Tag: 40% Commission

  • ಪರೀಕ್ಷೆ ಪಾಸ್ ಆಗ್ಬೇಕು ಅಂದ್ರೆ 35 ಮಾರ್ಕ್ಸ್ ಪಡಿಬೇಕು – ಬಿಜೆಪಿ ಸರ್ಕಾರದಲ್ಲಿ ಬಿಲ್ ಪಾಸ್ ಆಗ್ಬೇಕು ಅಂದ್ರೆ 40% ಕೊಡಬೇಕು: ಕಾಂಗ್ರೆಸ್

    ಪರೀಕ್ಷೆ ಪಾಸ್ ಆಗ್ಬೇಕು ಅಂದ್ರೆ 35 ಮಾರ್ಕ್ಸ್ ಪಡಿಬೇಕು – ಬಿಜೆಪಿ ಸರ್ಕಾರದಲ್ಲಿ ಬಿಲ್ ಪಾಸ್ ಆಗ್ಬೇಕು ಅಂದ್ರೆ 40% ಕೊಡಬೇಕು: ಕಾಂಗ್ರೆಸ್

    ಬೆಂಗಳೂರು: ಪೇಸಿಎಂ (PayCM) ಪರೀಕ್ಷೆ (Exam) ಪಾಸ್ ಆಗ್ಬೇಕು ಅಂದ್ರೆ 35 ಮಾರ್ಕ್ಸ್ ಪಡೆಯಬೇಕು. ಬಿಜೆಪಿ (BJP) ಸರ್ಕಾರದಲ್ಲಿ ಬಿಲ್ ಪಾಸ್ ಆಗ್ಬೇಕು ಅಂದ್ರೆ 40% (Commission) ಕೊಡಲೇಬೇಕು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

    ಟ್ವೀಟ್‍ನಲ್ಲಿ ಏನಿದೆ?
    40% ಕಮಿಷನ್‌ಗಾಗಿ ಕಿರುಕುಳ ನೀಡಿ ಕೊಲೆ ಮಾಡಿದ ಸಂತೋಷ್ ಪಾಟೀಲ್ ಕೂಡ ಲಿಂಗಾಯತ. ಲಿಂಗಾಯತನೊಬ್ಬನ ಜೀವ ತೆಗೆದ ಬಿಜೆಪಿ ಸರ್ಕಾರ ಲಿಂಗಾಯತ ವಿರೋಧಿಯಲ್ಲವೇ? ಕಮಿಷನ್ ಕಿರುಕುಳದ ಸಂತ್ರಸ್ತರಲ್ಲಿ ಲಿಂಗಾಯತ ಗುತ್ತಿಗೆದಾರರು ಇಲ್ಲವೇ? ಬಿಜೆಪಿ ಲಿಂಗಾಯತ ವಿರೋಧಿ ಮಾತ್ರವಲ್ಲ, ಇಡೀ ಮನುಕುಲದ ವಿರೋಧಿ. ಜಾತಿ ಶೀಲ್ಡ್ ಹಿಡಿದು ಕಮಿಷನ್ ಭ್ರಷ್ಟಾಚಾರವನ್ನು ರಕ್ಷಿಸಲು ಬಿಜೆಪಿ ವಿಫಲ ಯತ್ನ ನಡೆಸುತ್ತಿದೆ. ಮಠಗಳ ಅನುದಾನದಲ್ಲೂ 30% ಕಮಿಷನ್ ದೋಚಲಾಗಿದೆ ಎಂದು ಲಿಂಗಾಯತ ಸ್ವಾಮಿಗಳೇ ಆರೋಪಿಸಿದ್ದರು. ಇದು ಲಿಂಗಾಯತರಿಗೆ ಮಾಡಿದ ಅವಮಾನವಲ್ಲವೇ? ಇದನ್ನೂ ಓದಿ: ಶಾಲೆ ಕ್ಲೋಸ್ ಮಾಡಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ: ಬಿ.ಸಿ ನಾಗೇಶ್

    40% ಕಮಿಷನ್‌ಗಾಗಿ ಸರ್ಕಾರದ್ದು “ಜಾತ್ಯತೀತ ಭ್ರಷ್ಟಾಚಾರ” ಇದರಲ್ಲಿ ಲಿಂಗಾಯತರೂ ಸಂತ್ರಸ್ತರೇ. ಪೇಸಿಎಂ ಪರೀಕ್ಷೆ ಪಾಸ್ ಆಗ್ಬೇಕು ಅಂದ್ರೆ 35 ಮಾರ್ಕ್ಸ್ ಪಡೆಯಬೇಕು! ಬಿಜೆಪಿ ಸರ್ಕಾರದಲ್ಲಿ ಬಿಲ್ ಪಾಸ್ ಆಗ್ಬೇಕು ಅಂದ್ರೆ 40% ಕೊಡಲೇಬೇಕು! ನಿನ್ನೆ ಬಿಜೆಪಿಯವರು ಕಳಿಸಿದ ಬಸ್ಸು “ಡಕೋಟಾ ಇಂಜಿನ್ ಸರ್ಕಾರ, ಬ್ರೇಕ್ ಇಲ್ಲದ ಭ್ರಷ್ಟಾಚಾರ” ಎಂದು ರೋಧಿಸುತ್ತಿತ್ತು! ಕರ್ನಾಟಕ ಈಗ ಪೇಸಿಎಂ ಮುಕ್ತ ರಾಜ್ಯವಾಗಬೇಕಿದೆ ಎಂದು ಕಾಂಗ್ರೆಸ್‌ ಆಶಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ಕರಾಟೆ ಕ್ಲಾಸ್‌ನಲ್ಲಿ ನಡೀತಿತ್ತು PFI ಉಗ್ರ ಚಟುವಟಿಕೆಯ ರಣತಂತ್ರ – NIA ದಾಳಿಗೂ ಅದೇ ಕಾರಣ

    Live Tv
    [brid partner=56869869 player=32851 video=960834 autoplay=true]

  • ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲೂ ಕಮಿಷನ್ ದಂಧೆ

    ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲೂ ಕಮಿಷನ್ ದಂಧೆ

    ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲೂ ಕಮಿಷನ್ ದಂಧೆಯ ಆರೋಪ ಕೇಳಿ ಬಂದಿದೆ. 40% ಮೀರಿ ದಂಧೆ ನಡೆಯುತ್ತಿದೆ ಎಂದು ಕೆ. ಎಸ್ ಆ್ಯಂಡ್ ಡಿಎಲ್ ಎಂಪ್ಲಾಯಿಸ್ ಯೂನಿಯನ್ ಗಂಭೀರ ಆರೋಪ ಮಾಡಿದೆ.

    ಶ್ರೀಗಂಧ ಎಣ್ಣೆ ಖರೀದಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣದಲ್ಲಿ ಗೋಲ್ ಮಾಲ್ ನಡೆದಿದ್ದು, ಬ್ಲಾಕ್ ಲಿಸ್ಟ್ ನಲ್ಲಿರುವ ಕಂಪನಿಗಳ ಜೊತೆ ಕೋಟಿ ಕೋಟಿ ವ್ಯವಹಾರ ಆಗಿದೆ. ಕೋಟಿಗಟ್ಟಲೇ ಅಕ್ರಮ, ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕೆ. ಎಸ್ ಆ್ಯಂಡ್ ಡಿಎಲ್ ಎಂಪ್ಲಾಯಿಸ್ ಯೂನಿಯನ್ ದಾಖಲೆ ಬಿಡುಗಡೆ ಮಾಡಿದೆ.

    ಈ ಭ್ರಷ್ಟಾಚಾರಕ್ಕೆಲ್ಲ ಕೆ.ಎಸ್ ಆ್ಯಂಡ್ ಡಿಎಲ್ ಎಂಡಿ ಮಹೇಶ್ ಶಿರೂರ ಕಾರಣ. ಕಳೆದ ಎರಡು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಶ್ರೀಗಂಧ ಎಣ್ಣೆ ಮಾರಾಟ ಮಾಡಿದ್ದಾರೆ. ಬ್ಲಾಕ್ ಲಿಸ್ಟ್‍ನಲ್ಲಿರುವ ಕಂಪನಿಗಳ ಜೊತೆಗೂ ಶಿರೂರ ವ್ಯವಹಾರ ಮಾಡಿದ್ದಾರೆಂದು ಆರೋಪಿಸಿದ್ದಾರೆ.

    ಪ್ರತಿಮೆ ನಿರ್ಮಾಣದಲ್ಲೂ ಶೇ.40 ಕ್ಕಿಂತ ಹೆಚ್ಚು ಕಮಿಷನ್ ಪಡೆಯುತ್ತಿದ್ದಾರೆ. 1 ಕೆಜಿ ಶ್ರೀಗಂಧಕ್ಕೆ 1 ಲಕ್ಷ ಹಣ ಹೆಚ್ಚುವರಿ ಕೊಟ್ಟು 2 ಸಾವಿರ ಕೆಜಿ ಶ್ರೀಗಂಧ ಎಣ್ಣೆ ಖರೀದಿ ಮಾಡಲಾಗುತ್ತಿದೆ. ಕಾರ್ಖಾನೆಯಲ್ಲಿ ನಡೆದ ಬೃಹತ್ ಹಗರಣವನ್ನು ಎಸಿಬಿಗೆ ವಹಿಸುವಂತೆ ಯೂನಿಯನ್ ಆಗ್ರಹಿಸಿದೆ.

    ಯಾವೇಲ್ಲಾ ಹಗರಣಗಳು ನಡೆದಿದೆ?
    * ಕೆಎಸ್ ಮತ್ತು ಡಿಎಲ್ ಶ್ರೀಗಂಧ ಎಣ್ಣೆಯನ್ನು ಆಸ್ಟ್ರೇಲಿಯಾದಿಂದ ಮಧ್ಯಮ ವ್ಯಕ್ತಿಗಳಿಂದ ಖರೀದಿಸಲಾಗುತ್ತಿದೆ.
    * ಆಸ್ಟ್ರೇಲಿಯಾದಿಂದ ಪ್ರತಿ ಕೆಜಿಗೆ 2 ಲಕ್ಷ 49 ಸಾವಿರ 899 ರೂ. ಗಳಿಗೆ ಅದಿತಿ ಇಂಟರ್ ನ್ಯಾಷನಲ್, ಮುಂಬೈ ಹಾಗೂ ಕರ್ನಾಟಕ, ಬೆಂಗಳೂರಿನ ಆರೋಮಾ ಖರೀದಿಗೆ 100% ಕಮಿಷನ್ ನಡೆದಿದೆ.
    * ಶಿರೂರ ಅಧಿಕಾರಕ್ಕೆ ಬಂದ ಬಳಿಕ, ಇವರೆಗೆ 2 ಸಾವಿರ ಕೆಜಿ ಶ್ರೀಗಂಧ ಎಣ್ಣೆ ಖರೀದಿಯಾಗಿದೆ.
    * ಕೃಷ್ಣರಾಜೇಂದ್ರ ಒಡೆಯರ್‍ರ ಪ್ರತಿಮೆಯನ್ನ 12 ಲಕ್ಷ ಹಣದಲ್ಲಿ ನಿರ್ಮಾಣಕ್ಕೆ ಅಸ್ತು. ಆದರೆ 13 ಲಕ್ಷ ಕಿಕ್ ಬ್ಯಾಕ್ ಪಡೆಯಲಾಗಿದೆ.
    * ಕೆಎಸ್ ಮತ್ತು ಡಿಎಲ್‍ನಿಂದ ಪ್ರತಿಮೆ ನಿರ್ಮಾಣ ಮಾಡಲು ಟೆಂಡರ್ ಒಪ್ಪಿಕೊಂಡಿತ್ತು.
    * ಬ್ಲಾಕ್ ಲಿಸ್ಟ್‍ನಲ್ಲಿರುವ ಬೆಂಗಳೂರಿನ ಆರೋಮಾ, ಕರ್ನಾಟಕ ಕೆಮಿಕಲ್ ಇಂಡಸ್ಟ್ರಿ ಕಂಪನಿಯಿಂದಲೇ ಶ್ರೀಗಂಧದ ಎಣ್ಣೆಯನ್ನು ಅಕ್ರಮವಾಗಿ ಕಮಿಷನ್ ಮೂಲಕ ಖರೀದಿ ಮಾಡಲಾಗಿದೆ.
    * ಕಾರ್ಖಾನೆಗೆ ಬೇಕಿರುವ ನ್ಯೂಡಲ್ಸ್, ಶ್ರೀಗಂಧ ಎಣ್ಣೆಯಲ್ಲಿ 250 ಕೋಟಿ ಅವ್ಯವಹಾರವಾಗಿದೆ.
    * ಅನಿವಾರ್ಯ ಇಲ್ಲದಿದ್ದರೂ ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ.

    ಬೆಂಗಳೂರು, 

  • ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸಲಿ ಮಾಡೋದು ರಾಕ್ಷಸ ಪ್ರವೃತ್ತಿ: ಸಿದ್ದರಾಮಯ್ಯ

    ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸಲಿ ಮಾಡೋದು ರಾಕ್ಷಸ ಪ್ರವೃತ್ತಿ: ಸಿದ್ದರಾಮಯ್ಯ

    ಬೆಳಗಾವಿ: ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸಲಿ ಮಾಡುವುದು ರಾಕ್ಷಸ ಪ್ರವೃತ್ತಿ ಆಗಿದ್ದು, ಇದೇ ರೀತಿ ಎಲ್ಲಾ ಇಲಾಖೆಯಲ್ಲೂ ಕಮಿಷನ್ ಆರೋಪ ನಡೆಯುತ್ತಿದೆ. ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದು ಅನೇಕ ಆರೋಪ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಅರುಣ್ ಸಿಂಗ್ ಸಮರ್ಥರಾಗಿದ್ದಾರೆ. ಸಂತೋಷ್ ಪಾಟೀಲ್ ಬಿಜೆಪಿಗೆ ಆಸ್ತಿಯಾಗಿದ್ದರು. ನಾವ್ಯಾರು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಇದು ವಾಸ್ತವ ಎಂದು ಹೇಳಿದರು. ಇದನ್ನೂ ಓದಿ: ಮಗನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಾಯಿ

    ಗ್ರಾಪಂ ಅಧ್ಯಕ್ಷ ಹೇಳಿದ್ದು ಸತ್ಯ. ಈಶ್ವರಪ್ಪ ಹೇಳದೇ ಯಾರು ಕೆಲಸ ಮಾಡಲು ಆಗಲ್ಲ. ಸಚಿವರ ಸೂಚನೆ ಮೇಲೆ ಕೆಲಸ ಮಾಡಿದ್ದಾರೆ. ವರ್ಕ್ ಆರ್ಡರ್ ಕೊಟ್ಟಿಲ್ಲ. ಸಾಲ ಸೋಲ ಮಾಡಿ ಸಂತೋಷ್ ಕೆಲಸ ಮಾಡಿದ್ದಾನೆ. ಪತ್ನಿಯ ಒಡವೆಯನ್ನು ಅಡಯಿಟ್ಟು ಸಾಲ ಮಾಡಿದ್ದಾರೆ. ಈಶ್ವರಪ್ಪ ಪಿಎಗಳು ಕಮಿಷನ್ ಕೇಳಿದ್ದಾರೆ. ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸೂಲಿ ಮಾಡುವುದು ರಾಕ್ಷಸ ಪ್ರವೃತ್ತಿಯಾಗಿದೆ. ಎಲ್ಲಾ ಇಲಾಖೆಯಲ್ಲಿ ಕಮಿಷನ್ ಆರೋಪ ನಡೆಯುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಗ್ಯಾಸ್ ಸಿಲಿಂಡರ್‌ನಲ್ಲಿ 50 ಲೀಟರ್ ಮದ್ಯ ಸಾಗಿಸುತ್ತಿದ್ದ ಚಾಲಾಕಿ ಬಂಧನ

    ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದು ಅನೇಕ ಆರೋಪ ಮಾಡಿದ್ದಾರೆ. ಪ್ರಧಾನಿ ಸೇರಿ ಅನೇಕ ನಾಯಕರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಕ್ರಮ ವಹಿಸಿ ಎಂದು ಸಿಎಂಗೆ ಹೇಳಿದ್ದಾರೆ. ನಾವು ಇದನ್ನು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೇವು. ನಮಗೆ ಅವಕಾಶ ಸಿಗಲಿಲ್ಲ. ಬೆತ್ತಲೆ ಆಗುತ್ತೇವೆ ಎನ್ನುವ ಭಯ ಬಿಜೆಪಿಗೆ ಇದೆ. ಈಶ್ವರಪ್ಪನ ಭಂಡ, ಮಾನ ಮರ್ಯಾದೆ ಇಲ್ಲದೇ ಇರುವವರಿಗೆ ಏನು ಹೇಳೊಕೆ ಆಗಲ್ಲ ಎಂದು ಕಿಡಿಕಾರಿದರು.

  • 40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ

    40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ

    ಹುಬ್ಬಳ್ಳಿ: ಗ್ರಾಮೀಣಾಭಿವೃದ್ಧಿ ಇಲಾಖೆ 40% ಕಮಿಷನ್ ಇಲಾಖೆಯಿದ್ದ ಹಾಗೆ. ಕಾಮಗಾರಿಗಳ ಬಿಲ್ ಆಗಬೇಕು ಅಂದ್ರೆ 40% ಕಮಿಷನ್ ಕೊಡಲೇ ಬೇಕು ಅಂತ, ಸ್ವತಃ ಬಿಜೆಪಿ ಕಾರ್ಯಕರ್ತ ಮತ್ತು ಪ್ರಥಮ ದರ್ಜೆ ಗುತ್ತಿದಾರರೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದು, ಸಚಿವ ಕೆಎಸ್ ಈಶ್ವರಪ್ಪರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

    MODi

    ಬಿಜೆಪಿ ಕಾರ್ಯಕರ್ತ ಮತ್ತು ಪ್ರಥಮ ದರ್ಜೆ ಗುತ್ತಿದಾರ ಸಂತೋಷ್, ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಅಭಿವೃದ್ಧಿಗಾಗಿ, 4 ಕೋಟಿ ವೆಚ್ಚದಲ್ಲಿ ಸುಮಾರು 108 ವಿವಿಧ ಕಾಮಗಾರಿಗಳನ್ನು ಈಶ್ವರಪ್ಪ ಮಂಜೂರು ಮಾಡಿದ್ದರು. ಸದ್ಯ ಎಲ್ಲಾ ಕಾಮಗಾರಿಗಳು ಮುಕ್ತಾಯಗೊಂಡು ಒಂದು ವರ್ಷ ಕಳೆದರೂ ಗುತ್ತಿಗೆದಾರ ಸಂತೋಷ ಅವರಿಗೆ ಇನ್ನೂ ಒಂದು ರೂಪಾಯಿ ಸಹ ಬಂದಿಲ್ಲ. ಇದನ್ನೂ ಓದಿ: ಪ್ರಶಾಂತ್ ಸಂಬರಗಿ ಸಾರಥ್ಯದಲ್ಲಿ ಸಿನಿಮಾವಾಗ್ತಿದೆ ‘ಆಗಸ್ಟ್ 15’ರ ಸ್ಟೋರಿ

    ಹಣ ಬಿಡುಗಡೆ ಮಾಡಲು 40% ಕಮಿಷನ್ ನೀಡುವಂತೆ ಈಶ್ವರಪ್ಪ ಆಪ್ತರು ಮತ್ತು ಇಲಾಖೆ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ. ಇದರಿಂದಾಗಿ ಬೇಸತ್ತು ಹಣ ಬಿಡುಗಡೆ ಮಾಡಲು ಸೂಚನೆ ನೀಡುವಂತೆ ಪ್ರಧಾನಿ ಮೋದಿಗೆ ಗುತ್ತಿಗೆದಾರ ಸಂತೋಷ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಟಿಪ್ಪು ಇತಿಹಾಸ ತಾಲಿಬಾನ್‌, ಐಸಿಸ್‌ ಮತಾಂಧರಷ್ಟೇ ಘೋರ: ಬಿಜೆಪಿ ವಾಗ್ದಾಳಿ

  • ವಿಧಾನ ಪರಿಷತ್ ಕಲಾಪದಲ್ಲಿ 40% ಕಮಿಷನ್ ಜಟಾಪಟಿ

    ವಿಧಾನ ಪರಿಷತ್ ಕಲಾಪದಲ್ಲಿ 40% ಕಮಿಷನ್ ಜಟಾಪಟಿ

    ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‍ನಲ್ಲಿಂದು ಗುತ್ತಿಗೆದಾರರಿಂದ ಶೇ.40ರ ಕಮೀಷನ್ ಪಡೆಯುತ್ತಿರುವ ಆರೋಪ ಕುರಿತ ವಿಚಾರವಾಗಿ ಇವತ್ತು ಗದ್ದಲ ಗಲಾಟೆಗೆ ಕಾರಣವಾಯ್ತು.

    ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ಗುತ್ತಿಗೆದಾರರಿಂದ 40 ಪಸೆರ್ಂಟ್ ಕಮೀಷನ್ ಪಡೆಯುವುದು ಇನ್ನು ನಿಂತಿಲ್ಲ ಎನ್ನುವ ಕುರಿತು ಗುತ್ತಿಗೆದಾರರ ಸಂಘ ಮಾಡಿರುವ ಆರೋಪದ ಕುರಿತು ಮಾಧ್ಯಮಗಳ ವರದಿ ಉಲ್ಲೇಖಿಸಿ ಈ ಬಗ್ಗೆ ತನಿಖೆ ಆಗಬೇಕು ಎಂದು ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಒತ್ತಾಯಿಸಿದರು. ಇದನ್ನೂ ಓದಿ: 5.21 ಲಕ್ಷ ಮನೆ ಉದ್ಘಾಟನೆ, ಬಡವರ ಸಬಲೀಕರಣಕ್ಕಾಗಿ ಬಿಜೆಪಿ ಕೆಲಸ: ಮೋದಿ

    ಸರ್ಕಾರದ ಪರ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ, ನಿನ್ನೆ ಸದನ ಮುಗಿದು ಇವತ್ತು ಸದನ ಶುರುವಾಗುವ ಮೊದಲು ಆದ ಘಟನೆಗಳ ಬಗ್ಗೆ ಮಾತ್ರ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಬೇಕು. ಆದರೆ ಮಾಧ್ಯಮಗಳ ವರದಿ ಆಧರಿಸಿ ಆರೋಪ ಮಾಡುತ್ತಿದ್ದಾರೆ. ಯಾವ ಸಚಿವರು, ಶಾಸಕರು ಗುತ್ತಿಗೆದಾರರಿಂದ ಕಮೀಷನ್ ಪಡೆದಿದ್ದಾರೆ ಎಂದು ನಿಖರವಾಗಿ ಹೇಳಬೇಕು. ಪತ್ರಿಕೆಗಳಲ್ಲಿ ಬಂದಿದ್ದನ್ನೆಲ್ಲಾ ಇಲ್ಲಿ ತಂದು ಹೇಳುವಂತಿಲ್ಲ ಅಂತ ವಿರೋಧ ಮಾಡಿದರು.

    ಇಂತಹ ವಿಷಯ ಶೂನ್ಯವೇಳೆಯಲ್ಲಿ ತರಬಾರದು. ರಾಥೋಡ್‍ನನ್ನ ಬಳಿ 50 ಸಾವಿರ ಕೇಳಿದರು ಅಂತಾ ಪತ್ರಿಕೆಗೆ ನಾನು ಹೇಳಿದರೆ ಅದನ್ನೂ ಇಲ್ಲಿ ಚರ್ಚೆಗೆ ಅವಕಾಶ ನೀಡಲಾಗುತ್ತದೆಯಾ? ಎಂದು ಕಾಂಗ್ರೆಸ್ ಪ್ರಸ್ತಾವನೆಯನ್ನೇ ತಳ್ಳಿಹಾಕಿದರು.

    ಈ ವೇಳೆ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ, ಕಮೀಷನ್ ಪಡೆಯುವುದು ನಡೆದಿಲ್ಲ ಎಂದರೆ ಇಲ್ಲ ಎನ್ನಬೇಕು. ಚರ್ಚೆಗೆ ತರುವುದು ನಮ್ಮ ಕರ್ತವ್ಯ ಎಂದು ಕಾಂಗ್ರೆಸ್ ಪ್ರಸ್ತಾಪವನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್‌

    ಈ ವೇಳೆ ರಾಥೋಡ್ ಮಾತನಾಡಿ, ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ ಮಾತನಾಡಲು ಅವಕಾಶ ನೀಡಿ ಎಂದು ಬೇಡಿಕೆ ಇಟ್ಟರು. ಚರ್ಚೆಗೆ ಶೂನ್ಯವೇಳೆಯಲ್ಲಿ ಅವಕಾಶವಿಲ್ಲ ಎಂದು ಸಭಾಪತಿ ಅವಕಾಶ ನಿರಾಕರಿಸಿದರು.

    ಈ ವೇಳೆ ಕೆಲಕಾಲ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಮಧ್ಯಪ್ರವೇಶ ಮಾಡಿ ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ ಎಂದು ತಿಳಿಸಿ ಪರಿಸ್ಥಿತಿ ನಿಯಂತ್ರಣ ಮಾಡಿದರು.