Tag: 19 Age Is Nonsense

  • 19 ಏಜ್ ಈಸ್ ನಾನ್ಸೆನ್ಸ್ ಅಂದ ಮನುಷ್ ಹೇಗೆ ತಯಾರಾದ ಗೊತ್ತೇ?

    19 ಏಜ್ ಈಸ್ ನಾನ್ಸೆನ್ಸ್ ಅಂದ ಮನುಷ್ ಹೇಗೆ ತಯಾರಾದ ಗೊತ್ತೇ?

    ಹತ್ತೊಂಬತ್ತರ ಹರೆಯದಲ್ಲಿ ತೆಗೆದುಕೊಳ್ಳುವ ಬಹುತೇಕ ನಿರ್ಧಾರಗಳು ನಾನ್ಸೆನ್ಸ್ ಆಗಿರುತ್ತವೆ ಅಂತೊಂದು ಮಾತಿದೆ. ಕಲ್ಲಿಗೆ ಡಿಚ್ಚಿ ಹೊಡೆದು ನೀರುಕ್ಕಿಸಿ ಬಿಡಬಲ್ಲೆನೆಂಬ ಸಿನಿಮ್ಯಾಟಿಕ್ ಮನಸ್ಥಿತಿ ಆ ವಯಸ್ಸನ್ನು ಕವುಚಿಕೊಂಡಿರುತ್ತದೆ. ಅಂಥಾ ಭ್ರಾಂತು ವಾಸ್ತವಗಳೊಂದಿಗೆ ಮುಖಾಮುಖಿಯಾಗಲು ಸಾಧ್ಯವೇ ಇಲ್ಲ. ಈ ವಯಸಿನ ಉನ್ಮಾದಗಳನ್ನು ತುಂಬಿಕೊಂಡಿರೋ ಚಿತ್ರ 19 ಏಜ್ ಈಸ್ ನಾನ್ಸೆನ್ಸ್. ಅದನ್ನು ಆ ವಯೋಮಾನದ ಹುಡುಗನೇ ನಿಭಾಯಿಸಿದರೆ ಸಹಜವಾಗಿ ಮೂಡಿ ಬರುತ್ತದೆಂಬ ಕಾರಣದಿಂದಲೇ ಮನುಷ್ ಎಂಬ ಹತ್ತೊಂಬತ್ತರ ಹುಡುಗ ಈ ಸಿನಿಮಾದ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರ ಡಿಸೆಂಬರ್ 6ರಂದು ತೆರೆಗಾಣಲಿದೆ.

    ಅಂದಹಾಗೆ ಇದು ಲೋಕೇಶ್ ನಿರ್ಮಾಣ ಮಾಡಿರುವ ಚಿತ್ರ. ಈ ಸಿನಿಮಾ ನಾಯಕ ಮನುಷ್ ನಿರ್ಮಾಪಕರ ಪುತ್ರ. ಅಪ್ಪ ಕಾಸು ಹೂಡಿರೋದರಿಂದ ಮಗ ಹೀರೋ ಆಗಿದ್ದಾನೆಂದು ಯಾರೆಂದರೆ ಯಾರೂ ಅಂದುಕೊಳ್ಳುವಂತಿಲ್ಲ. ಯಾಕೆಂದರೆ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ನಲ್ಲಿ ಮನುಷ್ ಅಷ್ಟೊಂದು ಪರಿಣಾಮಕಾರಿಯಾಗಿ ಕಾಣಿಸಿಕೊಂಡಿದ್ದಾನೆ. ನಟನೆಯಲ್ಲಿ ಮೊದಲ ಅನುಭವವಾದರೂ ಸಹ ಆ ಸುಳಿವನ್ನು ಎಲ್ಲಿಯೂ ಬಿಟ್ಟುಕೊಡದಂತೆ ಮನುಷ್ ನಟಿಸಿದ್ದಾರೆ.

    ಸುರೇಶ್ ಎಂ ಗಿಣಿ ಹೇಳಿದ ಕಥೆ ಕೇಳಿ ಅದರಲ್ಲಿ ನಾಯಕನ ಚಹರೆ ನೋಡಿದಾಗ ತಮ್ಮ ಮಗ ಮನುಷ್ ಯಾಕೆ ಅದರಲ್ಲಿ ನಟಿಸಬಾರದೆಂಬ ಪ್ರಶ್ನೆ ನಿರ್ಮಾಪಕ ಲೋಕೇಶ್ ಅವರನ್ನು ಕಾಡಿತ್ತಂತೆ. ಅದಕ್ಕೆ ಕಾರಣವಾಗಿದ್ದು ಮನುಷ್‍ನ ಸಿನಿಮಾ ಹುಚ್ಚು. ಇದೀಗ ಮೊದಲ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿರೋ ಮನುಷ್‍ಗೆ ಓದಿಗಿಂತಲೂ ಸಿನಿಮಾಸಕ್ತಿಯೇ ಹೆಚ್ಚಾಗಿತ್ತು. ನಂತರ ಆತನಿಗೆ ನಟನೆ ಸೇರಿದಂತೆ ಎಲ್ಲದರಲ್ಲಿ ತರಬೇತಿ ಕೊಡಿಸಿಯೇ ಲೋಕೇಶ್ ಹೀರೋ ಆಗಿಸಿದ್ದರು. ಈ ಕಾರಣದಿಂದಲೇ ರೊಮ್ಯಾಂಟಿಕ್ ಸೀನು, ಸೆಂಟಿಮೆಂಟ್, ಮಾಸ್ ಸನ್ನಿವೇಶಗಳು ಸೇರಿದಂತೆ ಎಲ್ಲದರಲ್ಲಿಯೂ ಮನುಷ್ ಚೆಂದದ ನಟನೆ ಕೊಟ್ಟಿದ್ದಾನೆ.

  • 19 ಏಜ್ ಈಸ್ ನಾನ್ಸೆನ್ಸ್ ಅಂದವರ ಗಂಭೀರ ಸಂದೇಶ!

    19 ಏಜ್ ಈಸ್ ನಾನ್ಸೆನ್ಸ್ ಅಂದವರ ಗಂಭೀರ ಸಂದೇಶ!

    ತ್ತೀಚೆಗೆ ಬಿಡುಗಡೆಯಾಗಿದ್ದ 19 ಏಜ್ ಈಸ್ ನಾನ್ಸೆನ್ಸ್ ಟ್ರೇಲರ್‍ನೊಂದಿಗೆ ಬಹು ನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ. ಟೀಸರ್ ಅಥವಾ ಟ್ರೇಲರ್‍ಗಳನ್ನು ಪರಿಣಾಮಕಾರಿಯಾಗಿ ಇಡೀ ಪ್ರೇಕ್ಷಕ ವರ್ಗವೇ ತಿರುಗಿ ನೋಡುವಂತೆ ಕಟ್ಟಿ ಕೊಡುವುದು ಸಿನಿಮಾ ರೂಪಿಸುವಷ್ಟೇ ಕಷ್ಟದ ಕೆಲಸ. ಅದು ಸಾಧ್ಯವಾದರೆ ಅಂತಹ ಚಿತ್ರಗಳ ಗೆಲುವು ಖಂಡಿತಾ ಸಲೀಸಾಗುತ್ತದೆ. ಈ ಸೂತ್ರದ ಆಧಾರದಲ್ಲಿ ನೋಡ ಹೋದರೆ 19 ಏಜ್ ಈಸ್ ನಾನ್ಸೆನ್ಸ್ ಗೆಲುವು ಸರಾಗವಾಗಿ ಬಿಟ್ಟಿದೆ. ಯಾಕೆಂದರೆ, ಟ್ರೇಲರ್‍ನಲ್ಲಿಯೇ ಚಿತ್ರ ತಂಡ ಮೋಡಿ ಮಾಡುವಂತಹ ಕಂಟೆಂಟನ್ನು ಕಟ್ಟಿ ಕೊಟ್ಟಿದೆ.

    ಇದು ಅದೆಷ್ಟೋ ವರ್ಷಗಳ ಕನಸು ಮತ್ತು ಅಗಾಧವಾದ ಸಿನಿಮಾ ವ್ಯಾಮೋಹದಿಂದ ಲೋಕೇಶ್ ನಿರ್ಮಾಣ ಮಾಡಿರುವ ಚಿತ್ರ. ಸುರೇಶ್ ಎಂ ಗಿಣಿ ಇದನ್ನು ನಿರ್ದೇಶನ ಮಾಡಿದ್ದಾರೆ. ಇದರ ಮೂಲಕವೇ ಈಗಿನ್ನೂ ಹತ್ತೊಂಬತ್ತರ ಹರೆಯದ ಹುಡುಗ ಮನುಷ್ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಪರಭಾಷಾ ಸುಂದರಿ ಮಧುಮಿತಾ ಮತ್ತು ಲಕ್ಷ್ಮಿ ಮಂಡ್ಯ ನಾಯಕಿಯರಾಗಿ ಮನುಷ್‍ಗೆ ಜೊತೆಯಾಗಿದ್ದಾರೆ. ಇದು ಯುವ ಸಮೂಹದ ಕಥೆ ಹೊಂದಿರೋ ಚಿತ್ರ. ಆದರೆ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ, ಕುಟುಂಬ ಸಮೇತರಾಗಿ ಕೂತು ನೋಡುವಂತೆ ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ.

    ಹತ್ತೊಂಬತ್ತೆಂಬುದು ಇಡೀ ಜಗತ್ತನ್ನೇ ತುದಿ ಬೆರಳಲ್ಲಿ ಆಡಿಸಿ ಗೆದ್ದು ಬಿಡುವ ಹುಮ್ಮಸ್ಸಿನ ವಯಸ್ಸು. ಅದರ ಉನ್ಮಾದಗಳಿಗೆ ವಾಸ್ತವದ ಪರಿಚಯವಿರುವುದಿಲ್ಲ. ತಾವು ತೆಗೆದುಕೊಳ್ಳೋ ನಿರ್ಧಾರ ತಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬಂತಹ ನಿಕಷಕ್ಕೆ ಒಡ್ಡಿಕೊಳ್ಳುವ ವ್ಯವಧಾನವೂ ಅಲ್ಲಿರುವುದಿಲ್ಲ. ಪ್ರೀತಿ, ದ್ವೇಷ, ಆದರ್ಶಗಳೆಲ್ಲವೂ ಆ ಕಾಲದಲ್ಲಿ ನಿಗಿ ನಿಗಿಸುತ್ತಿರುತ್ತವೆ. ಈ ಕಾರಣದಿಂದಲೇ ಹತ್ತೊಂಬತ್ತರ ವಯಸ್ಸಿಗೆ ಬಂದು ನಿಂತ ಮಕ್ಕಳನ್ನು ಸಂಭಾಳಿಸಲು ಪೋಷಕರು ಹೆಣಗಾಡುತ್ತಾರೆ. ಅಂಥವರಿಗೆಲ್ಲ ಇಲ್ಲಿ ಸಂದೇಶಗಳಿವೆ. ಹತ್ತೊಂಬತ್ತರ ವಯಸ್ಸಿನ ಹುಡುಗರನ್ನು ಹೇಗೆ ಸಂಭಾಳಿಸಬೇಕೆಂಬ ಪ್ರಾಕ್ಟಿಕಲ್ ಅಂಶಗಳೂ ಇದರಲ್ಲಿವೆ. ಅದೆಲ್ಲವೂ ಡಿಸೆಂಬರ್ 6ರಂದು ನಿಮ್ಮೆದುರು ಗರಿಗೆದರಿಕೊಳ್ಳಲಿವೆ.

  • ಹತ್ತೊಂಬತ್ತರ ಉನ್ಮಾದದ ಕಥೆಯಿಲ್ಲಿದೆ!

    ಹತ್ತೊಂಬತ್ತರ ಉನ್ಮಾದದ ಕಥೆಯಿಲ್ಲಿದೆ!

    ರಾಜೇಶ್ವರಿ ಫಿಲಂಸ್ ಲಾಂಛನದಲ್ಲಿ ಲೋಕೇಶ್ ನಿರ್ಮಾಣ ಮಾಡಿರುವ 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಯುವ ಆವೇಗದ ಸಿನಿಮಾ ಬಗ್ಗೆ ಪ್ರೇಕ್ಷಕರೊಂದು ಬೆರಗಿಟ್ಟುಕೊಂಡಿರುತ್ತಾರೆ. ಈ ಸಿನಿಮಾದತ್ತ ಒಲವು ಮೂಡಿಕೊಂಡಿರುವುದೂ ಆ ಕಾರಣಕ್ಕಾಗಿಯೇ. ಆರಂಭದಲ್ಲಿ ಇದೊಂದು ಬರೀ ಯುವ ಹುಮ್ಮಸ್ಸಿನ ಕಥನ ಅಂದುಕೊಂಡಿದ್ದವರಿಗೆ ಟ್ರೇಲರ್ ನಲ್ಲಿ ಘನ ಗಂಭೀರವಾದ ವಿಚಾರಗಳೇ ಕಾಣಿಸಿವೆ. ಈ ಸಿನಿಮಾದೊಳಗೆ ಗಹನವಾದೊಂದು ಕಥೆ ಇದೆ ಎಂಬ ವಿಚಾರವನ್ನು ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ ಎಲ್ಲರಿಗೂ ತಲುಪಿಸಿದೆ.

    19 ಏಜ್ ಈಸ್ ನಾನ್ಸೆನ್ಸ್ ಎಂಬ ಈ ಸಿನಿಮಾ ತನ್ನ ಶೀರ್ಷಿಕೆಯ ಕಾರಣದಿಂದಲೇ ಆರಂಭಿಕವಾಗಿ ಗಮನ ಸೆಳೆದಿತ್ತು. ಆದರೆ ಅದರ ಬಗ್ಗೆ ಪ್ರೇಕ್ಷಕರೆಲ್ಲ ಚರ್ಚೆ ನಡೆಸಲಾರಂಭಿಸಿದ್ದು ಟ್ರೇಲರ್ ಹೊರ ಬಂದ ನಂತರವೇ. ಯಾಕೆಂದರೆ ಅದರಲ್ಲಿ ಬೇರೆಯದ್ದೇ ಹಾದಿಯಲ್ಲಿರುವಂತೆ ಭಾಸವಾಗುವ ಗಟ್ಟಿ ಕಥೆಯ ಹೊಳಹೊಂದು ಸಿಕ್ಕಿತ್ತು.

    ಹತ್ತೊಂಬತ್ತರ ಹರೆಯದ ನಿರ್ಧಾರಗಳ ಆಚೀಚೆಗೆ ಸಮಾಜಕ್ಕೆ ಸಂದೇಶ ನೀಡುವಂಥಾ, ನಮಗೆಲ್ಲ ಮುಖ್ಯವೆನಿಸದಿದ್ದರೂ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವಂಥಾ ಒಂದಷ್ಟು ವಿಚಾರಗಳು ಈ ಮೂಲಕ ಹರಡಿಕೊಂಡಿತ್ತು. ಮೇಕಿಂಗ್ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆದಿದ್ದ ಈ ಸಿನಿಮಾವನ್ನು ಸುರೇಶ್ ಎಂ ಗಿಣಿ ನಿರ್ದೇಶನ ಮಾಡಿದ್ದಾರೆ. ಇಲ್ಲಿ ಮನುಷ್ ನಾಯಕನಾಗಿ ನಟಿಸಿದ್ದಾರೆ.

    ಹತ್ತೊಂಬತ್ತರ ಹರೆಯದ ಕಥೆ ಎಂದಾಕ್ಷಣ ಇದು ಯುವ ಸಮುದಾಯಕ್ಕೆ ಸೀಮಿತವಾದ ಕಥೆ ಅನ್ನಿಸೋದು ಸಹಜವೇ. ಇಲ್ಲಿರುವುದೂ ಕೂಡಾ ಯೂಥ್‍ಫುಲ್ ಕಥೆಯಾಗಿದ್ದರೂ ಸಹ ಅದು ಕೌಟುಂಬಿಕ ಸನ್ನಿವೇಶಗಳನ್ನು ಬಳಸಿಕೊಂಡೇ ಸಾಗುತ್ತದೆ. ಚಿತ್ರರಂಗ ಹೇಳಿಕೊಂಡಿರೋ ಪ್ರಕಾರ ನೋಡೋದಾದರೆ ಇಲ್ಲಿ ಫ್ಯಾಮಿಲಿ ಕಥನವೇ ಪ್ರಧಾನ ಪಾತ್ರ ವಹಿಸುತ್ತದೆಯಂತೆ.

    ಇದು ಯುವ ಸಮುದಾಯದೊಂದಿಗೆ ಪೋಷಕರಿಗೂ ಒಂದು ಸಂದೇಶವನ್ನು ಹೊತ್ತು ತಂದಿದೆ. ಇದರೊಂದಿಗೆ ಲವ್, ಮಾಸ್ ಕಥನವನ್ನೂ ಒಳಗೊಂಡಿರುವ 19 ಏಜ್ ಈಸ್ ನಾನ್ಸೆನ್ಸ್ ಕಮರ್ಶಿಯಲ್ ಸೂತ್ರದೊಂದಿಗೆ ತಯಾರಾಗಿರುವ ಚಿತ್ರ.

  • 19 ಏಜ್ ಈಸ್ ನಾನ್‍ಸೆನ್ಸ್ ಗೆ ಯು/ಎ ಸರ್ಟಿಫಿಕೇಟ್

    19 ಏಜ್ ಈಸ್ ನಾನ್‍ಸೆನ್ಸ್ ಗೆ ಯು/ಎ ಸರ್ಟಿಫಿಕೇಟ್

    ರಾಜೇಶ್ವರಿ ಫಿಲಂ ಲಾಂಛನದಲ್ಲಿ ಎಸ್.ಲೋಕೇಶ್ ನಿರ್ಮಾಣದ 19 ಏಜ್ ಈಸ್ ನಾನ್‍ಸೆನ್ಸ್ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೇಟ್ ನೀಡಿದೆ.

    ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಗಿಣಿ, ಛಾಯಾಗ್ರಹಣ-ಜಿ.ವೆಟ್ರಿ, ಸಂಕಲನ-ರವಿಚಂದ್ರನ್, ಸಂಗೀತ – ಕುಟ್ಟಿ, ಸಾಹಸ -ಶಿವು, ಹಾಡುಗಳು-ವಿ.ನಾಗೇಂದ್ರ ಪ್ರಸಾದ್, ತಾರಾಗಣದಲ್ಲಿ – ಮನುಷ್, ಮಧುಮಿತ, ಲಕ್ಷ್ಮಿ ಮಂಡ್ಯ, ಮೇಸ್ತ್ರಿ ಬಾಲು, ಸೌಭಾಗ್ಯ, ಕಾವ್ಯಪ್ರಕಾಶ್, ಮುಂತಾದವರಿದ್ದಾರೆ.

    ಲವ್-ಆಕ್ಷನ್ ಜೊತೆಗೆ 19 ರಿಂದ 25 ವಯೋಮಿತಿ ಇರುವ ಹರೆಯದ ವಯಸ್ಸಿನ ನಾಯಕಿ ಜೀವನದಲ್ಲಿ ನಡೆಯುವ ಕಥಾವಸ್ತುವೇ ಈ ಚಿತ್ರದ ಸಾರವಾಗಿದೆ.

  • 19 ಏಜ್ ಕಮಾಲ್‍ಗೆ ಸೆನ್ಸಾರ್ ಅಧಿಕಾರಿಗಳು ಫಿದಾ!

    19 ಏಜ್ ಕಮಾಲ್‍ಗೆ ಸೆನ್ಸಾರ್ ಅಧಿಕಾರಿಗಳು ಫಿದಾ!

    ಬೆಂಗಳೂರು: ಇದು ಕನ್ನಡ ಚಿತ್ರರಂಗದ ಪಾಲಿಗೆ ಹೊಸಾ ಹರಿವನ್ನು ಒಳಗೊಳ್ಳುವ ಪರ್ವ ಕಾಲ. ಪ್ರೇಕ್ಷಕರೆಲ್ಲ ಅಚ್ಚರಿಗೊಂಡು ಅಪ್ಪಿಕೊಳ್ಳುವಂಥಾ ಕಂಟೆಂಟಿನ ಚಿತ್ರಗಳೇ ಅಡಿಗಡಿಗೆ ತೆರೆಗಾಣುತ್ತಾ ಚಿತ್ರರಂಗ ಹೊಸತನದಿಂದ ಲಕಲಕಿಸುತ್ತಿದೆ. ಇದೀಗ ಅಂಥಾದ್ದೇ ಮೋಡಿ ಸೃಷ್ಟಿಸುವ ಹುಮ್ಮಸ್ಸಿನೊಂದಿಗೆ ಹೊಸಬರ ತಂಡವೊಂದು 19 ಏಜ್ ಈಸ್ ನಾನ್‍ಸೆನ್ಸ್ ಎಂಬ ಚಿತ್ರವನ್ನು ರೂಪಿಸಿದೆ. ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡು ಉಳಿದ ಕೆಲಸ ಕಾರ್ಯಗಳನ್ನೂ ಸಮಾಪ್ತಿಯಾಗಿಸಿಕೊಂಡಿರೋ ಈ ಚಿತ್ರದ ಸೆನ್ಸಾರ್ ಕಾರ್ಯವೂ ಇದೀಗ ಮುಗಿದಿದೆ. ಸೆನ್ಸಾರ್ ಮಂಡಳಿ ಅಧಿಕಾರಿಗಳು ತುಂಬು ಮೆಚ್ಚುಗೆಯೊಂದಿಗೆ ಯು/ಎ ಸರ್ಟಿಫಿಕೆಟ್ ಕೊಟ್ಟಿದ್ದಾರೆ.

    ಸೆನ್ಸಾರ್ ಅಧಿಕಾರಿಗಳು ತಿಂಗಳೊಂದಕ್ಕೆ ಲೆಕ್ಕವಿಲ್ಲದಷ್ಟು ಸಿನಿಮಾಗಳನ್ನು ನೋಡುತ್ತಾರೆ. ಆದರೆ ಖುದ್ದು ಅವರೇ ಮೆಚ್ಚುಗೆ ಸೂಚಿಸೋದು ತುಂಬಾನೇ ವಿರಳ. ಆದರೆ 19 ಏಜ್ ಈಸ್ ನಾನ್‍ಸೆನ್ಸ್ ಚಿತ್ರವನ್ನು ವೀಕ್ಷಿಸಿದ ಅಧಿಕಾರಿಗಳು ಅದರ ತಾಜಾತನ, ಹೊಸತನಕ್ಕೆ ತಲೆದೂಗಿದ್ದಾರೆ. ಇಡೀ ಚಿತ್ರತಂಡವನ್ನು ಅಭಿನಂದಿಸಿದ್ದಾರೆ. ಇದು ಹೊಸಬರೇ ಸೇರಿ ರೂಪಿಸಿರೋ ಚಿತ್ರ. ಸೆನ್ಸಾರ್ ಅಧಿಕಾರಿಗಳ ಮೆಚ್ಚುಗೆ ಈ ತಂಡಕ್ಕೆ ಹುಮ್ಮಸ್ಸು ತುಂಬಿದೆ. ಕೆಲ ದಿನಗಳಿಂದ ಸುದ್ದಿ ಕೇಂದ್ರದಲ್ಲಿರೋ ಈ ಸಿನಿಮಾ ಈ ಮೂಲಕವೇ ಮತ್ತಷ್ಟು ಪ್ರೇಕ್ಷಕರನ್ನು ಸೆಳೆದುಕೊಳ್ಳೋದರಲ್ಲಿ ಯಾವ ಸಂಶಯವೂ ಇಲ್ಲ.

    ಇದು ಲೋಕೇಶ್ ನಿರ್ಮಾಣ ಮಾಡಿರೋ ಚಿತ್ರ. ಸ್ಟೋನ್ ಕ್ಲಾಡಿಂಗ್ ವ್ಯವಹಾರ ನಡೆಸುತ್ತಲೇ ಅಪಾರವಾದ ಸಿನಿಮಾ ಪ್ರೇಮ ಹೊಂದಿದ್ದ ಅವರ ಕನಸು ಈ ಮೂಲಕವೇ ಸಾಕಾರಗೊಂಡಿದೆ. ಇಲ್ಲಿ ನಾಯಕನಾಗಿ ನಟಿಸಿರೋ ಮನುಷ್ ನಿರ್ಮಾಪಕರ ಪುತ್ರ. ಈಗ ತಾನೇ ಮೊದಲ ವರ್ಷದ ಬಿಕಾಂ ವಿದ್ಯಾರ್ಥಿಯಾಗಿರುವ  ಮನುಷ್ ನಟನೆ, ನೃತ್ಯ ಸೇರಿದಂತೆ ಎಲ್ಲದರಲ್ಲಿಯೂ ತರಬೇತಿ ಪಡೆದುಕೊಂಡು ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾನೆ. ಇದು ಹತ್ತೊಂಬತ್ತರ ಹರೆಯ ಆವೇಗದ ಕಥೆಯನ್ನೊಳಗೊಂಡಿರೋ ಕಥೆ. ಕುಟುಂಬ ಸಮೇತರಾಗಿ ಕೂತು ನೋಡುವಂತೆ ಇದನ್ನು ಸುರೇಶ್ ಎಂ. ಗಿಣಿ ನಿರ್ದೇಶನ ಮಾಡಿದ್ದಾರಂತೆ. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರೋ 19 ಏಜ್ ಈಸ್ ನಾನ್‍ಸೆನ್ಸ್ ಚಿತ್ರಮಂದಿರಗಳತ್ತ ಮುಖ ಮಾಡಿದೆ.

  • 19 ಏಜ್ ಈಸ್ ನಾನ್ಸೆನ್ಸ್ ಅಂದವರಿಗೆ ತಮಿಳಿನಲ್ಲಿ ಅವಕಾಶ!

    19 ಏಜ್ ಈಸ್ ನಾನ್ಸೆನ್ಸ್ ಅಂದವರಿಗೆ ತಮಿಳಿನಲ್ಲಿ ಅವಕಾಶ!

    ಬೆಂಗಳೂರು: ಅದೃಷ್ಟ ಅನ್ನೋದು ತಾನೇ ತಾನಾಗಿ ಒಲಿದು ಬರೋದು ಅಂತಾರಲ್ಲಾ? ಅದು ಇಂಥಾದ್ದಕ್ಕೇ ಇರಬೇಕು. ಈ ಹುಡುಗ ನಟಿಸಿರೋ 19 ಏಜ್ ಈಸ್ ನಾನ್ಸೆನ್ಸ್ ಅನ್ನೋ ಚಿತ್ರ ಇತ್ತೀಚೆಗಷ್ಟೇ ಸುದ್ದಿಯಲ್ಲಿದೆ. ಆ ಚಿತ್ರ ಇನ್ನಷ್ಟೇ ತೆರೆಗಾಣಬೇಕಿದೆ. ಅಷ್ಟರಲ್ಲಿಯೇ ಮನುಷ್ ಪಾಲಿಗೆ ತಮಿಳಿನಲ್ಲಿಯೂ ಹೀರೋ ಆಗೋ ಅವಕಾಶ ಅರಸಿ ಬಂದಿದೆ. ಈ ಚಮತ್ಕಾರಕ್ಕೆ ಕಾರಣವಾಗಿರೋದು ಈ ಹುಡುಗನಿಗೆ ಸಿನಿಮಾ ಮೇಲಿರೋ ಅತೀವ ಆಸಕ್ತಿ ಮತ್ತು ಪ್ರತಿಭೆಯ ಕಾರಣದಿಂದಲೇ.

    19 ಏಜ್ ಈಸ್ ನಾನ್ಸೆನ್ಸ್ ಚಿತ್ರವನ್ನು ಲೋಕೇಶ್ ನಿರ್ಮಾಣ ಮಾಡಿದ್ದಾರೆ. ಅವರ ಸುಪುತ್ರ ಮನುಷ್ ಇದರಲ್ಲಿ ನಾಯಕನಾಗಿ ನಟಿಸಿದ್ದಾನೆ. ಈಗಿನ್ನೂ ಪ್ರಥಮ ವರ್ಷದ ಬಿಕಾಂ ಪದವಿ ಓದುತ್ತಿರೋ ಮನುಷ್ ಪಾಲಿಗೆ ಓದಿಗಿಂತಲೂ ಸಿನಿಮಾ ಮೇಲೆಯೇ ಆಸಕ್ತಿ ಹೆಚ್ಚು. ಇದನ್ನು ಮನಗಂಡಿದ್ದ ಲೋಕೇಶ್ ಅವರಿಗೆ ನಿರ್ದೇಶಕ ಸುರೇಶ್ ಎಂ ಗಿಣಿ ಈ ಕಥೆ ಹೇಳಿದಾಗ ಅದಕ್ಕೆ ಮಗನೇ ಸೂಕ್ತ ಅನ್ನಿಸಿತ್ತಂತೆ. ಹಾಗೆಂದಾ ಕ್ಷಣ ಲೋಕೇಶ್ ಮಗನನ್ನು ನೇರವಾಗಿ ಹೀರೋ ಮಾಡಲಿಲ್ಲ. ಬದಲಾಗಿ ರಂಗಭೂಮಿ ಪರಿಣಿತರಿಂದ ತರಬೇತಿ ಕೊಡಿಸಿದ್ದರು. ಅದೆಲ್ಲವನ್ನೂ ಅಚ್ಚಕಟ್ಟಾಗಿ ಕಲಿತ ಮನುಷ್ ಚೆಂದಗೆ ಅಭಿನಯಿಸಿದ್ದ. ಆ ಬಲದಿಂದಲೇ ಆತನಿಗೆ ತಮಿಳು ಚಿತ್ರದಲ್ಲಿ ನಾಯಕನಾಗೋ ಅವಕಾಶ ಒಲಿದು ಬಂದಿದೆ.

    ಈತನ ಸಿನಿಮಾಸಕ್ತಿ ಮತ್ತು ನಟನೆಯ ಪ್ರತಿಭೆಯನ್ನು ಈ ಸಿನಿಮಾ ಛಾಯಾಗ್ರಾಹಕರಾಗಿರುವ ವೆಟ್ರಿ ಆರಂಭದಿಂದಲೂ ಗಮನಿಸಿಕೊಂಡು ಬಂದಿದ್ದರು. ಅವರು ಅದಾಗಲೇ ತಮಿಳು ಸಿನಿಮಾ ನಿರ್ದೇಶನ ಮಾಡಲು ತಯಾರಾಗಲಾರಂಭಿಸಿದ್ದರು. ಬಳಿಕ ಮನುಷ್‌ನನ್ನೇ ನಾಯಕನನ್ನಾಗಿಸಿ ತಮ್ಮ ಮೊದಲ ಚಿತ್ರ ನಿರ್ದೇಶನ ಮಾಡೋ ನಿರ್ಧಾರಕ್ಕೂ ಬಂದಿದ್ದರು. ಪ್ರೇಮ ಕಥೆಯಾಧಾರಿತವಾದ ಈ ಕಥೆ ಲೋಕೇಶ್ ಅವರಿಗೂ ಒಪ್ಪಿಗೆಯಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನೇನು 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಬಿಡುಗಡೆಯಾಗುತ್ತಲೇ ಮನುಷ್ ನಟನೆಯ ತಮಿಳು ಸಿನಿಮಾ ಟೇಕಾಫ್ ಆಗಲಿದೆ.

  • ಹತ್ತೊಂಬತ್ತರ ಹರೆಯವನ್ನು ನಾನ್ಸೆನ್ಸ್ ಅನ್ನುತ್ತಿರುವವರ್ಯಾರು?

    ಹತ್ತೊಂಬತ್ತರ ಹರೆಯವನ್ನು ನಾನ್ಸೆನ್ಸ್ ಅನ್ನುತ್ತಿರುವವರ್ಯಾರು?

    ಬೆಂಗಳೂರು: ಹದಿಹರೆಯದ ತವಕ, ತಲ್ಲಣ ಮತ್ತು ಬೊಗಸೆ ತುಂಬಿದಷ್ಟೂ ಹೊಸತನದಿಂದ ನಳನಳಿಸುವ ಪ್ರೇಮ… ಬಹುಶಃ ಯಾವ ಕಾಲಕ್ಕೂ ಸಿನಿಮಾಗಳ ಪಾಲಿಗೆ ಇವೆರಡು ಸಂಗತಿಗಳು ಹಳತಾಗಲು ಸಾಧ್ಯವಿಲ್ಲ, ಯಾವುದೇ ಕಥೆಯಾದರೂ ಇವೆರಡು ಅಂಶಗಳ ಸ್ಪರ್ಶವಾದೇಟಿಗೆ ಅಲ್ಲೊಂದು ದೃಷ್ಯ ಕಾವ್ಯ ಕಣ್ತೆರೆಯುತ್ತದೆಕಿಂಥಾ ಕಥಾ ಹಂದರದೊಂದಿಗೆ ಹೊಸಬರ ತಂಡಗಳು ಆಗಮಿಸಿದಾಗಲಂತೂ ನಿರೀಕ್ಷೇ ಮಾಮೂಲಿಗಿಂತಲೂ ತುಸು ಹೆಚ್ಚೇ ಇರುತ್ತದೆ. ಇದೀಗ ’19 ಏಜ್ ಈಸ್ ನಾನ್ಸೆನ್ಸ್? ಅನ್ನುತ್ತಾ ಅಡಿಯಿರಿಸಿರುವ ಚಿತ್ರತಂಡದಲ್ಲಿಯೂ ಅಂಥಾದ್ದೊಂದು ಹೊಸತನದ ಹುಮ್ಮಸ್ಸಿನ ಛಾಯೆಯೇ ಎದ್ದು ಕಾಣಿಸುತ್ತಿದೆ.

    ಶ್ರೀ ರಾಜೇಶ್ವರಿ ಫಿಲಂಸ್ ಬ್ಯಾನರಿನಡಿಯಲ್ಲಿ ಎಸ್ ಲೋಕೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುರೇಶ್ ಎಂ ಗಿಣಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದಲ್ಲಿ ಮನುಷ್ ಎಂಬ ಹೊಸಾ ಹುಡುಗ ನಾಯಕನಾಗಿ ನಟಿಸಿದರೆ, ಚೆನೈ ಮೂಲದ ಮಧುಮಿತಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಸದ್ಯ ಶೀರ್ಷಿಕೆಯ ಕಾರಣದಿಂದಲೇ ಕುತೂಹಲ ಮೂಡಿಸಿರೋ ಈ ಚಿತ್ರ ಹತ್ತೊಂಬತ್ತರ ವಯಸ್ಸಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು, ಅದರ ಸಾಧಕ ಬಾಧಕಗಳನ್ನು ಮಜವಾದ ಶೈಲಿಯಲ್ಲಿ ಕಟ್ಟಿ ಕೊಡಲಿದೆಯಂತೆ. ಇಲ್ಲಿ ಹದಿಹರೆಯದ ಹುಡುಗ ಹುಡುಗೀರ ಕಥೆಯಿದ್ದರೂ ಇಲ್ಲಿ ಕೌಂಟುಬಿಕ ಅಂಶಗಳೇ ಪ್ರಧಾನ.

    ಈ ಯುವ ಆವೇಗದ ಚಿತ್ರದಲ್ಲಿ ಸಾಮಾಜಿಕ ಕ್ರಾಂತಿಗೆ ಕಿಚ್ಚು ಹಚ್ಚಬಲ್ಲ ವಿಚಾರವನ್ನೂ ಕೂಡಾ ನಮುಖ್ಯವಾಗಿ ಬಳಸಿಕೊಂಡಿರೋದು ನಿಜವಾದ ವಿಶೇಷ. ವಿಧವಾ ವಿವಾಹವೀಗ ಕಾನೂನು ಸಮ್ಮತವಾಗಿದ್ದರೂ ಸಹ ಮಡಿವಂತೆಕೆಯ ಮನಸ್ಥಿತಿಗಳಿನ್ನೂ ಮಾಯವಾಗಿಲ್ಲ. ಇಂಥಾ ಸಂದರ್ಭದಲ್ಲಿ ವಿಧವಾ ವಿವಾಹವನ್ನು ಉತ್ತೇಜಿಸುವಂಥಾ ಅಂಶಗಳನ್ನೂ ಇಲ್ಲಿ ಪ್ರಧಾನವಾಗಿ ತೋರಿಸಲಾಗಿದೆಯಂತೆ. ಹದಿಹರೆಯದ ಘಟ್ಟದ ಕಥೆ ಹೊಂದಿರೋ ಈ ಸಿನಿಮಾ ಹಾಡುಗಳನ್ನು ಇತ್ತೀಚೆಗೆ ಲಹರಿ ವೇಲು ಬಿಡುಗಡೆಗೊಳಿಸಿದ್ದಾರೆ. ಇದೀಗ ಈ ಹಾಡುಗಳ ಕಾರಣದಿಂದಲೇ ಸದರಿ ಚಿತ್ರ ಸುದ್ದಿ ಕೇಂದ್ರದಲ್ಲಿದೆ. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಇಷ್ಟರಲ್ಲಿಯೇ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದೆ.

  • 19 AGE IS ನಾನ್ಸೆನ್ಸ್? ಚಿತ್ರಕ್ಕೆ ಮುಹೂರ್ತ

    19 AGE IS ನಾನ್ಸೆನ್ಸ್? ಚಿತ್ರಕ್ಕೆ ಮುಹೂರ್ತ

    ಬೆಂಗಳೂರು: ರಾಜೇಶ್ವರಿ ಫಿಲಂ ಲಾಂಛನದಲ್ಲಿ ಎಸ್.ಲೋಕೇಶ್ ನಿರ್ಮಾಣದ ’19 ಏಜ್ ಈಸ್ ನಾನ್‍ಸೆನ್ಸ್?’ ಚಿತ್ರಕ್ಕೆ ಕೆಂಪೇಗೌಡ ಬಡಾವಣೆಯ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.

    ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಗಿಣಿ, ಛಾಯಾಗ್ರಹಣ – ವಿಕ್ಟರಿ, ಸಂಕಲನ-ರವಿಚಂದ್ರನ್, ಸಾಹಸ -ಶಿವ, ಹಾಡುಗಳು-ವಿ.ನಾಗೇಂದ್ರ ಪ್ರಸಾದ್, ತಾರಾಗಣದಲ್ಲಿ – ಮನಿಷ್, ಮಧುಮಿತ, ಬಾಲು, ಸೌಭಾಗ್ಯ, ಶ್ರೀಲಕ್ಷ್ಮಿ, ಕಾವ್ಯಪ್ರಕಾಶ್, ರಂಗಸ್ವಾಮಿ ಮುಂತಾದವರಿದ್ದಾರೆ. ಲವ್-ಆಕ್ಷನ್ ಜೊತೆಗೆ 19 ರಿಂದ 25 ವಯೋಮಿತಿ ಇರುವ ಹರೆಯದ ವಯಸ್ಸಿನ ನಾಯಕಿ ಜೀವನದಲ್ಲಿ ನಡೆಯುವ ಕಥಾವಸ್ತುವಿದು.