Tag: 1 rupee

  • 1 ರೂ. ಕಡಿಮೆ ಕೊಟ್ಟಿದ್ದಕ್ಕೆ ಗ್ರಾಹಕರ ಮೇಲೆ ಕಾದ ಎಣ್ಣೆ ಎರಚಿದ

    1 ರೂ. ಕಡಿಮೆ ಕೊಟ್ಟಿದ್ದಕ್ಕೆ ಗ್ರಾಹಕರ ಮೇಲೆ ಕಾದ ಎಣ್ಣೆ ಎರಚಿದ

    ಆಗ್ರಾ: ಸಮೋಸಕ್ಕೆ 1 ರೂಪಾಯಿ ಕಡಿಮೆ ಕೊಟ್ಟಿದ್ದಕ್ಕೆ ರೊಚ್ಚಿಗೆದ್ದ ವ್ಯಾಪಾರಿಯೋರ್ವ ಗ್ರಾಹಕನ ಸಹೋದರನ ಮೈಮೇಲೆ ಕಾದ ಎಣ್ಣೆ ಎರಚಿ ವಿಕೃತಿ ಮೆರೆದಿದ್ದಾನೆ.

    ಮಂಗಳವಾರದಂದು ಉತ್ತರಪ್ರದೇಶದ ಮಥುರಾದಲ್ಲಿ ಈ ಘಟನೆ ನಡೆದಿದೆ. ಮಥುರಾ ನಿವಾಸಿ ಹೇಮರಾಜ್(26) ಹಾಗೂ ಆತನ ಸಹೋದರ ವಿಷ್ಣು(22) ಇಬ್ಬರ ಮೇಲು ಕಾದ ಎಣ್ಣೆ ಎರಚಲಾಗಿದೆ. ಕೇವಲ 1 ರೂ. ಹಣ ಕಡಿಮೆ ನೀಡಿದ್ದೇ ಅಂಗಡಿ ಮಾಲೀಕ ಸುರೇಶ್ ಮತ್ತು ಗ್ರಾಹಕರ ನಡುವೆ ಗಲಾಟೆ ನಡೆಯಲು ಕಾರಣವಾಗಿದೆ.

    ರೆಟಿಯಾ ಮಾರುಕಟ್ಟೆಯಲ್ಲಿರುವ ಸ್ವೀಟ್ ಅಂಗಡಿಗೆ ಹೋಗಿ ವಿಷ್ಣು ಸಮೋಸಾ ಖರೀದಿಸಿದ್ದನು. ಈ ವೇಳೆ ಆತನ ಬಳಿಕ ಕೇವಲ ಐದು ರೂಪಾಯಿ ಇದ್ದ ಕಾರಣಕ್ಕೆ ಅಷ್ಟನ್ನೇ ಅಂಗಡಿ ಮಾಲೀಕನಿಗೆ ಯುವಕ ಕೊಟ್ಟಿದ್ದಾನೆ. ಆದರೆ ಸಮೋಸಕ್ಕೆ 6 ರೂ. ನೀನು 1 ರೂ. ಕಡಿಮೆ ಕೊಟ್ಟಿದ್ದೀಯಾ ಎಂದು ಮಾಲೀಕ ಯುವಕನ ಮೇಲೆ ಜಗಳಕ್ಕಿಳಿದಿದ್ದಾನೆ. ಬಳಿಕ ಜಗಳ ದೊಡ್ಡದಾಗಿ ಅಂಗಡಿ ಮಾಲೀಕ ಹಾಗೂ ಅವನ ಮಕ್ಕಳು ಯುವಕನನ್ನು ಬೈದು, ಮನ ಬಂದಂತೆ ಥಳಿಸಿದ್ದಾರೆ.

    ಈ ವೇಲೆ ಸಹೋದರನನ್ನು ರಕ್ಷಸಿಲು ಹೇಮರಾಜ್ ಬಂದು ಗಲಾಟೆ ನಿಲ್ಲುಸುವಂತೆ ಹೇಳಿದ್ದಾನೆ. ಆದರೆ ಸಿಟ್ಟಿನಲ್ಲಿದ್ದ ಮಾಲೀಕ ಮಾತ್ರ ಯಾರ ಮಾತನ್ನು ಕೇಳದೆ ಅವರಿಬ್ಬರ ಮೇಲೆ ಕಾದ ಎಣ್ಣೆಯನ್ನು ಎರಚಿ ಕ್ರೌರ್ಯ ಮೆರೆದಿದ್ದಾನೆ. ಪರಿಣಾಮ ಹೇಮರಾಜ್‍ಗೆ ಗಂಭೀರ ಗಾಯಗೊಂಡಿದ್ದು, ವಿಷ್ಣುಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಇಬ್ಬರು ಸಹೋದರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಆರೋಪಿ ಸುರೇಶ್ ಮಾತ್ರ ನಾನೇನು ತಪ್ಪು ಮಾಡಿಲ್ಲ. ಸಮೋಸದ ಬಾಕಿ 1 ರೂಪಾಯಿ ಕೊಡಿ ಎಂದಿದ್ದಕ್ಕೆ ಸಹೋದರರು ನಮ್ಮ ಅಂಗಡಿಯನ್ನು ಧ್ವಂಸ ಮಾಡಿ, ಹಣ ದೋಚಿದ್ದಾರೆ ಎಂದು ಆರೋಪಿಸಿದ್ದಾನೆ.

    ಈ ಬಗ್ಗೆ ಈಗಾಗಲೇ ಪೊಲೀಸರು 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಸುರೇಶ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸರ್ಕಾರಕ್ಕೆ ಒಂದು ರೂ. ಬಂದಿದ್ದು ಎಲ್ಲಿಂದ? ಎಲ್ಲಿಗೆ ಹೋಗಿದೆ?

    ಸರ್ಕಾರಕ್ಕೆ ಒಂದು ರೂ. ಬಂದಿದ್ದು ಎಲ್ಲಿಂದ? ಎಲ್ಲಿಗೆ ಹೋಗಿದೆ?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ 1 ರೂ. ಬಂದಿದ್ದು ಹೇಗೆ, ಹೋಗಿದ್ದು ಎಲ್ಲಿಗೆ ಎಂಬುದರ ಮಾಹಿತಿ ಇಲ್ಲಿದೆ.

    ಸರ್ಕಾರಕ್ಕೆ 1 ರೂ. ಬಂದಿದ್ದು ಎಲ್ಲಿಂದ?
    ರಾಜ್ಯ ತೆರಿಗೆಯೇತರ ರಾಜಸ್ವ – 4 ಪೈಸೆ
    ಕೇಂದ್ರ ಸರ್ಕಾರದ ಅನುದಾನ – 7 ಪೈಸೆ
    ಕೇಂದ್ರ ತೆರಿಗೆ ಪಾಲು – 17 ಪೈಸೆ
    ಸಾರ್ವಜನಿಕ ಲೆಕ್ಕ(ನಿವ್ವಳ) – 3 ಪೈಸೆ
    ರಾಜ್ಯ ತೆರಿಗೆ ಆದಾಯದಿಂದ 50 ಪೈಸೆ ಜಿಎಸ್‍ಟಿ ನಷ್ಟ ಪರಿಹಾರ ಒಳಗೊಂಡಿದೆ.
    ಸಾಲ – 19 ಪೈಸೆ

     

    1 ರೂ. ಹೋಗಿದ್ದು ಎಲ್ಲಿಗೆ?
    ಅರೋಗ್ಯ – 4 ಪೈಸೆ
    ಇತರೆ ಸಾಮಾಜಿಕ ಸೇವೆಗಳು – 6 ಪೈಸೆ
    ಸಮಾಜ ಕಲ್ಯಾಣ – 9 ಪೈಸೆ
    ಸಾಲ ತೀರಿಕೆ – 13 ಪೈಸೆ
    ಶಿಕ್ಷಣ – 12 ಪೈಸೆ
    ನೀರು ಪೂರೈಕೆ ಮತ್ತು ನೈರ್ಮಲ್ಯ – 3 ಪೈಸೆ
    ಇತರೆ ಸಾಮಾನ್ಯ ಸೇವೆಗಳು – 17 ಪೈಸೆ
    ಕೃಷಿ, ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿ -20 ಪೈಸೆ
    ಇತರೆ ಆರ್ಥಿಕ ಸೇವೆಗಳು – 15 ಪೈಸೆ

  • 1 ರೂಪಾಯಿಗಾಗಿ ವ್ಯಕ್ತಿಯನ್ನು ಕಾಲಿನಿಂದಲೇ ಒದ್ದು ಕೊಂದ್ರು!

    1 ರೂಪಾಯಿಗಾಗಿ ವ್ಯಕ್ತಿಯನ್ನು ಕಾಲಿನಿಂದಲೇ ಒದ್ದು ಕೊಂದ್ರು!

    ಥಾಣೆ: ಕೇವಲ ಒಂದು ರೂಪಾಯಿಗಾಗಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಕಲ್ಯಾಣ್ ನಗರದಲ್ಲಿ ನಡೆದಿದೆ.

    ಮೃತಪಟ್ಟ ವ್ಯಕ್ತಿಯನ್ನು 54 ವರ್ಷದ ಮನೋಹರ ಗಾಮ್ನೆ ಎಂದು ಗುರುತಿಸಲಾಗಿದ್ದು, ಈ ಘಟನೆ ಶುಕ್ರವಾರ ತಡ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಮ್ನೆ ಮನೆ ಸಮೀಪದ ಅಂಗಡಿಯಲ್ಲಿ ಮೊಟ್ಟೆ ಖರೀದಿಸಲು ಹೋಗಿದ್ದಾರೆ. ಅಂಗಡಿಯಲ್ಲಿ ತಾನು ಖರೀದಿಸಿದ ಮೊಟ್ಟೆಗೆ ಒಂದು ರೂಪಾಯಿ ಕಡಿಮೆ ಕೊಟ್ಟಿದ್ದಾರೆ. ಇದರಿಂದ ಅಂಗಡಿಯ ಮಾಲೀಕ ವ್ಯಕ್ತಿಯ ಜೊತೆ ಜಗಳ ಮಾಡಿದ್ದಾನೆ.

    ಜಗಳ ವಿಕೋಪಕ್ಕೆ ಹೋಗಿ ಅಂಗಡಿಯ ಮಾಲೀಕ ಗಾಮ್ನೆಗೆ ಕಾಲಿನಿಂದ ಒದ್ದು, ಕೈಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಪರಿಣಾಮವಾಗಿ ಗಾಮ್ನೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಥಾಣೆ ಪೊಲೀಸ್ ಪಿಆರ್ ಒ ಸುಖದಾ ನಾರ್ಕರ್ ತಿಳಿಸಿದ್ದಾರೆ.

    ಈ ಘಟನೆ ಸಂಬಂಧ ಆರೋಪಿ ಅಂಗಡಿ ಮಾಲೀಕ ಸುಧಾಕರ್ ಪ್ರಭು (45) ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.

  • ತಿರುಪತಿ ತಿಮ್ಮಪ್ಪ ಕನಸಲ್ಲಿ ಹೇಳಿದ್ದಕ್ಕೆ 1 ರೂ.ಗೆ ಒಂದು ಸೀರೆ ಹಂಚ್ತಿರೋ ಎಚ್‍ಡಿಕೆ ಅಭಿಮಾನಿ

    ತಿರುಪತಿ ತಿಮ್ಮಪ್ಪ ಕನಸಲ್ಲಿ ಹೇಳಿದ್ದಕ್ಕೆ 1 ರೂ.ಗೆ ಒಂದು ಸೀರೆ ಹಂಚ್ತಿರೋ ಎಚ್‍ಡಿಕೆ ಅಭಿಮಾನಿ

    ಬೀದರ್: ಎಲ್ಲಾದ್ರೂ ಒಂದು ರೂಪಾಯಿಗೆ ಒಂದು ಸೀರೆ ಸಿಗಲು ಸಾಧ್ಯವೆ…? ಇಲ್ಲ ಅನ್ನೋದಾದ್ರೆ ಇಲ್ಲಿ ಕೇಳಿ. ನೀವು ಗಡಿ ಜಿಲ್ಲೆ ಬೀದರ್‍ಗೆ ಬಂದ್ರೆ ಖಂಡಿತವಾಗಿ ಒಂದು ರೂಪಾಯಿಗೆ ಒಂದು ಸೀರೆಯನ್ನ ಪಡೆಯಬಹುದು. ಅದರಲ್ಲೂ ಒಂದು ವೇಳೆ ವೋಟರ್ ಐಡಿ ತೋರಿಸಿದ್ರೆ ಸೀರೆ ಉಚಿತ.

    2018ಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗಲಿ ಎಂದು ಅವರ ಅಭಿಮಾನಿಯೊಬ್ಬರು ಒಂದು ರೂಪಾಯಿಗೆ ಒಂದು ಸೀರೆ ನೀಡುತ್ತಿದ್ದಾರೆ. ಬೀದರ್‍ನ ಸೃಷ್ಠಿ-ದೃಷ್ಠಿ ಸ್ಯಾರಿ ಸೆಂಟರ್‍ನ ಮಾಲೀಕರಾದ ಚಂದ್ರಶೇಖರ್ ಪಸರ್ಗೆ, ಒಂದು ರೂಪಾಯಿಗೆ ಒಂದು ಸೀರೆಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ.

    15 ದಿನಗಳ ಕಾಲ ಬಂಪರ್ ಆಫರ್ ನೀಡುತ್ತಿದ್ದು, ಮಹಿಳಾ ಮಣಿಯರು ಕ್ಯೂನಲ್ಲಿ ನಿಂತು ಸೀರೆ ಖರೀದಿಸುತ್ತಿದ್ದಾರೆ. ಕುಮಾರಸ್ವಾಮಿಗಾಗಿ 5 ಲಕ್ಷ ಸೀರೆ ಹಂಚು ಎಂದು ಚಂದ್ರಶೇಖರ್ ಅವರಿಗೆ ತಿರುಪತಿ ವೆಂಕಟೇಶ್ವರ ಕನಸಿನಲ್ಲಿ ಬಂದು ಹೇಳಿದ್ದಾನಂತೆ. ಅಲ್ಲದೆ ಮತ್ತೊಮ್ಮೆ ಎಚ್‍ಡಿಕೆ ಸಿಎಂ ಆಗಲಿ ಎಂದು ತಿರುಪತಿಗೆ ಹರಕೆ ಹೊತ್ತುಕೊಂಡಿದ್ದಾರೆ.