Tag: 100

  • ಮೋದಿ ತಾಯಿಗೆ 100ರ ಸಂಭ್ರಮ – ಶುಭಕೋರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪ್ರಧಾನಿ

    ಮೋದಿ ತಾಯಿಗೆ 100ರ ಸಂಭ್ರಮ – ಶುಭಕೋರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪ್ರಧಾನಿ

    ಗಾಂಧೀನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಮೋದಿ ಅವರು ಇಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

    ಶತಾಯುಷಿಯಾದ ತಾಯಿ ಹೀರಾಬೆನ್‌ ಅವರನ್ನು ಪ್ರಧಾನಿ ಮೋದಿ ಭೇಟಿಯಾದರು. ಗುಜರಾತ್‌ ರಾಜಧಾನಿ ಗಾಂಧೀನಗರದಲ್ಲಿರುವ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಮೋದಿ, ತಾಯಿಯ ಹುಟ್ಟುಹಬ್ಬವನ್ನು ಆಚರಿಸಿದರು. ಇದನ್ನೂ ಓದಿ: 2023ರ ಚುನಾವಣೆಗೆ ಬಿಜೆಪಿ ಸಜ್ಜು- ಕೋಟೆನಾಡಿಗೆ ಇಂದು ಜೆ.ಪಿ. ನಡ್ಡಾ ಭೇಟಿ

    ತಮ್ಮ ತಾಯಿಗೆ ಸಿಹಿ ತಿನಿಸಿ ಜನ್ಮದಿನದ ಶುಭಾಶಯ ತಿಳಿಸಿದ ಮೋದಿ ನಂತರ ತಾಯಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

    ಜನ್ಮದಿನದ ಸಂಭ್ರಮದಲ್ಲಿರುವ ಹೀರಾಬೆನ್ ಮೋದಿ ಅವರಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಪ್ರಾಪ್ತವಾಗಲಿ ಎಂದು ಹಾರೈಸಿ ಮೋದಿ ಅವರ ಹುಟ್ಟೂರು ವಡನಗರದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

    Live Tv

  • ಗಮನಿಸಿ, ಹಳೆಯ 100 ರೂ. ನೋಟ್ ಬ್ಯಾನ್ ಆಗಲ್ಲ

    ಗಮನಿಸಿ, ಹಳೆಯ 100 ರೂ. ನೋಟ್ ಬ್ಯಾನ್ ಆಗಲ್ಲ

    ನವದೆಹಲಿ: ಹಳೆಯ 100 ರೂ. ನೋಟು ನಿಷೇಧಗೊಳ್ಳಲಿದೆ ಎಂಬ ಸುದ್ದಿಯನ್ನು ದಯವಿಟ್ಟು ಶೇರ್ ಮಾಡಬೇಡಿ.

    ದೇಶದಲ್ಲಿ ಈಗ ಚಲಾವಣೆಯಾಗುತ್ತಿರುವ ಹಳೆಯ 100, 10, ಮತ್ತು 5 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸುವ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಚಿಂತನೆ ನಡೆಸಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಈ ಸುದ್ದಿ ನಕಲಿ ಆಗಿದ್ದು ಇಲ್ಲಿಯವರೆಗೆ ಆರ್‌ಬಿಐ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇದನ್ನೂ ಓದಿ: ಹಳೆಯ 100 ರೂ. ಹಿಂಪಡೆಯುವುದಿಲ್ಲ – ಆರ್‌ಬಿಐ ಸ್ಪಷ್ಟನೆ

    100 ರೂಪಾಯಿ ಹಳೆಯನೋಟುಗಳ ಚಲಾವಣೆ ಸ್ಥಗಿತಗೊಳಿಸಿ ಹೊಸ ಸೀರಿಸ್‍ನ ನೋಟುಗಳನ್ನು ಚಲಾವಣೆಗೆ ತರಲಾಗುವುದು. ಹಾಗಾಗಿ ಹಳೆಯ ನೋಟುಗಳ ಮುದ್ರಣ ಸ್ಥಗಿತಗೊಳಿಸಿ ಹಳೆಯ ನೋಟುಗಳನ್ನು ಹಂತಹಂತವಾಗಿ ಬ್ಯಾಂಕ್‍ಗಳ ಮೂಲಕ ಹಿಂಪಡೆಯಲಾಗುತ್ತಿದೆ ಎಂದು ಪೋಸ್ಟ್‌ನಲ್ಲಿದೆ.

    ಈ ಬಗ್ಗೆ ಈ ಹಿಂದೆಯೇ ಪಿಐಬಿ ಫ್ಯಾಕ್ಟ್ ಚೆಕ್ ಇದು ಸುಳ್ಳು ಸುದ್ದಿ. ಹಳೆಯ 100 ನೋಟು ಅಮಾನ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ

    2018ರಲ್ಲಿ ಹೊಸ 100 ರೂಪಾಯಿ ಮುಖಬೆಲೆಯ ನೋಟುಗಳು ಹೊಸ ಬಣ್ಣದಿಂದ ಚಲಾವಣೆಗೆ ಬಂದಿದೆ. ಈ ನೋಟುಗಳ ಜೊತೆಗೆ ಹಳೆಯ ಮುಖ ಬೆಲೆಯ ನೋಟುಗಳು ಮುಂದುವರಿಯುತ್ತದೆ ಎಂದು ಆರ್‌ಬಿಐ ಈ ಹಿಂದೆ ತಿಳಿಸಿತ್ತು.

  • ನ.19ಕ್ಕೆ ಸಾಮಾಜಿಕ ಜಾಲತಾಣಗಳ ಭೀಕರತೆಯನ್ನು ಅನಾವರಣ ಮಾಡಲಿದೆ ‘100’ ಸಿನಿಮಾ

    ನ.19ಕ್ಕೆ ಸಾಮಾಜಿಕ ಜಾಲತಾಣಗಳ ಭೀಕರತೆಯನ್ನು ಅನಾವರಣ ಮಾಡಲಿದೆ ‘100’ ಸಿನಿಮಾ

    ಮೊಬೈಲ್ ಬಳಕೆ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಮಾರಕವೂ ಹೌದು. ಅದರಲ್ಲೂ ಯುವ ಜನತೆ ಈ ಜಂಗಮವಾಣಿಗೆ ದಾಸರಾಗಿ ಬಿಟ್ಟಿದ್ದಾರೆ. ಅರಿವಿಲ್ಲದೆ ಜೀವಕ್ಕೆ ಕುತ್ತು ತರಿಸಿಕೊಳ್ಳುವ ಹಂತವನ್ನು ಮುಟ್ಟಿದ್ದಾರೆ. ಪ್ರಸ್ತುತ ದಿನಗಳಲ್ಲಿ ಹೆಚ್ಚಾಗುತ್ತಿರುವ ಸೈಬರ್ ಕ್ರೈಂ ಕೇಸ್ ಗಳು ಇದಕ್ಕೆ ಸಾಕ್ಷಿ. ಇದನ್ನೇ ಆಧಾರವಾಗಿಟ್ಟುಕೊಂಡು ನಟ ರಮೇಶ್ ಅರವಿಂದ್ ‘100’ ಸಿನಿಮಾವನ್ನು ನಿರ್ದೇಶಿಸಿದ್ದು, ಇದೇ ಸಿನಿಮಾ ಶುಕ್ರವಾರ ತೆರೆಗೆ ಬರಲು ಸಜ್ಜಾಗಿದೆ.

    ಟ್ರೇಲರ್ ಮೂಲಕ ಭಾರೀ ಸಂಚಲನ ಸೃಷ್ಟಿಸಿರುವ ಸಿನಿಮಾ ‘100’. ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿರುವ ಸಾಮಾಜಿಕ ಜಾಲತಾಣಗಳಿಂದಾಗುವ ಅನಾಹುತಗಳನ್ನು ಪ್ರಧಾನವಾಗಿಟ್ಟುಕೊಂಡು ಚಿತ್ರಕ್ಕೆ ಕಥೆ ಹೆಣೆಯಲಾಗಿದೆ. ಸಾಮಾಜಿಕ ಸಂದೇಶವನ್ನೊಳಗೊಂಡ ಈ ಚಿತ್ರಕ್ಕೆ ರಮೇಶ್ ಅರವಿಂದ ಆಕ್ಷನ್ ಕಟ್ ಹೇಳುವುದರ ಜೊತೆ ಚಿತ್ರದಲ್ಲಿ ನಾಯಕ ನಟನಾಗಿಯೂ ನಟಿಸಿದ್ದಾರೆ. ಇದನ್ನೂ ಓದಿ: ಅಮೆಜಾನ್‍ನಲ್ಲಿ ಸಿಹಿ ತುಳಸಿ ನೆಪದಲ್ಲಿ ಗಾಂಜಾ ಮಾರಾಟ

    ಕೇವಲ ಸಂದೇಶವನ್ನು ಮುಟ್ಟಿಸಬೇಕು, ಜನರನ್ನು ಜಾಗೃತಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಸಜ್ಜಾದ ಸಿನಿಮಾಗಳು ಪ್ರೇಕ್ಷಕರ ಮನ ತಲುಪುವಲ್ಲಿ ವಿಫಲವಾದ ನಿದರ್ಶನಗಳು ಹಲವಿದೆ. ಇದನ್ನೆಲ್ಲ ಮನದಲ್ಲಿಟ್ಟುಕೊಂಡು ಪಕ್ಕಾ ಕಮರ್ಷಿಯಲ್ ಹಾದಿಯಲ್ಲಿ ಜನರಿಗೆ ಹಾಗೂ ಯುವ ಜನತೆಗೆ ತಲುಪಿಸಬೇಕಾದ ಸಂದೇಶವನ್ನು ಮುಟ್ಟಿಸಲು ರಮೇಶ್ ಅರವಿಂದ್ ಸಜ್ಜಾಗಿದ್ದಾರೆ. ಫ್ಯಾಮಿಲಿ ಥ್ರಿಲ್ಲರ್ ಹಾಗೂ ಸೈಬರ್ ಕ್ರೈಂ ಕಥಾಹಂದರ ಸಿನಿಮಾದಲ್ಲಿದ್ದು ರೋಚಕಗೊಳಿಸುವ ಹಾಗೂ ಸೀಟಿನಂಚಿನಲ್ಲಿ ಕೂರಿಸೋ ಥ್ರಿಲ್ಲಿಂಗ್ ಸನ್ನಿವೇಶಗಳು, ಟ್ವಿಸ್ಟ್ ಅಂಡ್ ಟರ್ನ್ ಗಳು ಚಿತ್ರದಲ್ಲಿವೆ. ಮನರಂಜನೆ ನೀಡುತ್ತಲೇ ಸಾಮಾಜಿಕ ಜಾಲತಾಣಗಳ ಭೀಕರ ಮುಖವನ್ನು ಅನಾವರಣ ಮಾಡುತ್ತಾ ಪ್ರೇಕ್ಷಕರ ಕಣ್ತೆರಸಲಿದೆ 100 ಸಿನಿಮಾ.

    ಚಿತ್ರದಲ್ಲಿ ರಮೇಶ್ ಅರವಿಂದ್ ಪೊಲೀಸ್ ಅಧಿಕಾರಿಯಾಗಿ ಹಾಗೂ ಹೆಂಡತಿ, ಮಗು, ತಂಗಿ, ತಾಯಿಯನ್ನೊಳಗೊಂಡ ಮುದ್ದಾದ ಕುಟುಂಬದ ಜವಾಬ್ದಾರಿಯುತ ವ್ಯಕ್ತಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್, ಪೂರ್ಣ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ವಿಶ್ವಕರ್ಣ, ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿಕೋಟೆ, ಮಾಲತಿ ಸುಧೀರ್, ಬೇಬಿ ಸ್ಮಯ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.

    ಇದೇ ಮೊದಲ ಬಾರಿಗೆ ರಮೇಶ್ ಅರವಿಂದ್ ಹೈವೋಲ್ಟೇಜ್ ಆಕ್ಷನ್ ಸೀಕ್ವೆಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ರವಿವರ್ಮ ಹಾಗೂ ಜಾಲಿ ಬಾಸ್ಟಿನ್ ಚಿತ್ರಕ್ಕೆ ಮೈ ನವಿರೇಳಿಸೋ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಸತ್ಯ ಹೆಗಡೆ ಛಾಯಾಗ್ರಹಣ, ಶ್ರೀನಿವಾಸ್ ಕಲಾಲ್ ಸಂಕಲನ, ಧನಂಜಯ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಸೂರಜ್ ಪ್ರೊಡಕ್ಷನ್ ಬ್ಯಾನರ್ ನಡಿ ಎಂ ರಮೇಶ್ ರೆಡ್ಡಿ, ಉಮಾ ‘100’ ಸಿನಿಮಾ ನಿರ್ಮಾಣ ಮಾಡಿದ್ದು ನವೆಂಬರ್ 19ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

  • ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ರಂಗೇರಿಸಿತು 100ರ ಪಾರ್ಟಿಸಾಂಗ್!

    ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ರಂಗೇರಿಸಿತು 100ರ ಪಾರ್ಟಿಸಾಂಗ್!

    ನಟ, ನಿರ್ದೇಶಕರಾಗಿ ಮಾತ್ರವಲ್ಲದೇ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮದ ಮೂಲಕವೂ ಮನೆ ಮಾತಾಗಿರುವವರು ರಮೇಶ್ ಅರವಿಂದ್. ಇತ್ತೀಚೆಗಷ್ಟೇ ಪತ್ತೇದಾರಿಕೆಯ ಗೆಟಪ್ಪಿನಲ್ಲಿ ಮಿಂಚಿ ಗೆದ್ದಿದ್ದ ರಮೇಶ್, ಇದೀಗ ಮತ್ತೆ 100 ಅನ್ನೋ ಸಿನಿಮಾ ಮೂಲಕ ಮತ್ತೊಂದು ಅವತಾರದಲ್ಲಿ ಪ್ರೇಕ್ಷಕರನ್ನು ತಾಕುವ ಖುಷಿಯಲ್ಲಿದ್ದಾರೆ. ಅದೇ ಖುಷಿಯಲ್ಲಿ ಚಿತ್ರತಂಡ ರಮೇಶ್ ಅರವಿಂದ್ ಅವರ ಬರ್ತ್‍ಡೇ ಸ್ಪೆಷಲ್ ಎಂಬಂತೆ 100 ಚಿತ್ರದ ಚೆಂದದ ಲಿರಿಕಲ್ ವಿಡಿಯೋ ಸಾಂಗ್ ಅನ್ನು ಬಿಡುಗಡೆಗೊಳಿಸಿದೆ.

    ಈ ಹಿಂದೆ ಸದಭಿರುಚಿಯ ಸಿನಿಮಾಗಳ ಮೂಲಕ ಹೆಸರಾಗಿದ್ದ ಎಂ.ರಮೇಶ್ ರೆಡ್ಡಿ ನಂಗಲಿ ನಿರ್ಮಾಣದಲ್ಲಿ ‘100’ ಚಿತ್ರ ಮೂಡಿ ಬಂದಿದೆ. ಕೊರೊನಾ ಸಂಕಷ್ಟ ಒಂದಿಲ್ಲದೇ ಹೋಗಿದ್ದರೆ ಖಂಡಿತವಾಗಿಯೂ ಇಷ್ಟು ಹೊತ್ತಿಗೆಲ್ಲ ಈ ಚಿತ್ರ ಪ್ರೇಕ್ಷಕರ ಮುಂದೆ ಬಂದಿರುತ್ತಿತ್ತು. ಆ ಹಿನ್ನಡೆಯನ್ನೂ ಲೆಕ್ಕಿಸದೆ ಚಿತ್ರತಂಡ ಎಲ್ಲ ಕೆಲಸ ಕಾರ್ಯಗಳನ್ನು ಪೂರೈಸಿಕೊಂಡಿದೆ. ಬಿಡುಗಡೆಯ ಹೊಸ್ತಿಲಲ್ಲಿಯೇ ರಮೇಶ್ ಅವರ ಬರ್ತ್‍ಡೇಗಾಗಿ ಈ ಲಿರಿಕಲ್ ವೀಡಿಯೋ ಲಾಂಚ್ ಮಾಡಲಾಗಿದೆ.

    ಇದು ಪಾರ್ಟಿ ಮೂಡಿಗೆ ಜಾರಿಸುವಂಥ ಮಜವಾದ ಹಾಡು. ವಿಶೇಷ ಅಂದ್ರೆ ಈ ಹಾಡಿಗೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕಿನ್ನಲ್ ರಾಜ್, ಪ್ರಮೋದ್ ಮರವಂತೆ ಮತ್ತು ಭಾಸ್ಕರ್ ಬಂಗೇರ ಸೇರಿಕೊಂಡು ಈ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ರಮೇಶ್ ಅರವಿಂದ್, ಅನನ್ಯಾ ಭಟ್ ಮತ್ತು ನೀತು ಸುಬ್ರಹ್ಮಣ್ಯ ಅಷ್ಟೇ ಮಜವಾಗಿ ಹಾಡಿದ್ದಾರೆ.

    ಈವತ್ತಿಗೆ ಸೋಶಿಯಲ್ ಮೀಡಿಯಾ ಅನ್ನೋದು ಸರ್ವವ್ಯಾಪಿಯಾಗಿದೆ. ಮನಸ್ಥಿತಿ ನೆಟ್ಟಗಿದ್ದರೆ ಇದನ್ನು ಸಕಾರಾತ್ಮಕವಾಗಿಯೇ ಬಳಸಿಕೊಳ್ಳಬಹುದು. ಆದ್ರೆ ಕೆಲ ವಿಕೃತರು ಸಾಮಾಜಿಕ ಜಾಲತಾಣಗಳ ವ್ಯಾಪ್ತಿ, ವಿಸ್ತಾರಗಳನ್ನು ಸಮಾಜ ಬಾಹಿರ ದಂಧೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದುವೇ ಹಲವರ ನೆಮ್ಮದಿಗೆ ಕುತ್ತು ತಂದಿದೆ. ಕೆಲ ಸಂದರ್ಭಗಳಲ್ಲಿ ಜೀವ ಹಾನಿಗಳೂ ಸಂಭವಿಸುತ್ತಿವೆ. ಇದೇ ಕಥಾ ಹಂದರ ಹೊಂದಿರೋ ಚೆಂದದ ಕಥೆಯನ್ನಿಲ್ಲಿ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದಾರಂತೆ.