ಬೆಂಗಳೂರು: 2,000 ರೂ. ಮುಖಬೆಲೆಯ ನೋಟುಗಳನ್ನು ಆರ್‌ಬಿಐ (RBI) ಹಿಂಪಡೆದ ನಂತರ ಪೆಟ್ರೋಲ್ ಬಂಕ್‌ಗಳಲ್ಲಿ (Petrol Bunk) ಪಿಂಕ್ ನೋಟಿನ ಹಾವಳಿ ಜಾಸ್ತಿಯಾಗಿದೆ. ಜನರು 200 ರೂ.ಗಳ ಪೆಟ್ರೋಲ್ ಹಾಕಿಸಿಕೊಂಡರೂ 2,000 ರೂ. ನೀಡುತ್ತಿದ್ದಾರೆ. ಇದರಿಂದ ಪೆಟ್ರೋಲ್ ಬಂಕ್ ಮಾಲೀಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
2,000 ರೂ. ನೋಟ್ ಬ್ಯಾನ್ (Note Ban) ಬೆನ್ನಲ್ಲೇ ಜನರು ತಮ್ಮಲ್ಲಿರುವ 2,000 ರೂ. ನೋಟುಗಳನ್ನು ಬ್ಯಾಂಕ್, ಆಸ್ಪತ್ರೆ ಹಾಗೂ ಪೆಟ್ರೋಲ್ ಬಂಕ್‌ನಲ್ಲಿ ಕೊಟ್ಟು ಬಚಾವ್ ಆಗುತ್ತಿದ್ದಾರೆ. ಆದರೆ ಇದರಿಂದ ಪೆಟ್ರೋಲ್ ಬಂಕ್ ಮಾಲೀಕರು ಕಂಗೆಟ್ಟಿದ್ದಾರೆ. ಜನರು 100-200 ರೂ. ಪೆಟ್ರೋಲ್ ಹಾಕಿಸಿದರೂ 2,000 ರೂ. ಪಿಂಕ್ ನೋಟನ್ನು ಕೊಡುತ್ತಿದ್ದಾರೆ. ಇದರಿಂದ ಬಂಕ್ ಮಾಲೀಕರಿಗೆ ಚೇಂಜ್ ಸಮಸ್ಯೆ ಆಗುತ್ತಿದೆ. ಇದನ್ನೂ ಓದಿ: ಇಂದಿನಿಂದ 2,000 ಮುಖಬೆಲೆ ನೋಟು ವಿನಿಮಯ ಪ್ರಕ್ರಿಯೆ ಆರಂಭ
ಇದರಿಂದ ಹೈರಾಣಾದ ಗೊರಗುಂಟೆಪಾಳ್ಯ (Goraguntepalya) ಪೆಟ್ರೋಲ್ ಬಂಕ್ ಮಾಲೀಕರು ಹೊಸದೊಂದು ಬೋರ್ಡ್ ಅನ್ನು ತಮ್ಮ ಪೆಟ್ರೋಲ್ ಬಂಕ್‌ನಲ್ಲಿ ಅಳವಡಿಸಿದ್ದಾರೆ. ಆ ಬೋರ್ಡ್‌ನಲ್ಲಿ 1,500 ರೂ.ಗಳ ಪೆಟ್ರೋಲ್ ಹಾಕಿಸಿದರೆ ಮಾತ್ರ 2,000 ರೂ. ನೋಟನ್ನು ನೀಡಿ ಸಹಕರಿಸಿ ಎಂದು ಬರೆಯುವ ಮೂಲಕ ಜನರಲ್ಲಿ ಚೇಂಜ್ ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಬಳಿ ಅಂಕಿ ಅಂಶಗಳೇ ಇಲ್ಲ – ಶೀಘ್ರವೇ ಗ್ಯಾರಂಟಿ ಯೋಜನೆ ಜಾರಿ ಅನುಮಾನ
ನವದೆಹಲಿ: ನಾಳೆ (ಮಂಗಳವಾರ)ಯಿಂದ 2000 ರೂಪಾಯಿ ನೋಟುಗಳ ಹಿಂತೆಗೆತಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಸೆಪ್ಟೆಂಬರ್ 30ರವರೆಗೂ ಈ ಪ್ರಕ್ರಿಯೆ ನಿರಂತರವಾಗಿ ಸಾಗಲಿದೆ.
50 ಸಾವಿರಕ್ಕಿಂತ ಹೆಚ್ಚು ಮೊತ್ತದ 2000 ರೂ. ಮುಖಬೆಲೆಯ ನೋಟುಗಳನ್ನು ಠೇವಣಿ ಇಡುವಾಗ ಪ್ಯಾನ್ ನಂಬರ್ (PAN Number) ನೀಡುವುದು ಕಡ್ಡಾಯ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ (Shaktikant Das) ಸ್ಪಷ್ಟಪಡಿಸಿದ್ದಾರೆ. ಈ ಹಿಂದೆಯೂ ಇದು ಇತ್ತು, ಈಗಲೂ ಇದೆ. ಮುಂದೆಯೂ ಇರುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2000 ರೂ.ಗೆ ಗುಡ್‌ಬೈ – ಗೊಂದಲ ಬೇಡ, ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
2000 ರೂ. ನೋಟುಗಳ ವಿನಿಯಮಕ್ಕೆ ಯಾವುದೇ ದಾಖಲೆ, ಖಾತೆ ಹೊಂದಿರುವ ಅಗತ್ಯವಿಲ್ಲ ಎನ್ನುವ ನಿಯಮ, ಕಪ್ಪುಕುಳಗಳಿಗೆ ಅನುಕೂಲವಾಗಲಿದೆ. ಕೇಂದ್ರ ಸರ್ಕಾರವೇ ಕಪ್ಪು ಕುಳಗಳಿಗೆ ಅನುಕೂಲ ಮಾಡಿಕೊಟ್ಟಂತೆ ಕಾಣುತ್ತಿದೆ ಎಂದು ಮಾಜಿ ವಿತ್ತಸಚಿವ ಪಿ. ಚಿದಂಬರಂ ಗಂಭೀರ ಆರೋಪ ಮಾಡಿದ್ದಾರೆ. ಕಪ್ಪು ಹಣವನ್ನು ಬಹಿರಂಗಪಡಿಸಲು 2000 ರೂ. ನೋಟುಗಳನ್ನು ಹಿಂಪಡೆಯಲಾಗುತ್ತಿದೆ ಎಂಬ ಬಿಜೆಪಿ ವಾದವೇ ಸುಳ್ಳು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 2 ಸಾವಿರ ರೂ. ನೋಟು ಮೋದಿಗೆ ಇಷ್ಟವಿರಲಿಲ್ಲ – ಸಭೆಯ ಮಾಹಿತಿ ರಿವೀಲ್ ಮಾಡಿದ ನೃಪೇಂದ್ರ ಮಿಶ್ರಾ
ಮಧ್ಯಪ್ರದೇಶದ ಇಂದೋರ್ ಸೇರಿ ಹಲವೆಡೆ ಪೆಟ್ರೋಲ್ ಬಂಕ್‍ಗಳಲ್ಲಿ 2000 ರೂ. ನೋಟುಗಳ ಚಲಾವಣೆ ಹೆಚ್ಚಿವೆ. ಜೊತೆಗೆ ಜೊಮೋ ಸ್ವಿಗ್ಗಿಯಲ್ಲಿ ಆರ್ಡರ್ ಮಾಡುವವರು ಪಿಂಕ್ ನೋಟ್ (Pink Notes) ಗಳನ್ನೇ ಕ್ಯಾಶ್ ರೂಪದಲ್ಲಿ ನೀಡುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ 2000 ರೂ. ಮುಖಬೆಲೆಯ ನೋಟುಗಳು ಬರುವ ಪ್ರಮಾಣ ಶೇ.72ರಷ್ಟು ಹೆಚ್ಚಿದೆ ಎಂದು ಝೊಮ್ಯಾಟೋ ಹೇಳಿಕೊಂಡಿದೆ.
ಬೆಂಗಳೂರು: ಇಷ್ಟು ದಿನ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬ್ಯಾನ್ ಆಗುತ್ತೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಈಗ ಅದಕ್ಕೆ ಪುಷ್ಠಿ ಎಂಬಂತೆ ಮಾರ್ಚ್ 1ರಿಂದ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಸಿಗಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂಬುದು ಜನರ ಮಾತಾಗಿದ್ದು, ಸಿಲಿಕಾನ್ ಸಿಟಿಯ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟ್ ಸಿಗುತ್ತಾ ಇದೆಯಾ? ಇಲ್ವ? ಎಂದು ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಆತಂಕಕಾರಿ ವಿಚಾರ ಬಯಲಾಗಿದೆ.
ಇಂಡಿಯನ್ ಬ್ಯಾಂಕ್ ಹೇಳಿದ್ದೇನು?
ಫೆ. 17ರಂದು ಇಂಡಿಯನ್ ಬ್ಯಾಂಕಿನ ಲೆಂಡರ್ಸ್ ಡಿಜಿಟಲ್ ಬ್ಯಾಂಕಿಂಗ್ ವಿಭಾಗ ಸುತ್ತೋಲೆ ಹೊರಡಿಸಿದೆ. 2000 ರೂಪಾಯಿ ಮುಖಬೆಲೆಯ ನೋಟುಗಳು ಭಾರಿ ಮೊತ್ತದ್ದಾಗಿದ್ದು, ಇದರಿಂದ ಚಿಲ್ಲರೆ ವ್ಯಾಪಾರಿಗಳು ಹಾಗೂ ಗ್ರಾಹಕರು ಚೇಂಜ್ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಈ ನೋಟುಗಳ ವ್ಯವಹಾರವನ್ನು ನಮ್ಮ ಬಾಂಕಿನಲ್ಲಿ ಸ್ಥಗಿತಗೊಳಿಸಲಾಗಿದ್ದು, ಕೇವಲ 100, 200 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳು ಮಾತ್ರ ನಮ್ಮ ಎಟಿಎಂಗಳಲ್ಲಿ ಲಭ್ಯವಿರುತ್ತೆ ಎಂದು ತಿಳಿಸಿತ್ತು. ಅಲ್ಲದೇ ಮಾರ್ಚ್ 1ರಿಂದ 2000 ರೂಪಾಯಿ ನೋಟು ನಮ್ಮಲ್ಲಿ ಸಿಗಲ್ಲ ಎಂದು ಹೇಳಿತ್ತು.
ಕಳೆದ ನಾಲ್ಕೈದು ತಿಂಗಳಿನಿಂದ ಎಟಿಎಂಗಳಲ್ಲಿ 2 ಸಾವಿರ ನೋಟು ಹೆಚ್ಚಾಗಿ ಸಿಗುತ್ತಿಲ್ಲ. 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂದು ಗ್ರಾಹಕರು ಮಾತಾಡಿಕೊಳ್ಳುತ್ತಿದ್ದರು. ಅದಕ್ಕೆ ಪುಷ್ಠಿ ಎಂಬಂತೆ ಇಂಡಿಯಾನ್ ಬ್ಯಾಂಕ್ ಆತಂಕಕಾರಿ ಮಾಹಿತಿ ನೀಡಿದೆ. ಇದರಿಂದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬೆಂಗಳೂರಿನ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟ್ ಸಿಗುತ್ತಾ ಇದೆಯಾ? ಇಲ್ವ ಎಂದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಿದಾಗ ಎರಡು ಸಾವಿರ ನೋಟ್ ನಾಪತ್ತೆಯಾಗಿರೋದು ಪತ್ತೆಯಾಗಿದೆ.
ಸ್ಥಳ- ಮತ್ತಿಕೆರೆ
ಮತ್ತಿಕೆರೆ ಸರ್ಕಲ್‍ನಲ್ಲಿ ಇರುವ ಎಸ್‍ಬಿಐ ಎಟಿಎಂನಲ್ಲಿ 2 ಸಾವಿರ ನೋಟ್ ಸಿಗುತ್ತಿದೆಯಾ? ಇಲ್ವಾ ಎಂದು ಪಬ್ಲಿಕ್ ಟಿವಿ ತಂಡ ರಿಯಾಲಿಟಿ ಚೆಕ್ ಮಾಡೋದಕ್ಕೆ ಮುಂದಾಯಿತು. ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಗ್ರಾಹಕರನ್ನು ಕೂಡ ಮಾತಾಡಿಸಿದೇವು. ಈ ಎಟಿಎಂನಲ್ಲಿ 2 ಸಾವಿರ ರೂಪಾಯಿ ಡ್ರಾ ಮಾಡಿದಾಗ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬರಲಿಲ್ಲ. ಬದಲಿಗೆ ಬರೀ 500 ರೂಪಾಯಿ ನೋಟುಗಳು ಮಾತ್ರ ಬಂದವು. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರು ಕಳೆದ 20 ದಿನಗಳಿಂದಲೂ 2 ಸಾವಿರ ರೂಪಾಯಿ ನೋಟು ಸಿಗುತ್ತಿಲ್ಲ ಎಂದರು.
ಸ್ಥಳ- ಯಲಹಂಕ
ಇತ್ತ ಯಲಹಂಕ ಸರ್ಕಲ್‍ನಲ್ಲಿ ಕೂಡ ಕೊಟಕ್ ಮಹಿಂದ್ರಾ ಬ್ಯಾಂಕ್ ಎಟಿಎಂನಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬರುತ್ತಾ ಅಂತಾ ಚೆಕ್ ಮಾಡಿದ್ದೆವು. ಆದರೆ ಅಲ್ಲಿ ಕೂಡ ಬರೀ 500 ರೂಪಾಯಿ ನೋಟು ಬಂದವು. ಯಾಕೆ 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂದು ಸೆಕ್ಯೂರಿಟಿನಾ ಕೇಳುದರೆ, ಇಲ್ಲಿ ನಾಲ್ಕೈದು ತಿಂಗಳಿಂದ 2 ಸಾವಿರ ನೋಟು ಬರುತ್ತಿಲ್ಲ. ಮತ್ತೆ ಡೆಪಾಸಿಟ್ ಕೂಡ ಮಾಡ್ತಿಲ್ಲ ಎಂದು ತಿಳಿಸಿದರು.
ಸ್ಥಳ- ಹೆಬ್ಬಾಳ
ಮತ್ತಿಕೆರೆ ,ಯಲಹಂಕ ಎರಡು ಕಡೆ ಎಟಿಎಂನಲ್ಲೂ ಕೂಡ 2 ಸಾವಿರ ರೂಪಾಯಿ ನೋಟ್ ಬರಲಿಲ್ಲ. ಬಳಿಕ ಹೆಬ್ಬಾಳದ ಐಸಿಐಸಿಐ ಬ್ಯಾಂಕ್‍ನ ಎಟಿಎಂನಲ್ಲಿ ರಿಯಾಲಿಟಿ ಚೆಕ್ ಮಾಡಿದಾಗ, ಅಲ್ಲಿ ಕೂಡ 2 ಸಾವಿರ ರೂಪಾಯಿ ನೋಟು ಸಿಗಲಿಲ್ಲ.
ಸ್ಥಳ-ಮಲ್ಲೇಶ್ವರಂ
ಬಳಿಕ ಅಲ್ಲಿಂದ ಮಲ್ಲೇಶ್ವರ ಕಡೆ ಹೋಗಿ ಒಂದು ಎಟಿಎಂನಲ್ಲಿ ಎರಡು ಸಾವಿರ ನೋಟು ಡ್ರಾ ಮಾಡಿಕೊಳ್ಳಲು ಮುಂದಾದೆವು. ಆದರೆ ಇಲ್ಲಿಯೂ ಅದೇ ಪರಸ್ಥಿತಿ, ಕೇವಲ 100, 200 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳೇ ಎಂಟಿಎಂನಲ್ಲಿ ಸಿಕ್ಕಿತು.
ಹೀಗೆ ಬೆಂಗಳೂರಿನ ಬಹುತೇಕ ಎಟಿಎಂಗಳಲ್ಲಿ 2 ಸಾವಿರ ನೋಟು ಸಿಗಲಿಲ್ಲ. ಬರೀ 500, 200, 100 ರೂಪಾಯಿ ಮುಖಬೆಲೆಯ ನೋಟುಗಳು ಸಿಗುತ್ತಿವೆ. ಈ ಪರಿಸ್ಥಿತಿ ನಾಲ್ಕೈದು ತಿಂಗಳಿಂದನೂ ಇದೆ. ನೋಟು ಸಿಗುತ್ತಿಲ್ಲ ಎಂಬ ಮಾಹಿತಿ ಸದ್ಯ ಗ್ರಾಹಕರಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದ್ದು, ಮುಂದಿನ ದಿನಗಳಲ್ಲಿ 2 ಸಾವಿರ ನೋಟ್ ಬ್ಯಾನ್ ಆಗುತ್ತಾ ಎಂಬ ಅನುಮಾನಗಳು ಕೂಡ ಗ್ರಾಹಕರಲ್ಲಿ ಕಾಡುತ್ತಿದೆ.