Tag: 2ಎ ಮೀಸಲಾತಿ

  • ಸ್ವಾಮೀಜಿ ಕಾನೂನು ಉಲ್ಲಂಘನೆ ಮಾಡಿದ್ದಾರೆ, ಲಾಠಿ ಚಾರ್ಜ್ ಅನಿವಾರ್ಯ ಆಗಿತ್ತು: ಪರಮೇಶ್ವರ್‌

    ಸ್ವಾಮೀಜಿ ಕಾನೂನು ಉಲ್ಲಂಘನೆ ಮಾಡಿದ್ದಾರೆ, ಲಾಠಿ ಚಾರ್ಜ್ ಅನಿವಾರ್ಯ ಆಗಿತ್ತು: ಪರಮೇಶ್ವರ್‌

    ಬೆಂಗಳೂರು: ಪಂಚಮಸಾಲಿ ಪ್ರತಿಭಟನೆ (Panchmasali Protest) ವೇಳೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದ್ದರಿಂದ, ಲಾಠಿ ಚಾರ್ಜ್ ಮಾಡುವ ಅನಿವಾರ್ಯ ಇತ್ತು ಎಂದು ಗೃಹಸಚಿವ ಜಿ. ಪರಮೇಶ್ವರ್‌ (G Parameshwar) ಅವರು ಪೊಲೀಸರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

    2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಪಂಚಮಸಾಲಿಗಳ ಪ್ರತಿಭಟನೆ ವೇಳೆ ಲಾಠಿ ಚಾರ್ಜ್‌ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಗೃಹಸಚಿವರು ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: 2028ಕ್ಕೆ ನಮಗೆ ಬೇಕಾದ ಸರ್ಕಾರ ತಂದು ಮೀಸಲಾತಿ ಪಡೆಯುತ್ತೇವೆ: ಜಯ ಮೃತ್ಯುಂಜಯ ಸ್ವಾಮೀಜಿ

    ಪಂಚಮಸಾಲಿ ಪ್ರತಿಭಟನೆ ಅವರ ಹಕ್ಕು. 5 ಸಾವಿರ ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ಮುತ್ತಿಗೆ ಹಾಕಲು ಪ್ರತಿಭಟನೆ ಮಾಡಲು ಮುಂದಾಗಿದ್ದರು. ಅದಕ್ಕೆ ಅನುಮತಿ ನೀಡಲಾಗಿತ್ತು, ಮೂವರು ಸಚಿವರನ್ನು ಪ್ರತಿಭಟನಾ ಸ್ಥಳಕ್ಕೆ ಕಳಿಸಲಾಗಿತ್ತು. ಸಿಎಂ ಜೊತೆ ಮಾತುಕತೆಗೆ ಸ್ವಾಮೀಜಿ ಬರಲಿಲ್ಲ. ಮುಖ್ಯರಸ್ತೆಗೆ ಪ್ರತಿಭಟನಾಕಾರರು ಬಂದರು. ಕಾನೂನು ಉಲ್ಲಂಘನೆ ಮಾಡಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೋದಾಗ ಲಘು ಲಾಠಿ ಪ್ರಹಾರ ನಡೆದಿದೆ. ಸ್ವಾಮೀಜಿ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಲಾಠಿ ಚಾರ್ಜ್ ಮಾಡುವುದು ಅನಿವಾರ್ಯ ಆಗಿತ್ತು. ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆಸಿದ್ದಾರೆ ಆದ್ದರಿಂದ, ಲಾಠಿ ಚಾರ್ಜ್ ಮಾಡುವ ಅನಿವಾರ್ಯ ಇತ್ತು ಎಂದು ತಿಳಿಸಿದರು.

    ಇನ್ನೂ ಗೋಲಿಬಾರ್ ಮಾಡುವ ಪ್ಲ್ಯಾನ್‌ ಇತ್ತು ಎಂಬ ಸ್ವಾಮೀಜಿ ಹೇಳಿಕೆ ಆ ರೀತಿ ಏನೂ ಇಲ್ಲ, ಎಂದರಲ್ಲದೇ ಪೊಲೀಸರು ಯಾರ ಮೇಲೂ ದುರುದ್ದೇಶಪೂರಿತವಾಗಿ ಲಾಠಿ ಪ್ರಹಾರ ನಡೆಸಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 2ಎ ಮೀಸಲಾತಿ ಕಿಚ್ಚು – ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

    ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದೇಕೆ?
    ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬಂದ ಹೋರಾಟಗಾರರನ್ನು ಪೊಲೀಸರು ದಾರಿಯಲ್ಲೇ ತಡೆದಿದ್ದರು. ಮುತ್ತಿಗೆ ಹಾಕಲು ಅನುಮತಿ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದರೂ ಪ್ರತಿಭಟನಾಕಾರರು ಪಟ್ಟುಹಿಡಿದಿದ್ದರು. ಈ ವೇಳೆ ತಳ್ಳಾಟ ನೂಕಾಟ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ಬಿದ್ದಿದೆ. ಮ್ಮ ಮೇಲೆಯೇ ಕಲ್ಲುತೂರಿದ್ದರು, ಇದರಿಂದ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಲಾಠಿ ಬೀಸಿದ್ದರು. ಲಾಠಿ ಬೀಸುತ್ತಿದ್ದಂತೆ ಪ್ರತಿಭಟನಾ ನಿರತರು ದಿಕ್ಕಾಪಾಲಾಗಿ ಓಡಿದ್ದರು. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ -ಹೋರಾಟಗಾರರ ಮೇಲೆ ಲಾಠಿಚಾರ್ಜ್‌

  • ಬಿಜೆಪಿಯವ್ರು ಮುಸ್ಲಿಂ ಮೀಸಲಾತಿ ಹಿಂಪಡೆದು ಒಕ್ಕಲಿಗ, ಲಿಂಗಾಯತ ಸಮುದಾಯಗಳಿಗೆ ಹಂಚಿದ್ರು: ಸಿಎಂ

    ಬಿಜೆಪಿಯವ್ರು ಮುಸ್ಲಿಂ ಮೀಸಲಾತಿ ಹಿಂಪಡೆದು ಒಕ್ಕಲಿಗ, ಲಿಂಗಾಯತ ಸಮುದಾಯಗಳಿಗೆ ಹಂಚಿದ್ರು: ಸಿಎಂ

    ಬೆಳಗಾವಿ/ಬೆಂಗಳೂರು: ಬಿಜೆಪಿಯವ್ರು (BJP) ಈ ಹಿಂದೆ ಅಧಿಕಾರದಲ್ಲಿದ್ದಾಗ ಮುಸ್ಲಿಂ ಸಮುದಾಯದ (Muslim Community) ಶೇ.4ರಷ್ಟು ಮೀಸಲಾತಿ ವಾಪಸ್ ಪಡೆದು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳಿಗೆ ಹಂಚಿಕೆ ಮಾಡಿದ್ರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

    ಬೆಳಗಾವಿ ಚಳಿಗಾಲ ಅಧಿವೇಶನದ (Belagavi Winter Session)ಮೊದಲ ದಿನ ಸದನದಲ್ಲಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆ ಕುರಿತು ಸಿಎಂ ಮಾತನಾಡಿದರು. ಪಂಚಮಸಾಲಿ (Panchamasali) ಸಮುದಾಯದ 2ಎ ಮೀಸಲಾತಿ ವಿಚಾರವಾಗಿ ಹಿಂದಿನ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್ ಹಾಗೂ ನ್ಯಾಯಾಲಯದ ಆದೇಶವನ್ನು ಸದನದ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಬೆಳಗಾವಿ| ವಿಧಾನಸಭೆ ಸಭಾಧ್ಯಕ್ಷರಿಗೆ ನೂತನ ಪೀಠ – ವಿಶೇಷತೆ ವಿವರಿಸಿದ ಯು.ಟಿ.ಖಾದರ್

    ಪಂಚಮಸಾಲಿಗಳನ್ನು 2ಎ ಸೇರಿಸಲು ಬಹಳ ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ನಾನು ಮುಖ್ಯಮಂತ್ರಿಯಾದ ಮೇಲೆ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಪಂಚಮಸಾಲಿ ಮುಖಂಡರೊಂದಿಗೆ ಎರಡು ಬಾರಿ ಸಭೆ ನಡೆಸಿದ್ದೇನೆ. ಪಂಚಮಸಾಲಿಗಳು ಮೀಸಲಾತಿ ಕೇಳಲು ನಾನು ಅಡ್ಡಿಯಾಗಿಲ್ಲ ಎಂದರು. ಈ ವೇಳೆ ಸ್ಪಷ್ಟನೆ ನೀಡಿದ ಗೃಹ ಸಚಿವರು 5,000 ಟ್ರ‍್ಯಾಕ್ಟರ್‌ಗಳನ್ನು ತರಲು ಮುಂದಾಗಿದ್ದಾರೆ. ಹಾಗಾಗಿ ಲಾ ಅಂಡ್ ಆರ್ಡರ್ ಸಮಸ್ಯೆ ಆಗುತ್ತೆ ಅಂತ ಅನುಮತಿ ಕೊಡಲಿಲ್ಲ. ನಂತರ ಜನ ಬರ್ತಾರೆ ವಾಹನಗಳಲ್ಲಿ ಅಂದ್ರು, ಜನ ಬರೋ ವಾಹನಗಳಿಗೂ ನಾವು ಮಿತಿ ಹಾಕಿದ್ದೇವೆ. ಪ್ರತಿಭಟನೆ ಮಾಡಲು ಅಡ್ಡಿ ಇಲ್ಲ, ಆದ್ರೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಅಷ್ಟೇ ಎಂದು ಗೃಹಸಚಿವರು ತಿಳಿಸಿದ್ರು. ಇದನ್ನೂ ಓದಿ: ಪ್ರತಿ ತಿಂಗಳು ಎಷ್ಟು ಮಂದಿಗೆ ಯುವನಿಧಿ ಹಣ ಸೇರುತ್ತಿದೆ – ಲೆಕ್ಕ ಕೊಟ್ಟ ಸರ್ಕಾರ

    ಬಳಿಕ ಮಾತು ಮುಂದುವರಿಸಿದ ಸಿಎ, ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಎ ಹಾಗೂ ಪ್ರವರ್ಗ-3ಬಿ ಎಂದು ವಿಂಗಡಸಲಾಗಿದೆ. ವೀರಶೈವ ಲಿಂಗಾಯಿತ ಹಾಗೂ ಪಂಚಮಸಾಲಿ ಜಾತಿಗಳು 3ಬಿ ಅಡಿ ಮೀಸಲಾತಿ ಪಡೆಯುತ್ತಿವೆ. ಪಂಚಮಸಾಲಿಗಳನ್ನು 2ಎ ಸೇರಿಸಲು ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗದ ಮುಂದೆ ಮೀಸಲಾತಿ ವಿಚಾರವನ್ನು ಮಂಡಿಸುವಂತೆ ಪಂಚಮಸಾಲಿ ಹೋರಟಗಾರರಿಗೆ ತಿಳಿಸಿದ್ದೇನೆ ಎಂದರು. ಇದನ್ನೂ ಓದಿ: 9 ಕಂಪನಿಗಳಿಗೆ ನೀಡಿರೋ 5,150 ಎಕ್ರೆ ಗುತ್ತಿಗೆ ಅರಣ್ಯ ಭೂಮಿ ವಶಕ್ಕೆ ‌ಕ್ರಮ: ಈಶ್ವರ್ ಖಂಡ್ರೆ

    ಈ ಹಿಂದೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಪಂಚಮಸಾಲಿಗಳನ್ನು 2ಎ ಸೇರಿಸಿಲ್ಲ ಬದಲಾಗಿ, ಅಲ್ಪಸಂಖ್ಯಾತರಿಗೆ ನೀಡಿದ್ದ ಶೇ.4 ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, 3ಎ ಹಾಗೂ 3ಬಿ ಗೆ ತಲಾ ಶೇ.2 ರಂತೆ ಮೀಸಲಾತಿ ಹಂಚಿಕೆ ಮಾಡಿತ್ತು. ಇದನ್ನು ಆಕ್ಷೇಪಿಸಿ ಮುಸ್ಲಿಮರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಹಿಂದಿನ ಬಿಜೆಪಿ ಸರ್ಕಾರ ಮುಸ್ಲಿಮರ ಮೀಸಲಾತಿ ರದ್ದುಪಡಿಸುವುದಿಲ್ಲ. ಯತಾಸ್ಥಿತಿ ಮುಂದುವರಿಸಿಕೊಂಡು ಹೋಗುವುದಾಗಿ ಅಫಿಡವಿಡ್ ಸಲ್ಲಿಸಿದೆ. ಇದರ ಆಧಾರದ ಮೇಲೆ ಕೋರ್ಟ್‌ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಆದೇಶವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಇದರ ಪ್ರತಿಯನ್ನು ನಾಳೆಯೇ ಸದನದ ಮುಂದೆ ಮಂಡಿಸುತ್ತೇನೆ ಎಂದು ಹೇಳಿದರು.

  • ಸಿಎಂ, ಡಿಸಿಎಂ ಆಯ್ಕೆಯಲ್ಲಿ ಧರ್ಮಗುರುಗಳು ಮೂಗು ತೂರಿಸೋದು ಸರಿಯಲ್ಲ: ಜಯ ಮೃತ್ಯುಂಜಯ ಸ್ವಾಮೀಜಿ

    ಸಿಎಂ, ಡಿಸಿಎಂ ಆಯ್ಕೆಯಲ್ಲಿ ಧರ್ಮಗುರುಗಳು ಮೂಗು ತೂರಿಸೋದು ಸರಿಯಲ್ಲ: ಜಯ ಮೃತ್ಯುಂಜಯ ಸ್ವಾಮೀಜಿ

    ಹುಬ್ಬಳ್ಳಿ: ಸಿಎಂ, ಡಿಸಿಎಂ (CM, DCM) ಆಯ್ಕೆ ಮಾಡಿವ ಅಧಿಕಾರ ಇರೋದು ಶಾಸಕರಿಗೆ. ನಮ್ಮಂತಹ ಧರ್ಮಗುರುಗಳು ಈ ವಿಚಾರದಲ್ಲಿ ಮೂಗು ತೂರಿಸೋದು ಸರಿಯಲ್ಲ ಅಂತ ಪಂಚಮಸಾಲಿ ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿಂದು (Hubballi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕಾರಣಿಗಳು ಸಲಹೆ ಕೇಳಿದಾಗ ಧರ್ಮಗುರುಗಳು ಸಲಹೆ ಕೊಡಬೇಕು. ಆದ್ರೆ ಇಂತಹವರನ್ನೇ ಸಿಎಂ, ಡಿಸಿಎಂ ಮಾಡಿ ಅಂತ ಹೇಳೋದು‌ ಸರಿ ಅಲ್ಲ. ಯಾರನ್ನಾದರೂ ಸಿಎಂ ಮಾಡಿ, ಡಿಸಿಎಂ ‌ಮಾಡಲಿ. ನಮಗೆ 2A ಮೀಸಲಾತಿ (2A Reservation) ಕೊಡಲಿ‌ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಬಾಕಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರಕ್ಕೆ ಡಿಕೆ ಸುರೇಶ್ ಮನವಿ

    ನಮ್ಮ ಹೋರಾಟ ದುರುಪಯೋಗ ಆಗಿದೆ:
    ವಿನಯ ಕುಲಕರ್ಣಿ, ಹೆಬ್ಬಾಳಕರ್ ಅವರು ಸಿಎಂಗೆ ಬಹಳ ಸಲ ಹೇಳಿದ್ದಾರೆ. ಆದರೂ ಸಿದ್ದರಾಮಯ್ಯ ಸಭೆ ಕರೆದಿಲ್ಲ. ಕಲಬುರಗಿಯಲ್ಲಿ ಸಮಾವೇಶ ಮಾಡಿದ್ದೆವು, ಅದೂ ಉಪಯೋಗಕ್ಕೆ ಬರಲಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಯತ್ನಾಳ್‌ ಧ್ವನಿ ಎತ್ತಿದ್ದರು, ನಂತರ ಯಡಿಯೂರಪ್ಪ ಅವರು ಸಭೆ ‌ಕರೆದಿದ್ದರು. ಬೊಮ್ಮಾಯಿ ಸಹ ಸಿಎಂ ಆಗಿದ್ದಾಗ ಸಭೆ ಕರೆದಿದ್ದರು. ಆದ್ರೆ ಸಿದ್ದರಾಮಯ್ಯ ಅವರು ಇನ್ನೂ ಮೀಟಿಂಗ್ ಕರೆದಿಲ್ಲ. ನಮ್ಮ ಸಮುದಾಯದ ಶಾಸಕರ ಭಾವನೆಗಳನ್ನು ಸರ್ಕಾರ ಅರ್ಥ ಮಾಡಕೊಬೇಕು. ಸಮಾಜವನ್ನು 100 ವರ್ಷದಿಂದ ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ. ನಮ್ಮ‌ ಹೋರಾಟವನ್ನು ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಮುಂದೆ ತಡೆದಿದ್ದಕ್ಕೆ ಕಾಲೇಜ್ ಸೆಕ್ಯೂರಿಟಿ ಹತ್ಯೆ – ಪೊಲೀಸರ ಮುಂದೆ ಬಾಯ್ಬಿಟ್ಟ ವಿದ್ಯಾರ್ಥಿ

  • ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಪ್ರಾರ್ಥಿಸಿ ಶ್ರೀಶೈಲ ಮಲ್ಲಿಕಾರ್ಜುನ ಮೊರೆ

    ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಪ್ರಾರ್ಥಿಸಿ ಶ್ರೀಶೈಲ ಮಲ್ಲಿಕಾರ್ಜುನ ಮೊರೆ

    ಚಿಕ್ಕೋಡಿ: ಪಂಚಮಸಾಲಿ (Panchamasali) ಸಮಾಜದ 2ಎ ಮೀಸಲಾತಿಗಾಗಿ (2A reservation) ಸಮಾಜದ ಯುವಕರು ಶ್ರೀಶೈಲ (Srisaila) ಮಲ್ಲಿಕಾರ್ಜುನನ ಮೊರೆ ಹೋಗಿದ್ದಾರೆ.

    ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂಬ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ ಮೀಸಲಾತಿಗಾಗಿ ಯುವಕರು ದೇವರ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಯುಗಾದಿಯಂದೇ ಕಳ್ಳತನ – ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

    ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಸನ್ನಿಧಿಯಲ್ಲಿ ನಡೆಯುತ್ತಿರುವ ರಥೋತ್ಸವದಲ್ಲಿ ಬಾಳೆ ಹಣ್ಣಿನ ಮೇಲೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗಲಿ ಎಂದು ಬರೆದು ರಥದ ಮೇಲಿರಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಬಿಜೆಪಿ (BJP) ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬರಲಿ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಟ್ಟ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಬಾಳೆಹಣ್ಣಿನ ಮೇಲೆ ಬರೆಯಲಾಗಿದೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಆಟೋ ಚಾಲಕನ ಮನೆಗೆ ಬೆಳಕಾದ ಗುರು ಬೆಳದಿಂಗಳು ಟ್ರಸ್ಟ್

  • ಬಿಜೆಪಿ, ಕಾಂಗ್ರೆಸ್‍ಗೆ ಮರಾಠಿಗರ ಖಡಕ್ ವಾರ್ನಿಂಗ್

    ಬಿಜೆಪಿ, ಕಾಂಗ್ರೆಸ್‍ಗೆ ಮರಾಠಿಗರ ಖಡಕ್ ವಾರ್ನಿಂಗ್

    ಬೀದರ್: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ಮರಾಠಿಗರಿಗೆ ಟಿಕೆಟ್ ನೀಡಬೇಕು. ಟಿಕೆಟ್ ನೀಡದಿದ್ದರೆ ಮತದಾನ ಬಹಿಷ್ಕರಿಸುತ್ತೇವೆ ಎಂದು ಮರಾಠ ಮುಖಂಡರು (Marathi leadears) ಬೀದರ್‌ನಲ್ಲಿ  (Bidar) ಎರಡೂ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಸುದ್ದಿಗೋಷ್ಠಿ ನಡೆಸಿದ ಮರಾಠ ಮುಖಂಡರು, ಬಿದರ್‌ನಲ್ಲಿ 2.5 ಲಕ್ಷ ಮತದಾರರಿದ್ದಾರೆ. ಕರ್ನಾಟಕದಲ್ಲಿ 50 ಲಕ್ಷ ಅಧಿಕ ಮರಾಠ ಮತದಾರರಿದ್ದಾರೆ. ಆದ್ದರಿಂದ ಭಾಲ್ಕಿ ಮತ್ತು ಬಸವಕಲ್ಯಾಣದಲ್ಲಿ ಮರಾಠ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಎರಡು ಕ್ಷೇತ್ರಗಳಲ್ಲಿ ಮರಾಠಿಗೆ ಟಿಕೆಟ್ ನೀಡದಿದ್ದರೆ ಸ್ವಾತಂತ್ರ್ಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಬರುವುದೇ ಗ್ಯಾರಂಟಿಯಿಲ್ಲ, ಇನ್ನು ಗ್ಯಾರಂಟಿ ಕಾರ್ಡ್‌ನಿಂದ ಏನು ಉಪಯೋಗ?-ಆರ್.ಅಶೋಕ್

    ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B.S.Yediyurappa), ಮರಾಠಿಗರಿಗೆ 2ಎ ಮೀಸಲಾತಿ ಕೊಡುತ್ತೇವೆ ಎಂದಿದ್ದರು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಬಿಜೆಪಿ ಸರ್ಕಾರ ಬಂದರೂ ಮೀಸಲಾತಿ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿದೇಶದಲ್ಲಿ ಮುಂದುವರೆದ ಜನಾಂಗೀಯ ದ್ವೇಷ: ಕೆನಾಡದಲ್ಲಿ ಸಿಖ್ ವಿದ್ಯಾರ್ಥಿ ಮೇಲೆ ಹಲ್ಲೆ

  • ಬಿಜೆಪಿ ಶಾಸಕರನ್ನು ಸೋಲಿಸೋದೇ ನಮ್ಮ ಗುರಿ – ಪಂಚಮಸಾಲಿ ಸಮುದಾಯದಿಂದ ಎಚ್ಚರಿಕೆ

    ಬಿಜೆಪಿ ಶಾಸಕರನ್ನು ಸೋಲಿಸೋದೇ ನಮ್ಮ ಗುರಿ – ಪಂಚಮಸಾಲಿ ಸಮುದಾಯದಿಂದ ಎಚ್ಚರಿಕೆ

    ಚಿಕ್ಕೋಡಿ: ಪಂಚಮಸಾಲಿ ಸಮಾಜಕ್ಕೆ (Panchamasali Community) 2ಎ ಮೀಸಲಾತಿ (2A Reservation) ನೀಡುವಂತೆ ಒತ್ತಾಯಿಸಿ ಶನಿವಾರ ರಾಜ್ಯಾದ್ಯಂತ ರಸ್ತೆ ತಡೆದು ಪ್ರತಿಭಟನೆಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಳಗಾವಿ (Belagavi) ಜಿಲ್ಲೆಯ ಹತ್ತರಗಿ ಟೋಲ್ ನಾಕಾ ಬಳಿಯ ರಾಷ್ಟ್ರೀಯ ಹೆದ್ದಾರಿ 4 ತಡೆದು ಪಂಚಮಸಾಲಿ ಸಮುದಾಯದ ಮುಖಂಡರು ಸರ್ಕಾರದ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಸ್ತೆ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ತಕ್ತಪಡಿಸಿದರು. ಚಿಕ್ಕೋಡಿಯ ಶೈಕ್ಷಣಿಕ ಜಿಲ್ಲೆಯ ಅಥಣಿ, ರಾಯಬಾಗ್ ಕಾಗವಾಡ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ಯಮಕನಮರಡಿ, ಕುಡಚಿ ತಾಲೂಕು ಕ್ಷೇತ್ರಗಳಲ್ಲಿ ಸಮುದಾಯದ ಮುಖಂಡರು ಪ್ರತಿಭಟಿಸಿ ಪಟ್ಟಣದ ಪ್ರಮುಖ ರಸ್ತೆಗಳನ್ನು ತಡೆಹಿಡಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಲಾಭ, ನಷ್ಟ ನೋಡಿ ಅಲ್ಲ, ಜೊತೆ ಇರುವವರ ಬಗ್ಗೆಯೂ ನೋಡ್ಕೊಂಡು ನಿರ್ಧಾರ: ಸುಮಲತಾ

    ತಾಯಿಯ ಮೇಲೆ ಆಣೆ ಮಾಡಿದ ಮುಖ್ಯಮಂತ್ರಿ ಅವರು ನಂಬಿಕೆ ದ್ರೋಹ ಮಾಡಿದ್ದಾರೆ. 2ಎ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಶಾಸಕರನ್ನು ಸೋಲಿಸಿ ಅವರಿಗೆ ತಕ್ಕ ಉತ್ತರ ನೀಡಲಾಗುವುದು. ನಮ್ಮ ಹೋರಾಟಕ್ಕೆ ಜಯ ಸಿಗುವರಿಗೆ ನಾವು ಬಿಡುವುದಿಲ್ಲ. ಈ ಬಾರಿ ನಮ್ಮ ಸಮುದಾಯಕ್ಕೆ ಸಿಗಬೇಕಾದ ನ್ಯಾಯ ಪಡೆದುಕೊಳ್ಳಬೇಕು. ಮೀಸಲಾತಿಗೆ ಯಾರು ವಿರೋಧ ಮಾಡಿದ್ದಾರೋ ಅವರ ಕ್ಷೇತ್ರಗಳಿಗೆ ಹೋಗಿ ಅವರನ್ನು ಸೋಲಿಸೋಣ ಎಂದು ಪಂಚಮಸಾಲಿ ಸಮಾಜದ ಮುಖಂಡರು ಸಮುದಾಯಕ್ಕೆ ಕರೆ ನೀಡಿದರು.

    ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಗುಂಡು ಪಾಟೀಲ್, ಶಶಿಕಾಂತ ನಾಯಿಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ: ಸಿಎಂ ಉದ್ಘಾಟಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ

  • ಡಿ.19ರ ಒಳಗಾಗಿ ನಮ್ಮ ಮೀಸಲಾತಿ ಸಿಗುವ ಭರವಸೆ ಸಿಎಂ ನೀಡಿದ್ದಾರೆ – ಯತ್ನಾಳ್

    ಡಿ.19ರ ಒಳಗಾಗಿ ನಮ್ಮ ಮೀಸಲಾತಿ ಸಿಗುವ ಭರವಸೆ ಸಿಎಂ ನೀಡಿದ್ದಾರೆ – ಯತ್ನಾಳ್

    ರಾಯಚೂರು: ಡಿ.19ರ ಒಳಗಾಗಿ ನಮ್ಮ ಮೀಸಲಾತಿ ಸಿಗುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಪಂಚಮಸಾಲಿಗೆ 2ಎ (2A Reservation) ಕೊಡುವ ಸಾಧ್ಯತೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ (Basanagouda Patil Yatnal) ವಿಶ್ವಾಸ ವ್ಯಕ್ತಪಡಿಸಿದರು.

    ಜಿಲ್ಲೆಯ ಲಿಂಗಸುಗೂರು ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಪಂಚಮಸಾಲಿಗೆ (Panchamasali) ಒಬಿಸಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಡಿ.19 ರ ಗಡುವು ಸಿಎಂ ಮೀರಿದ್ರೆ ಡಿ.22ರಂದು ಬೃಹತ್ ಹೋರಾಟ ಮಾಡೋಣ. ಬೆಳಗಾವಿ ಸುವರ್ಣ ಸೌಧದ ಮುಂದೆ ಡಿ. 22ರಂದು ಹೋರಾಟಕ್ಕೆ ಸಿದ್ಧರಾಗಿ ಎಂದು ಕರೆ ನೀಡಿದರು. ಇದನ್ನೂ ಓದಿ: ಚುನಾವಣಾ ಆಯೋಗ ಸೂಚನೆ – ಮತದಾರರ ಪಟ್ಟಿ ಪರಿಷ್ಕರಣೆ ಶುರು

    ಸಿಎಂ ಬೊಮ್ಮಾಯಿ ಸಕಾರಾತ್ಮಕವಾಗಿ ಹೇಳಿದ್ದಾರೆ. ಎಲ್ಲಾ ಸಮುದಾಯಗಳಿಗೆ ಮೀಸಲಾತಿ ನೀಡಲು ನಾನು ಒತ್ತಾಯ ಮಾಡಿದ್ದೇನೆ. ಎಲ್ಲಾ ಸಮಾಜಗಳಿಗೂ ನ್ಯಾಯ ಸಿಗಬೇಕು. ನಮ್ಮ ಸಮಾಜಕ್ಕೂ ನ್ಯಾಯ ಸಿಗಬೇಕು. ಜ.15 ರಂದು ಶುರುವಾದ ಪಾದಯಾತ್ರೆ 750 ಕಿ.ಮೀ. ವರೆಗೆ ನಡೆಯಿತು. ನಮ್ಮ ಸಮಾಜದ ಹೆಸರು ಹೇಳಿ ಅನೇಕರು ಸಿಎಂ ಆಗಿದ್ದರು ಎಂದು ಪರೋಕ್ಷವಾಗಿ ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸಿದರು.

    ಪಂಚಮಸಾಲಿ ಹೋರಾಟದ ಫಲವಾಗಿ ಎಸ್‌ಸಿ, ಎಸ್‌ಟಿ ಮೀಸಲಾತಿ ಸಿಕ್ಕಿದೆ. ಯತ್ನಾಳ್ ಹಿಂದುತ್ವ ಬಿಟ್ಟು ಪಂಚಮಸಾಲಿ ಶುರು ಮಾಡಿದ್ದಾನೆ. 2ಎ ಮೀಸಲಾತಿ ಸಿಕ್ಕ ಬಳಿಕ ಸ್ವಾಮೀಜಿಗಳು ಹಸಿರು ಶಾಲು ತೆಗೆಯುತ್ತಾರೆ. ಸ್ವಾಮೀಜಿಗಳಿಗೆ ಹಸಿರು ಶಾಲು ನಾನು ಹಾಕಿದ್ದೇನೆ. ಶಾಮನೂರು ಶಿವಶಂಕರಪ್ಪ, ಖಂಡ್ರೆ ಲಿಂಗಾಯತ ಹೆಸರು ಹೇಳಿ ಮಂತ್ರಿ ಆದರು. ಪಂಚಮಸಾಲಿಗಳಿಗೆ ಏನು ಮಾಡಲಿಲ್ಲ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಗೆ ಧರ್ಮ ಬೋಧನೆ!

    ಕೂಡಲಸಂಗಮ ಸ್ವಾಮೀಜಿ ಹೋರಾಟದ ಫಲವಾಗಿ ನಮ್ಮ ಸಮಾಜ ಇಂದು ಒಂದಾಗಿದೆ. ನಮ್ಮ ಶಕ್ತಿ ಬಗ್ಗೆ ಇಲ್ಲಿಯವರೆಗೆ ನಮಗೆ ಗೊತ್ತಿರಲಿಲ್ಲ. ನಮ್ಮ ಸ್ವಾಮೀಜಿಗಳು ನಮ್ಮ ಶಕ್ತಿಯ ಪರಿಚಯ ಮಾಡಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುತ್ತೆ. ನಾವು ಯಾವುದೇ ಸಮಾಜಕ್ಕೂ ಅನ್ಯಾಯ ಮಾಡಿಲ್ಲ. ನಮಗೆ ಬೇಕಾದ ಪಾಲು ನಾವು ಕೇಳುತ್ತಿದ್ದೇವೆ. ಎಲ್ಲಾ ಸಮಾಜದಲ್ಲಿಯೂ ಬಡವರು ಇದ್ದಾರೆ. ಬಡತನ ಜಾತಿಗೆ ಸೀಮಿತವಾಗಿಲ್ಲ. ಬಡತನಕ್ಕೆ ಕೇಂದ್ರ ಸರ್ಕಾರವೇ ಶೇ.10 ಮೀಸಲಾತಿ ನೀಡಿದೆ. ನಮ್ಮ ‌ಸಮಾಜಕ್ಕೆ ನ್ಯಾಯ ಕೇಳಿದ್ರೆ ಕೆಲವರಿಗೆ ತೊಂದರೆ ಆಗಿದೆ ಎಂದರು.

    ವಿಜಯಪುರ ನಗರದ ಚುನಾವಣೆ ವಿಚಾರ ಪ್ರಸ್ತಾಪಿಸಿದ ಯತ್ನಾಳ್, ಬೆಳಗಾವಿ ಅಧಿವೇಶನದಲ್ಲಿ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ರೆ ಅವರಿಗೆ ವೋಟು ಹಾಕಿ. ನಾನು ಲಿಸ್ಟ್ ಕೊಟ್ಟವರಿಗೆ ವೋಟು ಹಾಕಿ ಎಂದು ಮತದಾರರಿಗೆ ಸಲಹೆ ನೀಡಿದರು. ಇದನ್ನೂ ಓದಿ: ರಾಜ್ಯದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡ್ತೀವಿ : ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

  • ನಮ್ಮ ಮೀಸಲಾತಿಗೆ ಕೈ ಹಾಕಬೇಡಿ, ನಾವೂ ಬೀದಿಗಿಳಿಯಬೇಕಾಗುತ್ತೆ: ಇಸ್ಮಾಯಿಲ್ ಎಚ್ಚರಿಕೆ

    ನಮ್ಮ ಮೀಸಲಾತಿಗೆ ಕೈ ಹಾಕಬೇಡಿ, ನಾವೂ ಬೀದಿಗಿಳಿಯಬೇಕಾಗುತ್ತೆ: ಇಸ್ಮಾಯಿಲ್ ಎಚ್ಚರಿಕೆ

    ಧಾರವಾಡ: ಮುಸ್ಲಿಂ (Muslim) ಸಮುದಾಯಕ್ಕೆ ಕೊಟ್ಟಿರುವ ಶೇ.4 ಮೀಸಲಾತಿಯನ್ನು (2A Reservation) ವಾಪಸ್ ಪಡೆದುಕೊಳ್ಳಿ ಎನ್ನುವುದು ಯಾವ ನ್ಯಾಯ? ಮುಸ್ಲಿಂ ಸಮುದಾಯದ ಮೀಸಲಾತಿಗೆ ಕೈ ಹಾಕಬೇಡಿ. ಒಂದು ವೇಳೆ ಹಾಗೆ ಮಾಡಿದ್ದೇ ಆದಲ್ಲಿ ನಾವೂ ಬೀದಿಗಿಳಿಯಬೇಕಾಗುತ್ತದೆ ಎಂದು ಧಾರವಾಡ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ (Ismail Tamatgar) ಎಚ್ಚರಿಕೆ ನೀಡಿದ್ದಾರೆ.

    ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಪಂಚಮಸಾಲಿ (Panchmasali) ಸಮುದಾಯಕ್ಕೆ 2ಎ ಮೀಸಲಾತಿ ನೀಡಿ ಎಂದು ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ. ಆದರೆ, ಶಾಸಕರಾದ ಅರವಿಂದ ಬೆಲ್ಲದ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಸ್ಲಿಂ ಸಮುದಾಯಕ್ಕೆ ನೀಡಿರುವ ಶೇ.4 ಮೀಸಲಾತಿಯನ್ನು ಕಡಿತಗೊಳಿಸಿ ನಮಗೆ ನೀಡಿ ಎನ್ನುತ್ತಿದ್ದಾರೆ. ಇದು ಸರಿಯಲ್ಲ. ಈ ರೀತಿ ಹೇಳಿಕೆ ನೀಡಿದರೆ ನಾವೂ ಸಹ ಶೇ.8 ಮೀಸಲಾತಿ ಕೊಡಿ ಎಂದು ಬೀದಿಗಿಳಿಯಬೇಕಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಬಾಲಕನಿಗೆ ಕರಾಟೆ ಪಂಚ್ ಹೇಳ್ಕೊಟ್ಟ ರಾಹುಲ್

    ಮುಸ್ಲಿಂ ಸಮುದಾಯಕ್ಕೆ ಕೊಟ್ಟಿರುವ ಶೇ.4 ಮೀಸಲಾತಿಯನ್ನು ವಾಪಸ್ ಪಡೆದುಕೊಳ್ಳಿ ಎನ್ನುವುದು ಯಾವ ನ್ಯಾಯ? ಪಂಚಮಸಾಲಿಗೆ 2ಎ ಮೀಸಲಾತಿ ಕೊಟ್ಟಿದ್ದೇ ಆದಲ್ಲಿ ಒಬಿಸಿಗೆ ಕೊಟ್ಟಿರುವ ಮೀಸಲಾತಿ ಕೂಡಾ ಹೋಗುತ್ತದೆ ಎಂದರು.

    ಯತ್ನಾಳ್ ಹಾಗೂ ಬೆಲ್ಲದ ಅವರ ಜೊತೆ ವೇದಿಕೆ ಹಂಚಿಕೊಂಡ ಕಾಂಗ್ರೆಸ್ ಮುಖಂಡರು ಕೂಡಾ ಮುಸ್ಲಿಂ ಮೀಸಲಾತಿ ಬಗೆಗಿನ ತಮ್ಮ ನಿಲುವನ್ನು ಮೊದಲು ಸ್ಪಷ್ಟಪಡಿಸಬೇಕು. ಮುಸ್ಲಿಂ ಸಮಾಜ ಸುಮ್ಮನೆ ಇರುವುದಕ್ಕೆ ನಮ್ಮ ಮೀಸಲಾತಿಯನ್ನು ತೆಗೆಯಿರಿ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಇವರ ಹೇಳಿಕೆಗಳು ಇದೇ ರೀತಿ ಮುಂದುವರೆದಿದ್ದೇ ಆದಲ್ಲಿ ನಾವೂ ಬೀದಿಗಿಳಿಯಬೇಕಾಗುತ್ತದೆ. ನಾವು ತೊಂದರೆಯಲ್ಲಿದ್ದೇವೆ. ನಮ್ಮ ತಂಟೆಗೆ ಕೈ ಹಾಕುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕಾಶಿ ಯಾತ್ರೆಗೆ ಬಿಬಿಎಂಪಿ ನೌಕರರು ಸಜ್ಜು

    Live Tv
    [brid partner=56869869 player=32851 video=960834 autoplay=true]

  • ನಿಮ್ಮ ಬಳಿ ಬಟ್ಟೆ ಹಾವಿದ್ರೆ, ನನ್ನ ಬಳಿ ನಿಜವಾದ ಹಾವಿದೆ: ಬಿಜೆಪಿ ನಾಯಕರಿಗೇ ಯತ್ನಾಳ್ ಟಾಂಗ್

    ನಿಮ್ಮ ಬಳಿ ಬಟ್ಟೆ ಹಾವಿದ್ರೆ, ನನ್ನ ಬಳಿ ನಿಜವಾದ ಹಾವಿದೆ: ಬಿಜೆಪಿ ನಾಯಕರಿಗೇ ಯತ್ನಾಳ್ ಟಾಂಗ್

    ಚಿಕ್ಕೋಡಿ: ನಿಮ್ಮ ಬಳಿ ಬಟ್ಟೆಯ ಹಾವಿದ್ದರೆ ನನ್ನ ಬಳಿ ನಿಜವಾದ ಹಾವಿದೆ. ನಮ್ಮ ತಂಟೆಗೆ ಬಂದರೆ ನಿಜವಾದ ಹಾವು ಬಿಡಬೇಕಾಗುತ್ತದೆ. ನಾನು ಯಾರ ಬಳಿಯೂ ಹೋಗಿ ಕೋರ್ ಕಮಿಟಿ ಅಧ್ಯಕ್ಷನನ್ನಾಗಿ ಮಾಡಿ ಅಂತ ಕೇಳಿಲ್ಲ ಎಂದು ಬಿಜೆಪಿ (BJP) ನಾಯಕರಿಗೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಟಾಂಗ್ ನೀಡಿದ್ದಾರೆ.

    ಬೆಳಗಾವಿ (Belgavi) ಜಿಲ್ಲೆಯ ಹುಕ್ಕೇರಿ (Hukkeri) ಪಟ್ಣಣದಲ್ಲಿ ಜರುಗಿದ 2ಎ ಮೀಸಲಾತಿಗೆ ಆಗ್ರಹಿಸಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಇಲ್ಲಿ ಟಿಕೆಟ್ ಹಂಚಲು ಬಂದಿಲ್ಲ. ನಾನು ಕೋರ್ ಕಮಿಟಿ ಸದಸ್ಯನಾಗಿ ಇಲ್ಲಿ ಬಂದಿಲ್ಲ. ಕೋರ್ ಕಮಿಟಿ ಸದಸ್ಯನಾಗಿ ಮಾಡಿ ಅಂತ ಹೋಗಿಲ್ಲ. ನನ್ನನ್ನು ಏನಾದರೂ ಮಾಡಿ ಅಂತ ನಾನು ಯಾರ ಕಾಲು ಬಿದ್ದಿಲ್ಲ. ನಾನು ಕಾಲು ಬಿದ್ದಿದ್ದು ಕೇವಲ ಅಟಲ್ ಬಿಹಾರಿ ವಾಜಪೇಯಿಯವರಿಗೆ (Atal Bihari Vajpayee) ಮಾತ್ರ. ನಾವು ಗೂಟ ಇಟ್ಟರೆ ವಾಪಸ್ ಸುಧಾರಿಸಿಕೊಳ್ಳಲು ಆಗಲ್ಲ ಎಂದು ಎಚ್ಚರಿಸಿದ್ದಾರೆ.

     

    ಅರಭಾವಿ ಕಾರ್ಯಕ್ರಮ ಆಗುವ ಮೊದಲು ಹೇಗೆ ಬೇಕೋ ಹಾಗೆ ಮೊದಲು ನಮಸ್ಕಾರ ಮಾಡಿದ್ದರು. ಅರಭಾವಿ ಕಾರ್ಯಕ್ರಮ ಆದ ಮೇಲೆ ಎಲ್ಲರೂ ಸಹ ಸರಿಯಾಗಿ ನಮಸ್ಕಾರ ಮಾಡುತ್ತಿದ್ದಾರೆ. ಈ ದೇಶದ ಪ್ರಧಾನಿಯೇ ನಾನು ಒಬ್ಬ ಪ್ರಧಾನ ಸೇವಕ ಅಂತ ಹೇಳುತ್ತಾರೆ. ನಾನೂ ಸಹ ಸೇವಕನೇ, ನಾನೊಬ್ಬ ಭೂತದ ರೀತಿಯಲ್ಲಿ ಕಾಡುತ್ತಿದ್ದೇನೆ. ಈ ವೇಳೆ ಅಪ್ಪ, ಮಗ ಎಂದು ಹೆಸರು ಹೇಳದೇ ಯಡಿಯೂರಪ್ಪ (Yediyurappa) ಹಾಗೂ ಬಿ.ವೈ.ವಿಜಯೇಂದ್ರ (B. Y. Vijayendra) ಅವರಿಗೆ ತಿರುಗೇಟು ನೀಡಿದ್ದಾರೆ.

    ನಿಮ್ಮ ಬಳಿ ಬಟ್ಟೆ ಹಾವಿದ್ದರೆ ನನ್ನ ಬಳಿ ನಿಜವಾದ ಹಾವಿದೆ. ನಮ್ಮ ತಂಟೆಗೆ ಬಂದರೆ ನಿಜವಾದ ಹಾವು ಬಿಡಬೇಕಾಗುತ್ತದೆ. ಬಸನಗೌಡನಿಗೆ ಯಾವುದೇ ಸೀಟು ಬರಬಾರದು ಅಂತ ಹಣ ಹಂಚಲಾಗುತ್ತಿದೆ. ವಿಜಯಪುರದ ಮಹಾನಗರ ಪಾಲಿಕೆ ಚುನಾವಣೆಗೆ ಬೆಂಗಳೂರಿನಿಂದ ಹಣ ಬರುತ್ತಿದೆ. ಮುಧೋಳದ ಸಕ್ಕರೆ ಕಾರ್ಖಾನೆ ನಡೆಸುವವ ಒಬ್ಬ ರೊಕ್ಕ ಕಳುಹಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ-ಆಲಮಟ್ಟಿಗೆ ಹೊಸ ರೈಲು ಮಾರ್ಗ- 8,431 ಕೋಟಿ ಅನುದಾನಕ್ಕೆ ಬೇಡಿಕೆ

    ಯತ್ನಾಳ್ ನೀವು ಮುಖ್ಯಮಂತ್ರಿ ಆಗಿ ಎಂದು ಉಮೇಶ್ ಕತ್ತಿ (Umesh Katti) ಹೇಳಿದ್ದರು. ನನಗೆ ಆ ಟೆನ್ಷನ್ ತಡೆದುಕೊಳ್ಳುವುಕ್ಕೆ ಆಗಲ್ಲ. ನೀನು ಮುಖ್ಯಮಂತ್ರಿ ಆಗು ಅಂತಾ ಹೇಳಿದ್ದರು. ಯತ್ನಾಳ್ ನಾಯಕನಲ್ಲ ಅಂತ ಬೆಳಗಾವಿ, ವಿಜಯಪುರದ ನಾಯಕರಿಂದ ಹೇಳಿಸಿ ನೋಡೋಣ ಎಂದು ಬಿಜೆಪಿ ನಾಯಕರಿಗೆ ಯತ್ನಾಳ್ ಸವಾಲೊಡ್ಡಿದ್ದಾರೆ.

    ಇಂದು ಎಸ್‍ಪಿಯಿಂದ ಮುಖ್ಯಮಂತ್ರಿಗಳಿಗೆ ಮೆಸೇಜ್ ಹೋಗುತ್ತದೆ. ಎಷ್ಟು ಜನ ಸೇರಿದ್ದರು. ಯತ್ನಾಳ್ ಏನು ಮಾತಾಡಿದ್ರು, ಅವನ ತೆಗೆದು ಹಾಕಲು ಏನು ಮಾಡಬೇಕು. ಈ ಎಲ್ಲಾ ಮಾಹಿತಿಗಳು ಸಿಎಂಗೆ ಹೋಗುತ್ತವೆ. ಕೆಲ ಪತ್ರಕರ್ತರು, ಯೂಟ್ಯೂಬ್ ಚಾನಲ್‍ನವರೂ ಸಹ ನನ್ನ ಹಿಂದೆ ಬಿದ್ದಿದ್ದಾರೆ. ಚಾನಲ್ ಹೆಸರು ಪತ್ರಕರ್ತರ ಹೆಸರು ಹೇಳದೇ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಬಗ್ಗೆ ಸರ್ಕಾರಕ್ಕೆ, ಸಿಎಂಗೆ ಬದ್ಧತೆಯಿಲ್ಲ: ಡಿ.ಕೆ.ಶಿವಕುಮಾರ್

    ನಾನು ಮಂತ್ರಿ ಆಕಾಂಕ್ಷಿ ಅಂತ ಯಾರೂ ಬರೆಯಬೇಡಿ. ನನಗೆ ಮಂತ್ರಿ ಸ್ಥಾನ ಬೇಡ. ನಾನು 2A ಮೀಸಲಾತಿ ಕೊಡಿಸಿಯೇ ಕೊಡಿಸುತ್ತೇನೆ. ಯಾರ ಕಾಲಿಗೂ ಬೀಳದವರು ಮೊನ್ನೆ ನಮ್ಮ ಸ್ವಾಮೀಜಿ ಕಾಲಿಗೆ ಬಿದ್ದಿದ್ದಾರೆ. ಯಾರ ಕಾಲು ಬಿದ್ದಿಲ್ಲ ಸರ್ ಅವರು ಅಂತ ನಮಗೆ ಒಬ್ಬರು ಅಂದಿದ್ದರು. ಆದರೆ, ಈಗ ಎಲ್ಲರೂ ಬೀಳುತ್ತಿದ್ದಾರೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ಎಲ್ಲರೊಂದಿಗೆ ಅಡ್ಜಸ್ಟ್ ಆಗಿದ್ದರೆ, ನೀವ್ಯಾರು ಮುಖ್ಯಮಂತ್ರಿ ಆಗುತ್ತಿರಲಿಲ್ಲ: ಬಸನಗೌಡ ಯತ್ನಾಳ್

    ನಾನು ಎಲ್ಲರೊಂದಿಗೆ ಅಡ್ಜಸ್ಟ್ ಆಗಿದ್ದರೆ, ನೀವ್ಯಾರು ಮುಖ್ಯಮಂತ್ರಿ ಆಗುತ್ತಿರಲಿಲ್ಲ: ಬಸನಗೌಡ ಯತ್ನಾಳ್

    ಹಾವೇರಿ: ನಾನು ಎಲ್ಲರೊಂದಿಗೆ ಅಡ್ಜಸ್ಟ್ ಆಗಿದ್ದರೆ. ನೀವ್ಯಾರು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನಾನೇ ಮುಖ್ಯಮಂತ್ರಿಯಾಗಿರುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಜೀವನದಲ್ಲಿ ಮಂತ್ರಿಯಾಗುವ ಸಲುವಾಗಿ ಬ್ಲಾಕ್ ಮೇಲ್ ಮಾಡಿಲ್ಲ. ನಾನು ಎಲ್ಲರೊಂದಿಗೆ ಅಡ್ಜಸ್ಟ್ ಆಗಿದ್ದರೆ, ನೀವ್ಯಾರು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನಾನೇ ಮುಖ್ಯಮಂತ್ರಿ ಆಗಿರುತ್ತಿದ್ದೆ. ಸೋಮವಾರ ಬೊಮ್ಮಾಯಿಯವರು ನಮ್ಮ ಸಮಾಜದ ಸಚಿವ ಸಿ.ಸಿ.ಪಾಟೀಲರನ್ನು ಕರೆದು ಮತ್ತೊಂದು ಅವಕಾಶ ಕೇಳಿದ್ದಾರೆ ಎಂದು ತಿಳಿದ್ದಾರೆ. ಇದನ್ನೂ ಓದಿ: 10 ಭಾಷೆಗಳಲ್ಲಿ ‘ಟಾಪಿಕ್ಸ್’ ವೈಶಿಷ್ಟ್ಯವನ್ನು ಪರಿಚಯಿಸಿದ ಮೊದಲ ಸಾಮಾಜಿಕ ಮಾಧ್ಯಮ ವೇದಿಕೆ ಕೂ

    ಧ್ವನಿಯಿಲ್ಲದ ಸಮಾಜಗಳಿಗೆ ನಮ್ಮ ಸ್ವಾಮೀಜಿ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಹೋರಾಟ ಕುರಿತು ಇಂದು ನಿರ್ಣಯ ಮಾಡುತ್ತೇವೆ. ಮುಂದಿನ ಎರಡು ತಿಂಗಳಲ್ಲಿ ಇಪ್ಪತ್ತೈದು ಲಕ್ಷ ಜನರನ್ನು ಸೇರಿಸಿ ನಿರ್ಣಯ ಮಾಡುತ್ತೇವೆ. ಯಾ ಮಗಗ ಬೇಕೈತ್ರಿ ಮಂತ್ರಿಗಿರಿ. ಆರು ತಿಂಗಳಲ್ಲಿ ಏನು ಕಿಸಿದು ಐತ್ರಿ. ನಮ್ಮ ಬಗ್ಗೆ, ಗುರುಗಳ ಬಗ್ಗೆ ಯಾರೂ ಸಂಶಯ ಪಡಬ್ಯಾಡ್ರಿ. ಹಿಂದೊಬ್ಬ ಮುಖ್ಯಮಂತ್ರಿ ನಮಗೆ ಮೋಸ ಮಾಡಿದ ಅಂತಾ ಪರೋಕ್ಷವಾಗಿ ಬಿಎಸ್‍ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯಾರ್ಯಾರು ಮಂತ್ರಿ ಆಗಬೇಕು, ಮಜಾ ಮಾಡಬೇಕು ಅಂತೀರಾ ಇಪ್ಪತ್ತೈದು ಲಕ್ಷ ಜನರು ಸೇರಿದಾಗ ಬನ್ನಿ. ಸಮಾಜಕ್ಕೆ ಮೀಸಲಾತಿ ಕೊಡಿಸಲು ಆಗದಿದ್ದರೆ ನೀವು ಶಾಶ್ವತವಾಗಿ ಮಾಜಿ ಮಂತ್ರಿಗಳು, ಶಾಸಕರಾಗುತ್ತೀರಾ. ಇತ್ತೀಚೆಗೆ ಸಿದ್ದರಾಮಯ್ಯನವರು ಶಕ್ತಿ ಪ್ರದರ್ಶನ ಮಾಡಿದ ಮೇಲೆ ಜಾದೂನೆ ಆಗಿದೆ. ನಾವೂ ಇಪ್ಪತ್ತೈದು ಲಕ್ಷ ಜನರನ್ನು ಸೇರಿಸಿ ಜಾದೂ ಮಾಡೋಣ. ಒಂದು ಕೋಟಿ ಇರುವ ದೊಡ್ಡ ಸಮುದಾಯ ನಮ್ಮದು. ನಾನು ಮೊನ್ನೆ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಆಗಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಲ್ಕಿಸ್‌ ಬಾನು ಕೇಸ್‌ – ಅಪರಾಧಿಗಳ ಬಿಡುಗಡೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

    ನಮ್ಮ ಗುರುಗಳು ಬಿ.ಎಲ್.ಸಂತೋಷರನ್ನು ಭೇಟಿಯಾಗಿದ್ದಾರೆ. ಕೇಂದ್ರದವರು ಕೊಡುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ. ಬೊಮ್ಮಾಯಿ ಸಾಹೇಬರು ಯಾಕೆ ತಡ ಮಾಡುತ್ತಿದ್ದಾರೋ ಗೊತ್ತಿಲ್ಲ. ತಿರುಪತಿಯಲ್ಲಿ ಏನಾಗಿದೆಯೋ, ಶಿಮ್ಲಾ ಒಪ್ಪಂದ ಏನಾಗಿದೆಯೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಹೇಳುವೆ. ಪರೋಕ್ಷವಾ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]