Tag: 2nd ODI

  • IND vs ENG, 2nd ODI: ರೋಹಿತ್‌ ಅಬ್ಬರದ ಶತಕ, ಜಡೇಜಾ ಸ್ಪಿನ್‌ ಜಾದು – ಆಂಗ್ಲರ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ

    IND vs ENG, 2nd ODI: ರೋಹಿತ್‌ ಅಬ್ಬರದ ಶತಕ, ಜಡೇಜಾ ಸ್ಪಿನ್‌ ಜಾದು – ಆಂಗ್ಲರ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ

    * 2-0 ಮುನ್ನಡೆಯೊಂದಿಗೆ ಸರಣಿ ಗೆದ್ದ ಟೀಂ ಇಂಡಿಯಾ

    ಕಟಕ್‌: ಕ್ಯಾಪ್ಟನ್‌ ರೋಹಿತ್‌ ಶರ್ಮಾ ಅಬ್ಬರದ ಬ್ಯಾಟಿಂಗ್‌, ಆಲ್‌ರೌಂಡರ್‌ ಜಡೇಜಾ ಸ್ಪಿನ್‌ ಮೋಡಿಗೆ ಇಂಗ್ಲೆಂಡ್‌ ತತ್ತರಿಸಿದೆ. ಇಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಟೀಂ ಇಂಡಿಯಾ 4 ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿ ಗೆದ್ದಿದೆ.

    ಕಟಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. 49.5 ಓವರ್‌ಗಳಿಗೆ ಜೋಸ್‌ ಬಟ್ಲರ್‌ ಪಡೆ 304 ರನ್‌ಗಳಿಗೆ ಆಲೌಟ್‌ ಆಯಿತು. ಬೆನ್ ಡಕೆಟ್ 69, ಜೋ ರೂಟ್ 65, ಲಿಯಾಮ್ ಲಿವಿಂಗ್‌ಸ್ಟೋನ್ 41, ಜೋಸ್ ಬಟ್ಲರ್ 34, ಹ್ಯಾರಿ ಬ್ರೂಕ್ 31 ಹೊಡೆದು ಗಮನ ಸೆಳೆದರು. ಭಾರತಕ್ಕೆ ಇಂಗ್ಲೆಂಡ್‌ 305 ರನ್‌ಗಳ ಗುರಿ ನೀಡಿತು.

    ಟೀಂ ಇಂಡಿಯಾ ಪರ ಜಡೇಜಾ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದರು. ಜಡೇಜಾ 3, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ತಲಾ 1 ವಿಕೆಟ್‌ ಕಬಳಿಸಿದ್ದಾರೆ.

    ಭಾರತ ಪರ ನಾಯಕ ರೋಹಿತ್‌ ಶರ್ಮಾ ಶತಕ ಸಿಡಿಸಿ ಅಬ್ಬರಿಸಿದರು. 90 ಬಾಲ್‌ಗೆ 119 ರನ್‌ (12 ಫೋರ್‌, 7 ಸಿಕ್ಸರ್‌) ಸಿಡಿಸಿ ಮಿಂಚಿದರು. ಶುಭಮನ್‌ ಗಿಲ್‌ 60, ಶ್ರೇಯಸ್‌ ಅಯ್ಯರ್‌ 44, ಅಕ್ಷರ್‌ ಪಟೇಲ್‌ 41 ರನ್‌ ಗಳಿಸಿ ತಂಡದ ಗೆಲುವಿಗೆ ಸಾಥ್‌ ನೀಡಿದರು.

    ಅಂತಿಮವಾಗಿ ಟೀಂ ಇಂಡಿಯಾ 44.3 ಓವರ್‌ಗಳಿಗೆ 308 ರನ್‌ ಗಳಿಸಿ 4 ವಿಕೆಟ್‌ಗಳ ಜಯ ಸಾಧಿಸಿತು.

  • ಸ್ಟೇಡಿಯಂನಿಂದ ಮೈದಾನಕ್ಕೆ ಬಂದು ರೋಹಿತ್‍ರನ್ನು ತಬ್ಬಿಕೊಂಡ ಬಾಲಕ

    ಸ್ಟೇಡಿಯಂನಿಂದ ಮೈದಾನಕ್ಕೆ ಬಂದು ರೋಹಿತ್‍ರನ್ನು ತಬ್ಬಿಕೊಂಡ ಬಾಲಕ

    ರಾಯ್‍ಪುರ: ಭಾರತ (India) ಹಾಗೂ ನ್ಯೂಜಿಲೆಂಡ್ (New Zealand) ನಡುವಿನ ಎರಡನೇ ಏಕದಿನ ಪಂದ್ಯದ (2nd ODI) ನಡುವೆ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾರ (Rohit Sharma) ಅಭಿಮಾನಿ ಬಾಲಕನೋರ್ವ (Young Fan) ಸ್ಟೇಡಿಯಂನಿಂದ ಬಂದು ಮೈದಾನದಲ್ಲಿ ಶರ್ಮಾರನ್ನು ತಬ್ಬಿಕೊಂಡಿರುವ ಘಟನೆ ನಡೆದಿದೆ.

    ನ್ಯೂಜಿಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯ ರಾಯ್‍ಪುರದಲ್ಲಿ (Raipur) ನಡೆಯುತ್ತಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 108 ರನ್‍ಗಳ ಅಲ್ಪಮೊತ್ತಕ್ಕೆ ಆಲೌಟ್ ಆಯಿತು. ಆ ಬಳಿಕ ಈ ಮೊತ್ತವನ್ನು ಚೇಸಿಂಗ್ ಮಾಡಲು ಮೈದಾನಕ್ಕಿಳಿದ ರೋಹಿತ್ ಶರ್ಮಾ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಇದನ್ನೂ ಓದಿ: IND vs NZ 2nd ODI: ರಾಯ್‍ಪುರದಲ್ಲಿ ಟೀಂ ಇಂಡಿಯಾಗೆ ರಾಜ ಮರ್ಯಾದೆ – ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯದೊಂದಿಗೆ ಸರಣಿ ಕೈವಶ

    ಈ ನಡುವೆ 9.4 ಓವರ್‌ನಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೇ 51 ರನ್ ಗಳಿಸಿತ್ತು. ಈ ವೇಳೆ ರೋಹಿತ್ ಶರ್ಮಾರ ಅಭಿಮಾನಿ ಬಾಲಕನೋರ್ವ ಸ್ಟೇಡಿಯಂನಿಂದ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಮೈದಾನಕ್ಕೆ ಓಡಿ ಬಂದಿದ್ದಾನೆ. ಬಂದು ರೋಹಿತ್‍ರನ್ನು ನೋಡಿ ತಬ್ಬಿಕೊಂಡಿದ್ದಾನೆ. ಇದನ್ನೂ ಓದಿ: Will You Marry Me – ಆರೆಂಜ್ ಆರ್ಮಿ ಒಡತಿ ಕಾವ್ಯ ಮಾರನ್‍ಗೆ ಮದುವೆ ಪ್ರಸ್ತಾಪವಿಟ್ಟ ಪ್ರೇಕ್ಷಕ

    ಆ ಬಳಿಕ ಭದ್ರತಾ ಸಿಬ್ಬಂದಿ ಆ ಬಾಲಕನನ್ನು ಹಿಡಿದಿದ್ದಾರೆ. ಈ ವೇಳೆ ರೋಹಿತ್ ಬಾಲಕನಿಗೆ ಏನು ಮಾಡಬೇಡಿ ಆತನನ್ನು ಕರೆದುಕೊಂಡು ಹೋಗಿ ಎಂದಿದ್ದಾರೆ. ನಂತರ ಬಾಲಕ ಭದ್ರತಾ ಸಿಬ್ಬಂದಿ ಜೊತೆ ಸ್ಟೇಡಿಯಂ ಕಡೆಗೆ ಹೆಜ್ಜೆ ಹಾಕಿದ.

    ರೋಹಿತ್ ಶರ್ಮಾ ಪಂದ್ಯದಲ್ಲಿ ಅರ್ಧಶತಕ 51 ರನ್ (50 ಎಸೆತ, 7 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು. ಅಂತಿಮವಾಗಿ ಭಾರತ 2 ವಿಕೆಟ್ ನಷ್ಟಕ್ಕೆ 20.1 ಓವರ್‌ಗಳಲ್ಲಿ 111 ರನ್ ಚಚ್ಚಿ ಇನ್ನೂ 179 ಎಸೆತ ಬಾಕಿ ಇರುವಂತೆ 8 ವಿಕೆಟ್‍ಗಳಿಂದ ಗೆದ್ದು ಬೀಗಿತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗಾಯವನ್ನೂ ಲೆಕ್ಕಿಸದೇ ಆಡಿದ ಹಿಟ್‌ಮ್ಯಾನ್‌ ಹೋರಾಟ ವ್ಯರ್ಥ – ಬಾಂಗ್ಲಾದೇಶಕ್ಕೆ ಏಕದಿನ ಸರಣಿ

    ಗಾಯವನ್ನೂ ಲೆಕ್ಕಿಸದೇ ಆಡಿದ ಹಿಟ್‌ಮ್ಯಾನ್‌ ಹೋರಾಟ ವ್ಯರ್ಥ – ಬಾಂಗ್ಲಾದೇಶಕ್ಕೆ ಏಕದಿನ ಸರಣಿ

    ಢಾಕಾ: ಭಾರತದ (India) ವಿರುದ್ಧ 2 ಏಕದಿನ ಪಂದ್ಯದಲ್ಲೂ ಬಾಂಗ್ಲಾದೇಶ (Bangladesh) ಐತಿಹಾಸಿಕ ಗೆಲುವು ಸಾಧಿಸುವ ಮೂಲಕ 2-0 ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿದ್ದ ಬಾಂಗ್ಲಾ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 271 ರನ್‌ ಗಳಿಸಿತ್ತು. ಒಂದು ಹಂತದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಬಾಂಗ್ಲಾದೇಶಕ್ಕೆ ಮೊಹಮೂದ್‌ ಉಲ್ಲಾಹ್‌ (77) ಹಾಗೂ ಮೆಹದಿ ಹಸನ್‌ ಸೆಂಚೂರಿಯನ್ನು ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇದನ್ನೂ ಓದಿ: ಕೈಯಲ್ಲಿ ರಕ್ತ ಸುರಿಸಿಕೊಂಡು ಮೈದಾನ ತೊರೆದ ರೋಹಿತ್

    ಈ ಮೊತ್ತ ಬೆನ್ನಟ್ಟಿದ ಭಾರತ ತಂಡವು (Team India) 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 266 ರನ್ ಗಳಿಸುವ ಮೂಲಕ 5 ರನ್‌​ಗಳಿಂದ ಸೋಲನ್ನಪ್ಪಿತು. ಈ ಮೂಲಕ ಬಾಂಗ್ಲಾದೇಶ ತಂಡವು 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿದೆ.

    ಟೀಂ ಇಂಡಿಯಾಕ್ಕೆ ಆರಂಭಿಕರಾಗಿ ವಿರಾಟ್‌ ಕೊಹ್ಲಿ ಕಣಕ್ಕಿಳಿದಿದ್ದರೂ ಇಂದು ಸಹ ಅಬ್ಬರಿಸಲಿಲ್ಲ. ಕೊಹ್ಲಿ ಕೇವಲ 5 ರನ್‌ಗೆ ಓಟ್‌ ಆದರೇ ಇತ್ತ ಧವನ್‌ ಸಹ 8 ರನ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ ಬಳಿಕ ಬಂದ ಶ್ರೇಯಸ್‌ ಅಯ್ಯರ್‌ (3 ಸಿಕ್ಸ್‌, 6 ಫೋರ್‌) ಹಾಗೂ ಅಕ್ಷರ್‌ ಪಟೇಲ್‌ ಭರ್ಜರಿ ಬ್ಯಾಟಿಂಗ್‌ ಮಾಡಿ ಅರ್ಧ ಶತಕವನ್ನು ಗಳಿಸಿ ಭಾರತದ ಗೆಲುವಿಗೆ ಭರವಸೆ ನೀಡಿದರೂ ಅದು ಸಾಧ್ಯವಾಗಲಿಲ್ಲ. ನಾಯಕ ರೋಹಿತ್​ ಶರ್ಮಾ ಗಾಯದ ನಡುವೆಯೂ ಅಂತಿಮವಾಗಿ ಬ್ಯಾಟಿಂಗ್​​ ಮಾಡಿದರು. ಆದರೆ ಅಂತಿಮವಾಗಿ ರೋಹಿತ್ 51 ರನ್ ಗಳಿಸಿ ಅಜೇಯರಾಗಿ ಉಳಿದರು. ಇದನ್ನೂ ಓದಿ: ಹಿಟ್‍ಮ್ಯಾನ್ ಬ್ಯಾಟ್‍ನಲ್ಲಿ ಸೂರ್ಯ

    Live Tv
    [brid partner=56869869 player=32851 video=960834 autoplay=true]

  • ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯವಾಡಲ್ಲ ಕೊಹ್ಲಿ?

    ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯವಾಡಲ್ಲ ಕೊಹ್ಲಿ?

    ಲಂಡನ್‌: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಭಾರತದ ಸ್ಟಾರ್ ಬ್ಯಾಟ್ಸ್‌ಮ್ಯಾನ್‌ ವಿರಾಟ್ ಕೊಹ್ಲಿ 2ನೇ ಏಕದಿನ ಪಂದ್ಯವನ್ನು ಆಡಲ್ಲ ಎಂದು ಮೂಲಗಳಿಂದ ವರದಿಯಾಗಿದೆ.

    ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯವಾಡಿದ್ದ ಕೊಹ್ಲಿ ನಂತರ ತೊಡೆಸಂದು ಗಾಯದಿಂದಾಗಿ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಗಾಯದಿಂದ ಚೇತರಿಕೆ ಕಾಣದಿರುವ ಕಾರಣ ಲಾರ್ಡ್ಸ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಿಂದಲೂ ಕೊಹ್ಲಿ ಹೊರಗುಳಿಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಬುಮ್ರಾ ಬೌಲಿಂಗ್‌ ದಾಳಿಗೆ ತತ್ತರಿಸಿದ ಆಂಗ್ಲರು – ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ

    ಕೆನ್ನಿಂಗ್ಟನ್ ಓವಲ್‍ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇಂಗ್ಲೆಂಡ್ ತಂಡ ತವರಿನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 25.2 ಓವರ್‌ಗಳಲ್ಲಿ 110 ರನ್‍ಗಳಿಗೆ ಆಲೌಟ್ ಆಗಿ ಹೀನಾಯ ಪ್ರದರ್ಶನ ತೋರಿತ್ತು. ಇದೀಗ ಎರಡನೇ ಏಕದಿನ ಪಂದ್ಯದಲ್ಲಿ ಕಂಬ್ಯಾಕ್ ಮಾಡುವ ಹುಮ್ಮಸ್ಸಿನಲ್ಲಿದೆ. ಇತ್ತ ಭಾರತ ತಂಡ ಎರಡನೇ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರಿ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ. ಇದನ್ನೂ ಓದಿ: 9 ವರ್ಷದ ಬಾಲಕನಾಗಿದ್ದಾಗ ನನ್ನನ್ನು ಕಳ್ಳಸಾಗಣೆ ಮಾಡಲಾಗಿತ್ತು: ಒಲಿಂಪಿಕ್, ವಿಶ್ವ ಚಾಂಪಿಯನ್‌ನ ಸ್ಫೋಟಕ ಹೇಳಿಕೆ

    ಏಕೈಕ ಟೆಸ್ಟ್ ಪಂದ್ಯದಲ್ಲಿ ಸೋತ ಭಾರತ ತಂಡ ಬಳಿಕ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದಿತ್ತು. ಇದೀಗ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದ್ದು, ಸರಣಿ ಗೆಲ್ಲಲು ಇನ್ನೊಂದು ಜಯ ಅಗತ್ಯವಿದೆ. ನಾಳೆ ಲಾರ್ಡ್ಸ್‌ನಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಕುಲದೀಪ್ ಹ್ಯಾಟ್ರಿಕ್ ವಿಕೆಟ್- ಭಾರತಕ್ಕೆ 107 ರನ್‍ಗಳ ಭರ್ಜರಿ ಜಯ

    ಕುಲದೀಪ್ ಹ್ಯಾಟ್ರಿಕ್ ವಿಕೆಟ್- ಭಾರತಕ್ಕೆ 107 ರನ್‍ಗಳ ಭರ್ಜರಿ ಜಯ

    – 2019ರ ವಿಕೆಟ್ ಪಟ್ಟಿಯಲ್ಲಿ ಶಮಿಗೆ ಅಗ್ರಸ್ಥಾನ

    ವಿಶಾಖಪಟ್ಟಣಂ: ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದ್ದು, ಕುಲದೀಪ್ ಯಾದವ್ ಹ್ಯಾಟ್ರಿಕ್, ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಶತಕದಿಂದ ಭಾರತವು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 107 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

    ವಿಶಾಖಪಟ್ಟಣಂನಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ನೀಡಿದ್ದ ಬೃಹತ್ ಮೊತ್ತ 388 ರನ್ ಬೆನ್ನಟ್ಟಿದ ವಿಂಡೀಸ್ ಪಡೆ ಶಾಯ್ ಹೋಪ್ 78 ರನ್, ನಿಕೋಲಸ್ ಪೂರನ್ 75 ರನ್ ಚಚ್ಚಿದ್ದರೂ ಅಂತಿಮವಾಗಿ 43.3 ಓವರ್‌ಗಳಲ್ಲಿ 280 ರನ್‍ಗಳಿಗೆ ಆಲೌಟ್ ಆಯ್ತು. ಈ ಮೂಲಕ ಮೂರು ಪಂದ್ಯಗಳ ಸರಣಿ 1-1 ರಲ್ಲಿ ಸಮಬಲ ಸಾಧಿಸಿದೆ.

    ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ವೆಸ್ಟ್ ಇಂಡೀಸ್ ಭಾರತದ ಬ್ಯಾಟ್ಸ್‌ಮನ್ ಗಳನ್ನು ಕಟ್ಟಿಹಾಕುವಲ್ಲಿ ವಿಫಲವಾಯಿತು. ರೋಹಿತ್ ಶರ್ಮಾ 159 ರನ್(138 ಎಸೆತ, 17 ಬೌಂಡರಿ, 5 ಸಿಕ್ಸರ್), ರಾಹುಲ್ 102 ರನ್(104 ಎಸೆತ, 8 ಬೌಂಡರಿ, 3 ಸಿಕ್ಸರ್) ಹೊಡೆದರೆ ಕೊನೆಯಲ್ಲಿ ಶ್ರೇಯಸ್ ಅಯ್ಯರ್ 53 ರನ್(32 ಎಸೆತ, 3 ಬೌಂಡರಿ, 4 ಸಿಕ್ಸರ್), ರಿಷಬ್ ಪಂತ್ 39 ರನ್(16 ಎಸೆತ, 3 ಬೌಂಡರಿ, 4 ಸಿಕ್ಸರ್) ಸಿಡಿಸಿದ ಪರಿಣಾಮ ಭಾರತ ಭಾರೀ ಮೊತ್ತವನ್ನು ಪೇರಿಸಿತ್ತು.

    ಬಳಿಕ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಆರಂಭಿಕ ಬ್ಯಾಟ್ಸ್‌ಮನ್ ಶಾಯ್ ಹೋಪ್ ಹಾಗೂ ಎವಿನ್ ಲೂಯಿಸ್ ಅವರನ್ನು ಭಾರತದ ಬೌಲರ್ ಗಳು ಕಟ್ಟಿಹಾಕಿದರು. ಈ ಜೋಡಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಇನ್ನಿಂಗ್ಸ್ ನ 10ನೇ ಓವರ್ ಮುಕ್ತಾಯಕ್ಕೆ 56 ರನ್ ಗಳಿಸಿತ್ತು. ಆದರೆ ನಂತರ ಓವರ್ ನಲ್ಲಿ ಶಾರ್ದೂಲ್ ಠಾಕೂರ್ ಎವಿನ್ ಲೂಯಿಸ್ ವಿಕೆಟ್ ಪಡೆದು ವಿಂಡೀಸ್ ತಂಡಕ್ಕೆ ಆಘಾತ ನೀಡಿದರು. ಬಳಿಕ ಮೈದಾನಕ್ಕಿಳಿದ ಶಿಮ್ರಾನ್ ಹೆಟ್ಮೆಲರ್ 4 ರನ್ ಹಾಗೂ ರಾಸ್ಟನ್ ಚೇಸ್ 4 ರನ್ ಗಳಿಸಿ ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

    ಆರಂಭಿಕ ಬ್ಯಾಟ್ಸ್‌ಮನ್ ಶಾಯ್ ಹೋಪ್‍ಗೆ ಜೊತೆಯಾದ ನಿಕೋಲಸ್ ಪೂರನ್ ಉತ್ತಮ ಜೊತೆಯಾಟ ಕಟ್ಟಿದರು. ಈ ಜೋಡಿಯು ನಾಲ್ಕನೇ ವಿಕೆಟ್‍ಗೆ 106 ರನ್ ಗಳಿಸಿ ತಂಡಕ್ಕೆ ಆಸರೆಯಾಯಿತು. ಆದರೆ ಸ್ಫೋಟಕ ಬ್ಯಾಟಿಂಗ್ ಮುಂದಾದ ನಿಕೋಲಸ್ ಮೊಹಮ್ಮದ್ ಶಮಿ ಎಸೆದ 30ನೇ ಓವರ್ ವಿಕೆಟ್ ಒಪ್ಪಿಸಿದರು. ನಿಕೋಲಸ್ 75 ರನ್ (47 ಎಸೆತ, 6 ಬೌಂಡರಿ, 6 ಸಿಕ್ಸರ್) ಗಳಿಸಿದರು. ಬಳಿಕ ಮೈದಾಕ್ಕಿಳಿದ ವಿಂಡೀಸ್ ನಾಯಕ ಪೋಲಾರ್ಡ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. 5 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿದ್ದಾಗ ಕುಲ್‍ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಪಡೆದು ಪಂದ್ಯಕ್ಕೆ ರೋಚಕ ತಿರುವು ತಂದುಕೊಟ್ಟರು.

    ಶಮಿ ದಾಖಲೆ:
    2019ರಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡ್‍ನ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅವರನ್ನು ಮೊಹಮ್ಮದ್ ಶಮಿ ಹಿಂದಿಕ್ಕಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ ಒಂದು ವಿಕೆಟ್ ಪಡೆಯುವ ಮೂಲಕ ಟ್ರೆಂಟ್ ಬೌಲ್ಟ್ ಅವರನ್ನು ಸರಿಗಟ್ಟಿದ್ದರು. ಈ ಪಂದ್ಯದಲ್ಲಿ 3 ವಿಕಟ್ ಪಡೆಯುವ ಮೂಲಕ 2019ರಲ್ಲಿ  41 ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ. 38 ವಿಕೆಟ್ ಪಡೆದಿದ್ದ ಟ್ರೆಂಟ್ ಬೌಲ್ಟ್  ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೂರನೇ ಪಂದ್ಯ ಭಾನುವಾರ ಒಡಿಶಾದ ಕಟಕ್‍ನಲ್ಲಿ ನಡೆಯಲಿದೆ.

  • ರೋಹಿತ್, ರಾಹುಲ್ ಶತಕ- 12 ಎಸೆತದಲ್ಲಿ 55 ರನ್ ಚಚ್ಚಿದ ಶ್ರೇಯಸ್, ಪಂತ್

    ರೋಹಿತ್, ರಾಹುಲ್ ಶತಕ- 12 ಎಸೆತದಲ್ಲಿ 55 ರನ್ ಚಚ್ಚಿದ ಶ್ರೇಯಸ್, ಪಂತ್

    – ವಿಂಡೀಸಿಗೆ 388 ರನ್ ಗುರಿ
    – ಸಿಕ್ಸರ್ ಬೌಂಡರಿಗಳ ಸುರಿಮಳೆಗೈದ ಟೀಂ ಇಂಡಿಯಾ
    – 34 ಬೌಂಡರಿ, 16 ಸಿಕ್ಸರ್

    ವಿಶಾಖಪಟ್ಟಣಂ: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅಅವರ ದ್ವಿಶತಕದ ಜೊತೆಯಾಟ ಕೊನೆಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಅವರ ಸ್ಫೋಟಕ ಬ್ಯಾಟಿಂಗ್‍ನಿಂದ ಭಾರತ ಎರಡನೇ ಏಕದಿನ ಪಂದ್ಯದಲ್ಲಿ ವಿಂಡೀಸಿಗೆ 388 ರನ್‍ಗಳ ಕಠಿಣ ಗುರಿಯನ್ನು ನೀಡಿದೆ.

    ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ವಿಂಡೀಸ್ ಬೌಲರ್‌ಗಳ ದಾಳಿಯನ್ನು ಧ್ವಂಸ ಮಾಡಿದ್ದು 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಗಳಿಸಿದೆ.

    ರೋಹಿತ್ ಶರ್ಮಾ 159 ರನ್(138 ಎಸೆತ, 17 ಬೌಂಡರಿ, 5 ಸಿಕ್ಸರ್), ರಾಹುಲ್ 102 ರನ್(104 ಎಸೆತ, 8 ಬೌಂಡರಿ, 3 ಸಿಕ್ಸರ್) ಹೊಡೆದರೆ ಕೊನೆಯಲ್ಲಿ ಶ್ರೇಯಸ್ ಅಯ್ಯರ್ 53 ರನ್( 32 ಎಸೆತ, 3 ಬೌಂಡರಿ, 4 ಸಿಕ್ಸರ್), ರಿಷಬ್ ಪಂತ್ 39 ರನ್(16 ಎಸೆತ, 3 ಬೌಂಡರಿ, 4 ಸಿಕ್ಸರ್) ಸಿಡಿಸಿದ ಪರಿಣಾಮ ಭಾರತ ಭಾರೀ ಮೊತ್ತವನ್ನು ಪೇರಿಸಿದೆ.

    ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡಿಸ್ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಜೊತೆಯಾಟವನ್ನು ಮುರಿಯಲು ವಿಫಲವಾಯಿತು. ತಾಳ್ಮೆಯ ಆಟ ಪ್ರರ್ದಶಿಸಿದ ಈ ಜೋಡಿಯು ಮೊದಲ ವಿಕೆಟ್‍ಗೆ 222 ಎಸೆತಗಳಲ್ಲಿ 227 ರನ್‍ಗಳ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿತು. ರೋಹಿತ್ ಶರ್ಮಾ 107 ಎಸೆತಗಳಲ್ಲಿ 28ನೇ ಶತಕ ಹೊಡೆದರು. ಈ ಬೆನ್ನಲ್ಲೇ ಕೆ.ಎಲ್.ರಾಹುಲ್ ಶತಕ ದಾಖಲಿಸಿ ವಿಕೆಟ್ ಒಪ್ಪಿಸಿದರು. 104 ಎಸೆತಗಳಲ್ಲಿ ಕೆ.ಎಲ್.ರಾಹುಲ್ (8 ಬೌಂಡರಿ, 3 ಸಿಕ್ಸರ್) 102 ರನ್ ಗಳಿಸಿದರು. ಬಳಿಕ ಮೈದಾಕ್ಕಿಳಿದ ಕೊಹ್ಲಿ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಈ ಮೂಲಕ ಕೊಹ್ಲಿ ಏಕದಿನ ಪಂದ್ಯದಲ್ಲಿ 13 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

    ರನ್ ಏರಿದ್ದು ಹೇಗೆ?:
    ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಜೋಡಿಯು ಇನ್ನಿಂಗ್ಸ್ 10ನೇ ಓವರ್ ಮುಕ್ತಾಯಕ್ಕೆ 55 ರನ್ ಪೇರಿಸಲು ಶಕ್ತವಾಗಿತ್ತು. 20ನೇ ಓವರ್ ಮುಕ್ತಾಯ ವೇಳೆಗೂ ಅಷ್ಟಾಗಿ ರನ್ ಏರಿಕೆ ಕಂಡು ಬರಲಿಲ್ಲ. ಈ ವೇಳೆಗೆ ರೋಹಿತ್ 41 ರನ್ ಹಾಗೂ ರಾಹುಲ್ 54 ರನ್‍ಗಳ ಸಹಾಯದಿಂದ ಭಾರತ 98 ರನ್ ಪೇರಿಸಿತ್ತು. ಬಳಿಕ ನಿಧಾನಗತಿಯಲ್ಲಿ ರನ್ ಏರಿಕೆಯಲ್ಲಿ ಕೊಂಚ ಬಲಾವಣೆ ಕಂಡಿತ್ತು. ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ಆರಂಭಿಕ ಬ್ಯಾಟ್ಸ್‌ಮನ್ ಗಳು ಇನ್ನಿಂಗ್ಸ್ ನ 30ನೇ ಓವರ್ ಮುಕ್ತಾಯಕ್ಕೆ ತಂಡದ ಮೊತ್ತವನ್ನು 170 ರನ್‍ಗೆ ಏರಿಸಿದರು.

    ಇನ್ನಿಂಗ್ಸ್ ನ 34ನೇ ಓವರ್ ನಲ್ಲಿ ರೋಹಿತ್ ಶರ್ಮಾ ಬೌಂಡರಿ, ಸಿಕ್ಸ್ ಸಿಡಿಸಿದರು. ಈ ಓವರ್ ನಲ್ಲಿ 13 ರನ್ ಬಾರಿಸಿ, ನಂತರದ ಓವರ್ ನ 5ನೇ ಎಸೆತದಲ್ಲಿ ಒಂದು ರನ್ ಗಳಿಸಿ, 200 ರನ್‍ಗಳ ಜೊತೆಯಾಟದ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. 40ನೇ ಓವರ್ ಅಂತ್ಯಕ್ಕೆ ಭಾರತ ಎರಡು ವಿಕೆಟ್ ನಷ್ಟಕ್ಕೆ ಭಾರತ 260ರನ್ ಪೇರಿಸಿತು. ಈ ವೇಳೆಗೆ 140 ರನ್ ಗಳಿಸಿದ್ದ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ಪರಿಣಾಮ 41ನೇ ಓವರ್ ನಲ್ಲಿ 9 ರನ್, 42ನೇ ಓವರ್ ನಲ್ಲಿ 13 ರನ್ ಸಹಾಯದಿಂದ ತಂಡದ ಮೊತ್ತ ಭರ್ಜರಿ ಏರಿಕೆ ಕಂಡಿತು.

    ರೋಹಿತ್ ಶರ್ಮಾ ಇನ್ನಿಂಗ್ಸ್ 43ನೇ ಓವರ್ ನ 3 ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. 138 ಎಸೆತಗಳಲ್ಲಿ (17 ಬೌಂಡರಿ, 5 ಸಿಕ್ಸರ್) 159 ರನ್ ಗಳಿಸಿದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸಿಕ್ಸರ್ ದಾಖಲೆಯನ್ನು ಮುರಿದರು. ಏಕದಿನ ಪಂದ್ಯಗಳಲ್ಲಿ ಎಂ.ಎಸ್.ಧೋನಿ ಭಾರತದ ನೆಲದಲ್ಲಿ 186 ಸಿಕ್ಸರ್ ಸಿಡಿಸಿದರೆ, ಹಿಟ್‍ಮ್ಯಾನ್ ರೋಹಿತ್ 187 ಸಿಕ್ಸರ್ ದಾಖಲೆ ಬರೆದಿದ್ದಾರೆ. ಧೋನಿ 186 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದರೆ, ರೋಹಿತ್ 116 ಇನ್ನಿಂಗ್ಸ್ ಗಳಲ್ಲಿ 187 ಸಿಕ್ಸರ್ ಸಿಡಿಸಿದ್ದಾರೆ.

    ಸಿಕ್ಸರ್ ಸುರಿಮಳೆ ಆರಂಭ:
    3ನೇ ವಿಕೆಟಿಗೆ ರೋಹಿತ್ ಶರ್ಮಾ ಶ್ರೇಯಸ್ ಅಯ್ಯರ್ 36 ಎಸೆತದಲ್ಲಿ 60 ರನ್ ಪೇರಿಸಿದರೆ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಜೊತೆಯಾಟದಲ್ಲಿ ಸಿಕ್ಸರ್ ಬೌಂಡರಿಗಳ ಸುರಿಮಳೆ ಆರಂಭವಾಯಿತು. ಇವರಿಬ್ಬರು ನಾಲ್ಕನೇಯ ವಿಕೆಟಿಗೆ ಕೇವಲ 25 ಎಸೆತಗಳಲ್ಲಿ 73 ರನ್ ಚಚ್ಚಿದರು. 45ನೇ ಓವರಿನಲ್ಲಿ 14 ರನ್ ಬಂದರೆ, ಕಾಟ್ರೆಲ್ ಎಸೆದ 46ನೇ ಓವರಿನಲ್ಲಿ ರಿಷಬ್ ಪಂತ್ 24 ರನ್(6,0,4,6,4,4) ಹೊಡೆದರೆ, ರೊಸ್ಟಬನ್ ಚೇಸ್ ಎಸೆದ 47ನೇ ಓವರಿನಲ್ಲಿ ಶ್ರೇಯಸ್ ಅಯ್ಯರ್ 4 ಸಿಕ್ಸರ್ 1 ಬೌಂಡರಿ ಹೊಡೆದ ಪರಿಣಾಮ ಈ ಓವರಿನಲ್ಲಿ 31 ರನ್ ಬಂದಿತ್ತು. 400 ರನ್ ಗಳಿಸುವ ತವಕದಲ್ಲಿದ್ದ ತಂಡ ಇದ್ದರೂ ಕೊನೆಯ 3 ಓವರ್ ಗಳಲ್ಲಿ 24 ರನ್ ಬಂದಿದ್ದರಿಂದ ಈ ಆಸೆ ಈಡೇರಲಿಲ್ಲ. ಇತರೇ ರೂಪದಲ್ಲಿ ಭಾರತಕ್ಕೆ 18 ರನ್ ಬಂದಿತ್ತು.

    ರನ್ ಏರಿದ್ದು ಹೇಗೆ?
    50 ರನ್ – 58 ಎಸೆತ
    100 ರನ್ – 121 ಎಸೆತ
    150 ರನ್ – 153 ಎಸೆತ
    200 ರನ್ – 203 ಎಸೆತ
    250 ರನ್ – 236 ಎಸೆತ
    300 ರನ್ – 367 ಎಸೆತ
    350 ರನ್ – 281 ಎಸೆತ
    387 ರನ್ – 300 ಎಸೆತ

    ಹಿಟ್‍ಮ್ಯಾನ್ ಸಿಕ್ಸರ್ ದಾಖಲೆ:
    ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಮೊದಲ ಸಿಕ್ಸ್ ಸಿಡಿಸಿದ ಹಿಟ್‍ಮ್ಯಾನ್ ರೋಹಿತ್ ಶರ್ಮಾ 400 ಸಿಕ್ಸರ್ ದಾಖಲೆ ಬರೆದಿದ್ದರು. 400 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಹಾಗೂ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದರು. ಎಲ್ಲಾ ಮಾದರಿಯಲ್ಲಿ 362 ಇನ್ನಿಂಗ್ಸ್ ಆಡಿರುವ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‍ನಲ್ಲಿ 52, ಏಕದಿನ ಪಂದ್ಯಗಳಲ್ಲಿ 237 ಮತ್ತು ಟಿ-20ಯಲ್ಲಿ 120 ಸಿಕ್ಸರ್ ಸೇರಿ ಒಟ್ಟು 409 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ 534 ಸಿಕ್ಸರ್ ಸಿಡಿದ ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಮತ್ತು ಎರಡನೇ ಸ್ಥಾನದಲ್ಲಿ 476 ಸಿಕ್ಸರ್ ದಾಖಲಿಸಿದ ಪಾಕಿಸ್ತಾನದ ಆಲ್‍ರೌಂಡರ್ ಶಾಹೀದ್ ಆಫ್ರಿದಿ ಇದ್ದಾರೆ.