Tag: 3ಡಿ

  • ಇದೇ ಮೊದಲ ಬಾರಿಗೆ ಜೀವಂತ 3ಡಿ ಮುದ್ರಿತ ಕಿವಿಯ ಯಶಸ್ವೀ ಕಸಿ

    ಇದೇ ಮೊದಲ ಬಾರಿಗೆ ಜೀವಂತ 3ಡಿ ಮುದ್ರಿತ ಕಿವಿಯ ಯಶಸ್ವೀ ಕಸಿ

    ವಾಷಿಂಗ್ಟನ್: ವೈದ್ಯಕೀಯ ಲೋಕ ದಿನೇ ದಿನೇ ಹೆಚ್ಚುತ್ತಿರುವ ಪ್ರಗತಿಯಿಂದಾಗಿ ರೋಗಿಗಳನ್ನು ಹಾಗೂ ಜನರ ಜೀವನವನ್ನು ಸರಾಗಗೊಳಿಸುತ್ತಿದೆ. ಇದೀಗ ವೈದ್ಯಕೀಯ ರಂಗದಲ್ಲಿ ಹೊಸ ಪ್ರಯತ್ನ ಮಾಡಲಾಗಿದೆ. ವಿಶ್ವದಲ್ಲೇ ಮೊದಲ ಬಾರಿಗೆ 3ಡಿ ಮುದ್ರಿತ ಜೀವಂತ ಕಿವಿಯನ್ನು ವ್ಯಕ್ತಿಯೊಬ್ಬರಿಗೆ ಕಸಿ ಮಾಡಲಾಗಿದೆ.

    ಹೌದು, ಜನಿಸುವಾಗಲೇ ಅಲ್ಪ ಸ್ವಲ್ಪ ಕಿವಿಯೊಂದಿಗೆ ಹುಟ್ಟಿದ ಯುವತಿಗೆ ತಮ್ಮ ಸ್ವಂತ ಜೀವಕೋಶಗಳಿಂದ 3ಡಿ ಕಿವಿಯನ್ನು ರಚಿಸಿ, ಅದನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಈ ಮೂಲಕ ವೈದ್ಯಕೀಯ ಲೋಕದಲ್ಲೊಂದು ಮೈಲಿಗಲ್ಲು ಸ್ಥಾಪನೆಯಾಗಿದೆ.

    ಮೆಕ್ಸಿಕೋ ಮೂಲದ ಯುವತಿ ಅಲೆಕ್ಸಾ ಹುಟ್ಟುವಾಗಲೇ ತಮ್ಮ ಬಲಭಾಗದ ಕಿವಿಯನ್ನು ಅಲ್ಪ ಸ್ವಲ್ಪವಾಗಿ ಹೊಂದಿದ್ದರು. ಇದೀಗ ವೈದ್ಯಕೀಯ ಲೋಕದ ಹೊಸ ಪ್ರಯತ್ನದ ಮೂಲಕ ಅವರ ಇನ್ನೊಂದು ಕಿವಿಯನ್ನು ಅನುಕರಿಸಿ 3ಡಿ ಮುದ್ರಣದ ಇನ್ನೊಂದು ಕಿವಿಯನ್ನು ರಚಿಸಿ ಕಸಿ ಮಾಡಲಾಗಿದೆ. ಇದನ್ನೂ ಓದಿ: ಜೂಮ್ ಕ್ಲಾಸ್ ಮಿಸ್ ಮಾಡ್ದೆ ಹಾಜರಾಗಿದ್ದ ಬೆಕ್ಕು – ಹ್ಯಾಟ್ ಕೊಟ್ಟ ವಿಶ್ವವಿದ್ಯಾಲಯ

    ವೈದ್ಯಕೀಯ ಲೋಕದ ಈ ಹೊಸ ಕ್ರಾಂತಿ ಸದ್ಯ 3ಡಿ ಮುದ್ರಿತ ಅಂಗಗಳನ್ನು ಜನರಿಗೆ ಜೋಡಿಸುವ ಪ್ರಯೋಗದ ಒಂದು ಭಾಗವಾಗಿದೆ. ಇದನ್ನು ಸಾಮಾನ್ಯ ವೈದ್ಯಕೀಯ ಲೋಕಕ್ಕೆ ತರುವುದಕ್ಕೂ ಮೊದಲು ಹಲವಾರು ಸುರಕ್ಷತಾ ತಪಾಸಣೆ ನಡೆಸಬೇಕಿದೆ. ಇದನ್ನೂ ಓದಿ: ಕರಾವಳಿ, ಮಲೆನಾಡಿನಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಆಕ್ಟೀವ್ – 10 ದಿನಗಳಲ್ಲಿ 4 ಕಡೆ ರಿಂಗಣಿಸಿದ ಲೊಕೇಷನ್ ಟ್ರೇಸ್

    ಜನರು ಹುಟ್ಟುವಾಗಲೇ ಅಥವಾ ಅಪಘಾತದಲ್ಲಿ ದೇಹದ ಅಂಗಗಳನ್ನು ಕಳೆದುಕೊಂಡರೆ, 3ಡಿ ಮುದ್ರಿತ ಜೀವಂತ ಅಂಗಗಳ ಕಸಿ ಮಾಡಬಹುದು ಎಂಬುದು ಇದೀಗ ಸಾಬೀತಾಗಿದೆ.

  • ವಿಶ್ವದ ಮೊದಲ 3ಡಿ ಕಲರ್ ಎಕ್ಸ್ ರೇ ಪ್ರಯೋಗ ಯಶಸ್ವಿ: ಏನಿದರ ವಿಶೇಷತೆ?

    ವಿಶ್ವದ ಮೊದಲ 3ಡಿ ಕಲರ್ ಎಕ್ಸ್ ರೇ ಪ್ರಯೋಗ ಯಶಸ್ವಿ: ಏನಿದರ ವಿಶೇಷತೆ?

    ಪ್ಯಾರಿಸ್: ಇಲ್ಲಿಯವರೆಗೆ ಕಪ್ಪು ಬಿಳುಪಿನಲ್ಲಿ ಹೊರ ಬರುತ್ತಿದ್ದ ಎಕ್ಸ್ ರೇ ಚಿತ್ರಗಳು ಇನ್ನು ಮುಂದೆ ಕಲರ್ ನಲ್ಲಿ ಬರಲಿದೆ. ವಿಶ್ವದ ಮೊದಲ 3ಡಿ ಕಲರ್ ಎಕ್ಸ್ ರೇ ಯಂತ್ರದ ಪ್ರಯೋಗವನ್ನು ನ್ಯೂಜಿಲೆಂಡ್ ವಿಜ್ಞಾನಿಗಳು ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ.

    ಯುರೋಪ್ ಪರಮಾಣು ಸಂಶೋಧನಾ ಕೇಂದ್ರ(ಸಿಇಆರ್ ಎನ್) ಭೌತಸಾಸ್ತ್ರದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ ಯಂತ್ರದಲ್ಲಿ ಮಾನವನ ದೇಹದ ಕಲರ್ ಎಕ್ಸ್ ರೇ ಮಾಡಿಸಲಾಗಿದ್ದು ಯಶಸ್ವಿಯಾಗಿ ಮೂಡಿ ಬಂದಿದೆ.

    ಹೊಸ ಕಲರ್ ಎಕ್ಸ್ ರೇ ವೈದ್ಯಕೀಯ ಸೇವೆ ಉತ್ತಮ ಪಡಿಸಲು ನೆರವಾಗಲಿದೆ. 3ಡಿ ಕಲರ್ ಎಕ್ಸ್ ರೇ ಲಭ್ಯವಾಗುವುದರಿಂದ ಸ್ಪಷ್ಟ ಹಾಗೂ ಹೆಚ್ಚು ನಿಖರ ಚಿತ್ರಗಳು ಲಭ್ಯವಾಗಲಿದ್ದು, ವೈದ್ಯರು ರೋಗಿಯ ಅನಾರೋಗ್ಯಕ್ಕೆ ನಿಖರ ಕಾರಣ ತಿಳಿಯಲು ಸಹಾಯಕವಾಗಲಿದೆ. ಅಲ್ಲದೇ ಚಿತ್ರದಲ್ಲಿ ಮಾಂಸಖಂಡ, ಮೂಳೆ ಹಾಗೂ ಸಣ್ಣ ಗಾತ್ರದ ಮೂಳೆಯ ನಡುವಿನ ವ್ಯತ್ಯಾಸದ ಬಗ್ಗೆ ಖಚಿತ ಮಾಹಿತಿ ನೀಡುತ್ತದೆ ಎಂದು ಸಿಇಆರ್ ಎನ್ ವಿಜ್ಞಾನಿಗಳು ತಿಳಿಸಿದ್ದಾರೆ.

    ವಿಶ್ವ ಸೃಷ್ಟಿಗೆ ಕಾರಣವಾದ ಈ ಫೋಟಾನ್(ದೇವಕಣ) ಹೆಚ್ಚಿನ ಅಧ್ಯಯನಕ್ಕೆ 2012 ರ ಜುಲೈನಲ್ಲಿ ಸಿಇಆರ್‍ಎನ್ ಸ್ವಿಟ್ಜರ್‍ಲೆಂಡ್ – ಫ್ರಾನ್ಸ್ ಗಡಿಯಲ್ಲಿ ಭೂಮಿಯ ಒಳಗೆ, 100 ಮೀಟರ್ ಆಳದಲ್ಲಿ, 27 ಕಿಮೀ ಉದ್ದದ ಸುರಂಗದಲ್ಲಿ ಕೊಳವೆ ಹಾಕಿ ಮಹಾಸ್ಪೋಟದ ಸಮಯದಲ್ಲಿ ಆದ ಕ್ರಿಯೆಯ ಅಧ್ಯಯನ ಮಾಡಿದ್ದರು. ಈ ಫೋಟಾನ್ ಗಳನ್ನು ಅಧ್ಯಯನಕ್ಕಾಗಿ ಸಿಇಆರ್‍ಎನ್ ಪಿಕ್ಸೆಲ್ ಪತ್ತೆ ಮಾಡಲು ಮೆಡಿಪಿಕ್ಸ್ ಅಭಿವೃದ್ಧಿ ಪಡಿಸಿತ್ತು. ಕ್ಯಾಮೆರಾದಂತೆ ಕೆಲಸ ಮಾಡುವ ಈ ಮೆಡಿಪಿಕ್ಸ್ ಶಟರ್ ತೆರೆದಾಗ ದೇಹದ ಹೈ ರೆಸಲ್ಯೂಶನ್ ಚಿತ್ರವನ್ನು ಸೆರೆಯಾಗುತ್ತದೆ.

    ಈ ತಂತ್ರಜ್ಞಾನದಲ್ಲಿ ಬಳಕೆ ಮಾಡಲಾಗಿರುವ ಸಣ್ಣ ಹಾಗೂ ಹೆಚ್ಚು ರೆಸಲ್ಯೂಶನ್ ಇರುವ ಇಮೇಜಿಂಗ್ ಉಪಕರಣವನ್ನು ಬಳಕೆ ಮಾಡಲಾಗಿದ್ದು, ಈ ಮೂಲಕ ಪಡೆಯುವ ಚಿತ್ರಗಳನ್ನು ಇತರೇ ಯಾವುದೇ ಟೂಲ್ ಬಳಸಿ ಪಡೆಯಲು ಸಾಧ್ಯವಿಲ್ಲ ಎಂದು ಕ್ಯಾಂಟರ್ಬರಿ ವಿಶ್ವ ವಿದ್ಯಾಲಯದ ಫಿಲ್ ಬಟ್ಲರ್ ಹೇಳಿದ್ದಾರೆ.

    ಸದ್ಯ ಒಟಾಗೋ ಹಾಗೂ ಕ್ಯಾಂಟರ್ಬರಿ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸುವ ಈ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನ್ಯೂಜಿಲೆಂಡ್ ಮಾರ್ಸ್ ಬಯೋ ಸಂಸ್ಥೆಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.