ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ನ್ಯೂಜಿಲೆಂಡ್ 235 ರನ್ ಗಳಿಗೆ ಆಲೌಟ್ ಆಗಿದೆ. ಬಳಿಕ ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 19 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ.
ರವೀಂದ್ರ ಜಡೇಜ 65ಕ್ಕೆ 5 ವಿಕೆಟ್ ಹಾಗೂ ವಾಷಿಂಗ್ಟನ್ ಸುಂದರ್ 81ಕ್ಕೆ 4 ವಿಕೆಟ್ ಉರುಳಿಸಿ ಉತ್ತಮ ಪ್ರದರ್ಶನ ತೋರಿದರು. ಆದರೆ, ಭಾರತದ ಬ್ಯಾಟಿಂಗ್ ವೈಫಲ್ಯ ಮತ್ತೆ ಮುಂದುವರೆಯಿತು. ಯಶಸ್ವಿ ಜೈಸ್ವಾಲ್ (30), ರೋಹಿತ್ ಶರ್ಮಾ (18) ಮೊಹಮ್ಮದ್ ಸಿರಾಜ್ (0) ಹಾಗೂ ವಿರಾಟ್ ಕೊಹ್ಲಿ (4) ರನ್ ಗಳಿಸಿ ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿದರು. ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಕ್ರೀಸಿನಲ್ಲಿದ್ದಾರೆ.
ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲಿ 14ನೇ ಸಲ ಐದು ವಿಕೆಟ್ ಪಡೆಯುವ ಮೂಲಕ ಅತ್ಯಂತ ಹೆಚ್ಚಿನ ವಿಕೆಟ್ ಪಡೆದ ಟೀಂ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದರು.
ಬೆಂಗಳೂರು ಪಂದ್ಯದಲ್ಲಿ 8 ವಿಕೆಟ್ ಹಾಗೂ ಪುಣೆ ಪಂದ್ಯದಲ್ಲಿ 113 ರನ್ ಗಳಿಂದ ಸೋತು ಸರಣಿಯಲ್ಲಿ 2-0 ಹಿನ್ನಡೆ ಅನುಭವಿಸಿರುವ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ ನಲ್ಲಿ ಸ್ಥಾನ ಪಡೆಯಲು ಹೆಣಗಾಡುತ್ತಿದೆ.
ರಾಜ್ಕೋಟ್: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಅಮೋಘ ದ್ವಿಶತಕ ಮತ್ತು ಜಡೇಜಾ ಸ್ಪಿನ್ ದಾಳಿ (5 ವಿಕೆಟ್ ನೆರವಿನಿಂದ ಭಾರತ ತಂಡ 434 ರನ್‌ಗಳಿಂದ ಗೆದ್ದು ಬೀಗಿದೆ. ಆ ಮೂಲಕ 5 ಟೆಸ್ಟ್ ಸರಣಿಯ ಕೈವಶ ಮಾಡಿಕೊಳ್ಳಲು ಇನ್ನೊಂದು ಹೆಜ್ಜೆ ಬಾಕಿ ಇದೆ.
ಟೀಂ ಇಂಡಿಯಾ ನೀಡಿದ್ದ 557 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ 122ಕ್ಕೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. 5 ಟೆಸ್ಟ್ ಸರಣಿಯಲ್ಲಿ ಈಗ ಭಾರತ 2 ಪಂದ್ಯಗಳನ್ನು ಗೆದ್ದಿದೆ. ಇಂಗ್ಲೆಂಡ್ ಒಂದು ಪಂದ್ಯ ಗೆದ್ದಿದೆ. ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ 434 ರನ್‌ಗಳ ದಾಖಲೆ ಜಯ – ಭಾರತದ ಟಾಪ್-5 ಟೆಸ್ಟ್ ಲಿಸ್ಟ್!
557 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ತಂಡದ ಬ್ಯಾಟಿಂಗ್‌ಗೆ ಆಧಾರವಾಗಿ ಯಾರೂ ನಿಲ್ಲಲೇ ಇಲ್ಲ. ತಂಡದ ಮೊತ್ತ 28 ರನ್ ಆದಾಗ ಇಂಗ್ಲೆಂಡ್ ಆಗಲೇ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ಮೊದಲ ಇನ್ನಿಂಗ್ಸ್‌ನಲ್ಲಿ 153 ರನ್‌ಗಳ ಸ್ಫೋಟಕ ಆಟವಾಡಿದ್ದ ಆರಂಭಿಕ ಆಟಗಾರ ಬೆನ್ ಡಕೆಟ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 4 ರನ್ ಗಳಿಸಿ ಔಟಾದರು.
6ನೇ ಓವರ್‌ನಲ್ಲಿ ಇಂಗ್ಲೆಂಡ್ ತಂಡ 15 ರನ್ ಗಳಿಸಿದ್ದಾಗ ಡಕೆಟ್ ಔಟಾದರು. ಮತ್ತೆ ಮೂರು ರನ್ ಸೇರಿಸುವಷ್ಟರಲ್ಲಿ ಇನ್ನೊಬ್ಬ ಆರಂಭಿಕ ಆಟಗಾರ ಝಕ್ ಕ್ರಾಲಿ 11 ರನ್ ಗೆ ಔಟಾದರು. ಬೂಮ್ರಾ ಎಸೆತಕ್ಕೆ ಕ್ರಾಲಿ ಎಲ್‌ಬಿಡಬ್ಲ್ಯೂಗೆ ಬಲಿಯಾದರು. ಇದನ್ನೂ ಓದಿ: ತಾಯಿ ಆಸ್ಪತ್ರೆಯಲ್ಲಿದ್ದರೂ ದೇಶಕ್ಕಾಗಿ ಓಡೋಡಿ ಬಂದ ಅಶ್ವಿನ್!
10ನೇ ಓವರ್‌ನಲ್ಲಿ ಜಡೇಜಾ ಎಸೆತಕ್ಕೆ ಬ್ಯಾಟ್ ಬೀಸಿದ ಓಲ್ಲಿ ಪೊಪೆ 3 ರನ್ ಗಳಿಸಿ ಔಟಾದರು. 12ನೇ ಓವರ್‌ನಲ್ಲಿ ಜಾನಿ ಬೇರ್‌ಸ್ಟೋ 4 ರನ್ ಗಳಿಸಿ ರವೀಂದ್ರ ಜಡೇಜಾಗೆ ಎಲ್‌ಬಿಡಬ್ಲ್ಯೂಗೆ ಬಲಿಯಾದರು.
ತಂಡದ ಮೊತ್ತ 50 ತಲುಪಿದಾಗ ಇಂಗ್ಲೆಂಡ್ ಮತ್ತೆ 3 ವಿಕೆಟ್ ಕಳೆದುಕೊಂಡಿತು. ಜೋ ರೂಟ್ 4 ರನ್ ಗೆ ಔಟಾದರೆ, ಬೆನ್ ಸ್ಟೋಕ್ಸ್ 15 ಹಾಗೂ ರೆಹಾನ್ ಅಹ್ಮದ್ ಶೂನ್ಯ ಸುತ್ತಿ ಪೆವಿಲಿಯನ್‌ನತ್ತ ಮುಖ ಮಾಡಿದರು.
36ನೇ ಓವರ್‌ನಲ್ಲಿ ಬೆನ್ ಫೋಕ್ಸ್ 16 ರನ್ ಗಳಿಸಿ ಜಡೇಜಾ ಬೌಲಿಂಗ್‌ನಲ್ಲಿ ಔಟಾದರು. 37ನೇ ಓವರ್‌ನಲ್ಲಿ ತಂಡದ ಮೊತ್ತ 91 ತಲುಪಿದಾಗ ಟಾಮ್ ಹಾರ್ಟ್ಲಿ ಔಟಾದರು. ಕೊನೆಯದಾಗಿ ಮಾರ್ಕ್ ವುಡ್ 33 ರನ್ ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು.
ಮತ್ತೆ ಟೀಂ ಸೇರಿಕೊಂಡ ಅಶ್ವಿನ್
ಫ್ಯಾಮಿಲಿ ಎಮರ್ಜೆನ್ಸಿ ಎಂದು ರಾಜ್‌ಕೋಟ್‌ನಿಂದ ಹೊರಟಿದ್ದ ರವಿಚಂದ್ರನ್ ಅಶ್ವಿನ್ ಇಂದು ಮತ್ತೆ ತಂಡಕ್ಕೆ ವಾಪಾಸ್ ಆದರು. ಈ ಪಂದ್ಯಲ್ಲಿ 1 ವಿಕೆಟ್ ಪಡೆದರು.
ರಾಜ್ಕೋಟ್: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England) ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ (Team India) ಇಂಗ್ಲೆಂಡ್‍ಗೆ 557 ರನ್‍ಗಳ ಬೃಹತ್ ಗುರಿ ನೀಡಿದೆ.
ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಎರಡನೇ ದ್ವಿಶತಕ ಹಾಗೂ ಶುಭಮನ್ ಗಿಲ್ ಮತ್ತು ಸರ್ಫರಾಜ್ ಖಾನ್ ಅರ್ಧಶತಕದ ನೆರವಿನಿಂದ ಭಾರತ ಈ ಮೊತ್ತ ಕಲೆಹಾಕಿದೆ. ಮೂರನೇ ದಿನದ ಆಟದ ವೇಳೆ ಗಾಯಗೊಂಡು ಹೊರಹೋಗಿದ್ದ ಜೈಸ್ವಾಲ್, ಇಂದು ಮತ್ತೆ ಕ್ರೀಸ್‍ಗೆ ಆಗಮಿಸಿ ತಮ್ಮ ಶತಕವನ್ನು ದ್ವಿಶತಕ್ಕೆ ಏರಿಸಿದರು. 236 ಎಸೆತಗಳಲ್ಲಿ 214 ರನ್ ಗಳಿಸಿದ ಅವರು ಇನ್ನಿಂಗ್ಸ್‍ನಲ್ಲಿ 12 ಸಿಕ್ಸರ್ ಹಾಗೂ 14 ಬೌಂಡರಿಗಳನ್ನು ಸಿಡಿಸಿದರು.
91 ರನ್ ಗಳಿಸಿ ಗಿಲ್ ಶತಕ ವಂಚಿತರಾದರು. ಎರಡನೇ ಇನ್ನಿಂಗ್ಸ್‍ನಲ್ಲೂ ಸರಾಗವಾಗಿ ಬ್ಯಾಟ್ ಬೀಸಿದ ಸರ್ಫರಾಜ್ ಖಾನ್ 72 ಎಸೆತಗಳಲ್ಲಿ 68 ರನ್ ದಾಖಲಿಸಿದರು. ತಂಡದ ಮೊತ್ತ 430 ರನ್ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು.
ಇಂಗ್ಲೆಂಡ್ ಪರ ಜೋ ರೋಟ್, ಟಾಮ್ ಹಾಟ್ರ್ಸ್ ಹಾಗೂ ರೆಹಾನ್ ಅಹಮದ್ ತಲಾ ಒಂದು ವಿಕೆಟ್ ಉರುಳಿಸಿದರು.
ಯಶಸ್ವಿ ಜೈಸ್ವಾಲ್ ಶತಕದ ನೆರವಿನಿಂದ ಟೀಂ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 322 ರನ್‍ಗಳ ಮುನ್ನಡೆ ಸಾಧಿಸಿತ್ತು. ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ 19 ರನ್ ಗಳಿಸಿ ಔಟಾಗಿದ್ದರು. ನಂತರ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಉತ್ತಮ ಜೊತೆಯಾಟವಾಡಿದರು. ಜೈಸ್ವಾಲ್ 103 (133 ಬಾಲ್, 5 ಸಿಕ್ಸರ್, 9 ಫೋರ್) ಸಿಡಿಸಿ ಮಿಂಚಿದ್ದರು. ಆಟದ ವೇಳೆ ಬೆನ್ನು ನೋವಿನ ಸಮಸ್ಯೆಯಿಂದ ರಿಟೈರ್ಡ್ ಹರ್ಟ್ ಆಗಿ ಹೊರನಡೆದಿದ್ದರು. ರಜತ್ ಪಾಟಿದಾರ್ ಶೂನ್ಯಕ್ಕೆ ಔಟಾದರು. ಶುಭಮನ್ ಗಿಲ್ ಅರ್ಧಶತಕ ಬಾರಿಸಿ (64) ಸಿಡಿಸಿದ್ದರು.