Tag: 10th class

  • 10ನೇ ತರಗತಿ ಗಣಿತ, ವಿಜ್ಞಾನ ವಿಷಯಗಳ ಪಾಸಿಂಗ್ ಮಾರ್ಕ್ಸ್ 20ಕ್ಕೆ ಇಳಿಸಿದ ಮಹಾರಾಷ್ಟ್ರ

    10ನೇ ತರಗತಿ ಗಣಿತ, ವಿಜ್ಞಾನ ವಿಷಯಗಳ ಪಾಸಿಂಗ್ ಮಾರ್ಕ್ಸ್ 20ಕ್ಕೆ ಇಳಿಸಿದ ಮಹಾರಾಷ್ಟ್ರ

    ಮುಂಬೈ: ರಾಜ್ಯದಲ್ಲಿ 10ನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಉತ್ತೀರ್ಣ ಹೊಂದಲು ಕನಿಷ್ಠ ಅಂಕವನ್ನು 20ಕ್ಕೆ ಇಳಿಸಲಾಗಿದೆ ಎಂದು ಮಹಾರಾಷ್ಟ್ರ (Maharashtra) ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (State Council for Educational Research and Training) ನಿರ್ಧರಿಸಿದೆ.

    10ನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಉತ್ತೀರ್ಣ ಹೊಂದಲು ಕನಿಷ್ಠ ಅಂಕವನ್ನು (ಪಾಸಿಂಗ್ ಮಾರ್ಕ್ಸ್) 35 ರಿಂದ 20ಕ್ಕೆ ಇಳಿಸಿದೆ. ಈ ಕುರಿತು ರಾಜ್ಯದ ಹೊಸ ಪಠ್ಯಕ್ರಮದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.ಇದನ್ನೂ ಓದಿ: ವಾಯುಮಾಲಿನ್ಯದಿಂದ ವಾರ್ಷಿಕ 33 ಸಾವಿರ ಮಂದಿ ಸಾವು

    ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಂಡಳಿಯ ಅಧ್ಯಕ್ಷ ಶರದ್ ಗೋಸಾವಿ ಮಾತನಾಡಿ, ವಿದ್ಯಾರ್ಥಿಗಳು ಕಡಿಮೆ ಅಂಕವನ್ನು ಹೊಂದಿದ್ದರೂ ಕೂಡ ಉತ್ತೀರ್ಣರಾಗುತ್ತಾರೆ. ಜೊತೆಗೆ ಕಡಿಮೆ ಅಂಕಗಳನ್ನು ಗಳಿಸಿದರೂ ಕೂಡ ಪ್ರಮಾಣಪತ್ರದಲ್ಲಿ `ಉತ್ತೀರ್ಣ’ ಎಂದೇ ಉಲ್ಲೇಖವಾಗಿರುತ್ತದೆ. ಆದರೆ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಕಡಿಮೆ ಅಂಕವನ್ನು ಗಳಿಸಿದರೇ ಉನ್ನತ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ. ಗಣಿತ ಹಾಗೂ ವಿಜ್ಞಾನ ವಿಷಯಗಳ ಯಾವುದೇ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ.

    ಒಂದು ವೇಳೆ ಕನಿಷ್ಠ ಅಂಕಗಳನ್ನು ಗಳಿಸುವಲ್ಲಿ ವಿಫಲವಾದರೆ ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ತೆಗೆದುಕೊಳ್ಳದೇ ಕಲಾ ವಿಭಾಗದ ವಿಷಯಗಳನ್ನು ತೆಗೆದುಕೊಳ್ಳುವಲ್ಲಿ ಪ್ರೇರಣೆ ನೀಡಿದಂತಾಗುತ್ತದೆ. ಹೊಸ ಪಠ್ಯಕ್ರಮವನ್ನು ರಾಜ್ಯಾದ್ಯಂತ ಜಾರಿಗೆ ತಂದ ಬಳಿಕ ಉತ್ತೀರ್ಣ ಅಂಕಗಳ ಬದಲಾವಣೆಯನ್ನು ಪರಿಚಯಿಸಲಾಗುವುದು ಎಂದರು.

    ಮಂಡಳಿಯ ನಿರ್ದೇಶಕ ರಾಹುಲ್ ರೇಖಾವರ್ ಮಾತನಾಡಿ, ಈ ಬದಲಾವಣೆಯು ಈಗಾಗಲೇ ಶಾಲಾ ಶಿಕ್ಷಣ ಇಲಾಖೆಯಿಂದ ಅನುಮೋದಿಸಲ್ಪಟ್ಟಿರುವ ಹೊಸ ಪಠ್ಯಕ್ರಮದ ಭಾಗವಾಗಿದೆ. ವಿದ್ಯಾರ್ಥಿಗಳನ್ನು ವ್ಯವಸ್ಥೆಯಿಂದ ಅನ್ಯಾಯವಾಗಿ ಹೊರಹಾಕದಂತೆ ನೋಡಿಕೊಳ್ಳಲು ಈ ಬದಲಾವಣೆಯನ್ನು ಮಾಡಲಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಚನ್ನಪಟ್ಟಣಕ್ಕೆ ನಿಖಿಲ್‌ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿ

  • 10ನೇ ತರಗತಿವರೆಗೂ ಆರ್‌ಟಿಇ ವಿಸ್ತರಣೆಗೆ ಆಮ್ ಆದ್ಮಿ ಪಾರ್ಟಿ ಆಗ್ರಹ

    10ನೇ ತರಗತಿವರೆಗೂ ಆರ್‌ಟಿಇ ವಿಸ್ತರಣೆಗೆ ಆಮ್ ಆದ್ಮಿ ಪಾರ್ಟಿ ಆಗ್ರಹ

    ಬೆಂಗಳೂರು: ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಗೆ ತಿದ್ದುಪಡಿ ತಂದು, ಅದರ ವ್ಯಾಪ್ತಿಯನ್ನು 9 ಹಾಗೂ 10ನೇ ತರಗತಿಗಳಿಗೂ ವಿಸ್ತರಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

    ಪಕ್ಷದ ಮಾಧ್ಯಮ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿಯ ಮಹಿಳಾ ಮುಖಂಡರಾದ ಉಷಾ ಮೋಹನ್, ಪ್ರಸ್ತುತ ಎಂಟನೇ ತರಗತಿಯವರೆಗೆ ಮಾತ್ರ ಆರ್‍ಟಿಇ ಕಾಯ್ದೆ ಅನ್ವಯಿಸುತ್ತಿದೆ. ಆದ್ದರಿಂದ 9 ಹಾಗೂ 10ನೇ ತರಗತಿ ಸೇರುವ ಬಡ ಕುಟುಂಬದ ವಿದ್ಯಾರ್ಥಿಗಳಿಂದ ಖಾಸಗಿ ಶಾಲೆಗಳು ಭಾರೀ ಮೊತ್ತದ ಶುಲ್ಕ ಪಡೆಯುತ್ತಿವೆ. ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ, ಮುಂದಿನ ಶಿಕ್ಷಣದಿಂದ ವಂಚಿತರಾಗಬೇಕಾದ ಅನಿವಾರ್ಯ ಸ್ಥಿತಿ ಎದುರಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ಶೀಘ್ರವೇ ಕಾಯ್ದೆಗೆ ತಿದ್ದುಪಡಿ ತಂದು ಬಡ ವಿದ್ಯಾರ್ಥಿಗಳ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

    ಕೋವಿಡ್ ಹಾಗೂ ಲಾಕ್‍ಡೌನ್‍ನಿಂದಾಗಿ ಬಡ ಪೋಷಕರು ಎರಡು ವರ್ಷಗಳ ಕಾಲ ಆದಾಯವಿಲ್ಲದೇ ಆರ್ಥಿಕವಾಗಿ ದುರ್ಬಲವಾಗಿದ್ದಾರೆ. ಆದ್ದರಿಂದ 2020-21ನೇ ಸಾಲಿನಿಂದಲೇ ಅನ್ವಯಿಸುವಂತೆ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತರಬೇಕು. ಅಂದರೆ ಆರ್‍ಟಿಎ ವಿದ್ಯಾರ್ಥಿಗಳ 9 ಹಾಗೂ 10ನೇ ತರಗತಿಗಳ ಕೋವಿಡ್ ಅವಧಿಯ ಎರಡು ವರ್ಷದ ಶಾಲಾ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‍ರವರು ಈ ಬಗ್ಗೆ ನಿರ್ಲಕ್ಷ್ಯ ಮುಂದುವರಿಸಿದರೆ ಆಮ್ ಆದ್ಮಿ ಪಾರ್ಟಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದೆ ಎಂದು ಉಷಾ ಮೋಹನ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

    BC Nagesh

    ಚಿಕ್ಕಪೇಟೆ ವಾರ್ಡ್ ಎಎಪಿ ಅಧ್ಯಕ್ಷರಾದ ಗೋಪಿನಾಥ್‍ರವರು ಮಾತನಾಡಿ, ಖಾಸಗಿ ಶಾಲೆಯ ದುಬಾರಿ ಶುಲ್ಕ ಕಟ್ಟಲು ಸಾಧ್ಯವಾಗದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ಸೇರಲು ಬಯಸುತ್ತಿದ್ದಾರೆ. ಆದರೆ ಅವರಿಗೆ ವರ್ಗಾವಣೆ ಪತ್ರ (ಟಿಸಿ) ನೀಡಲು ಕೆಲವು ಖಾಸಗಿ ಶಾಲೆಗಳು ಸತಾಯಿಸುತ್ತಿವೆ. ಭಾರೀ ಹಣ ಪಡೆದು ವರ್ಗಾವಣೆ ಪತ್ರ ನೀಡುತ್ತಿರುವ ಘಟನೆಗಳು ಅಲ್ಲಲ್ಲಿ ಕಂಡುಬರುತ್ತಿವೆ. ಬಡವರ ಅಸಹಾಯಕತೆಯ ಲಾಭ ಪಡೆಯುವ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರವು ವರ್ಗಾವಣೆ ಪತ್ರ ಇಲ್ಲದೆಯೇ ಸರ್ಕಾರಿ ಶಾಲೆ ಸೇರುವ ವ್ಯವಸ್ಥೆ ಕಲ್ಪಿಸಿದ್ದು, ರಾಜ್ಯದಲ್ಲೂ ಅದೇ ಮಾದರಿಯ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

  • 10ನೇ ತರಗತಿ ಬಾಲಕಿ ಮೇಲೆ ಗ್ಯಾಂಗ್ ರೇಪ್ – ಪೊಲೀಸ್ ಮಗನ ಜೊತೆ ಸಿಆರ್​ಪಿಎಫ್​  ಯೋಧನಿಂದ ಕೃತ್ಯ

    10ನೇ ತರಗತಿ ಬಾಲಕಿ ಮೇಲೆ ಗ್ಯಾಂಗ್ ರೇಪ್ – ಪೊಲೀಸ್ ಮಗನ ಜೊತೆ ಸಿಆರ್​ಪಿಎಫ್​ ಯೋಧನಿಂದ ಕೃತ್ಯ

    – ಪೋಲೀಸ್ ಲೋಗೋ ಇರುವ ಕಾರನ್ನೇ ಬಳಸಿ ಕೃತ್ಯ

    ಲಕ್ನೋ: ಸಿಆರ್​ಪಿಎಫ್​ ಯೋಧ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಮಗ ಸೇರಿ ನಾಲ್ವರು 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ಉತ್ತರ ಪ್ರದೇಶದ ಮಿರ್ಜಾಪುರದ ಹಳಿಯಾ ಎಂಬಲ್ಲಿ ಘಟನೆ ನಡೆದಿದ್ದು, ಆರೋಪಿಗಳಾದ ಜೈಲರ್ ಮಗ ಜೈ ಪ್ರಕಾಶ್, ಸುಲ್ತಾನ್‍ಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಆರ್​ಪಿಎಫ್​ ಕಾನ್ಸ್‍ಟೇಬಲ್ ಮಹೇಂದ್ರ ಕುಮಾರ್ ಯಾದವ್, ಲವ್ ಕುಮಾರ್ ಪಾಲ್, ಗಣೇಶ್ ಪ್ರಸಾದ್ ಬಂಧಿತ ಆರೋಪಿಗಳು. ಪೊಲೀಸ್ ಲೋಗೋ ಇರುವ ಕಾರಿನಲ್ಲೇ ವಿದ್ಯಾರ್ಥಿನಿಯನ್ನು ಅಪಹರಿಸಿ ಕೃತ್ಯ ಎಸಗಿದ್ದಾರೆ.

    ಹಳಿಯಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ದೇವಿವರ್ ಶುಕ್ಲಾ ಈ ಕುರಿತು ಮಾಹಿತಿ ನೀಡಿ, ಆರೋಪಿಗಳ ವಿರುದ್ಧ ಅಪಹರಣ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಆರೋಪಿಗಳು ಹಳಿಯಾದ ನಿರ್ಜನ ಪ್ರದೇಶದಲ್ಲಿ 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ನಾಲ್ವರು ಆರೋಪಿಗಳ ಪೈಕಿ ಒಬ್ಬ ನಿವೃತ್ತ ಜೈಲರ್ ಬ್ರಿಜ್‍ಲಾಲ್ ಮೌರ್ಯ ಅವರ ಮಗ ಜೈ ಪ್ರಕಾಶ್ ಮೌರ್ಯ ಆಗಿದ್ದಾನೆ ಎಂದು ವಿವರಿಸಿದರು.

    ಜೈ ಪ್ರಕಾಶ್ ಸಹೋದರಿ ಮದುವೆಯ ನಂತರ ಹಳಿಯಾದಲ್ಲಿಯೇ ವಾಸವಿದ್ದು, ಈತ ಪದೇ ಪದೆ ಸಹೋದರಿ ಮನೆಗೆ ಭೇಟಿ ನೀಡುತ್ತಿದ್ದ. ಆಗ ಕೆಲವು ತಿಂಗಳ ಹಿಂದೆ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಎಂದು ಶುಕ್ಲಾ ಮಾಹಿತಿ ನೀಡಿದ್ದಾರೆ.

    ಸಂತ್ರಸ್ತೆಯ ತಂದೆ ಈ ಕುರಿತು ಪ್ರತಿಕ್ರಿಯಿಸಿ, ಜೈ ಶಂಕರ್ ಬಾಲಕಿಯ ಮೊಬೈಲ್‍ಗೆ ಕರೆ ಮಾಡಿದ್ದಾನೆ. ನಂತರ ಊರಿನ ಹೊರಗಡೆ ನನ್ನನ್ನು ಭೇಟಿಯಾಗು ಸೂಚಿಸಿದ್ದಾನೆ. ನಂತರ ಕಾರಿನಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಆ ಸ್ಥಳಕ್ಕೆ ಜೈ ಶಂಕರ್ ತೆರಳಿದ್ದ. ನಾಲ್ವರೂ ಸೇರಿ ಅವಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದು, ಅಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿದ್ದಾರೆ.

    ಜೈ ಪ್ರಕಾಶ್, ಲುವ್ ಕುಮಾರ್ ಪಾಲ್, ಗಣೇಶ್ ಪ್ರಸಾದ್ ಹಾಗೂ ಸುಲ್ತಾನ್‍ಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಆರ್ ಪಿಎಫ್  ಪೇದೆ ಮಹೇಂದ್ರ ಕುಮಾರ್ ಯಾದವ್ ನಾಲ್ವರ ವಿರುದ್ಧ ಬಾಲಕಿಯ ತಂದೆ ಪ್ರಕರಣ ದಾಖಲಿಸಿದ್ದಾರೆ.

    ಕಾರನ್ನು ನಿಲ್ಲಿಸಿದಾಗ ಬಾಲಕಿ ಅಳಲು ಪ್ರಾರಂಭಿಸಿದ್ದು, ಆಗ ಕಾರಿನ ಸೈರನ್ ಶಬ್ದವನ್ನು ಜೋರು ಮಾಡಿದ್ದಾರೆ. ಪರಿಶೀಲನೆಗೆ ತೆರಳಿದಾಗ ಬಾಲಕಿಯನ್ನು ಕರೆದೊಯ್ದಿದ್ದ ಕಾರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರು ಮೌರ್ಯ ಅವರಿಗೆ ಸೇರಿದ್ದಾಗಿದ್ದು, ಇದರ ಮೇಲೆ ಹೇಗೆ ಪೊಲೀಸ್ ಲೋಗೋ ಹಾಕಿದ್ದ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಮಿರ್ಜಾಪುರ ಎಸ್‍ಪಿ ಧರ್ಮ ವೀರ್ ಈ ಕುರಿತು ಪ್ರತಿಕ್ರಿಯಿಸಿ, ಸಂತ್ರಸ್ತೆ ಹಾಗೂ ನಾಲ್ವರೂ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

  • ಹತ್ತನೇ ತರಗತಿ ಪುಸ್ತಕದಲ್ಲಿ ನೆಹರು ಬದಲು ಸಾರ್ವಕರ್ ಫೋಟೋ: ಎನ್‍ಎಸ್‍ಯುಐ ವಿರೋಧ

    ಹತ್ತನೇ ತರಗತಿ ಪುಸ್ತಕದಲ್ಲಿ ನೆಹರು ಬದಲು ಸಾರ್ವಕರ್ ಫೋಟೋ: ಎನ್‍ಎಸ್‍ಯುಐ ವಿರೋಧ

    ಪಣಜಿ: ಗೋವಾದ 10ನೇ ತರಗತಿ ಪುಸ್ತಕದಲ್ಲಿದ್ದ ಮಾಜಿ ಪ್ರಧಾನಿ ಜವಹಾರ್ ಲಾಲ್ ಭಾವಚಿತ್ರದ ತಗೆದು ಆರ್‌ಎಸ್‌ಎಸ್ ಸಹ ಸಂಸ್ಥಾಪಕ, ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾರ್ವಕರ್ ಫೋಟೋ ಬಳಕೆ ಮಾಡಲಾಗಿದ್ದು, ಇದಕ್ಕೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್‍ಎಸ್‍ಯುಐ) ಭಾರೀ ವಿರೋಧ ವ್ಯಕ್ತಪಡಿಸಿದೆ.

    10ನೇ ತರಗತಿಯ ಸಮಾಜವಿಜ್ಞಾನ ವಿಷಯ ಪುಸ್ತಕದಲ್ಲಿ ನೆಹರು ಫೋಟೋ ಇತ್ತು. ಅದು 1935ರಲ್ಲಿ ಮಹಾರಾಷ್ಟ್ರದ ವಾರ್ದಾದಲ್ಲಿ ಜವಹಾರ್ ಲಾಲ್ ನೆಹರು ಅವರು ಮಹಾತ್ಮಾ ಗಾಂಧೀಜಿ ಹಾಗೂ ಮೌಲಾನ್ ಅಬ್ದುಲ್ ಕಲಾಂ ಆಜಾದ್ ಜೊತೆಗೆ ಇದ್ದ ಭಾವಚಿತ್ರ. ಆದರೆ ನೆಹರು ಫೋಟೋ ತಗೆದು ಅಲ್ಲಿ ವಿ.ಡಿ.ಸಾರ್ವಕರ್ ಫೋಟೋ ಹಾಕಲಾಗಿದೆ ಎಂದು ದೂರಿದೆ.

    ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಲಪಂತಿಯ ವಿಚಾರಗಳನ್ನು ಎತ್ತಿ ಹಿಡಿಯುತ್ತಿದೆ. ಅಷ್ಟೇ ಅಲ್ಲದೇ ಬಿಜೆಪಿಯವರು ಇತಿಹಾಸವನ್ನು ತಿರುಚಲು ಹಾಗೂ ಸ್ವಾತಂತ್ರ್ಯದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ಮರೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎನ್‍ಎಸ್‍ಯುಐ ಗೋವಾ ರಾಜ್ಯ ಅಧ್ಯಕ್ಷ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮುಂದಿನ ದಿನಗಳಲ್ಲಿ ಮಹಾತ್ಮಾ ಗಾಂಧಿ ಕಾಂಗ್ರೆಸ್ಸಿಗೆ ಸೇರಿದವರು ಎನ್ನುವ ಕಾರಣಕ್ಕೆ ಅವರ ಫೋಟೋವನ್ನು ತಗೆದು ಹಾಕಬಹುದು. 60 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಎನ್ನುವುದದು ಬಿಜೆಪಿ ವಾದವಾಗಿದೆ. ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ನೀಡಿದ ಕೊಡುಗೆಯನ್ನು ಇತಿಹಾಸದಿಂದ ಅಳಿಸಿ ಹಾಕಲು ಬಿಜೆಪಿಯವರಿಗೆ ಅವರಿಗೆ ಸಾಧ್ಯವಿಲ್ಲ ಎಂದು ಹೇಳಿದರು.

    ಫೋಟೋ ಬದಲಾಯಿಸಿದ್ದಕ್ಕೆ ಕಾರಣ ನೀಡುವಂತೆ ಉನ್ನತ ಹಾಗೂ ಮಾಧ್ಯಮಿಕ ಪರೀಕ್ಷಾ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ನಿರ್ದೇಶಕ ಗಜಾನನ ಪಿ ಭಟ್ ತಿಳಿಸಿದ್ದು, ಇತ್ತ ಶಿಕ್ಷಣ ಮಂಡಳಿಯ ಅಧ್ಯಕ್ಷ ರಾಮಕೃಷ್ಣ ಸಮಂತ್ ತನಿಖೆಗೆ ಆದೇಶ ನೀಡಿದ್ದಾರೆ.

    ವೃತ್ತಿ ಅನುಭವ ಹಾಗೂ ಹಿನ್ನಲೆ ಆಧಾರದ ಮೇಲೆ ಶಿಕ್ಷಕರನ್ನು ಪುಸ್ತಕದ ವಿಷಯ ಬದಲಾವಣೆಗೆ ಆಯ್ಕೆ ಮಾಡಲಾಗುತ್ತದೆ. ಎಲ್ಲ ಕಡೆಗೂ ಬದಲಾವಣೆ ಮಾಡುವ ಅಧಿಕಾರ ಅವರಿಗೆ ಇರುವುದಿಲ್ಲ. ಅವಶ್ಯಕತೆ ಇರುವಲ್ಲಿ ವಿಷಯ ಬದಲಾವಣೆಗೆ ಸಲಹೆ ನೀಡಬಹುದು. ಆದರೆ ಅವರು ಏಕೆ ಫೋಟೋ ಬದಲಾವಣೆ ಮಾಡಿದರು ಎನ್ನುವುದು ತಿಳಿದಿಲ್ಲ. ಹೀಗಾಗಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ರಾಮಕೃಷ್ಣ ಸಮಂತ್ ತಿಳಿಸಿದ್ದಾರೆಂದು ವರದಿಯಾಗಿದೆ.

    ಮೇ ತಿಂಗಳಿನಲ್ಲಿ ಹೊಸ ಪಠ್ಯ ಬಿಡುಗಡೆಯಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.

  • SSLC ಪರೀಕ್ಷೆಯಲ್ಲಿ ಪಾಸ್ ಮಾಡಿಸ್ತೀನೆಂದು ಹೇಳಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಪ್ರಿನ್ಸಿಪಾಲ್

    SSLC ಪರೀಕ್ಷೆಯಲ್ಲಿ ಪಾಸ್ ಮಾಡಿಸ್ತೀನೆಂದು ಹೇಳಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಪ್ರಿನ್ಸಿಪಾಲ್

    ಚಂಡೀಗಢ: ಪ್ರಿನ್ಸಿಪಾಲ್‍ವೊಬ್ಬ 10 ನೇ ತರಗತಿಯ ವಿದ್ಯಾರ್ಥಿನಿಗೆ ಬೋರ್ಡ್ ಪರೀಕ್ಷೆ ಪಾಸ್ ಮಾಡಿಸಲು ಸಹಾಯ ಮಾಡುತ್ತೇನೆಂದು ಹೇಳಿ ಅತ್ಯಾಚಾರ ಮಾಡಿರುವ ಘಟನೆ ಹರಿಯಾಣದ ಸೋನಿಪತ್ ನ ಗೋಹಾನಾ ಪಟ್ಟಣದಲ್ಲಿ ನಡೆದಿದೆ.

    ಸೋನಿಪತ್ ಶಾಲೆಯ ಪ್ರಿನ್ಸಿಪಾಲ್ ಈ ಕೃತ್ಯವೆಸಗಿದ್ದಾನೆ. ಈ ಕೃತ್ಯಕ್ಕೆ ಇಬ್ಬರು ಮಹಿಳೆಯರು ಕೂಡ ಸಹಾಯ ಮಾಡಿದ್ದು, ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ ಯಡಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳು ಮಂಗಳವಾರ ರಾತ್ರಿಯಿಂದ ತಲೆಮರೆಸಿಕೊಂಡಿದ್ದಾರೆ.

    ಏನಿದು ಘಟನೆ?: ವರದಿಗಳ ಪ್ರಕಾರ ವಿದ್ಯಾರ್ಥಿನಿಯ ತಂದೆ ಮಗಳ ಬೋರ್ಡ್ ಪರೀಕ್ಷೆ ಪಾಸ್ ಮಾಡಿಸಲು ಪ್ರಿನ್ಸಿಪಾನ್‍ಗೆ 10 ಸಾವಿರ ರೂ. ಕೊಡಲು ಸಿದ್ಧವಾಗಿದ್ದರು. ಈ ಬಗ್ಗೆ ಪೊಲೀಸರಿಗೆ ತಂದೆ ಹೇಳಿಕೆ ನೀಡಿದ್ದು, ಪರೀಕ್ಷೆ ಬರೆಯಬೇಕೆಂದು ನನ್ನ ಮಗಳನ್ನು ಮತ್ತು ನನ್ನನ್ನು ಗೋಹಾನಾ ಶಾಲೆಗೆ ಕರೆದಿದ್ದರು. ನಾವು ಆ ಸ್ಥಳಕ್ಕೆ ಬಂದಾಗ, ಪ್ರಿನ್ಸಿಪಾಲ್ ನನ್ನ ಮಗಳನ್ನು ಅವರ ಸಂಬಂಧಿಕರ ಸ್ಥಳದಲ್ಲಿ ಬಿಟ್ಟು ತೆರಳುವಂತೆ ಹೇಳಿದರು. ಮತ್ತೊಬ್ಬ ಹುಡುಗಿ ನನ್ನ ಮಗಳ ಪರೀಕ್ಷೆಯನ್ನು ಬರೆಯುತ್ತಾಳೆ ಎಂದು ಅವರು ಹೇಳಿದರು. ದೈಹಿಕ ಶಿಕ್ಷಣ ಪರೀಕ್ಷೆಯು ಮುಗಿದ ನಂತರ ನನ್ನ ಮಗಳನ್ನು ಕರೆದುಕೊಂಡು ಹೋಗುವಂತೆ ಪ್ರಿನ್ಸಿಪಾಲ್ ಹೇಳಿದ್ದನು. ನಾನು ನನ್ನ ಮಗಳನ್ನು ಕರೆದುಕೊಂಡು ಹೋಗಲು ಬಂದಾಗ ಅವಳು ಪ್ರಿನ್ಸಿಪಾಲ್ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ತಿಳಿಸಿದಳು ಎಂದು ಹೇಳಿದ್ದಾರೆ. ಅಲ್ಲಿ ಏನಾಯಿತು ಎಂದು ವಿದ್ಯಾರ್ಥಿನಿಯ ತಂದೆ ಅರಿಯುವಷ್ಟರಲ್ಲಿ ಆ ಮೂವರು ಮನೆಯಿಂದ ಓಡಿಹೋಗಿದ್ದರು.

    ನಾವು ಸಂತ್ರಸ್ತೆಯ ಹೇಳಿಕೆ ಪಡೆದು, ಈ ಬಗ್ಗೆ ಪ್ರಕರಣವ ದಾಖಲಿಸಿದ್ದೆವೆ. ವಿದ್ಯಾರ್ಥಿನಿಗೆ ಸಹಾಯ ಮಾಡಲು ಕೌನ್ಸೆಲರ್ಸ್ ತಂಡಕ್ಕೆ ಸೂಚಿಸಲಾಗಿದೆ ಎಂದು ಖಾಸಗಿ ಮಾಧ್ಯಮವೊಂದಕ್ಕೆ ಪೊಲೀಸರು ತಿಳಿಸಿದ್ದಾರೆ.

     

  • ಮುಂದಿನ ವರ್ಷದಿಂದ ಸಿಬಿಎಸ್‍ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ- 6 ಪೇಪರ್ ಕಡ್ಡಾಯ

    ಮುಂದಿನ ವರ್ಷದಿಂದ ಸಿಬಿಎಸ್‍ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ- 6 ಪೇಪರ್ ಕಡ್ಡಾಯ

    ನವದೆಹಲಿ: ಸಿಬಿಎಸ್‍ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಹೆಚ್ಚಿನ ಹೊರೆಯಾಗಲಿದೆ. 10ನೇ ತರಗತಿ ವಿದ್ಯಾರ್ಥಿಗಳು ಐದು ವಿಷಯಗಳ ಬದಲು ಕಡ್ಡಾಯವಾಗಿ 6 ವಿಷಯಗಳನ್ನು ಅಭ್ಯಾಸ ಮಾಡಬೇಕಾಗಿದೆ.

    ಸಿಬಿಎಸ್‍ಇನಲ್ಲಿ ಸದ್ಯ ಎರಡು ಭಾಷಾ ವಿಷಯಗಳು, ಸಾಮಾಜ ವಿಜ್ಞಾನ, ಗಣಿತ ಹಾಗೂ ವಿಜ್ಞಾನ ವಿಷಯಗಳಿವೆ. ಆದ್ರೆ 2017-18ನೇ ಶೈಕ್ಷಣಿಕ ವರ್ಷದಿಂದ ವೃತ್ತಿಪರ ವಿಷಯ ಕೂಡ ಸೇರ್ಪಡೆಯಾಗ್ತಿದೆ.

    ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಷನ್ ಫ್ರೇಮ್‍ವರ್ಕ್(ಎನ್‍ಎಸ್‍ಕ್ಯೂಎಫ್) ಅಡಿ ಸಿಬಿಎಸ್‍ಇ ವೃತ್ತಿಪರ ವಿಷಯವನ್ನ ಕಡ್ಡಾಯಗೊಳಿಸಿದೆ. ವಿದ್ಯಾರ್ಥಿಯು ವಿಜ್ಞಾನ, ಗಣಿತ ಅಥವಾ ಸಮಾಜ ವಿಜ್ಞಾನ ಈ ಮೂರರಲ್ಲಿ ಯಾವುದೇ ಒಂದು ವಿಷಯದಲ್ಲಿ ಅನುತ್ತೀರ್ಣವಾದ್ರೆ ಆಗ ಅದನ್ನು 6ನೇ ವಿಷಯದೊಂದಿಗೆ ಬದಲಾಯಿಸಲ್ಪಡುತ್ತದೆ. ಅದರಂತೆ ಫಲಿತಾಂಶವನ್ನು ಲೆಕ್ಕ ಹಾಕಲಾಗುತ್ತದೆ ಎಂದು ಸಿಬಿಎಸ್‍ಇ ಸುತ್ತೋಲೆಯಲ್ಲಿ ಹೇಳಿದೆ. ಒಂದು ವೇಳೆ ವಿದ್ಯಾರ್ಥಿಯು ಅನುತ್ತೀರ್ಣವಾದ ವಿಷಯದ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಲು ಇಚ್ಛಿಸಿದ್ರೆ ವಿಭಾಗೀಯ ಪರೀಕ್ಷೆಯಲ್ಲಿ ಬರೆಯಬಹುದು ಎಂದು ಹೇಳಲಾಗಿದೆ.

    6ನೇ ಪತ್ರಿಕೆಗೆ 13 ವಿಷಯಗಳ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಡೈನಮಿಕ್ ರೀಟೇಲಿಂಗ್, ಇನ್ಫರ್ಮೇಷನ್ ಟೆಕ್ನಾಲಜಿ, ಸೆಕ್ಯೂರಿಟಿ, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್‍ನೆಸ್, ಬ್ಯಾಂಕಿಂಗ್ ಮತ್ತು ಇನ್ಶೂರೆನ್ಸ್ ಹೀಗೆ ನೀಡಲಾಗಿರುವ 13 ವಿಷಯಗಳಲ್ಲಿ ಒಂದನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕಿದೆ.

    ಪರೀಕ್ಷೆಯ ಗರಿಷ್ಠ ಅಂಕ 100, ಅದರಲ್ಲಿ 50 ಅಂಕ ಬೋರ್ಡ್ ಪರೀಕ್ಷೆ ಹಾಗು ಇನ್ನುಳಿದ 50 ಅಂಕ ಆಂತರಿಕ ಮೌಲ್ಯಮಾಪನವಾಗಿ ವಿಂಗಡಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಯು ಉತ್ತೀರ್ಣವಾಗಲು ಬೋರ್ಡ್ ಪರೀಕ್ಷೆ ಹಾಗೂ ಆಂತರಿಕ ಮೌಲ್ಯಮಾಪನ ಎರಡರಲ್ಲೂ ಶೇ. 33ರಷ್ಟು ಅಂಕ ಪಡೆಯಬೇಕಿದೆ.