Tag: 26 Maoist killed

  • ಮಹಾರಾಷ್ಟ್ರದಲ್ಲಿ ಎನ್‍ಕೌಂಟರ್- ಮಿಲಿಂದ್‌ ತೇಲ್ತುಂಬ್ಡೆ ಸೇರಿ 26 ನಕ್ಸಲರ ಹತ್ಯೆ

    ಮಹಾರಾಷ್ಟ್ರದಲ್ಲಿ ಎನ್‍ಕೌಂಟರ್- ಮಿಲಿಂದ್‌ ತೇಲ್ತುಂಬ್ಡೆ ಸೇರಿ 26 ನಕ್ಸಲರ ಹತ್ಯೆ

    ಮುಂಬೈ: ಮಹಾರಾಷ್ಟ್ರದ ಗಡ್‍ಚಿರೋಲಿಯಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಕುಖ್ಯಾತ ಮಾವೋವಾದಿ ನಾಯಕ ಹಾಗೂ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣ ಆರೋಪಿ ಮಿಲಿಂದ್ ತೇಲ್ತುಂಬ್ಡೆ ಸೇರಿದಂತೆ 26 ಮಾವೋವಾದಿಗಳು ಹತ್ಯೆಯಾಗಿದ್ದಾರೆ.

    ಮಾವೋವಾದಿ ವಿರೋಧಿ ಸಿ-60 ಕಮಾಂಡೋಗಳ 6 ತಂಡಗಳಲ್ಲಿ ಒಟ್ಟು 500 ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಶನಿವಾರ ಬೆಳಿಗ್ಗೆ 6ರಿಂದ ಸಂಜೆ 4 ಗಂಟೆವರೆಗೂ ಕಾರ್ಯಾಚರಣೆ ನಡೆಯಿತು. ಈ ವೇಳೆ ಹಲವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಡ್‍ಚಿರೊಲಿ ಅರಣ್ಯ ಪ್ರದೇಶದಲ್ಲಿ ನಡೆದ ಅತ್ತಿದೊಡ್ಡ ಎನ್‍ಕೌಂಟರ್ ಇದಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್‌ ವಾಲ್ಸೆ ಪಾಟಿಲ್‌ ತಿಳಿಸಿದ್ದಾರೆ. ಇದನ್ನೂ ಓದಿ: 3ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ದೀಪ್‍ವೀರ್

    ಮಿಲಿಂದ್ ತೇಲ್ತುಂಬ್ಡೆ ತಲೆಗೆ 50 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಮಾವೋವಾದಿಗಳ ಕೇಂದ್ರ ಸಮಿತಿಯ ಸದಸ್ಯನಾಗಿದ್ದ. ಅಲ್ಲದೇ ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸಗಡ, ತೆಲಂಗಾಣ ರಾಜ್ಯಗಳಲ್ಲಿ ಇವರು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಈತನ ಅಂಗರಕ್ಷಕರಾಗಿದ್ದ ವ್ಯಕ್ತಿ ಹಾಗೂ ಮಹಿಳೆ ಕೂಡ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

    2019ರಲ್ಲಿ ನಡೆದ ಕುರ್ಖೆಡ ದಾಳಿಯಲ್ಲಿ ಹಲವರು ಪೊಲೀಸರು ಹತರಾಗಿದ್ದ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ ಎಂದು ಶಂಕಿಸಲಾಗಿತ್ತು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ನಾವು ಜೆಡಿಎಸ್‍ನಿಂದ ಪರಿಷತ್‍ಗೆ ಸ್ಪರ್ಧೆ ಮಾಡಲ್ಲ: ಜಿಟಿ ದೇವೇಗೌಡ

    ಯುಬಿಜಿಎಲ್ ಮತ್ತು ಎಕೆ-47 ಸೇರಿದಂತೆ 29 ಶಸ್ತ್ರಾಸ್ತ್ರಗಳನ್ನು ಎನ್‍ಕೌಂಟರ್ ನಡೆದ ಸ್ಥಳದಲ್ಲಿ ವಶಕ್ಕೆ ಪಡೆಯಲಾಗಿದೆ. ಎನ್‍ಕೌಂಟರ್‍ನಲ್ಲಿ ಪ್ರಮುಖ ಮಾವೋವಾದಿಗಳೇ ಹತ್ಯೆಯಾಗಿದ್ದಾರೆ. ಹತ್ಯೆಯಾದವರಲ್ಲಿ ಒಬ್ಬೊಬ್ಬರ ತಲೆಗೂ ಬಹುಮಾನ ಘೋಷಿಸಲಾಗಿತ್ತು.