Tag: 2016 T20 World Cup match

  • ಧೋನಿ ನಿವೃತ್ತಿ ಉಹಾಪೋಹದ ಬೆನ್ನಲ್ಲೇ ಅದ್ಭುತ ಕ್ಷಣ ನೆನೆದ ಕೊಹ್ಲಿ

    ಧೋನಿ ನಿವೃತ್ತಿ ಉಹಾಪೋಹದ ಬೆನ್ನಲ್ಲೇ ಅದ್ಭುತ ಕ್ಷಣ ನೆನೆದ ಕೊಹ್ಲಿ

    ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ನಿವೃತ್ತಿ ಉಹಾಪೋಹದ ಬೆನ್ನಲ್ಲೇ ಹಾಲಿ ನಾಯಕ ವಿರಾಟ್ ಕೋಹ್ಲಿ ಧೋನಿ ಜೊತೆಗಿನ ಅದ್ಭುತ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    2016ರ ಟ್ವೆಂಟಿ-20 ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಫೋಟೋವನ್ನು ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, ಇದು ನಾನು ಎಂದಿಗೂ ಮರೆಯಲಾಗದ ಪಂದ್ಯ. ಅದು ವಿಶೇಷ ರಾತ್ರಿ. ಈ ವ್ಯಕ್ತಿ, ಫಿಟ್‍ನೆಸ್ ಟೆಸ್ಟ್‍ಗೆ ಓಡುವಂತೆ ನನ್ನನ್ನು ಓಡಿಸಿದರು ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ಕಮಾಂಡೋ ಲುಕ್‍ನಲ್ಲಿ ಧೋನಿ ಮಿಂಚಿಂಗ್ 

    ಭಾರತದಲ್ಲಿ ಸೆಪ್ಟೆಂಬರ್ 15ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆದಿದೆ. ಈ ಪಂದ್ಯದಲ್ಲೂ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿಶ್ರಾಂತಿ ನೀಡಿ, ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಬ್ ಪಂತ್ ಅವರನ್ನು ಮುಂದುವರಿಸಲಾಗಿದೆ. ಈ ನಡುವೆ ಧೋನಿ ಗುರುವಾರ ಸಂಜೆ 7 ಗಂಟೆ ಸುದ್ದಿಗೋಷ್ಠಿ ಕರೆದಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಧೋನಿಯನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಹಿಂದಿಕ್ಕಿದ ಪಂತ್ 

    2019ರ ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್‍ನಿಂದ ಎಂ.ಎಸ್.ಧೋನಿ 2 ತಿಂಗಳ ವಿರಾಮ ತೆಗೆದುಕೊಂಡಿದ್ದರು. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅವರು ಅಲಭ್ಯವಾಗಿದ್ದರು. ಟೀಂ ಇಂಡಿಯಾ ಮಾಜಿ ನಾಯಕ, ಲೆಫ್ಟಿನೆಂಟ್ ಕರ್ನಲ್ ಧೋನಿ ಅವರು ಜುಲೈ 30ರಿಂದ ಆಗಸ್ಟ್ 15 ರವರೆಗೆ ಕಾಶ್ಮೀರದಲ್ಲಿ ಪ್ಯಾರಾ ಕಮಾಂಡೋಗಳ ಬೆಟಾಲಿಯನ್‍ನಲ್ಲಿ 15 ದಿನಗಳ ಕಾಲ ಸೇವೆ ಸಲ್ಲಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಗೆ ಧೋನಿ ಅಲಭ್ಯವಾಗಿದ್ದಾರೆ.

    2020ರ ಪುರುಷರ ಟಿ-20 ವಿಶ್ವಕಪ್ ಟೂರ್ನಿ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಲಿದೆ. ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಭರ್ಜರಿ ಪೈಪೋಟಿ ನಡೆಸಲಿವೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 24ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಇದನ್ನೂ ಓದಿ: ‘ಇಗೋ ನಿವಾರಿಸಿ’ ಪುಸ್ತಕ ಓದಿದ ಕೊಹ್ಲಿ ಟ್ರೋಲ್