Tag: 200 ಯೂನಿಟ್‌ ವಿದ್ಯುತ್‌

  • 200 ಯೂನಿಟ್‌ ವಿದ್ಯುತ್‌ ಫ್ರೀ – ಷರತ್ತುಗಳು ಅನ್ವಯ

    200 ಯೂನಿಟ್‌ ವಿದ್ಯುತ್‌ ಫ್ರೀ – ಷರತ್ತುಗಳು ಅನ್ವಯ

    ಬೆಂಗಳೂರು: ಮೊದಲ ಗ್ಯಾರಂಟಿಯಾಗಿ ಗೃಹಜ್ಯೋತಿ (Gruha Jyoti) ಯೋಜನೆ ಮಾಡಲಾಗುವುದು. 200 ಯೂನಿಟ್‌ (200 Unit Electricity) ವರೆಗೆ ವಿದ್ಯುತ್‌ ಉಚಿತವಾಗಿ ನೀಡಲಾಗುವುದು. ಆಗಸ್ಟ್‌ ತಿಂಗಳಿಂದ ಬರುವ ಬಿಲ್‌ನಿಂದ ಯೋಜನೆ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

    ಗೃಹಜ್ಯೋತಿ ಯೋಜನೆಗೆ ವಾರ್ಷಿಕ ಸರಾಸರಿ ಮಾನದಂಡವಿದೆ. 12 ತಿಂಗಳ ಸರಾಸರಿ ಪಡೆದುಕೊಂಡು ಅದರ ಮೇಲೆ 10% ರಷ್ಟು ವಿದ್ಯುತ್‌ ಉಚಿತವಾಗಿ ನೀಡಲಾಗುವುದು. ಯಾರು ಎಷ್ಟು ವಿದ್ಯುತ್ ಬಳಸುತ್ತಾರೆ ಎಂಬುದನ್ನು 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧರಿಸಿ, ಅದರ ಮೇಲೆ 10% ರಷ್ಟು ವಿದ್ಯುತ್ ಉಚಿತವಾಗಿ ಕೊಡಲಾಗುವುದು. ಉದಾಹರಣೆಗೆ, 70 ಯೂನಿಟ್‌ ಬಳಸುವವರು ಅದಕ್ಕೆ 10% (ಅಂದರೆ ಒಟ್ಟು 80%) ಬಳಕೆ ಮಾಡಬಹುದು. ಕಳೆದ ವರ್ಷ ಸರಾಸರಿ ತಿಂಗಳಿಗೆ 100 ಯೂನಿಟ್ ಬಳಸಿದ್ದವರು ಈಗ 110 ಯೂನಿಟ್ ಬಳಸಿದ್ರೆ ವಿದ್ಯುತ್ ಉಚಿತವಾಗಿ ಸಿಗುತ್ತದೆ. ಒಂದು ವೇಳೆ 110ಕ್ಕಿಂತ ಹೆಚ್ಚು ಯೂನಿಟ್ ಬಳಸಿದ್ರೆ ಹೆಚ್ಚುವರಿ ಯೂನಿಟ್‌ಗೆ ಬಿಲ್ ಕಟ್ಟಬೇಕು. ಹೀಗೆ 200 ಯೂನಿಟ್‌ ವರೆಗೆ ವಿದ್ಯುತ್‌ ಬಳಸುವವರು ಬಿಲ್‌ ಕಟ್ಟುವಂತಿಲ್ಲ. 200 ಯೂನಿಟ್‌ ಉಚಿತ ಅಂತ ಎಲ್ಲರೂ ಬೇಕಾಬಿಟ್ಟಿ ವಿದ್ಯುತ್‌ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: 180 ದಿನಗಳಾದರೂ ಕೆಲಸ ಸಿಗದ ನಿರುದ್ಯೋಗಿಗಳಿಗೆ ಯುವ ನಿಧಿ

    ಜು.1 ರಿಂದ ಆಗಸ್ಟ್ ವರೆಗಿನ ಖರ್ಚಿಗೆ ಇದು ಲೆಕ್ಕ. ಜುಲೈನಿಂದ ಮಾಡಿರುವ ಖರ್ಚಿನ ಬಿಲ್ ಆಗಸ್ಟ್‌ನಲ್ಲಿ ಬರಲಿದೆ. ಜುಲೈವರೆಗೆ ವಿದ್ಯುತ್‌ ಬಿಲ್ ಬಾಕಿ ಉಳಿಸಿಕೊಂಡವರಿಗೆ ಸಮಯ ಕೊಡುತ್ತೇವೆ.‌ ಹಳೇ ವಿದ್ಯುತ್‌ ಬಾಕಿಯನ್ನು ಗ್ರಾಹಕರೇ ಪಾವತಿಸಬೇಕು. ಆಗಸ್ಟ್‌ನಿಂದ ಬರುವ ಬಿಲ್‌ನ್ನು ಜನರು ಕಟ್ಟುವ ಅಗತ್ಯವಿಲ್ಲ ಎಂದು ಹೇಳಿದರು.

    ಆರ್‌ಆರ್‌ ನಂಬರ್‌ ಕೌಂಟ್‌ ಮಾಡುವಾಗ ಒಂದೇ ಆರ್‌ಆರ್‌ ನಂಬರ್‌ ಆಗಿದ್ದರೆ ಹೆಚ್ಚುವರಿ ಮೀಟರ್‌ ಬಾಡಿಗೆ ಮನೆ ಮೀಟರ್‌ಗಳಿಗೆ ಅನ್ವಯ ಆಗಲ್ಲ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಆಗಸ್ಟ್ 15 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿ: ಯಾರು ಅರ್ಜಿ ಸಲ್ಲಿಕೆ ಮಾಡಬಹುದು?

  • ಗ್ಯಾರಂಟಿ ಗೊಂದಲದ ನಡುವೆ ಕರೆಂಟ್ ಬಿಲ್ ಗೋಲ್‌ಮಾಲ್: ಜೆಸ್ಕಾಂಗೆ ಲಕ್ಷಾಂತರ ರೂಪಾಯಿ ನಷ್ಟ

    ಗ್ಯಾರಂಟಿ ಗೊಂದಲದ ನಡುವೆ ಕರೆಂಟ್ ಬಿಲ್ ಗೋಲ್‌ಮಾಲ್: ಜೆಸ್ಕಾಂಗೆ ಲಕ್ಷಾಂತರ ರೂಪಾಯಿ ನಷ್ಟ

    ರಾಯಚೂರು: ಕಾಂಗ್ರೆಸ್ ಸರ್ಕಾರ (Congress Government) ಘೋಷಿಸಿರುವ 200 ಯೂನಿಟ್‌ ಉಚಿತ ವಿದ್ಯುತ್ (200 Unit Electricity) ಗ್ಯಾರಂಟಿ ಗೊಂದಲದ ನಡುವೆ ರಾಯಚೂರಿನ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಗೋಲ್‌ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಜೆಸ್ಕಾಂಗೆ (GESCOM) ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ.

    ಗ್ರಾಮಿಣ ಭಾಗದಲ್ಲಿ ಗ್ರಾಮಸ್ಥರು, ಬಡ ರೈತರಿಂದ (Farmers) ವಸೂಲಿ ಮಾಡಿದ ವಿದ್ಯುತ್ ಬಿಲ್‌ಗೆ ರಶೀದಿ ಕೊಡದೇ ಸಂಗ್ರಹಿಸಿದ ಹಣವನ್ನ ಬ್ಯಾಂಕ್‌ಗೂ ಕಟ್ಟದೇ ಗ್ರಾಮ ವಿದ್ಯುತ್ ಬಿಲ್‌ ಕಲೆಕ್ಟರ್‌ಗಳೇ ಗುಳುಂ ಮಾಡಿರುವುದು ಬಯಲಾಗಿದೆ. ತಕ್ಷಣದ ಮಾಹಿತಿ ಪ್ರಕಾರ ರಾಯಚೂರು ತಾಲೂಕಿನ ಚಂದ್ರಬಂಡಾ ಜೆಸ್ಕಾಂ ಶಾಖೆ ಸೇರಿ ಸುಮಾರು 20 ಲಕ್ಷ ರೂಪಾಯಿ ವಂಚನೆಯಾಗಿರುವುದು ಕಂಡುಬಂದಿದೆ ಎಂದು ಜೆಸ್ಕಾಂ ಇಇ ಚಂದ್ರಶೇಖರ ದೇಸಾಯಿ ಹೇಳಿದ್ದಾರೆ. ಇದನ್ನೂ ಓದಿ: ವಿಪಕ್ಷಗಳ ಬಹಿಷ್ಕಾರಕ್ಕೆ ದೊಡ್ಡಗೌಡರ ಡೋಂಟ್ ಕೇರ್ – ಸಂಸತ್ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ನಿರ್ಧಾರ

    ಆರ್.ಆರ್ ಸಂಖ್ಯೆಗಳ ವಸೂಲಾತಿ ಹಾಗೂ ಬ್ಯಾಂಕ್‌ಗೆ ಹಣ ಸಂದಾಯವಾದ ಕುರಿತು ಜೆಸ್ಕಾಂ ಅಧಿಕಾರಿಗಳು ಪರಿಶೀಲಿಸಿದಾಗ ನಕಲಿ ದಾಖಲೆಗಳ ಮೂಲಕ ಗೋಲ್‌ಮಾಲ್ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಚಂದ್ರಬಂಡಾ ಗ್ರಾಮದ ವಿದ್ಯುತ್ ಬಿಲ್‌ ಕಲೆಕ್ಟರ್‌ ಮಲ್ಲೇಶ್‌ಗೆ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನೋಟಿಸ್ ನೀಡಿದ್ದು ಕ್ರಮಕ್ಕೆ ಮುಂದಾಗಿದ್ದಾರೆ. ಆದ್ರೆ ಚಂದ್ರಬಂಡಾ ಮಾತ್ರವಲ್ಲದೇ ಹಲವೆಡೆ ಇದೇ ರೀತಿ ಗೋಲ್ ಮಾಲ್ ನಡೆದಿದ್ದು ಕೋಟ್ಯಾಂತರ ರೂಪಾಯಿ ವಂಚಿಸಿರುವ ಅನುಮಾನ ಮೂಡಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಅಮುಲ್ ಹಾಲು ಸಂಗ್ರಹಿಸುವುದನ್ನು ನಿಲ್ಲಿಸಿ: ಅಮಿತ್‌ ಶಾಗೆ ಸ್ಟಾಲಿನ್‌ ಪತ್ರ

    ಗ್ರಾಮೀಣ ಭಾಗದ ಬಹುತೇಕ ಬಡ ರೈತರು ಉಚಿತ ವಿದ್ಯುತ್ ಭರವಸೆ ಇಟ್ಟುಕೊಂಡು ಕುಳಿತಿರುವಾಗ ತಮ್ಮ ಹಣ ದುರ್ಬಳಕೆಯಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಬಿಲ್ ಕೊಡದೇ, ಹಣವನ್ನ ಬ್ಯಾಂಕ್‌ಗೂ ಕಟ್ಟದೇ ಇರುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಅಂತಾ ಒತ್ತಾಯಿಸಿದ್ದಾರೆ.