Tag: 200 ರೂ

  • 200 ರೂ. ನೀಡದ್ದಕ್ಕೆ ಗುಂಡಿಕ್ಕಿ ಸ್ನೇಹಿತನ ಕೊಂದ ಪಾಪಿ

    200 ರೂ. ನೀಡದ್ದಕ್ಕೆ ಗುಂಡಿಕ್ಕಿ ಸ್ನೇಹಿತನ ಕೊಂದ ಪಾಪಿ

    – ಹಣಕ್ಕಾಗಿ ಹಲವು ಬಾರಿ ಪೀಡಿಸಿದ್ದ ಆರೋಪಿ

    ಲಕ್ನೋ: ಸಣ್ಣ ಸಣ್ಣ ವಿಚಾರಕ್ಕೂ ಕೊಲೆ ಆಗುವುದನ್ನು ನೋಡಿರುತ್ತೇವೆ. ಆದೇ ರೀತಿ ಇಲ್ಲೊಂದು ಪ್ರಕರಣ ನಡೆದಿದ್ದು, 200 ರೂ. ನೀಡಲು ವ್ಯಕ್ತಿ ನಿರಾಕರಿಸಿದ್ದಕ್ಕೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

    ಉತ್ತರ ಪ್ರದೇಶದ ಅಲೀಘರ್ ನಲ್ಲಿ ಘಟನೆ ನಡೆದಿದ್ದು, ಜನಸಂದಣಿಯಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆಯಲ್ಲಿ 30 ವರ್ಷದ ಅನ್ಸಾರ್ ಅಹ್ಮದ್ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಅನ್ಸಾರ್ ಅಹ್ಮದ್ ಮೂರು ಮಕ್ಕಳ ತಂದೆಯಾಗಿದ್ದು, ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಶಂಶಾದ್ ಮಾರ್ಕೆಟ್‍ನಲ್ಲಿ ಪಂಚರ್ ಅಂಗಡಿ ಇಟ್ಟುಕೊಂಡಿದ್ದ. ಶನಿವಾರ ಆರೋಪಿ ಆಸಿಫ್ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಆರೋಪಿ ಡ್ರಗ್ಸ್ ವ್ಯಸನಿಯಾಗಿದ್ದು, ಗುಂಡು ಹಾರಿಸಿ ಕೊಲೆ ಮಾಡುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಎಸ್‍ಪಿ ಅಭಿಶೇಕ್ ಕುಮಾರ್ ತಿಳಿಸಿದ್ದಾರೆ. ಆರೋಪಿ ಆಸಿಫ್ ತನ್ನ ಮೋಟಾರ್ ಸೈಕಲ್ ಇಟ್ಟುಕೊಂಡು ಸಾಲ ನೀಡುವಂತೆ ಅಹ್ಮದ್ ಬಳಿ ಕೇಳಿದ್ದಾನೆ. ಆದರೆ ಇದನ್ನು ಅಹ್ಮದ್ ತಿರಸ್ಕರಿಸಿದ್ದಾನೆ.

    ಬಳಿಕ ಆರೋಪಿ ಮತ್ತೆ ಅಹ್ಮದ್ ಅಂಗಡಿ ಬಳಿ ಆಗಮಿಸಿ 200 ರೂ. ನೀಡುವಂತೆ ಬೇಡಿಕೊಂಡಿದ್ದಾನೆ. ಆದರೆ ಅಹ್ಮದ್ ಇದಕ್ಕೆ ನಿರಾಕರಿಸಿದ್ದು, ತಕ್ಷಣ ಆಸಿಫ್ ತನ್ನ ಜೇಬಿನಲ್ಲಿದ್ದ ದೇಶಿ ಬಂದೂಕು ತೆಗೆದು ಜನರು ಯಾರಾದರೂ ನೋಡುತ್ತಿದ್ದಾರಾ ಎಂಬುದನ್ನು ಗಮನಿಸಿ ಅಹ್ಮದ್ ತಲೆಯ ಭಾಗಕ್ಕೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಬಳಿಕ ಹತ್ತಿರದಲ್ಲೇ ನಿಲ್ಲಿಸಿದ್ದ ದ್ವಿಚಕ್ರ ವಾಹನ ಏರಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಶೀಘ್ರವೇ ಬರಲಿದೆ 200, 500 ಮುಖಬೆಲೆಯ ಹೊಸ ನೋಟುಗಳು

    ಶೀಘ್ರವೇ ಬರಲಿದೆ 200, 500 ಮುಖಬೆಲೆಯ ಹೊಸ ನೋಟುಗಳು

    ನವದೆಹಲಿ: ಶೀಘ್ರವೇ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ 200 ಮತ್ತು 500 ಮುಖಬೆಲೆಯ ನೋಟುಗಳನ್ನು ಪರಿಚಯಿಸಲಿದೆ.

    ಮಹಾತ್ಮ ಗಾಂಧೀಜಿ ಭಾವಚಿತ್ರದ ಜೊತೆಗೆ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಸಹಿ ಈ ನೋಟ್ ನಲ್ಲಿ ಇರಲಿದೆ. ಶಕ್ತಿಕಾಂತ್ ದಾಸ್ ಅವರ ಸಹಿ, ಸೀರಿಸ್ ಹೊರತುಪಡಿಸಿ ಸದ್ಯ ಚಾಲ್ತಿಯಲ್ಲಿರುವ ನೋಟ್ ಗಳಿಗೂ ಹೊಸ ನೋಟ್‍ಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಆರ್ ಬಿಐ ತಿಳಿಸಿದೆ.

    ಹೊಸ ನೋಟುಗಳು ಬಿಡುಗಡೆಯಾದ ಬಳಿಕವೂ ಹಳೆಯ ನೋಟುಗಳು ಚಾಲ್ತಿಯಲ್ಲಿರಲಿವೆ. ಆದರೆ ಆರ್ ಬಿಐ ಈ ಹೊಸ ನೋಟುಗಳನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎನ್ನುವ ವಿಚಾರವನ್ನು ಪ್ರಕಟಿಸಿಲ್ಲ.

  • ಈಗ ಅಧಿಕೃತ- ಶೀಘ್ರದಲ್ಲೇ ನಿಮ್ಮ ಕೈಸೇರಲಿವೆ 200 ರೂ. ನೋಟು

    ಈಗ ಅಧಿಕೃತ- ಶೀಘ್ರದಲ್ಲೇ ನಿಮ್ಮ ಕೈಸೇರಲಿವೆ 200 ರೂ. ನೋಟು

    ನವದೆಹಲಿ: 200 ರೂ. ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿವೆ ಎಂಬ ಬಗ್ಗೆ ಹಿಂದೆಯೇ ಸುದ್ದಿಯಾಗಿತ್ತು. ಇದೀಗ ಈ ಸುದ್ದಿ ಅಧಿಕೃತವಾಗಿದೆ. ಸ್ವತಃ ಹಣಕಾಸು ಸಚಿವಾಲಯವೇ 200 ರೂ. ನೋಟುಗಳನ್ನ ಬಿಡುಗಡೆ ಮಾಡಲಿರುವ ಬಗ್ಗೆ ಬುಧವಾರದಂದು ಘೋಷಣೆ ಮಾಡಿದೆ.

    ಆರ್‍ಬಿಐನ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರ್ಸ್‍ನ ಶಿಫಾರಸ್ಸಿನ ಮೇಲೆ ಹಾಗೂ 1934ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 24ರ ಅಡಿ ಈ ನೋಟಿಫಿಕೇಷನ್ ವಿತರಿಸಲಾಗಿದೆ.

    200 ರೂ. ಮುಖಬೆಲೆಯ ಹೊಸ ನೋಟುಗಳ ಜೊತೆಗೆ ಹೊಸ 50 ರೂ. ನೋಟುಗಳ ಬಗ್ಗೆಯೂ ಸರ್ಕಾರ ಖಚಿತಪಡಿಸಿದೆ. ಈಗಾಗಲೇ ಇರುವ 50 ರೂ. ನೋಟುಗಳು ಕೂಡ ಚಲಾವಣೆಯಲ್ಲಿರಲಿವೆ. ಹೊಸ 200 ರೂ. ನೋಟುಗಳನ್ನ ಮೈಸೂರಿನ ಸರ್ಕಾರಿ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತಿದೆ.

    200 ರೂ. ನೋಟುಗಳ ಮುದ್ರಣ ಆರಂಭವಾಗಿದ್ದು, ಶೀಘ್ರದಲ್ಲೇ ಚಲಾವಣೆಗೆ ಬರಲಿವೆ ಎಂದು ಈ ಹಿಂದೆ ಹಣಕಾಸು ರಾಜ್ಯ ಸಚಿವ ಸಂತೋಷ್ ಕುಮಾರ್ ಹೇಳಿದ್ದರು.

    ಕಡಿಮೆ ಮುಖಬೆಲೆಯ ನೋಟುಗಳ ಚಲಾವಣೆ ಹೆಚ್ಚಿಸಲು ಈ ಹೊಸ ನೋಟುಗಳನ್ನ ಪರಿಚಯಿಸಲಾಗುತ್ತಿದೆ. ನೋಟ್‍ಬ್ಯಾನ್ ನಂತರ ಎರಡು ಸಾವಿರ ರೂ. ನೋಟು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಹಾಗೂ 100 ಹಾಗೂ 500 ರೂ. ನೋಟುಗಳ ಪ್ರಮಾಣ ಕಡಿಮೆ ಇದ್ದಿದ್ದರಿಂದ ಜನರು ಚಿಲ್ಲರೆಗಾಗಿ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ದರು.

    ಇದನ್ನೂ ಓದಿ: ಶೀಘ್ರವೇ ಬಿಡುಗಡೆಯಾಗಲಿದೆ ಹಂಪಿಯ ರಥದ ಚಿತ್ರ ಇರೋ 50 ರೂ. ನೋಟುಗಳು!

  • 200 ರೂ. ನೋಟು ಮುದ್ರಣಕ್ಕೆ ಆರ್‍ಬಿಐ ಚಾಲನೆ

    200 ರೂ. ನೋಟು ಮುದ್ರಣಕ್ಕೆ ಆರ್‍ಬಿಐ ಚಾಲನೆ

    ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಆರ್‍ಬಿಐ 200 ರೂ. ನೋಟುಗಳ ಮುದ್ರಣಕ್ಕೆ ಚಾಲನೆ ನೀಡಿದೆ. ಜನರ ವ್ಯವಹಾರವನ್ನು ಸರಳಗೊಳಿಸಲು ಈ ನೋಟುಗಳನ್ನು ಮುದ್ರಿಸಲು ಈಗ ಮುಂದಾಗಿದೆ.

    200 ರೂ. ನೋಟು ಮುದ್ರಣವಾಗುತ್ತಿರುವ ವಿಚಾರವನ್ನು ಆರ್‍ಬಿಐ ಅಧಿಕೃತವಾಗಿ ತಿಳಿಸಿಲ್ಲ. ಆದರೂ ಆರ್‍ಬಿಐ ಮೂಲಗಳು ಮಾಧ್ಯಮಗಳಿಗೆ ನೋಟು ಮುದ್ರಣವಾಗುತ್ತಿರುವ ಬಗ್ಗೆ ಮಾಹಿತಿ ನೀಡಿವೆ.

    ಶೀಘ್ರದಲ್ಲೇ 200 ರೂ. ಮುಖಬೆಲೆಯ ನೋಟುಗಳನ್ನ ಬಿಡುಗಡೆ ಮಾಡಲಿರುವ ಏಪ್ರಿಲ್‍ನಲ್ಲಿ ವರದಿಯಾಗಿತ್ತು. ಮಾರ್ಚ್ ನಲ್ಲಿ ನಡೆದ ಸಭೆಯಲ್ಲಿ ಆರ್‍ಬಿಐ 200 ರೂ. ನೋಟು ಬಿಡುಗಡೆ ಮಾಡುವ ಸಂಬಂಧ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

    2016ರ ನವೆಂಬರ್ 8ರಂದು ಹಳೇ 500 ಹಾಗೂ 1000 ರೂ. ನೋಟ್‍ಗಳನ್ನು ನಿಷೇಧಿಸಿದ್ದ ಮೋದಿ ಸರ್ಕಾರ ಹೊಸ ವಿನ್ಯಾಸದ 500 ರೂ. ಹಾಗೂ ಗುಲಾಬಿ ಬಣ್ಣದ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನ ಬಿಡುಗಡೆ ಮಾಡಿತ್ತು.

     

     

     

     

  • 200 ರೂ. ನೋಟು ಬಿಡುಗಡೆಗೆ ಆರ್‍ಬಿಐ ಪ್ಲಾನ್

    200 ರೂ. ನೋಟು ಬಿಡುಗಡೆಗೆ ಆರ್‍ಬಿಐ ಪ್ಲಾನ್

    ನವದೆಹಲಿ: ಆರ್‍ಬಿಐ ಶೀಘ್ರದಲ್ಲೇ 200 ರೂ. ಮುಖಬೆಲೆಯ ನೋಟುಗಳನ್ನ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ.

    ಇದನ್ನೂ ಓದಿ: ಎಸ್‍ಬಿಐ ಖಾತೆದಾರರಿಗೆ ಶಾಕ್- ಎಟಿಎಂಗಳಲ್ಲಿ ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ವಿತ್‍ಡ್ರಾ ಮಾಡಿದ್ರೆ ಶುಲ್ಕ

    ಕಳೆದ ತಿಂಗಳು ನಡೆದ ಸಭೆಯಲ್ಲಿ ಆರ್‍ಬಿಐ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಆದರೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ ನಂತರವಷ್ಟೆ 200 ರೂ. ನೋಟುಗಳ ಮುದ್ರಣ ಆರಂಭವಾಗಲಿದೆ. ಒಂದು ವೇಳೆ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದ್ರೆ ಜೂನ್ ಬಳಿಕ ಮುದ್ರಣ ಕಾರ್ಯ ಆರಂಭವಾಗಲಿದೆ ಎಂದು ವರದಿಯಾಗಿದೆ. ಅದ್ರೆ ಈ ಬಗ್ಗೆ ಆರ್‍ಬಿಐ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಮತ್ತೆ 2,000 ನೋಟು ನಿಷೇಧವಾಗುತ್ತಾ: ಜನ್ರಲ್ಲಿ ಮೂಡಿದ್ದ ಪ್ರಶ್ನೆಗೆ ಜೇಟ್ಲಿ ಉತ್ತರಿಸಿದ್ರು

    2016ರ ನವೆಂಬರ್ 8ರಂದು ಹಳೇ 500 ಹಾಗೂ 1000 ರೂ. ನೋಟ್‍ಗಳನ್ನು ನಿಷೇಧಿಸಿದ್ದ ಮೋದಿ ಸರ್ಕಾರ ಹೊಸ ವಿನ್ಯಾಸದ 500 ರೂ. ಹಾಗೂ ಗುಲಾಬಿ ಬಣ್ಣದ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನ ಬಿಡುಗಡೆ ಮಾಡಿತ್ತು.

    ಇನ್ನು 1 ಸಾವಿರ ರೂ. ನೋಟು ಕೂಡ ಹೊಸ ವಿನ್ಯಾಸದೊಂದಿಗೆ ಮತ್ತೆ ಬಿಡುಗಡೆಯಾಗಲಿದೆ ಎಂಬ ವದಂತಿಯೂ ಇತ್ತು. ಆದರೆ 1000 ರೂ. ನೋಟನ್ನು ಮತ್ತೆ ಚಲಾವಣೆಗೆ ತರುವ ಬಗ್ಗೆ ಸರ್ಕಾರ ಚಿಂತಿಸಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಸ್ಪಷ್ಟಪಡಿಸಿದ್ದರು.

    ಇದನ್ನೂ ಓದಿ: ಹೊಸ ನೋಟುಗಳ ನಕಲು ತಡೆಗೆ ಸರ್ಕಾರ ಮಾಡಿರೋ ಪ್ಲಾನ್ ಏನು ಗೊತ್ತಾ?