Tag: 110

  • ನಡೆದಾಡೋ ದೇವರಿಗೆ 110ನೇ ಜನ್ಮದಿನ- ಪ್ರಧಾನಿ ಮೋದಿ ಶುಭಾಶಯ

    ನಡೆದಾಡೋ ದೇವರಿಗೆ 110ನೇ ಜನ್ಮದಿನ- ಪ್ರಧಾನಿ ಮೋದಿ ಶುಭಾಶಯ

    ತುಮಕೂರು: ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಇಂದು 110ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶ್ರೀಗಳಿಗೆ ಶುಭಾಶಯ ತಿಳಿಸಿದ್ದಾರೆ.

    ಭಕ್ತರ ದಂಡು: ಜನ್ಮದಿನದ ಪ್ರಯುಕ್ತ ಶ್ರೀ ಸ್ವಾಮೀಜಿ ಅವರಿಗೆ ಶುಭಕೋರಲು ರಾತ್ರಿಯಿಂದಲೇ ಸಾವಿರಾರು ಮಂದಿ ದರ್ಶನಕ್ಕೆ ಕಾದು ಕುಳಿತಿದ್ದಾರೆ. ಬೆಳಗ್ಗೆ 3 ಗಂಟೆಯಿಂದಲೇ ಹಲವು ಪೂಜಾ ಕಾರ್ಯಗಳು ಶುರುವಾಗಿದ್ದು ಶ್ರೀಗಳು ಹಳೇಯ ಮಠದಲ್ಲಿ ಇಷ್ಟಲಿಂಗ ಪೂಜೆಯನ್ನ ನೆರವೇರಿಸಿದ್ರು. ಪೂಜೆ ಮುಗಿಸಿ ಶ್ರೀಗಳು ಹೊರಬರುವುದನ್ನೇ ಸಾವಿರಾರು ಜನ ಕಾಯುತ್ತಾ ಕುಳಿತಿದ್ದಾರೆ. ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು, ಕರ್ನಾಟಕ ಸೇರಿ ದೇಶ ವಿದೇಶಗಳಿಂದಲೂ ಬಂದಿದ್ದು ಶ್ರೀಗಳ 110ನೇ ವರ್ಷದ ಜನ್ಮದಿನಾಚರಣೆಯನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.

    ಬೆಳಗ್ಗೆ 10.30ಕ್ಕೆ ರಾಜ್ಯಪಾಲರಾದ ವಿ.ಆರ್.ವಾಲಾರವರು ಆಗಮಿಸಲಿದ್ದು, ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಂದನೆ ನಡೆಯಲಿದೆ. ಬಳಿಕ ಮಠದ ಆವರಣದಲ್ಲಿ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಶ್ರೀಗಳು ಮಠದ ಆವರಣದಲ್ಲಿ ವೇದಿಕೆ ಹತ್ತಿದರೆ 10 ಗಂಟೆವರೆಗೂ ದೂರದ ಊರುಗಳಿಂದ ಬರುವ ಭಕ್ತರಿಗೆ ಆಶೀರ್ವಾದ ಮಾಡಲಿದ್ದಾರೆ.

    ಮೋದಿ ಶುಭಾಶಯ: ಸ್ವಾಮೀಜಿ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ. ಸ್ವಾಮೀಜಿಯವರ ಸೇವೆ ಸಮಾಜದ ಜನರ ಜೀವನದ ಮೇಲೆ ಧನಾತ್ಮಕ ಪ್ರಭಾವ ಬಿರಿದೆ ಅಂತಾ ಪ್ರಧಾನಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

    ಉಪಹಾರದ ವ್ಯವಸ್ಥೆ: ದೂರದ ಊರುಗಳಿಂದ ಬಂದಿರುವ ಸಾವಿರಾರು ಜನರಿಗೆ ಬೆಳ್ಳಂಬೆಳಗ್ಗೆಯ ತಿಂಡಿ ವ್ಯವಸ್ಥೆಯನ್ನೂ ಮಠದಲ್ಲಿ ಮಾಡಲಾಗಿದೆ.. ಈಗಾಗಲೇ 3 ಸಾವಿರಕ್ಕೂ ಹೆಚ್ಚು ಭಕ್ತರು ತಿಂಡಿ ಸೇವನೆ ಮಾಡಿದ್ದಾರೆ. ಕೇಸರಿಬಾತ್ ಉಪ್ಪಿಟ್ಟು ಭಕ್ತರಿಗೆ ತಿಂಡಿಯಾಗಿ ನೀಡಲಾಗಿದೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಇಡೀ ದಿನ ಅನ್ನದಾಸೋಹ ನಡೆಯಲಿದೆ. ಮಠದ ಆವರಣದಲ್ಲಿ ಇಂದು ಸಂಜೆ 6ಕ್ಕೆ ನಡೆಯಲಿರುವ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳು, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಮುಂದಾಳತ್ವದಲ್ಲಿ ಸಿದ್ಧಲಿಂಗ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಹಲವು ಕಾರ್ಯಕ್ರಮಗಳು ಜರುಗಲಿವೆ.

    ಇದನ್ನೂ ಓದಿ:  ಸಿದ್ದಗಂಗಾ ಶ್ರೀಗಳಿಗೆ 110ನೇ ಹುಟ್ಟುಹಬ್ಬ- ತುಮಕೂರಿನಲ್ಲಿ ಸಂಭ್ರಮ ಜೋರು