Tag: 12th Exam

  • 12ನೇ ತರಗತಿ ಪಾಸ್‌ ಮಾಡಿದ ಇಬ್ಬರು ಮಾಜಿ ಶಾಸಕರು

    12ನೇ ತರಗತಿ ಪಾಸ್‌ ಮಾಡಿದ ಇಬ್ಬರು ಮಾಜಿ ಶಾಸಕರು

    ಲಕ್ನೋ: ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಉತ್ತರ ಪ್ರದೇಶದ ಇಬ್ಬರು ಮಾಜಿ ಶಾಸಕರು 50ರ ಹರೆಯದಲ್ಲೂ 12ನೇ ತರಗತಿಯ ಬೋರ್ಡ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಲದೇ ಪದವಿ ಕೋರ್ಸ್‌ ತೆಗೆದುಕೊಳ್ಳುವ ಗುರಿಯನ್ನೂ ಹೊಂದಿದ್ದಾರೆ.

    ಬರೇಲಿ ಜಿಲ್ಲೆಯ ಬಿತ್ರಿ-ಚೈನ್‌ಪುರ ಕ್ಷೇತ್ರದ ಮಾಜಿ ಶಾಸಕ ರಾಜೇಶ್ ಮಿಶ್ರಾ 500ಕ್ಕೆ 263 ಅಂಕಗಳನ್ನು ಪಡೆದರೆ, ಹಸ್ತಿನಾಪುರದಿಂದ ಎರಡು ಬಾರಿ ಶಾಸಕರಾಗಿದ್ದ ಪ್ರಭುದಯಾಳ್ ವಾಲ್ಮೀಕಿ ಅವರು ಸಹ ಉತ್ತೀರ್ಣರಾಗಿದ್ದಾರೆ. ಇದನ್ನೂ ಓದಿ: ಬಾಡಿಗೆ ವಾಹನದಲ್ಲಿ ಬರುತ್ತಿದ್ದ ಯೋಧರು – ದಾಳಿಗೆ ನಕ್ಸಲರಿಂದ 50 ಕೆಜಿ ಸುಧಾರಿತ IED ಬಳಕೆ

    TET EXAM 2

    ಉತ್ತರ ಪ್ರದೇಶ ಬಿಜೆಪಿಯ ಮಾಜಿ ಶಾಸಕ ರಾಜೇಶ್ ಮಿಶ್ರಾ ಅವರು 55ನೇ ವಯಸ್ಸಿನಲ್ಲಿ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 500ರಲ್ಲಿ 263 ಅಂಕಗಳನ್ನು ಗಳಿಸುವ ಮೂಲಕ ತೇರ್ಗಡೆ ಹೊಂದಿದ್ದಾರೆ. 2017 ರಿಂದ 2022 ರವರೆಗೆ ಅಸೆಂಬ್ಲಿಯಲ್ಲಿ ಬರೇಲಿ ಜಿಲ್ಲೆಯ ಬಿತ್ರಿ-ಚೈನ್‌ಪುರ್ ಸ್ಥಾನವನ್ನು ಪ್ರತಿನಿಧಿಸಿದ್ದ ಮಿಶ್ರಾ, ಈಗ ಬಡವರಿಗೆ ಸಹಾಯ ಮಾಡಲು ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಯೋಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ 12ನೇ ತರಗತಿಯ ಪರೀಕ್ಷೆಯನ್ನು ಬರೆದಿದ್ದರು.

    ಇದೀಗ 12ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಹಿಂದಿಯಲ್ಲಿ 57, ಸಿವಿಕ್ಸ್‌ನಲ್ಲಿ 47, ಶಿಕ್ಷಣದಲ್ಲಿ 42, ಡ್ರಾಯಿಂಗ್‌ನಲ್ಲಿ 36 ಮತ್ತು ಸಮಾಜಶಾಸ್ತ್ರದಲ್ಲಿ 81 ಅಂಕಗಳನ್ನು ಪಡೆಯುವ ಮೂಲಕ ತೇರ್ಗಡೆಗೊಂಡಿದ್ದಾರೆ. ಇದನ್ನೂ ಓದಿ: ಕಷ್ಟದಲ್ಲಿದ್ದಾಗ ಕಾಫಿನಾಡಿಗರು ನನ್ನ ಅಜ್ಜಿ ಕೈ ಹಿಡಿದಿದ್ದರು, ಈಗ ಕಷ್ಟದಲ್ಲಿದ್ದೇವೆ ನಮ್ಮ ಕೈ ಹಿಡಿಯಿರಿ : ಪ್ರಿಯಾಂಕ ಗಾಂಧಿ ಮನವಿ

    ಈ ಬಗ್ಗೆ ಮಾತನಾಡಿರುವ ಬಿಜೆಪಿಯ ಮಾಜಿ ಶಾಸಕ , ಡ್ರಾಯಿಂಗ್, ಸಿವಿಕ್ಸ್ ಮತ್ತು ಶಿಕ್ಷಣದಲ್ಲಿ ನಾನು ಪಡೆದ ಅಂಕಗಳಿಂದ ತೃಪ್ತಿ ಹೊಂದಿಲ್ಲ. ನಾನು ಉತ್ತರ ಪತ್ರಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತೇನೆ ಎಂದು ತಿಳಿಸಿದರು.

    ಎರಡು ವರ್ಷಗಳ ಹಿಂದೆ, ನಾನು 10ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ತೇರ್ಗಡೆ ಹೊಂದಿದ್ದೇನೆ. ಈಗ ನಾನು 12ನೇ ತರಗತಿ ಪರೀಕ್ಷೆಯಲ್ಲಿಯೂ ಉತ್ತೀರ್ಣನಾಗಿದ್ದೇನೆ. ಈಗ, ನಾನು ಎಲ್‌ಎಲ್‌ಬಿಯನ್ನು ಮುಂದುವರಿಸಲು ಬಯಸುತ್ತೇನೆ. ಇದರಿಂದ ಬಡವರಿಗೆ ನ್ಯಾಯ ಪಡೆಯಲು ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದರು.

    ನಾನು ಶಾಸಕನಾಗಿದ್ದಾಗ, ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದ ಜನರು ಉತ್ತಮ ವಕೀಲರ ಸೇವೆಯನ್ನು ಪಡೆಯಲು ಸಾಧ್ಯವಾಗದ್ದನ್ನು ಗಮನಿಸಿದ್ದೆ. ಇದರಿಂದಾಗಿ ಅವರಿಗೆ ನ್ಯಾಯ ಸಿಗುವುದಿಲ್ಲ ಎಂದು ನಾನು ಅರಿತುಕೊಂಡೆ. ಈ ಹಿನ್ನೆಲೆಯಲ್ಲಿ ನಾನು ವಕೀಲನಾಗುತ್ತೇನೆ ಎಂದ ಅವರು, ಬೋರ್ಡ್ ಪರೀಕ್ಷೆಗಳಲ್ಲಿ ಯಾವುದೇ ನಕಲು ನಡೆದಿಲ್ಲ ಮತ್ತು ತಪಾಸಣೆ ಕಟ್ಟುನಿಟ್ಟಾಗಿದೆ ಎಂದು ಈ ವೇಳೆ ತಿಳಿಸಿದರು. ಇದನ್ನೂ ಓದಿ: ಶೆಟ್ಟರ್ ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಫೇಲ್ ಆದೆ: ಜೋಶಿ

    ಪರೀಕ್ಷೆಯಲ್ಲಿ ಯಾವುದೇ ನಕಲು ನಡೆಯದಂತೆ 8,753 ಪರೀಕ್ಷಾ ಕೇಂದ್ರಗಳಲ್ಲಿ ವೈಸ್‌ ರೆಕಾರ್ಡರ್‌ಗಳೊಂದಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪ್ರೌಢ ಶಿಕ್ಷಣ ನಿರ್ದೇಶಕ ಮಹೇಂದ್ರ ದೇವ್ ಮಂಗಳವಾರ ತಿಳಿಸಿದ್ದಾರೆ.

  • ದ್ವಿತೀಯ ಪಿಯುಸಿ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್: ಸುರೇಶ್ ಕುಮಾರ್

    ದ್ವಿತೀಯ ಪಿಯುಸಿ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್: ಸುರೇಶ್ ಕುಮಾರ್

    ಬೆಂಗಳೂರು: ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಪರೀಕ್ಷೆ ಪೋಷಕರು, ಮಕ್ಕಳು ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಮಕ್ಕಳ ಯೋಗಕ್ಷೇಮ, ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ದ್ವಿತೀಯ ಪರೀಕ್ಷೆಯನ್ನು ರದ್ದು ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಮಕ್ಕಳ ಪರೀಕ್ಷೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ 2ನೇ ಅಲೆ ಹಿನ್ನೆಲೆ ಎಸ್‍ಎಸ್‍ಎಲ್‍ಸಿ ಮತ್ತಿ ದ್ವಿತೀಯ ಪಿಯುಸಿ ಮಾಡಬೇಕಾ ಬೇಡವಾ ಅಂತ ಚರ್ಚೆ ಆಗಿತ್ತು. ಬೇಕು ಅನ್ನೋದು, ಬೇಡ ಅನ್ನೋರ ವರ್ಗ ಇದೆ. ಹಿರಿಯ ಮಾಧ್ಯಮ ಮಿತ್ರರ ಸಲಹೆ ಪಡೆದಿದ್ದೇನೆ. ಪೋಷಕರು, ಮಕ್ಕಳು ಅಭಿಪ್ರಾಯ ಸಂಗ್ರಹ ಮಾಡಿ ಪಿಯುಸಿ ಪರೀಕ್ಷೆ ಮಾಡಿದ್ರೆ 12 ದಿನ ಟೈಂ ಬೇಕು. ಹೀಗಾಗಿ ಪರೀಕ್ಷೆ ರದ್ದು ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು

    ಸಚಿವರು ಹೇಳಿದ್ದೇನು?
    ಮಕ್ಕಳ ಯೋಗಕ್ಷೇಮ, ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ದ್ವೀತಿಯ ಪಿಯುಸಿ ಪರೀಕ್ಷೆ ಮಾಡದೇ ಇರಲು ಈಗ ನಿರ್ಧಾರ ಮಾಡಲಾಗಿದೆ. ಈ ವರ್ಷದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದ್ದೇ ಗ್ರೇಡ್ ಆಧಾರದಲ್ಲಿ ಪಾಸ್ ಹಾಗೂ ಕಲಿಕಾ ಮಟ್ಟದಲ್ಲಿ ಅಂಕ ನೀಡಿ ಪಾಸ್ ಮಾಡಲು ನಿರ್ಧಾರ ಮಾಡಿದ್ದೇವೆ. ಇದನ್ನೂ ಓದಿ: ಕರ್ನಾಟಕದಲ್ಲಿ ಎಸ್‍ಎಲ್‍ಎಲ್‍ಸಿ ಪರೀಕ್ಷೆ ನಡೆಯುತ್ತೆ, ಎಲ್ಲರೂ ಪಾಸ್

    ಕೆಲ ರಾಜ್ಯದಲ್ಲಿ ಎಕ್ಸಾಂ ರದ್ದು ಮಾಡಿದ ಮೇಲೆ ಆ ರಾಜ್ಯದವರ ಜೊತೆ ಮಾತಾಡಿದ್ದೇವೆ. ಯಾವ ಆಧಾರದಲ್ಲಿ ಪಾಸ್ ಮಾಡ್ತೀರಾ ಅಂತ ಕೇಳಿದ್ದೇವೆ. ಯಾವುದೇ ಮಾನದಂಡ ಯಾರು ಕೊಟ್ಟಿಲ್ಲ. ಮುಂದೆ ಯೋಜನೆ ಮಾಡೋದಾಗಿ ಹೇಳಿದ್ದಾರೆ. ದ್ವಿತಿಯ ಪಿಯುಸಿ ಪರೀಕ್ಷೆ ರದ್ದು ಮಾಡಿದ್ದೇವೆ. ಎಲ್ಲಾ ಮಕ್ಕಳಿಗೆ ಯಾವ ಆಧಾರಲ್ಲಿ ಪಾಸ್ ಮಾಡಬಹುದು ಅಂತ ಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ.  

    ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ನಾವು ಕೆಲ ಮಾನದಂಡವನ್ನ ರಿಲೀಸ್ ಮಾಡುತ್ತೇವೆ. ಆ ಆಧಾರದಲ್ಲಿ ಎಬಿಸಿ ಮಾದರಿ ಗ್ರೇಡ್ ಕೊಡ್ತೀವಿ. ವಿದ್ಯಾರ್ಥಿಗಳಿಗೆ ಆ ಫಲಿತಾಂಶ ಇಷ್ಟ ಆಗದೇ ಹೋದ್ರೆ ಕೋವಿಡ್ ನಿಯಂತ್ರಣವಾದರೆ ಮಕ್ಕಳಿಗೆ ಪರೀಕ್ಷೆ ಮಾಡೋ ಬಗ್ಗೆ ಚಿಂತನೆ ಮಾಡುತ್ತೇವೆ. ದ್ವಿತಿಯ ಪಿಯುಸಿ ಮಕ್ಕಳು ಗ್ರೇಡ್ ಆಧಾರದಲ್ಲಿ ಪಾಸ್ ಮಾಡುತ್ತೇವೆ.

    ವಿದ್ಯಾರ್ಥಿಗಳು ಗೊಂದಲ ಆಗೋದು ಬೇಡ. ಎಲ್ಲಾ ವಿದ್ಯಾರ್ಥಿಗಳು ಗ್ರೇಡ್ ಆಧಾರಲ್ಲಿ ಪಾಸ್ ಮಾಡಲಾಗುತ್ತದೆ. ಸಿಇಟಿ, ನೀಟ್, ಜೆಇಇ ಪರೀಕ್ಷೆಗೆ ಸಿದ್ಧರಾಗಿರಿ. ನಿಮ್ಮ ಜೀವನ ಉಜ್ವಲ ಆಗಲಿ ಎಂದು ದ್ವಿತಿಯ ಪಿಯಸಿ ಮಕ್ಕಳಿಗೆ ಸಚಿವರುಗೆ ಶುಭ ಕೋರಿದ್ದಾರೆ.

  • ಫೇರ್‌ವೆಲ್‌ಗೆ ಅನುಮತಿ ನೀಡಿ, ನೇಹಾಳನ್ನ ಸೀರೆಯಲ್ಲಿ ನೋಡಬೇಕು: ಪ್ರಧಾನಿಗೆ ವಿದ್ಯಾರ್ಥಿಯ ಮನವಿ

    ಫೇರ್‌ವೆಲ್‌ಗೆ ಅನುಮತಿ ನೀಡಿ, ನೇಹಾಳನ್ನ ಸೀರೆಯಲ್ಲಿ ನೋಡಬೇಕು: ಪ್ರಧಾನಿಗೆ ವಿದ್ಯಾರ್ಥಿಯ ಮನವಿ

    ನವದೆಹಲಿ: ಕೊರೊನಾದಿಂದಾಗಿ ದೇಶದಲ್ಲಿ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‍ಇ) 12ನೇ ತರಗತಿ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್‌ನಲ್ಲಿ ತಿಳಿಸುತ್ತಿದ್ದಂತೆ, 12ನೇ ತರಗತಿ ವಿದ್ಯಾರ್ಥಿಯೊಬ್ಬ ನೇಹಾಳನ್ನು ಸೀರೆಯಲ್ಲಿ ನೋಡಬೇಕು ಫೇರ್‌ವೆಲ್‌ಗೆ ಅವಕಾಶ ಕೊಡಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾನೆ.

    ಮೋದಿ ಅವರು ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ರದ್ದು ಗೊಳ್ಳುತ್ತಿದ್ದಂತೆ, ಭಾರತ ಸರ್ಕಾರ ಕೊರೊನಾ ಎರಡನೇ ಅಲೆಯ ಪರಿಣಾಮ ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ರದ್ದು ಮಾಡಿದೆ. ನಮ್ಮ ದೇಶದ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಸರ್ಕಾರ ಅತ್ಯಂತ ಮಹತ್ವ ನೀಡುತ್ತದೆ. ವಿದ್ಯಾರ್ಥಿಗಳ ಆರೋಗ್ಯದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಹಾಗಾಗಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ:ಮುಂದುವರಿದ ಸಂಘರ್ಷ – ಸಿಎಂ ಮಮತಾ ಬ್ಯಾನರ್ಜಿ 9 ಪ್ರಶ್ನೆಗಳಿಗೆ ಕೇಂದ್ರದ ಉತ್ತರ

    ಈ ರೀತಿ ಮೋದಿ ಟ್ವೀಟ್ ಮಡುತ್ತಿದ್ದಂತೆ ಕುಕಿ ಅಗರ್ವಾಲ್ ಎಂಬ ಹೆಸರಿನ ವಿದ್ಯಾರ್ಥಿಯೊಬ್ಬ, ಮೋದಿ ಸರ್ ದಯಮಾಡಿ ಫೇರ್ ವೆಲ್ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಿ. ಏಕೆಂದರೆ ನಾನು 12ನೇ ತರಗತಿಯ ನೇಹಾಳನ್ನು ಸೀರೆಯಲ್ಲಿ ನೋಡಬೇಕು ಎಂದು ಕಮೆಂಟ್ ಮಾಡಿದ್ದಾನೆ. ಇದೀಗ ಈ ಕಮೆಂಟ್ ವೈರಲ್ ಆಗತೊಡಗಿದೆ.

    ಕುಕಿ ಅಗರ್ವಾಲ್‍ನ ಟ್ವೀಟ್ ನೋಡಿ ನೆಟ್ಟಿಗರು ಹಲವು ರೀತಿಯ ಪ್ರಶ್ನೆ ಮತ್ತು ಹಾಸ್ಯ ಮಡುತ್ತಿದ್ದಾರೆ. ಈ ಟ್ವೀಟ್‍ನ್ನು ಹಲವರು ಶೇರ್ ಹಾಗೂ ಲೈಕ್ ಮಾಡುತ್ತಿದ್ದಾರೆ.