Tag: 2ನೇ ಮದುವೆ

  • ಸರ್ಕಾರಿ ನೌಕರರು 2ನೇ ಮದುವೆಯಾಗುವಂತಿಲ್ಲ – ಅಸ್ಸಾಂ ಸರ್ಕಾರ ಆದೇಶ

    ಸರ್ಕಾರಿ ನೌಕರರು 2ನೇ ಮದುವೆಯಾಗುವಂತಿಲ್ಲ – ಅಸ್ಸಾಂ ಸರ್ಕಾರ ಆದೇಶ

    ದಿಸ್ಪುರ್: ಸರ್ಕಾರಿ ನೌಕರರು (Government Employees) 2ನೇ ಮದುವೆಯಾಗುವುದನ್ನು ಅಸ್ಸಾಂ (Assam) ಸರ್ಕಾರ ನಿರ್ಬಂಧಿಸಿದೆ. ಸರ್ಕಾರಿ ನೌಕರನ ಧರ್ಮ 2ನೇ ಮದುವೆಗೆ (2nd Marriage) ಅನುಮತಿಸಿದರೂ ಸರ್ಕಾರದ ಅನುಮತಿ ಇಲ್ಲದೇ 2ನೇ ಮದುವೆ ಮಾಡಿಕೊಳ್ಳುವಂತಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.

    2 ಮದುವೆಗಳಿಂದ ಸರ್ಕಾರಿ ನೌಕರನ ಪಿಂಚಣಿಗಾಗಿ ಇಬ್ಬರು ಪತ್ನಿಯರು ಹೋರಾಟ ಮಾಡುವುದನ್ನು ನಾವು ಗಮನಿಸಿದ್ದೇವೆ. ಅಸ್ಸಾಂನಲ್ಲಿ ಈ ಕಾನೂನು ಮೊದಲೇ ಇತ್ತು. ಅದನ್ನು ಕಠಿಣವಾಗಿ ಜಾರಿಗೆ ನಿರ್ಧಾರ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

    ಬಹುಪತ್ನಿತ್ವವನ್ನು ನಿಷೇಧಿಸುವ ಕಾನೂನು 58 ವರ್ಷಗಳ ಹಿಂದೆ ಅಸ್ಸಾಂನಲ್ಲಿ ಜಾರಿ ಮಾಡಲಾಗಿತ್ತು. ಮೊದಲ ಸಂಗಾತಿಯು ಜೀವಂತವಾಗಿರುವವರೆಗೆ ಸರ್ಕಾರದ ಒಪ್ಪಿಗೆಯಿಲ್ಲದೆ 2ನೇ ಮಹಿಳೆಯನ್ನು ಮದುವೆಯಾಗುವುದನ್ನು ಕಾನೂನು ನಿರ್ಬಂಧಿಸುತ್ತದೆ.

    ಮುಸ್ಲಿಮರನ್ನು ಉಲ್ಲೇಖಿಸದೆ ವೈಯಕ್ತಿಕ ಕಾನೂನಿನಿಂದ ಅನುಮತಿ ಪಡೆದ ಪುರುಷರಿಗೂ ಈ ನಿಯಮ ಅನ್ವಯಿಸುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಅದೇ ರೀತಿ ಮಹಿಳಾ ನೌಕರರು ಈ ಮೊದಲು ಮದುವೆಯಾಗಿರುವ ವ್ಯಕ್ತಿಯನ್ನು 2ನೇ ಮದುವೆಯಾಗಬಾರದು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಭಾರತದ ಕಾನೂನು ಬದಲಿಸುವ ಮೂರು ಮಸೂದೆಗಳು ಶೀಘ್ರದಲ್ಲಿ ಅಂಗೀಕಾರ: ಅಮಿತ್ ಶಾ

    ಅಕ್ಟೋಬರ್ 20 ರಂದು ಸಿಬ್ಬಂದಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀರಜ್ ವರ್ಮಾ ಅವರು ಅಧಿಸೂಚನೆ ಹೊರಡಿಸಿದ್ದು, ಇದು ಗುರುವಾರ ಬೆಳಕಿಗೆ ಬಂದಿದೆ. ಅಸ್ಸಾಂ ನಾಗರಿಕ ಸೇವೆಗಳ (ನಡತೆ) ನಿಯಮಗಳು 1965 ರ ನಿಯಮ 26 ರ ನಿಬಂಧನೆಗಳ ಪ್ರಕಾರ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಅದು ಹೇಳಿದೆ. ಮೇಲಿನ ನಿಬಂಧನೆಗಳ ಅನ್ವಯ ಶಿಸ್ತು ಸಮಿತಿ ಪ್ರಾಧಿಕಾರವು ತಕ್ಷಣದ ಇಲಾಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು. ಕಡ್ಡಾಯ ನಿವೃತ್ತಿ ಸೇರಿದಂತೆ ಪ್ರಮುಖ ದಂಡವನ್ನು ವಿಧಿಸಲು ಆದೇಶದಲ್ಲಿ ಹೇಳಿದೆ. ಇದನ್ನೂ ಓದಿ: IPL 2024 – ದುಬೈನಲ್ಲಿ ಹರಾಜು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2ನೇ ಮದುವೆ ಆಗದೇ ಸಾಯ್ಬೇಕಿತ್ತಾ? : ಬೇಸರ ಹಂಚಿಕೊಂಡ ಆಶಿಶ್ ವಿದ್ಯಾರ್ಥಿ

    2ನೇ ಮದುವೆ ಆಗದೇ ಸಾಯ್ಬೇಕಿತ್ತಾ? : ಬೇಸರ ಹಂಚಿಕೊಂಡ ಆಶಿಶ್ ವಿದ್ಯಾರ್ಥಿ

    ಮ್ಮ 60ನೇ ವಯಸ್ಸಿಗೆ 2ನೇ ಮದುವೆಯಾಗಿ (2nd marriage) ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು ನಟ ಆಶಿಶ್ ವಿದ್ಯಾರ್ಥಿ. ಅವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಆ ಫೋಟೋಗಳ ಕುರಿತಂತೆ ಸಾಕಷ್ಟು ಜನ ನೆಗೆಟಿವ್ ಕಾಮೆಂಟ್ ಮಾಡಿದ್ದರು. ಈ ವಯಸ್ಸಿನಲ್ಲಿ ಮದುವೆ ಯಾಕೆ? ಮದುಕನ ಮದುವೆ ಹೀಗೆ ನಾನಾ ರೀತಿಯಲ್ಲಿ ಮನಸ್ಸಿಗೆ ನೋವನ್ನುಂಟು ಮಾಡುವಂತೆ ಟ್ರೋಲ್ (troll) ಮಾಡಿದ್ದರು.

    ಇದೇ ಮೊದಲ ಬಾರಿಗೆ ನೆಗೆಟಿವ್ ಕಾಮೆಂಟ್ ಬಗ್ಗೆ ಆಶಿಶ್ ವಿದ್ಯಾರ್ಥಿ ಮಾತನಾಡಿದ್ದಾರೆ. ‘ಅನೇಕರು ನನ್ನ ಮದುವೆ ಬಗ್ಗೆ ಟ್ರೋಲ್ ಮಾಡಿದ್ದಾರೆ. ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದಾರೆ. ಈ ವಯಸ್ಸಿನಲ್ಲಿ ಮದುವೆ ಆದರೆ ತಪ್ಪೇನು? ನಾನು ಒಂಟಿಯಾಗಿ, ನೆಮ್ಮದಿಯಿಲ್ಲದೇ ಸಾಯಬೇಕಿತ್ತಾ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಮದುವೆ ಅನ್ನುವುದು ವಯಸ್ಸಿಗೆ ಸಂಬಂಧಿಸಿದ್ದಲ್ಲ, ಮನಸ್ಸಿಗೆ ಸಂಬಂಧಿಸಿದ್ದು ಎಂದು ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಪ್ರಣಿತಾ ಹಾಟ್‌ನೆಸ್‌ಗೆ ಸಂತೂರ್ ಮಮ್ಮಿ ಎಂದ ನೆಟ್ಟಿಗರು

    ಕನ್ನಡ ಮಾತ್ರವಲ್ಲದೇ ಬಹುಭಾಷೆಯಲ್ಲಿ ನಟಿಸಿರುವ ಆಶಿಶ್ ವಿದ್ಯಾರ್ಥಿ (Ashish Vidyarthi) ಅವರು ತಮ್ಮ 60ನೇ ವಯಸ್ಸಿಗೆ ಫ್ಯಾಷನ್ ಇಂಡಸ್ಟ್ರಿಯ ಉದ್ಯಮಿ ರೂಪಾಲಿ (Roopali) ಜೊತೆ ದಾಂಪತ್ಯ (Wedding) ಜೀವನಕ್ಕೆ ನಟ ಕಾಲಿಟ್ಟಿದ್ದಾರೆ. ಈ ಮದುವೆ ಬಗ್ಗೆಯೇ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಅದು ಆಶಿಶ್ ಅವರ ನೋವಿಗೆ ಕಾರಣವಾಗಿತ್ತು.

     

    ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಈ ಹಿಂದೆ ರಾಜೋಶಿ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಈಗ ಆ ದಾಂಪತ್ಯಕ್ಕೆ ಸಾಕಷ್ಟು ವರ್ಷಗಳ ಹಿಂದೆಯೇ ಬ್ರೇಕ್ ಬಿದ್ದಿತ್ತು. ಮೊನ್ನೆಯಷ್ಟೇ ಉದ್ಯಮಿ ರೂಪಾಲಿ ಅವರನ್ನ ಆಶಿಶ್ 2ನೇ ಮದುವೆಯಾಗಿದ್ದರು. ಕೊಲ್ಕತ್ತಾದ ಕ್ಲಬ್‌ನಲ್ಲಿ ಮೇ25ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆ ನಡೆದಿತ್ತು.

  • 2ನೇ ಮದ್ವೆಗೆ ಒಪ್ಪದ ಕುಟುಂಬಸ್ಥರು- ಆತ್ಮಹತ್ಯೆ ಮಾಡಿಕೊಂಡ 75ರ ವೃದ್ಧ

    2ನೇ ಮದ್ವೆಗೆ ಒಪ್ಪದ ಕುಟುಂಬಸ್ಥರು- ಆತ್ಮಹತ್ಯೆ ಮಾಡಿಕೊಂಡ 75ರ ವೃದ್ಧ

    ಲಕ್ನೋ: 75 ವರ್ಷದ ವೃದ್ಧರೊಬ್ಬರು ಎರಡನೇ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಆ ಮದುವೆಗೆ ಅವರ ಕುಟುಂಬಸ್ಥರು ನಿರಾಕರಿಸಿದ್ದಕ್ಕೆ ಮನನೊಂದು ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ವೃದ್ಧ ಅರ್ಷದ್(75) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅರ್ಷದ್ ಅವರ ಪತ್ನಿ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅರ್ಷದ್ ಅವರಿಗೆ ಒಟ್ಟು 8 ಮಂದಿ ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿ ಮಕ್ಕಳಿವೆ. ಆದರೆ ಮೊಮ್ಮಕ್ಕಳನ್ನು ಆಡಿಸುವ ವಯಸ್ಸಿನಲ್ಲಿ ಅರ್ಷದ್‍ರಿಗೆ ಎರಡನೇ ಮದುವೆಯಾಗುವ ಆಸೆ ಬಂದಿತ್ತು. ಈ ವಯಸ್ಸಿನಲ್ಲಿ ಮದುವೆ ಏಕೆ ಎಂದು ಕುಟುಂಬಸ್ಥರು ಪ್ರಶ್ನೆ ಮಾಡಿ, ಮದುವೆಗೆ ವಿರೋಧಿಸಿದ್ದರು.

    ಜೊತೆಗೆ ನಿಧಾನವಾಗಿ ತಂದೆಗೆ ಮಕ್ಕಳು ತಿಳಿ ಹೇಳುವ ಪ್ರಯತ್ನವೂ ಮಾಡಿದ್ದರು. ಆದರೆ ಗುರುವಾರ ಈ ಗಲಾಟೆ ಜೋರಾಗಿ ತಂದೆ ಮಕ್ಕಳ ನಡುವೆ ಜಗಳ ಕೂಡ ನಡೆದಿತ್ತು. ಇದರಿಂದ ಕೋಪಗೊಂಡು ವೃದ್ಧ ಅಂದು ರಾತ್ರಿಯೇ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ದಾರೆ.

    ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಈಗಾಗಲೇ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಅದರಲ್ಲಿ ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಬೀತಾಗಿದೆ.