Tag: 370 ನೇ ವಿಧಿ

  • ಆರ್ಟಿಕಲ್ 370ಯನ್ನು ಮತ್ತೆ ತರುವ ಭರವಸೆ ನಾನು ನೀಡಲ್ಲ: ಆಜಾದ್

    ಆರ್ಟಿಕಲ್ 370ಯನ್ನು ಮತ್ತೆ ತರುವ ಭರವಸೆ ನಾನು ನೀಡಲ್ಲ: ಆಜಾದ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ(Jammu and Kashmir) 370 ನೇ ವಿಧಿಯನ್ನು(Article 370) ಮರುಸ್ಥಾಪಿಸುವ ಭರವಸೆಯನ್ನು ನಾನು ನೀಡುವುದಿಲ್ಲ. ಸುಳ್ಳು ಭರವಸೆಗಳನ್ನು ನೀಡುವುದರಲ್ಲಿ ನನಗೆ ನಂಬಿಕೆಯಿಲ್ಲ ಎಂದು ಕಾಂಗ್ರೆಸ್‌ನ ಮಾಜಿ ನಾಯಕ ಗುಲಾಂ ನಬಿ ಆಜಾದ್(Ghulam Nabi Azad) ಅವರು ಭಾನುವಾರ ಹೇಳಿದರು.

    ಉತ್ತರ ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಆಜಾದ್, 370 ನೇ ವಿಧಿಯನ್ನು ಮರುಸ್ಥಾಪಿಸಲು ಲೋಕಸಭೆಯಲ್ಲಿ ಸುಮಾರು 350 ಮತಗಳು ಮತ್ತು ರಾಜ್ಯಸಭೆಯಲ್ಲಿ 175 ಮತಗಳು ಬೇಕು. ಇದು ಯಾವುದೇ ರಾಜಕೀಯ ಪಕ್ಷಗಳು ಹೊಂದಿರದ ಅಥವಾ ಎಂದಿಗೂ ಪಡೆಯದಿರುವ ಸಂಖ್ಯೆ. ಕಾಂಗ್ರೆಸ್ 50 ಕ್ಕಿಂತ ಕಡಿಮೆ ಸ್ಥಾನಗಳಿಗೆ ಕುಸಿದಿದೆ. ಆದರೂ ಅವರು 370 ನೇ ವಿಧಿಯನ್ನು ಮರುಸ್ಥಾಪಿಸುತ್ತೇವೆ ಎಂದು ಹೇಳಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.

    ನಮ್ಮ ರಾಜಕೀಯ ಅಜೆಂಡಾದಲ್ಲಿ ರಾಜ್ಯತ್ವ, ಭೂಮಿ ಮತ್ತು ಸ್ಥಳೀಯರಿಗೆ ಉದ್ಯೋಗಗಳನ್ನು ನೀಡುವುದೇ ಸೇರಿವೆ. ಏಕೆಂದರೆ ಇವು ಸಾಧಿಸಬಹುದಾದ ವಿಚಾರಗಳು. ಗೃಹ ಸಚಿವರು ತಂದ 370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಣಯದ ಪರವಾಗಿ ಮತ ಚಲಾಯಿಸಿದ್ದೇನೆ ಎಂದು ಕೆಲವರು ನನ್ನನ್ನು ದೂಷಿಸಿದ್ದಾರೆ. ಆದರೆ ನಾನು ರದ್ದತಿಯ ವಿರುದ್ಧ ಮತ ಹಾಕಿದ್ದೇನೆ. ಸಂಸತ್ತಿನ ಕೆಲಸದ ಬಗ್ಗೆ ತಿಳಿಯದ ಈ ಜನರು, ನಾನು 370 ನೇ ವಿಧಿಯ ವಿರುದ್ಧ ಮತ ಹಾಕಿದ್ದೇನೆ ಎಂದು ಹೇಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್‌ – ಉದ್ಧವ್‌ ಬಣದ ಐವರು ಅರೆಸ್ಟ್‌, 40 ಮಂದಿ ವಿರುದ್ಧ FIR

    ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಣಿವೆ ಪ್ರದೇಶದಲ್ಲಿ 4 ಹಾಗೂ ಜಮ್ಮು ವಿಭಾಗದಲ್ಲಿ 3 ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ. ಆ ಅವಧಿಯಲ್ಲಿ ನಾನು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದ್ದೇನೆ. ಚುನಾವಣೆ ಸಂದರ್ಭದಲ್ಲಿ ನನಗೆ 4 ಮತ ಬಿದ್ದರೂ, ಲಕ್ಷಗಟ್ಟಲೆ ಮತ ಪಡೆದರೂ ಜನರಿಗೆ ಮೋಸ ಮಾಡುವುದಿಲ್ಲ ಎಂದು ಸಾರ್ವಜನಿಕ ಸಭೆಗೆ ಭರವಸೆ ನೀಡಿದರು. ಇದನ್ನೂ ಓದಿ: 21 ವರ್ಷಗಳ ಬಳಿಕ ಈಡೇರಿದ ಸಂಕಲ್ಪ- ಕೊನೆಗೂ ಗಡ್ಡ ತೆಗೆಸಿಕೊಂಡ ವ್ಯಕ್ತಿ

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ಸಿಗೆ ದೇಶಕ್ಕಿಂತ ವೋಟ್ ಬ್ಯಾಂಕ್ ಮುಖ್ಯ- ಜೆಪಿ ನಡ್ಡಾ

    ಕಾಂಗ್ರೆಸ್ಸಿಗೆ ದೇಶಕ್ಕಿಂತ ವೋಟ್ ಬ್ಯಾಂಕ್ ಮುಖ್ಯ- ಜೆಪಿ ನಡ್ಡಾ

    ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕಿಂತ ವೋಟ್ ಬ್ಯಾಂಕ್ ಮುಖ್ಯ ಎಂದು ಹೇಳುವ ಮೂಲಕ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರು ಕಾಂಗ್ರೆಸ್ ಮೇಲೆ ಕಿಡಿಕಾರಿದ್ದಾರೆ.

    ಭಾನುವಾರ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನಡ್ಡಾ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಪಡಿಸುವುದನ್ನು ಬೆಂಬಲಿಸದ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ಪ್ರಧಾನಿ ಮೋದಿ ಅವರು ಒಂದು ದೇಶದ ಪರಿಕಲ್ಪನೆಯನ್ನು ಅರಿತುಕೊಂಡಿದ್ದಾರೆ. ಒಂದು ದೇಶಕ್ಕೆ ಒಂದೇ ಸಂವಿಧಾನ, ಒಂದೇ ಚಿಹ್ನೆ ಎಂಬುದನ್ನು ಕಾಂಗ್ರೆಸ್‍ನವರು ಏಕೆ ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವೇ 370 ನೇ ವಿಧಿಯನ್ನು ತಾತ್ಕಾಲಿಕ ಎಂದು ಹೇಳುತ್ತದೆ. ಹಾಗಾದರೆ 370 ವಿಧಿ ಒಳ್ಳೆಯದೇ ಆಗಿದ್ದರೆ ಅದನ್ನು ಅವರು ಏಕೆ ಶಾಶ್ವತಗೊಳಿಸಲಿಲ್ಲ? ಕಾಂಗ್ರೆಸ್‍ನವರು ಒಂದು ಸಮಯದಲ್ಲಿ 400 ಜನ ಸಂಸದರನ್ನು ಹೊಂದಿದ್ದರು. ಅ ಸಮಯದಲ್ಲಿ ಅದನ್ನು ಏಕೆ ಶಾಶ್ವತಗೊಳಿಸಲಿಲ್ಲ ಎಂದು ಪ್ರಶ್ನೆ ಮಾಡಿದರು.

    370 ನೇ ವಿಧಿ ದೇಶಕ್ಕೆ ಮಾರಕ. ಇದು ರಾಷ್ಟ್ರೀಯ ಹಿತಾಸಕ್ತಿಯನ್ನು ಹೊಂದಿಲ್ಲ ಎಂಬುದು ಕಾಂಗ್ರೆಸ್ಸಿನವರಿಗೂ ಗೊತ್ತಿದೆ. ಆದರೆ ಅದನ್ನು ಅವರು ವೋಟ್ ಬ್ಯಾಂಕಿಗಾಗಿ ಬಳಸಿಕೊಳ್ಳುತ್ತಿದ್ದರು. ಯಾಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕಿಂತ ವೋಟ್ ಮುಖ್ಯ ಎಂದು ಜೆಪಿ ನಡ್ಡಾ ಕಿಡಿಕಾರಿದರು.

    ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ನಂತರದಲ್ಲಿ, ಪಾಕಿನಿಂದ ಹೈದರಾಬಾದ್‍ನಂತಹ ನಗರಗಳಿಗೆ ಬಂದ ಜನರು ಅಲ್ಲಿ ರಾಜಕೀಯ ನಾಯಕರಾದರು, ಉತ್ತಮ ಭವಿಷ್ಯ ಕಟ್ಟಿಕೊಂಡರು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲೇ ಇದ್ದ ಮೂಲ ನಿವಾಸಿಗಳು ಕೌನ್ಸಿಲರ್ ಆಗಲು ಕೂಡ ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ 370 ನೇ ವಿಧಿ ಎಂದು ನಡ್ಡಾ ಬೇಸರ ವ್ಯಕ್ತಪಡಿಸಿದರು.

    ಈಗ ಈ ಕೆಟ್ಟ ಪದ್ಧತಿ ರದ್ದಾಗಿದೆ ಈಗ ಯಾರು ಬೇಕಾದರೂ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರಿಗೂ ಅಲ್ಲಿ ಚುನಾವಣೆಗೆ ನಿಲ್ಲಲು ಸ್ಥಾನ ಸಿಕ್ಕಿದೆ. ಭಾರತ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶದ 500 ರಾಜ್ಯಗಳನ್ನು ಒಂದು ಮಾಡಿದರು. ಆದರೆ ಕಾಶ್ಮೀರ ಒಂದನ್ನು ನೆಹರೂ ಅವರಿಗೆ ಬಿಟ್ಟುಕೊಟ್ಟು ತಪ್ಪು ಮಾಡಿದರು. ಅದೂ ಈಗ ಸಮಸ್ಯೆಯಾಗಿದೆ ಎಂದರು.

    ಇದೇ ವೇಳೆ ಕೆಲವು ಟಿಡಿಪಿ ನಾಯಕರು ಬಿಜೆಪಿಗೆ ಸೇರ್ಪಡೆಯಾದ ವಿಚಾರದ ಬಗ್ಗೆ ಮಾತನಾಡಿದ ನಡ್ಡಾ, ಟಿಆರ್‍ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸರ್ವಾಧಿಕಾರಿ ಶೈಲಿಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ರಾವ್ ಅವರು ತಮ್ಮ ಮತ್ತು ತಮ್ಮ ಕುಟುಂಬದ ಮೇಲೆ ಮಾತ್ರ ಗಮನ ಕೊಡುತ್ತಾರೆ ಎಂದು ಆರೋಪಿಸಿದ ಅವರು, ಟಿಆರ್‍ಎಸ್ ಸರ್ಕಾರವು ಎನ್‍ಡಿಎ ಸರ್ಕಾರದ ‘ಆಯುಷ್ಮಾನ್ ಭಾರತ್’ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿಲ್ಲ, ಇದರಿಂದ ಜನರು ಅದರ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.