Tag: 2 ಸ್ಟೇಟ್ಸ್

  • ʼ2 ಸ್ಟೇಟ್ಸ್’ ಖ್ಯಾತಿಯ ಶಿವಕುಮಾರ್ ಸುಬ್ರಮಣಿಯಂ ನಿಧನ

    ʼ2 ಸ್ಟೇಟ್ಸ್’ ಖ್ಯಾತಿಯ ಶಿವಕುಮಾರ್ ಸುಬ್ರಮಣಿಯಂ ನಿಧನ

    ಬಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರೋ ನಟ ಶಿವಕುಮಾರ್ ಸುಬ್ರಮಣಿಯಂ ಅವರು ಇಹಲೋಕ ತ್ಯಜಿಸಿದ್ದಾರೆ. `2 ಸ್ಟೇಟ್ಸ್’ ಖ್ಯಾತಿಯ ಶಿವಕುಮಾರ್ ಸುಬ್ರಮಣಿಯಂ ಇಂದು ಮುಂಜಾನೆ ಅವರ ಮರಣದ ಸುದ್ದಿ ಕೇಳಿ ಅನೇಕ ಸೆಲೆಬ್ರೆಟಿ ಸ್ನೇಹಿತರು, ಅಭಿಮಾನಿಗಳು ಕಂಬನಿ ಮಿಡಿದ್ದಾರೆ.

    ಮೀನಾಕ್ಷಿ, 2 ಸ್ಟೇಟ್ಸ್, ಸುಂದರೇಶ್ವರ, ನೇಲ್ ಪಾಲಿಶ್, ಹಿಚ್ಕಿ, ಸಿನಿಮಾಗಳ ಮೂಲಕ ಮನೆಮಾತಾದ ಕಲಾವಿದ ಶಿವಕುಮಾರ್ ಸುಬ್ರಮಣಿಯಂ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಶಿವಕುಮಾರ್ ಸುಬ್ರಮಣಿಯಂ ಅವರ ಮಗನನ್ನು ಕಳೆದುಕೊಂಡಿದ್ದರು. ಕ್ಯಾನ್ಸರ್‌ನಿಂದ ಅವರ ಪುತ್ರನ ಸಾವು ಸಂಭವಿಸಿತ್ತು.

    ಮಗನ ಸಾವಿನ ನೋವು ಮಾಸುವ ಮುನ್ನವೇ ನಟ ಶಿವಕುಮಾರ್ ನಿಧನ ಇಡೀ ಕುಟುಂಬಕ್ಕೆ ಆಘಾತ ಉಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿಯೆಂದು ಅಭಿಮಾನಿಗಳು, ಸ್ನೇಹಿತರು ಪ್ರಾರ್ಥಿಸುತ್ತಿದ್ದಾರೆ. ಮುಂಬೈನಲ್ಲಿ ನಟ ಶಿವಕುಮಾರ್ ಸುಬ್ರಮಣಿಯಂ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ. ಇದನ್ನು ಓದಿ: ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್: ಸ್ಕ್ರಿಪ್ಟ್ ಬರೆಯಲಿದ್ದಾರೆ ಜಕ್ಕಣ್ಣನ ತಂದೆ ವಿಜಯೇಂದ್ರ ಪ್ರಸಾದ್

    1989ರಲ್ಲಿ ವಿಧು ವಿನೋದ್ ಚೋಪ್ರಾ ಅವರ  ʻಪರಿಂದಾʼ ಸಿನಿಮಾಗೆ ಕಥೆ ಬರೆಯುವ ಶಿವಕುಮಾರ್ ಸುಬ್ರಮಣಿಯಂ ಚಿತ್ರರಂಗದಲ್ಲಿ ಸಿನಿಜರ್ನಿ ಪ್ರಾರಂಭಿಸಿದ್ದರು. ಕಿರುತೆರೆ ಮತ್ತು ಹಿರಿತೆರೆಯಲ್ಲೂ ಛಾಪೂ ಮೂಡಿಸಿದರು. ಕಥೆ ಮತ್ತು ಚಿತ್ರಕಥೆ ಬರಹಗಾರರಾಗಿಯೂ ಗುರುತಿಸಿಕೊಂಡಿರೋ ನೆಚ್ಚಿನ ನಟನ ಅಗಲಿಕೆಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.