ಚಂಡೀಗಢ: 5 ಸ್ಟಾರ್ ಹೋಟೆಲ್(5 Star Hotel) ಒಂದಕ್ಕೆ ಬಾಂಬ್ ಬೆದರಿಕೆ(Bomb threat) ಬಂದಿರುವ ಘಟನೆ ಹರಿಯಾಣ(Haryana)ದ ಗುರುಗ್ರಾಮ(Gurugram)ದರಲ್ಲಿ ನಡೆದಿದೆ. ಬೆದರಿಕೆ ಹಿನ್ನೆಲೆ ಪೊಲೀಸರು ಹೋಟೆಲ್‌ನಲ್ಲಿ ತೀವ್ರ ಶೋಧ ನಡೆಸಿದ್ದಾರೆ.
ಗುರುಗ್ರಾಮದ ಆಂಬಿಯನ್ಸ್ ಮಾಲ್ ಕಾಂಪ್ಲೆಕ್ಸ್‌ನಲ್ಲಿರುವ ಲೀಲಾ ಹೋಟೆಲ್‌ಗೆ ಬೆಳಗ್ಗೆ 11:35ಕ್ಕೆ ದೂರವಾಣಿ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದೆ. ಬೆದರಿಕೆ ಕರೆಯನ್ನು ಸ್ವೀಕರಿಸುತ್ತಲೇ ಹೋಟೆಲ್‌ನಲ್ಲಿದ್ದವರು ಭಯಭೀತರಾಗಿದ್ದಾರೆ. ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಆಗಮಿಸಿದೆ. ಹೋಟೆಲ್‌ನಲ್ಲಿದ್ದವರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದ್ದು, ಸ್ಥಳದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಚಾರ್ಜ್‍ಗೆ ಹಾಕಿದ್ದ ಮೊಬೈಲ್ ಬ್ಯಾಟರಿ ಸ್ಫೋಟ – 8 ತಿಂಗಳ ಮಗು ಸಾವು
ಇದೀಗ ಬೆದರಿಕೆ ಬಂದಿರುವ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ. ಘಟನೆ ಬಗ್ಗೆ ಶೋಧಕಾರ್ಯ ನಡೆಯುತ್ತಿದ್ದು, ಬೆದರಿಕೆ ಕರೆ ನೀಡಿದವರನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ ರೈಲ್ವೇ ಬ್ರಿಡ್ಜ್‌ನಲ್ಲಿ ನಿತ್ಯಾನಂದ ಬಾಬಾ ಉರುಳುಸೇವೆ
Live Tv
[brid partner=56869869 player=32851 video=960834 autoplay=true]
ದಿಸ್ಪುರ: ಇತ್ತ ಮಹಾರಾಷ್ಟ್ರ ಸರ್ಕಾರಕ್ಕೆ ಬಿಕ್ಕಟ್ಟು ಎದುರಾಗಿ ʼಮಹಾವಿಕಾಸ್ ಅಘಡಿʼ ಮೈತ್ರಿಕೂಟದ ನಾಯಕರು ತಲೆಕೆಡಿಸಿಕೊಂಡಿದ್ದರೆ, ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿ ಅತ್ತ ಬಂಡಾಯ ಶಾಸಕರು 5 ಸ್ಟಾರ್ ಹೋಟೆಲ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಿವಸೇನಾ ಶಾಸಕರಿಗೆ ಅಸ್ಸಾಂನ 5 ಸ್ಟಾರ್ ಹೋಟೆಲ್‌ನಲ್ಲಿ ರಾಜಾತಿಥ್ಯವೇ ನಡೆಯುತ್ತಿದೆ. ದುಬಾರಿ ಹೋಟೆಲ್‌ನಲ್ಲಿ ಶಾಸಕರನ್ನು ಇರಿಸಿ ವಿಶೇಷ ಆತಿಥ್ಯ ನೀಡಲಾಗುತ್ತಿದೆ. ಈ ಹೋಟೆಲ್‌ನಲ್ಲಿ ಎಲ್ಲವೂ ದುಬಾರಿ. ರೂಂ ವೆಚ್ಚ ಹಾಗೂ ಇತರೆ ಸೌಲಭ್ಯಗಳ ಬೆಲೆ ಕೇಳಿದರೆ ಅಚ್ಚರಿ ಪಡುವಂತಿದೆ. ಇದನ್ನೂ ಓದಿ: ಅಸ್ಸಾಂನಲ್ಲಿರುವ ಶಿವಸೇನೆ ರೆಬಲ್ ಶಾಸಕರನ್ನು ಆತಿಥ್ಯಕ್ಕೆ ಕರೆದ ಮಮತಾ ಬ್ಯಾನರ್ಜಿ
ಬಂಡಾಯ ಶಾಸಕರು ತಂಗಿರುವ ಗುವಾಹಟಿಯ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. 7 ದಿನಗಳ ಮಟ್ಟಿಗೆ 70 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಏಕನಾಥ್ ಶಿಂಧೆ ನೇತೃತ್ವದ ಶಾಸಕರು ಸೋಮವಾರ ಬಿಜೆಪಿ ಆಡಳಿತವಿರುವ ಗುಜರಾತ್‌ನ ಸೂರತ್‌ನಲ್ಲಿರುವ ಹೊಟೇಲ್‌ನಲ್ಲಿದ್ದರು. ಅವರು ಬುಧವಾರ ಮತ್ತೊಂದು ಬಿಜೆಪಿ ಆಡಳಿತದ ರಾಜ್ಯವಾದ ಅಸ್ಸಾಂನ ಗುವಾಹಟಿಗೆ ಹಾರಿದರು. ಈಗ ಅಲ್ಲಿನ ಅತಿ ದುಬಾರಿ ಪಂಚತಾರಾ ಹೋಟೆಲ್‌ನಲ್ಲಿ ಹಾಯಾಗಿದ್ದಾರೆ.
ತಂಗಲು ವೆಚ್ಚ ಎಷ್ಟು?
ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿನ ಕೊಠಡಿಗಳಿಗೆ ಏಳು ದಿನಗಳ ಸುಂಕ 56 ಲಕ್ಷ ರೂ. ಎಂದು ಹೋಟೆಲ್ ಮತ್ತು ಸ್ಥಳೀಯ ರಾಜಕಾರಣಿಗಳ ಮೂಲಗಳು ತಿಳಿಸಿವೆ. ಆಹಾರ ಮತ್ತು ಇತರ ಸೇವೆಗಳ ದೈನಂದಿನ ಅಂದಾಜು ವೆಚ್ಚ ದಿನಕ್ಕೆ 8 ಲಕ್ಷ ರೂ. ಇದೆ.
ಹೋಟೆಲ್‌ನಲ್ಲಿ ಒಟ್ಟು 196 ಕೊಠಡಿಗಳಿವೆ. ಶಾಸಕರು ಮತ್ತು ಅವರ ತಂಡಗಳಿಗಾಗಿ ಕಾಯ್ದಿರಿಸಿದ 70 ಕೊಠಡಿಗಳನ್ನು ಹೊರತುಪಡಿಸಿ, ಈಗಾಗಲೇ ಕಾರ್ಪೊರೇಟ್ ಡೀಲ್‌ಗಳಲ್ಲಿ ಕಾಯ್ದಿರಿಸಿದವರನ್ನು ಬಿಟ್ಟು ಹೊಸ ಬುಕಿಂಗ್‌ಗಳನ್ನು ಆಡಳಿತ ಮಂಡಳಿ ಸ್ವೀಕರಿಸುತ್ತಿಲ್ಲ. ಅಲ್ಲದೆ ಔತಣಕೂಟವನ್ನು ಸಹ ಮುಚ್ಚಲಾಗಿದೆ. ಆದ್ದರಿಂದ ಹೋಟೆಲ್‌ನಲ್ಲಿ ಉಳಿದುಕೊಂಡಿರುವವರನ್ನು ಹೊರತುಪಡಿಸಿ ರೆಸ್ಟೋರೆಂಟ್ ಕೂಡ ಮುಚ್ಚಲ್ಪಟ್ಟಿದೆ. ಇದನ್ನೂ ಓದಿ: 24 ಗಂಟೆಯೊಗಳಗೆ ವಾಪಸ್ ಬಂದ್ರೆ, ಶಿವಸೇನೆ ಮೈತ್ರಿ ಬಿಡಲು ಸಿದ್ಧ: ಸಂಜಯ್ ರಾವತ್
ಕಾಂಗ್ರೆಸ್ ಹಾಗೂ ಎನ್‌ಸಿಪಿಯೊಂದಿಗೆ ಮೈತ್ರಿಕೂಟವನ್ನು ಶಿವಸೇನಾ ತ್ಯಜಿಸಬೇಕು ಎಂದು ಒತ್ತಾಯಿಸಿ ಏಕನಾಥ್ ಶಿಂಧೆ ನೇತೃತ್ವದಲ್ಲಿ 40 ಶಾಸಕರು ಪಂಚತಾರಾ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದಾರೆ. ಅವರಿಗೆ ಬಿಜೆಪಿ ನಾಯಕರು ಎಲ್ಲಾ ರೀತಿಯ ಸೌಕರ್ಯ ಕಲ್ಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಿವಸೇನಾ ಶಾಸಕರು ನೇರವಾಗಿ ಕೇಳಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಈಗಾಗಲೇ ಸಿಎಂ ಅಧಿಕೃತ ನಿವಾಸವನ್ನು ತೊರೆದಿದ್ದಾರೆ. ಇದರ ಬೆನ್ನಲ್ಲೇ, ಬಂಡಾಯ ಶಾಸಕರು 24 ಗಂಟೆಯೊಳಗೆ ವಾಪಸಾದರೆ ಮೈತ್ರಿಕೂಟವನ್ನು ಬಿಡಲಾಗುವುದು ಎಂದು ಸಂಜಯ್ ರಾವತ್ ಭರವಸೆ ನೀಡಿದ್ದಾರೆ. ರಾವತ್ ಹೇಳಿಕೆಯನ್ನು ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ತೀವ್ರವಾಗಿ ಖಂಡಿಸಿವೆ.
ಗಾಂಧಿನಗರ: ಅಹಮದಾಬಾದ್‌ನ ಎಲಿಸ್‌ಬ್ರಿಡ್ಜ್ ಪ್ರದೇಶದ 5 ಸ್ಟಾರ್ ಹೊಟೇಲಿನಲ್ಲಿ ಮಹಿಳೆಯೊಬ್ಬರ ಸೀರೆಗೆ ಬೆಂಕಿ ತಗುಲಿದ್ದು, ಪರಿಣಾಮ ಮಹಿಳೆ ತೀವ್ರವಾದ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ.
ಮಣಿನಗರದ ಗಂಗೆಶ್ವರ್ ಸೊಸೈಟಿಯ ನಿವಾಸಿ ರಶ್ಮಿಕಾ ಶಾ(54) ಸೀರೆಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಅವರ ದೇಹ ಬಹುಪಾಲು ಸುಟ್ಟು ಹೋಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಅವರ ಸ್ಥಿತಿ ಗಂಭಿರವಾಗಿತ್ತು. ಪೊಲೀಸರು ಇದು ಆಕಸ್ಮಿಕ ಸಾವು ಎಂಬುದಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಕ್ರಮ ಸಂಬಂಧ ಶಂಕೆ – ಪತ್ನಿಗೆ ಸಿಲಿಂಡರ್‌ನಿಂದ ಹೊಡೆದು ಹತ್ಯೆಗೈದ ಪತಿ
ಕಳೆದ ವಾರ ಮಹಿಳೆ ಹೊಟೇಲಿನಲ್ಲಿ ನಡೆದಿದ್ದ ಔತಣಕೂಟದಲ್ಲಿ ಊಟ ಮಾಡುತ್ತಿದ್ದ ಸಂದರ್ಭ ಸೀರೆಗೆ ಬೆಂಕಿ ಹೊತ್ತಿಕೊಂಡಿತ್ತು. ತೀವ್ರವಾದ ಸುಟ್ಟ ಗಾಯಗಳಾಗಿದ್ದ ಮಹಿಳೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಹಿಳೆ ಚಿಕಿತ್ಸೆಗೆ ಫಲಿಸದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೌಸ್ ಟ್ರ್ಯಾಪ್ ಹಿಡಿದು ಜನಜಾಗೃತಿಗೆ ಮಂದಾದ ಅಭ್ಯರ್ಥಿ
ಮಹಿಳೆ ತಟ್ಟೆಗೆ ಆಹಾರ ಬಡಿಸಿಕೊಳ್ಳುತ್ತಿದ್ದಾಗ ತಮ್ಮ ಸಿಂಥೆಟಿಕ್ ಸೀರೆಗೆ ಅಲ್ಲೇ ಇದ್ದ ಒಲೆಯ ಬೆಂಕಿ ತಗುಲಿದೆ. ಹೊಟೇಲ್ ಸಿಬ್ಬಂದಿ ಹಾಗೂ ಸಮಾರಂಭದಲ್ಲಿ ನೆರೆದಿದ್ದವರು ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಆಗಾಗಲೇ ಮಹಿಳೆಗೆ ತೀವ್ರವಾದ ಸುಟ್ಟ ಗಾಯಗಳಾಗಿದ್ದವು. ಹೀಗಾಗಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯಕ್ಕೆ ಬರೋ ಗಣ್ಯರಿಗೆಂದೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅದ್ಧೂರಿ ಅತಿಥಿ ಗೃಹವಿದೆ. ಆದ್ರೆ ಅಧಿಕಾರಿಗಳು ಮಾತ್ರ ಆ ಗೆಸ್ಟ್ ಹೌಸ್ ಬದಲಿಗೆ ಸ್ಟಾರ್ ಹೋಟೆಲ್‍ಗಳಲ್ಲೇ ಅತಿಥಿಗಳಿಗೆ ಸತ್ಕಾರ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟುಮಾಡ್ತಿದ್ದಾರೆ.
ಕುಮಾರ ಕೃಪ ಅತಿಥಿ ಗೃಹ ರಾಜ್ಯಕ್ಕೆ ಆಗಮಿಸುವ ಗಣ್ಯರ ಆತಿಥ್ಯಕ್ಕೆಂದು ಸರ್ಕಾರ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಅದ್ಧೂರಿ ಗೆಸ್ಟ್‍ಹೌಸ್. ಅತ್ಯುತ್ತಮ ಸೌಕರ್ಯ ಹೊಂದಿರುವ ಈ ಅತಿಥಿ ಗೃಹದ ಉಪಯೋಗ ಮಾತ್ರ ಶೂನ್ಯ. ಯಾಕಂದ್ರೆ ನಮ್ಮ ಅಧಿಕಾರಿಗಳು ರಾಜ್ಯಕ್ಕೆ ಆಗಮಿಸುವ ಗಣ್ಯರಿಗೆ ಸ್ಟಾರ್ ಹೋಟೆಲ್‍ಗಳನ್ನೇ ಬುಕ್ ಮಾಡ್ತಿದ್ದಾರೆ. ಇದರಿಂದಾಗಿ ಕಳೆದ 4 ವರ್ಷಗಳಲ್ಲಿ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ವೃಥಾ ಖರ್ಚಾಗಿದೆ.
ಕುಮಾರ ಕೃಪ ಅತಿಥಿ ಗೃಹದಲ್ಲಿ ಯಾವ ಸ್ಟಾರ್ ಹೋಟೆಲ್‍ಗಳಿಗೂ ಕಮ್ಮಿಯಿಲ್ಲದ 12 ವಿವಿಐಪಿ ರೂಂಗಳು ಇವೆ. 26 ಸಾಮಾನ್ಯ ರೂಂಗಳಿವೆ. ಆದ್ರೂ ತಾಜ್‍ವೆಸ್ಟ್ ಎಂಡ್, ದಿ ಕ್ಯಾಪಿಟಲ್, ಐಟಿಸಿ ಗಾರ್ಡೇನೀಯ, ಲಲಿತ ಮಹಲ್, ವಿಂಡ್ಸರ್ ಮ್ಯಾನರ್ ಸ್ಟಾರ್ ಹೋಟೆಲ್‍ಗಳಲ್ಲೇ ರೂಂ ಬುಕ್ ಮಾಡಿ, ಲಕ್ಷಾಂತರ ರೂಪಾಯಿ ಬಿಲ್ ಪಾವತಿಸಲಾಗಿದೆ. ಸಾಮಾಜಿಕ ಹೋರಾಟಗಾರ ಮರಿಲಿಂಗೇಗೌಡ ಮಾಲೀ ಪಾಟೀಲ್ ಆರ್‍ಟಿಐ ಅಡಿ ಈ ಎಲ್ಲಾ ಮಾಹಿತಿಯನ್ನ ಪಡೆದಿದ್ದಾರೆ.
ಜೊತೆಗೆ ಅತಿಥಿಗೃಹದ ನಿರ್ವಹಣೆಗೂ ಕೋಟ್ಯಂತರ ರೂಪಾಯಿ ಹಣವನ್ನು ಸರ್ಕಾರ ವ್ಯಯಿಸುತ್ತಿದೆ. ಆದ್ರೂ ಅಧಿಕಾರಿಗಳು ದುಡ್ಡು ಹೊಡೆಯಲು ಗಣ್ಯರಿಗೆ ಸ್ಟಾರ್ ಹೋಟೆಲ್‍ಗಳಲ್ಲಿ ರೂಂ ಬುಕ್ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡ್ತಿದ್ದಾರೆ. ನಮ್ ತೆರಿಗೆ ದುಡ್ಡಲ್ಲಿ ಈ ತರಾದ ಶೋಕಿ ಎಷ್ಟು ಸರಿ ಅನ್ನೋದು ಜನಸಾಮಾನ್ಯರ ಪ್ರಶ್ನೆ.