Tag: 400 Paar

  • ನಮ್ಮ ಗುರಿ ದೊಡ್ಡದಿದೆ, ಗೆಲ್ಲುವ ವಿಶ್ವಾಸವಿದೆ – ಅತಿಯಾದ ಆತ್ಮವಿಶ್ವಾಸ ಇಲ್ಲ: ಮೋದಿ

    ನಮ್ಮ ಗುರಿ ದೊಡ್ಡದಿದೆ, ಗೆಲ್ಲುವ ವಿಶ್ವಾಸವಿದೆ – ಅತಿಯಾದ ಆತ್ಮವಿಶ್ವಾಸ ಇಲ್ಲ: ಮೋದಿ

    ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಈಗಾಗಲೇ 4 ಹಂತದ ಮತದಾನ ಮುಕ್ತಾಯಗೊಂಡಿದೆ. ಸೋಮವಾರ (ಮೇ 20) ರಾಯ್‌ ಬರೇಲಿ, ಅಮೇಥಿ ಹೈವೋಲ್ಟೇಜ್‌ ಕ್ಷೇತ್ರಗಳು ಸೇರಿ ಒಟ್ಟು 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ನಡುವೆ ಬಿಜೆಪಿ 370, ಎನ್‌ಡಿಎ ಒಕ್ಕೂಟ 400 ಸ್ಥಾನಗಳನ್ನು ಗೆಲ್ಲುವುದರೊಂದಿಗೆ 3ನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ವಿಶ್ವಾಸವನ್ನು ಪ್ರಧಾನಿ ಮೋದಿ (PM Modi) ವ್ಯಕ್ತಪಡಿದ್ದಾರೆ.

    ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ (Congress) ಮತ್ತು ಇಂಡಿಯಾ ಮೈತ್ರಿ ಕೂಟವು (INIDA Block) ಈವರೆಗೆ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದೇ ಇರುವುದರಿಂದ ಮತದಾರರು ಅವರಿಂದ ಆಯ್ಕೆಯಾಗುವ ಅವಕಾಶವನ್ನೇ ಕಳೆದುಕೊಂಡಿದ್ದಾರೆ. ಆದ್ರೆ ನಮ್ಮ ಗುರಿ ತುಂಬ ದೊಡ್ಡದಿದೆ. ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ನನಗಿದೆ. ಅತಿಯಾದ ಆತ್ಮವಿಶ್ವಾಸ ಇಲ್ಲ. ಈ ಹಿಂದೆಯೂ ಅತಿಯಾದ ಆತ್ಮವಿಶ್ವಾಸದಿಂದ ಗೆದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶೂ ವ್ಯಾಪಾರಿ ಮನೆಯಲ್ಲಿ ಕಂತೆ ಕಂತೆ ಹಣ – ಬರೋಬ್ಬರಿ 40 ಕೋಟಿ ರೂ. ಜಪ್ತಿ!

    ಈಗ ದೇಶದಲ್ಲಿ ಜನರಿಗೆ ಅನುಭವ ಇದೆ. ಮತ (Vote) ಯಾರಿಗೆ ಹಾಕಬೇಕು ಅಂತ ಸುಲಭವಾಗಿ ತೀರ್ಮಾನಿಸುತ್ತಾರೆ. ಏಕೆಂದರೆ ಜನರಿಗೆ ಎಲ್ಲವೂ ಗೊತ್ತಿದೆ. ಯಾವುದೇ ವ್ಯಕ್ತಿಯಿರಲಿ, ಪಕ್ಷವಿರಲಿ, ಯಾರನ್ನ ಗೆಲ್ಲಿಸಬೇಕು? ಯಾರು ಗೆದ್ದರೆ ದೇಶ ಅಭಿವೃದ್ಧಿಯಾಗುತ್ತದೆ ಎಲ್ಲವೂ ತಿಳಿದಿದೆ. ನಾವು ಅದಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ದೊಡ್ಡ ಗುರಿಯಿಟ್ಟುಕೊಂಟಿದ್ದೇವೆ. ದೇಶದ ಅಭಿವೃದ್ಧಿಯ ನೀಲ ನಕ್ಷೆ ನಮ್ಮಬಳಿಯಿದೆ. ಅಭಿವೃದ್ಧಿಯ ಬಯಸುವ ಪ್ರತಿಯೊಬ್ಬರು ನಮಗೆ ಮತ ಹಾಕುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಆಪರೇಷನ್‌’ ಜಾಡು ಅಡಿಯಲ್ಲಿ AAP ಮುಗಿಸಲು ಬಿಜೆಪಿ ಯತ್ನ: ಕೇಜ್ರಿವಾಲ್‌

    ದೇಶದ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನು ನಾನು ಬಿಡಿಸಿ ಹೇಳಬೇಕಿಲ್ಲ. ನಮ್ಮ ಕೈ ಖಂಡಿತವಾಗಿಯೂ ಮೇಲಾಗಲಿದೆ. ನಾವು 3ನೇ ಅವಧಿಯ ಆಡಳಿತಕ್ಕೆ ಸಿದ್ಧವಾಗುತ್ತಿದ್ದೇವೆ. ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಏನೆಲ್ಲ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಕಾರ್ಯಸೂಚಿಯನ್ನು ಹಾಕಿಕೊಂಡು ಬನ್ನಿ ಅಂತ ಈಗಾಗಲೇ ನಮ್ಮ ಸಚಿವರಿಗೆ ತಿಳಿಸಿದ್ದೇನೆ. ಏಕೆಂದರೆ ನಮ್ಮ ಮುಂದಿನ ಆಡಳಿತ ಒಂದು ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ದೊಡ್ಡ ಗುರಿಯನ್ನು ಕ್ಷಿಪ್ರವಾಗಿ ಸಾಧಿಸುವ ಛಲ ಹೊಂದಿದ್ದೇವೆ. ಗುರಿ ದೊಡ್ಡದಾಗಿ ಇಟ್ಟುಕೊಂಡು, ಅದರ ವೇಗಕ್ಕೆ ತಕ್ಕಂತೆ ಮುನ್ನಡೆಯುವುದು ನಮ್ಮ ಉದ್ದೇಶವಾಗಿದೆ ಎಂದು ಮೋದಿ ಹೇಳಿದ್ದಾರೆ. ಇದನ್ನೂ ಓದಿ: ಚುನಾವಣೆಗೂ ಮುನ್ನವೇ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಗುಂಡಿನ ದಾಳಿಗೆ ಮಾಜಿ ಸರ್ಪಂಚ್‌ ಬಲಿ, ದಂಪತಿಗೆ ಗಾಯ!

  • 400 ಸ್ಥಾನಗಳನ್ನು ಗೆಲ್ಲುವ ಗುರಿ ಕೇವಲ ಘೋಷಣೆಯಲ್ಲ, ವಾಸ್ತವದಲ್ಲೂ ಅದು ನಿಜವಾಗುತ್ತೆ: ಮೋದಿ

    400 ಸ್ಥಾನಗಳನ್ನು ಗೆಲ್ಲುವ ಗುರಿ ಕೇವಲ ಘೋಷಣೆಯಲ್ಲ, ವಾಸ್ತವದಲ್ಲೂ ಅದು ನಿಜವಾಗುತ್ತೆ: ಮೋದಿ

    – ಸಂವಿಧಾನ ಬದ್ಧವಾಗಿ ಮೀಸಲಾತಿ ನೀಡಲು ಸಿದ್ಧವಾಗಿದ್ದೇವೆ ಎಂದ ಪ್ರಧಾನಿ

    ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ 400 ಸ್ಥಾನಗಳನ್ನು (400 Paar) ಗೆಲ್ಲುವ ಹಾದಿಯಲ್ಲಿದೆ. ಈ ಗುರಿಯು ಕೇವಲ ಘೋಷಣೆಯಾಗಿಲ್ಲ, ವಾಸ್ತವದಲ್ಲೂ ಇದು ನಿಜವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ವಿಶ್ವಾಸ ವ್ಯಕ್ತಪಡಿಸಿದರು.

    ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮಹಿಳೆಯರು, ಯುವಜನರು ಮತ್ತು ಮೊದಲ ಬಾರಿಗೆ ಮತ ಚಲಾಯಿಸುವ ಮತದಾರರು (Voters) ನಿರ್ಣಾಯಕವಾಗಿ ಮತ್ತು ಧನಾತ್ಮಕವಾಗಿ ಮತದಾನ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: 1998: ಮತ್ತೆ ದಿಲ್ಲಿ ಗದ್ದುಗೆಯೇರಿದ ವಾಜಪೇಯಿ – ಕರ್ನಾಟಕದಲ್ಲಿ ಬಿಜೆಪಿ ಎರಡಂಕಿಗೆ ಜಿಗಿತ

    ನಾನು ಮತದಾನದ ಕೇಂದ್ರದಲ್ಲಿ ಇಲ್ಲ, 140 ಕೋಟಿ ಜನರು ಅಲ್ಲಿದ್ದಾರೆ. ಮೊದಲ ಮೂರು ಹಂತಗಳಲ್ಲಿನ ಮತದಾನದಲ್ಲಿ ʻ400 ಪಾರ್ʼ ಎಂಬುದು ಕೇವಲ ಘೋಷಣೆಯಾಗಿರದೇ ವಾಸ್ತವವಾಗುತ್ತಿರುವುದನ್ನು ಸ್ಪಷ್ಟವಾಗಿ ನೋಡುತ್ತಿದ್ದೇನೆ. ಎನ್‌ಡಿಎಯಂತಹ (NDA Alliance) ಬಲಿಷ್ಠ ಸರ್ಕಾರವನ್ನು ಆಯ್ಕೆ ಮಾಡಲು ಜನರು ಬದ್ಧರಾಗಿದ್ದಾರೆ. ದೇಶದ ಭವಿಷ್ಯ ಭದ್ರಪಡಿಸಲು ಜನರು ಬಿಸಿಗಾಳಿಯ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಎನ್‌ಡಿಎ 400 ಸೀಟುಗಳನ್ನು ಗೆಲ್ಲುವುದಿಲ್ಲ ಎಂಬ ಪ್ರತಿಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು, ಅವರ ಮಹಾ ನಾಯಕರು ರಾಜ್ಯಸಭೆಗೆ ಹೋಗಿದ್ದಾರೆ, ಅವರ 2ನೇ ನಾಯಕ 2ನೇ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ ಎಂದು ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆ ಮತ್ತು ರಾಹುಲ್ ಗಾಂಧಿ (Rahul Gandhi) ಅಮೇಥಿಯಿಂದ ಸ್ಪರ್ಧಿಸದ ಉದಾಹರಣೆಗಳನ್ನು ಉಲ್ಲೇಖಿಸಿದರು. ಅವರಿಗೆ ಜನರ ಸೇವೆಯಲ್ಲಿ ಆಸಕ್ತಿ ಇಲ್ಲ, ಅವರು ತಮ್ಮ ಕುಟುಂಬದ ಬಗ್ಗೆ ಮಾತ್ರ ಆಸಕ್ತಿ ಹೊಂದಿದ್ದಾರೆ ಮತ್ತು ದೇಶದ ಬಗ್ಗೆ ಯೋಚಿಸುವುದಿಲ್ಲ ಎಂದು ಅವರು ಕುಟುಕಿದರು.

    ಕಳೆದ 10 ವರ್ಷಗಳಲ್ಲಿ ಅವರು ಪ್ರಧಾನಿಯಾಗಿ ವಿಫಲರಾಗಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಮೋದಿ, ಪ್ರತಿಪಕ್ಷಗಳು ಚಾಯ್ವಾಲಾ ಮಗನನ್ನು ಪ್ರಧಾನಿಯಾಗಿ ನೋಡಲು ಸಾಧ್ಯವಿಲ್ಲ. ನಾನು 3ನೇ ಬಾರಿಗೆ ಗೆದ್ದರೆ ನಾನು ಅವರ ದಾಖಲೆಯನ್ನು ಮರೆಮಾಡುತ್ತೇನೆ ಎಂದು ಅವರು ಭಯಪಡುತ್ತಿದ್ದಾರೆ ಎಂದು ಹೇಳಿದರು.

    ತಮ್ಮ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡಿದ ಪ್ರಧಾನಿ ಮೋದಿ, ಇಂದು ದೇಶದಲ್ಲಿ 1.5-2.5 ಲಕ್ಷ ಸ್ಟಾರ್ಟ್‌ಅಪ್‌ಗಳಿವೆ ಮತ್ತು ಅವುಗಳಲ್ಲಿ ಹೆಚ್ಚಿನವು ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಲ್ಲಿವೆ. ಲಕ್ಷಗಟ್ಟಲೆ ಉದ್ಯೋಗಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. 1 ಸ್ಟಾರ್ಟಪ್ ಆರಂಭಿಸಲು ಸರಾಸರಿ 4-5 ಜನರಿಗೆ ಉದ್ಯೋಗ ಸಿಗುತ್ತದೆ. ಮುದ್ರಾ ಯೋಜನೆಯಡಿ ಸುಮಾರು 28 ಲಕ್ಷ ಕೋಟಿ ಫಲಾನುಭವಿಗಳಿಗೆ ಸಾಲ ನೀಡಲಾಗಿದೆ. ನಾವು ಈಗ 3 ಕೋಟಿ ಮಹಿಳೆಯರನ್ನ ಲಕ್‌ಪತಿ ದೀದಿಯರನ್ನಾಗಿ ಮಾಡಲು ಯೋಜಿಸುತ್ತಿದ್ದೇವೆ. 4 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ ಎಂದು ಸಾಧನೆಗಳನ್ನು ಹೇಳಿದರು.

    ಹಿಂದಿನದ್ದಕ್ಕೆ ಹೋಲಿಸಿದ್ರೆ ದುಪ್ಪಟ್ಟು ಹೆದ್ದಾರಿಗಳು ಮತ್ತು ರೈಲು ಮಾರ್ಗಗಳು ನಿರ್ಮಾಣವಾಗಿವೆ. ಆದರೂ ಅವರು ಸುಳ್ಳುಗಳನ್ನೇ ಹರಡುತ್ತಿದ್ದಾರೆ. ವಾಸ್ತವವಾಗಿ, ಅವರು ರಾಜಕೀಯವಾಗಿ ನಿರುದ್ಯೋಗಿಗಳಾಗಿದ್ದಾರೆ. ಇಂದು, ಎಲ್‌ಇಡಿ ಬಲ್ಬ್‌ಗಳ ಕ್ರಾಂತಿಯಿಂದಾಗಿ ವಿದ್ಯುತ್ ಬಿಲ್‌ಗಳಲ್ಲಿನ ಸರಾಸರಿ ಒಟ್ಟು ಮೊತ್ತವು ಕಡಿಮೆಯಾಗಿದೆ. 5 ಲಕ್ಷ ಜನರು ಉಚಿತ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. 80 ಕೋಟಿ ಜನರು ಉಚಿತ ಪಡಿತರವನ್ನು ಪಡೆದಿದ್ದಾರೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ವೀಡಿಯೋ ನೋಡಿದವರೆಲ್ಲ ತಪ್ಪಿತಸ್ಥರು ಅಂದ್ರೆ ಹಾಸನದ 15 ಲಕ್ಷ ಜನ ತಪ್ಪಿತಸ್ಥರಾಗ್ತಾರೆ: ಪ್ರೀತಂಗೌಡ

    ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ ವಿಗ್ರಹದ ‘ಪ್ರಾಣ ಪ್ರತಿಷ್ಠೆ’ ವಿರೋಧಿಸಿದ್ದಕ್ಕಾಗಿ ಕಾಂಗ್ರೆಸ್ ಅನ್ನು ಕಟುವಾಗಿ ಟೀಕಿಸಿದ ಮೋದಿ, ಕಾಂಗ್ರೆಸ್‌ ಪಕ್ಷವು ತನ್ನ ಮತ ಬ್ಯಾಂಕ್‌ಗಾಗಿ ಯಾವುದೇ ಹಂತಕ್ಕೆ ಇಳಿಯಬಹುದು. ತೀರ್ಪು ಬಂದಾಗಿನಿಂದ ರಾಮ ಮಂದಿರದ ಬಗ್ಗೆ ಕಾಂಗ್ರೆಸ್‌ನ ನಿರೂಪಣೆ ಸ್ಪಷ್ಟವಾಗಿದೆ ಅವರು ರಾಮಲಲ್ಲಾನ ಮತ್ತೆ ಟೆಂಟ್‌ಗೆ ಕಳುಹಿಸಲು ಬಯಸುತ್ತಿದ್ದಾರೆ. ಅವರು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಈ ಎಲ್ಲ ಕೆಲಸಗಳನ್ನು ಮಾಡುತ್ತಾರೆ ಎನ್ನುವುದು ನನಗೆ ಆಶ್ಚರ್ಯ ತಂದಿದೆ ಎಂದರು.

    ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಕೋಟಾವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಬದ್ಧವಾಗಿದೆಯೇ ಹೊರತು ಧರ್ಮದ ಆಧಾರದ ಮೇಲೆ ಅಲ್ಲ ಎಂದು ಅವರು ಹೇಳಿದರು. ಧರ್ಮಾಧಾರಿತ ಮೀಸಲಾತಿಗೆ ನಾವು ಎಂದಿಗೂ ಅವಕಾಶ ನೀಡುವುದಿಲ್ಲ, ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಭೆಯು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಕೋಟಾ ನೀಡಬೇಕೆಂದು ಕರೆ ನೀಡಿತು, ಅದಕ್ಕೆ ನಾವು ಬದ್ಧರಾಗಿದ್ದೇವೆ, ನಾವು ಸಂವಿಧಾನ ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.