Tag: 2ಎ ಮೀಸಲಾತಿ

  • 2ಎ ಮೀಸಲಾತಿ ನೀಡಿ, ಕೊಟ್ಟಮಾತು ಉಳಿಸಿಕೊಳ್ಳಿ ಸಿಎಂ ಬೊಮ್ಮಾಯಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    2ಎ ಮೀಸಲಾತಿ ನೀಡಿ, ಕೊಟ್ಟಮಾತು ಉಳಿಸಿಕೊಳ್ಳಿ ಸಿಎಂ ಬೊಮ್ಮಾಯಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಹಾವೇರಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ಈ ಹಿಂದೆ 712 ಕಿ.ಮೀ ಬಾಗಲಕೋಟೆಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಿದ್ದೇವೆ. ನಮ್ಮ ಸಮಾಜಕ್ಕೆ ಮೀಸಲಾತಿ ಅನಿರ್ವಾತೆ ಇದೆ. ಹಿಂದಿನ ಸಿಎಂ ಯಡಿಯೂರಪ್ಪ ಅಧಿವೇಶನದಲ್ಲಿ ಮಾತು ಕೊಟ್ಟಿದ್ದರು. ಈಗ ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬಸವರಾಜ ಬೊಮ್ಮಾಯಿ ಕೊಟ್ಟಮಾತು ಉಳಿಸಿಕೊಳ್ಳಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ಬೆಳೆಗಾವಿ ಅಧಿವೇಶನದ ಅವಧಿಯಲ್ಲಿ ಬೊಮ್ಮಾಯಿ ಮೂರು ತಿಂಗಳ ಅವಕಾಶ ಕೇಳಿದ್ದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ನಮ್ಮ ಸಮುದಾಯದ ನಾಯಕರಿಗೆ ಮೀಸಲಾತಿ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದಾರೆ. ಏಪ್ರಿಲ್ 24 ಅಂತಿಮ ಗಡುವು ನೀಡಿದ್ದೇವು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಮೇ 23 ರಂದು ರಾಜ್ಯದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಹಾಗೂ ಬಸವರಾಜ ಬೊಮ್ಮಾಯಿ ನಿವಾಸದ ಮುಂದೆ ಸತ್ಯಾಗ್ರಹ ಮಾಡಲು ನಿರ್ಧಾರ ಮಾಡಲಾಗಿತ್ತು. ರಾಜ್ಯದಲ್ಲಿ ನಿರಂತರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ 23ರಂದು ನಡೆಯುವ ಸತ್ಯಾಗ್ರಹ ಮುಂದೂಡಲಾಗಿದೆ. ಬರುವ ಜೂನ್‍ನಲ್ಲಿ ಇನ್ನೊಂದು ಸಭೆ ನಡೆಸಿ ಸತ್ಯಾಗ್ರಹವನ್ನು ಪ್ರಾರಂಭ ಮಾಡುವ ಕುರಿತಂತೆ ದಿನಾಂಕ ನಿಗದಿ ಮಾಡುತ್ತೇವೆ. ಬೊಮ್ಮಾಯಿ ಪಂಚಮಸಾಲಿ ಸಮುದಾಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರು.

    ಶಿಗ್ಗಾಂವಿಯಲ್ಲಿ ನಡೆದ ಪಂಚಮಸಾಲಿ ಸಮುದಾಯದ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಕಣ್ಣೀರು ಹಾಕಿದ್ದೀರಿ. ಬಿಸಿರೊಟ್ಟಿ, ನವಣಕ್ಕಿ ಅನ್ನ ಕೊಟ್ಟಿದ್ದೀರಿ ಅಂತಾ ಹೇಳಿದ್ದೀರಿ. ಅದರ ಋಣ ತೀರಿಸಿ, ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಕಳೆದ ಎರಡು ತಿಂಗಳಿನಿಂದ ಬಸವರಾಜ ಬೊಮ್ಮಾಯಿ ಮೌನವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಇದೇ ವೇಳೆ ಪರೋಕ್ಷವಾಗಿ ಹರಿಹರದ ಪಂಚಮಸಾಲಿ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸುಖದ ಸುಪ್ಪತ್ತಿಗೆಯಲ್ಲಿ ಇದ್ದಾರೆ. ಮೀಸಲಾತಿ ಸಮಾಜಕ್ಕೆ ಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿ ಮಾತು ಕೇಳಬೇಕು. ಮಗುವಿಗೆ ಹಸಿವಾದಾಗ ಹಾಲು ಕುಡಿಸಬೇಕು. ಆಗ ಕುಡಿಸದಿದ್ದರೆ ಮಗು ಸಾಯುತ್ತದೆ. ಸಮಾಜ ಈಗ ಮಗುವಿನಂತೆ ಮೀಸಲಾತಿ ಕೇಳುತ್ತಿದೆ. ಸರ್ಕಾರ ತಾಯಿಯಂತೆ ಮೀಸಲಾತಿ ನೀಡಬೇಕು ಇಲ್ಲದಿದ್ದರೆ ಸಮಾಜ ಸಾಯುತ್ತದೆ. ಮೀಸಲಾತಿ ನೀಡುವ ಬಗ್ಗೆ ಸ್ಪಷ್ಟವಾದ ಹೇಳಿಕೆ ನೀಡಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಪ್ರಾರಂಭ ಆಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

  • ಮೀಸಲಾತಿ ಕೊಟ್ಟರೆ ಮಠದಲ್ಲಿ ಬೊಮ್ಮಾಯಿ ಭಾವಚಿತ್ರ ಹಾಕಿ ಖಾಯಂ ಗೌರವ: ಬಸವ ಜಯ ಮೃತ್ಯುಂಜಯ ಶ್ರೀ

    ಮೀಸಲಾತಿ ಕೊಟ್ಟರೆ ಮಠದಲ್ಲಿ ಬೊಮ್ಮಾಯಿ ಭಾವಚಿತ್ರ ಹಾಕಿ ಖಾಯಂ ಗೌರವ: ಬಸವ ಜಯ ಮೃತ್ಯುಂಜಯ ಶ್ರೀ

    ಚಿತ್ರದುರ್ಗ: ಪಂಚಮಸಾಲಿಗಳಿಗೆ ಮೀಸಲಾತಿ ಕೊಟ್ಟರೆ ಮಠದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರ ಹಾಕಿ ಖಾಯಂ ಗೌರವ ಕೊಡುತ್ತೇವೆ ಎಂದು ಕೂಡಲಸಂಗಮ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ನಗರದ ಗಾಯತ್ರಿ ಕಲ್ಯಾಣಮಂಟಪದಲ್ಲಿ ನಡೆದ ಪ್ರತಿಜ್ಞಾ ಪಂಚಾಯತ್ ಅಭಿಯಾನದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಅನ್ಯ ಸಮುದಾಯದವರು ಯಾರೂ ವಿರೋಧ ಮಾಡುತ್ತಿಲ್ಲ. ಆದರೆ ನಮ್ಮಲ್ಲಿ ಇರುವವರೇ ಹೊಟ್ಟೆಕಿಚ್ಚಿನಿಂದ, ಅಸೂಯೆಯಿಂದ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಸಿಎಂ ಬೊಮ್ಮಾಯಿ ಬಳಿ ಹೋಗಿ ಪಂಚಮಸಾಲಿಗಳಿಗೆ ಮೀಸಲಾತಿ ಕೊಡಬೇಡಿ. ಈಗ ಅವರಿಗೆ 2ಎ ಮೀಸಲಾತಿ ಕೊಟ್ಟರೆ ಯತ್ನಾಳ್ ಹೆಸರು ಬರುತ್ತೆ ಎಂದು ಪಿತೂರಿ ನಡೆಸುತಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿಗೆ ಜಯ ಮೃತ್ಯುಂಜಯ ಸ್ವಾಮೀಜಿ ಟಾಂಗ್ ನೀಡಿದರು. ಇದನ್ನೂ ಓದಿ: ತೈಲ ಬಿಕ್ಕಟ್ಟು – ಪೆಟ್ರೋಲ್ ಪಡೆಯಲು ಮುಗಿಬಿದ್ದ ಇಂಗ್ಲೆಂಡ್ ಜನತೆ

    ರಾಜಕೀಯ ವಿಚಾರವಾಗಿ ನೀವು ಯಾವ ನಾಯಕರನ್ನಾದರೂ ಆಯ್ಕೆ ಮಾಡಿಕೊಳ್ಳಿ. ಆದರೆ ಸಮಾಜ ಹಾಗೂ ಮೀಸಲಾತಿ ವಿಚಾರದಲ್ಲಿ ನಮ್ಮೊಂದಿಗೆ ಪ್ರಾಮಾಣಿಕ ಇರುವವರೇ ನಮ್ಮ ನಾಯಕರು ಎಂದರು.

    ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕರೆ ಸಿಎಂ ಬೊಮ್ಮಾಯಿ ಹೆಸರು ಬರುತ್ತೇ ಹೊರೆತು, ಸ್ವಾಮೀಜಿಗೆ ಹಾಗೂ ಯತ್ನಾಳ್ ಗೆ ಅಲ್ಲ. ಮೀಸಲಾತಿ ನೀಡಿದರೆ ಮಠದಲ್ಲಿ ನಿಮ್ಮ ಪೊಟೋ ಹಾಕುತ್ತೇವೆ ಎಂದು ಬಿ.ಎಸ್.ಯಡಿಯೂರಪ್ಪನವರಿಗೆ ಹೇಳಿದ್ದೆವು. ಈ ಅವಕಾಶವನ್ನು ಯಡಿಯೂರಪ್ಪ ಕಳೆದುಕೊಂಡರು. ಹೀಗಾಗಿ ಈಗ ರಾಜ್ಯದ ಸಿಎಂ ಬೊಮ್ಮಾಯಿ ಅವರಿಗೆ ಆ ಅವಕಾಶ ಸಿಕ್ಕಿದೆ. ಅವರು ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಟ್ಟರೆ ಖಾಯಂ ಆಗಿ ನಮ್ಮ ಮಠದಲ್ಲಿ ಬೊಮ್ಮಾಯಿ ಫೋಟೋ ಹಾಕಿ ಗೌರವ ಕೊಡುತ್ತೇವೆ ಎಂದರು.

    ಪಂಚಮಸಾಲಿ ಸಮಾಜಕ್ಕಾಗಿ ಶಾಸಕ ಸ್ಥಾನ ಹೋದರೂ ಪರವಾಗಿಲ್ಲ ಎಂದು ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಿ.ಸಿ.ಪಾಟೀಲ್ ಹೋರಾಟ ಮಾಡಿದ್ದಾರೆ. ಆದರೆ ಕೆಲವರು ಒಳಗೊಳಗೇ ದ್ರೋಹ ಬಗೆಯುತಿದ್ದಾರೆ ಎಂದು ಅಸಮಧಾನಗೊಂಡ ಸ್ವಾಮೀಜಿ, ಮೀಸಲಾತಿ ವಿರೋಧಿಗಳಿಗೆ ಬಹಿರಂಗವಾಗಿ ಸವಾಲು ಹಾಕಿದರು.

    ಜಯ ಮೃತ್ಯುಂಜಯ ಸ್ವಾಮೀಜಿ ಮೀಸಲಾತಿ ಹೋರಾಟ ಮಾಡಿ ರಾಷ್ಟ್ರಾದ್ಯಂತ ಹೆಸರಾದರೆಂಬ ಅಸೂಯೆಯಿಂದ, ಹೊಟ್ಟೆಕಿಚ್ಚಿನಿಂದ ಕೆಲವರು ಮಾತನಾಡುತ್ತಿದ್ದಾರೆ. ನಾನು ಇವತ್ತೇ ಕೂಡಲಸಂಗಮ ಪೀಠ ಬಿಟ್ಟು ಹೋಗುತ್ತೇನೆ. ನೀವು ಯಾರಾದರೂ ಸ್ವಾಮೀಜಿಗಳ ಜೊತೆ ನೇತೃತ್ವ ವಹಿಸಿಕೊಳ್ಳಿ. ನಾನು ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ, ನಿಮ್ಮ ಹೋರಾಟಕ್ಕೆ ಬೆಂಬಲ ಕೊಡುತ್ತೇನೆ. ನಾವು ಕಷ್ಟ ಪಟ್ಟು ಹೋರಾಟ ಮಾಡುತ್ತಿದ್ದರೆ, ಕೆಲವರು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನಾನು ಶ್ರೀ ಮಠ ಕಟ್ಟಲು ಅಥವಾ ನನ್ನ ವೈಯಕ್ತಿಕ ಬೆಳವಣಿಗೆಗಾಗಿ ಹೋರಾಟ ಮಾಡುತ್ತಿಲ್ಲ. ಇಂತಹ ದೊಡ್ಡ ಚಳವಳಿಯನ್ನು ಹತ್ತಿಕ್ಕುವ ಕೆಲಸವನ್ನು ಯಾರೂ ಮಾಡಬಾರದು ಎಂದು ಕಿಡಿ ಕಾರಿದರು.

  • ಪಂಚಮಸಾಲಿಗಳು ನಿಜ ಲಿಂಗಾಯತರು: ಜಯಮೃತ್ಯುಂಜಯ ಸ್ವಾಮೀಜಿ

    ಪಂಚಮಸಾಲಿಗಳು ನಿಜ ಲಿಂಗಾಯತರು: ಜಯಮೃತ್ಯುಂಜಯ ಸ್ವಾಮೀಜಿ

    ಚಿತ್ರದುರ್ಗ: ಪಂಚಮಸಾಲಿಗಳು ಒರಿಜಿನಲ್ ಲಿಂಗಾಯತರು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

    ನಗರದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದಿಂದ, 2ಎ ಮೀಸಲಾತಿ ಹಕ್ಕೊತ್ತಾಯಕ್ಕಾಗಿ, ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ದತ್ತಪೀಠದಲ್ಲಿ ಮುಜಾವರ್ ನೇಮಕ ರದ್ದು – ಮತ್ತೆ ಸರ್ಕಾರದ ಅಂಗಳಕ್ಕೆ ಚೆಂಡು

    ಈ ಸಭೆಯಲ್ಲಿ ಮಾತನಾಡಿದ ಅವರು, ನಾಡಿಗೆ ಮೂವರು ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ಜೆ.ಹೆಚ್.ಪಾಟೀಲ್, ವೀರೇಂದ್ರ ಪಾಟೀಲ್ ರನ್ನು ನೀಡಿದ ಸಮಾಜ ನಮ್ಮದು. ಅಂತಹ ಸಮಾಜ ಇನ್ನೂ ಹಿಂದೆಯೇ ಉಳಿದಿದೆ. ನಾವು ಮೀಸಲಾತಿಗಾಗಿ ಕ್ರಾಂತಿಯ ಕಿಡಿಗಳಾಗಬೇಕು. ಪಂಚಮಸಾಲಿ ಗುಡುಗಿದರೆ ವಿಧಾನಸೌಧ ನಡುಗುತ್ತದೆ. ಅಷ್ಟ್ಟು ಶಕ್ತಿಯುತವಾದ ಸಮಾಜ ನಮ್ಮದು ಎಂದರು.

    ಪಂಚಮಸಾಲಿಗಳು ಒರಿಜಿನಲ್ ಲಿಂಗಾಯತರು, ನಮ್ಮ ಪಾದಯಾತ್ರೆಯ ಶಕ್ತಿ ಅತ್ಯುತ್ತಮವಾಗಿತ್ತು. ಸಾವಿರಾರು ವರ್ಷಗಳ ಇತಿಹಾಸದ ನಮ್ಮ ಸಮಾಜಕ್ಕೆ 2ಎ ಮೀಸಲಾತಿಬೇಕು. ಮತ್ತೆ ಹೋರಾಟ ಸತ್ಯಾಗ್ರಹ ಮಾಡೋಣ, ಬೃಹತ್ ರಾಜ್ಯ ಅಭಿಯಾನದಲ್ಲಿ ಸಿದ್ದರಾಗಿ ಎಂದು ಪಂಚಮಸಾಲಿಗಳಿಗೆ ಕರೆ ಕೊಟ್ಟರು. ಇದೇ ವೇಳೆ ಮಾತನಾಡಿದ ವಿಜಯಾನಂದ ಕಾಶಪ್ಪನವರ್, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವಲ್ಲಿ ಕೆಲವು ಲಿಂಗಾಯತ ಮಠಾಧೀಶರು ಮತ್ತು ಕೆಲವು ರಾಜಕಾರಣಿಗಳು ಹಿನ್ನಡೆ ಮಾಡುತ್ತಿದ್ದಾರೆ. ಆದರೆ 2ಎ ಮೀಸಲಾತಿಗಾಗಿ ಮತ್ತೆ ಬೃಹತ್ ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನೈತಿಕ ಪೊಲೀಸ್ ಗಿರಿ ವರದಿ ಬೆನ್ನಲ್ಲೇ ಐವರ ಬಂಧನ, ಬಿಡುಗಡೆ

    ಲಿಂಗಾಯತ ಪಂಚಮಸಾಲಿ ಮೀಸಲಾತಿ ಬೇಡಿಕೆಗಾಗಿ ಮತ್ತೆ ಹೋರಾಟ ನಡೆಸಬೇಕಿದೆ. ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರ ಆದೇಶದಂತೆ, ಪಂಚಮಸಾಲಿ ಸಮುದಾಯದವರು ಸಿದ್ದರಾಗಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಮಗೆ ಮೀಸಲಾತಿ ಕೊಟ್ಟೇ ಕೊಡುತ್ತಾರೆ. ಈ ವೇಳೆ ಪಂಚಸೇನೆ ರಾಜ್ಯಾಧ್ಯಕ್ಷ ಬಿ.ಎಸ್.ಪಾಟೀಲ್ ಮಾತನಾಡಿ, ನಮ್ಮ ಹೋರಾಟ ಯಾರನ್ನೋ ಮಂತ್ರಿ, ಶಾಸಕರನ್ನು ಮಾಡಲು ಅಲ್ಲ. ನಮ್ಮ ಸಮಾಜದ ಬಡ ಮಕ್ಕಳಿಗೆ, ಬಡ ಜನರಿಗಾಗಿ, ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಮೀಸಲಾತಿ ಅಗತ್ಯ, ಅದಕ್ಕಾಗಿ ಎಲ್ಲರೂ ಒಂದಾಗಿ ಬನ್ನಿ ಎಂದರು.

    ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಮಹಡಿ ಶಿವಮೂರ್ತಿ, ಗೌಡ ಲಿಂಗಾಯತ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗೇ ಗೌಡ ಪಾಟೀಲ್, ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಜ್ಯೋತಿ ದೇವೇಂದ್ರಪ್ಪ, ಜಿಪಂ ಮಾಜಿ ಅಧ್ಯಕ್ಷ ಸೌಭಾಗ್ಯ ಬಸವರಾಜನ್, ಪಂಚಮಸಾಲಿ ಸಮಾಜದ ಮಹಿಳಾ ಕಾರ್ಯದರ್ಶಿ ರೀನಾ ವೀರಭದ್ರಪ್ಪ, ಮುಖಂಡರಾದ ಜಿತೇಂದ್ರ ಎನ್ ಹುಲಿಕುಂಟೆ, ವೀರಶೈವ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೆಚ್ ಎಂ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.

  • ನಿರಾಣಿಗೆ ಹುಚ್ಚು ಹಿಡಿದಿದೆ, ತಲೆ ಕೆಟ್ಟಿದೆ – ಕಾಶಪ್ಪನವರ್ ಕಿಡಿ

    ನಿರಾಣಿಗೆ ಹುಚ್ಚು ಹಿಡಿದಿದೆ, ತಲೆ ಕೆಟ್ಟಿದೆ – ಕಾಶಪ್ಪನವರ್ ಕಿಡಿ

    ಗದಗ: ಸಮಾಜ ಪೀಠವನ್ನ ಮಾಡಿದೆ. ನಿರಾಣಿಗೆ ಹುಚ್ಚು ಹಿಡಿದಿದೆ, ತಲೆ ಕೆಟ್ಟಿದೆ ಅಧಿಕಾರದ ವ್ಯಾಮೋಹ ಏರಿದೆ. ಹೀಗಾಗಿ ಬೇಕಾ ಬಿಟ್ಟಿ ಮಾತಾಡುತ್ತಿದ್ದಾರೆ ಎಂದು ವಿಜಯಾನಂದ ಕಾಶಪ್ಪನವರ್ ಕಿಡಿಕಾರಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮಖಂಡಿ ಕಾರ್ಯಕ್ರಮಕ್ಕೆ ತಾಕತ್ತಿದ್ರೆ ಕಲ್ಲು ಹೊಡೆಸಲಿ, ಪಂಚಮಸಾಲಿ ಪ್ರತಿಜ್ಞೆ ಅಭಿಯಾನ ಜಮಖಂಡಿಯಲ್ಲಿ ನಡದೇ ನಡೆಯುತ್ತೆ. ಸಮಾಜದ ಒಳಿತಿಗಾಗಿ ಅವರು ಕೆಲಸ ಮಾಡುತ್ತಿಲ್ಲ. ಕೆಲವರು ಮುಖ್ಯಮಂತ್ರಿಯಾಗ್ಬೇಕು, ಮಂತ್ರಿ ಆಗ್ಬೇಕು ಅನ್ನೋ ನಿಟ್ಟಿನಲ್ಲಿದ್ದಾರೆ. ಮೀಸಲಾತಿ ಸಿಗೋವರೆಗೂ ನಾವು ಹೋರಾಟ ನಿಲ್ಲಿಸಲ್ಲ. ಇವರ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ. ಮುಂದೆ ಒಂದು ದಿನ ಸಮಾಜ ಇಂತವರಿಗೆ ತಕ್ಕಪಾಠ ಕಲಿಸಲಿದೆ ಎಂದರು. ಇದನ್ನೂ ಓದಿ: ಬಿಜೆಪಿ ಸರ್ಕಾರದಂತ ದರಿದ್ರ ಸರ್ಕಾರ ಇನ್ನೊಂದಿಲ್ಲ, ದಮ್ಮಯ್ಯ ಅಂತೀನಿ ಕಣ್ರಯ್ಯ ಈ ಸರ್ಕಾರ ಕಿತ್ತು ಬಿಸಾಕಿ: ಸಿದ್ದರಾಮಯ್ಯ

    ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಆರಂಭದಿಂದಲೂ ಕೆಲವರು ಮಾಡುತ್ತಿದ್ದಾರೆ. ಪಂಚಮಸಾಲಿ ಪ್ರತಿಜ್ಞೆ ಅಭಿಯಾನ ಜಮಖಂಡಿಯಲ್ಲಿ ನಡದೇ ನಡೆಯುತ್ತೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯ ಇನ್ನು 20 ವರ್ಷ ನಿರುದ್ಯೋಗಿಗಳು: ಕಟೀಲ್

    ಕೂಡಲ ಸಂಗಮ ಪೀಠಕ್ಕೆ ಪರ್ಯಾಯ ಸ್ವಾಮೀಜಿ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಮಾಜದ ಪೀಠವನ್ನು ಯಾರಿಂದಲೂ ಒಡೆಯಲು ಸಾಧ್ಯವಿಲ್ಲ. ಅವರಿಗೆ ತಾಕತ್ ಇದ್ರೆ ಒಡೆದು ತೋರಿಸಲಿ. ಪೀಠ ಬದಲಾಗಲ್ಲ, ಇದೇ ಸ್ವಾಮಿಗಳು ಪೀಠದಲ್ಲಿ ಇರ್ತಾರೆ ಎಂದು ವಿಜಯಾನಂದ ಕಾಶಪ್ಪನವರ್ ತಿಳಿಸಿದರು.

     

  • ನಾನೇ ಮುಖ್ಯಮಂತ್ರಿಯಾಗಿದ್ರೂ ಕಾಲಮಿತಿಯಲ್ಲಿ ಮೀಸಲಾತಿ ತರಲಾಗುವುದಿಲ್ಲ: ಸಿ.ಸಿ.ಪಾಟೀಲ್

    ನಾನೇ ಮುಖ್ಯಮಂತ್ರಿಯಾಗಿದ್ರೂ ಕಾಲಮಿತಿಯಲ್ಲಿ ಮೀಸಲಾತಿ ತರಲಾಗುವುದಿಲ್ಲ: ಸಿ.ಸಿ.ಪಾಟೀಲ್

    ಗದಗ: ನಾನೇ ಮುಖ್ಯಮಂತ್ರಿಯಾಗಿದ್ರೂ ಕಾಲ ಮಿತಿಯಲ್ಲಿ 2ಎ ಮೀಸಲಾತಿ ತರಲು ಸಾಧ್ಯವಿಲ್ಲ. ಯತ್ನ ನಡೆದಿದೆ ಕಾಯಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಯಡಿಯೂರಪ್ಪನವರಿಗೆ ಮನಸ್ಸಿರಲಿಲ್ಲ ಎನ್ನುವುದನ್ನು ಒಪ್ಪಲ್ಲ ಎಂದು ಹೇಲುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ತಿರುಗೇಟು ನೀಡಿದರು. ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

    ಸಮಾಜಕ್ಕೆ 2ಬಿ ಕೊಟ್ಟಿದ್ದೇ ಯಡಿಯೂರಪ್ಪನವರು. ಈಗ ನಾವು 2ಎ ಕೇಳಲು ಸಮರ್ಥರಾಗಿದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ನಾವಿದ್ದೇವೆ. ನಮ್ಮ ಸಮಾಜಕ್ಕೆ ನ್ಯಾಯ ಸಿಗಬೇಕು ಅನ್ನೋದು ನಂದೂ ಬೇಡಿಕೆಯಿದೆ. ಆದರೆ ಅದರ ಜೊತೆಗೆ ಬೇರೆ ಸಮಾಜದವರಿಗೆ ಅನ್ಯಾಯವಾಗಬಾರದು. ಮೀಸಲಾತಿ 50 ಪ್ರತಿಶತ ಮೀರಬಾರದು ಎಂಬ ನಿಯಮವಿದೆ. ಸಂವಿಧಾನದ ಚೌಕಟ್ಟಿನಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡಲು ಪ್ರಯತ್ನಿಸುತ್ತೇವೆ ಎಂದರು.

    ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಲ್ಲ ಜಿಲ್ಲೆಗಳಲ್ಲಿ ಪ್ರತಿಜ್ಞೆ ಪಂಚಾಯತ್ ಮಾಡುತ್ತಿದ್ದಾರೆ. ಮೀಸಲಾತಿಗೆ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿ ಧರಣಿ ನಡೆಸುವುದು ಸರಿಯಲ್ಲ. ಸೋಮವಾರ ಸ್ವಾಮೀಜಿಯವರನ್ನು ಭೇಟಿಯಾಗಿ ಪ್ರತಿಭಟನೆ ಮಾಡದಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು. ಈ ವೇಳೆ ದ್ರಾಕ್ಷಾರಸ ನಿಗಮ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನಸಾಲಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಎಸ್ ಕರಿಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

  • ಪಂಚಮಸಾಲಿ 2ಎ ಮೀಸಲಾತಿ- ಸದನದಲ್ಲಿ ಸಿಎಂ ಉತ್ತರ

    ಪಂಚಮಸಾಲಿ 2ಎ ಮೀಸಲಾತಿ- ಸದನದಲ್ಲಿ ಸಿಎಂ ಉತ್ತರ

    ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಸಂಬಂಧ ಸಿಎಂ ಉತ್ತರಕ್ಕೆ ಆಗ್ರಹಿಸಿ ಗುರುವಾರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ್ ಬೆಲ್ಲದ್ ಸದನದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಇಂದು ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿದ್ದಾರೆ.

    ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆಯನ್ನು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳುಹಿಸಲಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಾಂಶಗಳನ್ನು ಸಂಗ್ರಹಿಸುವ ಕೆಲಸವನ್ನು ಆಯೋಗ ಮಾಡುತ್ತಿದೆ. ಆಯೋಗ ವರದಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಬಿಜೆಪಿ ಶಾಸಕರಿಂದ್ಲೇ ಮೀಸಲಾತಿ ಆಕ್ರೋಶ – ಇಕ್ಕಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ

    ದತ್ತಾಂಶಗಳಿಲ್ಲದೆ ಮಾಡಿದ ಮರಾಠ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದನ್ನು ಸಿಎಂ ಸ್ಮರಿಸಿದರು. ಪಂಚಮಸಾಲಿ ಜೊತೆಗೆ 13 ಸಮುದಾಯಗಳ ಮೀಸಲಾತಿ ಬೇಡಿಕೆ ಸರ್ಕಾರದ ಮುಂದಿದೆ ಎಂದು ಇದೇ ವೇಳೆ ಬೊಮ್ಮಾಯಿ ತಿಳಿಸಿದರು. ಇದನ್ನೂ ಓದಿ: ಜೋ ಬೈಡನ್ ಭೇಟಿ ಮಾಡಿದ ಪ್ರಧಾನಿ ಮೋದಿ

    ಈ ಬೆನ್ನಲ್ಲೇ ಅಕ್ಟೋಬರ್ 1ರಿಂದ ಹೋರಾಟ ಪ್ರಾರಂಭ ಮಾಡುವುದಾಗಿ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಘೋಷಣೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

  • ಸಿಹಿ ಸುದ್ದಿ ಕೊಟ್ಟರೆ ಸಿಎಂಗೆ ಕಲ್ಲುಸಕ್ಕರೆ ತುಲಾಭಾರ: ಜಯಮೃತ್ಯುಂಜಯ ಸ್ವಾಮೀಜಿ

    ಸಿಹಿ ಸುದ್ದಿ ಕೊಟ್ಟರೆ ಸಿಎಂಗೆ ಕಲ್ಲುಸಕ್ಕರೆ ತುಲಾಭಾರ: ಜಯಮೃತ್ಯುಂಜಯ ಸ್ವಾಮೀಜಿ

    ಬೆಳಗಾವಿ: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರಕ್ಕೆ ಕೊಟ್ಟಿದ್ದ ಗಡುವು ಮುಗಿದಿದೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಕ್ಯಾಬಿನೆಟ್ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು. ಆಯೋಗದ ವರದಿ ಪಡೆದು ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದೊಂದೇ ಬಾಕಿ. ಈ ವಿಚಾರವಾಗಿ ನಿನ್ನೆ ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ಸಮಾಜದ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವರು ಧ್ವನಿ ಎತ್ತಿದ್ದು, 2ಎ ಮೀಸಲಾತಿ ಹೋರಾಟಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದರು. ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ಪತ್ರ

    ನಿನ್ನೆ ಈ ವಿಚಾರವಾಗಿ ಇಂದು ಬೆಳಗ್ಗೆ ಸಿಎಂ ಉತ್ತರ ಕೋಡುತ್ತಾರೆ ಎಂದು ಹೇಳಿದ್ದರು. ಇಂದು ಸಿಎಂ ಉತ್ತರ ಕೊಟ್ಟರು. ಏನು ತೀರ್ಮಾನ ತೆಗೆದುಕೊಂಡಿದ್ದಾರೆ ನಮಗೆ ಗೊತ್ತಿಲ್ಲ. ಶಾಸಕ ಬಸನಗೌಡ ಪಾಟೀಲ್ ಬೆಳಗಾವಿಗೆ ಬರುತ್ತಾರೆ. ಯತ್ನಾಳ್‍ಗೆ ಸಿಎಂ ಯಾವ ಭರವಸೆ ನೀಡಿದ್ದಾರೆ ಗೊತ್ತಿಲ್ಲ. ಇಂದು ಸಮಾವೇಶದಲ್ಲಿ ಯತ್ನಾಳ್ ಅವರು ಭಾಗಿಯಾಗುವ ಸಾಧ್ಯತೆ ಇದೆ. ಸಮಾವೇಶದಲ್ಲಿ ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ. ನಂತರ ಹೋರಾಟದ ಮುಂದಿನ ರೂಪರೇಷೆ ಬಗ್ಗೆ ಚರ್ಚೆ ಮಾಡಲಾಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು: ಆನಂದ್ ಸ್ವರೂಪ್ ಶುಕ್ಲಾ

    ಸರ್ಕಾರ ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳುವ ಭರವಸೆ ನಮಗಿದೆ. ಮೀಸಲಾತಿ ವಿಚಾರವಾಗಿ ಸರ್ಕಾರ ಬೇಗ ಸಿಹಿ ಸುದ್ದಿ ಕೊಡಬೇಕು. ಸಿಹಿ ಸುದ್ದಿ ಕೊಟ್ಟರೆ ಸಿಎಂಗೆ ಕಲ್ಲುಸಕ್ಕರೆ ತುಲಾಭಾರ ಮಾಡಲಾಗುತ್ತೆ, ಇಲ್ಲಾವಾದರೆ ಮತ್ತೆ ಹೋರಾಟ ಮುಂದುವರಿಸಲಾಗುತ್ತೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

  • ಯಡಿಯೂರಪ್ಪರಿಂದ ನಿರಾಣಿಗೆ ಸಿಎಂ ಸ್ಥಾನ ಕೈತಪ್ಪಿದೆ, ಯತ್ನಾಳ್ ಬಾಹುಬಲಿ: ಜಯಮೃತ್ಯುಂಜಯ ಸ್ವಾಮೀಜಿ

    ಯಡಿಯೂರಪ್ಪರಿಂದ ನಿರಾಣಿಗೆ ಸಿಎಂ ಸ್ಥಾನ ಕೈತಪ್ಪಿದೆ, ಯತ್ನಾಳ್ ಬಾಹುಬಲಿ: ಜಯಮೃತ್ಯುಂಜಯ ಸ್ವಾಮೀಜಿ

    ಕೊಪ್ಪಳ: ಯಡಿಯೂರಪ್ಪರಿಂದಲೇ ಮುರುಗೇಶ್ ನಿರಾಣಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿತ್ತು ಎಂದು ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂತ್ರಿ ಆಗಿಲ್ಲ ಅಂತ ಯಾರೂ ಬೇಜಾರಾಗಬೇಡಿ ಎಂದು ಈಗಾಗಲೇ ಬಸನಗೌಡ ಪಾಟೀಲ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. ಮಂತ್ರಿಗಿಂತ ಮೀಸಲಾತಿ ಮುಖ್ಯ ಎಂದು ತಿಳಿಸಿದ್ದಾರೆ. ಅವರು ಬಾಹುಬಲಿ ಇದ್ದಂಗೆ ಹೊರಗೂ ಗುಡುಗುತ್ತಾರೆ, ಒಳಗೂ ಗುಡುಗುತ್ತಾರೆ ಎಂದರು. ನಮ್ಮವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಅಪೇಕ್ಷೆ ಇತ್ತು. ಮುರುಗೇಶ್ ನಿರಾಣಿಗೆ ಮುಖ್ಯಮಂತ್ರಿ ಸ್ಥಾನವನ್ನು ಯಾರು ತಪ್ಪಿಸಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪ ಅವರಿಂದಲೇ ನಿರಾಣಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದೆ ಎಂದು ಸ್ವಾಮೀಜಿ ಆರೋಪಿಸಿದರು. ಇದನ್ನೂ ಓದಿ: ಗುಜರಾತ್‍ನಂತೆ ಕರ್ನಾಟಕದಲ್ಲಿ ಮಾದರಿ ಸಂಪುಟ ರಚನೆ ಆಗಲಿ: ವಿಜಯೇಂದ್ರ

    ಅ.1ರಿಂದ ಸತ್ಯಾಗ್ರಹ ಮಾಡಲು ಪಂಚಮಸಾಲಿ ಸಮುದಾಯ ತೀರ್ಮಾನಿಸಿದೆ. ಅಷ್ಟರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ 2ಎ ಮೀಸಲಾತಿ ಘೋಷಿಸಬೇಕು. ಇಲ್ಲವಾದರೆ ಬೆಂಗಳೂರಿನಲ್ಲೇ ಹೋರಾಟ ಆರಂಭಿಸಲಾಗುವುದು ಎಂದು ತಿಳಿಸಿದರು. ಈ ಹಿಂದೆ ಸರ್ಕಾರ 6 ತಿಂಗಳ ಸಮಯವನ್ನು ಕೇಳಿತ್ತು. ಅವರು ಕೇಳಿದ್ದ ಸಮಯ ಮುಗಿದಿದೆ. ನಮ್ಮ ಬೇಡಿಕೆಯನ್ನು ನೆನಪಿಸುವ ಸಲುವಾಗಿ ಮತ್ತೆ ಅಭಿಯಾನ ಶುರು ಮಾಡಿ ಇಡೀ ರಾಜ್ಯದಲ್ಲಿ ಪಂಚಮಸಾಲಿ ಸಮುದಾಯ ಒಂದಾಗಿದೆ ಎಂಬುದನ್ನು ತೋರಿಸುತ್ತೇವೆ ಎಂದರು. ಇದನ್ನೂ ಓದಿ:ಮದುವೆ ಆಗಲು ಒಪ್ಪದ ಪ್ರಿಯಕರನಿಗೆ ಪ್ರೇಯಸಿಯಿಂದ ಬಿತ್ತು ಗೂಸಾ

    ದೇವಸ್ಥಾನಗಳ ತೆರವು ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನಾನು ಆ ಬಗ್ಗೆ ಮಾತನಾಡುವುದಿಲ್ಲ. ಸುಪ್ರೀಂ ಕೋರ್ಟ್ ಆದೇಶವಿದೆ. ಅದು ಅಲ್ಲಿನ ಜಿಲ್ಲಾಡಳಿತಕ್ಕೆ ಸಂಬಂಧಿಸಿದ್ದು. ಇದಕ್ಕೆಲ್ಲ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ದೇವಸ್ಥಾನ, ಮಸೀದಿ ಬಗ್ಗೆ ನಾನು ಮಾತನಾಡುವುದಿಲ್ಲ. ವಿಷಯ ಗೊಂದಲವಾಗುತ್ತದೆ. ಎಲ್ಲರಿಗೂ ಒಂದೇ ರೀತಿಯ ಕಾನೂನು ಇರಲಿ ಎಂದು ಸ್ವಾಮೀಜಿ ಹೇಳಿದರು.

  • ಕಾಣದ ಕೈಗಳಿಂದ ಮೀಸಲಾತಿ ಹೋರಾಟಕ್ಕೆ ಅಡ್ಡಗಾಲು: ಬಸವ ಜಯಮೃತ್ಯುಂಜಯ ಶ್ರೀ

    ಕಾಣದ ಕೈಗಳಿಂದ ಮೀಸಲಾತಿ ಹೋರಾಟಕ್ಕೆ ಅಡ್ಡಗಾಲು: ಬಸವ ಜಯಮೃತ್ಯುಂಜಯ ಶ್ರೀ

    ಉಡುಪಿ: ಕಾಣದ ಕೈಗಳು ಮೀಸಲಾತಿ ಹೋರಾಟಕ್ಕೆ ಅಡ್ಡಗಾಲು ಇಡುತ್ತಿವೆ. ಅಂತಹ ಅಸೂಯೆಯ ಮನಸ್ಸು ಇರುವ ವ್ಯಕ್ತಿಗಳಿಗೆ ಬಸವಣ್ಣ ಒಳ್ಳೆಯದು ಮಾಡಲಿ ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿರು.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ಲಿಂಗಾಯಿತ ಪೀಠಗಳು ರಾಜ್ಯ ಸರ್ಕಾರದ ಪರ, ವಿರುದ್ಧ ಇಲ್ಲ. ಹೋರಾಟ, ಚಳುವಳಿಗಳು ನಡೆಯುವಾಗ ಗೊಂದಲಗಳು ಸಹಜ. ಗೊಂದಲ ಸೃಷ್ಟಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅಸೂಯೆಗೊಂಡ ಮನಸುಗಳು ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿವೆ ಎಂದರು.

    ಹೋರಾಟದ ಒಗ್ಗಟ್ಟು ಒಡೆಯಲು ಅನೇಕ ವಾಮಮಾರ್ಗಗಳನ್ನು ಹಿಡಿದು ಗೊಂದಲ ಸೃಷ್ಟಿಸಲಾಗುತ್ತಿದೆ. ಗೊಂದಲ ಸೃಷ್ಟಿಸುವವರಿಗೆ ಬಸವಣ್ಣ ಒಳ್ಳೆಯದು ಮಾಡಲಿ. ಮುಖ್ಯಮಂತ್ರಿ, ಮಂತ್ರಿಸ್ಥಾನ ಮುಖ್ಯ ಅಲ್ಲ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನಾನು ಕೇಳುವುದಿಲ್ಲ. ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿ. ಕರ್ನಾಟಕದಲ್ಲಿ 3 ಕೋಟಿ ಲಿಂಗಾಯತರು ಇದ್ದಾರೆ. ಸಮಾಜಕ್ಕೆ ಸಂವಿಧಾನಬದ್ಧ ಸವಲತ್ತುಗಳು ಇನ್ನೂ ಸಿಕ್ಕಿಲ್ಲ. ಮತ ಕೊಡಲು, ಕಂದಾಯ ಕಟ್ಟಲು ಲಿಂಗಾಯತರು ಮೀಸಲಾಗಿದ್ದೇವೆ. ಲಿಂಗಾಯತ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಶಿರಾಡಿ ಘಾಟ್ ನಾಲ್ಕು ಪಥದ ರಸ್ತೆ ಸಂಪೂರ್ಣಗೊಳಿಸಿ – ಗಡ್ಕರಿ ಬಳಿ ಸಿಎಂ ಮನವಿ

    ಸರ್ಕಾರ ಕೊಟ್ಟ ಗಡುವು ಮುಗಿಯುತ್ತಿದೆ
    ಮೀಸಲಾತಿ ಘೋಷಿಸುವುದಾಗಿ ಹೇಳಿ ರಾಜ್ಯ ಸರ್ಕಾರ ಕೊಟ್ಟ ಗಡುವು ಮುಗಿಯುತ್ತಿದೆ. ಅಕ್ಟೋಬರ್ 1ರ ವರೆಗೆ ನಿಮಗೆ ಕಾಲಾವಕಾಶ ಇದೆ. ಬೊಮ್ಮಾಯಿಯವರೇ ಮೀಸಲಾತಿ ಘೋಷಿಸಿ ಭಾಗ್ಯ ವಿದಾತರಾಗಿ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು. ಮೀಸಲಾತಿ ವಿಳಂಬವಾದರೆ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಮಾಡುತ್ತೇವೆ. ಮೀಸಲಾತಿ ಘೋಷಣೆ ಮಾಡಿ, ಬೆಂಗಳೂರು ಫ್ರೀಡಂ ಪಾರ್ಕ್ ನ ಹೊರಾಟದಿಂದ ತಪ್ಪಿಸಿಕೊಳ್ಳಿ ಎಂದರು.

    ಲಿಂಗಾಯತ ಸಮುದಾಯದಲ್ಲಿ ಶಿಕ್ಷಣ ಪಡೆದ, ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿರುವ ಲಕ್ಷಾಂತರ ಜನ ಇದ್ದಾರೆ. ಸಾಂವಿಧಾನಿಕವಾಗಿ ನಮಗೆ ಸಿಗುವ ಸವಲತ್ತುಗಳನ್ನು ಕೊಡುವುದು ಸರ್ಕಾರದ ಕರ್ತವ್ಯ. ಅಕ್ಟೋಬರ್ 1ರೊಳಗೆ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸದಿದ್ದರೆ ಲಕ್ಷಾಂತರ ಸಂಖ್ಯೆಯಲ್ಲಿ ಫ್ರೀಡಂಪಾರ್ಕ್ ನಲ್ಲಿ ಜನಾಂದೋಲನ ಮಾಡುತ್ತೇವೆ. ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಜನ್ಮದಿನದಂದೇ ಹೋರಾಟ ಶುರು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

  • ಅ.1ರ ಒಳಗೆ ಮೀಸಲಾತಿ ಘೋಷಣೆ ಮಾಡಿ, ಇಲ್ಲದಿದ್ದರೆ ಮತ್ತೆ ಸತ್ಯಾಗ್ರಹ ಆರಂಭ: ಜಯಮೃಂತ್ಯುಜಯ ಸ್ವಾಮೀಜಿ

    ಅ.1ರ ಒಳಗೆ ಮೀಸಲಾತಿ ಘೋಷಣೆ ಮಾಡಿ, ಇಲ್ಲದಿದ್ದರೆ ಮತ್ತೆ ಸತ್ಯಾಗ್ರಹ ಆರಂಭ: ಜಯಮೃಂತ್ಯುಜಯ ಸ್ವಾಮೀಜಿ

    – ಮೀಸಲಾತಿ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ

    ಶಿವಮೊಗ್ಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಹಲವು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಮೀಸಲಾತಿ ಜಾರಿಗೆ 6 ತಿಂಗಳ ಕಾಲಾವಕಾಶ ಕೇಳಿತ್ತು. ಸರ್ಕಾರ ಕೇಳಿದ್ದ ಕಾಲಾವಕಾಶ ಮುಗಿಯುತ್ತಿದ್ದು, ಅ.1 ರೊಳಗೆ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮತ್ತೆ ಸತ್ಯಾಗ್ರಹ ಆರಂಭಿಸುವುದು ಅನಿವಾರ್ಯ ಆಗಲಿದೆ ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

    ಶಿವಮೊಗ್ಗದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿಯವರು, ಪಂಚಮಸಾಲಿ ಸಮುದಾಯದ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಹಳೆ ಮೈಸೂರು ಭಾಗದಿಂದ ಅಭಿಯಾನ ಮಾಡುವ ಮೂಲಕ ಸಂಘಟನೆ ಮಾಡಲಾಗುತ್ತಿದೆ. ಆಗಸ್ಟ್ 26 ರಿಂದ ಅ.1 ರವರೆಗೆ ರಾಜ್ಯದ ಹಲವೆಡೆಗಳಲ್ಲಿ ಈ ಅಭಿಯಾನ ನಡೆಯಲಿದೆ. ಸರ್ಕಾರವನ್ನು ಎಚ್ಚರಗೊಳಿಸುವುದು ಮತ್ತು ಸಮುದಾಯ ಜಾಗೃತಿಗೊಳಿಸುವುದು ಈ ಅಭಿಯಾನದ ಉದ್ದೇಶ ಎಂದರು.ಇದನ್ನೂ ಓದಿ: ಮೀಸಲಾತಿ ಕೊಡುವುದನ್ನು ವಿಳಂಬ ಮಾಡಿದ್ರೆ ತಕ್ಕ ಪಾಠ: ಯತ್ನಾಳ್

    ಮೀಸಲಾತಿ ಸಿಗುವ ನಂಬಿಕೆ, ಭರವಸೆ:
    ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರು 6 ತಿಂಗಳುಗಳ ಕಾಲ ಕಾಲಾವಕಾಶ ಕೇಳಿದ್ದರು. ಆ ಕಾಲಾವಕಾಶ ಸಹ ಮುಗಿಯುವುದರ ಜೊತೆಗೆ ಮುಖ್ಯಮಂತ್ರಿ ಅವರು ಸಹ ಬದಲಾಗಿದ್ದಾರೆ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ಹೋರಾಟದ ಬಗ್ಗೆ ತಿಳಿದಿದೆ. ಪಾದಯಾತ್ರೆ ಆರಂಭದ ದಿನದಿಂದ ಇಲ್ಲಿಯವರೆಗೆ ನಮಗೆ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದಾರೆ. ನಿಮ್ಮ ಸಮುದಾಯದ ಜೊತೆ ನಾವಿದ್ದೇವೆ ನಮ್ಮ ಸರ್ಕಾರದ ಮೇಲೆ ನಂಬಿಕೆಯಿಡಿ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ನಮಗೆ ಮೀಸಲಾತಿ ದೊರೆಯುತ್ತದೆ ಎಂಬ ನಂಬಿಕೆ, ಭರವಸೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮಯುದ್ಧ- ಎಂ.ಬಿ.ಪಾಟೀಲ್ ಧರ್ಮ ದಾಳಕ್ಕೆ ಕಾಂಗ್ರೆಸ್ ಮೌನ

    ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ:
    ಪಂಚಮಸಾಲಿ ಸಮುದಾಯದ ಮತ್ತೊಂದು ಪೀಠ ಸ್ಥಾಪನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ನಾನು ಅಭಿಯಾನದಲ್ಲಿ ಭಾಗವಹಿಸಿದ್ದೇನೆ. ಆದ್ದರಿಂದ ಈ ಬಗ್ಗೆ ಸಭೆ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ನಾನು ಪಂಚಮಸಾಲಿ ಪೀಠದ ಸ್ವಾಮೀಜಿಯಾಗಿ ಈ ಸಮಾಜವನ್ನು ತುಂಬಾ ಪ್ರಾಮಾಣಿಕವಾಗಿ ಕಟ್ಟುವಂತಹ ಪ್ರಯತ್ನ ಮಾಡುತ್ತಿದ್ದೇನೆ. ಈಡಿ ಜಗತ್ತಿಗೆ ನಮ್ಮ ಶಕ್ತಿ ಏನು ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ಈ ಸಮುದಾಯದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಎಲ್ಲಾ ಕಡೆ ಆಗುತ್ತಿದೆ. ಆದರೆ ಆ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಮೀಸಲಾತಿ ಹೋರಾಟವನ್ನು ಯಾರು ಎಷ್ಟೇ ಹೊಡೆಯುವಂತಹ ಪ್ರಯತ್ನ ಮಾಡಿದರೂ, ವಿರೋಧಿಗಳು ಸಹ ನಮ್ಮವರೇ ಎಂದು ಭಾವಿಸಿ ಒಟ್ಟಾಗಿ ಕರೆದುಕೊಂಡು ಹೋಗುತ್ತೇನೆ. ಮೀಸಲಾತಿ ಸಿಗುವವರೆಗು ಯಾವ ಕಾರಣಕ್ಕು ವಿಚಲಿತನಾಗದೇ, ಮೀಸಲಾತಿ ಪಡೆದೇ ತೀರುವುದಾಗಿ ಸ್ವಾಮೀಜಿ ತಿಳಿಸಿದರು. ಇದನ್ನೂ ಓದಿ: ಪಂಚಮಸಾಲಿ ಸಮಾಜದ ಸ್ವಾಮೀಜಿಗಳ ನಡುವೆ ಒಡಕು!