Tag: 2.0

  • ಡಬ್ ಫಿಲ್ಮ್ ಪೈಕಿ ಗರಿಷ್ಟ ಗಳಿಕೆ – ಹಿಂದಿ ಬಾಕ್ಸ್ ಆಫೀಸ್‍ನಲ್ಲೂ ಕೆಜಿಎಫ್ ಹವಾ!

    ಡಬ್ ಫಿಲ್ಮ್ ಪೈಕಿ ಗರಿಷ್ಟ ಗಳಿಕೆ – ಹಿಂದಿ ಬಾಕ್ಸ್ ಆಫೀಸ್‍ನಲ್ಲೂ ಕೆಜಿಎಫ್ ಹವಾ!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜೆಎಫ್ ಸಿನಿಮಾ ಅನೇಕ ಮೈಲುಗಲ್ಲನ್ನು ಬರೆದಿದ್ದು, ಈಗ ಹಿಂದಿ ಬಾಕ್ಸ್ ಆಫೀಸ್‍ನಲ್ಲೂ ಕಮಾಲ್ ಮಾಡಿದೆ.

    ಹಿಂದಿಗೆ ಡಬ್ ಆಗಿರುವ ಕೆಜಿಎಫ್ ಚಿತ್ರವು ಈ ವರೆಗೆ 40.39 ಕೋಟಿ ರೂ. ಗಳಿಸಿದೆ. ಈ ಮೂಲಕ ಹಿಂದಿಗೆ ಡಬ್ ಆದ ಸಿನಿಮಾಗಳ ಪೈಕಿ ಅತಿ ಹೆಚ್ಚು ಹಣ ಗಳಿಸಿದ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆ ಕೆಜಿಎಫ್ ಪಾತ್ರವಾಗಿದೆ. ಹೀಗಾಗಿ ಬಾಹುಬಲಿ 2, 2.0, ಹಾಗು ಬಾಹುಬಲಿ ಭಾಗ 1 ಸಿನಿಮಾದ ನಂತರದ ಸ್ಥಾನದಲ್ಲಿ ಕೆಜಿಎಫ್ ಗುರುತಿಸಿಕೊಂಡಿದೆ. ಇದನ್ನು ಓದಿ: ಪಾಕಿಸ್ತಾನದಲ್ಲೂ ಕೆಜಿಎಫ್ ಹವಾ ಶುರು

    ಕೆಜಿಎಫ್ ಸಿನಿಮಾ ತೆರೆಕಂಡ ಮೊದಲ ವಾರದಲ್ಲಿ 21.45 ಕೋಟಿ ರೂ., ಎರಡನೇ ವಾರಕ್ಕೆ 11.50 ಕೋಟಿ ಹಾಗೂ ಮೂರನೇ ವಾರ 7.44 ಕೋಟಿ ರೂ, ಗಳಿಸುವ ಮೂಲಕ ಒಟ್ಟು 40.39 ಕೋಟಿ ರೂ. ಗಡಿದಾಟಿದೆ.

    ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ ಭಾಗ 1 ಸಿನಿಮಾ ಜುಲೈ 10, 2015ರಂದು ತೆರೆಕಂಡಿತ್ತು. 180 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಹಿಂದಿ ವರ್ಷನಿಂದ 120 ಕೋಟಿ ರೂ. ಸೇರಿದಂತೆ, ಒಟ್ಟು 650 ಕೋಟಿ ರೂ. ಗಳಿಸಿತ್ತು. ಇದರ ನಂತರದಲ್ಲಿ ಎಪ್ರಿಲ್ 28, 2017ರಂದು ತೆರೆಕಂಡ ಬಾಹುಬಲಿ 2 ಸಿನಿಮಾ ಬರೋಬ್ಬರಿ 1,810 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಬಾಹುಬಲಿ 2 ಸಿನಿಮಾ ಹಿಂದಿ ವರ್ಷನ್ ಒಂದರಲ್ಲಿ ಕೇವಲ 34ನೇ ದಿನಕ್ಕೆ 500 ಕೋಟಿ ರೂ. ಬಾಚಿತ್ತು.

    ರಜನಿಕಾಂತ್, ಅಕ್ಷಯ್ ಕುಮಾರ್ ಅಭಿನಯದ 2.0 ಸಿನಿಮಾ ಹಿಂದಿ ವರ್ಷನ್‍ನಲ್ಲಿ 183.75 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿತ್ತು. ಇದನ್ನು ಓದಿ:`ಉತ್ತರಾಯಣ’ ದಿಂದ `ಕೆಜಿಎಫ್’ವರೆಗೆ – ರಾಕಿಂಗ್ ಸ್ಟಾರ್ ಯಶ್ ನಡೆದು ಬಂದ ಹಾದಿ ಇಲ್ಲಿದೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾವ್ 2.0 ಟ್ರೇಲರ್ ರಿಲೀಸ್ ಆಯ್ತು- ರೀ ಲೋಡೆಡ್ ಚಿಟ್ಟಿ ಕಮ್ ಬ್ಯಾಕ್

    ವಾವ್ 2.0 ಟ್ರೇಲರ್ ರಿಲೀಸ್ ಆಯ್ತು- ರೀ ಲೋಡೆಡ್ ಚಿಟ್ಟಿ ಕಮ್ ಬ್ಯಾಕ್

    -15 ನಿಮಿಷದಲ್ಲಿ ಮೂರು ಲಕ್ಷಕ್ಕೂ ಅಧಿಕ ವ್ಯೂವ್

    ಬೆಂಗಳೂರು: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ನಟ ರಜಿನಿಕಾಂತ್ ಅಭಿನಯದ ‘ರೋಬೋ 2.0’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಚಿತ್ರ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. 2010ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಇಂದು ಟ್ರೇಲರ್ ಬಿಡುಗಡೆಯಾಗಿದ್ದು ಕುತೂಹಲವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

    ಟೀಸರ್ ನೋಡಿದಾಗಲೇ ಚಿತ್ರಕ್ಕೆ ಭಾರೀ ತಂತ್ರಜ್ಞಾನವನ್ನು ಬಳಸಲಾಗಿದೆ ಎನ್ನುವುದು ಗೊತ್ತಾಗಿತ್ತು. ಇಂದು ರಿಲೀಸ್ ಆಗಿರುವ ಟ್ರೇಲರ್ ನಲ್ಲಿ ಅಕ್ಷಯ್ ಕುಮಾರ್ ಮತ್ತು ರಜಿನಿಕಾಂತ್ ಡೈಲಾಗ್ ಗಳು ವಾವ್ ಎನ್ನುವಂತಿವೆ. ಇತ್ತ ಇಡೀ ಪ್ರಪಂಚವನ್ನ ತನ್ನ ಕೈ ವಶ ಮಾಡಿಕೊಳ್ಳಲು ಪ್ರಯತ್ನಿಸುವ ಅಕ್ಷಯ್ ಕುಮಾರ್ ಎಂಬ ಖಳನಾಯಕನಿಗೆ ತಿರುಗೇಟು ನೀಡಲು ರೀಲೋಡೆಡ್ ಚಿಟ್ಟಿ ಹುಟ್ಟಿ ಬರುತ್ತಾನೆ ಎಂಬುದನ್ನ ಟ್ರೇಲರ್ ಸ್ಪಷ್ಟಪಡಿಸಿದೆ. ಇತ್ತ ಬ್ರಿಟನ್ ಚೆಲುವೆ ಆ್ಯಮಿ ಜಾಕ್ಸನ್ ರೋಬೋ ಲುಕ್ ನಲ್ಲಿ ಮತ್ತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

    ಚೆನ್ನೈನ ಸತ್ಯಂ ಚಿತ್ರಮಂದಿರ ಸೇರಿದಂತೆ ಪ್ರಪಂಚದಾದ್ಯಂತ ಸುಮಾರು 6 ಸಾವಿರ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ‘ರೋಬೋ 2.0.’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ‘ರೋಬೋ 2.0’ ಸಿನಿಮಾ ಶಂಕರ್ ಅವರ ನಿರ್ದೇಶನದ ಬಹುಕೋಟಿ ವೆಚ್ಚದ ಚಿತ್ರವಾಗಿದೆ. 2010ರಲ್ಲಿ ಶಂಕರ್ ನಿರ್ದೇಶನದಲ್ಲೇ ಮೂಡಿಬಂದಿದ್ದ ಎಂದಿರನ್ ಚಿತ್ರದ ಮುಂದಿನ ಭಾಗವಾಗಿ 2.0 ಮೂಡಿಬಂದಿದ್ದು, ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ.

    ಈ ಸಿನಿಮಾದಲ್ಲಿ ನಟ ರಜಿನಿಕಾಂತ್ ಮತ್ತು ನಟಿ ಆಮಿ ಜಾಕ್ಷನ್ ಅಭಿನಯಿಸಿದ್ದಾರೆ. ವಿಶೇಷವಾಗಿ ಚಿತ್ರದ ಖಳನಾಯಕನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದಾರೆ. ಈ ಸಿನಿಮಾ ಬರೋಬ್ಬರಿ 550 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗಿದ್ದು, ನವೆಂಬರ್ 29ಕ್ಕೆ ಪ್ರಪಂಚದಾದ್ಯಂತ 9 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

    ಇತ್ತೀಚೆಗೆ ‘ರೋಬೋ 2.0’ ಸಿನಿಮಾ ಟೀಸರ್ ರಿಲೀಸ್ ಆಗಿತ್ತು. ರಿಲೀಸ್ ಆದ ದಿನದಿಂದ ಸುಮಾರು ಒಂದು ವಾರದವರೆಗೂ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಒಂದರಲ್ಲಿ ಇದ್ದು, ಅಷ್ಟರ ಮಟ್ಟಿಗೆ ಸದ್ದು ಮಾಡಿತ್ತು. ಚಿತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, 3ಡಿ ರೂಪದಲ್ಲಿ ಸಿನಿಮಾ ಸಿದ್ಧಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಟ್ಟಿ ಕಮ್ ಬ್ಯಾಕ್-ರಜನಿ, ಅಕ್ಷಯ್ ಫೇಸ್ ಟು ಫೇಸ್ 2.0 ಟೀಸರ್ ಔಟ್

    ಚಿಟ್ಟಿ ಕಮ್ ಬ್ಯಾಕ್-ರಜನಿ, ಅಕ್ಷಯ್ ಫೇಸ್ ಟು ಫೇಸ್ 2.0 ಟೀಸರ್ ಔಟ್

    ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಹಾಗು ನಿರ್ದೇಶಕ ಶಂಕರ್ ಜೋಡಿಯ 2.0 ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ನಟ ಅಕ್ಷಯ್ ಕುಮಾರ್ ಜೊತೆಯಾಗಿರುವ ಚಿತ್ರದ ಟೀಸರನ್ನು ಚಿತ್ರತಂಡ ಹಬ್ಬದ ಉಡುಗೊರೆಯಾಗಿ ನೀಡಿದೆ.

    2010ರಲ್ಲಿ ಶಂಕರ್ ನಿರ್ದೇಶನದಲ್ಲೇ ಮೂಡಿಬಂದಿದ್ದ ಎಂದಿರನ್ ಚಿತ್ರದ ಮುಂದಿನ ಭಾಗವಾಗಿ 2.0 ಮೂಡಿಬಂದಿದ್ದು, ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ವಿಶೇಷವಾಗಿ ಚಿತ್ರದ ಖಳನಾಯಕನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದು, ಟೀಸರಿನಲ್ಲೇ ಅದರ ಝಲಕ್ ಕಾಣಸಿಗುತ್ತದೆ. ರಜನಿಕಾಂತ್ ಮತ್ತೊಮ್ಮೆ ತಮ್ಮ ಸ್ಟೈಲ್‍ನಲ್ಲಿ ಮಿಂಚಿದ್ದಾರೆ.

    ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 2.0 ಚಿತ್ರಕ್ಕೆ ಬರೋಬ್ಬರಿ 543 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಚಿತ್ರ ತಂಡದ ಮೂಲಗಳು ಹೇಳಿಕೊಂಡಿದೆ. ಚಿತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, 3ಡಿ ರೂಪದಲ್ಲಿ ಸಿನಿಮಾ ಸಿದ್ಧಗೊಂಡಿದೆ.

    ಇನ್ನು ಚಿತ್ರದ ಟೀಸರ್ ಬಿಡುಗಡೆ ಕುರಿತು ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, ಗಣಪತಿ ಚತುರ್ಥಿಯ ವಿಶೇಷವಾಗಿ ದೇವರು ಹಾಗೂ ದುಷ್ಟ ಶಕ್ತಿಯ ಬಿಗ್ ಫೈಟ್ ನಿಮ್ಮ ಮುಂದಿದೆ ಎಂದು ತಿಳಿಸಿದ್ದಾರೆ. ಒಂದು ನಿಮಿಷವಿರುವ ಟೀಸರಿನಲ್ಲಿ ಆಧುನಿಕ ತಂತ್ರಜ್ಞಾನದ ಸಿಜಿಐ ವರ್ಕ್ ಎಲ್ಲರ ಗಮನ ಸೆಳೆದಿದ್ದು, ಪಕ್ಷಿಗಳ ಹಾರಾಟದಿಂದ ಆರಂಭವಾಗುವ ಮೂಲಕ ಜನರ ಬಳಿ ಇರುವ ಮೊಬೈಲ್ ಫೋನ್ ಹಾರಿಹೋಗುವ ಸನ್ನಿವೇಶ ಒಮ್ಮೆಲೆ ಅಚ್ಚರಿ ಮೂಡಿಸುತ್ತದೆ. ಈ ವೇಳೆ ದೃಷ್ಟ ಶಕ್ತಿಯನ್ನು ಎದುರಿಸಲು ಮತ್ತೆ ಚಿಟ್ಟಿ ಹೆಸರಿನ ರೋಬೋಗೆ ಪುನರ್ ಶಕ್ತಿ ನೀಡಲಾಗುತ್ತದೆ. ಇಲ್ಲಿಗೆ ಅಕ್ಷಯ್ ಕುಮಾರ್ ಹಾಗೂ ರಜನಿ ರೂಪದ ಚಿಟ್ಟಿ ರೋಬೋ ನಡುವಿನ ಹೋರಾಟ ಆರಂಭವಾಗುತ್ತದೆ.

    ಚಿತ್ರ ನವೆಂಬರ್ 29ಕ್ಕೆ ಬಿಡುಗಡೆಯಾಗಲಿದ್ದು, ಚಿತ್ರದಲ್ಲಿ ಅಕ್ಷಯ್ ಕುಮಾರ್‍ರೊಂದಿಗೆ ಅದಿಲ್ ಹುಸೇನ್, ಸುಧಾಂಶು ಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿಯಾಗಿ ಆ್ಯಮಿ ಜಾಕ್ಸನ್ ನಟಿಸಿದ್ದು, ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ.

    ಈಗಾಗಲೇ ಅಂತರ್ಜಾಲದಲ್ಲಿ ನಂ.1 ಟ್ರೆಂಡಿಂಗ್‍ನಲ್ಲಿರುವ 2.0 ಸಿನಿಮಾ ಹಿಂದಿ ಟೀಸರ್ 26 ಲಕ್ಷ ವ್ಯೂ, ತಮಿಳು ಟೀಸರ್ 41 ಲಕ್ಷ ವ್ಯೂ, ತೆಲುಗು ಟೀಸರ್ 27 ಲಕ್ಷ ವ್ಯೂ ಕಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೊಬೋ-2.0 ಚಿತ್ರದ ಆ್ಯಮಿ ಜಾಕ್ಸನ್ ಫಸ್ಟ್ ಲುಕ್ ಬಿಡುಗಡೆ!

    ರೊಬೋ-2.0 ಚಿತ್ರದ ಆ್ಯಮಿ ಜಾಕ್ಸನ್ ಫಸ್ಟ್ ಲುಕ್ ಬಿಡುಗಡೆ!

    ಮುಂಬೈ: ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟಿಸುತ್ತಿರುವ 2.0 ಚಿತ್ರದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ 2.0 ಚಿತ್ರದ ಆ್ಯಮಿ ಜಾಕ್ಸನ್ ನ ಮೊದಲ ಲುಕ್ ಬಿಡುಗಡೆಯಾಗಿದೆ.

    ಚಿತ್ರದಲ್ಲಿ ಆ್ಯಮಿ ಐಟಂ ಸಾಂಗ್ ಕೂಡ ಮಾಡಲಿದ್ದು, 2.0 ಚಿತ್ರದ ಮೊದಲ ಲುಕ್ ಕ್ರಿಷ್-3 ಚಿತ್ರದ ಕಂಗನಾ ನಟಿಸಿದ ಕಾಯಾ ಪಾತ್ರ ನೆನಪಿಸುತ್ತದೆ. ಚಿತ್ರದ ನಿರ್ದೇಶಕ ಶಂಕರ್ ಶನ್‍ಮುಗನ್, ಆ್ಯಮಿ ಅವರ ಫಸ್ಟ್ ಲುಕ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

    ‘ಈ ಜಗತ್ತು ಬರಿ ಮಾನವರಿಗೆ ಅಲ್ಲ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಚಿತ್ರದ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅವರ ಫಸ್ಟ್ ಲುಕ್‍ಗಾಗಿ ಕಾಯುತ್ತಾಯಿರಿ ಎಂದು ಚಿತ್ರದ ನಿರ್ದೇಶಕ ತಿಳಿಸಿದ್ದಾರೆ.

    2.0 ರೊಬೋಟ್ ಚಿತ್ರದ ಸೀಕ್ವಲ್ ಆಗಿದ್ದು, ಈ ಚಿತ್ರದಲ್ಲಿ ವಸಿಕರಣ್ ಮತ್ತು ಚಿಟ್ಟಿಯನ್ನು ಪುನರಾವರ್ತನೆ ಮಾಡಲಾಗುತ್ತದೆ. 2.0 ಚಿತ್ರ 3ಡಿ ಯಲ್ಲಿ ನಿರ್ದೇಶನ ಮಾಡುತ್ತಿದ್ದು, ಅಕ್ಷಯ್ ಕುಮಾರ್ ಮೊದಲ ಬಾರಿಗೆ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.