Tag: 5 ರೂಪಾಯಿ ವೈದ್ಯ

  • 5 ರೂಪಾಯಿ ಡಾಕ್ಟ್ರು 5 ರೂ. ಕಾಯಿನ್ ಗಳನ್ನು ಕೊಟ್ಟು ನಾಮಪತ್ರ ಸಲ್ಲಿಸಿದ್ರು!

    5 ರೂಪಾಯಿ ಡಾಕ್ಟ್ರು 5 ರೂ. ಕಾಯಿನ್ ಗಳನ್ನು ಕೊಟ್ಟು ನಾಮಪತ್ರ ಸಲ್ಲಿಸಿದ್ರು!

    ಮಂಡ್ಯ: ಜಿಲ್ಲೆಯಲ್ಲಿ 5 ರೂಪಾಯಿ ಡಾಕ್ಟರ್ ಎಂದೇ ಪ್ರಸಿದ್ಧಿ ಪಡೆದಿರುವ ಮಂಡ್ಯದ ಡಾಕ್ಟರ್ ಶಂಕರೇಗೌಡರು ಕರ್ನಾಟಕ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದಾರೆ.

    ಡಾಕ್ಟರ್ ಶಂಕರೇಗೌಡ ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಹಿಂದೆ ಜೆಡಿಎಸ್ ಪಕ್ಷದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿಯೂ ಶಂಕರೇಗೌಡ ಆಯ್ಕೆಯಾಗಿದ್ದರು. ಆದರೆ ಜೆಡಿಎಸ್ ಟಿಕೆಟ್ ಕೈ ತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

    ಪತ್ನಿ ರುಕ್ಮಿಣಿ, ಪುತ್ರಿ ಉಜ್ವಲ, ವಕೀಲ ಕೇಶವಮೂರ್ತಿ ಹಾಗೂ ಬೆಂಬಲಿಗರ ಜೊತೆ ಆಗಮಿಸಿದ ವೈದ್ಯರು ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಪಕ್ಷೇತರರಾಗಿ ಚುನಾವಣಾ ಕಣಕ್ಕಿಳಿದಿರುವ ಅವರು ಠೇವಣಿ ಕಟ್ಟಲು 5 ರೂಪಾಯಿ ಕಾಯಿನ್ ಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ತೆಗೆದುಕೊಂಡು ಬಂದಿದ್ದು ವಿಶೇಷವಾಗಿತ್ತು.