Tag: 370 article

  • ಆರ್ಟಿಕಲ್ 370 ತೆಗೆದಿದ್ದೇ ಪಹಲ್ಗಾಮ್ ನರಮೇಧಕ್ಕೆ ಕಾರಣ: ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ

    ಆರ್ಟಿಕಲ್ 370 ತೆಗೆದಿದ್ದೇ ಪಹಲ್ಗಾಮ್ ನರಮೇಧಕ್ಕೆ ಕಾರಣ: ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ

    ಮಂಡ್ಯ: ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದಿರುವುದೇ ಪಹಲ್ಗಾಮ್ ಘಟನೆ ಕಾರಣ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ (Ramesh Bandisiddegowda) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಶ್ರೀರಂಗಪಟ್ಟಣದಲ್ಲಿ ಪಹಲ್ಗಾಮ್‌ನಲ್ಲಿ (Pahalgam) ನಡೆದ ಉಗ್ರರ ದಾಳಿಯ ಕುರಿತು ಮಾತನಾಡಿದ ಅವರು, ಆರ್ಟಿಕಲ್ 370 ತೆಗೆಯೋದಕ್ಕೂ ಮೊದಲು ಯೋಚನೆ ಮಾಡಬೇಕಿತ್ತು. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರ ಅತಿಯಾದ ಆತ್ಮವಿಶ್ವಾಸದಿಂದ ಘಟನೆ ನಡೆದಿದೆ ಎನ್ನುವ ಮೂಲಕ ಘಟನೆಗೆ ಪರೋಕ್ಷವಾಗಿ ಬಿಜೆಪಿ ಕಾರಣ ಎಂದಿದ್ದಾರೆ. ಇದನ್ನೂ ಓದಿ: ರೈಫಲ್‌ ಕಸಿದುಕೊಳ್ಳಲು ಹೋಗಿ ಉಗ್ರರ ಗುಂಡೇಟಿಗೆ ಕುದುರೆ ರೈಡರ್‌ ಬಲಿ

    ಆರ್ಟಿಕಲ್ 370 ತೆಗೆಯುವ ಮುನ್ನ ಕಾಶ್ಮೀರದಲ್ಲಿ (Kashmir) ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿತ್ತು. ಅವರ ದುಡುಕಿನ ನಿರ್ಧಾರದಿಂದ ಈ ಘಟನೆ ನಡೆದಿದೆ. ಜನರ ಭಾವನೆ ಅರ್ಥ ಮಾಡಿಕೊಂಡು ಆರ್ಟಿಕಲ್ 370 ತೆಗೆಯಬೇಕಿತ್ತು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಹಿಳೆಯರಿಂದ ಪುರುಷರನ್ನು ಬೇರ್ಪಡಿಸಿ ಹತ್ಯೆ – 20 ನಿಮಿಷದಲ್ಲಿ ನರಮೇಧ ಮಾಡಿದ್ದು ಹೇಗೆ?

    ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತರಲ್ಲಿ ಮೂವರು ಕನ್ನಡಿಗರಾಗಿದ್ದಾರೆ.

  • 370 ರದ್ದತಿಗೆ ವರ್ಷ- ಬಿಜೆಪಿ ನಾಯಕನಿಗೆ ಉಗ್ರರ ಗುಂಡೇಟು

    370 ರದ್ದತಿಗೆ ವರ್ಷ- ಬಿಜೆಪಿ ನಾಯಕನಿಗೆ ಉಗ್ರರ ಗುಂಡೇಟು

    -ಪೊಲೀಸ್ ಪೋಸ್ಟ್ ಮೇಲೆ ಗ್ರೆನೆಡ್ ದಾಳಿ

    ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನೆಲೆ ಜಮ್ಮು ಕಾಶ್ಮೀರದಲ್ಲಿ ಎರಡು ದಿನ ಕರ್ಫ್ಯೂ ವಿಧಿಸಲಾಗಿದೆ. ಮಂಗಳವಾರ ಸ್ಥಳೀಯ ಬಿಜೆಪಿ ಮುಖಂಡನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

    ಆರಿಫ್ ಅಹ್ಮದ್ ಶಾ ಗುಂಡಿನ ದಾಳಿಗೊಳಗಾದ ಸ್ಥಳೀಯ ಬಿಜೆಪಿ ಮುಖಂಡ. ಕುಲಗಾಮ ಜಿಲ್ಲೆಯ ಅಖರಾನ್ ವ್ಯಾಪ್ತಿಯಲ್ಲಿ ರಾತ್ರಿ ಸುಮಾರು 9.30ಕ್ಕೆ ಉಗ್ರರು ಆರಿಫ್ ಮೇಲೆ ಗುಂಡು ಹಾರಿಸಿದ್ದಾರೆ. ಕೂಡಲೇ ಆರಿಫ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಇತ್ತ ಪುಲ್ವಾಮಾದಲ್ಲಿ ಮಂಗಳವಾರ ತಡರಾತ್ರಿ ವನ್ಪೊರಾ ಪೊಲೀಸ್ ಪೋಸ್ಟ್ ಮೇಲೆ ಆತಂಕವಾದಿಗಳು ಗ್ರೆನೆಡ್ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮೂವರು ಪೊಲೀಸರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಗ್ರೆನೆಡ್ ದಾಳಿಯಾಗ್ತಿದ್ದಂತೆ ಪೊಲೀಸರು ಸಹ ಫೈರಿಂಗ್ ಮಾಡಿದ್ದಾರೆ.

  • 370 ವಿಧಿ ರದ್ದು- ಪಾಕ್ ಮನವಿಯಂತೆ ವಿಶ್ವಸಂಸ್ಥೆಯಲ್ಲಿ ರಹಸ್ಯ ಸಭೆ

    370 ವಿಧಿ ರದ್ದು- ಪಾಕ್ ಮನವಿಯಂತೆ ವಿಶ್ವಸಂಸ್ಥೆಯಲ್ಲಿ ರಹಸ್ಯ ಸಭೆ

    ನವದೆಹಲಿ: ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದೆ. ಈ ಸಂಬಂಧ ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಹಸ್ಯ ಸಭೆ ನಡೆಯಲಿದೆ.

    ಜಮ್ಮು ಮತ್ತು ಕಾಶ್ಮೀರ ವಿಚಾರ ತುಂಬಾ ಸೂಕ್ಷ್ಮವಾದ ವಿಚಾರವಾದ ಕಾರಣ. ಈ ವಿಚಾರ ಕುರಿತು ಆಗಸ್ಟ್ 16ರಂದು ನಾಲ್ಕು ಗೋಡೆಗಳ ಮಧ್ಯೆ ರಹಸ್ಯವಾಗಿ ಚರ್ಚಿಸಲಾಗುವುದು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ ಎನ್ನಲಾಗಿದೆ. ಇದನ್ನು ಓದಿ: ಕಾಶ್ಮೀರದ ವಿಶೇಷ ಸ್ಥಾನಮಾನ, ಅಧಿಕಾರ ರದ್ದು-ರಾಜ್ಯಸಭೆಯಲ್ಲಿ ಅಮಿತ್ ಶಾ ಘೋಷಣೆ

    ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ತುರ್ತು ಸಭೆ ಕರೆಯುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದಿರುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಅವರು ಹೇಳಿದ್ದಾರೆ. ಈ ಬೆನ್ನಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಹಸ್ಯ ಸಭೆ ನಡೆಸಲಾಗುತ್ತಿದೆ.