Tag: 40 percent commission

  • ನನ್ನ ಜೀವನದಲ್ಲೇ ಲಂಚ ತೆಗೆದುಕೊಂಡಿಲ್ಲ ಅಂತಾ ಡಿಕೆಶಿ ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡಲಿ: ಸಿ.ಟಿ ರವಿ

    ನನ್ನ ಜೀವನದಲ್ಲೇ ಲಂಚ ತೆಗೆದುಕೊಂಡಿಲ್ಲ ಅಂತಾ ಡಿಕೆಶಿ ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡಲಿ: ಸಿ.ಟಿ ರವಿ

    ಚಿಕ್ಕಮಗಳೂರು: ನನ್ನ ಜೀವನದಲ್ಲೇ ಒಮ್ಮೆಯೂ ಲಂಚ ತೆಗೆದುಕೊಂಡಿಲ್ಲ ಅಂತಾ ಡಿಕೆ ಶಿವಕುಮಾರ್ (DK Shivakumar) ಅವರು ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಸಿ.ಟಿ ರವಿ (CT Ravi) ತಿರುಗೇಟು ನೀಡಿದ್ದಾರೆ.

    ಚಿಕ್ಕಮಗಳೂರಿನಲ್ಲಿಂದು (Chikkamagaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ತಮ್ಮ ಸರ್ಕಾರ ಪ್ರಮಾಣಿಕ ಅನ್ನೋದಾದ್ರೆ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ ಎಂದು ಸಿ.ಟಿ ರವಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಲೋಕಸಭಾ ಟಿಕೆಟ್ ನೀಡುವ ವಿಚಾರದಲ್ಲಿ ರಾಜ್ಯ, ರಾಷ್ಟ್ರ ಸಮಿತಿಯವರು ತೀರ್ಮಾನ ಮಾಡ್ತಾರೆ: ಈಶ್ವರಪ್ಪ

    ಅಜ್ಜಯ್ಯನ ಮಠದಲ್ಲಿ ಪ್ರಮಾಣ ಮಾಡಲಿ ಅನ್ನುವುದು ನಮ್ಮ ಆರೋಪವಲ್ಲ. ಬಿಬಿಎಂಪಿ ಗುತ್ತಿಗೆದಾರರ ಸಂಘದ (BBMP Contractors Union) ಆರೋಪ. ಡಿಕೆಶಿಗೆ ಅಜ್ಜಯ್ಯನ ಮಠದ ಬಗ್ಗೆ ಭಕ್ತಿ ಇರುವುದರಿಂದ ಅಲ್ಲಿಗೆ ಕರೆದಿದ್ದಾರೆ. ನಾವು ತಪ್ಪೇ ಮಾಡಿಲ್ಲ ಅನ್ನೋದಾದ್ರೆ ಹೋಗಿ ಪ್ರಮಾಣ ಮಾಡಬಹುದಲ್ವಾ? ಎಂದು ಪ್ರಶ್ನಿಸಿದ್ದಾರೆ.

    ಗುತ್ತಿಗೆದಾರರ ಬಳಿ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಮೊದಲು ಹಳೇಯದ್ದಕ್ಕೆಲ್ಲಾ ಸೇರಿಸಿ 7% ಫಿಕ್ಸ್ ಮಾಡಿದ್ರು, ಮದ್ಯವರ್ತಿಗಳು 10% ಅಂದ್ರು ಆಮೇಲೆ ಚರ್ಚೆ ಮಾಡಿ 15% ಆದ್ರೆ ಮಾತ್ರ ಕ್ಲಿಯರ್ ಅಂತಾ ಹೇಳಿದ್ದಾರೆ. ಆರೋಪ ಗುತ್ತಿಗೆದಾರರ ಸಂಘದ್ದು, ಸುಳ್ಳು ಅನ್ನೊದಾದ್ರೆ ಅಜ್ಜಯ್ಯನ ಮಠಕ್ಕೆ ಹೋಗಿ ಸತ್ಯ ಮಾಡಲಿ. ಸತ್ಯ ಮಾಡುವಾಗ ನನ್ನ ಜೀವನದಲ್ಲೇ ಲಂಚ ತೆಗೆದುಕೊಂಡಿಲ್ಲ ಎಂದು ಹೇಳಿದ್ರೆ ಸಾಕು, ಬೇರೆ ಸಾಕ್ಷಿಯೇ ಬೇಕಾಗಿಲ್ಲ ಎಂದು ಹೇಳಿದ್ದಾರೆ.

    ಮುಂದುವರಿದು.. ಕಾಂಗ್ರೆಸ್‌ನ ಬಹುತೇಕ ಶಾಸಕರು ಒಂದೇ ದಿನ ವಸೂಲಿಗೆ ಹೊರಟಿದ್ದಾರೆ. ನಾವು ಅಷ್ಟು ಖರ್ಚು ಮಾಡಿದ್ದೇವೆ ಅಂತ ಬಹಿರಂಗವಾಗಿ ಹೇಳ್ತಿದ್ದಾರೆ. ದಾನ-ಧರ್ಮಕ್ಕೆ ರಾಜಕಾರಣ ಮಾಡ್ತೀನಾ? ನಾನೇನು ಧರ್ಮರಾಯನಾ? ಖರ್ಚು ಮಾಡಿರೋದು ವಸೂಲಿ ಆಗಬೇಕು, ಇಲ್ಲ ಅಂದ್ರೆ ಹೆಂಡ್ರು ಮಕ್ಕಳನ್ನ ಬೀದಿಯಲ್ಲಿ ನಿಲ್ಲಿಸ್ಲಾ? ಅಂತಿದ್ದಾರೆ. ಒಟ್ಟಿನಲ್ಲಿ ಕರಪ್ಷನ್-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಓದಿದ್ದು 9ನೇ ಕ್ಲಾಸ್, ಮಾಡ್ತಿದ್ದು ಎಂಜಿನಿಯರ್ ಕೆಲಸ- ಡಿಗ್ರೂಪ್ ನೌಕರನಿಂದ ಕ್ವಾಲಿಟಿ ಚೆಕ್ಕಿಂಗ್

    90% ಹಗರಣ ಆಗಿದ್ದು ಕಾಂಗ್ರೆಸ್‌ ಅವಧಿಯಲ್ಲೇ: ದೇಶ-ರಾಜ್ಯದ ಹಗರಣಗಳನ್ನ ಪಟ್ಟಿ ಮಾಡಿದ್ರೆ 90% ಕಾಂಗ್ರೆಸ್ ಅವಧಿಯಲ್ಲೇ ಆಗಿದೆ. 90% ಅಪರಾಧಿ ಸ್ಥಾನದಲ್ಲಿ ಇರೋರು ಕಾಂಗ್ರೆಸ್ ಸಚಿವರು, ಆ ಕಾಲದ ಅಧಿಕಾರಿಗಳು. ಭ್ರಷ್ಟಾಚಾರದ ಬೀಜ ಬಿತ್ತಿದ್ದೇ ಕಾಂಗ್ರೆಸ್ ಪಕ್ಷ. ಭ್ರಷ್ಟಾಚಾರದಿಂದ ಕಾಂಗ್ರೆಸ್ ವಿಮುಕವಾಗಿದೆ ಅನ್ನೋದನ್ನ ಯಾರೂ ನಂಬಲ್ಲ. ಏಕೆಂದರೆ ಭ್ರಷ್ಟಾಚಾರದ ಮತ್ತೊಂದು ಮುಖವೇ ಕಾಂಗ್ರೆಸ್. ಅವರು ಯಾವುದೇ ಪ್ರಾಮಾಣಿಕತೆಯ ಸೋಗು ಹಾಕಿದರೂ, ಭ್ರಷ್ಟಾಚಾರದ ವಾಸನೆ ಇರುತ್ತೆ. 40%, 15% ಆಗಿದೆ ಅಂದ್ರೆ ಕಡಿಮೆ ಆಯ್ತು ಅಂತ ಒಪ್ಪಿಕೊಂಡಂತೆ ಎಂದು ಸಿಎಂ ಹೇಳಿಕೆ ಗಮನಿಸಿದ್ದೇನೆ. ಅದಲ್ಲ, ನೀವು ಕೇಳುತ್ತಿರುವ 15% ಹಳೆಯದ್ದಕ್ಕೆ, ಹೊಸದು 50% ದಾಟಬಹುದು ಎಂದು ತಿರುಗೇಟು ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿಯವರೇ ತಪ್ಪು ಮಾಡಿದ್ರೂ ಜೈಲಿಗೆ ಹಾಕಿ, ನೀವು ಸತ್ಯ ಸಂಧರು ಅನ್ನೋದನ್ನ ಪ್ರೂವ್ ಮಾಡಿ: ಪ್ರತಾಪ್ ಸಿಂಹ

    ಬಿಜೆಪಿಯವರೇ ತಪ್ಪು ಮಾಡಿದ್ರೂ ಜೈಲಿಗೆ ಹಾಕಿ, ನೀವು ಸತ್ಯ ಸಂಧರು ಅನ್ನೋದನ್ನ ಪ್ರೂವ್ ಮಾಡಿ: ಪ್ರತಾಪ್ ಸಿಂಹ

    ಮೈಸೂರು: ಇಷ್ಟು ದಿನ ಕಾಂಗ್ರೆಸ್‌ನವರು 40% ಕಮಿಷನ್ (40 Percent Commission) ಅಂತಾ ಬೊಬ್ಬೆ ಹೊಡೆದುಕೊಳ್ತಿದ್ರು, ಈಗ ಅಧಿಕಾರವೇ ಅವರ ಕೈಯಲ್ಲಿದೆ. ಎಲ್ಲವನ್ನ ತನಿಖೆ ಮಾಡಿಸಿ, ಬಿಜೆಪಿಯವರೇ ತಪ್ಪು ಮಾಡಿದ್ರೂ ಹಿಡಿದು ಜೈಲಿಗೆ ಹಾಕಿಸಿ. ನೀವು ಸತ್ಯ ಸಂಧರು ಅನ್ನೋದನ್ನ ಸಾಬೀತು ಮಾಡಿಕೊಳ್ಳಿ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಕುಟುಕಿದ್ದಾರೆ.

    ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಹಗರಣ, ಬಿಟ್ ಕಾಯಿನ್ ಪ್ರಕರಣ, 40% ಕಮಿಷನ್ ಹಗರಣ, ಚಾಮರಾಜನಗರ ಆಕ್ಸಿಜನ್ ದುರಂತ ಎಲ್ಲರದ ಬಗ್ಗೆ ತನಿಖೆ ಮಾಡಿ. ಅವನ್ಯಾವನು ತಪ್ಪು ಮಾಡಿದ್ದಾನೋ, ಅವನನ್ನ ಹಿಡಿದು ಜೈಲಿಗೆ ಹಾಕಿ. ನೀವು ಸತ್ಯ ಸಂಧರು ಎಂಬುದನ್ನ ಪ್ರೂವ್‌ ಮಾಡಿ. ನೀವು ತನಿಖೆ ಮಾಡಿದ್ರೆ ನಮ್ಮ ಪಕ್ಷವನ್ನೂ ಸ್ವಚ್ಛಗೊಳಿಸೋದಕ್ಕೆ ಅನುಕೂಲವಾಗುತ್ತೆ ಎಂದಿದ್ದಾರೆ.

    ನೀವು ಬಿಜೆಪಿ ಸರ್ಕಾರದ (BJP Government) ಮೇಲೆ ಏನೇನು ಆರೋಪ ಮಾಡಿದ್ದೀರೊ ಅವೆಲ್ಲದರ ಬಗ್ಗೆಯೂ ತುರ್ತು ತನಿಖೆ ಮಾಡಿ. ನಿಮ್ಮ ಮೇಲೆ ಜನ ಅತೀವ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸವನ್ನ ಉಳಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

    ಎಲ್ಲರಿಗೂ ಫ್ರೀ ಅಂದಿದ್ದು ಸಿದ್ದರಾಮಯ್ಯ:
    ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಗ್ಯಾರಂಟಿ ಯೋಜನೆ ಘೋಷಣೆ ಮಾಡುವಾಗ ಯಾವ ಕಂಡಿಷನ್ ಹಾಕಿರಲಿಲ್ಲ. ನನಗೂ ಫ್ರೀ, ನಿನಗೂ, ಎಲ್ಲರಿಗೂ ಫ್ರೀ ಎಂದವರು ಸಿದ್ದರಾಮಯ್ಯ, ಈಗಲೂ ಯಾವ ಕಂಡಿಷನ್ ಇಲ್ಲದೇ ಗ್ಯಾರಂಟಿ (Congress Guarantee) ಜಾರಿ ಮಾಡಿ. ಅವರು ಆಡಿದ ಮಾತುಗಳೇ ಅವರ ತಲೆ ಮೇಲೆ ಒತ್ತಡ ತಂದಿದೆ. ಆ ಒತ್ತಡವನ್ನ ಅವರೇ ನಿಭಾಯಿಸಿಕೊಂಡು ಯಾವ ಷರತ್ತುಗಳಿಲ್ಲದೇ ಗ್ಯಾರಂಟಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

  • ನೀವು ಬಿಟ್ಟರೂ 40% ಕರ್ಮ ನಿಮ್ಮನ್ನ ಹಿಂಬಾಲಿಸುತ್ತಿದೆ ಮೋದಿಜೀ – ಟ್ವೀಟ್‌ನಲ್ಲಿ ಕಾಲೆಳೆದ ಸಿದ್ದು

    ನೀವು ಬಿಟ್ಟರೂ 40% ಕರ್ಮ ನಿಮ್ಮನ್ನ ಹಿಂಬಾಲಿಸುತ್ತಿದೆ ಮೋದಿಜೀ – ಟ್ವೀಟ್‌ನಲ್ಲಿ ಕಾಲೆಳೆದ ಸಿದ್ದು

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೃಹತ್ ರೋಡ್ ಶೋ (Road Show) ಯಶಸ್ವಿಯಾಗಿ ಸಂಪನ್ನಗೊಂಡಿದೆ.

    ಈ ನಡುವೆ ಪ್ರಧಾನಿ ರೋಡ್‌ ಶೋ ವೇಳೆ ಕ್ಲಿಕ್ಕಿಸಿದ ಫೋಟೋವೊಂದು‌ ಪ್ರತಿಪಕ್ಷ ನಾಯಕರಿಂದ ಟೀಕೆಗೆ ಅಸ್ತ್ರವಾಗಿದೆ. ಪ್ರಧಾನಿ ರೋಡ್‌ಶೋ ವೇಳೆ ಕ್ಲಿಕ್ಕಿಸಿದ ಫೋಟೋವೊಂದರಲ್ಲಿ ಮಳಿಗೆಯ ಮೇಲೆ 40% ಆಫರ್‌ ಇರುವ ಪೋಸ್ಟರ್‌ ಕಂಡುಬಂದಿದೆ. ಈ ಫೋಟೋವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ (Siddaramaiah) ʻನೀವು ಬಿಟ್ಟರೂ 40% ಕರ್ಮ ನಿಮ್ಮನ್ನು ಬಿಡದೆ ಹಿಂಬಾಲಿಸುತ್ತಿದೆ ಮೋದಿಜೀʼ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಕರ್ನಾಟಕ ಚುನಾವಣೆ – ಡಿಜಿಟಲ್‌ ಮೀಡಿಯಾ ಹವಾ ಹೇಗಿದೆ?

    ಇದರೊಂದಿಗೆ ಕನ್ನಡಿಗರ ಮತಕ್ಕಿರುವ ಬೆಲೆ ಬದುಕಿಗಿಲ್ಲವೇ? ಘೋಷಣೆಯೊಂದಿಗೆ ಹಲವು ಪ್ರಶ್ನೆಗಳನ್ನು ಪ್ರಧಾನಿ ಮೋದಿ ಅವರಿಗೆ ಕೇಳಿದ್ದಾರೆ. ಗ್ರಾಮೀಣ ಬ್ಯಾಂಕಿಂಗ್‌, ಐಬಿಪಿಎಸ್‌, ಕೇಂದ್ರ ಸ್ವಾಮ್ಯದ ಸಂಸ್ಥೆಗಳ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ನಿರಾಕರಿಸಿ ಹುಟ್ಟಿದ ನೆಲದಲ್ಲಿಯೇ ಕನ್ನಡಿಗ ಯುವಜನರಿಗೆ ಉದ್ಯೋಗ ವಂಚನೆ ಮಾಡಲಾಗಿದೆ. ಇವರು ಪ್ರತಿಭಟನೆ ನಡೆಸುವಾಗ ನ್ಯಾಯ ಕೊಡಿಸಲು ನೀವು ಯಾಕೆ ಬಂದಿರಲಿಲ್ಲ? ಇದನ್ನೂ ಓದಿ: ಮೇ7ರಂದು ಬೆಂಗಳೂರಿನಲ್ಲಿ ಮೋದಿ ಫೈನಲ್‌ ರೋಡ್‌ ಶೋ

    ಕಳೆದ 4 ಬಜೆಟ್‌ಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುವ ಅನುದಾನ ಶೇ.1.97ಕ್ಕಿಂತ ಮೇಲೆ ಏರಿಲ್ಲ. 2022ರಲ್ಲಿ ಸಿಎಜಿ ವರದಿ ಪ್ರಕಾರ 2022ರಲ್ಲಿ 1.62 ಲಕ್ಷ ವಿದ್ಯಾರ್ಥಿಗಳು ಶಾಲೆಗಳನ್ನ ತ್ಯಜಿಸಿದ್ದಾರೆ. 2020-21 ಮತ್ತು 2021-22ರ ಅವಧಿಯಲ್ಲಿ 1,965 ಸರ್ಕಾರಿ ಶಾಲೆಗಳನ್ನ ಮುಚ್ಚಲಾಗಿದೆ. ಶಿಕ್ಷಣವಂಚಿತ ಮಕ್ಕಳ ಭವಿಷ್ಯ ಹಾಳಾಗುವಾಗ ನ್ಯಾಯ ಕೊಡಿಸಲು ನೀವು ಏಕೆ ಬಂದಿರಲಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನ ಪ್ರಧಾನಿ ಮುಂದಿಟ್ಟಿದ್ದಾರೆ.

  • 40% ಕಮಿಷನ್‌ ಕಡಿಮೆ ಮಾಡಿದ್ರೆ ಇಂದಿರಾ ಕ್ಯಾಂಟೀನ್‌ ಉಳಿಯುತ್ತಿತ್ತು – ಸಿದ್ದರಾಮಯ್ಯ ಟಾಂಗ್‌

    40% ಕಮಿಷನ್‌ ಕಡಿಮೆ ಮಾಡಿದ್ರೆ ಇಂದಿರಾ ಕ್ಯಾಂಟೀನ್‌ ಉಳಿಯುತ್ತಿತ್ತು – ಸಿದ್ದರಾಮಯ್ಯ ಟಾಂಗ್‌

    ಕೊಪ್ಪಳ: ಬಿಜೆಪಿ (BJP) ಸರ್ಕಾರ 40 ಪರ್ಸೆಂಟ್‌ ಕಮಿಷನ್‌ (40 Percent Commission) ಪಡೆಯುವುದನ್ನ ಕಡಿಮೆ ಮಾಡಿದ್ರೆ, ಬಡವರಿಗೆ ಖರ್ಚು ಮಾಡಲು ಹಣ ಉಳಿಯುತ್ತಿತ್ತು. ಇಂದಿರಾ ಕ್ಯಾಂಟೀನ್‌ (Indira Canteen) ಸಹ ಉಳಿಯುತ್ತಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವ್ಯಂಗ್ಯವಾಡಿದರು.

    ಕೊಪ್ಪಳದ (Koppal) ಕಾರಟಗಿಯಲ್ಲಿ ನಡೆದ ಕಾಂಗ್ರೆಸ್‌ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಡವರ ಹಾಗೂ ಕಾರ್ಮಿಕರ ಸಲುವಾಗಿ ನಮ್ಮ ಸರ್ಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಗಳನ್ನ ಭ್ರಷ್ಟ ಬಿಜೆಪಿ ಸರ್ಕಾರ ಮುಚ್ಚಿದೆ. ಈ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಕೂಡಲೇ ಮತ್ತೆ ಇಂದಿರಾ ಕ್ಯಾಂಟೀನ್ ಆರಂಭಿಸುತ್ತೇವೆ ಎಂದು ಹೇಳಿದರು.

    ಇಂದಿರಾ ಕ್ಯಾಂಟೀನ್ ಮುನ್ನಡೆಸಲು ಹಣದ ಕೊರತೆ ಇದೆ ಎಂದು ಬಿಜೆಪಿ ಸರ್ಕಾರ ಹೇಳಿತ್ತು. ಶೇ.40ರಷ್ಟು ಕಮಿಷನ್ ಪಡೆಯೋದನ್ನ ಕಡಿಮೆ ಮಾಡಿದ್ರೆ ಬಡವರಿಗೆ ಖರ್ಚು ಮಾಡಲು ಹಣ ಉಳಿಯುತ್ತಿತ್ತು ಎಂದು ಚಾಟಿ ಬೀಸಿದರು. ಇದನ್ನೂ ಓದಿ: IPLಗೆ ಸೆಡ್ಡು ಹೊಡೆಯಲು ಸೌದಿ ಮಾಸ್ಟರ್ ಪ್ಲ್ಯಾನ್ – BCCI ಹೇಳಿದ್ದೇನು?

    ಇದೇ ವೇಳೆ ಪಿಎಸ್ಐ ನೇಮಕಾತಿ ಮಾಡಿಸಿ ಕೊಡುವುದಾಗಿ ಹೇಳಿ ಹಣ ಲೂಟಿ ಹೊಡೆದ ಗಿರಾಕಿ ಶಾಸಕನಿಗೆ ವೋಟು ಹಾಕ್ತೀರಾ ಎಂದು ಪ್ರಶ್ನಿಸಿ, ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ಹೆಸರು ಉಲ್ಲೇಖಿಸದೇ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹೆಚ್‌ಡಿಕೆಯನ್ನು ಭೇಟಿಯಾದ ಸೊಗಡು ಶಿವಣ್ಣ – ತುಮಕೂರಲ್ಲೂ ಅಭ್ಯರ್ಥಿ ಬದಲಾವಣೆ?

    ಪಿಎಸ್ಐ ಹಗರಣದಲ್ಲಿ 15 ಲಕ್ಷ ರೂ. ಪಡೆದ ಆರೋಪ ಆ ಶಾಸಕನ ಮೇಲಿದೆ. ಆಡಿಯೋದಲ್ಲಿರುವ ಧ್ವನಿ ‌ನನ್ನದೇ ಎಂದು ಒಪ್ಪಿಕೊಂಡರೂ ಬಿಜೆಪಿ ಸರ್ಕಾರ ಮನೆಗೆ ಕಳುಹಿಸದೇ ಆ ಶಾಸಕನನ್ನ ರಕ್ಷಣೆ ಮಾಡಿದೆ. ಮತದಾನದ ದಿನದಂದು ನೀವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿಗೆ ಮತ ಹಾಕಿ ಬಿಜೆಪಿ ಶಾಸಕನನ್ನ ಮನೆಗೆ ಕಳುಹಿಸಿ ಎಂದು ಕರೆ ನೀಡಿದರು.

  • ರಾಜಸ್ಥಾನದಲ್ಲಿ ಘೋಷಿಸಿದ 3,500 ರೂ. ಭತ್ಯೆಯನ್ನೇ ಇನ್ನೂ ಕೊಟ್ಟಿಲ್ಲ – ಕಾಂಗ್ರೆಸ್ ಗ್ಯಾರಂಟಿಗೆ ಬಿಜೆಪಿ ಕಿಡಿ

    ರಾಜಸ್ಥಾನದಲ್ಲಿ ಘೋಷಿಸಿದ 3,500 ರೂ. ಭತ್ಯೆಯನ್ನೇ ಇನ್ನೂ ಕೊಟ್ಟಿಲ್ಲ – ಕಾಂಗ್ರೆಸ್ ಗ್ಯಾರಂಟಿಗೆ ಬಿಜೆಪಿ ಕಿಡಿ

    ಬೆಂಗಳೂರು: ಒಂದೆಡೆ ಪ್ರಧಾನಿ ಮೋದಿ (Narendra Modi) ಹೋದಲ್ಲಿ ಬಂದಲ್ಲಿ, ರಾಜಕೀಯ ಪಕ್ಷಗಳು ಎಗ್ಗಿಲ್ಲದೇ ಘೋಷಿಸ್ತಿರೋ ಉಚಿತ ಕೊಡುಗೆಗಳಿಂದ ದೇಶದ ಆರ್ಥಿಕತೆಗೆ ಹೊಡೆತ ಬೀಳುತ್ತೆ ಅಂತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ (Congress) ಮತದಾರರನ್ನ ಸೆಳೆಯಲು ನಿರಂತರವಾಗಿ ಒಂದಾದ ಮೇಲೊಂದರಂತೆ ಉಚಿತ ಕೊಡುಗೆಗಳ ಘೋಷಣೆ ಮಾಡುತ್ತಿದೆ. ಇದಕ್ಕೆ ಬಿಜೆಪಿ ಸಹ ತಿರುಗೇಟು ನೀಡಿದ್ದು, ಕಾಂಗ್ರೆಸ್ ಪಕ್ಷದ ಈ ಉಚಿತ ಭರವಸೆಗಳನ್ನು ಈಡೇರಿಸಲು ಆಗಲ್ಲ ಎಂದು ಕಿಡಿ ಕಾರಿದೆ.

    ಬಿಜೆಪಿ ನಾಯಕರ ಪ್ರಕಾರ, ಕಾಂಗ್ರೆಸ್‌ ಘೋಷಣೆ ಮಾಡಿರುವ ನಾಲ್ಕು ಗ್ಯಾರಂಟಿಗಳಿಗೆ 60 ರಿಂದ 65 ಸಾವಿರ ಕೋಟಿ ಬೇಕಾಗುತ್ತೆ. ಅಷ್ಟೊಂದು ದುಡ್ಡು ಒದಗಿಸಿ, ಈ ಭರವಸೆ ಈಡೇರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದೆ. ಈ ಬೆನ್ನಲ್ಲೇ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ವಿತರಣೆ ಮಾಡುವ ನೆಪದಲ್ಲಿ ಮತದಾರರ ದತ್ತಾಂಶ ಸಂಗ್ರಹ ಮಾಡ್ತಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಇದನ್ನೂ ಓದಿ: ಮೋದಿ ಯುವಜನರನ್ನ ಸ್ವಾವಲಂಬಿಗಳಾಗಿ ಮಾಡಿದ್ರೆ, ಕಾಂಗ್ರೆಸ್‌ 3 ಸಾವಿರ ಕೊಡ್ತೀನಿ ಅಂತಿದೆ – ತೇಜಸ್ವಿ‌ ಸೂರ್ಯ

    ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಉಚಿತ ಯೋಜನೆಗಳ ಆಮಿಷ ಒಡ್ಡುವ ಕೆಲಸ ಮಾಡ್ತಿದ್ದಾರೆ. ಮತದಾರರ ವೋಟರ್ ಐಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಕಲೆಕ್ಟ್ ಮಾಡ್ತಿದ್ದಾರೆ. ಫೋನ್ ಪೇ, ಗೂಗಲ್ ಪೇ ನಂಬರ್ಸ್ ಕಲೆಕ್ಟ್ ಮಾಡುತ್ತಿದ್ದಾರೆ. ಇದನ್ನು ತಡೆದು, ಕಾಂಗ್ರೆಸ್ ವಿರುದ್ಧ ಕ್ರಮ ತಗೋಬೇಕು ಎಂದು ಮನವಿ ಮಾಡಿದೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 10 ಲಕ್ಷ ಯುವಕರಿಗೆ ಉದ್ಯೋಗ – ರಾಹುಲ್ ಗಾಂಧಿ ಭರವಸೆ

    ಕಾಂಗ್ರೆಸ್‌ ಯುವಕ್ರಾಂತಿ ಸಮಾವೇಶದಲ್ಲಿ 2 ವರ್ಷಗಳವರೆಗೆ ಪ್ರತಿ ತಿಂಗಳು ನಿರುದ್ಯೋಗಿ (Unemployment) ಪದವೀಧರರಿಗೆ 3 ಸಾವಿರ ರೂ. ಹಾಗೂ ನಿರುದ್ಯೋಗಿ ಡಿಪ್ಲೊಮಾ ಪದವೀಧರರಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡುವ `ಯುವನಿಧಿ’ (YuvaNidhi) ಯೋಜನೆಯನ್ನ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್‌ ಈವರೆಗೆ ನೀಡಿರುವ ಭರವಸೆಗಳಿಗೆ ಎಷ್ಟು ವೆಚ್ಚ ಆಗಬಹುದು? ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಎಷ್ಟಿದೆ? ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಕೊಟ್ಟಿದ್ದ ಭರವಸೆಗಳು ಏನಾಗಿವೆ ಎಂಬುದನ್ನ ದಾಖಲೆ ಸಮೇತ ಮುಂದಿಟ್ಟಿದೆ.

    ಕಾಂಗ್ರೆಸ್ (Punjab) ಗ್ಯಾರಂಟಿಗೆ ಬಿಜೆಪಿ ಕಿಡಿ: ಪಂಜಾಬ್‌ನಲ್ಲಿ ಕಾಂಗ್ರೆಸ್‌ 2017ರಲ್ಲಿ ನೀಡಿದಂತೆ ನಿರುದ್ಯೋಗಿಗಳಿಗೆ 2000 ರೂ. ಭತ್ಯೆ ನೀಡುವ ಭರವಸೆ ಈಡೇರಿಸಿಲ್ಲ. 2018ರಲ್ಲಿ ರಾಜಸ್ಥಾನದಲ್ಲಿ‌ ನಿರುದ್ಯೋಗಿಗಳಿಗೆ 3,500 ರೂ. ಭತ್ಯೆ ಭರವಸೆಯನ್ನೂ ಭಾಗಶಃ ಈಡೇರಿಸಿಲ್ಲ (ಎರಡೂವರೆ ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಕುಟುಂಬಗಳನ್ನು ಕಾಂಗ್ರೆಸ್ ಈ ಯೋಜನೆಯಿಂದ ಹೊರಗಿಟ್ಟಿದೆ.. 18 ಲಕ್ಷ ನಿರುದ್ಯೋಗಿಗಳಿದ್ದಾರೆ). 2018ರಲ್ಲಿ ಛತ್ತೀಸ್‌ಘಡ ಸರ್ಕಾರ ಹೇಳಿದಂತೆ ನಿರುದ್ಯೋಗಿಗಳಿಗೆ 2,500 ರೂ. ಭತ್ಯೆ ಭರವಸೆಯನ್ನು ಈಡೇರಿಸಿಲ್ಲ (ಎರಡೂವರೆ ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಕುಟುಂಬಗಳನ್ನು ಕಾಂಗ್ರೆಸ್ ಈ ಯೋಜನೆಯಿಂದ ಹೊರಗಿಟ್ಟಿದೆ.. 3000 ಕೋಟಿ ಬೇಕಿದ್ದ ಜಾಗದಲ್ಲಿ 250 ಕೋಟಿ ಮೀಸಲಿಟ್ಟಿದೆ). ಹಿಮಾಚಲ ಪ್ರದೇಶದಲ್ಲಿ 1 ಲಕ್ಷ ಸರ್ಕಾರಿ ಉದ್ಯೋಗ ನೀಡುವ ಭರವಸೆಯಯನ್ನೂ ಕಾಂಗ್ರೆಸ್ ಈಡೇರಿಸಿಲ್ಲ. ಈ ಪಟ್ಟಿಯಲ್ಲಿ ಇದೊಂದು ಸುಳ್ಳಿನ ಗ್ಯಾರಂಟಿ ಕಾರ್ಡ್‌ ಸೇರಿದೆ ಎಂದು ಬಿಜೆಪಿ ಕಿಡಿ ಕಾರಿದೆ.

    ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ (ಸಿಎಂಐಇ ಪ್ರಕಾರ): ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಇದೆ ಎಂದು ಸಿಎಂಐಇ ಹೇಳಿದೆ. ಜನವರಿ ತಿಂಗಳಲ್ಲಿ ರಾಜ್ಯದಲ್ಲಿದ್ದ ನಿರುದ್ಯೋಗ ಪ್ರಮಾಣ ಶೇ.2.5 (ರಾಜಸ್ಥಾನದಲ್ಲಿ ಶೇ.28, ದೆಹಲಿಯಲ್ಲಿ ಶೇ.20ರಷ್ಟಿದೆ), ಫೆಬ್ರವರಿ ತಿಂಗಳಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ ಶೇ. 1.8ಕ್ಕೆ ಇಳಿಕೆಯಾಗಿದೆ ಎಂದು ಹೇಳಲಾಗಿದೆ.

  • ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 10 ಲಕ್ಷ ಯುವಕರಿಗೆ ಉದ್ಯೋಗ – ರಾಹುಲ್ ಗಾಂಧಿ ಭರವಸೆ

    ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 10 ಲಕ್ಷ ಯುವಕರಿಗೆ ಉದ್ಯೋಗ – ರಾಹುಲ್ ಗಾಂಧಿ ಭರವಸೆ

    ಬೆಳಗಾವಿ: ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ್ರೆ ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗಾವಕಾಶ (Employment) ನೀಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭರವಸೆ ನೀಡಿದರು.

    ಬೆಳಗಾವಿಯಲ್ಲಿ (Belagavi) ನಡೆದ `ಯುವಕ್ರಾಂತಿ’ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, 5 ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗ ನೀಡಲಿದೆ. ಜೊತೆಗೆ ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ 2.5 ಲಕ್ಷ  ಉದ್ಯೋಗವನ್ನು ರಾಜ್ಯದ ಯುವಜನರಿಗೆ ಸಿಗುವಂತೆ ಮಾಡಲಿದೆ ಎಂದು ಘೋಷಣೆ ಮಾಡಿದರು.

    ಮುಂದುವರಿದು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತ, 200 ಯೂನಿಟ್ ವಿದ್ಯುತ್ ಉಚಿತ, ಕುಟುಂಬದ ಓರ್ವ ಮಹಿಳೆಗೆ 2 ಸಾವಿರ ರೂ. ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ದನ್ನೂ ಓದಿ: ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ.: ಕಾಂಗ್ರೆಸ್‌ 4ನೇ ಗ್ಯಾರಂಟಿ ಘೋಷಣೆ

    ಕೆಲ ತಿಂಗಳ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ್ ಜೋಡೋ ಯಾತ್ರೆ (Bharat Jodo Yatra) ನಡೆಸಲಾಯಿತು. ಅದಕ್ಕೆ ರಾಜ್ಯದಿಂದಲೂ ಜನರು ಅಪಾರ ಬೆಂಬಲ ಕೊಟ್ಟಿದ್ದರು. ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ. ನಾವು ರಾಜ್ಯದಲ್ಲಿ ಭಾರತ್ ಜೋಡೊ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಯುವಕರು ನಮಗೆ ಕೆಲ ಸಂದೇಶ ಕೊಟ್ಟರು. ಯಾವುದೇ ಪದವೀಧರರಿಗೂ ಕರ್ನಾಟಕ ಸರ್ಕಾರ ಉದ್ಯೋಗ ಕೊಡುತ್ತಿಲ್ಲ, ಯಾವುದೇ ಕೆಲಸ ಆಗಬೇಕು ಅಂದರೂ 40 ಪರ್ಸೆಂಟ್ ಕಮಿಷನ್ ಕೊಡಬೇಕಾಗಿದೆ. ಇಡೀ ದೇಶದಲ್ಲೇ ಕರ್ನಾಟಕ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ ಎಂಬ ಸಂದೇಶಗಳನ್ನ ನೀಡಿದರು. ಯುವಕರಿಗೆ ನಿರುದ್ಯೋಗದಿಂದ ಸಮಸ್ಯೆಗಳಾಗುತ್ತಿವೆ. ಸಾಕಷ್ಟು ಮುಜುಗರ ಎದುರಿಸುತ್ತಿದ್ದಾರೆ. ಇದೆಲ್ಲವನ್ನು ಮನಗಂಡು ನಮ್ಮ ಸರ್ಕಾರ `ಯುವನಿಧಿ’ಯನ್ನ ಘೋಷಣೆ ಮಾಡಿದೆ ಎಂದು ಹೇಳಿದರು.

    ದೇಶದಲ್ಲಿ ಎಲ್ಲ ಕೈಗಾರಿಕೆಗಳನ್ನ ಅದಾನಿ ಕೈಗೆ ಕೊಡುತ್ತಿದ್ದಾರೆ. ರಸ್ತೆ ಏರ್‌ಪೋರ್ಟ್‌ಗಳನ್ನ ಅವರಿಗೇ ಬಿಟ್ಟುಕೊಡಲಾಗುತ್ತಿದೆ. ಬಿಜೆಪಿ ಸರ್ಕಾರದಿಂದ ತಮ್ಮ ಗೆಳೆಯರಿಗೆ ಮಾತ್ರ ಲಾಭವಾಗುತ್ತಿದೆ. ಇದರಿಂದಲೇ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಇದೆಲ್ಲವನ್ನೂ ಕಾಂಗ್ರೆಸ್ ಯುವಕರಿಗೆ ತಿಳಿಸುವ ಕೆಲಸ ಮಾಡಿದೆ ಎಂದು ತಿಳಿಸಿದರು.

  • ರಾಜ್ಯ ಭ್ರಷ್ಟಾಚಾರದ ರಾಜಧಾನಿಯಾಗಿರೋ ಬಗ್ಗೆ ಮೋದಿ ಏಕೆ ಮಾತಾಡ್ತಿಲ್ಲ?: ಡಿಕೆಶಿ

    ರಾಜ್ಯ ಭ್ರಷ್ಟಾಚಾರದ ರಾಜಧಾನಿಯಾಗಿರೋ ಬಗ್ಗೆ ಮೋದಿ ಏಕೆ ಮಾತಾಡ್ತಿಲ್ಲ?: ಡಿಕೆಶಿ

    ಬೆಂಗಳೂರು: ಭ್ರಷ್ಟಾಚಾರ ಸಹಿಸುವುದಿಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಅಮಿತ್ ಶಾ (Amit Shah) ಅವರು ಬಿಜೆಪಿ (BJP) ಸರ್ಕಾರದ 40% ಕಮಿಷನ್ (40 percent commission) ಬಗ್ಗೆ ಮಾತನಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಟಾಂಗ್ ನೀಡಿದ್ದಾರೆ.

    ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ಮೋದಿ ಅವರ ಹೇಳಿಕೆ ಬಗ್ಗೆ ಮಾತನಾಡಿದ ಅವರು, 40% ಕಮಿಷನ್ ದೂರು ನೀಡಿದ ಕೆಂಪಣ್ಣ ಅವರಿಗೆ ಯಾಕೆ ಉತ್ತರ ನೀಡುತ್ತಿಲ್ಲ? ಪಿಎಸ್‌ಐ ಹಗರಣ, ನೇಮಕಾತಿ ಅಕ್ರಮ ಯಾರಿಂದ ಆಗುತ್ತಿದೆ? ಸ್ಕಿಲ್ ಇಂಡಿಯಾ ಕಿಲ್ ಇಂಡಿಯಾ ಆಗಿದೆ. ಇದೆಲ್ಲದರ ಬಗ್ಗೆ ನಾವು ಮಾಹಿತಿ ಸಂಗ್ರಹಿಸುತ್ತಿದ್ದೇವೆ. ನಂತರ ಈ ವಿಚಾರವಾಗಿ ಮಾತನಾಡುತ್ತೇವೆ. ಈ ಹಗರಣಗಳ ಬಗ್ಗೆ ಮೋದಿ ಅವರಿಗೆ ಮಾಹಿತಿ ಇಲ್ಲವೇ? ಎಂದು ಪ್ರಶ್ನೆ ಮಾಡಿದರು.

    ಬಿಜೆಪಿ ಸರ್ಕಾರ ರಾಜ್ಯವನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿದೆ. ದೇಶದಲ್ಲಿ ರಾಜ್ಯವನ್ನು ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದೆ. ಈ ಬಗ್ಗೆ ಅವರು ಮಾತನಾಡುತ್ತಿಲ್ಲ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಿದರು. ಆದರೆ ಶಿವಮೊಗ್ಗಕ್ಕೆ ಬಂಡವಾಳ ಹೂಡಿಕೆ ಮಾಡಲು ಯಾರೂ ಬರುತ್ತಿಲ್ಲ ಎಂದು ಯಾಕೆ ಹೇಳುತ್ತಿಲ್ಲ? ಈ ಬಗ್ಗೆ ಪ್ರಧಾನಮಂತ್ರಿಗಳು, ಅಮಿತ್ ಶಾ ಅವರು ಯಾಕೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ನಾಯಕರು ಎಲ್ಲಿದ್ದಾರೆ – ಈಶ್ವರಪ್ಪ ಪ್ರಶ್ನೆ

    ಬಿಜೆಪಿ ಎಂಎಲ್‌ಸಿ ಆಯನೂರು ಮಂಜುನಾಥ್ ಅವರ ಪೋಸ್ಟರ್ ವಿಚಾರವಾಗಿ ಮುಖ್ಯಮಂತ್ರಿಗಳು ಯಾಕೆ ಮಾತನಾಡುತ್ತಿಲ್ಲ? ರಾಮಮಂದಿರ ಬೇಡ ಎಂದು ಅವರೇ ಹೇಳಿದ್ದಾರೆ. ಇದಕ್ಕೆ ಬೊಮ್ಮಾಯಿ ಉತ್ತರ ಕೊಡಲಿ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎಂದವರು ಈಗ ಪ್ರಧಾನಿಗಳ ನೇತೃತ್ವದಲ್ಲಿ ಚುನಾವಣೆ ಎಂದು ಹೇಳುತ್ತಿರುವುದು ಯಾಕೆ? ಬಿಜೆಪಿ ಮುಕ್ತ ಕರ್ನಾಟಕ ನಿರ್ಮಾಣದ ದಿನಗಳು ಸನಿಹದಲ್ಲಿದೆ ಎಂದು ಡಿಕೆಶಿ ಹೇಳಿದರು. ಇದನ್ನೂ ಓದಿ: ಟಿಕೆಟ್ ಕೇಳುವ ಹಕ್ಕು ಭವಾನಿಗೂ ಇದೆ, ಪ್ರತಿಯೊಬ್ಬ JDS ಕಾರ್ಯಕರ್ತನಿಗೂ ಇದೆ – ಇಬ್ರಾಹಿಂ

  • ಜ.23ರಂದು ಬೆಂಗ್ಳೂರಿನ 300 ಕಡೆ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

    ಜ.23ರಂದು ಬೆಂಗ್ಳೂರಿನ 300 ಕಡೆ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

    ಬೆಂಗಳೂರು: ಬಿಜೆಪಿ (BJP) ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪ ಖಂಡಿಸಿ ಜನವರಿ 23ರಂದು ಬೆಂಗಳೂರಿನ 300 ಕಡೆ ಪ್ರತಿಭಟನೆ (Protest) ನಡೆಸಲು ಕಾಂಗ್ರೆಸ್ (Congress) ನಿರ್ಧರಿಸಿದೆ.

    ಈ ಸಂಬಂಧ ಶಾಸಕ ಎನ್.ಎ ಹ್ಯಾರಿಸ್ (Nalapad Ahmed Haris) ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ `ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಶೈಲಿಯಲ್ಲಿ ಮರ್ಡರ್ – ಫ್ಲೈಟ್‌ ಟಿಕೆಟ್ ಬುಕ್ ಮಾಡಿ ಸಿಕ್ಕಿಬಿದ್ದ ಆರೋಪಿ!

    ಜ.23ರಂದು ನಗರದ ಟ್ರಿನಿಟಿ ಸರ್ಕಲ್ ನಲ್ಲಿ ಸಿದ್ದರಾಮಯ್ಯ (Siddaramaiah), ಡಿ.ಕೆ ಶಿವಕುಮಾರ್ (DK Shivakumar) ಹಾಗೂ ಕಾಂಗ್ರೆಸ್ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಬೆಂಗಳೂರು ನಗರದ 300 ಕಡೆಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆ ನಡೆಸಲು ‘ಕೈ’ ಪಾಳಯ ನಿರ್ಧರಿಸಿದೆ. ಬೆಂಗಳೂರಿನಲ್ಲಿ (Bengaluru) ಒಟ್ಟು 200 ಸಿಗ್ನಲ್, 26 ಫ್ಲೈಓವರ್, 25 ಮೆಟ್ರೋ ಸ್ಟೆಷನ್ ಗಳಲ್ಲಿ ಪ್ರತಿಭಟನೆ ಏಕಕಾಲಕ್ಕೆ ನಡೆಯಲಿದೆ.

    ಈ ಕುರಿತು ಮಾತನಾಡಿದ ಶಾಸಕ ಎನ್.ಎ.ಹ್ಯಾರಿಸ್, ಭ್ರಷ್ಟಾಚಾರದ ಆರೋಪಗಳಿಗೆ ಬಿಜೆಪಿ ಈವರೆಗೆ ಉತ್ತರ ಕೊಡಲಾಗಿಲ್ಲ. ಹಾಗಾಗಿ ರಾಜ್ಯ ಸರ್ಕಾರದ ಭ್ರಷ್ಟಾಚಾರ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಮುಂದೆ ಇನ್ನಷ್ಟು ಹೋರಾಟ ಮಾಡ್ತೇವೆ. ಜೊತೆಗೆ `ಭ್ರಷ್ಟಾಚಾರ ನಿಲ್ಲಿಸಿ, ಬೆಂಗಳೂರು ಉಳಿಸಿ’ ಕಾರ್ಯಕ್ರಮ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ DNAಯಲ್ಲಿ ನಿವೃತ್ತಿ, ಪ್ರಾಮಾಣಿಕತೆ ಅನ್ನೋದೆ ಇಲ್ಲ: ಪ್ರಹ್ಲಾದ್ ಜೋಶಿ

    40 ಪರ್ಸೆಂಟ್ ಕಮಿಷನ್‌ಗೆ ಕೊನೆಯೇ ಇಲ್ವಾ? ಅನ್ನೋ ತರಹ ಆಗಿದೆ. ಯಾವ ಸಚಿವರೂ ಇದಕ್ಕೆ ಉತ್ತರ ಕೊಡ್ತಾ ಇಲ್ಲ. ಆರೋಪಕ್ಕೆ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಸುಮ್ನೆ ವಿರೋಧ ಪಕ್ಷವಾಗಿ ಕೂರುವುದಕ್ಕೆ ನಾವೂ ತಯಾರಿಲ್ಲ. ಪ್ರಧಾನಿ ಮೋದಿ ಕೂಡ ಇದುವರೆಗೆ 40 ಪರ್ಸೆಂಟ್ ಕಮಿಷನ್‌ಗೆ ಉತ್ತರ ಕೊಟ್ಟಿಲ್ಲ. ಪ್ರಧಾನಿ ಕಚೇರಿಯಿಂದಲೂ ಉತ್ತರ ಸಿಗುತ್ತಿಲ್ಲ. ಪಿಎಸ್‌ಐ ಸ್ಕ್ಯಾಮ್ ಏನು ಮಾಡಿದ್ರು? ಹರಿಶ್ಚಂದ್ರನ ಮೊಮ್ಮಕ್ಕಳ ತರಹ ಮಾತಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಿಂದ ಕಳೆದ 7-8 ತಿಂಗಳಿಂದ ಯಾವುದೇ ಮಾಸಾಶನ ಬರ್ತಾ ಇಲ್ಲ. ಅಂತಹದ್ದನ್ನೂ ಕೂಡ ನಿಲ್ಲಿಸಿದ್ದಾರೆ ಅಂದ್ರೆ ಸರ್ಕಾರದ ಬಳಿ ದುಡ್ಡಿಲ್ವಾ? ಇದನ್ನೆಲ್ಲಾ ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಕೆಂಪಣ್ಣ ಅರೆಸ್ಟ್

    ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಕೆಂಪಣ್ಣ ಅರೆಸ್ಟ್

    ಬೆಂಗಳೂರು: ಬಿಜೆಪಿ (BJP) ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ (40 Percent Commission) ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (ಕೆಂಪೇಗೌಡ) (Kempanna) ಅವರನ್ನು ಬೆಂಗಳೂರಿನ (Bengaluru) ವೈಯಾಲಿಕಾವಲ್ ಪೊಲೀಸರು (Police) ಬಂಧಿಸಿದ್ದಾರೆ.

    ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ಇತರ 18 ಮಂದಿ ಗುತ್ತಿಗೆದಾರರ ವಿರುದ್ಧ ಸಚಿವ ಮುನಿರತ್ನ (Munirathna) 50 ಕೋಟಿ ಮಾನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಸಂಬಂಧ ಎಫ್‌ಐಆರ್ (FIR) ದಾಖಲಾಗಿತ್ತು. ಡಿಸೆಂಬರ್ 23 ರಂದು ಕೆಂಪಣ್ಣನಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಈ ಸಂಬಂಧ ಯಾವುದೇ ಉತ್ತರ ನೀಡದೇ ಇರುವುದರಿಂದ ಇಂದು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರ ಸಂಘ, ಕೆಂಪಣ್ಣ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ: ಮುನಿರತ್ನ

    ಸಚಿವ ಮುನಿರತ್ನ ಈ ಹಿಂದೆಯೇ ನನ್ನ ವಿರುದ್ಧ ಮಾಡಿದ ಆರೋಪವು ಸೇರಿದಂತೆ 40 ಪರ್ಸೆಂಟ್‌ ಕಮಿಷನ್ ಆರೋಪಕ್ಕೆ ದಾಖಲೆ ಕೊಡಿ ಎಂದು ದಾವೆ ಹೂಡಿದ್ದೇನೆ. 50 ಕೋಟಿ ಮಾನನಷ್ಟ ಪ್ರಕರಣವನ್ನು 4 ತಿಂಗಳ ಒಳಗಡೆ ಇತ್ಯರ್ಥ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನೂ ಓದಿ; ಕ್ಷಮೆ ಕೇಳದ ಕೆಂಪಣ್ಣ ಸೇರಿ 18 ಮಂದಿ ಮೇಲೆ 50 ಕೋಟಿ ಮಾನನಷ್ಟ ಕೇಸ್‌, ಶೀಘ್ರವೇ ಎಫ್‌ಐಆರ್‌: ಮುನಿರತ್ನ

    ಕೆಂಪಣ್ಣ ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಿದ್ದಾರೆ. ಆಧಾರ ರಹಿತ ಆರೋಪ ಮಾಡಿದ್ದಕ್ಕೆ ನಾನು 7 ದಿನಗಳ ಒಳಗಡೆ ಕ್ಷಮೆ ಕೇಳುವಂತೆ ಸೂಚಿಸಿದ್ದೆ. ಆದರೆ ಅವರು ಕ್ಷಮೆ ಕೇಳದ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಚುನಾವಣೆ ನಡೆಯುವ ಮುನ್ನ ಇತ್ಯರ್ಥ ಆಗಬೇಕಾಗಿರುವುದರಿಂದ 4 ತಿಂಗಳ ಒಳಗಡೆ ಪ್ರಕರಣವನ್ನು ಮುಗಿಸುವಂತೆ ಸೆಕ್ಷನ್ 227 ಅನ್ವಯ ರಿಟ್ ಅರ್ಜಿ ಹಾಕುತ್ತಿದ್ದೇವೆ. ಪ್ರಕರಣದ ಆರೋಪಿಗಳು ಯಾವುದೇ ಆಸ್ತಿ ಪರಭಾರೆ ಮಾಡುವಂತಿಲ್ಲ. ಯಾವುದೇ ಇಲಾಖೆಯಲ್ಲಿ ಯಾವುದೇ ಕಾಮಗಾರಿ ಮಾಡಿದ್ದರೆ ಅದರ ಬಿಲ್ ಬಿಡುಗಡೆ ಆಗಬಾರದು. ಅವರ ಕುಟುಂಬದಲ್ಲಿ ಯಾವುದೇ ವಿಲ್ ಮಾಡುವಂತಿಲ್ಲ. ಎಲ್ಲದಕ್ಕೂ ತಡೆಯಾಜ್ಞೆ ತರಲಾಗಿದ್ದು, ಎಲ್ಲಾ 18 ಮಂದಿಗೂ ಇದು ಅನ್ವಯವಾಗಲಿದೆ ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • BJP ಸರ್ಕಾರವನ್ನು ಯಾರೂ ಪ್ರಶ್ನೆ ಮಾಡೋ ಹಾಗಿಲ್ಲ: ಸಿದ್ದರಾಮಯ್ಯ

    BJP ಸರ್ಕಾರವನ್ನು ಯಾರೂ ಪ್ರಶ್ನೆ ಮಾಡೋ ಹಾಗಿಲ್ಲ: ಸಿದ್ದರಾಮಯ್ಯ

    ಬಳ್ಳಾರಿ: ಸರ್ಕಾರ ತಪ್ಪು ಮಾಡಿದಾಗ ಅದನ್ನು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಆದರೆ ಈ ಬಿಜೆಪಿ ಸರ್ಕಾರವನ್ನು (BJP Government) ನಾವು ಯಾರೂ ಪ್ರಶ್ನೆ ಮಾಡುವಹಾಗಿಲ್ಲ. ಪ್ರಶ್ನೆ ಮಾಡಿದರೆ ನಮ್ಮ ಮೇಲೆ ಕೇಸ್ ಹಾಕ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅಸಮಾಧಾನ ವ್ಯಕ್ತಪಡಿಸಿದರು.

    ಭಾರತ್ ಜೋಡೋ ಯಾತ್ರೆ (Bharath Jodo Yatra) ಹಿನ್ನೆಲೆ ಬಳ್ಳಾರಿಯಲ್ಲಿಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇದೇ 15 ರಂದು ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿ (Rahul Gandhi) ನಿಮ್ಮೆಲ್ಲರನ್ನುದ್ದೇಶಿ ಮಾತನಾಡಲಿದ್ದಾರೆ ಎಂದು ಹೇಳಿದರು.

    ಈ ಸರ್ಕಾರ ನಮ್ಮ ಕಾರ್ಯಕರ್ತರು ನಾಯಕರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಕೇಸ್ (Criminal Case) ದಾಖಲಿಸುತ್ತಿದೆ, ನಾಗರಿಕರಿಗೆ ದೊಡ್ಡ ಹೊಡೆತ ನೀಡಿದೆ. ಸರ್ಕಾರ ತಪ್ಪು ಮಾಡಿದಾಗ ಅದನ್ನು ಪ್ರಶ್ನೆ ಮಾಡುವುದು ಪ್ರತಿ ನಾಗರಿಕರ ಹಕ್ಕು. ಆದರೆ ಈ ಸರ್ಕಾರವನ್ನು ನಾವು ಯಾರೂ ಪ್ರಶ್ನೆ ಮಾಡುವ ಹಾಗೆ ಇಲ್ಲ. ಮೋದಿ (Narendra Modi), ಅಮಿತ್ ಶಾ (Amit Shah), ಬೊಮ್ಮಾಯಿ (Basavaraj Bommai) ಅವರನ್ನ ನಾವು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತೆಗೆ ಬೆಂಕಿಯಿಟ್ಟ ಆರೋಪಿ ತಾಯಿ, ಸಹೋದರಿ

    ಇದು ಭ್ರಷ್ಟಾಚಾರ ಸರ್ಕಾರ, ಇವರು ತಮ್ಮ ಅಪ್ಪನ ದುಡ್ಡು ಹೊಡೀತಿಲ್ಲ. ಅದು ನಮ್ಮ ದುಡ್ಡು, ನಾಗರಿಕರ ದುಡ್ಡು ಲೂಟಿ ಮಾಡುತ್ತಿದ್ದಾರೆ. ಇದು 40 ಪರ್ಸೆಂಟ್ ಸರ್ಕಾರ (40 Percent Government), ಇದನ್ನ ನಾವು ಪ್ರಶ್ನೆ ಮಾಡಿದ್ರೆ ನಮ್ಮ ಮೇಲೆ ಕೇಸ್ ಹಾಕ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅತ್ತ ಭಾರತ್ ಜೋಡೋ ಪಾದಯಾತ್ರೆ- ಇತ್ತ ಕಾಂಗ್ರೆಸ್ ಚೋಡೋ ಯಾತ್ರೆ

    ಜಾತಿ ಮಧ್ಯೆ ಜಗಳ ಹಚ್ಚಿದೆ: ಬಿಜೆಪಿ (BJP) ಜಾತಿ-ಜಾತಿಗಳ ಮಧ್ಯೆ ಜಗಳ ಹಚ್ಚಿದೆ. ಸಮಾಜವನ್ನು ಒಡೆದು ಆಳುತ್ತಿದೆ. ಈ ಸರ್ಕಾರ ಬಂದ ಬಳಿಕ ಬೆಲೆ ಏರಿಕೆ ಮಿತಿಮೀರಿದೆ. ಬೆಲೆ ಏರಿಕೆ ಬಗ್ಗೆ ಒಂದು ಸಾರಿಯೂ ತುಟಿ ಬಿಚ್ಚಿಲ್ಲ. ಮೋದಿ ಒಬ್ಬ ಸುಳ್ಳುಗಾರ, ಅಚ್ಚೇ ದಿನ್ ಬರುತ್ತೆ ಅಂದ್ರು, ಈವರೆಗೂ ಬರಲೇ ಇಲ್ಲ. ರೈತರ (Farmers) ಆದಾಯ ದುಪ್ಪಟ್ಟು ಮಾಡ್ತೀನಿ ಅಂದಿದ್ದರು. ಆದರೆ ರೈತರ ಸಾವು, ಸಾಲ ಏರಿಕೆ ದುಪ್ಪಟ್ಟಾಯಿತೇ ಹೊರತು ಆದಾಯ ಮಾತ್ರ ದುಪ್ಪಟ್ಟು ಮಾಡಲೇ ಇಲ್ಲ ಎಂದು ಕಿಡಿಕಾರಿದರು.

    Live Tv
    [brid partner=56869869 player=32851 video=960834 autoplay=true]