Tag: 10ನೇ ರ್ಯಾಂಕಿಂಗ್

  • ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಪಾಸ್ ಆದ ಗ್ರಾಮೀಣ ಯುವಕ

    ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಪಾಸ್ ಆದ ಗ್ರಾಮೀಣ ಯುವಕ

    ಪಾಟ್ನಾ: ಬಿಹಾರ ಗ್ರಾಮೀಣ ಬಡ ಕುಟುಂಬ ಹಿನ್ನೆಲೆಯಿಂದ ಬಂದ ಸತ್ಯಂ ಗಾಂಧಿಯವರು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದನ್ನೂ ಓದಿ: ಬಂದ್ ಠುಸ್ ಪಟಾಕಿ – ಬೆಂಗಳೂರಿನಲ್ಲಿ ಎಂದಿನಂತೆ ಸಾಗುತ್ತಿದೆ ಜನ ಜೀವನ

    ದೆಹಲಿಯಲ್ಲಿರುವ ಕರೋಲ್‍ಬಾಗ್ ಪಿಜಿಯ ಒಂದು ಸಣ್ಣ ಕೋಣೆಯಲ್ಲಿ 22 ವರ್ಷದ ಸತ್ಯಂ ಗಾಂಧಿಯವರು ಪ್ರತಿನಿತ್ಯ ಕುಳಿತು ಸ್ವಯಂ ಅಧ್ಯಯನ ನಡೆಸಿ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್‍ಸಿ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ 10ನೇ ರ‍್ಯಾಂಕ್ ಪಡೆದು ತೇರ್ಗಡೆಯಾಗಿದ್ದಾರೆ. ಅಲ್ಲದೇ ಯುಪಿಎಸ್‍ಸಿ ಪರೀಕ್ಷೆಗೆ ಯಾವುದೇ ತರಬೇತಿ ಪಡೆಯದೇ ಕೇವಲ ಒಂದು ವರ್ಷದಲ್ಲಿ ಸ್ವಯಂ ಅಧ್ಯಯನ ನಡೆಸಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ ಹಿಂದೂ ತೀವ್ರಗಾಮಿಗಳನ್ನು ಸೃಷ್ಟಿಸುವ ಭೂತ: ಚಿದಂಬರಂ

    ಪರೀಕ್ಷೆ ತಯಾರಿ ಬಗ್ಗೆ ಮಾತನಾಡಿದ ಅವರು, ಯುಪಿಎಸ್‍ಸಿ ಪರೀಕ್ಷೆ ಬರೆಯಲು ಕೋಣೆಯಲ್ಲಿ ವೇಳಾಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದೆ ಮತ್ತು ಅದನ್ನು ದಿನನಿತ್ಯ ಪಾಲಿಸುತ್ತಿದ್ದೆ. ಪ್ರತಿ ದಿನ 8 ರಿಂದ 10 ಗಂಟೆಗಳ ಕಾಲ ಸಂಪೂರ್ಣ ಓದುವುದರ ಕಡೆಗೆ ಗಮನ ಹರಿಸುತ್ತಿದ್ದೆ. ನಾನು ಸಾಮಾನ್ಯ ಬಡ ಕುಟುಂಬದ ಹಿನ್ನೆಲೆಯಿಂದ ಬಂದವನಾಗಿದ್ದು, ನನ್ನ ಓದಿಗಾಗಿ ತಂದೆ ಸಾಲ ಪಡೆದಿದ್ದರು ಮತ್ತು ಮಗನ ಗಮನ ಬೇರೆಡೆಗೆ ವಾಲದಂತೆ ಯುಪಿಎಸ್‍ಸಿ ಪರೀಕ್ಷೆಗೆ ಸಿದ್ಧತೆ ನಡೆಸುವಂತೆ ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ತಂದೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕಷ್ಟದ ಸಮಯ ನನ್ನನ್ನು ಪ್ರಬುದ್ಧನಾಗಿಸಿತು. ಸದ್ಯ ಯುಪಿಎಸ್‍ಸಿ ಪರೀಕ್ಷೆಯಲ್ಲಿ 10ನೇ ರ‍್ಯಾಂಕಿಂಗ್ ಪಡೆದಿದ್ದು, ಅಂತಿಮವಾಗಿ ವಿದ್ಯಾಭ್ಯಾಸದಿಂದ ವಿರಾಮ ತೆಗೆದುಕೊಂಡು ಬಿಹಾರದಲ್ಲಿರುವ ನನ್ನ ತಂದೆ-ತಾಯಿಯನ್ನು ಭೇಟಿ ಮಾಡಲು ಮನೆಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಸತ್ಯಂ ಐಎಎಸ್ ಆದ ಬಳಿಕ ಗ್ರಾಮೀಣ ಪ್ರದೇಶದಲ್ಲಿರುವ ಸಮಸ್ಯೆಗಳನ್ನು ನಿಭಾಯಿಸುವ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತರಕಾರಿ ಸುರಿದು ರೈತರ ಆಕ್ರೋಶ – ಜಿಲ್ಲೆಗಳಲ್ಲಿ ಪ್ರತಿಭಟನೆ ಆರಂಭ