Tag: 100 ಸಿನಿಮಾ

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ʻಜೋಶ್‌ʼ ನಟಿ ಪೂರ್ಣ

    ಮೊದಲ ಮಗುವಿನ ನಿರೀಕ್ಷೆಯಲ್ಲಿ ʻಜೋಶ್‌ʼ ನಟಿ ಪೂರ್ಣ

    ಜೋಶ್, 100, ರಾಧನ ಗಂಡ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಮೋಡಿ ಮಾಡಿದ್ದ ನಟಿ ಪೂರ್ಣ ಅಲಿಯಾಸ್ ಶಮ್ನಾ ಕಾಸಿಮ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ನಟಿ ಪೂರ್ಣ ಬೇಬಿ ಶವರ್‌ ಕಾರ್ಯಕ್ರಮದ ಸಂಭ್ರಮದಲ್ಲಿದ್ದಾರೆ.

    ಬಹುಭಾಷಾ ನಟಿ ಪೂರ್ಣ ಇದೀಗ ತಾಯಿಯಾಗುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಪೂರ್ಣ ಕಳೆದ 2022ರ ಅಕ್ಟೋಬರ್ 25ರಂದು ಶನಿದ್ ಅಸಿಫ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದುಬೈ ಮೂಲದ ಉದ್ಯಮಿ ಶನಿದ್ ಜೊತೆ ಅದ್ದೂರಿಯಾಗಿ ವಿವಾಹವಾಗಿದ್ದರು. ಇದನ್ನೂ ಓದಿ: `ಗಟ್ಟಿಮೇಳ’ ನಟಿ ಪ್ರಿಯಾ ಜೊತೆ ಸಿದ್ದು ಮದುವೆ ಡೇಟ್ ಫಿಕ್ಸ್

    ಈಗ ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಮನೆಗೆ ಹೊಸ ಅತಿಥಿ ಆಗಮನದ ಸಂಭ್ರಮದ ನಡುವೆ ಬೇಬಿ ಶವರ್ ಕಾರ್ಯಕ್ರಮವು ಅದ್ದೂರಿಯಾಗಿ ನಡೆದಿದೆ. ಕೆಂಪು ಬಣ್ಣದ ಸೀರೆಯಲ್ಲಿ ನಟಿ ಮಿರ ಮಿರ ಅಂತಾ ಮಿಂಚಿದ್ದಾರೆ. ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    ಇನ್ನೂ ಮದುವೆಯಾಗಿ ಕೆಲವೇ ತಿಂಗಳಿಗೆ ನಟಿ ಪೂರ್ಣ (Actress Purnaa) ತಾಯಿಯಾಗುತ್ತಿರುವ ಗುಡ್ ನ್ಯೂಸ್ ನೀಡಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇನ್ನೂ ಪತಿ ಶನಿದ್‌ ಅನುಪಸ್ಥಿತಿಯಲ್ಲಿ ನಟಿಯ ಬೇಬಿ ಶವರ್‌ ಕಾರ್ಯಕ್ರಮ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ವಲ್ಪ ಎಚ್ಚರ ತಪ್ಪಿದರೂ ‘ದಿಸ್ ಟೆಕ್ನಾಲಜಿ ಈಸ್ ಕಿಲ್ಲಿಂಗ್ ಯುವರ್ ಲೈಫ್’ ಎನ್ನುತ್ತಿದೆ 100 ಸಿನಿಮಾ

    ಸ್ವಲ್ಪ ಎಚ್ಚರ ತಪ್ಪಿದರೂ ‘ದಿಸ್ ಟೆಕ್ನಾಲಜಿ ಈಸ್ ಕಿಲ್ಲಿಂಗ್ ಯುವರ್ ಲೈಫ್’ ಎನ್ನುತ್ತಿದೆ 100 ಸಿನಿಮಾ

    ಚಿತ್ರ: 100
    ನಿರ್ದೇಶನ: ರಮೇಶ್ ಅರವಿಂದ್
    ನಿರ್ಮಾಪಕ: ಎಂ ರಮೇಶ್ ರೆಡ್ಡಿ, ಉಮಾ
    ಸಂಗೀತ: ರವಿ ಬಸ್ರೂರು
    ಛಾಯಾಗ್ರಹಣ: ಸತ್ಯ ಹೆಗ್ಡೆ
    ತಾರಾಬಳಗ: ರಮೇಶ್ ಅರವಿಂದ್, ರಚಿತಾ ರಾಮ್, ಪೂರ್ಣ, ಮಾಲತಿ ಸುದೀರ್, ಪ್ರಕಾಶ್ ಬೆಳವಾಡಿ, ವಿಶ್ವ ಕರ್ಣ ಇತರರು.

    ಮೇಶ್ ಅರವಿಂದ್ ನಿರ್ದೇಶಿಸಿ ನಟಿಸಿರುವ 100 ಸಿನಿಮಾ ಟ್ರೇಲರ್ ಮೂಲಕ ಚಿತ್ರರಸಿಕರಲ್ಲಿ ಬಹಳ ನಿರೀಕ್ಷೆ ಮೂಡಿಸಿತ್ತು. ತಂತ್ರಜ್ಞಾನ ಇಂದು ನಮ್ಮ ದಿನನಿತ್ಯದ ಕೆಲಸಗಳನ್ನು ಎಷ್ಟು ಸುಲಭವಾಗಿಸಿದೆಯೋ ಅಷ್ಟೇ ನಮ್ಮ ಬದುಕಿಗೆ ಮಾರಕವೂ ಆಗಿದೆ. ಅದರ ಮೇಲಿನ ಹಗುರಾದ ಮನೋಭಾವದ ಬದಲಾಗಿ ಎಚ್ಚರಿಕೆಯೂ ಇರಬೇಕು ಎಂಬ ಸೂಕ್ಷ್ಮ ಸಂದೇಶ ಹೊತ್ತ ಮನರಂಜನಾತ್ಮಕ ಸಿನಿಮಾ 100.

    ನಾಯಕ ವಿಷ್ಣು ಒಬ್ಬ ದಕ್ಷ ಪೊಲೀಸ್ ಅಧಿಕಾರಿ. ನಿಷ್ಠಾವಂತ ಅಧಿಕಾರಿಯಾಗಿ ಹೆಸರುಗಳಿಸಿಕೊಂಡಿದ್ದ ವಿಷ್ಣುಗೆ ತಾಯಿ, ತಂಗಿ, ಪತ್ನಿ, ಮಗಳು ಒಳಗೊಂಡ ಮುದ್ದಾದ ಕುಟುಂಬವೂ ಇರುತ್ತದೆ. ಸಮಾಜದಲ್ಲಿ ಒಬ್ಬ ಒಳ್ಳೆ ವ್ಯಕ್ತಿಯಾಗಿ ಕುಟುಂಬವನ್ನೂ ಅಷ್ಟೇ ಜವಾಬ್ದಾರಿಯಿಂದ ನಿಭಾಯಿಸಿಕೊಂಡು ಹೋಗುವ ವ್ಯಕ್ತಿ ವಿಷ್ಣು. ಹೀಗಿರುವಾಗ ಉನ್ನತ ಅಧಿಕಾರಿಗಳು ಕೆಲವರ ಪೋನ್ ಟ್ಯಾಪ್ ಮಾಡಿ ರಿಪೋರ್ಟ್ ನೀಡಲು ವಿಷ್ಣುಗೆ ಹೇಳಿರುತ್ತಾರೆ. ಆಗಲೇ ಉದ್ಯಮಿಗಳು, ರಾಜಕಾರಣಿಗಳು, ಪೊಲೀಸ್ ಇಲಾಖೆಯ ಭ್ರಷ್ಟಾಚಾರಗಳ ಕರಾಳ ಜಗತ್ತು ವಿಷ್ಣುಗೆ ಗೋಚರಿಸುತ್ತದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರನ್ನು ಪರಿಚಯ ಮಾಡಿಕೊಂಡು ಅವರ ಜೀವನದ ಜೊತೆ ಆಟವಾಡುತ್ತಾ, ಫ್ಲರ್ಟ್ ಮಾಡುತ್ತಿದ್ದ ಹರ್ಷನ ನಂಬರ್ ಟ್ಯಾಪ್ ಮಾಡಿದಾಗ ಬಹುದೊಡ್ಡ ಶಾಕ್ ಕಾದಿರುತ್ತದೆ. ಆತ ಉದ್ಯಮಿಯ ಪತ್ನಿ ಜೊತೆಗಲ್ಲದೆ ತನ್ನ ಪತ್ನಿ ಹಾಗೂ ತಂಗಿ ಜೊತೆಗೂ ಮಾತನಾಡಿರುವ ಆಡಿಯೋ ಕೇಳಿಸಿಕೊಂಡು ಶಾಕ್ ಗೆ ಒಳಗಾಗುತ್ತಾನೆ. ಆ ಶಾಕ್ ನಿಂದ ಹೊರಬರಬೇಕು ಎನ್ನುವಷ್ಟರಲ್ಲೇ ಇಲ್ಲಿವರೆಗೆ ದಾಖಲಿಸಿದ ಪೋನ್ ಟ್ಯಾಪ್ ವಿವರಗಳು, ಆಡಿಯೋ ಫೈಲ್ ಲೀಕ್ ಆಗಿ ವಿಷ್ಣು ಸಂಕಷ್ಟಕ್ಕೆ ಸಿಲುಕುತ್ತಾನೆ. ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡಲ್ಲೂ ಸಂಕಷ್ಟಕ್ಕೆ ಸಿಲುಕುವ ವಿಷ್ಣು ತನ್ನ ಕೆಲಸವನ್ನು ಉಳಿಸಿಕೊಳ್ಳುವುದರ ಜೊತೆಗೆ ಕುಟುಂಬವನ್ನು ದೊಡ್ಡ ಗಂಡಾಂತರದಿಂದ ಹೇಗೆ ಪಾರು ಮಾಡುತ್ತಾನೆ ಎನ್ನುವುದೇ 100 ಸಿನಿಮಾದ ಕಥಾಹಂದರ. ಹಾಗಂತ ಇದಿಷ್ಟೇ ಸಿನಿಮಾನ ಅಂದ್ಕೋಬೇಡಿ ಇದರಾಚೆಗೂ ಮನಮುಟ್ಟುವ, ಕಣ್ತೆರೆಸುವ ಸೂಕ್ಷ್ಮಾತಿ ಸೂಕ್ಷ್ಮಗಳು ಸಿನಿಮಾದಲ್ಲಿವೆ. ಅದಕ್ಕೆ ನೀವು ಸಿನಿಮಾ ನೋಡಲೇಬೇಕು. ಇದನ್ನೂ ಓದಿ: ನ.19ಕ್ಕೆ ಸಾಮಾಜಿಕ ಜಾಲತಾಣಗಳ ಭೀಕರತೆಯನ್ನು ಅನಾವರಣ ಮಾಡಲಿದೆ ‘100’ ಸಿನಿಮಾ

    ಫ್ಯಾಮಿಲಿ ಥ್ರಿಲ್ಲರ್ ಹಾಗೂ ಸೈಬರ್ ಕ್ರೈಂ ಕಥಾಹಂದರಕ್ಕೆ ಬೇಕಾದ ಎಲ್ಲಾ ಎಲಿಮೆಂಟ್‍ಗಳು ಸಿನಿಮಾದಲ್ಲಿದೆ. ಅದುವೇ ಸಿನಿಮಾ ನೋಡುಗರನ್ನು ಸೀಟಿನಂಚಿನಲ್ಲಿ ಕೂರಿಸಿ ಥ್ರಿಲ್ ನೀಡುತ್ತದೆ. ಮುಂದೇನಾಗುತ್ತದೆ ಎನ್ನುವ ಕುತೂಹಲದೊಂದಿಗೆ ಹಿಡಿದಿಡುತ್ತದೆ. ಊಹೆಗೂ ನಿಲುಕದ ರೋಚಕ ತಿರುವುಗಳು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಸಾಮಾಜಿಕ ಜಾಲತಾಣಗಳ ಕಬಂದ ಬಾಹು ನಮ್ಮನ್ನು ಆವರಿಸಿರುವ ಪರಿ ಹಾಗೂ ಅದರಿಂದ ಜೀವ ಹಾಗೂ ಜೀವನದ ಮೇಲೆ ಆಗುತ್ತಿರುವ ಕುತ್ತನ್ನು ಬಹಳ ಪರಿಣಾಮಕಾರಿಯಾಗಿ ಉತ್ತಮ ಸಂಭಾಷಣೆಯೊಂದಿಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಮೇಶ್ ಅರವಿಂದ್. ಇದನ್ನೂ ಓದಿ: ಫ್ಯಾಮಿಲಿ ಜೊತೆಗೆ ಜಾಲಿ ಮೂಡ್‍ನಲ್ಲಿ ಶ್ವೇತಾ ಚೆಂಗಪ್ಪ

    ವಿಷ್ಣು ಪಾತ್ರದಲ್ಲಿ ರಮೇಶ್ ಅರವಿಂದ್ ನಟನೆ ಬಗ್ಗೆ ಎರಡು ಮಾತಿಲ್ಲ. ರಮೇಶ್ ಅರವಿಂದ್ ಪತ್ನಿ ಪಾತ್ರದಲ್ಲಿ ಪೂರ್ಣ ಗಮನ ಸೆಳೆಯುತ್ತಾರೆ. ಗ್ಲ್ಯಾಮರ್ ಪಾತ್ರಗಳ ಮೂಲಕ ಕಣ್ಮನ ಸೆಳೆಯುತ್ತಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕನ ತಂಗಿ ಹಿಮಾ ಪಾತ್ರದಲ್ಲಿ ಹೋಮ್ಲಿಯಾಗಿ ಕಾಣಸಿಕೊಂಡಿದ್ದು ಎಲ್ಲರಿಗೂ ಇಷ್ಟವಾಗುತ್ತಾರೆ. ಖಳ ನಟನಾಗಿ ಹರ್ಷ ಪಾತ್ರಧಾರಿ ವಿಶ್ವ ಕರ್ಣ ತಮ್ಮ ಅಭಿನಯದ ಮೂಲಕ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿ ಕೋಟೆ, ಮಾಲತಿ ಸುದೀರ್ ತಮ್ಮ ಪಾತ್ರವನ್ನು ಎಂದಿನಂತೆ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರವಿ ಬಸ್ರೂರು ಹಿನ್ನೆಲೆ ಸಂಗೀತ, ಸತ್ಯ ಹೆಗ್ಡೆ ಕ್ಯಾಮೆರಾ ವರ್ಕ್ ಹೆಚ್ಚೇನು ವಿಶೇಷತೆ ಅನ್ನಿಸದಿದ್ದರೂ ನೋಡಿಸಿಕೊಂಡು ಹೋಗುತ್ತದೆ. ಗುರು ಕಶ್ಯಪ್ ಸಂಭಾಷಣೆ ಸಿನಿಮಾದ ಮುಖ್ಯ ಆಕರ್ಷಣೆ ಅಂದ್ರೆ ತಪ್ಪಾಗೋದಿಲ್ಲ. ಮೈನವಿರೇಳಿಸೋ ಸಾಹಸ ದೃಶ್ಯಗಳು ಶಿಳ್ಳೆ ಗಿಟ್ಟಿಸಿಕೊಂಡರೂ ಕೊನೆಯಲ್ಲಿ ಬರುವ ಫೈಟಿಂಗ್ ಸೀನ್ ಕೊಂಚ ಅಭಾಸ ಎನ್ನಿಸಿದರೂ ಕಮರ್ಶಿಯಲ್ ದೃಷ್ಟಿಯಲ್ಲಿ ನೋಡಿದಾಗ ಅವಶ್ಯ ಎನಿಸುತ್ತದೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾ ಬಳಕೆದಾರರ ಜೊತೆಗೆ ಪೋಷಕರು ಕೂಡ ಮಿಸ್ ಮಾಡ್ದೆ ನೋಡಲೇಬೇಕಾದ ಸಿನಿಮಾ 100.

    ಪಬ್ಲಿಕ್ ರೇಟಿಂಗ್: 3.5/5

  • ಎರಡು ಮಿಲಿಯನ್‍ಗೂ ಹೆಚ್ಚಿನ ವೀಕ್ಷಣೆ ಕಂಡ ‘100’ ಸಿನಿಮಾದ ಥ್ರಿಲ್ಲಿಂಗ್ ಟ್ರೇಲರ್

    ಎರಡು ಮಿಲಿಯನ್‍ಗೂ ಹೆಚ್ಚಿನ ವೀಕ್ಷಣೆ ಕಂಡ ‘100’ ಸಿನಿಮಾದ ಥ್ರಿಲ್ಲಿಂಗ್ ಟ್ರೇಲರ್

    ಸ್ಯಾಂಡಲ್‍ವುಡ್ ಚಿರಯುವಕ ನಟ, ನಿರ್ದೇಶಕ, ನಿರ್ಮಾಪಕ ರಮೇಶ್ ಅರವಿಂದ್ ನಿರ್ದೇಶಿಸಿ ನಟಿಸಿರುವ ‘100’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸೈಬರ್ ಕ್ರೈಂ, ಫ್ಯಾಮಿಲಿ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ನವೆಂಬರ್ 19ಕ್ಕೆ ರಾಜ್ಯಾದ್ಯಂತ ತೆರೆ ಕಾಣಲು ಸಜ್ಜಾಗಿದೆ. ಸಿನಿಮಾದ ಥ್ರಿಲ್ಲಿಂಗ್ ಹಾಗೂ ರೋಚಕ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರನ್ನು ಇನ್ನಿಲ್ಲದಂತೆ ಸೆಳೆಯುತ್ತಿದೆ. ಅಷ್ಟೇ ಅಲ್ಲ ಬಿಡುಗಡೆಯಾದ ಕೆಲ ಗಂಟೆಗಳಲ್ಲೇ 20 ಲಕ್ಷಕ್ಕೂ ಹೆಚ್ಚಿನ ಪ್ರೇಕ್ಷಕರ ವೀಕ್ಷಣೆ ಗಳಿಸಿಕೊಂಡಿದೆ.

    ‘100’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಎಲ್ಲರನ್ನು ಕುತೂಹಲದ ಅಂಗಳದಲ್ಲಿ ಕೂರುವಂತೆ ಮಾಡಿದೆ. ಪ್ರತಿ ಕಥೆಯಲ್ಲೂ ಒಬ್ಬ ಹೀರೋ, ಒಬ್ಬ ವಿಲನ್ ಇರ್ತಾರೆ ಆದರೆ ನಮ್ಮ ಸಿನಿಮಾದಲ್ಲಿ ಇಬ್ಬರೂ ವಿಲನ್ನೇ ಎಂಬ ಇಂಟ್ರಸ್ಟಿಂಗ್ ಡೈಲಾಗ್ ನಿಂದ ಆರಂಭವಾಗೋ ಟ್ರೇಲರ್ ಸೀಟಿನಂಚಿನಲ್ಲಿ ಕೂರಿಸೋ ನೂರಾರು ರೋಚಕ ಟ್ವಿಸ್ಟ್, ಟರ್ನ್‍ಗಳನ್ನು ಒಳಗೊಂಡಿದೆ ಎಂಬುದನ್ನು ಸಾರಿ ಹೇಳುತ್ತಿದೆ. ಇದರ ಜೊತೆಗೆ ಫ್ಯಾಮಿಲಿ ಹಾಗೂ ಸೊಸೈಟಿಗೆ ಒಂದೊಳ್ಳೆ ಸಂದೇಶವೂ ಸಿನಿಮಾದಲ್ಲಿದೆ ಎಂಬ ಸುಳಿವು ಟ್ರೇಲರ್ ನೀಡಿದೆ. ರವಿ ಬಸ್ರೂರು ಹಿನ್ನೆಲ್ಲೆ ಸಂಗೀತವೂ ಬೇರೆಯದ್ದೇ ಲೆವೆಲ್‍ನಲ್ಲಿ ಮೂಡಿ ಬಂದಿದ್ದು, ಸಿನಿಮಾ ತಾಂತ್ರಿಕವಾಗಿಯೂ ಶ್ರೀಮಂತವಾಗಿ ಮೂಡಿ ಬಂದಿದೆ ಎನ್ನುವುದು ತಿಳಿಯುತ್ತೆ. ಒಟ್ಟಿನಲ್ಲಿ, ಟ್ರೇಲರ್ ಕಂಡು ಸಖತ್ ಥ್ರಿಲ್ ಆಗಿದ್ದಾರೆ ಪ್ರೇಕ್ಷಕರು. ಈ ರೋಚಕ ಭರಿತ ಟ್ರೇಲರ್ ಎರಡು ಮಿಲಿಯನ್‍ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡು ಯೂಟ್ಯೂಬ್‍ನಲ್ಲಿ ಟ್ರೆಂಡಿಂಗಲ್ಲಿದ್ದು ಇನ್ನಷ್ಟು ಜನರನ್ನು ಸೆಳೆಯುತ್ತಿದೆ.

    ಚಿತ್ರದಲ್ಲಿ ರಮೇಶ್ ಅರವಿಂದ್ ಇನ್ಸ್‍ಪೆಕ್ಟರ್ ವಿಷ್ಣು ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಜವಾಬ್ದಾರಿಯುತ ಫ್ಯಾಮಿಲಿ ಮ್ಯಾನ್ ಆಗಿಯೂ ಕಾಣಸಿಗಲಿದ್ದಾರೆ. ಡಿಂಪಲ್ ಕ್ವೀನ್ ರಚಿತ ರಾಮ್, ಪೂರ್ಣ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿಕೋಟೆ, ಮಾಲತಿ ಸುಧೀರ್, ಬೇಬಿ ಸ್ಮಯ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಸೂರಜ್ ಪ್ರೋಡಕ್ಷನ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ಉಮಾ, ಎಂ.ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಸತ್ಯ ಹೆಗ್ಡೆ ಕ್ಯಾಮೆರಾ ಕಣ್ಣಲ್ಲಿ ಸಿನಿಮಾ ಸೆರೆಯಾಗಿದೆ. ಉಳಿದಂತೆ ಶ್ರೀನಿವಾಸ್ ಕಲಾಲ್ ಸಂಕಲನ, ಗುರು ಕಶ್ಯಪ್ ಸಂಭಾಷಣೆ, ಧನಂಜಯ್ ನೃತ್ಯ ನಿರ್ದೇಶನ, ಜಾಲಿ ಬಾಸ್ಟಿನ್, ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಟ್ರೇಲರ್ ತುಣುಕಿನ ಮೂಲಕವೇ ಈ ಮಟ್ಟಿನ ಥ್ರಿಲ್ ನೀಡಿರುವ 100 ಸಿನಿಮಾ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಎಷ್ಟು ಸೆಳೆಯಲಿದೆ ಅನ್ನೋದಕ್ಕೆ ನವೆಂಬರ್ 19ಕ್ಕೆ ಉತ್ತರ ಸಿಗಲಿದೆ.