Tag: 40% ಕಮಿಷನ್

  • 40% ಕಮಿಷನ್‌ ಆರೋಪ – ನ್ಯಾ. ನಾಗಮೋಹನ ದಾಸ್ ವಿಚಾರಣಾ ಆಯೋಗದಿಂದ ಸಿಎಂಗೆ ವರದಿ ಸಲ್ಲಿಕೆ

    40% ಕಮಿಷನ್‌ ಆರೋಪ – ನ್ಯಾ. ನಾಗಮೋಹನ ದಾಸ್ ವಿಚಾರಣಾ ಆಯೋಗದಿಂದ ಸಿಎಂಗೆ ವರದಿ ಸಲ್ಲಿಕೆ

    ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದವರು ಮಾಡಿದ ಆರೋಪಗಳು ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೀಳು ಕಾಲುವೆಗಳ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಬಗ್ಗೆ ಕೇಳಿಬಂದ ಆರೋಪಗಳ ಕುರಿತು ನಿವೃತ್ತ ನ್ಯಾ. ಹೆಚ್.ಎನ್ ನಾಗಮೋಹನ್ ದಾಸ್ ಅವರ ಆಯೋಗವು ನಡೆಸಿದ ತನಿಖೆಯ ವರದಿಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.

    ಬೆಂಗಳೂರಿನ ಕಾವೇರಿ ನಿವಾಸದಲ್ಲಿಂದು ನಿವೃತ್ತ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗ ಮಧ್ಯಂತರ ವರದಿ ಸಲ್ಲಿಕೆ ಮಾಡಿದೆ. 40% ಕಮೀಷನ್ ಆರೋಪ ಅನುಬಂಧಗಳೊಂದಿಗೆ 20 ಸಾವಿರ ಪುಟಗಳ ವರದಿಗಳನ್ನು ಸಿಎಂಗೆ ಸಲ್ಲಿಕೆ ಮಾಡಿದೆ.

    ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೆಂಡರ್ ಕಾಮಗಾರಿಗಳಲ್ಲಿ ಶೇ.40 ಕಮಿಷನ್‌ ಇದೆ ಎಂದು ರಾಜ್ಯ ಗುತ್ತಿಗೆದಾರರ ಸಂಘವು ಗಂಭೀರವಾಗಿ ಆರೋಪಿಸಿತ್ತು. ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ಗಂಭೀರ ಆರೋಪಗಳು ಕೇಳಿಬಂದ ಬೆನ್ನಲ್ಲೇ 26-7-2019 ರಿಂದ 31.03.2023ರ ವರೆಗೆ ನಡೆದಿರೋ ಕಾಮಗಾರಿಗಳ ಬಗ್ಗೆ ತನಿಖೆ ವರದಿ ಸಲ್ಲಿಕೆ ಮಾಡುವಂತೆ ಸರ್ಕಾರ ಸೂಚನೆ ನೀಡಿತ್ತು.

    ಈ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ರಾಂಡಮ್ ಮಾದರಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನ ಆಯ್ಕೆ ಮಾಡಿಕೊಂಡು ಆಯೋಗ ತನಿಖೆ ನಡೆಸಿತ್ತು. ಈ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳು, ಎಲ್ಲಾ ಮಾದರಿಯ ಕಾಮಗಾರಿಗಳು ಹಾಗೂ ಎಲ್ಲಾ ಮೊತ್ತದ ಕಾಮಗಾರಿಗಳನ್ನ ಪರಿಗಣಿಸಿ ಆಯೋಗ ತನಿಖೆ ನಡೆಸಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

  • 40% ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲೂ ಮುಂದುವರಿದಿದೆ: ಕೆಂಪಣ್ಣ ಆರೋಪ

    40% ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲೂ ಮುಂದುವರಿದಿದೆ: ಕೆಂಪಣ್ಣ ಆರೋಪ

    ಬೆಂಗಳೂರು: 40% ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲಿಯೂ ಮುಂದುವರಿದಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದಾರೆ.

    ಚಾಮರಾಜಪೇಟೆಯ ಗುತ್ತಿಗೆದಾರರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿವಿಧ ಇಲಾಖೆಗಳಲ್ಲಿ ಕರೆದಿರೋ ಪ್ಯಾಕೇಜ್ ಟೆಂಡರ್ ಅನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು. ಜೊತೆಗೆ ಪ್ರತಿಯೊಂದು ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆಯಬೇಕು ಎಂದು ಇದೇ ವೇಳೆ ಒತ್ತಾಯ ಮಾಡಿದರು.

    ತಕ್ಷಣ ಪ್ಯಾಕೇಜ್ ಸಿಸ್ಟಮ್ ಸ್ಟಾಪ್ ಮಾಡಿ ಪ್ರತ್ಯೇಕ ಟೆಂಡರ್ ಕರೆಯಬೇಕು. ಕೋಲಾರದಲ್ಲಿ ಪ್ಯಾಕೇಜ್ ಟೆಂಡರ್ ಕರೆದಿದ್ದಾರೆ ಬೇರೆ ಜಿಲ್ಲೆಗಳಲ್ಲೂ ಕರೆದಿದ್ದಾರೆ. ಅಧಿಕಾರಿಗಳಿಂದಲೇ ಭ್ರಷ್ಟಾಚಾರ ಶುರುವಾಗಿದೆ. ಅಧಿಕಾರಿಗಳು ದುಡ್ಡು ಕಲೆಕ್ಟ್ ಮಾಡಿ ರಾಜಕಾರಣಿಗಳಿಗೆ ಕೊಡುತ್ತಿದ್ದಾರೆ. ಈ ಹಿಂದೆ ರಾಜಕಾರಣಿಗಳು ನೇರವಾಗಿ ಕಮಿಷನ್ ತೆಗೆದುಕೊಳ್ಳುತ್ತಿದ್ದರು. ಈಗ ಅಧಿಕಾರಿಗಳು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ 40% ಕಮಿಷನ್ ಈಗಲೂ ಮುಂದುವರಿದಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ನಾನು ಪಾರ್ಲಿಮೆಂಟ್‌ ಸದಸ್ಯತ್ವ ಕೇಳಿದ್ದೀನಿ: ವಿ ಸೋಮಣ್ಣ

    ಅರ್ಹ ಗುತ್ತಿಗೆದಾರರಿಗೆ ಅನ್ಯಾಯ: ವಿವಿಧ ಇಲಾಖೆಯಲ್ಲಿ ನಡೆಯುತ್ತಿರುವ ಅನಾವಶ್ಯಕ ಪ್ಯಾಕೇಜ್ ಟೆಂಡರ್‍ಗಳನ್ನು ಕೂಡಲೇ ಸರ್ಕಾರ ರದ್ದುಗೊಳಿಸಬೇಕು. ಈಗಾಗಲೇ ಹಲವು ಬಾರಿ ಸಿಎಂ ಅವರನ್ನ ಭೇಟಿ ಮಾಡಿದ್ದೇವೆ. ಪ್ಯಾಕೇಜ್ ಟೆಂಡರ್ ರದ್ದುಮಾಡುವಂತೆ ಮನವಿ ಮಾಡಿದ್ದೇವೆ. ಹತ್ತಾರು ಪತ್ರ ಬರೆದು ಸಿಎಂಗೆ ಮನವಿ ಮಾಡಿದ್ದೇವೆ. ಮುಖ್ಯ ಎಂಜಿನಿಯರ್ ಅವರನ್ನ ಪ್ರಶ್ನೆ ಮಾಡಿದ್ರೆ ಮೇಲಾಧಿಕಾರಿಗಳ ಕಡೆ ತೋರಿಸುತ್ತಾರೆ. ಅವರನ್ನ ಕೇಳಿದ್ರೆ ಸಚಿವರು, ಶಾಸಕರ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ ಎಂದರು.

    ಪೊಲೀಸ್ ವಸತಿ ಗೃಹ ಅಭಿವೃದ್ಧಿ ನಿಗಮ, ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಹಲವು ಇಲಾಖೆಗಳಲ್ಲಿ ಪ್ಯಾಕೇಜ್ ಟೆಂಡರ್ ಆಹ್ವಾನ ಬಂದಿದೆ. ಇದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಮೋಸಗಳಾಗುತ್ತಿದೆ. ನೆರೆ ರಾಜ್ಯದ ಗುತ್ತಿಗೆ ಅನಕೂಲ ಮಾಡಿಕೊಡಲು ಪ್ಯಾಕೇಜ್ ಟೆಂಡರ್ ಮಾಡುತ್ತಿದ್ದಾರೆ. ಪ್ಯಾಕೇಜ್ ಟೆಂಡರ್ ಪದ್ಧತಿ ಭ್ರಷ್ಟಾಚಾರಕ್ಕೆ ಆಸ್ಪದವಾಗಿದೆ. ತಮ್ಮ ಅಪ್ತರಾದ ಗುತ್ತಿಗೆ ಕಾಮಗಾರಿ ನೀಡಲು ಮುಂದಾಗಿದ್ದಾರೆ. ಇದರಿಂದ ಅರ್ಹ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಎಲ್ಲಾ ರೀತಿಯ ಕಾಮಗಾರಿಗಳ ಟೆಂಡರ್ ಮೂಲಕ ಹಂಚಿಕೆ ಮಾಡಿದ್ರೆ ನ್ಯಾಯ ಸಿಗುತ್ತೆ ಎಂದಿದ್ದಾರೆ.

    ಸಮಯ ನೋಡಿ ದೂರು: ಪ್ಯಾಕೇಜ್ ಟೆಂಡರ್ ರದ್ದು ಮಾಡದೇ ಇದ್ರೆ ಹೋರಾಟ ಮಾಡಲು ಕರೆ ಕೊಡುತ್ತೇವೆ. ಒಂದು ವಾರದಲ್ಲಿ ಬಿಬಿಎಂಪಿಯಲ್ಲಿ 300 ಕೋಟಿ ಪ್ಯಾಕೇಜ್ ಟೆಂಡರ್‍ನ್ನ ಆಹ್ವಾನಿಸಲಾಗಿದೆ. ಈ ಪ್ಯಾಕೇಜ್ ಟೆಂಡರ್ ಮೇಲೆ ಹಲವು ಅನುಮಾನ ಮೂಡಿದೆ. ನಿಮಗೆ ಕೆಲಸ ಬೇಕು ಅಂದ್ರೆ ಅಧಿಕಾರಿಗಳೇ ಹಣ ಕೇಳುತ್ತಿದ್ದಾರೆ. ಕಾಮಗಾರಿ ಪೂರ್ಣಗೊಳಿಸಿ ಎರಡು ವರ್ಷ ಆದ್ರೂ ಹಣ ಬಿಡುಗಡೆ ಆಗಿಲ್ಲ. 40% ಕಮಿಷನ್ ಮುಂದುವರಿದಿರೋ ಬಗ್ಗೆ ಸಮಯ ನೋಡಿ ದೂರು ಕೊಡುತ್ತೇವೆ. ಯಾರಿಗೂ ಹೆದರಬೇಕಿಲ್ಲ ಎಂದರು.

    ಬಿಬಿಎಂಪಿಯಲ್ಲಿ 15 ಚೀಪ್ ಎಂಜಿನಿಯರ್ಸ್ ಇದ್ದಾರೆ. ಅವರು ಪ್ರತಿಯೊಂದು ಟೆಂಡರ್‍ನಲ್ಲಿ ಹಣ ಕೇಳುತ್ತಾರೆ. ಅವರ ಹೆಸರು ಸದ್ಯಕ್ಕೆ ಹೇಳಲ್ಲ. 9 ಸಾವಿರಾರು ಪೇಜ್‍ಗಳ ಮೂಲಕ ದೂರು ಕೊಟ್ಟಿದ್ದೇವೆ. ನಾಗಮೋಹನ್ ದಾಸ್ ಕಮಿಟಿಗೂ ಪ್ರತೀ ಭ್ರಷ್ಟ ಅಧಿಕಾರಿಗಳ ಮಾಹಿತಿ ನೀಡಿದ್ದೇವೆ. ಅದರಲ್ಲಿ ಪ್ರತಿಯೊಂದು ಇಲಾಖೆಯ ಅಧಿಕಾರಿಗಳ ಹೆಸರು ನೀಡಿದ್ದೇವೆ ಎಂದು ತಿಳಿಸಿದರು.

    ಇದೇ ವೇಳೆ ನೀವು ಸುಮ್ನೆ ಗಾಳಿಯಲ್ಲಿ ಗುಂಡು ಹೊಡೆಯುತ್ತೀರಿ, ದಾಖಲಾತಿ ಕೊಡಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕೆಂಪಣ್ಣ, ನಾವು 800 ಪುಟಗಳ ದಾಖಲಾತಿ ಕೊಟ್ಟಿದ್ದೇವೆ. ಕೋರ್ಟ್ ಅಲ್ಲಿ ಕೊಡುತ್ತೇವೆ ಎಂದರು.

  • ಬಿಜೆಪಿಯವರೇ ತಪ್ಪು ಮಾಡಿದ್ರೂ ಜೈಲಿಗೆ ಹಾಕಿ, ನೀವು ಸತ್ಯ ಸಂಧರು ಅನ್ನೋದನ್ನ ಪ್ರೂವ್ ಮಾಡಿ: ಪ್ರತಾಪ್ ಸಿಂಹ

    ಬಿಜೆಪಿಯವರೇ ತಪ್ಪು ಮಾಡಿದ್ರೂ ಜೈಲಿಗೆ ಹಾಕಿ, ನೀವು ಸತ್ಯ ಸಂಧರು ಅನ್ನೋದನ್ನ ಪ್ರೂವ್ ಮಾಡಿ: ಪ್ರತಾಪ್ ಸಿಂಹ

    ಮೈಸೂರು: ಇಷ್ಟು ದಿನ ಕಾಂಗ್ರೆಸ್‌ನವರು 40% ಕಮಿಷನ್ (40 Percent Commission) ಅಂತಾ ಬೊಬ್ಬೆ ಹೊಡೆದುಕೊಳ್ತಿದ್ರು, ಈಗ ಅಧಿಕಾರವೇ ಅವರ ಕೈಯಲ್ಲಿದೆ. ಎಲ್ಲವನ್ನ ತನಿಖೆ ಮಾಡಿಸಿ, ಬಿಜೆಪಿಯವರೇ ತಪ್ಪು ಮಾಡಿದ್ರೂ ಹಿಡಿದು ಜೈಲಿಗೆ ಹಾಕಿಸಿ. ನೀವು ಸತ್ಯ ಸಂಧರು ಅನ್ನೋದನ್ನ ಸಾಬೀತು ಮಾಡಿಕೊಳ್ಳಿ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಕುಟುಕಿದ್ದಾರೆ.

    ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಹಗರಣ, ಬಿಟ್ ಕಾಯಿನ್ ಪ್ರಕರಣ, 40% ಕಮಿಷನ್ ಹಗರಣ, ಚಾಮರಾಜನಗರ ಆಕ್ಸಿಜನ್ ದುರಂತ ಎಲ್ಲರದ ಬಗ್ಗೆ ತನಿಖೆ ಮಾಡಿ. ಅವನ್ಯಾವನು ತಪ್ಪು ಮಾಡಿದ್ದಾನೋ, ಅವನನ್ನ ಹಿಡಿದು ಜೈಲಿಗೆ ಹಾಕಿ. ನೀವು ಸತ್ಯ ಸಂಧರು ಎಂಬುದನ್ನ ಪ್ರೂವ್‌ ಮಾಡಿ. ನೀವು ತನಿಖೆ ಮಾಡಿದ್ರೆ ನಮ್ಮ ಪಕ್ಷವನ್ನೂ ಸ್ವಚ್ಛಗೊಳಿಸೋದಕ್ಕೆ ಅನುಕೂಲವಾಗುತ್ತೆ ಎಂದಿದ್ದಾರೆ.

    ನೀವು ಬಿಜೆಪಿ ಸರ್ಕಾರದ (BJP Government) ಮೇಲೆ ಏನೇನು ಆರೋಪ ಮಾಡಿದ್ದೀರೊ ಅವೆಲ್ಲದರ ಬಗ್ಗೆಯೂ ತುರ್ತು ತನಿಖೆ ಮಾಡಿ. ನಿಮ್ಮ ಮೇಲೆ ಜನ ಅತೀವ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸವನ್ನ ಉಳಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

    ಎಲ್ಲರಿಗೂ ಫ್ರೀ ಅಂದಿದ್ದು ಸಿದ್ದರಾಮಯ್ಯ:
    ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಗ್ಯಾರಂಟಿ ಯೋಜನೆ ಘೋಷಣೆ ಮಾಡುವಾಗ ಯಾವ ಕಂಡಿಷನ್ ಹಾಕಿರಲಿಲ್ಲ. ನನಗೂ ಫ್ರೀ, ನಿನಗೂ, ಎಲ್ಲರಿಗೂ ಫ್ರೀ ಎಂದವರು ಸಿದ್ದರಾಮಯ್ಯ, ಈಗಲೂ ಯಾವ ಕಂಡಿಷನ್ ಇಲ್ಲದೇ ಗ್ಯಾರಂಟಿ (Congress Guarantee) ಜಾರಿ ಮಾಡಿ. ಅವರು ಆಡಿದ ಮಾತುಗಳೇ ಅವರ ತಲೆ ಮೇಲೆ ಒತ್ತಡ ತಂದಿದೆ. ಆ ಒತ್ತಡವನ್ನ ಅವರೇ ನಿಭಾಯಿಸಿಕೊಂಡು ಯಾವ ಷರತ್ತುಗಳಿಲ್ಲದೇ ಗ್ಯಾರಂಟಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

  • ಸಿದ್ದರಾಮಯ್ಯನವರೇ 10% ಕಮಿಷನ್‍ ತಗೊಳ್ಳಿ – ಬಿಜೆಪಿಯವರ ತರ 40% ಬೇಡ: ನಿಡುಮಾಮಿಡಿ ಶ್ರೀ

    ಸಿದ್ದರಾಮಯ್ಯನವರೇ 10% ಕಮಿಷನ್‍ ತಗೊಳ್ಳಿ – ಬಿಜೆಪಿಯವರ ತರ 40% ಬೇಡ: ನಿಡುಮಾಮಿಡಿ ಶ್ರೀ

    ಚಿಕ್ಕಬಳ್ಳಾಪುರ: ಸಿದ್ದರಾಮಯ್ಯನವರೇ (Siddaramaiah) 10% ಕಮಿಷನ್‍ನಲ್ಲೇ (Commission) ಇರಿ. ಬಿಜೆಪಿಯವರ (BJP) ತರ 40% ಕಮಿಷನ್‍ ತಗೋಬೇಡಿ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ದೇಶಿ ಕೇಂದ್ರ ಸ್ವಾಮೀಜಿ ವಿವಾದಾತ್ಮಕ ಸಲಹೆ ನೀಡಿದ್ದಾರೆ.

    ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ನಗರದ ಅಂಬೇಡ್ಕರ್ ಸಮಾನತಾ ಸೌಧದಲ್ಲಿ ದಿವಂಗತ ಪ್ರೋಫೆಸರ್‌ ಬಿ.ಗಂಗಾಧರಮೂರ್ತಿ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶ್ರೀಗಳು, ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು (Narendra Modi) 10% ಸರ್ಕಾರ ಅಂತ ಟೀಕಿಸಿದ್ರು, ಪರವಾಗಿಲ್ಲ ನೀವು 10% ನಲ್ಲೇ ಇರಿ. ಇವರ ತರ 40% ಆಗಬೇಡಿ. ಈ 40% ಸರ್ಕಾರ ತಪ್ಪಿಸಿ. 10%ಗೆ ಬನ್ನಿ ನಾವ್ ಓಪ್ಕೋತಿವಿ. ನಾವೆಲ್ಲರೂ ಒಪ್ಪಿಕೊಳ್ಳೋಣ ಅಂತ ಹೇಳಿದ್ದಾರೆ. ಇದನ್ನೂ ಓದಿ: ಅ.1 ರಿಂದ ದೇಶದಲ್ಲಿ 5G ಸೇವೆ ಆರಂಭ – ಮೋದಿ ಚಾಲನೆ

    ಬೆಲೆ ಏರಿಕೆ ತರ ಭ್ರಷ್ಟಾಚಾರ ಏರಿಕೆ ಆಗ್ತಾನೇ ಇದೆ. ಭ್ರಷ್ಟಾಚಾರವನ್ನು ಯಾವ ಪಕ್ಷದಿಂದಲೂ ನಿವಾರಣೆ ಮಾಡಲು ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿ ಇಂತಹ ಅಸಹಾಯಕತೆ ನಿರ್ಮಾಣ ಆಗಿದೆ. ಗಣನೀಯವಾಗಿ ತಗ್ಗಿಸುವ ಪ್ರಯತ್ನವನ್ನಾದ್ರೂ ಮಾಡಿ ಸಿದ್ದರಾಮಯ್ಯನವರೇ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಈ ಅಂಶ ಆಳವಡಿಸಿ. ಭ್ರಷ್ಟಾಚಾರವನ್ನು ಗಣನೀಯವಾಗಿ ತಗ್ಗಿಸುವ ಭರವಸೆ ಕೊಡಿ. ಜನರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ರೆ ನಿಮ್ಮನ್ನು ಸ್ವಾಗತಿಸುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪರೀಕ್ಷೆ ಪಾಸ್ ಆಗ್ಬೇಕು ಅಂದ್ರೆ 35 ಮಾರ್ಕ್ಸ್ ಪಡಿಬೇಕು – ಬಿಜೆಪಿ ಸರ್ಕಾರದಲ್ಲಿ ಬಿಲ್ ಪಾಸ್ ಆಗ್ಬೇಕು ಅಂದ್ರೆ 40% ಕೊಡಬೇಕು: ಕಾಂಗ್ರೆಸ್

    Live Tv
    [brid partner=56869869 player=32851 video=960834 autoplay=true]

  • ಕೆಂಪಣ್ಣನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಚೆಕ್ ಮಾಡಿಸಬೇಕು: ಬಿ.ಸಿ. ಪಾಟೀಲ್

    ಕೆಂಪಣ್ಣನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಚೆಕ್ ಮಾಡಿಸಬೇಕು: ಬಿ.ಸಿ. ಪಾಟೀಲ್

    ಬೆಂಗಳೂರು: ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಚೆಕ್ ಮಾಡಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಂಪಣ್ಣ ಅವರನ್ನು ಮೊದಲು ಮೆಂಟಲ್ ಆಸ್ಪತ್ರೆ ಸೇರಿಸಿ ಚೆಕ್ ಮಾಡಿಸಬೇಕು. ಯಾವುದೇ ದಾಖಲೆ ಇಲ್ಲದೆ ಆರೋಪ ಮಾಡೋದು ಸರಿಯಲ್ಲ. ಇದು ಕಾಂಗ್ರೆಸ್ ಪ್ರಾಯೋಜಿತ ಆರೋಪ. ಇದನ್ನು ಹೇಳೋಕೆ ಯಾವುದೇ ಹಿಂಜರಿಕೆ ಇಲ್ಲ. ಇದನ್ನು ಕಾಂಗ್ರೆಸ್ ಮಾಡಿಸಿದೆ. ಯಾವುದೇ ದಾಖಲೆ ಇಲ್ಲದೆ ಮಾತಾಡಿದ್ರೆ ಹೇಗೆ. ಮೊದಲು ಅವ್ರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಚೆಕ್ ಮಾಡಿಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡ್ತೀವಿ – ಅಶೋಕ್ ಘೋಷಣೆ

    ಯಾವ ಮಂತ್ರಿ ಮೇಲೆ ಆರೋಪ ಮಾಡಿದ್ದಾರೋ ಅ ಮಂತ್ರಿಗಳು ಕೆಂಪಣ್ಣ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಿ. ನ್ಯಾಯಾಂಗ ತನಿಖೆ ಬಗ್ಗೆ ಸಿಎಂ ಬೊಮ್ಮಾಯಿ ನಿರ್ಧಾರ ಮಾಡ್ತಾರೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಎಡವಟ್ಟು ಬೆನ್ನಲ್ಲೇ ಟ್ರಸ್ಟ್‌, ಪ್ರತಿಷ್ಠಾನ ಅಧ್ಯಕ್ಷರು ಸದಸ್ಯರ ನೇಮಕಾತಿ ಆದೇಶ ವಾಪಸ್‌

    Live Tv
    [brid partner=56869869 player=32851 video=960834 autoplay=true]

  • ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲೂ ಕಮಿಷನ್ ದಂಧೆ

    ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲೂ ಕಮಿಷನ್ ದಂಧೆ

    ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲೂ ಕಮಿಷನ್ ದಂಧೆಯ ಆರೋಪ ಕೇಳಿ ಬಂದಿದೆ. 40% ಮೀರಿ ದಂಧೆ ನಡೆಯುತ್ತಿದೆ ಎಂದು ಕೆ. ಎಸ್ ಆ್ಯಂಡ್ ಡಿಎಲ್ ಎಂಪ್ಲಾಯಿಸ್ ಯೂನಿಯನ್ ಗಂಭೀರ ಆರೋಪ ಮಾಡಿದೆ.

    ಶ್ರೀಗಂಧ ಎಣ್ಣೆ ಖರೀದಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣದಲ್ಲಿ ಗೋಲ್ ಮಾಲ್ ನಡೆದಿದ್ದು, ಬ್ಲಾಕ್ ಲಿಸ್ಟ್ ನಲ್ಲಿರುವ ಕಂಪನಿಗಳ ಜೊತೆ ಕೋಟಿ ಕೋಟಿ ವ್ಯವಹಾರ ಆಗಿದೆ. ಕೋಟಿಗಟ್ಟಲೇ ಅಕ್ರಮ, ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕೆ. ಎಸ್ ಆ್ಯಂಡ್ ಡಿಎಲ್ ಎಂಪ್ಲಾಯಿಸ್ ಯೂನಿಯನ್ ದಾಖಲೆ ಬಿಡುಗಡೆ ಮಾಡಿದೆ.

    ಈ ಭ್ರಷ್ಟಾಚಾರಕ್ಕೆಲ್ಲ ಕೆ.ಎಸ್ ಆ್ಯಂಡ್ ಡಿಎಲ್ ಎಂಡಿ ಮಹೇಶ್ ಶಿರೂರ ಕಾರಣ. ಕಳೆದ ಎರಡು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಶ್ರೀಗಂಧ ಎಣ್ಣೆ ಮಾರಾಟ ಮಾಡಿದ್ದಾರೆ. ಬ್ಲಾಕ್ ಲಿಸ್ಟ್‍ನಲ್ಲಿರುವ ಕಂಪನಿಗಳ ಜೊತೆಗೂ ಶಿರೂರ ವ್ಯವಹಾರ ಮಾಡಿದ್ದಾರೆಂದು ಆರೋಪಿಸಿದ್ದಾರೆ.

    ಪ್ರತಿಮೆ ನಿರ್ಮಾಣದಲ್ಲೂ ಶೇ.40 ಕ್ಕಿಂತ ಹೆಚ್ಚು ಕಮಿಷನ್ ಪಡೆಯುತ್ತಿದ್ದಾರೆ. 1 ಕೆಜಿ ಶ್ರೀಗಂಧಕ್ಕೆ 1 ಲಕ್ಷ ಹಣ ಹೆಚ್ಚುವರಿ ಕೊಟ್ಟು 2 ಸಾವಿರ ಕೆಜಿ ಶ್ರೀಗಂಧ ಎಣ್ಣೆ ಖರೀದಿ ಮಾಡಲಾಗುತ್ತಿದೆ. ಕಾರ್ಖಾನೆಯಲ್ಲಿ ನಡೆದ ಬೃಹತ್ ಹಗರಣವನ್ನು ಎಸಿಬಿಗೆ ವಹಿಸುವಂತೆ ಯೂನಿಯನ್ ಆಗ್ರಹಿಸಿದೆ.

    ಯಾವೇಲ್ಲಾ ಹಗರಣಗಳು ನಡೆದಿದೆ?
    * ಕೆಎಸ್ ಮತ್ತು ಡಿಎಲ್ ಶ್ರೀಗಂಧ ಎಣ್ಣೆಯನ್ನು ಆಸ್ಟ್ರೇಲಿಯಾದಿಂದ ಮಧ್ಯಮ ವ್ಯಕ್ತಿಗಳಿಂದ ಖರೀದಿಸಲಾಗುತ್ತಿದೆ.
    * ಆಸ್ಟ್ರೇಲಿಯಾದಿಂದ ಪ್ರತಿ ಕೆಜಿಗೆ 2 ಲಕ್ಷ 49 ಸಾವಿರ 899 ರೂ. ಗಳಿಗೆ ಅದಿತಿ ಇಂಟರ್ ನ್ಯಾಷನಲ್, ಮುಂಬೈ ಹಾಗೂ ಕರ್ನಾಟಕ, ಬೆಂಗಳೂರಿನ ಆರೋಮಾ ಖರೀದಿಗೆ 100% ಕಮಿಷನ್ ನಡೆದಿದೆ.
    * ಶಿರೂರ ಅಧಿಕಾರಕ್ಕೆ ಬಂದ ಬಳಿಕ, ಇವರೆಗೆ 2 ಸಾವಿರ ಕೆಜಿ ಶ್ರೀಗಂಧ ಎಣ್ಣೆ ಖರೀದಿಯಾಗಿದೆ.
    * ಕೃಷ್ಣರಾಜೇಂದ್ರ ಒಡೆಯರ್‍ರ ಪ್ರತಿಮೆಯನ್ನ 12 ಲಕ್ಷ ಹಣದಲ್ಲಿ ನಿರ್ಮಾಣಕ್ಕೆ ಅಸ್ತು. ಆದರೆ 13 ಲಕ್ಷ ಕಿಕ್ ಬ್ಯಾಕ್ ಪಡೆಯಲಾಗಿದೆ.
    * ಕೆಎಸ್ ಮತ್ತು ಡಿಎಲ್‍ನಿಂದ ಪ್ರತಿಮೆ ನಿರ್ಮಾಣ ಮಾಡಲು ಟೆಂಡರ್ ಒಪ್ಪಿಕೊಂಡಿತ್ತು.
    * ಬ್ಲಾಕ್ ಲಿಸ್ಟ್‍ನಲ್ಲಿರುವ ಬೆಂಗಳೂರಿನ ಆರೋಮಾ, ಕರ್ನಾಟಕ ಕೆಮಿಕಲ್ ಇಂಡಸ್ಟ್ರಿ ಕಂಪನಿಯಿಂದಲೇ ಶ್ರೀಗಂಧದ ಎಣ್ಣೆಯನ್ನು ಅಕ್ರಮವಾಗಿ ಕಮಿಷನ್ ಮೂಲಕ ಖರೀದಿ ಮಾಡಲಾಗಿದೆ.
    * ಕಾರ್ಖಾನೆಗೆ ಬೇಕಿರುವ ನ್ಯೂಡಲ್ಸ್, ಶ್ರೀಗಂಧ ಎಣ್ಣೆಯಲ್ಲಿ 250 ಕೋಟಿ ಅವ್ಯವಹಾರವಾಗಿದೆ.
    * ಅನಿವಾರ್ಯ ಇಲ್ಲದಿದ್ದರೂ ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ.

    ಬೆಂಗಳೂರು, 

  • ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸಲಿ ಮಾಡೋದು ರಾಕ್ಷಸ ಪ್ರವೃತ್ತಿ: ಸಿದ್ದರಾಮಯ್ಯ

    ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸಲಿ ಮಾಡೋದು ರಾಕ್ಷಸ ಪ್ರವೃತ್ತಿ: ಸಿದ್ದರಾಮಯ್ಯ

    ಬೆಳಗಾವಿ: ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸಲಿ ಮಾಡುವುದು ರಾಕ್ಷಸ ಪ್ರವೃತ್ತಿ ಆಗಿದ್ದು, ಇದೇ ರೀತಿ ಎಲ್ಲಾ ಇಲಾಖೆಯಲ್ಲೂ ಕಮಿಷನ್ ಆರೋಪ ನಡೆಯುತ್ತಿದೆ. ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದು ಅನೇಕ ಆರೋಪ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಅರುಣ್ ಸಿಂಗ್ ಸಮರ್ಥರಾಗಿದ್ದಾರೆ. ಸಂತೋಷ್ ಪಾಟೀಲ್ ಬಿಜೆಪಿಗೆ ಆಸ್ತಿಯಾಗಿದ್ದರು. ನಾವ್ಯಾರು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಇದು ವಾಸ್ತವ ಎಂದು ಹೇಳಿದರು. ಇದನ್ನೂ ಓದಿ: ಮಗನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಾಯಿ

    ಗ್ರಾಪಂ ಅಧ್ಯಕ್ಷ ಹೇಳಿದ್ದು ಸತ್ಯ. ಈಶ್ವರಪ್ಪ ಹೇಳದೇ ಯಾರು ಕೆಲಸ ಮಾಡಲು ಆಗಲ್ಲ. ಸಚಿವರ ಸೂಚನೆ ಮೇಲೆ ಕೆಲಸ ಮಾಡಿದ್ದಾರೆ. ವರ್ಕ್ ಆರ್ಡರ್ ಕೊಟ್ಟಿಲ್ಲ. ಸಾಲ ಸೋಲ ಮಾಡಿ ಸಂತೋಷ್ ಕೆಲಸ ಮಾಡಿದ್ದಾನೆ. ಪತ್ನಿಯ ಒಡವೆಯನ್ನು ಅಡಯಿಟ್ಟು ಸಾಲ ಮಾಡಿದ್ದಾರೆ. ಈಶ್ವರಪ್ಪ ಪಿಎಗಳು ಕಮಿಷನ್ ಕೇಳಿದ್ದಾರೆ. ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸೂಲಿ ಮಾಡುವುದು ರಾಕ್ಷಸ ಪ್ರವೃತ್ತಿಯಾಗಿದೆ. ಎಲ್ಲಾ ಇಲಾಖೆಯಲ್ಲಿ ಕಮಿಷನ್ ಆರೋಪ ನಡೆಯುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಗ್ಯಾಸ್ ಸಿಲಿಂಡರ್‌ನಲ್ಲಿ 50 ಲೀಟರ್ ಮದ್ಯ ಸಾಗಿಸುತ್ತಿದ್ದ ಚಾಲಾಕಿ ಬಂಧನ

    ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದು ಅನೇಕ ಆರೋಪ ಮಾಡಿದ್ದಾರೆ. ಪ್ರಧಾನಿ ಸೇರಿ ಅನೇಕ ನಾಯಕರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಕ್ರಮ ವಹಿಸಿ ಎಂದು ಸಿಎಂಗೆ ಹೇಳಿದ್ದಾರೆ. ನಾವು ಇದನ್ನು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೇವು. ನಮಗೆ ಅವಕಾಶ ಸಿಗಲಿಲ್ಲ. ಬೆತ್ತಲೆ ಆಗುತ್ತೇವೆ ಎನ್ನುವ ಭಯ ಬಿಜೆಪಿಗೆ ಇದೆ. ಈಶ್ವರಪ್ಪನ ಭಂಡ, ಮಾನ ಮರ್ಯಾದೆ ಇಲ್ಲದೇ ಇರುವವರಿಗೆ ಏನು ಹೇಳೊಕೆ ಆಗಲ್ಲ ಎಂದು ಕಿಡಿಕಾರಿದರು.

  • 40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ

    40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ

    ಹುಬ್ಬಳ್ಳಿ: ಗ್ರಾಮೀಣಾಭಿವೃದ್ಧಿ ಇಲಾಖೆ 40% ಕಮಿಷನ್ ಇಲಾಖೆಯಿದ್ದ ಹಾಗೆ. ಕಾಮಗಾರಿಗಳ ಬಿಲ್ ಆಗಬೇಕು ಅಂದ್ರೆ 40% ಕಮಿಷನ್ ಕೊಡಲೇ ಬೇಕು ಅಂತ, ಸ್ವತಃ ಬಿಜೆಪಿ ಕಾರ್ಯಕರ್ತ ಮತ್ತು ಪ್ರಥಮ ದರ್ಜೆ ಗುತ್ತಿದಾರರೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದು, ಸಚಿವ ಕೆಎಸ್ ಈಶ್ವರಪ್ಪರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

    MODi

    ಬಿಜೆಪಿ ಕಾರ್ಯಕರ್ತ ಮತ್ತು ಪ್ರಥಮ ದರ್ಜೆ ಗುತ್ತಿದಾರ ಸಂತೋಷ್, ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಅಭಿವೃದ್ಧಿಗಾಗಿ, 4 ಕೋಟಿ ವೆಚ್ಚದಲ್ಲಿ ಸುಮಾರು 108 ವಿವಿಧ ಕಾಮಗಾರಿಗಳನ್ನು ಈಶ್ವರಪ್ಪ ಮಂಜೂರು ಮಾಡಿದ್ದರು. ಸದ್ಯ ಎಲ್ಲಾ ಕಾಮಗಾರಿಗಳು ಮುಕ್ತಾಯಗೊಂಡು ಒಂದು ವರ್ಷ ಕಳೆದರೂ ಗುತ್ತಿಗೆದಾರ ಸಂತೋಷ ಅವರಿಗೆ ಇನ್ನೂ ಒಂದು ರೂಪಾಯಿ ಸಹ ಬಂದಿಲ್ಲ. ಇದನ್ನೂ ಓದಿ: ಪ್ರಶಾಂತ್ ಸಂಬರಗಿ ಸಾರಥ್ಯದಲ್ಲಿ ಸಿನಿಮಾವಾಗ್ತಿದೆ ‘ಆಗಸ್ಟ್ 15’ರ ಸ್ಟೋರಿ

    ಹಣ ಬಿಡುಗಡೆ ಮಾಡಲು 40% ಕಮಿಷನ್ ನೀಡುವಂತೆ ಈಶ್ವರಪ್ಪ ಆಪ್ತರು ಮತ್ತು ಇಲಾಖೆ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ. ಇದರಿಂದಾಗಿ ಬೇಸತ್ತು ಹಣ ಬಿಡುಗಡೆ ಮಾಡಲು ಸೂಚನೆ ನೀಡುವಂತೆ ಪ್ರಧಾನಿ ಮೋದಿಗೆ ಗುತ್ತಿಗೆದಾರ ಸಂತೋಷ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಟಿಪ್ಪು ಇತಿಹಾಸ ತಾಲಿಬಾನ್‌, ಐಸಿಸ್‌ ಮತಾಂಧರಷ್ಟೇ ಘೋರ: ಬಿಜೆಪಿ ವಾಗ್ದಾಳಿ