Tag: 100 Crore Club

  • ‘ಕಬ್ಜ’ 100 ಕೋಟಿ ಕ್ಲಬ್ ಸೇರ್ಪಡೆ: ವೀಕೆಂಡ್ ನಲ್ಲಿ ಇನ್ನೂ ಹೆಚ್ಚಿದ ಕಲೆಕ್ಷನ್

    ‘ಕಬ್ಜ’ 100 ಕೋಟಿ ಕ್ಲಬ್ ಸೇರ್ಪಡೆ: ವೀಕೆಂಡ್ ನಲ್ಲಿ ಇನ್ನೂ ಹೆಚ್ಚಿದ ಕಲೆಕ್ಷನ್

    ಆರ್.ಚಂದ್ರು (R. Chandru) ನಿರ್ದೇಶನದಲ್ಲಿ ಮೂಡಿ ಬಂದ ‘ಕಬ್ಜ’ (Kabzaa) ಸಿನಿಮಾ ರಿಲೀಸ್ ಆದ ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ನಿನ್ನೆ ಚಿತ್ರತಂಡವು ಪತ್ರಿಕಾಗೋಷ್ಠಿ ಮಾಡಿ ಅಧಿಕೃತವಾಗಿಯೇ ಮಾಹಿತಿಯನ್ನು ಹಂಚಿಕೊಂಡಿದೆ. ಕಬ್ಜ ನೂರು ಕೋಟಿ ಕ್ಲಬ್ (100 Crore Club) ಸೇರುತ್ತಿದ್ದಂತೆಯೇ ಚಿತ್ರೋದ್ಯಮದಲ್ಲಿ ಹುಮ್ಮಸ್ಸು ಹೆಚ್ಚಿದೆ. ಸ್ಯಾಂಡಲ್ ವುಡ್ ಅನೇಕ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರಕ್ಕೆ ಶುಭಾಶಯಗಳನ್ನು ತಿಳಿಸಿ, ಚಂದ್ರು ಬೆನ್ನಿಗೆ ನಿಂತಿದ್ದಾರೆ.

    ಸಿನಿಮಾದ ಯಶಸ್ಸಿನ ಕುರಿತು ಮಾತನಾಡಿರುವ ಉಪೇಂದ್ರ (Upendra), ‘ಇದು ನಿರೀಕ್ಷೆಗೂ ಮೀರಿ ಬಂದ ಪ್ರತಿಕ್ರಿಯೆ. ಒಂದು ಸಿನಿಮಾ ಗೆದ್ದರೆ ಉದ್ಯಮ ಉಸಿರಾಡುತ್ತದೆ’ ಎಂದಿದ್ದಾರೆ. ಪರೋಕ್ಷವಾಗಿ ಕಬ್ಜ ಮತ್ತೆ ಚಿತ್ರೋದ್ಯಮವನ್ನು ಉಸಿರಾಡುವಂತೆ ಮಾಡಿದೆ ಎಂದು ಹೆಮ್ಮೆಯಿಂದ ಮಾತನಾಡಿದ್ದಾರೆ. ಈ ಸಿನಿಮಾದ ಗೆಲುವಿನ ಬೆನ್ನಲ್ಲೇ ಕಬ್ಜ 2 ಸಿನಿಮಾದ ಕುರಿತು ಹಲವು ಚರ್ಚೆಗಳು ನಡೆದಿರುವ ಕುರಿತು ಮಾತನಾಡಿದರು. ಇದನ್ನೂ ಓದಿ: ನಟ ಅಭಿಷೇಕ್ – ಮಹೇಶ್ ಕಾಂಬಿನೇಷನ್ ಚಿತ್ರದಲ್ಲಿ ನಟಿ ಅಮೂಲ್ಯ

    ಕೆಜಿಎಫ್, ಕಾಂತಾರ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಬ್ಜ ಸಖತ್ ಸದ್ದು ಮಾಡುತ್ತಿದೆ. ಆರ್.ಚಂದ್ರು ಅವರ ಆಪ್ತರ ಮಾಹಿತಿಯಂತೆ, ಹಲವು ಸಿನಿಮಾ ರಂಗಗಳಿಂದ ಚಂದ್ರು ಅವರಿಗೆ ಆಫರ್ ಕೂಡ ಬರುತ್ತಿವೆಯಂತೆ. ಅದರಲ್ಲೂ ಬಾಲಿವುಡ್ ನ ಹೆಸರಾಂತ ಸಂಸ್ಥೆಯೊಂದು ಕಬ್ಜ ಸಿನಿಮಾ ವೀಕ್ಷಿಸಿದ ನಂತರ ಚಂದ್ರು ಅವರನ್ನು ಕಾಂಟ್ಯಾಕ್ಟ್ ಮಾಡಿದೆ ಎಂದು ಹೇಳಲಾಗುತ್ತಿದೆ.

    ಕರ್ನಾಟಕದಲ್ಲೇ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಬ್ಜ ಸಿನಿಮಾ ರಿಲೀಸ್ ಆಗಿದ್ದು, ವೀಕೆಂಡ್ ನಲ್ಲಿ ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ ಎಂದು ವಿತರಕ ಮೋಹನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಮತ್ತಷ್ಟು ಪ್ರದರ್ಶನಗಳ ಬೇಡಿಕೆ ಬರುತ್ತಿದೆ ಎಂದು ಅವರು ಹೇಳಿದರು. ಕಳೆದ ಮೂರು ದಿನಗಳಿಂದ ಭಾರತದಾದ್ಯಂತ ಕಬ್ಜ ಕ್ರೇಜ್ ಕ್ರಿಯೇಟ್ ಮಾಡಿದ್ದು, ಕನ್ನಡದ ಮತ್ತೊಂದು ಚಿತ್ರ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ.

  • 100 ಕೋಟಿ ಕ್ಲಬ್ ಸೇರಿದೆಯಾ ‘ವಿಕ್ರಾಂತ್ ರೋಣ’ ಸಿನಿಮಾ; ಸಿನಿ ಪಂಡಿತರ ಲೆಕ್ಕಾಚಾರವೇನು?

    100 ಕೋಟಿ ಕ್ಲಬ್ ಸೇರಿದೆಯಾ ‘ವಿಕ್ರಾಂತ್ ರೋಣ’ ಸಿನಿಮಾ; ಸಿನಿ ಪಂಡಿತರ ಲೆಕ್ಕಾಚಾರವೇನು?

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿ ಇಂದಿಗೆ ಐದು ದಿನಗಳು ಕಳೆದಿವೆ. ಪೈರಸಿ, ನೆಗೆಟಿವ್ ಪ್ರಚಾರ ಸೇರಿದಂತೆ ಹಲವು ಅಡೆತಡೆಗಳನ್ನು ಸಿನಿಮಾ ಎದುರಿಸುತ್ತಿದ್ದರೂ, ಈ ನಡುವೆ 100 ಕೋಟಿ ಕ್ಲಬ್ ಸೇರಿದಂತೆ ಎಂದು ಅಭಿಮಾನಿಗಳು ಸಂಭ್ರಮಾಚಾರಣೆ ಮಾಡುತ್ತಿದ್ದಾರೆ. ಸಿನಿಮಾ ಟೀಮ್ ಅಧಿಕೃತವಾಗಿ ಈ ಮಾಹಿತಿಯನ್ನು ಕೊಡದೇ ಇದ್ದರೂ, ಸಿನಿಮಾ ರಿಲೀಸ್ ಆಗಿ ನಾಲ್ಕೇ ದಿನಕ್ಕೆ ನೂರು ಕೋಟಿ ಬಾಚಿದೆ ಎಂದು ಹೇಳಲಾಗುತ್ತಿದೆ.

    ಸಿನಿಮಾ ರಿಲೀಸ್ ಆದ ದಿನ ಬರೋಬ್ಬರಿ 35 ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ ಹರಿದು ಬಂತು ಎಂದು ಹೇಳಲಾಯಿತು. ಹೆಚ್ಚು ಕಡಿಮೆ ಸಿನಿಮಾ ಟೀಮ್ ಕೂಡ ಅದನ್ನು ಒಪ್ಪಿಕೊಂಡಿತು. ಗುರುವಾರ ನಂತರ ಕಲೆಕ್ಷನ್ ವಿಚಾರದಲ್ಲಿ ಮತ್ತಷ್ಟು ಏರಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಚಿತ್ರ ರಿಲೀಸ್ ಆದ ನಾಲ್ಕೇ ದಿನಕ್ಕೆ ಅಂದಾಜು 100 ಕೋಟಿ ರೂಪಾಯಿ ವಿತರಕರ ಜೇಬಿಗೆ ಬಂದಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಇದನ್ನೂ ಓದಿ:ಹುಲಿ ಜೊತೆ `777 ಚಾರ್ಲಿ’ ನಟಿ ಸಂಗೀತಾ ಶೃಂಗೇರಿ

    ಆದರೆ, ಸ್ಯಾಂಡಲ್ ವುಡ್ ವಿತರಕರು ಹೇಳುವುದೇ ಬೇರೆ. ಮೊದಲ ದಿನ ಒಳ್ಳೆಯ ರೀತಿಯಲ್ಲಿ ಕಲೆಕ್ಷನ್ ಆಗಿದೆ. ಎರಡನೇ ದಿನ ಕೊಂಚ ಮಟ್ಟಿಕೆ ಇಳಿಕೆ ಕಂಡಿದೆ. ಶನಿವಾರ ಮತ್ತು ಭಾನುವಾರ ವೀಕೆಂಡ್ ಇರುವುದರಿಂದ ಕಲೆಕ್ಷನ್ ಹೆಚ್ಚಿದೆ. ಹೀಗಾಗಿ ಸೋಮವಾರದ ಕಲೆಕ್ಷನ್ ಒಟ್ಟು ಮಾಡಿದರೆ, ಬಹುಶಃ ಐದು ದಿನದ ಗಳಿಕೆ ಒಟ್ಟು 100 ಕೋಟಿ ಎನ್ನಬಹುದು. ಹೀಗಾಗಿ ಐದು ದಿನಕ್ಕೆ ವಿಕ್ರಾಂತ್ ರೋಣ 100 ಕೋಟಿ ಕ್ಲಬ್ ಸೇರಿದೆ ಎಂದು ಹೇಳಲು ಅಡ್ಡಿಯಿಲ್ಲ ಎನ್ನುತ್ತಾರೆ.

    ಈ ಹಿಂದೆ ಸಿನಿಮಾ ತಂಡವೇ ಹೇಳಿಕೊಂಡಂತೆ ಚಿತ್ರ ನಿರ್ಮಾಣಕ್ಕೆ ಹಾಕಿದ ಬಂಡವಾಳ ಸಿನಿಮಾ ರಿಲೀಸ್ ಗೂ ಮುನ್ನ ವಾಪಸ್ಸು ಬಂದಿದೆ. ಹಾಗಾಗಿ ಥಿಯೇಟರ್ ನಿಂದ ಬಂದ ಹಣ ಲಾಭ ಎನ್ನಬಹುದೆ? ಅಥವಾ ವಿತರಕರು ಅಡ್ವಾನ್ಸ್ ಕೊಟ್ಟಿದ್ದ ಹಣವನ್ನೂ ಹಿಡಿದು 100 ಕೋಟಿ ರೂಪಾಯಿ ಲೆಕ್ಕಾಚಾರ ಹಾಕಲಾಗುತ್ತಿದೆಯಾ ಎನ್ನುವುದು ಕ್ಲ್ಯಾರಿಟಿ ಸಿಕ್ಕಿಲ್ಲ. ಆದರೂ, ಕನ್ನಡದ ಮತ್ತೊಂದು ಸಿನಿಮಾ ಈ ವರ್ಷ 100 ಕೋಟಿ ಕ್ಲಬ್ ಸೇರುವ ಮೂಲಕ ಸಿನಿ ಇತಿಹಾಸದಲ್ಲಿ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]