Tag: 2nd child

  • ವೈಜಿಎಫ್ 2- ಎರಡನೇ ಮಗುವಿನ ತಂದೆಯಾಗ್ತಿದ್ದಾರೆ ಯಶ್

    ವೈಜಿಎಫ್ 2- ಎರಡನೇ ಮಗುವಿನ ತಂದೆಯಾಗ್ತಿದ್ದಾರೆ ಯಶ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ದಂಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮಗಳ ಮುದ್ದಾದ ವಿಡಿಯೋದೊಂದಿಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

    ಯಶ್ ಈಗ ಎರಡನೇ ಮಗುವಿಗೆ ತಂದೆಯಾಗುತ್ತಿದ್ದಾರೆ. ರಾಧಿಕಾ ಪಂಡಿತ್ ಅವರು 4 ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಸ್ವತಃ ಯಶ್ ಅವರೇ ತಮ್ಮ ಮಗಳ ವಿಡಿಯೋ ಮೂಲಕ ಈ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಇದೇ 23ರಂದು ಯಶ್ ದಂಪತಿ ತಮ್ಮ ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದಾರೆ. ಇದರ ಬೆನ್ನಲ್ಲೇ ಈಗ ತಮ್ಮ ಎರಡನೇ ಮಗುವಿನ ಆಗಮನದ ಬಗ್ಗೆ ಯಶ್ ಅವರು ಎಲ್ಲರಿಗೂ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ವೈಜಿಎಫ್ ಚಾಪ್ಟರ್ 2, ಮತ್ತೊಂದು ಸಿಹಿ ಸುದ್ದಿ ನಿಮ್ಮ ಪ್ರೀತಿ ಹಾರೈಕೆ ನಮ್ಮ ಕುಟುಂಬದ ಮೇಲಿರಲಿ ಎಂದು ಬರೆದು ಮಗಳ ವಿಡಿಯೋ ಮೂಲಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

    ಭಾನುವಾರ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ನಡೆದ ಅದ್ಧೂರಿ ನಾಮಕರಣ ಸಮಾರಂಭದಲ್ಲಿ ಯಶ್ ರಾಧಿಕಾ ದಂಪತಿ ತಮ್ಮ ಮುದ್ದಾದ ಮಗಳಿಗೆ `ಐರಾ’ ಎಂದು ಹೆಸರಿಟ್ಟಿದ್ದರು. ಯಶ್ ಹಾಗೂ ರಾಧಿಕಾ ಹೆಸರಿನ ಅಕ್ಷರಗಳನ್ನು ಜೋಡಿಸಿ ಈ ಹೆಸರಿಟ್ಟಿರುವುದು ಒಂದು ವಿಶೇಷವಾದರೆ ಇದರ ಅರ್ಥ ಇನ್ನೊಂದು ವಿಶೇಷತೆ ಹೊಂದಿದೆ.

    ಸೋಶಿಯಲ್ ಮಿಡಿಯಾದಲ್ಲಿ ಮಗಳ ಫೋಟೋ ಅಪ್ಲೋಡ್ ಮಾಡುತ್ತಿದ್ದಾಗ `Baby YR’ ಎಂದೇ ಕರೆಯುತ್ತಿದ್ದರು. ಈಗ ಮಗಳಿಗೆ AYRA ಎಂದು ಹೆಸರನ್ನಿಟ್ಟಿದ್ದಾರೆ. ನಡುವಿನಲ್ಲಿ YR ಎಂದಿದೆ. ಅಷ್ಟೇ ಅಲ್ಲ ರಾ (ರಾಧಿಕಾ) ಹಾಗೂ ಯ (ಯಶ್) ಅಕ್ಷರಗಳೂ ಇದೆ.

    ಅರೇಬಿಕ್‍ನಲ್ಲಿ ‘ಐರಾ’ ಎಂದರೆ `ಕಣ್ಣು ತೆರೆಸುವವರು’ ಅಥವಾ `ಗೌರವಾನ್ವಿತರು’ ಎನ್ನುವ ಅರ್ಥ ಬರುತ್ತದೆ. ಕನ್ನಡದಲ್ಲಿ ‘ಭೂದೇವಿಯಲ್ಲಿ ಸನ್ನಿಹಿತಳಾದ ಲಕ್ಷ್ಮೀ’ ಎನ್ನುವ ಅರ್ಥ ಬರುತ್ತದೆ.