Tag: 19ನೇ ಸಿನಿಮಾ

  • ಯಶ್ 19ನೇ ಸಿನಿಮಾ ಟ್ರೆಂಡಿಂಗ್ : ಗೀತು ಮೋಹನ್ ದಾಸ್ ಸಿನಿಮಾದಲ್ಲಿ ರಾಕಿಭಾಯ್

    ಯಶ್ 19ನೇ ಸಿನಿಮಾ ಟ್ರೆಂಡಿಂಗ್ : ಗೀತು ಮೋಹನ್ ದಾಸ್ ಸಿನಿಮಾದಲ್ಲಿ ರಾಕಿಭಾಯ್

    ಇಂದು ಮತ್ತೆ ರಾಕಿಂಗ್ ಸ್ಟಾರ್ ಯಶ್ (Yash) ಅವರ 19ನೇ ಸಿನಿಮಾ (19th movie) ಟ್ವಿಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಕಳೆ ಹಲವು ತಿಂಗಳಿಂದ ಈ ಸಿನಿಮಾದ ಬಗ್ಗೆ ನಾನಾ ರೀತಿಯ ಸುದ್ದಿಗಳು ಕೇಳಿ ಬರುತ್ತಿವೆ. ಅಧಿಕೃತವಾಗಿ ಸಿನಿಮಾ ತಂಡವಾಗಲಿ ಅಥವಾ ಯಶ್ ಅವರಾಗಲಿ ಮಾತನಾಡದೇ ಇದ್ದರೂ, ಸೋಷಿಯಲ್ ಮೀಡಿಯಾಗಳಲ್ಲಂತೂ ಟ್ರೆಂಡ್ ಆಗುತ್ತಲೇ ಇದೆ.

    ಕೆಜಿಎಫ್ 2 (KGF 2) ಸಿನಿಮಾ ರಿಲೀಸ್ ನಂತರ ಅವರ ಮುಂದಿನ ಚಿತ್ರವನ್ನು ಯಾರೆಲ್ಲ ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುರಿತಾಗಿ ನಾನಾ ಹೆಸರುಗಳು ಕೇಳಿ ಬಂದವು. ನರ್ತನ್, ಶಂಕರ್ ಹೀಗೆ ಹಲವಾರು ನಿರ್ದೇಶಕರ ಹೆಸರನ್ನು ತೇಲಿಬಿಟ್ಟರು. ಇದೀಗ ಮತ್ತೊಂದು ಹೆಸರು ಕೇಳಿ ಬಂದಿದ್ದು, ಇದೇ ನಿರ್ದೇಶಕರ ಸಿನಿಮಾದಲ್ಲೇ ಯಶ್ ನಟಿಸಲಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿದೆ. ಇದನ್ನೂ ಓದಿ:38 ಕೋಟಿ ರೂಪಾಯಿ ಕೊಟ್ಟು ಎರಡು ಐಷರಾಮಿ ಮನೆ ಖರೀದಿಸಿದ ಆಲಿಯಾ ಭಟ್

    ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ (Geethu Mohan Das) ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಲಯರ್ಸ್ ಡೈರಿ ಸಿನಿಮಾಗಾಗಿ ಎರಡು ರಾಷ್ಟ್ರಪ್ರಶಸ್ತಿಯನ್ನು ಪಡೆದಿರುವ ಗೀತು ಅವರ ಸ್ಕ್ರಿಪ್ಟ್ ಬಗ್ಗೆ ಯಶ್ ಒಲವು ತೋರಿದ್ದಾರೆ ಎಂದು ವರದಿಯಾಗಿದೆ. ಸತತ ಒಂದು ವರ್ಷಗಳಿಂತ ಗೀತು ಮತ್ತು ಯಶ್ ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದಾರೆ ಎಂದು ಅವರ ಆಪ್ತರು ಹಂಚಿಕೊಂಡಿದ್ದಾರೆ.

    ಕಳೆದೆರಡು ವಾರದ ಹಿಂದೆ ಯಶ್ ಶ್ರೀಲಂಕಾಕ್ಕೆ (Sri Lanka) ಭೇಟಿ ನೀಡಿದ್ದರು. ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದರು. ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಫೋಟೋ ನೋಡಿದವರು ಯಶ್ ಶ್ರೀಲಂಕಾ ಪ್ರವಾಸದಲ್ಲಿ ಇದ್ದಾರೆ ಅಂದುಕೊಂಡಿದ್ದರು. ಬೇಸಿಗೆ ರಜೆಯನ್ನು ಕಳೆಯಲು ಅವರು ಅಲ್ಲಿಗೆ ಹೋಗಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಶ್ರೀಲಂಕಾ ಸರಕಾರ ಬೇರೆಯದ್ದೇ ಮಾಹಿತಿಯನ್ನು ಕೊಟ್ಟಿತ್ತು.

    ಈ ಕುರಿತು ಬೋರ್ಡ್ ಆಫ್ ಇನ್ವೆಸ್ಟ್‌ಮೆಂಟ್‌ ಇನ್ ಶ್ರೀಲಂಕಾದ ಮುಖ್ಯಾಧಿಕಾರಿ ದಿನೇಶ್ ವೇರಕ್ಕೋಡಿ (Dinesh Verakkodi) ಅವರು ಮಾಹಿತಿ ಹಂಚಿಕೊಂಡಿದ್ದು, ‘ಭಾರತದ ಜನಪ್ರಿಯ ವ್ಯಕ್ತಿಯಾಗಿರುವ, ಯಶ್ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ನಟ ನವೀನ್ ಕುಮಾರ್ ಅವರನ್ನು ಭೇಟಿ ಮಾಡಿದೆ. ಮೂರು ಫಿಲ್ಮ್ ಫೇರ್ ಪ್ರಶಸ್ತಿ ವಿಜೇತರು ಆಗಿರುವ ಅವರು ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲು ಅನುಮತಿ ಕೇಳಿದ್ದಾರೆ’ ಎಂದು ಟ್ವೀಟ್ ಮಾಡಿದ್ದರು.

  • ಯಶ್ ನಟನೆಯ ಹೊಸ ಸಿನಿಮಾದ ಪೋಸ್ಟರ್ ವೈರಲ್: ಬದಲಾಗಲಿಲ್ಲ ಹೇರ್ ಸ್ಟೈಲ್

    ಯಶ್ ನಟನೆಯ ಹೊಸ ಸಿನಿಮಾದ ಪೋಸ್ಟರ್ ವೈರಲ್: ಬದಲಾಗಲಿಲ್ಲ ಹೇರ್ ಸ್ಟೈಲ್

    ಕೆಜಿಎಫ್ 2 ಸಿನಿಮಾದ ನಂತರ ಯಶ್ ಮುಂದಿನ ಸಿನಿಮಾದ ಬಗ್ಗೆ ಹಲವು ತಿಂಗಳಿನಿಂದ ಚರ್ಚೆ ನಡೆಯುತ್ತಿದೆ. ಯಶ್ ಮುಂದಿನ ಸಿನಿಮಾ ಯಾವುದು, ಯಾರು ನಿರ್ದೇಶಕರು, ಯಾವ ನಿರ್ಮಾಣ ಸಂಸ್ಥೆಯಿಂದ ಈ ಚಿತ್ರ ಬರಲಿದೆ, ಲುಕ್ ಹೇಗೆ ಇರಲಿದೆ ಹೀಗೆ ಹತ್ತಾರು ಪ್ರಶ್ನೆಗಳು ಅಭಿಮಾನಿಗಳ ತಲೆ ಕೆಡಿಸಿವೆ. ಅಭಿಮಾನಿಗಳು ಎಷ್ಟೇ ಮಂಡೆ ಬಿಸಿ ಮಾಡಿಕೊಂಡರೂ, ಯಶ್ ಮಾತ್ರ ಕೂಲ್ ಆಗಿಯೇ ಇದ್ದಾರೆ.

    ಯಶ್ ನಟನೆಯ ಮುಂದಿನ ಸಿನಿಮಾಗಳ ಬಗ್ಗೆ ಈಗಾಗಲೇ ಒಂದು ಯಾದಿ ಬಂದು ಹೋಗಿದೆ. ನರ್ತನ್, ಶಂಕರ್ ಸೇರಿದಂತೆ ಹಲವು ನಿರ್ದೇಶಕರ ಹೆಸರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಕೆವಿಎನ್ ಸೇರಿದಂತೆ ಮೂರ್ನಾಲ್ಕು ನಿರ್ಮಾಣ ಸಂಸ್ಥೆಗಳು ಕೂಡ ಯಶ್ ಸಿನಿಮಾವನ್ನು ಮಾಡಲು ಮುಂದೆ ಬಂದಿವೆ ಎಂದು ಸುದ್ದಿಯೂ ಆಗಿದೆ. ಆದರೆ, ಅಧಿಕೃತವಾಗಿ ಯಾವುದೂ ಈವರೆಗೂ ಹೊಸ ಸಿನಿಮಾದ ಬಗ್ಗೆ ಘೋಷಣೆ ಮಾಡಿಲ್ಲ. ಹಾಗಾಗಿ ಎಲ್ಲವೂ ಕಪೋಕಲ್ಪಿತ ಎಂದೇ ಹೇಳಲಾಗಿದೆ. ಇದನ್ನೂ ಓದಿ:ಶೂಟಿಂಗ್ ವೇಳೆ ಅವಘಡ: ಆಸ್ಪತ್ರೆ ಸೇರಿದ ಬಾಹುಬಲಿ ಬಿಜ್ಜಳದೇವ ಪಾತ್ರಧಾರಿ ನಾಸರ್

    ಆದರೆ, ಈ ಮಧ್ಯೆ ಯಶ್ ಅವರ 19ನೇ ಸಿನಿಮಾದ ಪೋಸ್ಟರ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದು ಫ್ಯಾನ್ ಮೇಡ್ ಪೋಸ್ಟರ್ ಎಂದು ಹೇಳಲಾಗುತ್ತಿದೆಯಾದರೂ, ಇದು ಮುಂದೆ ನಿಜವೂ ಆಗಬಹುದು ಎಂದು ಮತ್ತೆ ಕುತೂಹಲ ಮೂಡಿಸುವಂತಹ ಬರಹಗಳು ಕೂಡ ಹರಿದಾಡುತ್ತಿವೆ. ಹೀಗಾಗಿ ಪೋಸ್ಟರ್ ಬಗ್ಗೆ ಕ್ಯೂರಿಯಾಸಿಟಿ ಮೂಡಿದೆ. ಹೇರ್ ಸ್ಟೈಲ್ ಕೂಡ ಬದಲಾಗಿಲ್ಲವಾದ್ದರಿಂದ, ಇದೇ ಗೆಟಪ್ ನಲ್ಲೇ ಯಶ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಈಗಲೂ ಈ ಕುರಿತು ಯಶ್ ಮೌನ ಮುರಿದಿಲ್ಲ. ಪೋಸ್ಟರ್ ಬಗ್ಗೆ ಪ್ರತಿಕ್ರಿಯೆ ಕೂಡ ನೀಡಿಲ್ಲ. ಆದರೆ, ಸದ್ಯ ಯಶ್ ಇರುವ ರೀತಿಯಲ್ಲೇ ಪೋಸ್ಟರ್ ಕೂಡ ಇರುವುದರಿಂದ, ಯಶ್ ತಮ್ಮ ಹೇರ್ ಸ್ಟೈಲ್ ಹಾಗೆಯೇ ಉಳಿಸಿಕೊಂಡಿದ್ದರಿಂದ ಹೀಗೆಯೇ ಗೆಟಪ್ ಕೂಡ ಇರಲಿದೆ ಎನ್ನುವ ಚರ್ಚೆ ಗಾಂಧಿನಗರದಲ್ಲಿ ಶುರುವಾಗಿದೆ. ಇದಕ್ಕೆ ಅಧಿಕೃತವಾಗಿ ಯಶ್ ಅವರೇ ಉತ್ತರಿಸಬೇಕಿದೆ.

    Live Tv
    [brid partner=56869869 player=32851 video=960834 autoplay=true]