Tag: 1st Test

  • ಮಳೆಗೆ 3ನೇ ದಿನದಾಟ ಅಂತ್ಯ; 2ನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 96 ರನ್‌ ಮುನ್ನಡೆ – ಕನ್ನಡಿಗ ಕೆ.ಎಲ್.ರಾಹುಲ್‌ ಆಸರೆ

    ಮಳೆಗೆ 3ನೇ ದಿನದಾಟ ಅಂತ್ಯ; 2ನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 96 ರನ್‌ ಮುನ್ನಡೆ – ಕನ್ನಡಿಗ ಕೆ.ಎಲ್.ರಾಹುಲ್‌ ಆಸರೆ

    – ಆಂಗ್ಲರ ಪಡೆಯ 5 ವಿಕೆಟ್‌ ಕಬಳಿಸಿ ಮಿಂಚಿದ ಬುಮ್ರಾ

    ಲೀಡ್ಸ್‌: ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಮೊದಲ ಪಂದ್ಯದ 3ನೇ ದಿನದಾಟ ಅಂತ್ಯವಾಗಿದ್ದು, ಭಾರತ ತಂಡ 96 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

    ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ 471 ರನ್‌ ಗಳಿಸಿತ್ತು. ನಂತರ ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 465ಕ್ಕೆ ಆಲೌಟ್‌ ಆಯಿತು.

    2ನೇ ಇನ್ನಿಂಗ್ಸ್‌ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ಭಾರತವು 96 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. 47 ರನ್‌ ಗಳಿಸಿರುವ ರಾಹುಲ್‌ ಅಜೇಯರಾಗಿ ಉಳಿದಿದ್ದಾರೆ. ಅವರಿಗೆ ಶುಭಮನ್‌ ಗಿಲ್‌ ಸಾಥ್‌ ನೀಡಲಿದ್ದಾರೆ.

    ಒಲಿ ಪೋಪ್‌ ಶತಕ
    ಇಂಗ್ಲೆಂಡ್‌ 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 209 ರನ್‌ ಗಳಿಸಿತ್ತು. ಒಲಿ ಪೋಪ್‌ ಶತಕ ಗಳಿಸಿ ಮಿಂಚಿದ್ದರು. ಭಾನುವಾರ 3ನೇ ದಿನದಾಟದಲ್ಲಿ ಶತಕಕ್ಕೆ ಕೇವಲ 6 ರನ್‌ ಗಳಿಸಿ ಬೇಗನೆ ಔಟಾದರು. ಬಳಿಕ ಬ್ರೂಕ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿ 99 ರನ್‌ ಗಳಿಸಿದರು. ಶತಕದ ಹೊಸ್ತಿಲಲ್ಲಿದ್ದ ಅವರನ್ನು ಕನ್ನಡಿಗ ಪ್ರಸಿದ್ಧ ಕೃಷ್ಣ ಔಟ್‌ ಮಾಡಿದರು. ಅಂತಿಮವಾಗಿ ಇಂಗ್ಲೆಂಡ್‌ 465 ಕ್ಕೆ ಆಲೌಟ್‌ ಆಯಿತು.

    ಬೌಲಿಂಗ್‌ನಲ್ಲಿ ಬುಮ್ರಾ ಪರಾಕ್ರಮ
    ಭಾರತ ಪರ ಜಸ್ಪ್ರಿತ್‌ ಬುಮ್ರಾ ಬೌಲಿಂಗ್‌ನಲ್ಲಿ ಪರಾಕ್ರಮ ಮೆರೆದರು. 83 ರನ್‌ ನೀಡಿ ಪ್ರಮುಖ 5 ವಿಕೆಟ್‌ ಕಿತ್ತು ಮಿಂಚಿದರು. ಪ್ರಸಿದ್ಧ ಕೃಷ್ಣ 3, ಮೊಹಮ್ಮದ್‌ ಸಿರಾಜ್‌ 2 ವಿಕೆಟ್‌ ಪಡೆದರು.

  • ಪಲ್ಟಿ ಹೊಡೆದು ಪಂತ್‌ ಶತಕ ಸಂಭ್ರಮ – ಧೋನಿ ರೆಕಾರ್ಡ್‌ ಬ್ರೇಕ್‌

    ಪಲ್ಟಿ ಹೊಡೆದು ಪಂತ್‌ ಶತಕ ಸಂಭ್ರಮ – ಧೋನಿ ರೆಕಾರ್ಡ್‌ ಬ್ರೇಕ್‌

    ಲೀಡ್ಸ್‌: ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯದ 2ನೇ ದಿನದಾಟದಂದು ರಿಷಭ್‌ ಪಂತ್‌, ಎಂ.ಎಸ್.ಧೋನಿ ದಾಖಲೆಯನ್ನು ಬ್ರೇಕ್‌ ಮಾಡಿದ್ದಾರೆ.

    ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿ ಪಂತ್‌ ಪಲ್ಟಿ ಹೊಡೆದು ಸಂಭ್ರಮಿಸಿದರು. ಪಂದ್ಯದಲ್ಲಿ 178 ಬಾಲ್‌ಗೆ 134 ರನ್‌ ಬಾರಿಸಿದ್ದಾರೆ. ಟೆಸ್ಟ್‌ ಪಂದ್ಯದ 2 ದಿನದ ಅವಧಿಯಲ್ಲಿ ಭಾರತದ ಪರ ಒಟ್ಟು 3 ಶತಕ ದಾಖಲಾಗಿವೆ.

    ರಿಷಭ್ ಪಂತ್, ಸೆನಾ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ದೇಶಗಳಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಕೆಟ್‌ ಕೀಪರ್‌ ಎಂಬ ದಾಖಲೆಯನ್ನು ಧೋನಿ ಮಾಡಿದ್ದರು.

    ಭಾರತದ ವಿಕೆಟ್‌ ಕೀಪರ್ ತಮ್ಮ ಏಳನೇ ಟೆಸ್ಟ್ ಶತಕವನ್ನು ಗಳಿಸುವ ಮೂಲಕ ಪಂತ್ 31.47 ರ ಸರಾಸರಿಯಲ್ಲಿ 1,731 ರನ್ ಗಳಿಸಿದ್ದ ಮಾಜಿ ನಾಯಕ ಧೋನಿ ದಾಖಲೆಯನ್ನು ಮುರಿದಿದ್ದಾರೆ. ಪಂತ್ ಆರು ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಮತ್ತು 40.25 ರ ಉತ್ತಮ ಸರಾಸರಿಯೊಂದಿಗೆ ಈ ಮೈಲಿಗಲ್ಲು ದಾಟಿದ್ದಾರೆ.

    ತಮ್ಮ ಏಳು ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಪಂತ್, ಸೆನಾದಲ್ಲಿ ನಾಲ್ಕು ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. 2019 ರಲ್ಲಿ ಸಿಡ್ನಿಯಲ್ಲಿ ಅಜೇಯ 159 ರನ್ ಗಳಿಸಿ ಸಾಧನೆ ಮಾಡಿದ್ದರು.

    ಸೆನಾದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟೆಸ್ಟ್ ವಿಕೆಟ್‌ ಕೀಪರ್ಸ್‌
    ರಿಷಭ್ ಪಂತ್ (IND) – 1732*
    ಎಂಎಸ್ ಧೋನಿ (IND) – 1731
    ಆಡಮ್ ಗಿಲ್‌ಕ್ರಿಸ್ಟ್ (AUS) – 1531
    ಜೆಫ್ ಡುಜಾನ್ (WI) – 1335
    ಜಾನ್ ವೈಟ್ (RSA)- 1328

  • ಕೇವಲ 4 ರನ್‍ಗಳಿಂದ ಡಬಲ್ ಸೆಂಚುರಿ ಮಿಸ್; ಆದ್ರೂ ದಾಖಲೆ ಬರೆದ ಒಲೀ ಪೋಪ್!

    ಕೇವಲ 4 ರನ್‍ಗಳಿಂದ ಡಬಲ್ ಸೆಂಚುರಿ ಮಿಸ್; ಆದ್ರೂ ದಾಖಲೆ ಬರೆದ ಒಲೀ ಪೋಪ್!

    ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ (Team India) ಹಾಗೂ ಇಂಗ್ಲೆಂಡ್ (England)  ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಒಲೀ ಪೋಪ್ (Ollie Pope)  ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅವರು 278 ಎಸೆತಗಳಲ್ಲಿ 196 ರನ್‍ಗಳನ್ನು ಗಳಿಸಿದ್ದಾರೆ.

    163 ರನ್‍ಗಳಿಗೆ 5 ವಿಕೆಟ್ ನಷ್ಟ ಅನುಭವಿಸಿದ್ದ ಇಂಗ್ಲೆಂಡ್‍ಗೆ ಆಸರೆಯಾಗಿ ನಿಂತ ಪೋಪ್ 3ನೇ ದಿನದಾಟದಲ್ಲಿ 154 ಎಸೆತಗಳಲ್ಲಿ ಶತಕ ಬಾರಿಸಿದ್ದರು. ನಾಲ್ಕನೇ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 196 ರನ್‍ಗಳಿಸಿ ವಿಕೆಟ್ ಒಪ್ಪಿಸಿದ ಅವರು, ಕೇವಲ 4 ರನ್‍ಗಳಿಂದ ದ್ವಿಶತಕ ವಂಚಿತರಾದರು. ಇದನ್ನೂ ಓದಿ: ‘ಜೈ ಶ್ರೀರಾಮ್‌ ಇಂಡಿಯಾ’: ವಿಶೇಷ ಪೋಸ್ಟ್‌ ಮೂಲಕ ರಾಮಮಂದಿರ ಪ್ರಾಣ ಪ್ರತಿಷ್ಠೆ ಆಚರಿಸಿದ ಡೇವಿಡ್‌ ವಾರ್ನರ್‌

    ಇನ್ನೂ ಈ ಮೊದಲು ಭಾರತದ ನೆಲದಲ್ಲಿ ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‍ನಲ್ಲಿ ಅತ್ಯಧಿಕ ರನ್‍ಗಳಿಸಿದ ಇಂಗ್ಲೆಂಡ್ ಬ್ಯಾಟರ್ ಅಲಿಸ್ಟರ್ ಕುಕ್ ಹೆಸರಿನಲ್ಲಿದ್ದ ದಾಖಲೆಯನ್ನು ಒಲೀ ಪೋಪ್ ಮುರಿದಿದ್ದಾರೆ. 2012 ರಲ್ಲಿ ಅಹಮದಾಬಾದ್‍ನಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಕುಕ್ 176 ರನ್ ಬಾರಿಸಿದ್ದರು. ಇದು ದಾಖಲೆಯಾಗಿತ್ತು. ಇದೀಗ ಪೋಪ್ ಆ ದಾಖಲೆಯನ್ನು ತಮ್ಮ ಪಾಲಾಗಿಸಿಕೊಂಡಿದ್ದಾರೆ.

    ಆತಿಥೇಯ ಭಾರತ ತಂಡದ ವಿರುದ್ಧ ಟೆಸ್ಟ್ ಕ್ರಿಕೆಟ್‍ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವದ ನಾಲ್ಕನೇ ಬ್ಯಾಟರ್ ಎಂಬ ದಾಖಲೆಯನ್ನು ಪೋಪ್ ಇದೀಗ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಕ್ರಮವಾಗಿ ಆ್ಯಂಡಿ ಫ್ಲವರ್ (232), ಬ್ರೆಂಡನ್ ಮೆಕಲಂ (225) ಹಾಗೂ ಗ್ಯಾರಿ ಸೋಬರ್ಸ್ (198) ಇದ್ದಾರೆ. ಇದೀಗ 196 ರನ್ ಗಳಿಸುವ ಮೂಲಕ ಒಲೀ ಪೋಪ್ ನಾಲ್ಕನೆಯವರಾಗಿ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: IND vs ENG, 1st Test:‌ ಟೆಸ್ಟ್ ಸರಣಿ ಮೊದಲ ದಿನದಾಟ ಅಂತ್ಯ – ಟೀಂ ಇಂಡಿಯಾ ಸ್ಪಿನ್ನರ್ಸ್ ಮಿಂಚು, ಜೈಸ್ವಾಲ್‌ ಫಿಫ್ಟಿ

  • ಬಾಂಗ್ಲಾದ ಭಾರ ಹೊತ್ತ ಜಾಕಿರ್ – ಜಯದ ಹೊಸ್ತಿಲಲ್ಲಿ ಭಾರತ

    ಬಾಂಗ್ಲಾದ ಭಾರ ಹೊತ್ತ ಜಾಕಿರ್ – ಜಯದ ಹೊಸ್ತಿಲಲ್ಲಿ ಭಾರತ

    ಢಾಕಾ: ಆರಂಭಿಕ ಆಟಗಾರ ಜಾಕಿರ್ ಹಸನ್ (Zakir Hasan) ಶತಕದ ಹೊರತಾಗಿಯೂ ಭಾರತ (India) ವಿರುದ್ಧದ ಮೊದಲ ಟೆಸ್ಟ್‌ನಲ್ಲಿ (1st Test) ಬಾಂಗ್ಲಾದೇಶಕ್ಕೆ (Bangladesh) ಸೋಲಿನ ಭೀತಿ ಎದುರಾಗಿದೆ.

    ಭಾರತದ ಬೌಲರ್‌ಗಳ ಸಂಘಟಿತ ದಾಳಿಯ ಫಲವಾಗಿ 4ನೇ ದಿನದಾಟದ ಅಂತ್ಯಕ್ಕೆ 102 ಓವರ್‌ಗಳಲ್ಲಿ ಬಾಂಗ್ಲಾ 6 ವಿಕೆಟ್ ನಷ್ಟಕ್ಕೆ 272 ಗಳಿಸಿ 241 ರನ್‍ಗಳ ಹಿನ್ನಡೆಯಲ್ಲಿದೆ. ಇತ್ತ ಭಾರತ ಇನ್ನೂ 4 ವಿಕೆಟ್ ಕಬಳಿಸಿ ಗೆಲುವಿನ ಸಂಭ್ರಮ ಆಚರಿಸಲು ಸಜ್ಜಾಗಿದೆ. ಇದನ್ನೂ ಓದಿ: ಕೇವಲ 15 ರನ್‌ಗಳಿಗೆ ಆಲೌಟ್‌- ಟಿ20ಯಲ್ಲೇ ಕೆಟ್ಟ ದಾಖಲೆ ಬರೆದ ಸಿಡ್ನಿ ಥಂಡರ್‌

    4ನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾ 6 ವಿಕೆಟ್ ನಷ್ಟಕ್ಕೆ 272 ರನ್ ಬಾರಿಸಿದ್ದು, ನಾಯಕ ಶಕೀಬ್ ಅಲ್ ಹಸನ್ ಅಜೇಯ 40 ರನ್ (69 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಮೆಹಿದಿ ಹಸನ್ ಮಿರಾಜ್ 9 ರನ್ ಸಿಡಿಸಿ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಬಾಂಗ್ಲಾ ಗೆಲುವಿಗೆ 241 ರನ್ ಬೇಕಾಗಿದ್ದು, ಗೆಲುವಿಗಾಗಿ ಹೋರಾಟ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ – ಫೈನಲ್‍ಗೂ ಮುನ್ನ ಫ್ರಾನ್ಸ್ ಆಟಗಾರರಿಗೆ ಕಾಡುತ್ತಿದೆ ವೈರಸ್!

    ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿದ್ದ ಬಾಂಗ್ಲಾ ನಾಲ್ಕನೇ ದಿನದಾಟದಲ್ಲೂ ದಿಟ್ಟ ಹೋರಾಟದ ಮುನ್ಸೂಚನೆ ನೀಡಿತು. ಆರಂಭಿಕರಾದ ನಜ್ಮುಲ್ ಹೊಸೈನ್ ಶಾಂತೋ ಮತ್ತು ಜಾಕಿರ್ ಹಸನ್ ಭಾರತ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅಲ್ಲದೇ ಈ ಜೋಡಿ ತಲಾ ಅರ್ಧಶತಕ ಸಿಡಿಸಿ ಮಿಂಚಿತು.

    ಟೀ ವಿರಾಮದ ವರೆಗೂ ವಿಕೆಟ್ ನಷ್ಟವಿಲ್ಲದೆ ಮುನ್ನಗ್ಗುತ್ತಿದ್ದ ಬಾಂಗ್ಲಾಗೆ ಬಳಿಕ ಉಮೇಶ್ ಯಾದವ್ ಶಾಕ್ ನೀಡಿದರು. ಉತ್ತಮವಾಗಿ ಆಡುತ್ತಿದ್ದ ನಜ್ಮುಲ್ ಹೊಸೈನ್ ಶಾಂತೋ 67 ರನ್ (156 ಎಸೆತ, 7 ಬೌಂಡರಿ) ಬಾರಿಸಿ ವಿಕೆಟ್ ಕೈಜೆಲ್ಲಿಕೊಂಡರು. ಈ ಮೊದಲು ಜಾಕಿರ್ ಹಸನ್ ಜೊತೆ ಮೊದಲ ವಿಕೆಟ್‍ಗೆ 67 ರನ್ (156 ಎಸೆತ) ಜೊತೆಯಾಟವಾಡಿ ಬೇರ್ಪಟ್ಟರು.

    ಬಳಿಕ ಬಂದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ ಕೂಡ ಬಾಂಗ್ಲಾ ಪರ ಹೋರಾಟದ ಮನೋಭಾವ ತೋರಲಿಲ್ಲ. ಆದರೆ ಇನ್ನೊಂದೆಡೆ ಜಾಕಿರ್ ಹಸನ್ ಮಾತ್ರ ಭರ್ಜರಿಯಾಗಿ ಬ್ಯಾಟ್ಸ್ ಬೀಸಿದರು. ಪರಿಣಾಮ ತನ್ನ ಡೆಬ್ಯೂ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿ ಸಂಭ್ರಮಿಸಿದರು.

    ಜಾಕಿರ್ ಚೊಚ್ಚಲ ಶತಕ:
    ಜಾಕಿರ ಡೆಬ್ಯೂ ಟೆಸ್ಟ್ ಪಂದ್ಯವಾಡುತ್ತಿದ್ದು ಮೊದಲ ಪಂದ್ಯದಲ್ಲೇ 100 ರನ್ (224 ಎಸೆತ, 13 ಬೌಂಡರಿ, 1 ಸಿಕ್ಸ್) ಸಿಡಿಸಿ ಶತಕ ಸಿಡಿಸಿದ ಸಂಭ್ರಮದ ನಡುವೆಯೇ ಮರು ಎಸೆತದಲ್ಲೇ ವಿಕೆಟ್ ಕಳೆದುಕೊಂಡರು. ಬಳಿಕ ಬಾಂಗ್ಲಾ ಬ್ಯಾಟ್ಸ್‌ಮ್ಯಾನ್‌ಗಳು ಪೆವಿಲಿಯನ್ ಪರೇಡ್ ಆರಂಭಿಸಿದರು.

    ಹರ್ಷಲ್ ಪಟೇಲ್ ವಿಕೆಟ್ ಬೇಟೆ:
    ಕೆಲ ಕ್ರಮಾಂಕದಲ್ಲಿ ಮುಶ್ಫಿಕರ್ ರಹೀಮ್ 23 ರನ್ (50 ಎಸೆತ, 2 ಬೌಂಡರಿ) ಸಿಡಿಸಿ ಪ್ರತಿರೋಧ ಒಡ್ಡಿ ಹರ್ಷಲ್ ಪಟೇಲ್‍ಗೆ ಬಲಿಯಾದರು. ಭಾರತ ಪರ ಹರ್ಷಲ್ ಪಟೇಲ್ 3 ವಿಕೆಟ್ ಕಿತ್ತರೆ, ಉಮೇಶ್ ಯಾದವ್, ಅಶ್ವಿನ್, ಕುಲ್‍ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು. 5ನೇ ದಿನದಾಟ ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]