Tag: .

  • ರಾಜ್ಯದ ಹವಾಮಾನ ವರದಿ: 23-12-2023

    ರಾಜ್ಯದ ಹವಾಮಾನ ವರದಿ: 23-12-2023

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಂದು ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಹನಿ ಬೀಳುವ ಸಾಧ್ಯತೆಗಳಿರಲಿವೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-16
    ಮಂಗಳೂರು: 32-23
    ಶಿವಮೊಗ್ಗ: 31-16
    ಬೆಳಗಾವಿ: 28-16
    ಮೈಸೂರು: 30-16

    ಮಂಡ್ಯ: 29-16
    ಮಡಿಕೇರಿ: 31-15
    ರಾಮನಗರ: 29-16
    ಹಾಸನ: 28-14
    ಚಾಮರಾಜನಗರ: 31-16
    ಚಿಕ್ಕಬಳ್ಳಾಪುರ: 26-14

    ಕೋಲಾರ: 25-16
    ತುಮಕೂರು: 27-15
    ಉಡುಪಿ: 32-22
    ಕಾರವಾರ: 32-22
    ಚಿಕ್ಕಮಗಳೂರು: 27-14
    ದಾವಣಗೆರೆ: 29-17

    ಹುಬ್ಬಳ್ಳಿ: 30-16
    ಚಿತ್ರದುರ್ಗ: 27-15
    ಹಾವೇರಿ: 31-17
    ಬಳ್ಳಾರಿ: 29-17
    ಗದಗ: 29-16
    ಕೊಪ್ಪಳ: 29-17

    ರಾಯಚೂರು: 31-18
    ಯಾದಗಿರಿ: 30-17
    ವಿಜಯಪುರ: 30-17
    ಬೀದರ್: 28-14
    ಕಲಬುರಗಿ: 30-16
    ಬಾಗಲಕೋಟೆ: 31-17

  • ಹೆಚ್ಚುತ್ತಿರುವ ಕೋವಿಡ್ ನಿಯಂತ್ರಣಕ್ಕೆ BBMP ಪಣ – 500 ಸಿಬ್ಬಂದಿ ನೇಮಕ

    ಹೆಚ್ಚುತ್ತಿರುವ ಕೋವಿಡ್ ನಿಯಂತ್ರಣಕ್ಕೆ BBMP ಪಣ – 500 ಸಿಬ್ಬಂದಿ ನೇಮಕ

    ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಳಿತವಾಗಿ ಸಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 108 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ 10,566 ಟೆಸ್ಟಿಂಗ್ ನಡೆಸಲಾಗಿದ್ದು, 1,780 ಸಕ್ರೀಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರಿದಿದೆ.

    COVID HIKE 2

    ಈ ಬೆನ್ನಲ್ಲೇ ಕೊವಿಡ್ ನಿಯಂತ್ರಣಕ್ಕೆ ತರಲು ಬಿಬಿಎಂಪಿ ಆರೋಗ್ಯ ಸಿಬ್ಬಂದಿ ನೇಮಿಸಿಕೊಳ್ಳಲು ಮುಂದಾಗಿದೆ. ನಗರದಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಲು ಪಾಲಿಕೆಯಿಂದ 500 ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆಯ ಅಬ್ಬರಕ್ಕೆ ಜನ ತತ್ತರ – ಧರೆಗುರುಳಿದ ಭಾರೀ ಮರಗಳು

    COVID
    ಸಾಂದರ್ಭಿಕ ಚಿತ್ರ

    ಕಳೆದ ಬಾರಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದ ಸಿಬ್ಬಂದಿಯನ್ನು ಮಾರ್ಚ್ನಲ್ಲಿ ಕೈಬಿಡಲಾಗಿತ್ತು. ಇದೀಗ 100ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಕರ್ತವ್ಯ ನಿರ್ವಹಣೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಹಾಗಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಪಿಎಸ್‍ಐ ಹಗರಣ: ಓರ್ವ ಪೊಲೀಸ್ ಪೇದೆ ಸೇರಿ ಬಂಧಿತರ ಸಂಖ್ಯೆ 39ಕ್ಕೆ ಏರಿಕೆ

    ನಗರದಲ್ಲಿ ಸರ್ಕಾರ 10 ಸಾವಿರ ಟೆಸ್ಟಿಂಗ್ ಗುರಿ ತಲುಪಲು ಟಾರ್ಗೆಟ್ ನೀಡಿದೆ. ಈಗಾಗಲೇ 200 ಸ್ವಾಬ್ ಕಲೆಕ್ಟರ್, 200 ಡೇಟಾ ಆಪರೇಟರ್ ಹಾಗೂ 100 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

  • ಅಪ್ರಾಪ್ತ ಹುಡುಗಿ ಮೇಲೆ ನಿರಂತರ ಅತ್ಯಾಚಾರ- 7 ಮಂದಿ ಕಾಮುಕರ ಬಂಧನ

    ಬೆಂಗಳೂರು: 16 ವರ್ಷದ ಹುಡುಗಿಯ ಮೇಲೆ 8 ಜನ ಕಾಮುಕರು ನಿರಂತರ ಅತ್ಯಾಚಾರ ಎಸಗುತ್ತಿದ್ದ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

    ಮೊದಲು ವೀಡಿಯೋ ರೆಕಾರ್ಡ್ ಮಾಡಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಮುಖ ಆರೋಪಿ ವಿಚಾರ ಹೊರಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ನಂತರ ವೀಡಿಯೋ ತೋರಿಸಿ ತನ್ನ ಸ್ನೇಹಿತರ ಜೊತೆಗೂ ಸಹಕರಿಸುವಂತೆ ಒತ್ತಾಯಿಸಿದ್ದಾನೆ. ಹುಡುಗಿಯನ್ನು ಮತ್ತಷ್ಟು ಹೆದರಿಸಿ 8 ಮಂದಿಯೂ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ನಂತರ ವೀಡಿಯೋ ಮಾಡಿ ನಿರಂತರ ಕೃತ್ಯ ಎಸಗಲು ಮುಂದಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಆಕ್ಸಿಜನ್ ಇಲ್ಲದಿದ್ರೂ ಚಿಕಿತ್ಸೆಗೆ ಕರೆದೊಯ್ದ ಚಾಲಕ: ಉಸಿರಾಟದ ಕೊರತೆಯಿಂದ ನವಜಾತ ಶಿಶು ಸಾವು

    crime

    ಮನೆಗೆ ಬಂದ ಮಗಳು ಅಳುತ್ತಿದ್ದುದ್ದನ್ನು ಕಂಡು ಪೋಷಕರು ಕೇಳಿದ್ದಾರೆ. ಮೊದಲೇ ಹೆದರಿಕೊಂಡಿದ್ದ ಹುಡುಗಿ, ಕಬಾಬ್ ಖಾರ ಇತ್ತು ಅದಕ್ಕೆ ಕಣ್ಣೀರು ಬರುತ್ತಿದೆ ಎಂದು ಸಂಬಾಳಿಸಲು ಮುಂದಾಗಿದ್ದಾಳೆ. ನಂತರ ಆಕೆಯಿಂದ ವಿಚಾರ ತಿಳಿದು ಗಾಬರಿಗೊಂಡ ಮನೆಯವರು 8 ಜನರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೋ, ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ 7 ಆರೋಪಿಗಳನ್ನು ಬಂಧಿಸಿದ್ದಾರೆ. ಓರ್ವ ಪರಾರಿಯಾಗಿದ್ದು, ಶೋಧಕಾರ್ಯ ಮುಂದುವರಿಸಿದ್ದಾರೆ.

  • ಯುದ್ಧದ ನಡುವೆಯೇ ದೆಹಲಿಗೆ ಬಂದಿಳಿದ ರಷ್ಯಾ ವಿದೇಶಾಂಗ ಸಚಿವ

    ಯುದ್ಧದ ನಡುವೆಯೇ ದೆಹಲಿಗೆ ಬಂದಿಳಿದ ರಷ್ಯಾ ವಿದೇಶಾಂಗ ಸಚಿವ

    ನವದೆಹಲಿ: ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಎರಡು ದಿನಗಳ ಭೇಟಿಗಾಗಿ ಗುರುವಾರ ಭಾರತಕ್ಕೆ ಆಗಮಿಸಿದ್ದಾರೆ. ಕಳೆದ ತಿಂಗಳು ಉಕ್ರೇನ್ ಮೇಲೆ ರಷ್ಯಾ ಆಕ್ರಮಣವನ್ನು ಆರಂಭಿಸಿದ ನಂತರ ಇದು ಭಾರತಕ್ಕೆ ಅವರ ಮೊದಲ ಪ್ರವಾಸವಾಗಿದೆ.

    ಅಧಿಕೃತ ಭೇಟಿಗಾಗಿ ನವದೆಹಲಿಗೆ ಆಗಮಿಸುತ್ತಿರುವ ರಷ್ಯಾದ ಒಕ್ಕೂಟದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಸ್ವಾಗತಿಸುತ್ತೇನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಗ ಅಳುತ್ತಿದ್ದರೂ ನನ್ನ ಮೇಲೆ ಅತ್ಯಾಚಾರ ಮಾಡಿದ್ರು- ಉಕ್ರೇನ್ ಮಹಿಳೆ

    RUSSIA

    ಲಾವ್ರೊವ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ತಿಳಿಸಿತ್ತು. ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೊರಡಿಸಿರುವ ಲಾವ್ರೊವ್ ಅವರ ಭೇಟಿಯ ಮಾಧ್ಯಮ ಪ್ರಕಟಣೆಯಲ್ಲಿ ರಷ್ಯಾದ ವಿದೇಶಾಂಗ ಸಚಿವರು ಮತ್ತು ಪ್ರಧಾನಿ ನಡುವಿನ ಯಾವುದೇ ಸಭೆಯನ್ನು ಉಲ್ಲೇಖಿಸಿಲ್ಲ ಎನ್ನಲಾಗಿದೆ.

    ಮಾತುಕತೆಯ ಸಿದ್ಧತೆಗಳ ಬಗ್ಗೆ ತಿಳಿದಿರುವ ಮೂಲಗಳು, ರಷ್ಯಾದಿಂದ ವಿವಿಧ ಮಿಲಿಟರಿ ಯಂತ್ರಾಂಶಗಳು ಮತ್ತು S-400 ಕ್ಷಿಪಣಿ ವ್ಯವಸ್ಥೆಗಳ ಘಟಕಗಳನ್ನು ಸಮಯೋಚಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಭಾರತವು ಒತ್ತಡ ಹೇರುವ ಸಾಧ್ಯತೆಯಿದೆ ಎಂದು ಹೇಳಿವೆ. ಇದನ್ನೂ ಓದಿ: ಪ್ಲುಟೋದಲ್ಲಿ ಹೊಸ ವಿಸ್ಮಯ – ಸೌರವ್ಯೂಹದಲ್ಲಿ ಎಲ್ಲೂ ಕಾಣಿಸದ ಮಂಜಿನ ಜ್ವಾಲಾಮುಖಿಯ ಸುಳಿವು 

    ರಷ್ಯಾ ವಿದೇಶಾಂಗ ಸಚಿವರು ಎರಡು ದಿನಗಳ ಚೀನಾ ಪ್ರವಾಸ ಮುಗಿಸಿ ಭಾರತಕ್ಕೆ ಆಗಮಿಸಿದ್ದಾರೆ. ಉಕ್ರೇನ್ ಜೊತೆಗಿನ ಸಂಘರ್ಷವನ್ನು ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಭಾರತ, ರಷ್ಯಾವನ್ನು ಒತ್ತಾಯಿಸುತ್ತಿದೆ.

    ಭಾರತ ಇಲ್ಲಿಯವರೆಗೆ ಉಕ್ರೇನ್‌ನ ಆಕ್ರಮಣಕ್ಕಾಗಿ ರಷ್ಯಾವನ್ನು ಟೀಕಿಸಿಲ್ಲ ಮತ್ತು ರಷ್ಯಾದ ಆಕ್ರಮಣವನ್ನು ಖಂಡಿಸುವಲ್ಲಿ ವಿಶ್ವಸಂಸ್ಥೆಯ ವೇದಿಕೆಗಳಲ್ಲಿ ಮತದಾನದಿಂದ ದೂರವಿತ್ತು. ಉಕ್ರೇನ್‌ನಲ್ಲಿನ ಮಾನವೀಯ ಬಿಕ್ಕಟಿನ ಕುರಿತು ರಷ್ಯಾ ನಿರ್ಣಯ ಮಂಡಿಸಿದಾಗ ಭಾರತವೂ ದೂರವಿತ್ತು. ಇದು ಸಂಘರ್ಷದ ಬಗ್ಗೆ ಅದರ ತಟಸ್ಥ ಸ್ಥಾನವನ್ನು ಪ್ರತಿಬಿಂಬಿಸುತ್ತದೆ. ಕಳೆದ ವಾರ ಜೈಶಂಕರ್ ಸಂಸತ್ತಿನಲ್ಲಿ ಉಕ್ರೇನ್ ಸಂಘರ್ಷದ ಬಗ್ಗೆ ಭಾರತದ ನಿಲುವು ಸ್ಥಿರವಾಗಿದೆ ಮತ್ತು ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು.