ಚಾಮರಾಜನಗರ: ಕಾಮಗಾರಿಗಳಲ್ಲಿ 40 ಪರ್ಸೆಂಟ್ ಕಮಿಷನ್ (40 Percent Commission)ಪಡೆಯುತ್ತಿರುವುದು ಸತ್ಯ ಎಂದು ಕರ್ನಾಟಕ ಎಸ್ಸಿ-ಎಸ್ಟಿ (SC-ST) ಗುತ್ತಿಗೆದಾರರ ಸಂಘ ಗಂಭೀರ ಆರೋಪ ಮಾಡಿದೆ.
50 ಲಕ್ಷ ರೂ. ವರೆಗಿನ ಟೆಂಡರ್‌ಗಳಲ್ಲಿ (Tender) ಮೀಸಲಾತಿ ಉಲ್ಲಂಘನೆ ಮಾಡುವ ಮೂಲಕ 2017ರ ಗುತ್ತಿಗೆ ಮೀಸಲಾತಿ ಕಾಯ್ದೆಯನ್ನು ಸಹ ರಾಜ್ಯ ಬಿಜೆಪಿ ಸರ್ಕಾರ ದುರ್ಬಲಗೊಳಿಸುತ್ತಿದೆ. ತುಂಡು ಗುತ್ತಿಗೆಗಳನ್ನು ಒಟ್ಟಾಗಿ ಸೇರಿಸಿ ದೊಡ್ಡಮೊತ್ತದ ಪ್ಯಾಕೇಜ್ ಟೆಂಡರ್ ಕರೆದು ಎಸ್ಸಿ-ಎಸ್ಟಿ ಗುತ್ತಿಗೆದಾರರು ಟೆಂಡರ್ ಹಾಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ: ಆರಗ ಜ್ಞಾನೇಂದ್ರ
ನಿಯಮ ಉಲ್ಲಂಘಿಸಿ KRIDLಗೆ 2 ಕೋಟಿವರೆಗಿನ ಕಾಮಗಾರಿಗಳನ್ನು ನೇರಗುತ್ತಿಗೆ ನೀಡಲಾಗುತ್ತಿದೆ. ಸಕಾಲಕ್ಕೆ ಸುತ್ತೋಲೆ ಹೊರಡಿಸಿ ಗುತ್ತಿಗೆ ನೀಡುತ್ತಿದ್ದ ವಿಧಾನವನ್ನೇ ಬದಲಾಯಿಸಿ ಅಕ್ರಮಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹಾಸನ: ಇಂದು ಯಾವುದೇ ಸರ್ಕಾರಿ ಇಲಾಖೆಯ ಕಚೇರಿಗಳಿಗೆ ಹೋದರೂ ಲಂಚವಿಲ್ಲದೇ ಕೆಲಸ ನಡೆಯೋದಿಲ್ಲ. ಹೀಗಿದ್ದೂ ಪ್ರಧಾನಿ ನರೇಂದ್ರ ಮೋದಿ ಅವರೇ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಅರಸೀಕೆರೆ ತಾಲ್ಲೂಕಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರೇ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ. ಕೆಂಪಣ್ಣ ಅವರು ಪತ್ರ ಬರೆದು ಒಂದು ವರ್ಷ ಆಯ್ತು. ಇವತ್ತಿನವರೆಗೂ ಪ್ರಧಾನಿ ಕ್ರಮ ತೆಗೆದುಕೊಂಡಿಲ್ಲ. ಈ ಹಿಂದೆಯೂ ನಾ ಕಾವೂಂಗ್, ನಾ ಕಾನೇದೊಂಗಾ ಅಂತ ಪ್ರಧಾನಮಂತ್ರಿ ಹೇಳಿದ್ರು. ಅವರ ಹೇಳಿಕೆಯಂತೆ ಏನೂ ಕ್ರಮ ತೆಗೆದುಕೊಂಡಿಲ್ಲ. ಕರ್ನಾಟಕದಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ. ತಹಸೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ಪಿಡಬ್ಲ್ಯೂಡಿ ಇಲಾಖೆ, ನೀರಾವರಿ ಇಲಾಖೆ ಯಾವ ಸರ್ಕಾರಿ ಕಚೇರಿಗಳಿಗೆ ಹೋದರೂ ಭ್ರಷ್ಟಾಚಾರವಿಲ್ಲದೇ ಏನೂ ಕೆಲಸ ನಡೆಯುವುದಿಲ್ಲ ಎಂದು ಆರೋಪಿಸಿದ್ದಾರೆ.
ಭ್ರಷ್ಟಾಚಾರ ಮಾಡಿರೋರು ಲಂಚ ಕೊಟ್ಟಿದ್ದಕ್ಕೆಲ್ಲಾ ರಶೀದಿ ಕೊಡ್ತಾರಾ? ತನಿಖೆ ಮಾಡಿಸಿದರೆ ಗೊತ್ತಾಗುತ್ತದೆ. ಕೆಂಪಣ್ಣ ನ್ಯಾಯಾಂಗ ತನಿಖೆ ಮಾಡಿದರೆ ದಾಖಲೆ ಕೊಡ್ತೀವಿ ಅಂದಿದ್ದಾರೆ. ನಮ್ಮ ಆರೋಪ ಸಾಬೀತಾಗದೇ ಇದ್ದರೆ ನಮಗೆ ಏನು ಬೇಕಾದರೂ ಶಿಕ್ಷೆ ಕೊಡಿ ಎಂದು ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು. ನೀವು ಪ್ರಾಮಾಣಿಕರಾಗಿದ್ದರೆ ತನಿಖೆ ಮಾಡಿಸೋಕೆ ಭಯ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಕೆಂಪಣ್ಣ ಕಾಂಗ್ರೆಸ್ಸೋ, ಬಿಜೆಪಿಯೊ ನಂಗೆ ಗೊತ್ತಿಲ್ಲ. ಪ್ರಧಾನಿಗೆ ಪತ್ರ ಬರೆದ ಒಂದು ವರ್ಷದ ನಂತರ ಅವರು ನನ್ನನ್ನು ಭೇಟಿಯಾಗಿದ್ದಾರೆ. ಸಂಘದ 25 ಪದಾಧಿಕಾರಿಗಳು ಪಕ್ಷಾತೀತವಾಗಿ ಬಂದು ನನ್ನ ಭೇಟಿಯಾಗಿದ್ದಾರೆ. ಅವರ ಭೇಟಿ ಬಳಿಕ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡೋಕೆ ಹೇಳಿದ್ದರು ಅಷ್ಟೇ ಹೊರತಾಗಿ ಬೇರೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯಿಂದ ಜನೋತ್ಸವ ಕಾರ್ಯಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಜನೋತ್ಸವ ಅಲ್ಲ, ಭ್ರಷ್ಟ ಪ್ಲಸ್ ಉತ್ಸವ ಭ್ರಷ್ಟೋತ್ಸವ. ರೂಪ್ಸಾದವರು ಲಂಚ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ. ಕೆಂಪಣ್ಣ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದು ಸೆಲೆಕ್ಷನ್ ಕಮಿಟಿ ಅಧ್ಯಕ್ಷ ಎಡಿಜಿಪಿ ಜೈಲಿಗೆ ಹೋಗಿದ್ದಾರೆ. ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಲವರು ಅರೆಸ್ಟ್ ಆಗಿದ್ದಾರೆ. ಬೆಂಕಿಯಿಲ್ಲದೆ ಹೊಗೆ ಬರುತ್ತಾ? `ದಿಸ್ ಗವರ್ನಮೆಂಟ್ ಈಸ್ ಎ ಮೋಸ್ಟ್ ಕರಪ್ಟ್ ಗೌರ್ನಮೆಂಟ್’. ಈಗ ವರ್ಗಾವಣೆಗೂ ದುಡ್ಡು ತೆಗೆದುಕೊಳ್ಳೋಕೆ ಶುರು ಮಾಡಿದ್ದಾರೆ ಎಂದು ಸಾಲು-ಸಾಲು ಹಗರಣಗಳನ್ನು ಉದಾಹರಣೆ ನೀಡಿದ್ದಾರೆ.
ಅರವಿಂದ ಲಿಂಬಾವಳಿ ಜನಪ್ರತಿನಿಧಿಯಾಗಲು ನಾಲಾಯಕ್:
ಅಹವಾಲು ಹೇಳಲು ಬಂದ ಮಹಿಳೆ ಜೊತೆ ದುರ್ವರ್ತನೆ ತೋರಿದ ಅರವಿಂದ ಲಿಂಬಾವಳಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದು, ಲಿಂಬಾವಳಿ ಜನಪ್ರತಿನಿಧಿಯಾಗಲು ನಾಲಾಯಕ್. ಆಯಮ್ಮ ಏನು ಹೇಳ್ತಾರೆ ಕೇಳಬೇಕಿತ್ತು. ಅವರು ರಾಜಕಾಲುವೆ ಒತ್ತುವರಿ ಮಾಡಿದ್ದರೆ ಕ್ರಮ ತಗೊಳ್ಳಿ. ನೀವೊಬ್ಬ ಜನಪ್ರತಿನಿಧಿಯಾಗಿ ಸಮಸ್ಯೆ ಕೇಳೋದು ನಿಮ್ಮ ಕರ್ತವ್ಯ ಅಲ್ಲವೇ? ಯಾರೇ ಆಗಲಿ ಕಷ್ಟ-ಸುಖ ಹೇಳಿಕೊಳ್ಳಲು ಬಂದಾಗ ಕೆಟ್ಟದಾಗಿ ಬೈಯ್ದು ಬಿಡೋದಾ? ನಾವೇನು ಆಯಮ್ಮನಿಗೆ ರೇಪ್ ಮಾಡಿದಿವಾ ಅಂದರೆ ಏನರ್ಥ ಹೇಳಿ ನೋಡೋಣ ಎಂದು ಪ್ರಶ್ನಿಸಿದ್ದಾರೆ.
ಆಯಮ್ಮ ಸುಳ್ಳು ಹೇಳುತ್ತಿದ್ದಾರೆ, ಅಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿದ್ದಾರೆ ಅಂತಲೇ ಅಂದುಕೊಳ್ಳೋಣ. ಅವರು ಹೇಳೋದನ್ನು ಕೇಳೋಕೆ ಏನು ಕಷ್ಟ. ತಾಳ್ಮೆಯಿಂದ ಅವರ ಕಷ್ಟ-ಸುಖ ಕೇಳಬೇಕು ಅಲ್ಲವಾ? ಅದು ಬಿಟ್ಟು ಮೈ ಮೇಲೆ ಬಿದ್ದರೆ ಹೇಗೆ? ಅವರು ಎಂಎಲ್‌ಎ ಆಗಲು ಲಾಯಕ್ಕಾ, ನಾಲಾಯಕ್ಕ ನೀವೆ ಹೇಳಿ ವಾಗ್ದಾಳಿ ನಡೆಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: 40 ಪರ್ಸೆಂಟ್ ಟೆಂಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಾರ್ಯಾಲಯದಿಂದ ವರದಿ ಕೇಳುವುದರಲ್ಲಿ ಏನಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನವದೆಹಲಿಯಲ್ಲಿ ಈ ಕುರಿತು ಮಾತನಾಡಿದ ಡಿಕೆಶಿ, ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರು ಕಮಿಷನ್ ಅರೋಪ ಮಾಡಿ ಪತ್ರ ಬರೆದಿದ್ದಾರೆ. ಮಂತ್ರಿಗಳ ವಿರುದ್ದ 40% ಕಮಿಷನ್ ಆರೋಪ ಮಾಡಿದ್ದಾರೆ. ಕಾಂಟ್ರಾಕ್ಟರ್ ಅಸೋಸಿಯನ್‌ಗೂ ಪತ್ರ ಬರೆದಿದ್ದಾರೆ. ಪ್ರಧಾನಿ ಕಾರ್ಯಾಲಯದಿಂದ ಈಗ ವರದಿ ಕೇಳುವುದರಲ್ಲಿ ಏನಿದೆ? ಪ್ರಮುಖವಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಯಬೇಕು. ಅದನ್ನು ಬಿಟ್ಟು ವರದಿ ಏನು ಕೇಳೋದು ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: 40% ಕಮಿಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಗುತ್ತಿಗೆದಾರರ ಸಂಘದಿಂದ ದಾಖಲೆ ಕೇಳಿದ ಕೇಂದ್ರ ಗೃಹ ಸಚಿವಾಲಯ
ಇಡಿ ಸಮನ್ಸ್ ವಿಚಾರವಾಗಿ ಪ್ರತಿಕ್ರಿಯಿಸಿ, ಜೈಲಿನಿಂದ ಬಂದ 6 ತಿಂಗಳಲ್ಲಿ ಚಾರ್ಜ್‌ಶೀಟ್ ಹಾಕಬೇಕಿತ್ತು. ನನಗೆ ಚಾರ್ಜ್‌ಶೀಟ್ ಸಿಕ್ಕಿಲ್ಲ. ಚಾರ್ಜ್‌ಶೀಟ್‌ನಲ್ಲಿ ಏನಿದೆ ಅಂತಾ ನನಗೇ ಗೊತ್ತಿಲ್ಲ. ಚಾರ್ಜ್‌ಶೀಟ್ ಸಿಕ್ಕಮೇಲೆ ನಾನು ಹೇಳುತ್ತೇನೆ ಎಂದಿದ್ದಾರೆ.