ಗಣರಾಜ್ಯೋತ್ಸವದ ಮುನ್ನಾ ದಿನ 2024ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು (Padma Awards 2024) ಪ್ರಕಟಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ದೊರೆತಿದೆ. ಸಾಧಕರಿಗೆ ಪದ್ಮ ವಿಭೂಷಣ, ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ. ಅದರಂತೆ ಹಲವು ವರ್ಷಗಳಿಂದ ಕಲಾ ಸೇವೆ ಮಾಡಿರುವ ಮೆಗಾಸ್ಟಾರ್ ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ. ಇದನ್ನೂ ಓದಿ:ಕರ್ನಾಟಕದ ಇಬ್ಬರು ಸೇರಿ 34 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ
ದುಬೈ: ಆಸ್ಟ್ರೇಲಿಯಾದಲ್ಲಿ (Australia) ನಡೆಯುತ್ತಿರುವ 2022ರ ಟಿ20 ವಿಶ್ವಕಪ್ (T20 World Cup) ಕೊನೆ ಹಂತಕ್ಕೆ ತಲುಪಿದೆ. ಇದೀಗ 2024ರ ಟಿ20 ವಿಶ್ವಕಪ್ ಬಗ್ಗೆ ಚರ್ಚೆ ಆರಂಭವಾಗಿದ್ದು, ಈ ಟೂರ್ನಿಯಲ್ಲಿ 20 ತಂಡಗಳು ಆಡಲಿದ್ದು, ಒಟ್ಟು 12 ತಂಡಗಳಿಗೆ ನೇರ ಪ್ರವೇಶ ಅವಕಾಶ ಸಿಕ್ಕಿದೆ.
ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಸಾರಥ್ಯದಲ್ಲಿ 2024ರ ಟಿ20 ವಿಶ್ವಕಪ್ ನಡೆಯಲಿದೆ. ಒಟ್ಟು 20 ತಂಡಗಳು ಭಾಗವಹಿಸಲಿದ್ದು, ಟಿ20 ವಿಶ್ವಕಪ್‍ನ 9ನೇ ಸೀಸನ್ ಐತಿಹಾಸಿಕ ಸಾಧನೆಗಾಗಿ ಹಾತೊರೆಯುತ್ತಿದೆ. ಟಿ20 ವಿಶ್ವಕಪ್‍ನ ಇತಿಹಾಸದಲ್ಲಿ ಮೊದಲ ಬಾರಿಗೆ ಒಟ್ಟು 20 ತಂಡಗಳು ಆಡಲು ಸಿದ್ಧವಾಗುತ್ತಿದೆ. 2022ರ ಟಿ20 ವಿಶ್ವಕಪ್‍ನಲ್ಲಿ ಒಟ್ಟು 16 ತಂಡಗಳು ಕಾದಾಡಿದ್ದವು. ಇದನ್ನೂ ಓದಿ: ಸೆಮಿಫೈನಲ್‍ಗೇರಿದ ನಾಲ್ಕು ತಂಡಗಳು – ಯಾರಿಗೆ ಯಾರು ಎದುರಾಳಿ, ಯಾವಾಗ ಪಂದ್ಯ?
ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್ ಪ್ರದರ್ಶನ ಗಮನಿಸಿ ಭಾರತ (India), ನ್ಯೂಜಿಲೆಂಡ್, ಪಾಕಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್, ಶ್ರೀಲಂಕಾ ಟಾಪ್ 8 ತಂಡಗಳಾಗಿ ಅರ್ಹತೆ ಪಡೆದಿದೆ. ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡ ಟಿ20 ರ್‍ಯಾಂಕಿಂಗ್ ಆಧಾರದಲ್ಲಿ ಮತ್ತು ವೆಸ್ಟ್ ಇಂಡೀಸ್, ಯುಎಸ್‍ಎ ತಂಡಗಳು ಟಿ20 ವಿಶ್ವಕಪ್ ಆತಿಥ್ಯ ವಹಿಸಿಕೊಂಡ ಕಾರಣದಿಂದ ನೇರ ಅರ್ಹತೆ ಪಡೆದುಕೊಂಡಿದೆ. ಇದು ನೇರ ಅರ್ಹತೆ ಪಡೆದ ತಂಡಗಳಾದರೆ, ಇನ್ನೂಳಿದ 6 ತಂಡಗಳು ಅರ್ಹತಾ ಸುತ್ತು ಆಡಿ ಪ್ರವೇಶ ಪಡೆಯಬೇಕಾಗಿದೆ. ಇದನ್ನೂ ಓದಿ: ರೋಹಿತ್‍ರನ್ನು ನೋಡಲೆಂದು ಮೈದಾನಕ್ಕಿಳಿದ ಅಭಿಮಾನಿಗೆ 6.5 ಲಕ್ಷ ರೂ. ಫೈನ್
2022 ಟಿ20 ವಿಶ್ವಕಪ್‍ನ ಮೊದಲ ಸೆಮಿಫೈನಲ್‍ನಲ್ಲಿ ಗ್ರೂಪ್ 1ರ ಮೊದಲ ಸ್ಥಾನ ಪಡೆದ ನ್ಯೂಜಿಲೆಂಡ್, ಗ್ರೂಪ್ 2ರ ಎರಡನೇ ಸ್ಥಾನ ಪಡೆದ ಪಾಕಿಸ್ತಾನವನ್ನು ಸಿಡ್ನಿಯಲ್ಲಿ ನ.9 ರಂದು ಎದುರಿಸಲಿದೆ. ಎರಡನೇ ಸೆಮಿಫೈನಲ್‍ನಲ್ಲಿ ಗ್ರೂಪ್ 2ರ ಮೊದಲ ಸ್ಥಾನ ಪಡೆದ ಭಾರತ, ಗ್ರೂಪ್ 1ರ ಎರಡನೇ ಸ್ಥಾನ ಪಡೆದ ಇಂಗ್ಲೆಂಡ್ ತಂಡವನ್ನು ಆಡಿಲೇಡ್‍ನಲ್ಲಿ ನ.10 ರಂದು ಎದುರಿಸಲಿದೆ. ಇಲ್ಲಿ ಗೆದ್ದ ಎರಡು ತಂಡಗಳು ನ.13 ರಂದು ಫೈನಲ್ ಪಂದ್ಯವಾಡಲಿದೆ.
Live Tv
[brid partner=56869869 player=32851 video=960834 autoplay=true]