Tag: 308 ಮಹಿಳೆ

  • ಸಂಜಯ್ ದತ್ 308 ಹುಡ್ಗೀರನ್ನು ಬಲೆಗೆ ಬೀಳಿಸಿಕೊಂಡಿದ್ದು ಹೇಗೆ? ರಹಸ್ಯ ಬಿಚ್ಚಿಟ್ಟ ನಿರ್ದೇಶಕ ಹಿರಾನಿ

    ಸಂಜಯ್ ದತ್ 308 ಹುಡ್ಗೀರನ್ನು ಬಲೆಗೆ ಬೀಳಿಸಿಕೊಂಡಿದ್ದು ಹೇಗೆ? ರಹಸ್ಯ ಬಿಚ್ಚಿಟ್ಟ ನಿರ್ದೇಶಕ ಹಿರಾನಿ

    ಮುಂಬೈ: ರಾಜ್‍ಕುಮಾರ್ ಹಿರಾನಿ ನಿರ್ದೇಶನದ ‘ಸಂಜು’ ಚಿತ್ರದ ಟ್ರೇಲರ್ ಬಿಡುಗಡೆ ಆದಾಗಿನಿಂದಲೂ ನಟ ಸಂಜಯ್ ದತ್ ರವರ ನಿಜ ಜೀವನ ಚರ್ಚೆಯಲ್ಲಿದೆ.

    ಇತ್ತೀಚೆಗೆ ಸಂಜು ಚಿತ್ರದ ನಿರ್ದೇಶಕ ಸಂಜು ಬಾಬಾ ತಮ್ಮ ನಿಜ ಜೀವನದಲ್ಲಿ ಸುಮಾರು 308 ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರೆಂಬ ರಹಸ್ಯ ಟ್ರೇಲರ್ ನಲ್ಲಿ ರಿವೀಲ್ ಆಗಿತ್ತು. ಖಾಸಗಿ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ಹಿರಾನಿ, ಸಂಜಯ್ ದತ್ ಹೇಗೆ ಯುವತಿಯರನ್ನು ಬಲೆಗೆ ಬೀಸಿಕೊಳ್ಳುತ್ತಿದ್ದರು ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

    ಸಂಜಯ್ ದತ್ ಹುಡುಗಿಯರನ್ನ ತನ್ನ ತಾಯಿಯ ಸಮಾಧಿಯೆಂದು ಇನ್ಯಾರದೊ ಸಮಾಧಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ನಾನು ನನ್ನ ತಾಯಿಯನ್ನು ನಿನಗೆ ಪರಿಚಯಿಸಲು ಇಲ್ಲಿಗೆ ಕರೆ ತಂದಿದ್ದೇನೆ. ಹೀಗೆ ಭಾವನಾತ್ಮಕ ಮಾತುಗಳನ್ನಾಡುವ ಮೂಲಕ ಯುವತಿಯರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು ಎಂದು ಹಿರಾನಿ ಸತ್ಯವೊಂದನ್ನು ತೆರೆದಿಟ್ಟಿದ್ದಾರೆ.

    ಇದೇ ಸಂದರ್ಶನದಲ್ಲಿ ಹಿರಾನಿ, ಸಂಜಯ್ ದತ್‍ಗೆ ಸಂಬಂಧಪಟ್ಟ ಇನ್ನೊಂದು ರಹಸ್ಯವನ್ನ ಹೊರಹಾಕಿದ್ದಾರೆ. ತಾನು ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಬ್ರೇಕಪ್ ಆದ ನಂತರ ಸಂಜು ತನ್ನ ಸ್ನೇಹಿತನ ಕಾರನ್ನು ತೆಗೆದುಕೊಂಡು ತನ್ನ ಎಕ್ಸ್ ಗೆಳೆತಿಯ ಮನೆ ಹೊರಗೆ ನಿಲುಗಡೆ ಮಾಡಿದ್ದ ಕಾರಿಗೆ ಡಿಕ್ಕಿ ಹೊಡೆಸಿದ್ದರು. ಅದು ತನ್ನ ಗೆಳತಿಯ ಹೊಸ ಬಾಯ್ ಫ್ರೆಂಡ್‍ನದ್ದಾಗಿದ್ದು ಎರಡು ಕಾರುಗಳು ಹಾನಿಗೊಳಗಾಗಿದ್ದವು.

    ಜೂನ್ 29 ಕ್ಕೆ ಸಂಜು ಚಿತ್ರ ಬಿಡುಗಡೆಯಾಗಲಿದ್ದು, ಸಂಜಯ್ ದತ್‍ರವರ ಜೀವನ ಚರಿತ್ರೆಗೆ ಸಂಬಂಧಪಟ್ಟ ರಹಸ್ಯಗಳು ಈ ಸಂಜು ಚಿತ್ರದಲ್ಲಿ ನಿಮಗೆ ಕಾಣಲು ಸಿಗುತ್ತದೆ. ಚಲನಚಿತ್ರದಲ್ಲಿ ರಣ್‍ಬೀರ್ ಕಪೂರ್ ಸಂಜಯ್ ದತ್ ರವರ ಪಾತ್ರ ನಿರ್ವಹಿಸಿದ್ದು, ಜೊತೆ ಸೋನಮ್ ಕಪೂರ್, ಪರೇಷ್ ರಾವಲ್, ದಿಯಾ ಮಿರ್ಜಾ ಮತ್ತು ಅನುಷ್ಕಾ ಶರ್ಮಾ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.