Tag: 10ನೇ ತರಗತಿ ಪರೀಕ್ಷೆ

  • ಕೆಓಎಸ್ 10ನೇ ತರಗತಿ ಪರೀಕ್ಷೆ ಮುಂದೂಡಿಕೆಗೆ ಮನವಿ

    ಕೆಓಎಸ್ 10ನೇ ತರಗತಿ ಪರೀಕ್ಷೆ ಮುಂದೂಡಿಕೆಗೆ ಮನವಿ

    ಬೆಂಗಳೂರು: ಧಾರಕಾರವಾಗಿ ಮಳೆಯಿಂದಾಗಿ ರಾಜ್ಯದ ಹಲವು ಕಡೆ ಪ್ರವಾಹ ಉಂಟಾಗಿದ್ದು, ಈ ಹಿನ್ನೆಲೆ ನಾಳೆಯಿಂದ ಆರಂಭವಾಗಲಿರುವ ಖಾಸಗಿ ವಿದ್ಯಾರ್ಥಿಗಳ ಕೆಎಸ್‍ಓ(ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ) 10ನೇ ತರಗತಿ ಪರೀಕ್ಷೆ ಮುಂದೂಡುವಂತೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್‍ರವರಿಗೆ ಮನವಿ ಮಾಡಲಾಯಿತು.

    ನಾಳೆಯಿಂದ ರಾಜ್ಯಾದ್ಯಂತ ಖಾಸಗಿ ವಿದ್ಯಾರ್ಥಿಗಳ ಕೆಓಎಸ್ 10 ನೇ ತರಗತಿ ಪರೀಕ್ಷೆ ಆರಂಭವಾಗುತ್ತಿದೆ. ರಾಜ್ಯಾದಂತ್ಯ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದೆ. ಆದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಹಾಜರಾಗಲು ತೊಂದರೆಯಾಗಿದೆ ಎಂದು ಕರ್ನಾಟಕ ಓಪನ್ ಸ್ಕೂಲ್ ಭಾರತಿ ಇನ್ಸ್ ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್ ಆಫ್ ಎಜುಕೇಶನ್ ನಿಂದ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ.

    ಮಳೆ ಹೆಚ್ಚಾಗಿರುವ ಉತ್ತರ ಕರ್ನಾಟಕ ಭಾಗದಲ್ಲೇ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ನಾಳೆ ಪರೀಕ್ಷೆಗೆ ಇನ್ನೂ ಯಾರು ಸಹ ಹಾಲ್ ಟಿಕೆಟ್ ಪಡೆದಿಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ನಾಳೆಯಿಂದ ಆರಂಭವಾಗುವ ಪರೀಕ್ಷೆ ಹಾಜರಾಗುವುದು ಕಷ್ಟವಾಗಿದೆ. ಶಿಕ್ಷಣ ಸಚಿವರು ತಕ್ಷಣ ಈ ಬಗ್ಗೆ ಗಮನ ಹರಿಸಿ ಪರೀಕ್ಷೆ ಮುಂದೂಡಿ ವಿದ್ಯಾರ್ಥಿಗಳ ತೊಂದರೆಯಾಗದಂತೆ ಕ್ರಮವಹಿಸಬೇಕೆಂದು ಕೋರಿದ್ದಾರೆ. ಇದನ್ನೂ ಓದಿ:10 ನಿಮಿಷಕ್ಕಿಂತ ಹೆಚ್ಚು ಟೈಂ ಒಂದೇ ಕಡೆ ನಿಲ್ಲೋವಂತಿಲ್ಲ – ಹೊಯ್ಸಳ ಪೊಲೀಸರಿಗೆ ಖಡಕ್ ಎಚ್ಚರಿಕೆ

  • ಕೊರೊನಾ ದಯೆ- 33 ವರ್ಷದ ಬಳಿಕ 10ನೇ ತರಗತಿ ಇಂಗ್ಲಿಷ್ ಪರೀಕ್ಷೆ ಪಾಸ್

    ಕೊರೊನಾ ದಯೆ- 33 ವರ್ಷದ ಬಳಿಕ 10ನೇ ತರಗತಿ ಇಂಗ್ಲಿಷ್ ಪರೀಕ್ಷೆ ಪಾಸ್

    – ಪ್ರತಿ ವರ್ಷ ಬರೆದರೂ ಪಾಸ್ ಆಗಿರಲಿಲ್ಲ
    – ಇದೀಗ ಪರೀಕ್ಷೆ ಬರೆಯದಿದ್ದರೂ ಪಾಸ್

    ಹೈದರಾಬಾದ್: ವ್ಯಕ್ತಿ ಸತತ 33 ವರ್ಷಗಳ ಕಾಲ ಪ್ರತಿ ವರ್ಷ ಇಂಗ್ಲಿಷ್ ಪರೀಕ್ಷೆ ಬರೆದರೂ ಪಾಸ್ ಆಗಿಲ್ಲ. ಆದರೆ ಇದೀಗ ಕೊರೊನಾ ಕಾರಣದಿಂದಾಗಿ ಪಾಸ್ ಆಗಿದ್ದು, ಖುಷಿಯಲ್ಲಿ ತೇಲಾಡುತ್ತಿದ್ದಾರೆ.

    ಕೊರೊನಾ ಸಾವಿರಾರು ಜನರನ್ನು ಬಲಿ ಪಡೆದಿದೆ. ಕೋಟ್ಯಂತರ ಜನರಿಗೆ ಸಮಸ್ಯೆ ತಂದೊಡ್ಡಿದೆ. ಆದರೆ ಕೊರೊನಾದಿಂದಾಗಿ ಇವರು ಮಾತ್ರ ಜಗತ್ತಿಲ್ಲೇ ಅತ್ಯಂತ ಸಂತಸದ ವ್ಯಕ್ತಿಯಾಗಿದ್ದಾರೆ. ಹೈದರಾಬಾದ್‍ನ 51 ವರ್ಷದ ಮೊಹಮ್ಮದ್ ನೂರುದ್ದಿನ್ 10ನೇ ತರಗತಿ ಪರೀಕ್ಷೆ ಪಾಸ್ ಮಾಡಲು 33 ವರ್ಷಗಳ ಕಾಲ ಸತತವಾಗಿ ಪ್ರಯತ್ನಿಸಿದ್ದಾರೆ. ಆದರೆ ಇಂಗ್ಲಿಷ್ ಪರೀಕ್ಷೆ ಪಾಸ್ ಆಗಿಲ್ಲ.

    ಇದೀಗ ಅವರು ಪಾಸ್ ಆಗಿದ್ದು ಇದಕ್ಕೆ ಕಾರಣ ಕೊರೊನಾ. ಹಲವು ರಾಜ್ಯಗಳಲ್ಲಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ತೆಲಂಗಾಣದಲ್ಲಿ ಇದೇ ರೀತಿಯಾಗಿದ್ದು, ಪರೀಕ್ಷೆ ಬರೆಯದಿದ್ದರೂ ಎಲ್ಲ ಅಭ್ಯರ್ಥಿಗಳು ಪಾಸ್ ಎಂದು ಘೋಷಿಸಲಾಗಿದೆ. ಹೀಗಾಗಿ ನೂರುದ್ದಿನ್ 33 ವರ್ಷಗಳ ಬಳಿಕ 10ನೇ ತರಗತಿ ಪಾಸ್ ಆಗಿದ್ದಾರೆ. ಅದೂ ಸಹ ಪರೀಕ್ಷೆ ಬರೆಯದೆ.

    ಮೊಹಮ್ಮದ್ ನೂರುದ್ದಿನ್ ಹೈದರಾಬಾದ್‍ನ ಮುಶೀರಾಬಾದ್ ಪ್ರದೇಶದಲ್ಲಿರುವ ಅಂಜುಮನ್ ಬಾಲಕರ ಪ್ರೌಢ ಶಾಲೆಯಲ್ಲಿ ವಾಚ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಮೊದಲ ಬಾರಿಗೆ 10ನೇ ತರಗತಿ ಪರೀಕ್ಷೆ ಎದುರಿಸಿದ್ದು 1987ರಲ್ಲಿ. ಆದರೆ ಇಂಗ್ಲಿಷ್ ವಿಷಯ ಫೇಲ್ ಆಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ವರ್ಷ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಇಂಗ್ಲಿಷ್ ಅವರಿಗೆ ಕಠಿಣವಾಗಿದ್ದ ಕಾರಣ ಪಾಸ್ ಮಾಡಲು ಸಾಧ್ಯವಾಗಿಲ್ಲ.

    ಇದೀಗ ಕೊರೊನಾದಿಂದಾಗಿ ಇಂಗ್ಲಿಷ್ ಪಾಸ್ ಆಗಿದ್ದು, ಈ ಮೂಲಕ 10ನೇ ತರಗತಿಯನ್ನು 51ನೇ ವಯಸ್ಸಿನಲ್ಲಿ ಪಾಸ್ ಮಾಡಿದ್ದಾರೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ಎಲ್ಲ ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ತೆಲಂಗಾಣ ಸರ್ಕಾರ ಪರೀಕ್ಷೆಯನ್ನು ರದ್ದುಪಡಿಸಿದ್ದು, 10ನೇ ತರಗತಿಯ ಎಲ್ಲ ಅಭ್ಯರ್ಥಿಗಳು ಪರೀಕ್ಷೆ ಬರೆಯದಿದ್ದರೂ ಸಹ ಪಾಸ್ ಎಂದು ಘೋಷಿಸಿದೆ. ಹೀಗಾಗಿ ಮೊಹಮ್ಮದ್ ನೂರುದ್ದಿನ್ ಸಹ ಪಾಸ್ ಆಗಿದ್ದಾರೆ.