Tag: 12345

  • ಭಾರತೀಯರು ಒಂದೇ ರೀತಿಯ ಪಾಸ್‌ವರ್ಡ್‌ ಬಳಸ್ತಾರಂತೆ!

    ಭಾರತೀಯರು ಒಂದೇ ರೀತಿಯ ಪಾಸ್‌ವರ್ಡ್‌ ಬಳಸ್ತಾರಂತೆ!

    ನವದೆಹಲಿ: ಕೋವಿಡ್‌ ಸಾಂಕ್ರಾಮಿಕದಿಂದಾಗಿ ಕಂಪೆನಿಗಳಲ್ಲಿ ಬಂದು ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್‌ ನೀಡಲಾಯಿತು. ಎಷ್ಟೋ ಕೆಲಸಗಳು ಡಿಜಟಲೀಕರಣಗೊಂಡವು. ಕಂಪೆನಿಯ ಡಿಜಿಟಲ್‌ ದಾಖಲೆಗಳ ಗೌಪ್ಯತೆ ದೃಷ್ಟಿಯಿಂದ ಸೈಬರ್‌ ಭದ್ರತೆ ಕಲ್ಪಿಸಲಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಭಾರತೀಯರು ಪಾಸ್‌ವರ್ಡ್‌ ಅಳವಡಿಸಿಕೊಳ್ಳುವ ಬಗ್ಗೆ “ನಾರ್ಡ್‌ಪಾಸ್‌” ನಡೆಸಿರುವ ಸಂಶೋಧನೆಯಲ್ಲಿ ಕುತೂಹಲಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

    ಹೌದು, ಜಾಗತಿಕ ಪಾಸ್‌ವರ್ಡ್‌ ವ್ಯವಸ್ಥಾಪಕ ಸಂಸ್ಥೆ ನಾರ್ಡ್‌ಪಾಸ್‌, 50 ದೇಶಗಳ ಪಾಸ್‌ವರ್ಡ್‌ಗಳ ಬಗ್ಗೆ ಅಧ್ಯಯನ ನಡೆಸಿದೆ. ಅದರಲ್ಲಿ ಭಾರತೀಯರು ಅಳವಡಿಸಿಕೊಳ್ಳುವ ಪಾಸ್‌ವರ್ಡ್‌ಗಳಿಗೆ ಸಂಬಂಧಿಸಿದಂತೆ ಅಚ್ಚರಿದಾಯಕ ಅಂಶವನ್ನು ತೆರೆದಿಟ್ಟಿದೆ. ಇದನ್ನೂ ಓದಿ: ಆಂಧ್ರದ ಕಡಪಾದಲ್ಲಿ ಪ್ರವಾಹ – ಮೂವರು ಸಾವು, 30 ಮಂದಿ ನಾಪತ್ತೆ

    ಬಹುಪಾಲು ಭಾರತೀಯರು ಒಂದೇ ಬಗೆಯ ಪಾಸ್‌ವರ್ಡ್‌ ಬಳಸಿದ್ದಾರೆ. ಸಾಮಾನ್ಯವಾಗಿ 12345, 123456, 123456789, 12345678, india123, 1234567890, 1234567, abc123 ಹೀಗೆ ಒಂದೇ ರೀತಿಯಲ್ಲಿ ಪಾಸ್‌ವರ್ಡ್‌ಗಳನ್ನು ಸೆಟ್‌ ಮಾಡಿಕೊಂಡಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ ಜೊತೆ ಆರ್‌ಸಿಬಿಗೂ ವಿದಾಯ ಹೇಳಿದ ಎಬಿಡಿ

    india123 ಅನ್ನು ಹೊರತುಪಡಿಸಿ ಉಳಿದ ಎಲ್ಲಾ ಪಾಸ್‌ವರ್ಡ್‌ಗಳನ್ನು ಒಂದು ಸೆಕೆಂಡಿಗಿಂತ ಕಡಿಮೆ ಅವಧಿಯಲ್ಲಿ ಕ್ರ್ಯಾಕ್‌ ಮಾಡಬಹುದು ಎಂದು ನಾರ್ಡ್‌ಪಾಸ್‌ ಹೇಳಿದೆ. india123 ಪಾಸ್‌ವರ್ಡ್‌ ಅನ್ನು ಕ್ರ್ಯಾಕ್‌ ಮಾಡಲು 17 ನಿಮಿಷ ತೆಗೆದುಕೊಳ್ಳಲಾಯಿತು. ಈ ಸಮಯದ ಅವಧಿ ಕೇವಲ ಸೂಚಕವಾಗಿದ್ದರೂ, ಪಾಸ್‌ವರ್ಡ್‌ಗಳು ಎಷ್ಟು ಸುರಕ್ಷಿತ ಎಂಬುದನ್ನೂ ತಿಳಿಸುತ್ತದೆ ಎನ್ನಲಾಗಿದೆ.

    ಪಾಸ್‌ವರ್ಡ್‌ಗಳು ದುರ್ಬಲವಾಗುತ್ತಿವೆ. ಸುರಕ್ಷತೆ ಪಾಸ್‌ವರ್ಡ್‌ಗಳನ್ನು ಜನರು ನಿರ್ವಹಿಸುತ್ತಿಲ್ಲ ಎಂದು ನಾರ್ಡ್‌ಪಾಸ್‌ ಸಿಇಒ ತಿಳಿಸಿದ್ದಾರೆ.

    ಹ್ಯಾಕರ್‌ಗಳಿಗೆ ದುರ್ಬಲ ಪಾಸ್‌ವರ್ಡ್‌ಗಳೇ ವರದಾನ. ಇದನ್ನು ಜನರು ಗಂಭೀರವಾಗಿ ಪರಿಗಣಿಸಬೇಕು ಎಂದು ಮುಂಬೈ ಪೊಲೀಸರು ಸೈಬರ್‌ ಅಪರಾಧ ಜಾಗೃತಿ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರೆ.