Tag: 4g smartphone

  • ಜಿಯೋ, ಏರ್‍ಟೆಲ್ ಆಯ್ತು, ಈಗ 999 ರೂ.ಗೆ ವೊಡಾಫೋನ್ 4ಜಿ ಫೋನ್!

    ಜಿಯೋ, ಏರ್‍ಟೆಲ್ ಆಯ್ತು, ಈಗ 999 ರೂ.ಗೆ ವೊಡಾಫೋನ್ 4ಜಿ ಫೋನ್!

    ಮುಂಬೈ: ಟೆಲಿಕಾಂ ಕಂಪೆನಿಗಳ ಮಧ್ಯೆ ಕರೆ ದರ ಸಮರ, ಡೇಟಾ ಸಮರ ನಡೆದಿರುವುದು ನಿಮಗೆ ಗೊತ್ತೆ ಇದೆ. ಈಗ 4ಜಿ ಫೀಚರ್ ಫೋನ್ ಸಮರ ಆರಂಭವಾಗಿದೆ. ಜಿಯೋ ಮತ್ತು ಏರ್‍ಟೆಲ್ ಗೆ ಸ್ಪರ್ಧೆ ಎನ್ನುವುಂತೆ ಈಗ ವೊಡಾಫೋನ್ 999 ರೂ.ಗೆ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

    ದೇಶೀಯ ಸ್ಮಾರ್ಟ್ ಫೋನ್ ತಯಾರಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಜೊತೆಗೂಡಿ ವೊಡಾಫೋನ್ ಒಪ್ಪಂದ ಮಾಡಿಕೊಂಡಿದ್ದು, ನವೆಂಬರ್ ವೇಳೆಗೆ ‘ಭಾರತ್ -2 ಆಲ್ಟ್ರಾ’ ಹೆಸರಿನ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

    999 ರೂ. ಹೇಗೆ ಸಿಗುತ್ತೆ?
    ಈ ಫೋನಿನ ಮೂಲ ಬೆಲೆ 2,899 ರೂ. ಆಗಿದ್ದು, ಆರಂಭಲ್ಲಿ ವೊಡಾಫೋನ್ ಹೊಸ ಗ್ರಾಹಕರು ಇಷ್ಟೇ ಮೊತ್ತವನ್ನು ನೀಡಿ ಫೋನ್ ಖರೀದಿಸಬೇಕು.

    ಖರೀದಿಸಿದ ಬಳಿಕ ಗ್ರಾಹಕರು ಪ್ರತಿ ತಿಂಗಳು 150 ರೂ. ರಿಚಾರ್ಜ್ ಮಾಡಬೇಕು. 36 ತಿಂಗಳು ಅಂದರೆ ಮೂರು ವರ್ಷಗಳ 150 ರೂ. ರಿಚಾರ್ಜ್ ಮಾಡಿದ ಬಳಿಕ ಹಣ ಗ್ರಾಹಕರಿಗೆ ವೊಡಾಫೋನಿನ M-Pesa ವ್ಯಾಲೆಟ್ ಮೂಲಕ ಪಾವತಿಯಾಗುತ್ತದೆ. ಮೊದಲ 18 ತಿಂಗಳ ಬಳಿಕ 900 ರೂ. ಕ್ಯಾಶ್ ಬ್ಯಾಕ್ ಆದರೆ 38 ತಿಂಗಳು ಮುಕ್ತಾಯವಾದ ಬಳಿಕ 1 ಸಾವಿರ ರೂ. ಗ್ರಾಹಕರ ವ್ಯಾಲೆಟ್ ಗೆ  ಹಣವನ್ನು ಕಳುಹಿಸುತ್ತದೆ.

    ಭಾರತ್ ಆಲ್ಟ್ರಾ ಗುಣವೈಶಿಷ್ಟ್ಯಗಳು:
    4 ಇಂಚಿನ WVGA  ಡಿಸ್ಲ್ಪೇ, 1.3GHz  ಕ್ವಾಡ್ ಕೋರ್ ಪ್ರೊಸೆಸರ್, 512 ಎಂಬಿ ರಾಮ್, 4ಜಿಬಿ ಆಂತರಿಕ ಮೆಮೊರಿ, ಹಿಂದುಗಡೆ 2ಎಂಪಿ ಕ್ಯಾಮೆರಾ, ಮುಂದುಗಡೆ 3 ಎಂಪಿ ಕ್ಯಾಮೆರಾ, ಮಾರ್ಶ್ ಮೆಲೋ ಓಎಸ್, 1300 ಎಂಎಎಚ್ ಬ್ಯಾಟರಿ ಹೊಂದಿದೆ.

    ಈ ಹಿಂದೆ ಜಿಯೋ 4ಜಿ ಫೋನ್ ಬಿಡುಗಡೆ ಮಾಡಿದ್ದರೆ, ಬಳಿಕ ಏರ್‍ಟೆಲ್ 1399 ರೂ.ಗೆ ಫೋನ್ ಬಿಡುಗಡೆ ಮಾಡಿತ್ತು. ಈ ಹಿಂದೆ ಬಿಎಸ್‍ಎನ್‍ಎಲ್ ಜೊತೆಗೂಡಿ ಮೈಕ್ರೋಮ್ಯಾಕ್ಸ್ ಭಾರತ್ 1 ಫೋನ್ ಬಿಡುಗಡೆ ಮಾಡಿತ್ತು.