Tag: 108 ಅಂಬುಲೆನ್ಸ್

  • 108 ಅಂಬುಲೆನ್ಸ್ ಸೇವೆ ಸರ್ಕಾರದಿಂದಲೇ ನಿರ್ವಹಣೆ: ದಿನೇಶ್ ಗುಂಡೂರಾವ್

    108 ಅಂಬುಲೆನ್ಸ್ ಸೇವೆ ಸರ್ಕಾರದಿಂದಲೇ ನಿರ್ವಹಣೆ: ದಿನೇಶ್ ಗುಂಡೂರಾವ್

    ಬೆಂಗಳೂರು: 108 ಅಂಬುಲೆನ್ಸ್ ಸೇವೆಯನ್ನು (108 Ambulence Service) ಇನ್ನು ಮುಂದೆ ರಾಜ್ಯ ಸರ್ಕಾರವೇ ನಿರ್ವಹಣೆ ಮಾಡಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, 108 ಅಂಬುಲೆನ್ಸ್ ಸೇವೆ ಇನ್ನು ಮುಂದೆ ಸರ್ಕಾರವೇ ನಿರ್ವಹಣೆ ಮಾಡಲಿದೆ. ಖಾಸಗಿ ಅವರಿಂದ ನಾವು ಹೊರಗೆ ಬರುವ ತೀರ್ಮಾನ ಮಾಡಿದ್ದೇವೆ. ಖಾಸಗಿ ಅವರಿಗೆ ಕೊಡುವ ವ್ಯವಸ್ಥೆಯಲ್ಲಿ ಅನೇಕ ಸಮಸ್ಯೆ ಆಗುತ್ತಿತ್ತು. ಹೀಗಾಗಿ ನಾವೇ ಇದನ್ನು ನಿರ್ವಹಣೆ ಮಾಡಲು ನಿರ್ಧಾರ ಮಾಡಿದ್ದೇವೆ. ನಾವೇ ನಿರ್ವಹಣೆ ಮಾಡಿದರೆ ಸರ್ಕಾರಕ್ಕೆ ಹಣ ಉಳಿತಾಯ ಆಗುತ್ತದೆ ಎಂದರು. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಅಧ್ಯಕ್ಷನಾಗಿ ರೌಡಿಶೀಟರ್ ನೇಮಕ – ನಾನು ಶಿಫಾರಸು ಪತ್ರ ಕೊಟ್ಟಿಲ್ಲ: ದಿನೇಶ್ ಗುಂಡೂರಾವ್

    ಈಗಾಗಲೇ ಚಾಮರಾಜನಗರದಲ್ಲಿ ಟ್ರಯಲ್ ಆಗಿದೆ. ರಾಜ್ಯದ ಅಂಬುಲೆನ್ಸ್ ವ್ಯವಸ್ಥೆಯನ್ನು ಈಗಾಗಲೇ ಸರ್ಕಾರ ನಿರ್ವಹಣೆ ಮಾಡಲು ಪ್ರಕ್ರಿಯೆ ಶುರು ಮಾಡಿದೆ. ಅದರಂತೆ 108 ಅನ್ನು ಸರ್ಕಾರವೇ ನಿರ್ವಹಣೆ ಮಾಡಲಿದೆ. 2-3 ತಿಂಗಳಲ್ಲಿ ಈ ಪ್ರಕ್ರಿಯೆ ಶುರು ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಮಗ್ರ ಅಭಿವೃದ್ಧಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಥಾಪನೆ: ದಿನೇಶ್ ಗುಂಡೂರಾವ್

  • ‘108’ ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ದಿನೇಶ್ ಗುಂಡೂರಾವ್

    ‘108’ ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ದಿನೇಶ್ ಗುಂಡೂರಾವ್

    – ಸೆಪ್ಟೆಂಬರ್‌ವರೆಗಿನ ವೇತನವನ್ನ ಏಜನ್ಸಿಯವರು ಪಾವತಿಸಿದ್ದಾರೆ ಎಂದ ಸಚಿವ

    ಬೆಂಗಳೂರು: 108 ಆರೋಗ್ಯ ಕವಚದ ಅಂಬುಲೆನ್ಸ್ (108 Ambulence) ಚಾಲಕರಿಗೆ ಸರ್ಕಾರದ ಕಡೆಯಿಂದ ಯಾವುದೇ ವೇತನ (Salary) ಬಾಕಿ ಉಳಿಸಿಕೊಂಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಂಬುಲೆನ್ಸ್ ಚಾಲಕರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನವನ್ನ ಕಾಲ ಕಾಲಕ್ಕೆ ಸರಿಯಾಗಿ ಸಂಬಂಧಿಸಿದ ಏಜನ್ಸಿಯವರಿಗೆ ಸರ್ಕಾರ ನೀಡುತ್ತಾ ಬಂದಿದೆ. ಚಾಲಕರ ವೇತನ ಬಾಕಿ ಉಳಿಸಿಕೊಳ್ಳದಂತೆ ಇ.ಎಂ.ಆರ್ ಏಜನ್ಸಿಯವರಿಗೂ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳ ವೇತನವನ್ನ ಏಜನ್ಸಿಯವರು ಚಾಲಕರಿಗೆ ಪಾವತಿ ಮಾಡಿದ್ದಾರೆ. ಅಕ್ಟೋಬರ್ ತಿಂಗಳ ವೇತನ ಪಾವತಿ ಕೂಡ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಪಾವತಿಸುವಂತೆ ಸೂಚಿಸಲಾಗಿದೆ ಎಂದರು. ಇದನ್ನೂ ಓದಿ: ಪಹಣಿಯಲ್ಲಿ ‘ವಕ್ಫ್’ ಬೋರ್ಡ್ ಹೆಸರು ರದ್ದು- ನಿರಾಳರಾದ ರೈತರು

    ಸಾಂದರ್ಭಿಕ ಚಿತ್ರ

    ವಿಪಕ್ಷ ನಾಯಕರಾದ ಆರ್. ಅಶೋಕ್ ಅರೆಬರೆ ಮಾಹಿತಿ ಪಡೆದು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಬ್ಬ ವಿಪಕ್ಷ ನಾಯಕರಾಗಿ ವಾಸ್ತವಾಂಶಗಳನ್ನ ಅರಿತು ಮಾತನಾಡಬೇಕು. 108 ಸಮಸ್ಯೆ ಆರಂಭವಾಗಿದ್ದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಏಜನ್ಸಿ ಹಾಗೂ ಚಾಲಕರ ನಡುವಿನ ಸಮಸ್ಯೆಯನ್ನು ಇಲಾಖೆ ಮಧ್ಯಸ್ಥಿಕೆ ವಹಿಸಿ ಸರಿಪಡಿಸುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 108 ವ್ಯವಸ್ಥೆಯಲ್ಲಿ ಒಂದಿಷ್ಟು ಲೋಪದೋಷಗಳು ಆಗಿರುವುದು ನಿಜ. 108 ಸಿಬ್ಬಂದಿಗಳಿಗೆ ಕನಿಷ್ಠ ವೇತನ ಜಾರಿಗೊಳಿಸಿದ್ದಲ್ಲದೇ ಸರ್ಕಾರದ ಅನುಮತಿ ಇಲ್ಲದೇ ನಿಯಮಬಾಹಿರವಾಗಿ 45% ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಆನೇಕಲ್| ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು – ಚಾಲಕ ಪಾರು

    ಇದೀಗ 108 ಸಿಬ್ಬಂದಿ 45% ರಷ್ಟು ವೇತನ ಹೆಚ್ಚಳ ಮಾಡಿರುವುದನ್ನು ಕಡಿತಗೊಳಿಸದಂತೆ ಬೇಡಿಕೆ ಇಡುತ್ತಿದ್ದಾರೆ. ನಮ್ಮ ಸರ್ಕಾರ ನಿಯಮಾನುಸಾರ ಕನಿಷ್ಠ ವೇತನ ನೀಡಲು ಬದ್ಧವಾಗಿದ್ದು, ಅದರಂತೆ ಅನುದಾನವನ್ನ ನೀಡುತ್ತಾ ಬಂದಿದೆ. ಪ್ರತಿಯೊಬ್ಬ ಅಂಬುಲೆನ್ಸ್ ಚಾಲಕರಿಗೆ 35 ಸಾವಿರಕ್ಕೂ ಹೆಚ್ವು ವೇತನ ದೊರೆಯುತ್ತಿದೆ. ಇದರ ಮೇಲೂ ಮೂಲ ವೇತನದಲ್ಲಿ 45% ರಷ್ಟು ಹೆಚ್ಚಳ ಮಾಡುವ ಬಗ್ಗೆ ಸಿಬ್ಬಂದಿ ಬೇಡಿಕೆ ಇಟ್ಟಿದ್ದು, ನಿಯಮಬಾಹಿರವಾಗಿ ಈ ಕ್ರಮ ಕೈಗೊಳ್ಳಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ನುಡಿದರು. ಇದನ್ನೂ ಓದಿ: ಬಿಡಿಎ ಭರ್ಜರಿ ಬೇಟೆ – ನಾಗರಬಾವಿ ಬಡಾವಣೆಯಲ್ಲಿ 60 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಸರ್ಕಾರದಲ್ಲಿ ಯಾವುದೇ ಹಣಕಾಸಿನ ತೊಂದರೆ ಇಲ್ಲ. 2024-25ನೇ ಸಾಲಿನಲ್ಲಿ 108 ಆರೋಗ್ಯ ಕವಚ ಯೋಜನೆಗೆ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ 260.33 ಕೋಟಿ ರೂ. ಅನುದಾನವನ್ನು ಆಯವ್ಯಯದಲ್ಲಿ ಅನುಮೋದನೆಯಾಗಿದ್ದು, ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ವಾರ್ಷಿಕ 162.40 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗುತ್ತಿದೆ. ಆರೋಗ್ಯ ಇಲಾಖೆ ಹಾಗೂ ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸಂಸ್ಥೆಯವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ಪ್ರತಿ ತ್ರೈಮಾಸಿಕಕ್ಕೆ 40.60 ಕೋಟಿಗಳಂತೆ ವಾರ್ಷಿಕ 162.40 ಕೋಟಿ ರೂ. ಅನುದಾನವನ್ನು ಕಾಲ ಕಾಲಕ್ಕೆ ಬಿಡುಗಡೆಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಾವೇರಿ | ಯತ್ನಳ್ಳಿ ಬಳಿ 10 ಬ್ಯಾಲೇಟ್ ಬಾಕ್ಸ್ ಪತ್ತೆ!

    ಈ ಬಗ್ಗೆ 108 ಸಿಬ್ಬಂದಿಯನ್ನ ಕರೆದು ಚರ್ಚಿಸಿ ಮನವರಿಕೆ ಮಾಡಿಕೊಡಲಾಗಿದೆ. ನ್ಯಾಯಯುತ ಕನಿಷ್ಠ ವೇತನ ಸರ್ಕಾರ ನೀಡುತ್ತಿದ್ದು, ಸರ್ಕಾರದಲ್ಲಿ ಯಾವುದೇ ಹಣಕಾಸಿನ ಕೊರತೆಯಿಲ್ಲ. ಹಿಂದಿನ ಸರ್ಕಾರವಿದ್ದ ವೇಳೆ ವ್ಯವಸ್ಥೆಯಲ್ಲಾದ ಲೋಪವನ್ನು ನಮ್ಮ ಸರ್ಕಾರ ಸರಿಪಡಿಸುತ್ತಿದೆ. ಟೆಂಡರ್‌ಗಳನ್ನ ಕರೆಯದೇ ಜಿವಿಕೆ ಇಎಂಆರ್ ಸಂಸ್ಥೆಯೊಂದಿಗೆ ಒಡಂಬಡಿಕೆಯ ಮೂಲಕವೇ 108 ವ್ಯವಸ್ಥೆಯನ್ನ ಮುಂದುವರಿಸಿಕೊಂಡು ಬರಲಾಗಿದೆ. ನಮ್ಮ ಸರ್ಕಾರ ಬಂದ ಬಳಿಕ ನಿಯಮಾನುಸಾರ ಟೆಂಡರ್ ಕರೆಯಲು ಕ್ರಮ ಕೈಗೊಳ್ಳುತ್ತಿದೆ. ವ್ಯವಸ್ಥೆಯಲ್ಲಾದ ಲೋಪಗಳನ್ನ ಸರಿಪಡಿಸುತ್ತಿರುವಾಗ ಸಿಬ್ಬಂದಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮುಖಂಡರು, ಕಾರ್ಯಕರ್ತರು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ, ನಿಮ್ಮ ಜೊತೆ ಶಾಶ್ವತವಾಗಿ ಇರ್ತೇನೆ: ನಿಖಿಲ್ ಭರವಸೆ

  • 108 ಅಂಬುಲೆನ್ಸ್‌ನವ್ರು ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಳ್ತಾರೆ: ಡಿಕೆಶಿ ಅಸಮಾಧಾನ

    108 ಅಂಬುಲೆನ್ಸ್‌ನವ್ರು ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಳ್ತಾರೆ: ಡಿಕೆಶಿ ಅಸಮಾಧಾನ

    ಬೆಂಗಳೂರು: 108 ಅಂಬುಲೆನ್ಸ್‌ (108 Ambulance) ಕೆಲ ಚಾಲಕರಿಗೂ ಖಾಸಗಿ ಆಸ್ಪತ್ರೆಯವರಿಗೂ ಒಂದು ಒಪ್ಪಂದ ಇರುತ್ತದೆ. 108 ಅಂಬುಲೆನ್ಸ್‌ ಚಾಲಕರು ರೋಗಿಗಳನ್ನು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಸೇರಿಸಿ ಬಿಡ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (D.K.Shivakumar) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್ಸ್‌ ಬಳಿ ನಡೆದ ಕಾರ್ಯಕ್ರಮದಲ್ಲಿ ನೂತನ 262 ಅಂಬುಲೆನ್ಸ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಚಾಲನೆ ನೀಡಿದರು. ಇದನ್ನೂ ಓದಿ: ಜಾತಿಗಣತಿ ವರದಿ ಬಂದ ಬಳಿಕ‌ವೇ ಅನುಷ್ಠಾನಕ್ಕೆ ತೀರ್ಮಾನ – ಶಿವರಾಜ್ ತಂಗಡಗಿ

    ಈ ವೇಳೆ 108 ಅಂಬುಲೆನ್ಸ್‌ ಕೆಲ ಚಾಲಕರ ವಿರುದ್ಧ ಡಿಕೆಶಿ ಅಸಮಾಧಾನ ಹೊರಹಾಕಿದರು. ಕನಕಪುರದಲ್ಲಿ ಮೆಡಿಕಲ್ ಕಾಲೇಜು ಬೇಕು ಅಂತ ಯಾಕೆ ಬಡಿದುಕೊಳ್ತೇನೆ ಗೊತ್ತಾ? 108 ಅಂಬುಲೆನ್ಸ್‌ನವರಿಗೂ ಖಾಸಗಿ ಆಸ್ಪತ್ರೆಯವರಿಗೂ ಒಂದು ಒಪ್ಪಂದ ಇರುತ್ತೆ. 108 ಅಂಬುಲೆನ್ಸ್‌ ಚಾಲಕರಿಗೆ ಈ ಚೇಷ್ಟೆ ಇದೆ. ರೋಗಿಗಳನ್ನ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಸೇರಿಸಿ ಬಿಡ್ತಾರೆ ಎಂದು ಗರಂ ಆದರು.

    ಅಲ್ಲಿಗೆ ಹೋದ ಮೇಲೆ ಬಿಲ್ ಜಾಸ್ತಿ ಆಗೇ ಆಗುತ್ತೆ. ಅವರು ಬಿಲ್ ಕೊಡುವುದಕ್ಕೆ ಆಗದೇ ಶಾಸಕರ ಬಳಿ ಬರುತ್ತಾರೆ. ನಾನು ತಿಂಗಳಿಗೆ ಇದೇ ರೀತಿ 20 ಲಕ್ಷ ಕೊಡ್ತೀನಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಚೆನ್ನಾಗಿದೆ. ಅಂಬುಲೆನ್ಸ್‌ ಚಾಲಕರು ರೋಗಿಗಳನ್ನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಿ. ನಾನು ಮೊನ್ನೆ ವಿಕ್ಟೋರಿಯಾದಲ್ಲಿ ಹಲ್ಲಿನ ನೋವಿಗೆ ಚಿಕಿತ್ಸೆ ಪಡೆದೆ. ಅಲ್ಲಿ ವ್ಯವಸ್ಥೆ ಚೆನ್ನಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೈಕ್ ಡಿಕ್ಕಿ- ವೃದ್ಧನ ತಲೆಯಲ್ಲಿದ್ದ ದಿನಸಿ ಚೀಲಕ್ಕೆ ಕೈತಾಗಿ ಬಿದ್ದಾಕೆಯ ಮೇಲೆ ಹರಿದ ಬಸ್!

    ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಅಂಬುಲೆನ್ಸ್ ಸೇವೆಯಲ್ಲಿ ಸಾಕಷ್ಟು ಕುಂದು ಕೊರತೆ ಇದೆ. ಗುಣಮಟ್ಟದ ವೃದ್ಧಿಯಲ್ಲಿ ಆರೋಗ್ಯ ಕವಚ ಸೇವೆ ಕುಂಠಿತವಾಗಿದೆ. ಲೋಪವನ್ನು ಸರಿಪಡಿಸಲು ಮುಂದಾಗಿದ್ದೇವೆ. ಹಳೆಯ ಅಂಬುಲೆನ್ಸ್ ವಾಹನಗಳಿಗೆ ಮುಕ್ತಿ ಕೊಟ್ಟು ಇಂದು 262 ಹೊಸ ವಾಹನಗಳಿಗೆ ಚಾಲನೆ ನೀಡಿದ್ದೇವೆ‌ ಎಂದು ಹೇಳಿದರು.

  • ರಾಜ್ಯದಲ್ಲಿ ಆರೋಗ್ಯ ಕವಚ 108 ಅನುಷ್ಠಾನಕ್ಕೆ ತಾಂತ್ರಿಕ ಸಮಿತಿ ರಚನೆ – ಅಂಬುಲೆನ್ಸ್‌ ಬಿಕ್ಕಟ್ಟಿಗೆ ಬೀಳುತ್ತೆ ಬ್ರೇಕ್‌

    ರಾಜ್ಯದಲ್ಲಿ ಆರೋಗ್ಯ ಕವಚ 108 ಅನುಷ್ಠಾನಕ್ಕೆ ತಾಂತ್ರಿಕ ಸಮಿತಿ ರಚನೆ – ಅಂಬುಲೆನ್ಸ್‌ ಬಿಕ್ಕಟ್ಟಿಗೆ ಬೀಳುತ್ತೆ ಬ್ರೇಕ್‌

    – GVK ಅಂಬುಲೆನ್ಸ್‌ ಸೇವೆಗೆ ಬಿಗ್ ಶಾಕ್

    ಬೆಂಗಳೂರು: ರಾಜ್ಯದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ಮುಂದಾಗಿದ್ದಾರೆ. ಅಂಬುಲೆನ್ಸ್‌ (Ambulance) ಬಿಕ್ಕಟ್ಟಿಗೆ ಬ್ರೇಕ್‌ ಹಾಕಲು ಮುಂದಾಗಿರುವ ಆರೋಗ್ಯ ಇಲಾಖೆಯು (Heath Department) ಆರೋಗ್ಯ ಕವಚ 108 ಅನುಷ್ಠಾನಕ್ಕೆ ತಾಂತ್ರಿಕ ಸಮಿತಿ ರಚಿಸಿದೆ.

    108 ಆರೋಗ್ಯ ಕವಚ, 104 ಆರೋಗ್ಯ ಸಹಾಯವಾಣಿ ಯೋಜನೆಗಳ ಉನ್ನತ್ತೀಕರಣ ಹಾಗೂ ಮಾರ್ಗದರ್ಶನಕ್ಕೆ ಸಮಿತಿ ರಚಿಸಲಾಗಿದೆ. ನಿಮ್ಹಾನ್ಸ್ ಪ್ರಭಾರ ನಿರ್ದೇಶಕರು ಹಾಗೂ ಐಐಐಟಿ ನಿರ್ದೇಶಕ ಡಾ.ಜಿ. ಗುರುರಾಜ್ ಅವರ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿ ರಚನೆ ಮಾಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ಜಿಲ್ಲಾವಾರು ಪ್ರತಿಭಟನೆ – ಸರ್ಕಾರದ ಧೋರಣೆಗೆ ತೀವ್ರ ಖಂಡನೆ

    ಅಲ್ಲದೇ, ಆರೋಗ್ಯ ಸೇವೆಗಳ ಟೆಂಡರ್ ನ್ಯೂನತೆ ಲೋಪಗಳ ಅಧ್ಯಯನಕ್ಕೆ ಸರ್ಕಾರ ಮುಂದಾಗಿದೆ. ಟೆಂಡರ್ ನ್ಯೂನತೆ ಲೋಪಗಳ ಅಧ್ಯಯನ ನಡೆಸಲು ಹಾಗೂ ಸಲಹೆ ನೀಡಲು ತಜ್ಞರ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಆ ಮೂಲಕ GVK ಅಂಬುಲೆನ್ಸ್ ಸೇವೆಗೆ ಬಿಗ್ ಶಾಕ್ ನೀಡಿದೆ.

    ಆರೋಗ್ಯ ಇಲಾಖೆಯ ಮೇಜರ್ ಸರ್ಜರಿಗೆ ಮುಂದಾಗಿರುವ ಸರ್ಕಾರ, ಹಳೆಯ ಸರ್ಕಾರದ GVK ಟೆಂಡರ್‌ಗೆ ಕೊಕ್ ಕೊಟ್ಟಿದೆ. ಆ ಮೂಲಕ ‘108’ ಅಂಬುಲೆನ್ಸ್ ಸೇವೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. GVK ಸಂಸ್ಥೆಯ ವಿರುದ್ಧ ಸಾಲು ಸಾಲು ಆರೋಪ ಹಾಗೂ ದೂರು ಕೇಳಿಬಂದ ಹಿನ್ನೆಲೆ ಸರ್ಕಾರ ಜಿವಿಕೆ ಟೆಂಡರ್‌ಗೆ ಕೊಕ್ ಕೊಟ್ಟಿದೆ. ಇದನ್ನೂ ಓದಿ: ಪಿಎಸ್‍ಐ ಹಗರಣ ನ್ಯಾಯಾಂಗ ತನಿಖೆ ಕಾಂಗ್ರೆಸ್‍ನ ದ್ವೇಷದ ರಾಜಕಾರಣ: ಬೊಮ್ಮಾಯಿ

    ಕಳೆದ ಮೂರು ತಿಂಗಳ ಹಿಂದೆ ಆರೋಗ್ಯ ಕವಚ ಅಡಿಯಲ್ಲಿನ ‘108’ ಅಂಬುಲೆನ್ಸ್ ಸೇವೆಗೆ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್‌ನಲ್ಲಿಯೂ ಜಿವಿಕೆ ತೆರೆ ಹಿಂದಿನಿಂದ ಭಾಗವಹಿಸಿತ್ತು. ಆದರೆ ಈಗ ಟೆಂಡರ್ ಪ್ರಕ್ರಿಯೆಯನ್ನು ಸರ್ಕಾರ ಕೈಬಿಟ್ಟಿದೆ. ಟೆಂಡರ್ ಪ್ರಕ್ರಿಯೆ ಖರೀದಿಯಲ್ಲಿನ ವಿಧಾನ, ಟೆಂಡರ್ ಪ್ಲೋಟಿಂಗ್‌ನಲ್ಲಿನ ನ್ಯೂನತೆ, ಆಕ್ಷೇಪಣೆಗಳು, ತಾಂತ್ರಿಕ ದೋಷ ಪರಿಶೀಲಿಸಿ ಉತ್ತಮ ಸೇವೆ ನೀಡಲು ಈ ಸಮಿತಿ ರಚಿಸಿದೆ.

    ಉತ್ತಮ ಆರೋಗ್ಯ ಸೇವೆಗೆ ಯಾವ ರೀತಿಯ ಸೌಲಭ್ಯ? ಏನೆಲ್ಲ ತಂತ್ರಜ್ಞಾನ ಇರಬೇಕು? ಯಾವೆಲ್ಲ ಮಾರ್ಗಸೂಚಿ ಸೌಲಭ್ಯ ಅಳವಡಿಸಿಕೊಂಡಿರಬೇಕು? ಈ ಎಲ್ಲ ಮಾನದಂಡಗಳ ಆಧಾರದ ಮೇಲೆ ಸಲಹೆ ಹಾಗೂ ವರದಿ ನೀಡುವ ಕಾರ್ಯವನ್ನು ತಜ್ಞರ ಸಲಹಾ ಸಮಿತಿ ಮಾಡಲಿದೆ. ಐಐಐಟಿ ನಿರ್ದೇಶಕರು, ನಿಮ್ಹಾನ್ಸ್ ನಿರ್ದೇಶಕರು, ವಿಟಿಯು ಮಾಜಿ ಕುಲಪತಿಗಳು, ಕಾರ್ಮಿಕ ಇಲಾಖೆಯ ಆಯುಕ್ತರು, ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್ (IISC ) ತಜ್ಞರನ್ನ ಸಮಿತಿ ಒಳಗೊಂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 108 ಅಂಬುಲೆನ್ಸ್ ಸಿಬ್ಬಂದಿ ಉದ್ಧಟತನ – ಗಾಯಾಳುವನ್ನು ಅಪಘಾತದ ಸ್ಥಳದಲ್ಲೇ ಬಿಟ್ಟು ವಾಪಸ್

    108 ಅಂಬುಲೆನ್ಸ್ ಸಿಬ್ಬಂದಿ ಉದ್ಧಟತನ – ಗಾಯಾಳುವನ್ನು ಅಪಘಾತದ ಸ್ಥಳದಲ್ಲೇ ಬಿಟ್ಟು ವಾಪಸ್

    ರಾಮನಗರ: ರಸ್ತೆಯಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ (Hospital) ದಾಖಲಿಸದೇ ಅಪಘಾತದ (Accident) ಸ್ಥಳದಲ್ಲೇ ಬಿಟ್ಟುಹೋಗಿ 108 ಅಂಬುಲೆನ್ಸ್ (108 Ambulance) ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವ ಘಟನೆ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

    ಗ್ರಾಮದ ಬಳಿ ಬೈಕ್‍ನಲ್ಲಿ (Bike) ಬರುವಾಗ ವ್ಯಕ್ತಿಯೋರ್ವ ಆಯಾತಪ್ಪಿ ಬಿದ್ದು ಗಾಯಾಗೊಂಡಿದ್ದ ಇದನ್ನು ಗಮನಿಸಿದ ತಿಟ್ಟಮಾರನಹಳ್ಳಿ ಗ್ರಾಮಸ್ಥರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ 108 ಅಂಬುಲೆನ್ಸ್ ಸಿಬ್ಬಂದಿ ಗಾಯಾಳುವನ್ನು ಅಂಬುಲೆನ್ಸ್‌ನಲ್ಲಿ ಮಲಗಿಸಿ ಜೊತೆಯಲ್ಲಿ ಯಾರಾದರೂ ಬರುವಂತೆ ಒತ್ತಾಯಿಸಿದ್ದಾರೆ. ರೋಗಿಯ ಜೊತೆ ತಡರಾತ್ರಿ ಯಾರೂ ಹೋಗದ ಕಾರಣ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಸ್ಥಳದಲ್ಲೇ ಇಳಿಸಿ ವಾಪಸ್ ಹೋಗಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಜೀವ ಉಳಿಸಿಕೊಂಡ ತಾಯಿ-ಮಗ!

    ಅಂಬುಲೆನ್ಸ್ ಸಿಬ್ಬಂದಿ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಜೆಸಿಬಿಗೆ (JCB) ಡೀಸೆಲ್ ತರಲು ಬಂದಿದ್ದ ವ್ಯಕ್ತಿ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದರೂ ಅಂಬುಲೆನ್ಸ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸದೇ ನಿರ್ಲಕ್ಷ್ಯವಹಿಸಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಬಳಿಕ ಸ್ಥಳಕ್ಕೆ ಬಂದ ಜೆಸಿಬಿ ಮಾಲೀಕ ಖಾಸಗಿ ವಾಹನದ ಮೂಲಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಕುಡುಕನಿಗೆ ಸಿಕ್ಕಿದ ಹತ್ತು ಲಕ್ಷ ರೂ. ಪೊಲೀಸರ ಪಾಲಾಯ್ತಾ? – 10 ಲಕ್ಷ, ಹತ್ತೇ ನಿಮಿಷದಲ್ಲಿ ಮಂಗಮಾಯ

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ `108′ ಸಮಸ್ಯೆ – 2 ತಿಂಗಳಲ್ಲಿ ಬಗೆಹರಿಯಲಿದೆ ಎಂದ ಸುಧಾಕರ್

    ರಾಜ್ಯದಲ್ಲಿ `108′ ಸಮಸ್ಯೆ – 2 ತಿಂಗಳಲ್ಲಿ ಬಗೆಹರಿಯಲಿದೆ ಎಂದ ಸುಧಾಕರ್

    ಕಾರವಾರ: ರಾಜ್ಯದಲ್ಲಿ 108 ಅಂಬುಲೆನ್ಸ್ (108 Ambulance) ಸೇವೆಯಲ್ಲಿ ಸಮಸ್ಯೆಯಾಗಿದ್ದು, ಇನ್ನೆರಡು ತಿಂಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ (K Sudhakar) ಭರವಸೆ ನೀಡಿದ್ದಾರೆ.

    ಈ ಕುರಿತು ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 108 ಅಂಬುಲೆನ್ಸ್ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ಮುಂದುವರಿದ ರಾಷ್ಟ್ರಗಳಲ್ಲಿನ ಸೇವೆಗಳ ಬಗ್ಗೆ ವರದಿ ನೀಡಲು ತಾಂತ್ರಿಕ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: RSS ಸಂಘಟನೆಗೆ ನಾವು ಅವಕಾಶ ಕೊಟ್ಟಿಲ್ಲ: ಕೋಟಾ ಶ್ರೀನಿವಾಸ ಪೂಜಾರಿ

    108 ತುರ್ತು ಅಂಬುಲೆನ್ಸ್ ಸೇವೆ 2006-07ರಲ್ಲಿ ಪ್ರಾರಂಭವಾಯಿತು. ಸತ್ಯಂ ಅನ್ನುವ ಸಂಸ್ಥೆಗೆ ನಿರ್ವಹಣೆಗೆ ನೀಡಲಾಗಿತ್ತು. ಆದರೆ ಆಗ ಟೆಂಡರ್ ಮೂಲಕ ನಿರ್ವಹಣೆಗೆ ನೀಡಿರಲಿಲ್ಲ. ಅಂದು ಯಾವುದೇ ಸಮಸ್ಯೆ ಇರಲಿಲ್ಲ. ಕಂಪನಿ ಲಾಸ್ ಆದ ಬಳಿಕ ಜಿವಿಕೆ (GVK) ಸಂಸ್ಥೆಗೆ ನಿರ್ವಹಣೆಗೆ ವಹಿಸಿಕೊಟ್ಟಿತ್ತು. ಮೊದ ಮೊದಲು ಸರಿಯಾಗಿ ನಡೆಸುತ್ತಿದ್ದ ಸಂಸ್ಥೆ ಇತ್ತೀಚೆಗೆ ಸೇವೆಯಲ್ಲಿ ವ್ಯತ್ಯಯ ಆಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಲಿವಿಂಗ್ ಟುಗೆದರ್‌ನಲ್ಲಿದ್ದ ಪ್ರಿಯತಮೆಯೊಂದಿಗೆ ಸಲುಗೆಯಿಂದಿದ್ದ ಸ್ನೇಹಿತನನ್ನೇ ಇರಿದು ಕೊಂದ

    ಈಗಾಗಲೇ ಮುಂದುವರಿದ ದೇಶಗಳಲ್ಲಿ ಯಾವ ರೀತಿ ವ್ಯವಸ್ಥೆಯಿದೆ ಎಂಬುದರ ಬಗ್ಗೆ ತಿಳಿದು ಸರ್ಕಾರಕ್ಕೆ ವರದಿ ನೀಡಲು ತಾಂತ್ರಿಕ ಸಲಹಾ ಸಮಿತಿ (Technical Committee) ರಚನೆ ಮಾಡಲಾಗಿದೆ. ಸಮಿತಿ ನೀಡಿದ ವರದಿ ಆಧರಿಸಿ ಟೆಂಡರ್ ಕರೆಯಲಾಗುತ್ತದೆ. ಮುಂದೆ ಇಂತಹ ಸಮಸ್ಯೆ ಆಗದಂತೆ ಮಾದರಿ ತುರ್ತು ಅಂಬುಲೆನ್ಸ್ ಸೇವೆ ರಾಜ್ಯದಲ್ಲಿ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

    ಕಳೆದ ಎರಡು ತಿಂಗಳಿನಿಂದ ಜಿವಿಕೆ ಸಂಸ್ಥೆ ಸಿಬ್ಬಂದಿಗೆ ವೇತನ ನೀಡಿರಲಿಲ್ಲ. ಸರ್ಕಾರ ಈಗ ಎಲ್ಲರಿಗೂ ವೇತನ ನೀಡಿದೆ. ಇನ್ನೂ ಒಂದೂವರೆ – ಎರಡು ತಿಂಗಳಲ್ಲಿ ಎಲ್ಲ ಸಮಸ್ಯೆಗಳೂ ಬಗೆಹರಿಯಲಿದೆ. ಅಲ್ಲಿಯವರೆಗೆ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 108 ಅಂಬುಲೆನ್ಸ್ ಕರೆ ಸ್ವೀಕಾರ ಸೇವೆ ಪುನರಾರಂಭಗೊಂಡಿದೆ: ಆರೋಗ್ಯ ಇಲಾಖೆ ಸ್ಪಷ್ಟನೆ

    108 ಅಂಬುಲೆನ್ಸ್ ಕರೆ ಸ್ವೀಕಾರ ಸೇವೆ ಪುನರಾರಂಭಗೊಂಡಿದೆ: ಆರೋಗ್ಯ ಇಲಾಖೆ ಸ್ಪಷ್ಟನೆ

    ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ 108 ಅಂಬುಲೆನ್ಸ್ (108 Ambulance)  ಕರೆ ಸ್ವೀಕಾರ ವ್ಯವಸ್ಥೆಯಲ್ಲಿ, ತಾಂತ್ರಿಕ ತೊಂದರೆಯಿಂದಾಗಿ, ವ್ಯತ್ಯಯ ಉಂಟಾಗಿತ್ತು. ಈಗ ಅದನ್ನು ಸರಿ ಪಡಿಸಲಾಗಿದ್ದು ಕರೆ ಸ್ವೀಕಾರ ಸೇವೆ ಪುನರಾರಂಭ ಗೊಂಡಿದೆ. ಆದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ಸಂಪರ್ಕ ಸಾಧಿಸಲು ಅನುಕೂಲವಾಗುವಂತೆ ಎಲ್ಲಾ ಜಿಲ್ಲೆಯ ಡಿಎಚ್‍ಒಗಳ (DHO) ಹೆಚ್ಚುವರಿ ದೂರವಾಣಿ ಸಂಖ್ಯೆಗಳನ್ನು ಅಯಾ ಜಿಲ್ಲೆಯ ಜನರಿಗೆ ಒದಗಿಸುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ  (Health department)  ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.

    ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ (Dr.K Sudhakar)  ಟ್ವೀಟ್ ಮಾಡಿದ್ದು, 108 – ಆರೋಗ್ಯ ಕವಚ ಅಂಬುಲೆನ್ಸ್ ಸೇವೆಯಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವ ಮತ್ತು ಅಂಬುಲೆನ್ಸ್ ಸೇವೆಯಲ್ಲಿ ಯಾವುದೇ ಅಡಚಣೆಯಾಗದಂತೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಸ್ಥಾಪಿಸುವ ಕುರಿತಂತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ವೀಡಿಯೋ ಕಾನ್ಫರೆನ್ಸ್ ಜರುಗಿತು. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರೀಕೃತ ಕಾಲ್ ಸೆಂಟರ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ಕರೆಗೆ ಸ್ಪಂದಿಸಿ ಸೇವೆ ಒದಗಿಸಲಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ದುರಾಡಳಿತದಿಂದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಪರಿವರ್ತನೆಯಾಗಿದೆ: ಕಾಂಗ್ರೆಸ್

    ತಾತ್ಕಾಲಿಕವಾಗಿ ಬ್ಯಾಕ್‍ಅಪ್ ಸರ್ವರ್ ಅಳವಡಿಸಲಾಗಿದ್ದು, ದೋಷಪೂರಿತ ಮುಖ್ಯ ಸರ್ವರ್ ಅನ್ನು ದುರಸ್ತಿ ಮಾಡುವ ಕಾರ್ಯ ಚಾಲ್ತಿಯಲ್ಲಿದೆ. ಈ ಎಲ್ಲ ಕ್ರಮಗಳ ಜೊತೆ ತಡೆರಹಿತ ಸೇವೆ ಖಾತ್ರಿಪಡಿಸಿಕೊಳ್ಳಲು ಪ್ರತೀ ಜಿಲ್ಲೆಯಲ್ಲಿ 3-4 ವಿಕೇಂದ್ರೀಕೃತ ಕಾಲ್ ಸೆಂಟರ್ ವ್ಯವಸ್ಥೆ ಮಾಡಲಾಗಿದ್ದು ಇದರ ಬಗ್ಗೆ ಸ್ಥಳೀಯ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಇದನ್ನೂ ಓದಿ: ಆ ಭಾಗ್ಯ ಈ ಭಾಗ್ಯ ಅಂತಾ ರಾಜ್ಯಕ್ಕೆ ದೌರ್ಭಾಗ್ಯ ಕೊಟ್ಟರು: ಸಿದ್ದುಗೆ ಬೊಮ್ಮಾಯಿ ಟಾಂಗ್‌

    ನಿನ್ನೆಯಿಂದ 108 ಅಂಬುಲೆನ್ಸ್ ಸೇವೆ ಸರಿಯಾಗಿ ಕಾರ್ಯಚರಣೆ ಮಾಡುತ್ತಿರಲಿಲ್ಲ. ತಾಂತ್ರಿಕ ದೋಷದ ಕಾರಣ 108 ಕಾಲ್ ಸೆಂಟರ್ ವರ್ಕ್ ಆಗುತ್ತಿರಲಿಲ್ಲ. ಇದರಿಂದಾಗಿ ಸಕಾಲಕ್ಕೆ ಅಂಬುಲೆನ್ಸ್ ಸಿಗದೇ, ಸಕಾಲಕ್ಕೆ ವೈದ್ಯಕೀಯ ನೆರವು ಸಿಗದೇ ರಾಜ್ಯಾದ್ಯಂತ ರೋಗಿಗಳು ಪರದಾಡಿದ್ದಾರೆ. ಒಂದು ಜೀವ ಕೂಡ ಹೋಗಿದೆ. ಅನಾರೋಗ್ಯದಿಂದ ಬಳಲ್ತಿದ್ದ ತುಮಕೂರು ಜಿಲ್ಲೆ ಐಡಿ ಹಳ್ಳಿಯ ಜಯಮ್ಮ ಎಂಬಾಕೆ ಸಕಾಲಕ್ಕೆ ಅಂಬುಲೆನ್ಸ್ ಸಿಗದೇ ಸಾವನ್ನಪ್ಪಿದ್ದಾರೆ. 108 ಸೇವೆಗಳಿಗಾಗಿ ಜಿವಿಕೆ-ಇಎಂಆರ್‌ಐ ಕಾಲ್‍ಸೆಂಟರ್‌ನಲ್ಲಿ 2008ರಲ್ಲಿ ಅಳವಡಿಸಿದ್ದ ಆರೆಂಜಸ್ ಟೆಕ್ನಾಲಜಿ ಸಾಫ್ಟ್‌ವೆರ್ ಅಪ್‍ಡೇಟ್ ಮಾಡದ ಕಾರಣ ವೈರಸ್ ಅಟ್ಯಾಕ್ ಆಗಿ ಇಷ್ಟೆಲ್ಲಾ ಅವಾಂತರ ಉಂಟಾಗಿದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಶಿಫ್ಟ್ ಸಹ ಅಂಬುಲೆನ್ಸ್‌ಗಳಿಗೆ ಕೃತಕ ಬರ ಬಂದಿತ್ತು. ರೋಗಿಗಳ ಸಂಬಂಧಿಕರು 108 ಅವ್ಯವಸ್ಥೆಗಳಿಗೆ ತೀವ್ರ ಆಕ್ರೋಶ ಹೊರಹಾಕಿದ್ರು. ಈ ಬಗ್ಗೆ ಪಬ್ಲಿಕ್ ಟಿವಿ ಬೆಳಗ್ಗೆಯಿಂದ ನಿರಂತರ ವರದಿ ಕಾರಣ, ಆರೋಗ್ಯ ಇಲಾಖೆ ಎಚ್ಚೆತ್ತು, ತಾತ್ಕಾಲಿಕವಾಗಿ ಪರ್ಯಾಯ ಸೇವೆ ಕಲ್ಪಿಸಲು ಪ್ರಯತ್ನಿಸಿತು. 108 ಬದಲಿಗೆ 112ಕ್ಕೆ ಕರೆ ಮಾಡಿ ಅಂಬುಲೆನ್ಸ್ ಸೇವೆ ಪಡೆಯಲು ಸೂಚಿಸಿತು. ಬೆಂಗಳೂರು, ತುಮಕೂರು, ನೆಲಮಂಗಲ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ವಿಜಯಪುರ ಸೇರಿ ಬಹುತೇಕ ಕಡೆ ಈ ಸಮಸ್ಯೆ ಕಂಡುಬಂತು.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ದುರಾಡಳಿತದಿಂದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಪರಿವರ್ತನೆಯಾಗಿದೆ: ಕಾಂಗ್ರೆಸ್

    ಬಿಜೆಪಿ ದುರಾಡಳಿತದಿಂದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಪರಿವರ್ತನೆಯಾಗಿದೆ: ಕಾಂಗ್ರೆಸ್

    ಬೆಂಗಳೂರು: ಡಕೋಟಾ ಇಂಜಿನ್‍ನಂತಿರುವ 40% ಸರ್ಕಾರ ನಂಬಿದವರಿಗೆ ಮಸಣವೇ ಗತಿ. ಆಸ್ಪತ್ರೆಯಲ್ಲಿ ವಿದ್ಯುತ್, ವೆಂಟಿಲೇಟರ್, ಬೆಡ್, ಔಷಧಗಳ ಕೊರತೆಯ ನಂತರ ಈಗ 108 ಅಂಬುಲೆನ್ಸ್ (108 Ambulance) ಸೇವೆ ಸ್ಥಗಿತವಾಗಿದೆ. ಸಿಡಿಗೆ ತಡೆಯಾಜ್ಞೆ ತರುವಲ್ಲಿ ತೋರಿದ ಆಸಕ್ತಿಯನ್ನು ಇಲಾಖೆಯ ಕೆಲಸದಲ್ಲಿ ತೋರಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ ಸುಧಾಕರ್ (Dr.K Sudhakar) ಅವರೇ? ನಿಮ್ಮ ದುರಾಡಳಿತದಿಂದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಪರಿವರ್ತನೆಯಾಗಿದೆ ಎಂದು ಬಿಜೆಪಿ (BJP) ವಿರುದ್ಧ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ (Congress) ವಾಗ್ದಾಳಿ ನಡೆಸಿದೆ.

    ಟ್ವೀಟ್‍ನಲ್ಲಿ ಏನಿದೆ?
    ಡಕೋಟಾ ಇಂಜಿನ್‍ನಂತಿರುವ 40% ಸರ್ಕಾರ ನಂಬಿದವರಿಗೆ ಮಸಣವೇ ಗತಿ. ಆಸ್ಪತ್ರೆಯಲ್ಲಿ ವಿದ್ಯುತ್, ವೆಂಟಿಲೇಟರ್, ಬೆಡ್, ಔಷಧಗಳ ಕೊರತೆಯ ನಂತರ ಈಗ 108 ಅಂಬುಲೆನ್ಸ್ ಸೇವೆ ಸ್ಥಗಿತವಾಗಿದೆ. ಸಿಡಿಗೆ ತಡೆಯಾಜ್ಞೆ ತರುವಲ್ಲಿ ತೋರಿದ ಆಸಕ್ತಿಯನ್ನು ಇಲಾಖೆಯ ಕೆಲಸದಲ್ಲಿ ತೋರಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ ಸುಧಾಕರ್ ಅವರೇ? ಇದನ್ನೂ ಓದಿ: ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆಯಿಂದ ಕ್ರಮ: ಸುಧಾಕರ್

    ಇದೇನಾ ಪೇಸಿಎಂ (PayCM) ಎಫೆಕ್ಟ್! ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೊರತೆಯಿಂದಾಗಿದ್ದ ಅವಘಡದ ನಂತರ 108 ಅಂಬುಲೆನ್ಸ್ ಸೇವೆ ಸ್ಥಗಿತವಾಗಿದ್ದು 40% ಸರ್ಕಾರದ ಅಯೋಗ್ಯತನಕ್ಕೆ ಸಾಕ್ಷಿ. ಸುಧಾಕರ್ ಅವರೇ, ನಿಮ್ಮ ದುರಾಡಳಿತದಿಂದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಪರಿವರ್ತನೆಯಾಗಿದೆ. ಜನ ಮತ್ತೊಮ್ಮೆ ಹಾದಿಬೀದಿಯಲ್ಲಿ ಸಾಯಲಿ ಎಂದು ಬಯಸುತ್ತಿರುವಿರಾ? ಕೊಲೆಗಡುಕರು, ಅತ್ಯಾಚಾರಿಗಳು, ಭ್ರಷ್ಟರು ಸೇರಿಕೊಂಡಿರುವ ಕೂಟಕ್ಕೆ ಇರುವ ಹೆಸರೇ ಬಿಜೆಪಿ. ಇದನ್ನೂ ಓದಿ: ಆ ಭಾಗ್ಯ ಈ ಭಾಗ್ಯ ಅಂತಾ ರಾಜ್ಯಕ್ಕೆ ದೌರ್ಭಾಗ್ಯ ಕೊಟ್ಟರು: ಸಿದ್ದುಗೆ ಬೊಮ್ಮಾಯಿ ಟಾಂಗ್‌

    ಬೇಟಿ ಬಚಾವ್ ಆಗಬೇಕಿರುವುದು ಬಿಜೆಪಿಗರಿಂದ ಎಂಬುದು ಕರ್ನಾಟಕದಿಂದ, ಉತ್ತರ ಪ್ರದೇಶ, ಉತ್ತರಖಾಂಡದವರೆಗೂ ಬಿಜೆಪಿಗರು ನಿರೂಪಿಸಿದ್ದಾರೆ. ಹೆಣ್ಣುಮಕ್ಕಳನ್ನು ಪೀಡಿಸುವ ಬಿಜೆಪಿಗೆ ಕೀಚಕ, ದುಶ್ಯಾಸನರು ಆದರ್ಶ ಪುರುಷರೇ ಹೊರತು ರಾಮನಲ್ಲ. ‘ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಕಂಪ್ಯೂಟರ್ ಸಾಕ್ಷರತಾ ಕೇಂದ್ರ ಸ್ಥಾಪಿಸುತ್ತೇವೆ’ ಎಂದಿದ್ದ ಬಿಜೆಪಿ ಈಗ ತಾವು ಸ್ಥಾಪಿಸಿದ ಕಂಪ್ಯೂಟರ್ ಕೇಂದ್ರಗಳನ್ನು ತೋರಿಸಲು ಸಾಧ್ಯವೇ? ಬಿಜೆಪಿ ಹಳ್ಳಿ ಹಳ್ಳಿಗೂ ತಲುಪಿಸಿದ್ದು ಭ್ರಷ್ಟಾಚಾರವನ್ನು ಮಾತ್ರ! ನಿಮ್ಮ ಪ್ರಣಾಳಿಕೆ ಅಂದ್ರೆ ಸುಳ್ಳಿನ ಗಂಟು ಅಲ್ಲವೇ. ಭ್ರಷ್ಟಾಚಾರ ರಹಿತವಾಗಿ ಬದುಕುವುದು ಸುಲಭವಲ್ಲ, ಭ್ರಷ್ಟಾಚಾರ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ ಎಂದಿದ್ದ ಸಚಿವ ಮಾಧುಸ್ವಾಮಿ. ಈ ಮೂಲಕ ಭ್ರಷ್ಟಾಚಾರವಿಲ್ಲದೆ ಬಿಜೆಪಿ ಸರ್ಕಾರವಿಲ್ಲ ಎಂಬುದನ್ನ ಒಪ್ಪಿದಂತಾಗಿದೆ! ಕಡಿಮೆ ಮಾಡಲು ಯತ್ನಿಸುತ್ತೇವೆ ಎಂದರೆ ಕಮಿಷನ್ ಪರ್ಸೆಂಟೇಜ್ ಕಡಿಮೆ ಮಾಡ್ಕೊತಿವಿ ಅಂತನಾ ಎಂದು ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ಕಾಲೆಳೆದಿದೆ.

    Live Tv
    [brid partner=56869869 player=32851 video=960834 autoplay=true]

  • ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆಯಿಂದ ಕ್ರಮ: ಸುಧಾಕರ್

    ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆಯಿಂದ ಕ್ರಮ: ಸುಧಾಕರ್

    ಬೆಂಗಳೂರು: ತಾಂತ್ರಿಕ ಸಮಸ್ಯೆಯಿಂದ 108 ಆರೋಗ್ಯ ಕವಚ ಅಂಬುಲೆನ್ಸ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ತಾಂತ್ರಿಕ ಅಡಚಣೆಗಳನ್ನು ನಿವಾರಿಸಲು ಹಾಗೂ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆ ವತಿಯಿಂದ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯದಲ್ಲಿ ಅಂಬುಲೆನ್ಸ್ ಸಮಸ್ಯೆಯ ಬಗ್ಗೆ ಟ್ವೀಟ್ ಮೂಲಕ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ತಾಂತ್ರಿಕ ಸಮಸ್ಯೆಯಿಂದ 108 ಆರೋಗ್ಯ ಕವಚ ಅಂಬುಲೆನ್ಸ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ತಾಂತ್ರಿಕ ಅಡಚಣೆಗಳನ್ನು ನಿವಾರಿಸಲು ಹಾಗೂ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆ ವತಿಯಿಂದ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ವ್ಯತ್ಯಯ – ನಿನ್ನೆ ಸಂಜೆಯಿಂದ ಕರೆ ಸ್ವೀಕರಿಸದ 108

    ಸ್ವಯಂಚಾಲಿತ ಕಾಲ್ ಸೆಂಟರ್ ವ್ಯವಸ್ಥೆ ಮೂಲಕ ಕರೆಗಳ ವಿತರಣೆಗೆ ಪರ್ಯಾಯವಾಗಿ ಮ್ಯಾನುವಲ್ ಐಡಿಗಳನ್ನು ಸೃಷ್ಟಿಸಿ ಅಂಬುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತಿದ್ದು, ಇದರೊಂದಿಗೆ 104 ಕಾಲ್ ಸೆಂಟರ್‌ನಲ್ಲಿ 108 ಅಂಬುಲೆನ್ಸ್ ಸೇವೆಗೆ ಓವರ್ ಫೋನ್‌ ಕಾಲ್ ಸೆಂಟರ್ ಸ್ಥಾಪಿಸಲು ಸಹ ಸೂಚನೆ ನೀಡಲಾಗಿದೆ. 108 ಹಾಗೂ 112 ಕಾಲ್ ಸೆಂಟರ್‌ಗಳಲ್ಲಿ ಅಧಿಕ ಕರೆ ಸ್ವೀಕರಿಸಲು ಅನುಕೂಲವಾಗುವಂತೆ ಪ್ರಸ್ತುತ ಇರುವ ಸಿಬ್ಬಂದಿಗಳ ಜೊತೆಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಂಬುಲೆನ್ಸ್ ಡ್ರೈವರ್‌ಗಳಿಗೆ ತಮ್ಮ ಮೊಬೈಲ್ ಮೂಲಕ ಆಸ್ಪತ್ರೆಗಳಿಂದ ನೇರವಾಗಿ ಕರೆಗಳನ್ನು ಸ್ವೀಕರಿಸಲು ಸಹ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಊಹಾಪೋಹಗಳಿಗೆ ಕಿವಿಗೊಡದಂತೆ SMK ನಿವಾಸದಿಂದ ಸಂದೇಶ

    ತಾಂತ್ರಿಕ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಸಮರೋಪಾದಿಯಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಪರ್ಯಾಯ ವ್ಯವಸ್ಥೆಗಳ ಮೂಲಕ ಸೇವೆಯಲ್ಲಿ ಉಂಟಾಗಿರುವ ತಾತ್ಕಾಲಿಕ ವ್ಯತ್ಯಯವನ್ನು ಕನಿಷ್ಠ ಮಟ್ಟದಲ್ಲಿಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ವ್ಯತ್ಯಯ – ನಿನ್ನೆ ಸಂಜೆಯಿಂದ ಕರೆ ಸ್ವೀಕರಿಸದ 108

    ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ವ್ಯತ್ಯಯ – ನಿನ್ನೆ ಸಂಜೆಯಿಂದ ಕರೆ ಸ್ವೀಕರಿಸದ 108

    ಬೆಂಗಳೂರು: ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ (Health Emergency) ಎದುರಾಗಿದೆಯಾ ಎಂಬ ಅನುಮಾನವೊಂದು ಕಾಡಿದೆ. ಸರ್ಕಾರ (Government) ದ ನಿರ್ಲಕ್ಷ್ಯಕ್ಕೆ ರೋಗಿಗಳು ಕಂಗಾಲಾಗಿದ್ದು, ರಾಜ್ಯದಲ್ಲಿ ಸಾವು-ನೋವಾಗುವ ಸಾಧ್ಯತೆಗಳಿವೆ.

    ಅಪಘಾತ ಪ್ರಕರಣಗಳು, ವಿಷಕುಡಿದ ಪ್ರಕರಣಗಳು, ಹಾವು ಕಚ್ಚಿದ ಪ್ರಕರಗಳು, ಹೆರಿಗೆ ಪ್ರಕರಣಗಳು ಸೇರಿದಂತೆ ಅನೇಕ ತುರ್ತು ಚಿಕಿತ್ಸೆಗೆ ಅಂಬುಲೆನ್ಸ್ ಸೇವೆ ಅಗತ್ಯ. ಈ 108 ಅಂಬುಲೆನ್ಸ್ ಸೇವೆಯನ್ನು ಜಿವಿಕೆ ಸಂಸ್ಥೆ ನಡೆಸುತ್ತಾ ಇದೆ. ರಾಜ್ಯಾದ್ಯಂತ ದಿನಕ್ಕೆ ಸುಮಾರು 8 ಸಾವಿರ ಕರೆಗಳು 108 ಗೆ ಹೋಗುತ್ತವೆ. 8 ಸಾವಿರ ಕರೆಗಳಲ್ಲಿ 2 ಸಾವಿರ ಪ್ರಕರಣಗಳು ಗಂಭೀರ ಆಗಿರುತ್ತವೆ. ಆದರೆ ಈ ಅಂಬುಲೆನ್ಸ್ ಸೇವೆ ಸಿಗದೇ ಇದ್ದರೆ 2 ಸಾವಿರ ಗಂಭೀರ ಪ್ರಕರಣಗಳಲ್ಲಿ ಸಾವು ನೋವಾಗುವ ಸಾಧ್ಯತೆ ಹೆಚ್ಚಿರುತ್ತೆ.

    ನಿನ್ನೆ ಸಂಜೆಯಿಂದ ಅಂಬುಲೆನ್ಸ್ (Ambulance) ಸೇವೆ ಇಲ್ಲದ ಕಾರಣ ಜನರಿಗೆ ತೀರ ಸಮಸ್ಯೆ ಎದುರಾಗಿದೆ. ತಾಂತ್ರಿಕ ಸಮಸ್ಯೆಯಿಂದ 108 ಸೇವೆ ಸಿಗ್ತಿಲ್ಲ ಅಂತಾ ಹೇಳಲಾಗುತ್ತಿದೆ. ತಾಂತ್ರಿಕ ಸಮಸ್ಯೆಯಿಂದ 108ಗೆ ಕರೆ ಹೋಗ್ತಿಲ್ಲ ಮತ್ತು ಕರೆ ಸ್ವೀಕರಿಸ್ತಿಲ್ಲ ಅಂತಾ ಹೇಳಲಾಗುತ್ತಿದೆ.

    ಈ ಸಂಬಂಧ ಜಿವಿಕೆ (GVK) ಟೆಕ್ನಿಕಲ್ ಟೀಂನಿಂದ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, 108 ಸೇವೆಯಲ್ಲಿ ತಾಂತ್ರಿಕ ಸಮಸ್ಯೆ ಆಗಿರೋದು ನಿಜ. ಸರ್ವರ್ ಪ್ರಾಬ್ಲಂನಿಂದ ಕರೆ ಸ್ವೀಕರಿಸಲಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ವಿಪರೀತ ಟ್ರಾಫಿಕ್ ಜಾಮ್ – ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮಕೊಟ್ಟ ಮಹಿಳೆ

    Live Tv
    [brid partner=56869869 player=32851 video=960834 autoplay=true]