಾದ ಮೂಡಿದೆ. ಕೆಲವೊಬ್ಬರು ಸುಧಾರಿಸುವುದೇ ಇಲ್ಲ ಎಂದು ಟ್ವೀಟ್ ಮೂಲಕ ಕುಹಕವಾಡಿದ್ದಾರೆ. ಇದನ್ನೂ ಓದಿ: ಹುಟ್ಟೂರಿಗೆ ನೆರವಾದ ಸೋನು ಸೂದ್-1,000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ

    ಉತ್ತರ ಪ್ರದೇಶದಲ್ಲಿ ಬಿಜೆಪಿ ಪರವಾಗಿ ಫಲಿತಾಂಶ ಬರುವಂತೆ ಮತಯಂತ್ರಗಳನ್ನು ತಿರುಚಲು ಸರ್ಕಾರದಿಂದ ಜಿಲ್ಲಾಧಿಕಾರಿಗಳಿಗೆ ಸೂಚನೆ ಬಂದಿದೆ ಅಂತ ಆಖಿಲೇಶ್ ಯಾದವ್ ಮಂಗಳವಾರ ಆರೋಪಿಸಿದ್ದರು. ವಾರಣಾಸಿಯಲ್ಲಿ ಇವಿಎಂಗಳನ್ನು ಸಾಗಿಸುತ್ತಿದ್ದು ಎರಡು ಟ್ರಕ್‍ಗಳನ್ನು ಎಸ್‍ಪಿ ಕಾರ್ಯಕರ್ತರು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ ಹರಸಾಹಸದ ನಂತರ ಟ್ರಕ್‍ಗಳು ಮುಂದೆ ಸಾಗಲು ಅನುವು ಮಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು.

    ಆರೋಪ ಬಂದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಬಳಸಿರುವ ಮತ ಯಂತ್ರಗಳನ್ನು ಬಲಿಷ್ಟವಾದ ಒಂದು ಕೊಠಡಿಯಲ್ಲಿ ಭದ್ರವಾಗಿ ಇರಿಸಲಾಗಿದೆ. ಅಲ್ಲಿ ಸಿ.ಸಿ.ಟಿ.ವಿ ಕಣ್ಗಾಗಾವಲು ಇದೆ. ಬಲಿಷ್ಟವಾದ ಆ ಕೊಠಡಿಯಿಂದ ಯಾವುದೇ ಮತಯಂತ್ರಗಳನ್ನು ಸಾಗಿಸಿಲ್ಲ. ಟ್ರಕ್‍ನಲ್ಲಿ ಇರುವ ಮತಯಂತ್ರಗಳನ್ನು ಚುನಾವಣೆಯಲ್ಲಿ ಬಳಿಸಿಲ್ಲ. ಮತ ಎಣಿಕೆ ಸಿಬ್ಬಂದಿಗೆ ತರಬೇತಿ ನೀಡಲು ಈ ಮತಯಂತ್ರಗಳನ್ನು ಸಾಗಿಸಲಾಗುತ್ತಿತ್ತು. ರಾಜಕೀಯ ಪಕ್ಷಗಳು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಎಂದು ವಾರಣಾಸಿ ಜಿಲ್ಲಾಧಿಕಾರಿ ಕೌಶಲ್ ಶರ್ಮಾ ಸ್ಪಷ್ಟನೆ ನೀಡಿದ್ದರು.

  • ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ – ಫೆ.10ರಿಂದ ಮತದಾನ, ಮಾ.10ರಂದು ಮತ ಎಣಿಕೆ

    ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ – ಫೆ.10ರಿಂದ ಮತದಾನ, ಮಾ.10ರಂದು ಮತ ಎಣಿಕೆ

    ನವದೆಹಲಿ: ಮುಂಬರುವ ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆ ದಿನಾಂಕ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.

    ಕೇಂದ್ರ ಚುನಾವಣಾ ಆಯೋಗ ಶನಿವಾರ ಸುದ್ದಿಗೋಷ್ಠಿಯಲ್ಲಿ ಚುನಾವಣೆಯ ಮಾಹಿತಿ ನೀಡಿತು. ಪಂಚ ರಾಜ್ಯಗಳಿಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 10 ರಿಂದ ಮಾರ್ಚ್‌ 7ರ ವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್‌ 10ರಂದು ಫಲಿತಾಂಶ ಹೊರ ಬೀಳಲಿದೆ. ಇದನ್ನೂ ಓದಿ: BJP ಶಾಸಕ ಪಂಕಜ್ ಗುಪ್ತಗೆ ಕಪಾಳಮೋಕ್ಷ ಮಾಡಿದ ರೈತ

    ಉತ್ತರ ಪ್ರದೇಶ‌
    ರಾಜ್ಯದ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. (ಫೆ.10ರಿಂದ ಮಾರ್ಚ್‌ 7)

    ಪಂಜಾಬ್‌
    ರಾಜ್ಯದ ಒಟ್ಟು 117 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. (ಫೆ.14)

    ಗೋವಾ
    ರಾಜ್ಯದ ಒಟ್ಟು 40 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. (ಫೆ.14)

    ಮಣಿಪುರ
    ರಾಜ್ಯದ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. (ಫೆ.27 ಮತ್ತು ಮಾ.3)

    ಉತ್ತರಾಖಂಡ
    ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. (ಫೆ.14)

    7 ಹಂತಗಳಲ್ಲಿ ಮತದಾನ 
    ಮೊದಲ ಹಂತ – ಫೆ.10
    ಎರಡನೇ ಹಂತ – ಫೆ.14
    ಮೂರನೇ ಹಂತ – ಫೆ.20
    ನಾಲ್ಕನೇ ಹಂತ – ಫೆ.23
    ಐದನೇ ಹಂತ – ಫೆ.27
    ಆರನೇ ಹಂತ – ಮಾ.3
    ಏಳನೇ ಹಂತ – ಮಾ.7

    ದೇಶದಲ್ಲಿ ಕೊರೊನಾ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊಸ ಕೋವಿಡ್‌ ನಿಯಮಾವಳಿಗಳು ಅನ್ವಯವಾಗಲಿವೆ. ಚುನಾವಣೆಯ ಬಹಿರಂಗ ಪ್ರಚಾರಗಳಿಗೆ ಬ್ರೇಕ್‌ ಬಿದ್ದಿದೆ. ಈ ಬಾರಿಯ ಚುನಾವಣಾ ಪ್ರಚಾರ ಡಿಜಿಟಲ್‌ ವೇದಿಕೆಗಳ ಮೂಲಕ ರಂಗೇರಲಿದೆ. ಬಹಿರಂಗ ರ‍್ಯಾಲಿ, ಸಭೆ-ಸಮಾರಂಭಗಳನ್ನು ನಡೆಸುವುದಿಲ್ಲ ಎಂದು ಈಗಾಗಲೇ ರಾಜಕೀಯ ಪಕ್ಷಗಳು ನಿರ್ಧರಿಸಿವೆ. ಇದನ್ನೂ ಓದಿ: ಸಶಸ್ತ್ರಪಡೆಗಳಲ್ಲಿ ಮಹಿಳೆಯರಿಗೆ ಅವಕಾಶ ಹೆಚ್ಚಿಸಲು ನೂರು ಸೈನಿಕ ಶಾಲೆಗಳ ಸ್ಥಾಪನೆ: ರಾಜನಾಥ್ ಸಿಂಗ್

    ಐದು ರಾಜ್ಯಗಳನ್ನೂ ಒಳಗೊಂಡಂತೆ ಒಟ್ಟು 690 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಒಟ್ಟು 18.34 ಕೋಟಿ ಮತದಾರರಿದ್ದಾರೆ. ಈ ಪೈಕಿ 8.55 ಕೋಟಿ ಮಹಿಳಾ ಮತದಾರರು, 24.09 ಲಕ್ಷ ಹೊಸ ಮತದಾರರಿದ್ದಾರೆ. 2,15,368 ಮತಗಟ್ಟೆಗಳಿವೆ. ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ.

    ಕಠಿಣ ಪರಿಸ್ಥಿತಿಯಲ್ಲೂ ಚುನಾವಣೆ ನಡೆಸುವುದು ನಮ್ಮ ಕರ್ತವ್ಯ. ಮುನ್ನೆಚ್ಚರಿಕೆ ನಿಯಮಗಳೊಂದಿಗೆ ಚುನಾವಣೆ ನಡೆಸಲು ತಿರ್ಮಾನಿಸಲಾಗಿದೆ. ಕೊವೀಡ್ ಸೇಫ್ ಎಲೆಕ್ಷನ್ ನಡೆಸಲಾಗುವುದು. ಹೆಚ್ಚು ಜನರು ಎಲೆಕ್ಷನ್‌ನಲ್ಲಿ ಭಾಗಿಯಾಗುವಂತೆ ಮಾಡಲಾಗುವುದು. ಈಗಾಗಲೇ ಸಾಕಷ್ಟು ಸಭೆಗಳನ್ನು ನಡೆಸಲಾಗಿದೆ. ಗೃಹ ಇಲಾಖೆ, ಆರೋಗ್ಯ ಇಲಾಖೆ, ರಾಜಕೀಯ ಪಕ್ಷಗಳ ಜೊತೆಗೆ ಸಭೆ ನಡೆಸಿದೆ. ರಾಜ್ಯ ಸರ್ಕಾರದ ಹಲವು ಅಧಿಕಾರಿಗಳ ಜೊತೆಗೆ ಸಭೆ ನಡೆದಿದೆ. ಅವರಿಂದ ಹಲವು ಸಲಹೆಗಳನ್ನು ಪಡೆಯಲಾಗಿದೆ ಎಂದು ಚುನಾವಣಾ ಆಯೋಗದ ಸುಶೀಲ್‌ ಚಂದ್ರ ತಿಳಿಸಿದ್ದಾರೆ. ಇದನ್ನೂ ಓದಿ: ನಿಗದಿತ ಸಮಯಕ್ಕೆ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆ: ಬಿ.ಸಿ.ನಾಗೇಶ್

    ಎಲ್ಲ ಮತದಾನ ಕೇಂದ್ರಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕೆಳ ಮಹಡಿಯಲ್ಲಿ ಮತದಾನ‌ ಕೇಂದ್ರಗಳಿರಲಿವೆ. ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗುವುದು. ಕೋವಿಡ್‌ ಸೋಂಕಿತರು ಅಂಚೆ ಮತದಾನ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.

    ಚುನಾವಣಾ ರ‍್ಯಾಲಿ, ರೋಡ್‌ ಶೋ ಇಲ್ಲ
    ಕೋವಿಡ್‌ ಮುಕ್ತ ಚುನಾವಣೆ ನಡೆಸುವ ಆಶಯ ವ್ಯಕ್ತಪಡಿಸಿರುವ ಚುನಾವಣಾ ಆಯೋಗವು, ಚುನಾವಣಾ ರ‍್ಯಾಲಿ, ರೋಡ್‌ ಶೋ, ಪಾದಯಾತ್ರೆ, ಪ್ರಚಾರ ಸಭೆಗಳಿಗೆ ನಿರ್ಬಂಧ ವಿಧಿಸಿದೆ. ನಾಮಪತ್ರ ಸಲ್ಲಿಕೆ ವೇಳೆಯೂ ಮೆರವಣಿಗೆ ನಡೆಸುವಂತಿಲ್ಲ ಎಂದು ಆಯೋಗ ಹೇಳಿದೆ.