Tag: 2022

  • ತಲೆಕೆಳಗಾಗಿ ರಾಷ್ಟ್ರಧ್ವಜ ಹಾರಿಸಿದ ನೋರಾ ಫತೇಹಿ ವಿರುದ್ಧ ನೆಟ್ಟಿಗರ ಆಕ್ರೋಶ

    ತಲೆಕೆಳಗಾಗಿ ರಾಷ್ಟ್ರಧ್ವಜ ಹಾರಿಸಿದ ನೋರಾ ಫತೇಹಿ ವಿರುದ್ಧ ನೆಟ್ಟಿಗರ ಆಕ್ರೋಶ

    ನೋರಾ ಫತೇಹಿ (Nora Fatehi) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ನಟಿ ನೋರಾ ಫತೇಹಿ ವಿಶ್ವಕಪ್‌ನಲ್ಲಿ ತಲೆಕಳೆಗಾಗಿ ಭಾರತದ ಧ್ವಜ ಹಾರಿಸಿದ ಪರಿಣಾಮ ಇದೀಗ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ.

    ಕತಾರ್‌ನಲ್ಲಿ 2022ರ ವಿಶ್ವಕಪ್ (World Cup) ನಡೆಯುತ್ತಿದೆ. ನಟಿ ನೋರಾ ಫತೇಹಿ ಕೂಡ ಭಾಗವಹಿಸಿದ್ದರು. ಹಾಜರಿ ಹಾಕಿದ್ದಷ್ಟೆ ಅಲ್ಲದೇ ನೋರಾ ಫತೇಹಿ ವಿಶೇಷ ಪ್ರದರ್ಶನ ನೀಡಿದ್ದರು. ಬಾಲಿವುಡ್‌ನ ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೋರಾ ಫತೇಹಿ ಹೆಜ್ಜೆ ಹಾಕಿದರು. ಡ್ಯಾನ್ಸ್ ಮಾಡುತ್ತಾ ಭಾರತದ ಧ್ವಜ ಹಾರಿದರು. ಜೈ ಹಿಂದ್ ಎಂದು ಕೂಗಿದರು. ಆದರೂ ನೋರಾ ಫತೇಹಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ತಿರಂಗಾಗೆ ಅವಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ರೂಪೇಶ್ ರಾಜಣ್ಣ – ಗುರೂಜಿ ಜಟಾಪಟಿ: ಸಂಬರ್ಗಿ ಗಪ್‌ಚುಪ್

     

    View this post on Instagram

     

    A post shared by Arshin k madhu (@arshin_k_madhu)

    ನೃತ್ಯ ಮಾಡುವಾಗ ನೋರಾ ಫತೇಹಿ ಭಾರತದ ಧ್ವಜ ಹಾರಿಸಿದರು. ಧ್ವಜ ತೆಗೆದುಕೊಂಡ ನೋರಾ ಮೊದಲು ಸರಿಯಾಗಿ ಹಾರಿಸಿದರು. ಆದರೆ ನಂತರ ತಲೆಕೆಳಗಾಗಿ ರಾಷ್ಟ್ರಧ್ವಜವನ್ನು ಹಾರಿಸಿದರು. ನಟಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ನೋರಾ ಉಲ್ಟಾ ತಿರಂಗಾ ಹಾರಿಸಿದ ಫೋಟೋ ಶೇರ್ ಮಾಡಿ ಅಸಮಾಧಾನ ಹೊರಹಾಕುತ್ತಿದ್ದಾರೆ.

     

    View this post on Instagram

     

    A post shared by Arshin k madhu (@arshin_k_madhu)

    ನೋರಾ ಫತೇಹಿ ಡ್ಯಾನ್ಸ್ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅನೇಕರು ನೋರಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ತಲೆಕಳಗಾಗಿ ತಿರಂಗಾ ಹಾರಿಸಿ ಟ್ರೋಲ್ ಆಗುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಕ್ಷಯ್ ಕುಮಾರ್ ಗೆ ಕೊರೋನಾ:  ಕೇನ್ಸ್ ಚಿತ್ರೋತ್ಸವದಿಂದ ದೂರ

    ಅಕ್ಷಯ್ ಕುಮಾರ್ ಗೆ ಕೊರೋನಾ: ಕೇನ್ಸ್ ಚಿತ್ರೋತ್ಸವದಿಂದ ದೂರ

    ನಾಳೆಯಿಂದ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವ ಪ್ರಾರಂಭವಾಗಲಿದ್ದು, ಅದರಲ್ಲಿ ಪಾಲ್ಗೊಳ್ಳಲು ಬಾಲಿವುಡ್ ನಿಂದ ಅನೇಕ ತಾರೆಯರು ವಿಮಾನ ಏರಿದ್ದಾರೆ. ಆದರೆ, ಅಕ್ಷಯ್ ಕುಮಾರ್ ಮಾತ್ರ ಕೇನ್ಸ್ ನಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ. ಎರಡನೇ ಬಾರಿಗೆ ಅಕ್ಷಯ್ ಕುಮಾರ್ ಅವರಿಗೆ ಕೊರೋನಾ ಪಾಸಿಟಿವ್ ಆಗಿದ್ದು, ಹಾಗಾಗಿ ತಾವು ಕೇನ್ಸ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಅಕ್ಷಯ್ ಟ್ವಿಟ್ ಮಾಡಿದ್ದಾರೆ.  ಇದನ್ನೂ ಓದಿ: ದೊಡ್ಮನೆ ಕುಡಿ ಯುವರಾಜ್ ಎದುರು ವಿಲನ್ ಆಗಿ ಡಾಲಿ!

    ಕಳೆದ ವರ್ಷ ಏಪ್ರಿಲ್ ನಲ್ಲಿ ಅಕ್ಷಯ್ ಕುಮಾರ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಮನೆಯಲ್ಲೇ ಅವರು ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರು. ಈಗ ಮತ್ತೆ ಅವರನ್ನು ಕೊರೋನಾ ಕಾಡಿದೆ. ನಿನ್ನೆಯಷ್ಟೇ ಅವರಿಗೆ ಕೋವಿಡ್ ಪಾಸಿಟಿವ್ ಧೃಡಪಟ್ಟಿದ್ದು, ಅದನ್ನು ಟ್ವಿಟ್ ಮೂಲಕ ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. ತಮ್ಮ ಸಂಪರ್ಕದಲ್ಲಿ ಇದ್ದವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

    ಟ್ವಟ್ ನಲ್ಲಿ ಬೇಸರ ವ್ಯಕ್ತ ಪಡಿಸಿರುವ ಅಕ್ಷಯ್ ಕುಮಾರ್, “ಕೇನ್ಸ್ ಚಿತ್ರೋತ್ಸವದಲ್ಲಿ ಭಾರತದ ಚಿತ್ರಗಳನ್ನು ನೋಡಲು ಉತ್ಸುಕನಾಗಿದ್ದೆ. ಹೆಮ್ಮೆಯಿಂದಲೇ ಈ ಬಾರಿಯ ಕೇನ್ಸ್ ನಲ್ಲಿ ಭಾಗಿಯಾಗಲು ಸಿದ್ಧತೆ ಮಾಡಿಕೊಂಡಿದ್ದೆ. ಆದರೆ, ಕೋವಿಡ್ ನಿಂದಾಗಿ ಅದೆಲ್ಲವೂ ನಿರಾಸೆ ಆಗಿದೆ. ನಿರಾಸೆಯಿಂದಲೇ ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಾಗಿದೆ’ ಎಂದು ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.  ಇದನ್ನೂ ಓದಿ:`ಫಿದಾ’ ಬ್ಯೂಟಿ ಸಾಯಿ ಪಲ್ಲವಿಗೆ ಕನ್ನಡ ಹೇಳಿಕೊಟ್ಟ ಶೀತಲ್ ಶೆಟ್ಟಿ

    ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಪೂಜಾ ಹೆಗ್ಡೆ, ಪ್ರಿಯಾಂಕಾ ಚೋಪ್ರಾ, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಸೇರಿದಂತೆ ಹಲವು ತಾರೆಯರು ಈ ಕೇನ್ಸ್ ಚಿತ್ರೋತ್ಸವದಲ್ಲಿ ಭಾಗಿಯಾಗುತ್ತಿದ್ದು, ನಾಳೆಯಿಂದ ನಡೆಯುವ ಚಿತ್ರೋತ್ಸವದ ಹಲವು ಕಾರ್ಯಕ್ರಮಗಳಲ್ಲಿ ಭಾರತೀಯ ಸಿನಿಮಾ ರಂಗದ ಹಲವು ತಾರೆಯರು ಭಾಗಿಯಾಗಲಿದ್ದಾರೆ.

    ಸಿನಿ ತಾರೆಯರ ನೇತೃತ್ವವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ವಹಿಸಲಿದ್ದು, ಈ ಬಾರಿ ಚಲನಚಿತ್ರೋತ್ಸವದಲ್ಲಿ ಕನ್ನಡ ಮೂಲದ ನಟಿ, ಬಾಲಿವುಡ್  ತಾರೆ ದೀಪಿಕಾ ಪಡುಕೋಣೆ ಅವರು ತೀರ್ಪುಗಾರರ ಸ್ಥಾನ ತುಂಬಿದ್ದಾರೆ. ಇಂಥದ್ದೊಂದ ಗೌರವಕ್ಕೆ ಪಾತ್ರವಾದ ಮೊದಲ ಕನ್ನಡ ಮೂಲದ ನಟಿ ಇವರಾಗಿದ್ದಾರೆ.

  • 2022ರಲ್ಲಿ ವಾಟ್ಸಪ್‌ನಲ್ಲಿ ಲಭ್ಯವಾಗಲಿದೆ ಹೊಸ ಫೀಚರ್‌ಗಳು

    2022ರಲ್ಲಿ ವಾಟ್ಸಪ್‌ನಲ್ಲಿ ಲಭ್ಯವಾಗಲಿದೆ ಹೊಸ ಫೀಚರ್‌ಗಳು

    ವಾಷಿಂಗ್ಟನ್: ಮೆಟಾ ಮಾಲೀಕತ್ವದ ವಾಟ್ಸಪ್ ವಿಶ್ವದಲ್ಲೇ ಅತೀ ಹೆಚ್ಚು ಜನರು ಬಳಕೆ ಮಾಡುತ್ತಿರುವ ಮೆಸೇಜಿಂಗ್ ಅಪ್ಲಿಕೇಶನ್. ಈ ಅಪ್ಲಿಕೇಶನ್ ಅನ್ನು ಕೇವಲ ಕುಟುಂಬ ಹಾಗೂ ಸ್ನೇಹಿತರನ್ನು ಸಂಪರ್ಕಿಸಲು ಅನುಕೂಲ ಮಾಡಿಕೊಡುವುದಲ್ಲದೇ ವ್ಯವಹಾರಗಳನ್ನು ನಡೆಸಲು ಬಳಸಲಾಗುತ್ತದೆ.

    ವಾಟ್ಸಪ್ ಈಗಾಗಲೇ ಹಲವಾರು ಹೊಸ ಫೀಚರ್‌ಗಳನ್ನು ಜಾರಿಗೆ ತರುವ ಯೋಜನೆ ನಡೆಸಿದ್ದು, ಅದರಲ್ಲಿ ಕೆಲವು ಈಗಾಗಲೇ ಬೀಟಾ ಆವೃತ್ತಿಯಲ್ಲಿ ಪರೀಕ್ಷೆಗೆ ಒಳಗಾಗುತ್ತಿದೆ. ಈ ಎಲ್ಲಾ ಹೊಸ ಫೀಚರ್‌ಗಳು ಅತೀ ಶೀಘ್ರದಲ್ಲೇ ಅಂದರೆ 2022ರ ಸಾಲಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

    ಕಮ್ಯುನಿಟಿ ಫೀಚರ್: ವೆಬಿಟೈನ್ಫೋ ವರದಿಯ ಪ್ರಕಾರ ವಾಟ್ಸಪ್ ಕಮ್ಯುನಿಟಿ ಫೀಚರ್ ಅನ್ನು ಶೀಘ್ರವೇ ಬಿಡುಗಡೆ ಮಾಡಲಿದೆ. ಈ ಫೀಚರ್‌ನಿಂದ ಬಳಕೆದಾರರು ಅಸ್ತಿತ್ವದಲ್ಲಿರುವ ಗುಂಪಿನೊಳಗೆ ಇನ್ನೊಂದು ಗುಂಪನ್ನು ರಚಿಸಲು ಸಾಧ್ಯವಾಗಲಿದೆ. ಈ ಉಪ ಗುಂಪಿನ ಚ್ಯಾಟ್‌ಗಳನ್ನೂ ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ಇದನ್ನೂ ಓದಿ: ಐಟಂ ಸಾಂಗ್ ಕ್ಲಿಕ್ -‘ಪುಷ್ಪ’ದಲ್ಲಿ ಸಮಂತಾ ಫುಲ್ ಮಿಂಚಿಂಗ್

    ಲಾಸ್ಟ್ ಸೀನ್ ಹಾಗೂ ಪ್ರೊಫೈಲ್ ಫೋಟೋ ಪ್ರೈವೆಸಿ:
    ವಾಟ್ಸಪ್ ಲಾಸ್ಟ್ ಸೀನ್ ಹಾಗೂ ಪ್ರೊಫೈಲ್ ಫೋಟೋ ಪ್ರೈವೆಸಿ ಸೆಟ್ಟಿಂಗ್‌ಗಳ ಹೊಸ ಫೀಚರ್ ಬೀಟಾ ಆವೃತ್ತಿಯಲ್ಲಿ ಟೆಸ್ಟಿಂಗ್ ನಡೆಯುತ್ತಿದೆ. ಈ ಫೀಚರ್‌ನಿಂದ ಬಳಕೆದಾರರು ತಮ್ಮ ಕೊನೆಯ ವೀಕ್ಷಣೆ ಹಾಗೂ ಪ್ರೊಫೈಲ್ ಫೋಟೋಗಳನ್ನು ಆಯ್ದ ಸಂಪರ್ಕಗಳಿಗೆ ಮರೆ ಮಾಡಬಹುದು.

    ಸಂದೇಶ ಅಳಿಸಲು ಸಮಯದ ಮಿತಿ:
    ಸದ್ಯ ವಾಟ್ಸಪ್ ಬಳಕೆದಾರರು ತಾವು ಕಳುಹಿಸಿದ ಸಂದೇಶವನ್ನು ಎಲ್ಲರಿಗೂ ಅಳಿಸಲು 1 ಗಂಟೆ ಹಾಗೂ 8 ನಿಮಿಷಗಳ ಕಾಲಾವಕಾಶ ನೀಡುತ್ತಿತ್ತು. ಇದೀಗ ಕಂಪನಿ ಈ ಸಮಯದ ಮಿತಿಯನ್ನು 7 ದಿನ ಹಾಗೂ 8 ನಿಮಿಷಗಳ ವರೆಗೆ ಹೆಚ್ಚಿಸಿ, ಪರೀಕ್ಷೆ ನಡೆಸುತ್ತಿದೆ. ಇದನ್ನೂ ಓದಿ: ನಿಧಿ ಆಸೆಗೆ ದುಷ್ಕರ್ಮಿಗಳಿಂದ ಶ್ರೀ ಕೃಷ್ಣನ ದೇಗುಲ ಧ್ವಂಸ

    ಮೆಸೇಜ್ ರಿಯಾಕ್ಷನ್:
    ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರು ಕಳುಹಿಸಿದ ಯಾವುದೇ ಸಂದೇಶಗಳಿಗೂ ಇಮೋಜಿಯ ಪ್ರತಿಕ್ರಿಯೆ ನೀಡುವ ಫೀಚರ್ ಇದೆ. ಮುಂದೆ ಈ ಫೀಚರ್ ಅನ್ನು ವಾಟ್ಸಪ್‌ನಲ್ಲೂ ಬಿಲ್ಟ್ ಇನ್ ಆಗಿ ಕಾಣಬಹುದು.

    ಫೋಟೋ ಎಡಿಟರ್:
    ವಾಟ್ಸಪ್‌ನಲ್ಲಿ ಫೋಟೋ ಎಡಿಟಿಂಗ್ ಫೀಚರ್‌ಅನ್ನು ತರುವ ಬಗ್ಗೆ ಮೆಟಾ ಕಂಪನಿ ತಿಳಿಸಿತ್ತು. ಈ ಫೀಚರ್ ಮೊದಲಿಗೆ ವಾಟ್ಸಪ್ ವೆಬ್‌ನಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.