Tag: c t ravi

  • ಗೋಧ್ರಾ ಮಾದರಿಯಲ್ಲಿ ರೈಲು ಸುಟ್ಟು ಹಾಕುವುದಾಗಿ ಬೆದರಿಕೆ: ಸಮಗ್ರ ತನಿಖೆಗೆ ಸಿ.ಟಿ.ರವಿ ಆಗ್ರಹ

    ಗೋಧ್ರಾ ಮಾದರಿಯಲ್ಲಿ ರೈಲು ಸುಟ್ಟು ಹಾಕುವುದಾಗಿ ಬೆದರಿಕೆ: ಸಮಗ್ರ ತನಿಖೆಗೆ ಸಿ.ಟಿ.ರವಿ ಆಗ್ರಹ

    ಬೆಂಗಳೂರು: ಗೋಧ್ರಾ ಮಾದರಿಯಲ್ಲಿ ರೈಲನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ ಪ್ರಕರಣದ ಸಮಗ್ರ ತನಿಖೆ ಮಾಡುವಂತೆ ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಆಗ್ರಹಿಸಿದರು.

    ನಗರದ ರೇಸ್ ಕೋರ್ಸ್ ರಸ್ತೆಯ ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ಇಂದು (ಶುಕ್ರವಾರ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಿಂದ ವಾಪಸಾಗುತ್ತಿದ್ದ ವಿಶೇಷ ರೈಲಿಗೆ ಹೊಸಪೇಟೆಯಲ್ಲಿ ಒಬ್ಬ ಮತಾಂಧ ವ್ಯಕ್ತಿ ಹತ್ತಿದ್ದ. ಅಯೋಧ್ಯೆಗೆ ತೆರಳಿ ಹಿಂತಿರುಗುತ್ತಿದ್ದ ರಾಮಭಕ್ತರನ್ನು ಬೆದರಿಸಿ ಗೋಧ್ರಾ ಮಾದರಿಯಲ್ಲಿ ನಿಮ್ಮನ್ನೆಲ್ಲ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಎಲ್ಲ ರಾಮಭಕ್ತರು ಸೇರಿ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದರೂ ಕೂಡ ಆರೋಪಿ ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಅಯೋಧ್ಯೆ ಯಾತ್ರಿಕರ ರೈಲು ಗಲಾಟೆ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದ ಫಲ: ಪ್ರಹ್ಲಾದ್ ಜೋಶಿ

    ಎಲ್ಲ ರಾಮಭಕ್ತರು ಸೇರಿ ಪ್ರತಿಭಟನೆ ಮಾಡಿದ ಬಳಿಕ ಸಿಸಿಟಿವಿ ಫೂಟೇಜ್ ಆಧರಿಸಿ ಆರೋಪಿಯನ್ನು ಬಂಧಿಸಿದ ಮಾಹಿತಿ ಇದೆ ಎಂದ ಅವರು, ಗೋಧ್ರಾ ಮಾದರಿಯಲ್ಲಿ ಹತ್ಯಾಕಾಂಡ ನಡೆಸುವ ಬೆದರಿಕೆ ಹಾಕುವಂಥ ಮನಸ್ಥಿತಿ ಏಕಾಏಕಿ ಬಂದಿರುತ್ತದೆ ಎಂದು ಭಾವಿಸಬಾರದು. ಇದರ ಹಿಂದೆ ಯಾವುದೋ ಪಿತೂರಿ ಆಗಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದರು.

    ಈಚೆಗೆ ರಾಮನಗರದಲ್ಲಿ ವಕೀಲನೊಬ್ಬ ವಾರಣಾಸಿ ಜ್ಞಾನವಾಪಿಗೆ ಸಂಬಂಧಿಸಿ ನ್ಯಾಯಾಲಯ ಕೊಟ್ಟ ತೀರ್ಪನ್ನು ವಿರೋಧಿಸಲು ಬಳಸಿದ ಭಾಷೆ, ಈಗ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಕೃತ್ಯ- ಇವು ಕೇವಲ ಪ್ರತ್ಯೇಕ ಘಟನೆ ಎಂದು ಭಾವಿಸಬಾರದು. ಇದರ ಹಿಂದೆ ಪಿತೂರಿಯ ಸಾಧ್ಯತೆಗಳಿರುತ್ತವೆ. ‘ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ’ ಎಂಬ ಗಾದೆ ಮಾತಿದೆ. ಹಾಗಾಗಿ ಅನಾಹುತ ಆಗುವುದಕ್ಕೂ ಮುಂಚೆ ಎಚ್ಚರಿಕೆ ವಹಿಸಬೇಕು. ಅದಕ್ಕಾಗಿ ಸಮಗ್ರ ತನಿಖೆ ನಡೆಸಲು ಆಗ್ರಹಿಸುವುದಾಗಿ ಹೇಳಿದರು. ಇದನ್ನೂ ಓದಿ: ಡಾ.ಮಂಜುನಾಥ್ ಏನು ತೀರ್ಮಾನ ಮಾಡ್ತಾರೆ ಎಂದು ಸಮಯ ಬಂದಾಗ ನೋಡೋಣ: ಹೆಚ್‍ಡಿಕೆ

    ಪೊಲೀಸರ ಕರ್ತವ್ಯಲೋಪ- ಕ್ರಮಕ್ಕೆ ಒತ್ತಾಯ
    ರಾಮಭಕ್ತರೇ ಆರೋಪಿಯನ್ನು ಹಿಡಿದುಕೊಟ್ಟ ನಂತರ ಕೂಡ ಪೊಲೀಸರು ವಶಕ್ಕೆ ತೆಗೆದುಕೊಳ್ಳದೆ, ಅವನು ತಪ್ಪಿಸಿಕೊಳ್ಳಲು ಕಾರಣರಾಗಿದ್ದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಸ್ಥಳದಲ್ಲಿದ್ದ ಪೊಲೀಸರು ಕರ್ತವ್ಯಲೋಪ ಎಸಗಿದ್ದಾರೆ. ಅವರ ಮೇಲೂ ಕ್ರಮ ಕೈಗೊಳ್ಳಿ ಎಂದು ಸಿ.ಟಿ.ರವಿ ಅವರು ಒತ್ತಾಯಿಸಿದರು.

    ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಹರಿಪ್ರಸಾದ್ ಅವರು, ರಾಜ್ಯಸಭಾ ಸದಸ್ಯರೂ ಆಗಿದ್ದರು. ಅವರಿಗೆ ಬರುವ ಮಾಹಿತಿಯನ್ನು ಸುಮ್ಮನೆ ಹೇಳಿದ್ದಾರೆ ಅಂದುಕೊಳ್ಳಬಾರದು. ಅವರನ್ನು ಕೂಡ ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಒಳಪಡಿಸಿ ಎಂದಿದ್ದೆ. ಈಗ ನಡೆದ ಘಟನೆ ಕೇವಲ ಕಾಕತಾಳೀಯ ಆಗಿರಲಾರದು. ಹಾಗಾಗಿ ಹೊಸಪೇಟೆಯಲ್ಲಿ ಬಂಧಿಸಿದ ವ್ಯಕ್ತಿ ಮಾತ್ರವಲ್ಲದೆ ಹರಿಪ್ರಸಾದರನ್ನೂ ತನಿಖೆಗೆ ಒಳಪಡಿಸಿ ಗೋಧ್ರಾ ಮಾದರಿ ಹತ್ಯೆ ಎಂಬ ಅವರ ಹೇಳಿಕೆಗೆ ಸುದ್ದಿ ಮೂಲ ಏನು ಎಂದು ತಿಳಿದುಕೊಳ್ಳಬೇಕಿದೆ. ಪೊಲೀಸರಿಗೆ ಮಾಹಿತಿ ಹಂಚಿಕೊಳ್ಳುವುದು ಅವರ ಕರ್ತವ್ಯ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಜೊತೆಗೆ, ಈ ವಿಷಯದಲ್ಲಿ ತನಿಖೆಗೆ ನೋಟಿಸ್ ಕೊಟ್ಟಾಗ ಹರಿಪ್ರಸಾದ್ ಉರಿದುಬಿದ್ದಿದ್ದರು. ಈಗ ಆಗಿರುವ ಘಟನೆ ಗಮನಿಸಿದಾಗ ಇದನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ರಾಜ್ಯದ ಗೃಹ ಸಚಿವರು ಮತ್ತು ಪೊಲೀಸ್ ಇಲಾಖೆಯ ವರಿಷ್ಠಾಧಿಕಾರಿಗಳನ್ನು ಆಗ್ರಹಿಸುವುದಾಗಿ ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿದೆ, ನಮ್ಮ ನಿರ್ಣಯ ಅಂಗೀಕಾರ ಆಗಿದೆ: ಬೊಮ್ಮಾಯಿ ತಿರುಗೇಟು

    ತುಘಲಕ್‍ನಿಂದ ಪ್ರೇರಣೆ ಪಡೆದ ಸರ್ಕಾರ?
    ಕಳೆದ 10-15 ದಿನಗಳಿಂದ ರಾಜ್ಯ ಸರ್ಕಾರವು ಯಾವ ರೀತಿ ಸುತ್ತೋಲೆ ಹೊರಡಿಸುತ್ತಿದೆ, ಯಾವ ರೀತಿ ವಾಪಸ್ ಪಡೆಯುತ್ತದೆ ಎಂಬುದನ್ನು ನೋಡಿದಾಗ ಇದು ಮಹಮ್ಮದ್ ಬಿನ್ ತುಘಲಕ್ ನೀತಿಯಂತೆ ಭಾಸವಾಗುತ್ತಿದೆ. ಆತ ಬೆಳಿಗ್ಗೆ ಒಂದು ಸುತ್ತೋಲೆ ಹೊರಡಿಸಿ ಸಂಜೆ ಅದನ್ನು ವಾಪಸ್ ಪಡೆಯುತ್ತಿದ್ದನಂತೆ. ಆತ ದೆಹಲಿಯಿಂದ ದೌಲತಾಬಾದ್‍ಗೆ ತನ್ನ ರಾಜಧಾನಿಯನ್ನು ಸ್ಥಳಾಂತರಿಸಿದ್ದ. ಜನ, ಜಾನುವಾರು ಸಮೇತ ಹೋಗಲು ಸೂಚಿಸಿದ್ದನಂತೆ. ಸ್ಥಳಾಂತರದ ವೇಳೆ ಅರ್ಧ ಜನ ಜೀವ ಕಳಕೊಂಡರಂತೆ. ಸ್ವಲ್ಪ ದಿನದ ಬಳಿಕ ನಿರ್ಣಯ ವಾಪಸ್ ಪಡೆದು, ಮತ್ತೆ ಅಲ್ಲಿಗೇ ಹೋಗಲು ತಿಳಿಸಿದನಂತೆ. ಆಗ ಇನ್ನೂ ಒಂದಷ್ಟು ಜನ ಸತ್ತರಂತೆ. ಇದನ್ನು ತುಘಲಕ್ ನೀತಿ ಎನ್ನುತ್ತಾರೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರವು ಕೂಡ ಮಹಮ್ಮದ್ ಬಿನ್ ತುಘಲಕ್‌ನಿಂದ ಪ್ರೇರಣೆ ಪಡೆದಂತಿದೆ ಎಂದು ವ್ಯಂಗ್ಯವಾಡಿದರು.

    ಆ ಪ್ರೇರಣೆ ಪಡೆದೇ ಯುಗಾದಿ, ರಂಜಾನ್ ಮತ್ತಿತರ ಸಾಂಸ್ಕೃತಿಕ ಹಬ್ಬಗಳನ್ನು ಆಚರಿಸದೆ ಇರಲು ಸುತ್ತೋಲೆ ಹೊರಡಿಸಿದ್ದರು. ಆಮೇಲೆ ಅದನ್ನು ವಾಪಸ್ ಪಡೆದರು. ಕುವೆಂಪು ಅವರ ಕಾವ್ಯದಿಂದ ಪ್ರೇರಣೆ ಪಡೆದು ಹಾಕಿದ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಘೋಷವಾಕ್ಯ ಬದಲಿಸುತ್ತಾರೆ. ಆದೇಶ ಮಾಡಿ ಜನವಿರೋಧ ವ್ಯಕ್ತ ಆಗುತ್ತಿದ್ದಂತೆ ಹಾಗೇ ಸುಮ್ಮನೆ ಎಂದು ಹೇಳಿ ವಾಪಸ್ ಪಡೆಯುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಲೋಕಸಭೆಗೆ ಬೆಂಗಳೂರು ಗ್ರಾಮಾಂತರದಿಂದ ಡಾ.ಮಂಜುನಾಥ್‌ ಸ್ಪರ್ಧೆ? – ಆರ್‌.ಅಶೋಕ್‌ ಹೇಳಿದ್ದೇನು?

  • ಪಿತೂರಿಗೆ ಬಲಿಯಾಗಿ ನಾನು, ಪ್ರೀತಂ ವಿಷಕಂಠರಾಗಿದ್ದೇವೆ: ಸಿ.ಟಿ ರವಿ

    ಪಿತೂರಿಗೆ ಬಲಿಯಾಗಿ ನಾನು, ಪ್ರೀತಂ ವಿಷಕಂಠರಾಗಿದ್ದೇವೆ: ಸಿ.ಟಿ ರವಿ

    ಹಾಸನ: ಚಿಕ್ಕಮಗಳೂರಿನಲ್ಲಿ ನಾನು ಹಾಗೂ ಹಾಸನದಲ್ಲಿ ಪ್ರೀತಂಗೌಡ ಕೆಲಸ ಮಾಡಿಯೂ ರಾಜಕೀಯ ಪಿತೂರಿಗೆ ಬಲಿಯಾಗಿದ್ದೇವೆ ಎಂದು ಮಾಜಿ ಸಚಿವ ಸಿ.ಟಿ.ರವಿ (C.T. Ravi) ಹೇಳಿದ್ದಾರೆ.

    ಹಾಸನ ನಗರದ ಸೀತಾರಾಮಾಂಜನೇಯ ಸಭಾಭವನದಲ್ಲಿ ನಡೆದ ಬಿಜೆಪಿ (BJP) ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ನಮ್ಮನ್ನು ಕೆಲಸ ಮಾಡಿಲ್ಲ ಎಂದು ಯಾರೂ ದೂರುವುದಿಲ್ಲ. ಆದರೂ ನಾವಿಬ್ಬರೂ ರಾಜಕೀಯ ಪಿತೂರಿಗೆ ಬಲಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಹೃದಯದಲ್ಲಿ ಟಿಪ್ಪು ಇದ್ದಾನೆ, ಅದಕ್ಕೆ ನಾಮ ಇಟ್ಟುಕೊಳ್ಳಲ್ಲ: ಆರ್.ಅಶೋಕ್

    ಚಿಕ್ಕಮಗಳೂರಿನಲ್ಲಿ ಜೆಡಿಎಸ್ 2018ರ ಚುನಾವಣೆಯಲ್ಲಿ 40 ಸಾವಿರ ವೋಟು ಪಡೆದಿತ್ತು. ಕಳೆದ ಚುನಾವಣೆಯಲ್ಲಿ ಕೇವಲ 1700 ವೋಟು ಪಡೆದಿದೆ. ಹಾಗೆಯೇ ಹಾಸನದಲ್ಲಿ ಕಾಂಗ್ರೆಸ್ (Congress) ಅಂದು 38 ಸಾವಿರ ಮತ ಪಡೆದಿತ್ತು. ಈಗ 4 ಸಾವಿರ ಮತ ಮಾತ್ರ ಗಳಿಸಿದೆ. ಹೀಗಾಗಿ ರಾಜಕೀಯ ಪಿತೂರಿ ಹೇಗೆ ನಡೆದಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಸಂಬಂಧ ಕೆಡಬಾರದು ಎಂದು ನಾವು ವಿಷಕಂಠರಾಗಿದ್ದೇವೆ ಎಂದು ಪರೋಕ್ಷವಾಗಿ ಜೆಡಿಎಸ್ ವಿರುದ್ಧವೂ ಅಸಮಾಧಾನ ಹೊರ ಹಾಕಿದ್ದಾರೆ.

    ಈಗಲೇ ಎಲ್ಲವನ್ನೂ ಬಿಡಿಸಿ ಹೇಳಲು ಆಗುವುದಿಲ್ಲ. ಎಲ್ಲಿ, ಏನು, ಹೇಗೆ, ಪಿತೂರಿ ನಡೆಯಿತು ಎಂದು ಗೊತ್ತು. ಎಲ್ಲವನ್ನೂ ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದೇವೆ. ನಾವು ಅಷ್ಟು ಅಮಾಯಕರಲ್ಲ. ನಾವು ತತ್ವದ ಮೇಲೆ ನಂಬಿಕೆ ಇಟ್ಟವರು. ನಾನು ದೇಶ ಮೊದಲು ಎಂದು ಕೆಲಸ ಮಾಡ್ತಿದ್ದೇನೆ. ಮೋದಿ ಅವರ ಚಿತ್ರ ಕಣ್ಮುಂದೆ ಬರಬೇಕು. ಆ ಕಾರಣಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ ಎಂದಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರು ಹಾಸನ ಸೇರಿದಂತೆ ಎಲ್ಲೆಡೆ ಮಾಡಿರುವ ಕೆಲಸ ಕಾರ್ಯಗಳನ್ನು ಜನತೆಗೆ ಮುಟ್ಟಿಸುವ ಮೂಲಕ ಬಿಜೆಪಿ ಗೆಲ್ಲಲು ಪ್ರತಿಯೊಬ್ಬರೂ ಶ್ರಮಿಸಬೇಕು. ಬಿಜೆಪಿ ಏನೂ ಮಾಡಿಲ್ಲ ಎನ್ನುವವರಿಗೆ ನಮೋ ಅವರ ಒಳ್ಳೆಯ ಕೆಲಸ, ಕಾರ್ಯಗಳನ್ನು ಮನದಟ್ಟು ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯದ ಹಿತಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ: ಡಿಕೆ ಸುರೇಶ್

  • ರಾಜಕೀಯವಾಗಿ ನರೇಂದ್ರ ಸ್ವಾಮಿ Is Seedless: ಸಿ.ಟಿ ರವಿ ಗುಡುಗು

    ರಾಜಕೀಯವಾಗಿ ನರೇಂದ್ರ ಸ್ವಾಮಿ Is Seedless: ಸಿ.ಟಿ ರವಿ ಗುಡುಗು

    – ದೇಶಬೇಕು ಅನ್ನೋ ವಿಭೀಷಣರು ಬಿಜೆಪಿಗೆ ಬನ್ನಿ

    ಚಿಕ್ಕಮಗಳೂರು: ತನ್ನ ವಿರುದ್ಧ ಅವಹೇಳನ ಹೇಳಿಕೆ ನೀಡಿದ್ದ ನರೇಂದ್ರ ಸ್ವಾಮಿ (NarendraSwamy) , ರಾಜಕೀಯವಾಗಿ ನವ್ ಹೀ ಈಸ್ ಸೀಡ್ ಲೆಸ್ ಎಂದು ಮಾಜಿ ಸಚಿವ ಸಿ.ಟಿ. ರವಿ (C.T.Ravi)  ಟಾಂಗ್ ಕೊಟ್ಟಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನರೇಂದ್ರ ಸ್ವಾಮಿ ಮಂತ್ರಿಗಿರಿಗಾಗಿ ಅರ್ಜಿ ಮೇಲೆ ಅರ್ಜಿ ಹಾಕಿ, ಗಮನ ಸೆಳೆಯುತ್ತಿದ್ದಾರೆ. ನವ್ ಹೀ ಈಸ್ ಸೀಡ್ ಲೆಸ್ (Now He His Seedless). ಯಾರು ಅದೇ ರೀತಿ ಇರ್ತಾರೆ, ಅವರು ಮಾತ್ರ ಅಂತಹ ಪದ ಬಳಕೆ ಮಾಡ್ತಾರೆ. ಅವರ ಮಾತಿನ ಧಾಟಿ ನೋಡಿದರೆ ನವ್ ಹೀ ಈಸ್ ಸೀಡ್ ಲೆಸ್. ಆ ಕಾರಣಕ್ಕೆ ಅವರ ಬಾಯಿಂದ ಅಂತಹ ಮಾತು ಬಂದಿದೆ. ಸೀಡ್ ಲೆಸ್ ಅಂದ್ರೆ ಗೊತ್ತಲ್ಲ, ಅದರಲ್ಲಿ ಬೀಜ ಇರಲ್ಲ ಮತ್ತು ಹುಟ್ಟಲ್ಲ. ರಾಜಕೀಯವಾಗಿ ನವ್ ಹೀ ಈಸ್ ಸೀಡ್ ಲೆಸ್. ಅದಕ್ಕೆ ಅವರು ಆ ಪದ ಬಳಸಿದ್ದಾರೆ ಎಂದು ರವಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಶಿವಾಜಿನಗರಕ್ಕೂ ಕಾಲಿಟ್ಟ ಧ್ವಜ ಗಲಾಟೆ- ಹಸಿರು ಬಾವುಟ ತೆಗೆದು ಹಾಕಲಾಯ್ತು ರಾಷ್ಟ್ರಧ್ವಜ

    ಇದೇ ವೇಳೆ ಜ್ಞಾನವ್ಯಾಪಿ ಮಸೀದಿ ಕುರಿತು ಮಾತನಾಡಿದ ಅವರು, ಜ್ಞಾನವ್ಯಾಪಿ ಮಸೀದಿಯಲ್ಲಿ ದೇವಾಲಯ ಇತ್ತು ಅನ್ನೋದು ಸ್ಪಷ್ಟ. 1666 ಆಸು-ಪಾಸಿನಲ್ಲಿ ಔರಂಗಜೇಬ್ ದೇವಾಲಯದ ಅವಶೇಷ ಬಳಸಿಕೊಂಡೇ ದೇವಾಲಯ ಕಟ್ಟಿದ್ದ ಎಂದು ದಾಖಲೆ ಹೇಳುತ್ತೆ. ಮುಸ್ಲಿಮರು ಪಾಪಿ ಔರಂಗಜೇಬ್ ಜೊತೆ ಗುರುತಿಸಿಕೊಳ್ಳಬಾರದು. ವಿವಾದಿತ ಜಾಗದಲ್ಲಿ ನಮಾಜ್ ಮಾಡಿದ್ದರೆ ಹರಾಮ್ ಆಗುತ್ತೆ ಎಂದು ಮುಸ್ಲಿಮರೇ ಹೇಳಿಕೊಂಡಿದ್ದಾರೆ. ನಿಮಗೆ ಅದು ಹರಾಮ್, ನಮಗೆ ಅದು ಪವಿತ್ರ ಬಿಟ್ಟುಕೊಡಿ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಂಜನೇಯನ ತಂಟೆಗೆ ಬರ್ಬೇಡಿ, ಹುಷಾರ್- ಸಿಎಂಗೆ ಆರ್ ಅಶೋಕ್ ಎಚ್ಚರಿಕೆ

    ರಾಜ್ಯಸಭೆಗೆ ಸೋನಿಯಾ ಗಾಂಧಿ ಕರ್ನಾಟಕದಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲಿಂದಾದರೂ ನಿಂತುಕೊಳ್ಳಲಿ. ಸಿಎಂ 20 ಸ್ಥಾನ ಗೆಲ್ಲುತ್ತೇವೆ ಅಂತ ಹೇಳಿದ್ದಾರೆ. 20 ಸ್ಥಾನ ಇಡೀ ದೇಶದಲ್ಲಾ ಅನ್ನೋದೊಂದೇ ನನ್ನ ಪ್ರಶ್ನೆ. ಇವತ್ತಿನ ಸ್ಥಿತಿಗೆ ಇಡೀ ದೇಶದಲ್ಲಿ 20 ಸ್ಥಾನ ಗೆಲ್ಲೋದು ಕಷ್ಟ. ರಾವಣನ ಪಕ್ಷದಲ್ಲಿದ್ದರೂ ಯಾರ್ಯಾರು ವಿಭೀಷಣರಿದ್ದಿರೋ ಎಲ್ಲರೂ ಬನ್ನಿ. ಕೌರವನ ಪಕ್ಷದಲ್ಲೇ ಇದ್ದ ದುರ್ಯೋದನನ ಸಹೋದರ ಯುಯೂತ್ಸು. ಕುರುಕ್ಷೇತ್ರದ ಸಮಯದಲ್ಲಿ ಧರ್ಮದ ಪರ ಇರೋರು ಬನ್ನಿ ಎಂದು ಕರೆ ನೀಡಿದಾಗ ಆತ ಪಾಂಡವರ ಪರ ಬಂದನು. ದೇಶಬೇಕು ಅನ್ನೋ ವಿಭೀಷಣರು ಬಿಜೆಪಿ ಬನ್ನಿ ಎಂದು ಕರೆ ನೀಡಿದ್ದಾರೆ. ಮೋದಿ ಪ್ರಧಾನಿಯಾಗಬೇಕು, ದೇಶ ಉಳೀಬೇಕು ಅನ್ನೋರು ಬನ್ನಿ ಎಂದು ಕಾಂಗ್ರೆಸ್ಸಿಗರಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಹನುಮಧ್ವಜ ತೆರವು ಖಂಡಿಸಿ ಪ್ರತಿಭಟಿಸಿದ್ದ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

  • ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನ ಸರ್ಕಾರಿ ರಜೆ ಕೊಡಲು ಮೀನಾಮೇಷ ಎಣಿಸೋದೇ ತಪ್ಪು: ಸಿ.ಟಿ ರವಿ

    ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನ ಸರ್ಕಾರಿ ರಜೆ ಕೊಡಲು ಮೀನಾಮೇಷ ಎಣಿಸೋದೇ ತಪ್ಪು: ಸಿ.ಟಿ ರವಿ

    ಬೆಂಗಳೂರು: ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ (RamLalla Pran Pratishtha) ದಿನ ಸರ್ಕಾರಿ ರಜೆ ಕೊಡಲು ಇಷ್ಟು ದಿನ ಮೀನಾಮೇಷ ಎಣಿಸುವುದೇ ತಪ್ಪು, ರಜೆ ಕೊಡಬೇಕೆಂದು ಹೇಳಿಸಿಕೊಂಡು ಮಾಡಬೇಕಾ? ಎಂದು ಮಾಜಿ ಸಚಿವ ಸಿ.ಟಿ ರವಿ (C.T Ravi) ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ಸರ್ಕಾರ ರಜೆ ಘೋಷಣೆ ಮಾಡಬೇಕು. ಇದೇ ವೇಳೆ ಗುಜರಾತ್ ಕಾಂಗ್ರೆಸ್ ಶಾಸಕ ಚಾವ್ಡಾ ಕಾಂಗ್ರೆಸ್‍ಗೆ (Congress) ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‍ನ ನಿಲುವನ್ನ ವಿರೋಧಿಸಿ ಅವರು ರಾಜೀನಾಮೆ ನೀಡಿದ್ದಾರೆ. ಇದನ್ನೂ ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ರಾಮಲಲ್ಲಾ ವಿಗ್ರಹ, ಸಾಕ್ಷಾತ್ ರಾಮನಂತೆ ಇದೆ: ವಿದ್ಯಾವಲ್ಲಭ ತೀರ್ಥ ಶ್ರೀ

    ರಾವಣನ ಸಹೋದರ ವಿಭೀಷಣ ರಾವಣನ ದುರ್ನಡತೆ ವಿರೋಧಿಸಿ ರಾಮನ ಪರ ಬಂದ. ಅದೇ ರೀತಿ ಕಾಂಗ್ರೆಸ್‍ನಲ್ಲಿ ರಾಮಮಂದಿರ ವಿಚಾರವಾಗಿ ಬೇರೆ ಬೇರೆ ಹೇಳಿಕೆಯನ್ನು ನೀಡಿದ್ದಾರೆ. ಹೀಗಾಗಿ ವಿಭೀಷಣನ ಮನಸ್ಥಿತಿಯ ಕಾಂಗ್ರೆಸ್‍ನವರು ಪಕ್ಷ ತೊರೆದು ಬರುವುದು ಒಳಿತು ಎಂದು ವ್ಯಂಗ್ಯವಾಡಿದ್ದಾರೆ.

    ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಅವರ, ಗೋಧ್ರಾ ರೀತಿಯ ಘಟನೆ ಆಗಬಹುದು ಎಂಬ ಹೇಳಿಕೆ ಬಗ್ಗೆ ಅವರು ಪೊಲಿಸರಿಗೆ ಮಾಹಿತಿ ನೀಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೇಳಿಕೆಯ ಬಗ್ಗೆ ಮಾಹಿತಿ ನೀಡಬೇಕು. ನಾಳೆ ಈ ರೀತಿಯ ಘಟನೆ ನಡೆದರೆ, ಆಗ ನಾನು ಮುಂಚೆಯೇ ಹೇಳಿಕೆ ನೀಡಿದ್ದೆ, ನನ್ನ ಬಳಿ ಮಾಹಿತಿ ಕೇಳಲಿಲ್ಲ ಎಂದು ಹೇಳಬಹುದು. ಹೀಗಾಗಿ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಇನ್ನೂ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರದ ಒತ್ತಡ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರು ಹರಿಪ್ರಸಾದ್‍ಗೆ ಹೇಳಿ ಹೇಳಿಕೆ ಕೊಡಿಸಿದ್ರಾ? ಅಥವಾ ಎಐಸಿಸಿ ಪ್ರಚೋದನೇನಾ? ಅವರು ಎಐಸಿಸಿ ಜನರಲ್ ಸೆಕ್ರೆಟರಿ ಆಗಿದ್ದವರು. ಅಲ್ಲದೇ ಪರಿಷತ್ ವಿಪಕ್ಷ ನಾಯಕರಾಗಿದ್ದವರು, ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಅವರು ಹಾದಿಬೀದಿಯಲ್ಲಿ ಹೋಗುವವರಲ್ಲ. ಅಂಥವರು ಈ ಹೇಳಿಕೆ ನೀಡಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

    ಹರಿಪ್ರಸಾದ್ ಅವರು ಯಾರ ಸಂಪರ್ಕದಿಂದ ಈ ಹೇಳಿಕೆ ನೀಡಿದ್ದಾರೆ? ಜೈಶ್-ಎ-ಮೊಹಮ್ಮದ್ ಸಂಪರ್ಕನಾ? ತಾಲಿಬಾನ್ ಸಂಪರ್ಕನಾ? ದಾವೂದ್ ಇಬ್ರಾಹಿಂ ಸಂಪರ್ಕನಾ? ಯಾರ ಸಂಪರ್ಕದಿಂದ ಈ ಹೇಳಿಕೆ ನೀಡಿದ್ದಾರೆ? ರಾಜ್ಯಪಾಲರು ಸಾವಿಂಧಾನಿಕ ಹುದ್ದೆ, ಅದನ್ನ ಮೀರಿ ಅವರು ಕೆಲಸ ಮಾಡಲ್ಲ. ನಾಳೆ ಈ ರೀತಿಯ ಘಟನೆ ನಡೆದ್ರೆ ಯಾರು ಕಾರಣ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಫಿಯಲ್ಲಿ ಅರಳಿದ ರಾಮಮಂದಿರ; ಕೇಕ್‌ನಲ್ಲಿ ಮೂಡಿಬಂದ ಶ್ರೀರಾಮಚಂದ್ರ

  • ಮಂದಿರ ಕೆಡವಿ ಕಟ್ಟಿದ ಮಸೀದಿಯಲ್ಲಿ ನಮಾಜ್ ಮಾಡಿದ್ರೆ ಹರಾಮ್ ಆಗುತ್ತೆ ಅಂತಾ ಮುಸ್ಲಿಮರಿಗೂ ಅನಿಸಬಹುದು: ಸಿ.ಟಿ.ರವಿ

    ಮಂದಿರ ಕೆಡವಿ ಕಟ್ಟಿದ ಮಸೀದಿಯಲ್ಲಿ ನಮಾಜ್ ಮಾಡಿದ್ರೆ ಹರಾಮ್ ಆಗುತ್ತೆ ಅಂತಾ ಮುಸ್ಲಿಮರಿಗೂ ಅನಿಸಬಹುದು: ಸಿ.ಟಿ.ರವಿ

    ಚಿಕ್ಕಮಗಳೂರು: ಮಂದಿರ ಕೆಡವಿ ಕಟ್ಟಿದ ಮಸೀದಿಯಲ್ಲಿ ನಮಾಜ್ ಮಾಡಿದರೆ ಅದು ಹರಾಮ್ ಆಗುತ್ತದೆ ಅಂತಾ ಮುಸ್ಲಿಮರಿಗೂ ಒಂದು ದಿನ ಎನಿಸಬಹುದು ಎಂದು ಮಾಜಿ ಸಚಿವ ಸಿ.ಟಿ.ರವಿ (C.T.Ravi) ಹೇಳಿಕೆ ನೀಡಿದರು.

    ಚಿಕ್ಕಮಗಳೂರು (Chikkamagaluru) ನಗರದ ಕೋದಂಡರಾಮಸ್ವಾಮಿ ದೇವಾಲಯವನ್ನ ಶುಚಿ ಮಾಡಿದ ಬಳಿಕ ಮಾತನಾಡಿದ ಅವರು, ಘಜ್ನಿ, ಕಿಲ್ಜಿ, ಘೋರಿ, ಔರಂಗಜೇಬ್, ಮೊಘಲರು ಹಾಗೂ ಟಿಪ್ಪು ಕಾಲದಲ್ಲಿ 42 ಸಾವಿರ ದೇಗುಲ ಧ್ವಂಸ ಮಾಡಿದ್ದಾರೆ. ಭಾರತೀಯ ಮುಸಲ್ಮಾನರು ಆ ದಾಳಿಕೋರರ ಜೊತೆ ತಮ್ಮ ಅಸ್ಮಿತೆಯನ್ನ ಗುರುತಿಸಿಕೊಳ್ಳುವುದಿಲ್ಲ. ಮುಸ್ಲಿಮರು ಭಾರತೀಯ ಸನಾತನ ಪರಂಪರೆಯಲ್ಲಿ ವಿಶ್ವಾಸವಿಟ್ಟು ಭಾರತದಲ್ಲಿ ಉಳಿದುಕೊಂಡಿದ್ದಾರೆ. ಅವರಿಗೂ ಒಂದು ದಿನ ಮನ ಪರಿವರ್ತನೆಯ ದಿನ ಬರಬಹುದು ಎಂದರು. ಇದನ್ನೂ ಓದಿ: ಅನಂತ್‌ಕುಮಾರ್ ಹೆಗಡೆ ಬಂಧನ ಮಾಡೋದು ಪೊಲೀಸರು ತೀರ್ಮಾನ ಮಾಡ್ತಾರೆ: ಪರಮೇಶ್ವರ್

    ಮುಸ್ಲಿಮರಿಗೂ ಒಂದು ದಿನ ಮಂದಿರ ಕೆಡವಿ ಕಟ್ಟಿದ ಮಸೀದಿಯಲ್ಲಿ ನಮಾಜ್ ಮಾಡಿದರೆ, ಅದು ಹರಾಮ್ ಆಗುತ್ತೆ ಎನಿಸಬಹುದು. ಹರಾಮ್ ಆಗುತ್ತೆ ಎನಿಸಿದ ದಿನ ಅವರು ಉದಾರತೆಯನ್ನ ಪ್ರದರ್ಶನ ಮಾಡಬಹುದು ಎಂದು ಸಿ.ಟಿ.ರವಿ ಹೇಳಿದರು.

    ಘಜ್ನಿ, ಘೋರಿ, ಮೊಘಲರ ಜೊತೆ ಗುರುತಿಸಿಕೊಳ್ಳುವ ಮಾನಸಿಕತೆ ಅಪಾಯಕಾರಿ. ಹಾಗಂತ ನಾವು ಎಲ್ಲಾ ಮುಸ್ಲಿಮರನ್ನ ಒಂದೇ ತಕ್ಕಡಿಯಲ್ಲಿಟ್ಟು ತೂಕ ಮಾಡೋದಿಲ್ಲ. ಇಲ್ಲಿನ ಮುಸ್ಲಿಮರು ಘಜ್ನಿ, ಘೋರಿ, ಬಾಬರ್ ಮಾನಸಿಕತೆಯಿಂದ ಹೊರಬರಬೇಕು. ಅವರಿಗೆ ಶಿಶುನಾಳ ಷರೀಫ್, ಅಬ್ದುಲ್ ಕಲಾಂ ಅವರು ಆದರ್ಶವಾಗಬೇಕು. ಆಗ ಮಾತ್ರ ನಮ್ಮಲ್ಲಿ ಸಹೋದರತ್ವ ಭಾವನೆ ಗಟ್ಟಿಯಾಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ?: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅನಂತ್ ಕುಮಾರ್ ಹೆಗಡೆ

    ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಿವಾದಾತ್ಮಕ ಹೇಳಿಕ ನೀಡಿದ ಸಂಸದ ಅನಂತ್‌ಕುಮಾರ್ ಹೆಗ್ಡೆ ಹೇಳಿಕೆ ವಿರುದ್ಧ ಮಾಜಿ ಸಚಿವ ಸಿ.ಟಿ.ರವಿ ಕಿಡಿಕಾರಿದ್ದಾರೆ. ಅವರ ಹೇಳಿಕೆಯನ್ನ ನಾವು ಸಮರ್ಥಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

    ಹಿರಿಯರು ಮತ್ತು ಅವರ ಸ್ಥಾನಕ್ಕೆ ಕೊಡಬೇಕಾದ ಗೌರವವನ್ನ ಯಾರೇ ಆದರು ಕೊಡಬೇಕು. ಅನಂತ್‌ಕುಮಾರ್ ಹೆಗ್ಡೆಯವರ ಕಾರ್ಯಶೈಲಿ ಭಿನ್ನವಿದೆ. ಹಾಗಂತ, ಮತ್ತೊಬ್ಬರನ್ನ ಹರ್ಟ್ ಮಾಡಬಾರದು ಅವರ ಹೇಳಿಕೆಯನ್ನ ನಾವು ಸಮರ್ಥಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೇಳಿದ ಹಾಗೆ ಕೇಳಿದ್ರೆ ನಾವು ಆಡಳಿತ ಮಾಡೋಕಾಗಲ್ಲ: ಪರಮೇಶ್ವರ್

    ಯಾರೇ ಆದರೂ ಏಕವಚನದಲ್ಲಿ ಮಾತನಾಡೋದು, ಅಗೌರವ ತೋರುವುದನ್ನ ನಾವು ಒಪ್ಪುವುದಿಲ್ಲ. ಮಾತನಾಡುವ ಭರದಲ್ಲಿ ಶಿವರಾಜ್ ತಂಗಡಗಿಯವರು ನಾಯಿಗೆ ಹೋಲಿಸಿರುವುದು ತಪ್ಪೇ. ಪ್ರಧಾನಿಯನ್ನ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡೋದು, ಅವನು ಹೋಗಿದ್ದನಾ ಸರ್ಜಿಕಲ್ ಸ್ಟ್ರೈಕ್ ಮಾಡೋಕೆ ಅಂತಾ ಪ್ರಧಾನಿಯನ್ನ ಕೇಳಿದ್ದಾರೆ. ಹಿರಿಯರಾಗಿ, ಹೇಳುವಂತವರಾಗಿ ಪ್ರಧಾನಿಗೆ ಏಕವಚನದಲ್ಲಿ ಮಾತನಾಡೋದು ನೀವೆಷ್ಟು ಸರಿ ಎಂದು ಸಿದ್ದು ವಿರುದ್ಧವೂ ಕಿಡಿಕಾರಿದ್ದಾರೆ.

    ಹಿರಿಯರು ದೊಡ್ಡತನದಲ್ಲಿ ನಡೆದುಕೊಳ್ಳಬೇಕು. ಆಗ ಉಳಿದವರಿಗೂ ಮಾದರಿಯಾಗುತ್ತೆ ಎಂದಿದ್ದಾರೆ. ರಾಮ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವವನು. ಅವರು ಏಕವಚನದಲ್ಲಿ ಮಾತನಾಡಿರುವುದನ್ನ ನಾವು ಒಪ್ಪುವುದಿಲ್ಲ ಎಂದು ಅನಂತ್‌ಕುಮಾರ್ ಹೆಗಡೆ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

  • ಸಿದ್ದರಾಮಯ್ಯ ಹುಟ್ಟು ಮುಸ್ಲಿಂ ಆಗದಿದ್ರೂ, ಟೋಪಿ ಹಾಕಿದಾಗ ಒರಿಜಿನಲ್‌ ಮುಸ್ಲಿಂ ಥರ ಕಾಣ್ತಾರೆ: ಸಿ.ಟಿ.ರವಿ

    ಸಿದ್ದರಾಮಯ್ಯ ಹುಟ್ಟು ಮುಸ್ಲಿಂ ಆಗದಿದ್ರೂ, ಟೋಪಿ ಹಾಕಿದಾಗ ಒರಿಜಿನಲ್‌ ಮುಸ್ಲಿಂ ಥರ ಕಾಣ್ತಾರೆ: ಸಿ.ಟಿ.ರವಿ

    ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರು ಹುಟ್ಟು ಮುಸ್ಲಿಂ ಆಗದಿದ್ರೂ, ಟೋಪಿ ಹಾಕಿದಾಗ ಒರಿಜಿನಲ್ ಮುಸ್ಲಿಂ ಥರ ಕಾಣಿಸ್ತಾರೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ (C.T.Ravi) ಟೀಕಾಪ್ರಹಾರ ನಡೆಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಹುಡುಕುವ ಗಾದೆ ಸೂಕ್ತ ಆಗುತ್ತೆ ಎನ್ನುವ ಮೂಲಕ, ಅಪೂರ್ಣ ರಾಮಮಂದಿರ ಮೂಲಕ ಬಿಜೆಪಿ ರಾಜಕಾರಣ ಮಾಡ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಠಕ್ಕರ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಅಭಿಮನ್ಯು ನೇತೃತ್ವದಲ್ಲಿ ಅರ್ಜುನನ ಕೊಂದಿದ್ದ ಆನೆ ಸೆರೆ ಕಾರ್ಯಾಚರಣೆ

    ರಾಮಂದಿರ ದೇವಾಲಯಗಳ ಸಮುಚ್ಛಯ. ಮೊದಲ ಹಂತ ಈಗ ಪೂರ್ಣ ಆಗಿ ರಾಮಲಲ್ಲಾ ಪ್ರತಿಷ್ಠಾಪನೆ ಆಗ್ತಿದೆ ಈಗ. ಹಲವು ಹಂತಗಳಲ್ಲಿ ನಿರ್ಮಾಣ ಆಗಲಿದೆ. ಈ‌ ನಿರ್ಣಯ ಕೈಗೊಂಡಿರೋದು ಟ್ರಸ್ಟ್, ಅದು ಯಾವ ಪಕ್ಷಕ್ಕೂ ಸೇರಿದ ಟ್ರಸ್ಟ್ ಅಲ್ಲ. ಕಾಂಗ್ರೆಸ್‌ನವರಿಗೆ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಹುಡುಕುವ ಗಾದೆ ಸೂಕ್ತ ಆಗುತ್ತೆ. ಮೊದಲು ಆಹ್ವಾನ ಬಂದಿಲ್ಲ ಅಂತಿದ್ರು. ಆಹ್ವಾನ ಬಂದ್ಮೇಲೆ ಬರಲ್ಲ ಅಂತಿದ್ದಾರೆ. ಅವರು ಬರೋದು ರಾಮನ ಇಚ್ಛೆಯೂ ಅಲ್ಲ ಎಂದು ತಿವಿದಿದ್ದಾರೆ.

    ಬಿಜೆಪಿಯವರದ್ದು ಢೋಂಗಿ ಹಿಂದುತ್ವ ಎಂಬ ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ ಮಾತಾಡಿದ ಸಿ.ಟಿ.ರವಿ, ಸಿದ್ದರಾಮಯ್ಯ ಟೋಪಿ‌ ಮೇಲಿನ ಪ್ರೀತಿ ಕೇಸರಿ ಮೇಲೆ ತೋರಿಸಲ್ಲ. ಟೋಪಿ ಹಾಕ್ಕೊಂಡು ಸೂಟ್ ಆಗುತ್ತಾ ಇಲ್ವಾ ಅಂತಾ ನೋಡಿಕೊಂಡಿದ್ದಾರೆ. ‌ಕೇಸರಿ‌ ಪೇಟಾ ಇಡಲು ಬಂದ್ರೆ ಧಿಕ್ಕರಿಸ್ತಾರೆ. ಸಿದ್ದರಾಮಯ್ಯ ಹುಟ್ಟು ಮುಸ್ಲಿಂ ಆಗದಿದ್ರೂ, ಟೋಪಿ ಹಾಕಿದಾಗ ಒರಿಜಿನಲ್ ಮುಸ್ಲಿಂ ಥರ ಕಾಣಿಸ್ತಾರೆ. ಇದು ಢೋಂಗಿತನ ಎಂದು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಭವ್ಯ ಮಂದಿರಕ್ಕಾಗಿ ಶ್ರೀರಾಮನೇ ಮೋದಿಯನ್ನ ಆಯ್ಕೆ ಮಾಡಿಕೊಂಡಿದ್ದಾನೆ: ಅಡ್ವಾಣಿ

    ಕಾಂಗ್ರೆಸ್ ಸರ್ಕಾರ ಘೋಷಣೆ‌ ಮಾಡಿದ ಗ್ಯಾರಂಟಿಗಳಿಗಿಂತ ಘೋಷಿಸದೇ ಹಲವು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇ ಹೆಚ್ಚು. ಏಳು ತಿಂಗಳ ನಂತರ ಐದನೇ ಗ್ಯಾರಂಟಿಗೆ ಇವತ್ತು ಚಾಲನೆ ಕೊಡ್ತಿದಾರೆ. ಅದೂ ಎಲ್ಲ ನಿರುದ್ಯೋಗಿಗಳಿಗೂ ಯುವ ಗ್ಯಾರಂಟಿ ಕೊಡ್ತಿಲ್ಲ. ಮತ್ತಷ್ಟು ಗ್ಯಾರಂಟಿಗಳನ್ನು ಸರ್ಕಾರ ಹೇಳದೇ ಜಾರಿ ಮಾಡಿದೆ. ವಿದ್ಯುತ್ ಬೆಲೆ, ಅಬಕಾರಿ ತೆರಿಗೆ, ಸ್ಟಾಂಪ್ ತೆರಿಗೆ ಹೆಚ್ಚಿಸಿರೋದು ಆರನೇ ಗ್ಯಾರಂಟಿ. ಏಳನೇ ಗ್ಯಾರಂಟಿ ಹಳ್ಳಿಗಳಲ್ಲಿ ವಿದ್ಯುತ್ ಕಡಿತ ಮಾಡಿದ್ದಾರೆ. ಎಂಟನೇ ಗ್ಯಾರಂಟಿ ಅಭಿವೃದ್ಧಿ ಕೆಲಸಗಳ ಸ್ಥಗಿತ. ಒಂಬತ್ತನೇ ಗ್ಯಾರಂಟಿ ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟುತ್ತಿರುವುದು. ವರ್ಗಾವಣೆಗೆ ದರ ಪಟ್ಟಿ ಹನ್ನೊಂದನೇ ಗ್ಯಾರಂಟಿ. ಇವೆಲ್ಲ ಹೇಳದೇ ಜಾರಿ ಮಾಡಿದ ಗ್ಯಾರಂಟಿಗಳು ಎಂದು ಸರ್ಕಾರಕ್ಕೆ ಟಾಂಗ್‌ ಕೊಟ್ಟಿದ್ದಾರೆ.

  • ತುಂಡಾದ ಭಾರತದಲ್ಲೂ ಹಿಂದೂಗಳು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ ಕಾಂಗ್ರೆಸ್: ಸಿ.ಟಿ.ರವಿ ಕಿಡಿ

    ತುಂಡಾದ ಭಾರತದಲ್ಲೂ ಹಿಂದೂಗಳು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ ಕಾಂಗ್ರೆಸ್: ಸಿ.ಟಿ.ರವಿ ಕಿಡಿ

    ಕೊಪ್ಪಳ: ದೇಶ ಇಬ್ಭಾಗ ಮಾಡಲು ಸಹಿ ಹಾಕಿದ ಕಾಂಗ್ರೆಸ್, ತುಂಡಾದ ಭಾರತದಲ್ಲೂ ಹಿಂದೂಗಳು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ರಾಮಮಂದಿರ (Ram Mandir) ಉದ್ಘಾಟನೆಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ (C.T.Ravi) ವಾಗ್ದಾಳಿ ನಡೆಸಿದರು.

    ಕೊಪ್ಪಳದ (Koppal) ಆಂಜನಾದ್ರಿ ಬೆಟ್ಟದಲ್ಲಿ ಹನುಮಂತನ ದರ್ಶನ ಪಡೆದರು. ನಂತರ ಕರಸೇವಕರ ಬಂಧನ‌ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಂದೂ ವಿರೋಧಿ ಬುದ್ದಿ ಕಾಂಗ್ರೆಸ್‌ನ (Congress) ಡಿಎನ್ಎನಲ್ಲೇ ಬಂದಿದೆ. ಕಾಂಗ್ರೆಸ್ ಸರ್ಕಾರ ಮಾಡಿದ ತಪ್ಪು ಸಮರ್ಥನೆ ಮಾಡಿಕೊಳ್ಳುಲು ಸುಳ್ಳುಗಳ ಸಬೂಬು ಹೇಳುತ್ತಿದ್ದಾರೆ.‌ ಈಗ ರಾಮಮಂದಿರ ನಿರ್ಮಾಣ ಮಾಡಿ, ಉದ್ಘಾಟನೆ ಮಾಡುತ್ತಿರುವುದನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣಕ್ಕೆ ಹಿಂದೂ ಕಾರ್ಯಕರ್ತರನ್ನು ಹುಡುಕಿ ಕೇಸ್ ಹಾಕುತ್ತಿದ್ದಾರೆ. ಹುಬ್ಬಳ್ಳಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಎಲ್ಲ ಕಡೆ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿದ್ದಾರೆ. ಕಾಂಗ್ರೆಸ್‌ನವರು ಏನಾದರೂ ಮಾಡಲಿ. ನಮ್ಮ ಕಾರ್ಯಕರ್ತರ ಜೊತೆ ನಾವಿದ್ದೇವೆ.‌ ಕಾರ್ಯಕರ್ತರ ರಕ್ಷಣೆ ನಾವು ಮಾಡುತ್ತೇವೆ.‌ ಸವಾಲು ಸ್ವೀಕರಿಸಿ ನ್ಯಾಯಯುತ ಹೋರಾಟ ಮಾಡುತ್ತೇವೆ. ಜೈಲಿಗೆ ಹೋಗೋದು ನಮಗೇನು ಹೊಸದಲ್ಲ. ನಮ್ಮ ಮೇಲೆ ಕೇಸ್ ಹಾಕಿದ್ರೆ ನಾವೇ ಜೈಲು ಬರೋ ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಕರಸೇವಕನ ಬಂಧನ ಪ್ರಕರಣದಲ್ಲಿ ಜೋಶಿ ಕೈವಾಡವಿದೆ: ಶೆಟ್ಟರ್ ಗಂಭೀರ ಆರೋಪ

    ಬಿ.ಕೆ.ಹರಿಪ್ರಸಾದ್ ಅವರ ಗೋಧ್ರಾ ಮಾದರಿ ಗಲಭೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹರಿಪ್ರಸಾದ್ ಅವರಿಗೆ ಸಿದ್ದರಾಮಯ್ಯ ಅವರ ಒಳಸುಳಿ ಚನ್ನಾಗಿ ಗೊತ್ತಿದೆ. ಸಿಎಂ ಯಾರ ರಕ್ಷಣೆ ಮಾಡುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಕೊಲೆ ಮಾಡಿದವರ ಕೇಸ್ ವಾಪಸ್ ಪಡೆದಿದ್ದಾರೆ. ಸಿಎಂ ಹಿಂಬಾಲಕರು ಈ ರೀತಿ ಕೃತ್ಯ ಎಸಗಬಹುದು ಎಂಬ ಸೂಚನೆ ಹರಿಪ್ರಸಾದ್ ಅವರಿಗೆ ಇರಬಹುದು. ಆ ಮಾಹಿತಿಯ ಮೇಲೆ ಹರಿಪ್ರಸಾದ್‌ ಈ ಹೇಳಿಕೆ ನೀಡಿರುತ್ತಾರೆ. ಅವರನ್ನ ತನಿಖೆಗೆ ಒಳಪಡಿಸಬೇಕು. ರಾಮಭಕ್ತರಿಗೆ ರಕ್ಷಣೆ ಕೊಡಬೇಕು ಎಂದು ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.

    ಅಂಜನಾದ್ರಿ ಅಭಿವೃದ್ಧಿ ವಿಚಾರದಲ್ಲಿ ಸಚಿವ ಶಿವರಾಜ ತಂಗಡಗಿ ಉದ್ದುದ್ದ ಮಾತಾಡಿದ್ದಾರೆ.‌ ಸೋಲು ಗೆಲುವು ಸಹಜ. ಸುಮಾರು 60 ವರ್ಷ ಅಧಿಕಾರ ನಡೆಸಿ ಕಾಂಗ್ರೆಸ್ ಏಕೆ ಅಂಜನಾದ್ರಿ ಅಭಿವೃದ್ಧಿ ಮಾಡಲಿಲ್ಲ. ವ್ಯಕ್ತಿಗತ ರಾಮಭಕ್ತಿಯನ್ನು ನಾನು ಪ್ರಶ್ನೆ ಮಾಡಲ್ಲ. ಪಕ್ಷದ ನಿಲುವು ಏನು ಎಂದು ಹೇಳಲಿ. ಶಿವರಾಜ ತಂಗಡಗಿ ಅವರ ರಾಮಭಕ್ತಿ ಸ್ವಾರ್ಥದ ನೆಲೆಯಿಂದ ಕೂಡಿರೋದು ರಾಷ್ಟ್ರದ ಭಕ್ತಿ ಅಲ್ಲ ತಿರುಗೇಟು ನೀಡಿದರು. ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಇತ್ತು, ಈಗಲೂ ಇದೆ ಎಂದು ನಾವು ಹೇಳ್ತಿಲ್ಲ: ಪರಮೇಶ್ವರ್

    ದತ್ತಪೀಠಕ್ಕೆ ಅನ್ಯಾಯ ಮಾಡುವ ಕೆಲಸ ಕಾಂಗ್ರೆಸ್ ಮಾಡಿದೆ. ಕಳೆದ 7 ವರ್ಷದ ಹಿಂದೆ ಭಗವಾಧ್ವಜ ಹಾರಿಸಿದ್ದಾರೆ ಎಂದು ಕೇಸ್ ಹಾಕಿದ್ದಾರೆ. ಸಿದ್ದರಾಮಯ್ಯಗೆ ಕೇಸರಿ ಕಂಡರೆ ಆಗಲ್ಲ ಎಂದು ಗೊತ್ತಾಗಿದೆ. ಪೀಠದ ಆಸ್ತಿಯನ್ನು ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದೇವೆ. ಅಕ್ರಮ ಘೋರಿ ನಿರ್ಮಾಣವಾಗಿದೆ. ಅದನ್ನ ಸ್ಥಳಾಂತರ ಮಾಡಬೇಕು. ಕಂದಾಯ ಇಲಾಖೆಯ ಪ್ರಕಾರ ದತ್ತಪೀಠ ಬೇರೆ, ಬಾಬಾಬುಡನ್ ದರ್ಗಾ ಬೇರೆ.‌ ದತ್ತಪೀಠವನ್ನು ಪೂರ್ಣ ಪ್ರಮಾಣದಲ್ಲಿ ಹಿಂದೂಗಳ ವಶಕ್ಕೆ ನೀಡಬೇಕು ಎಂದು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಲಕ್ಷ್ಮಣ ಸವದಿ ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಕೊಟ್ಟಿದ್ದು ಕೆಟ್ಟಿತೆನಬೇಡ ಎಂದು ಮಾತ್ರ ಸವದಿ ಅವರಿಗೆ ಹೇಳಲು ಬಯಸುತ್ತೇನೆ. ಹಣ ಕೊಟ್ಟ ಆಧಾರದಲ್ಲಿ ಯಾರಿಗೂ ಆಮಂತ್ರಣ ಕೊಟ್ಟಿಲ್ಲ. ದಾನ ಕೊಟ್ಟಿದ್ದು ಹೇಳೋದು ಸೂಕ್ತ ಅಲ್ಲ ಅಂತಾ ಹಿರಿಯರು ಹೇಳಿದ್ದಾರೆ. ಜನವರಿ 22ರ ನಂತರ ನಾನು ಅಯೋಧ್ಯೆಗೆ ಹೋಗುತ್ತಿದ್ದೇನೆ. ಸವದಿ ಅವರೇ ಜೊತೆಗೆ ಹೋಗೋಣ ಬನ್ನಿ ಎಂದು ಆಹ್ವಾನ ನೀಡಿದರು. ಇದನ್ನೂ ಓದಿ: ಹುಬ್ಬಳ್ಳಿ ಕೇಸ್‌ – ಕರಸೇವಕ ಶ್ರೀಕಾಂತ್‌ ಪೂಜಾರಿಗೆ ಜಾಮೀನು

    ಮಂತ್ರಾಕ್ಷತೆಯೂ ಅನ್ನಭಾಗ್ಯದ ಅಕ್ಕಿ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಕ್ಕಿ ಬೆಳೆದ ರೈತನೇ ನನ್ನದು ಎಂದು ಹೇಳಲ್ಲ. ವಾಸ್ತವದಲ್ಲಿ ಇವರು ಒಂದು ಕೆಜಿ ಅಕ್ಕಿಯನ್ನೂ ಕೊಡುತ್ತಿಲ್ಲ. ರೈತ ಬೆಳೆಯದೆ ಇದ್ದರೆ ನಾನು ಕೊಟ್ಟೆ ಎಂದು ಹೇಳಲು ಆಗುತ್ತಾ? ಎಲ್ಲವೂ ಭಗವಂತ ಕೊಟ್ಟಿದ್ದು‌ ಎಂದು ಹೇಳಿದರು.

  • ಕಾಫಿನಾಡ ದತ್ತಜಯಂತಿಗೆ ಅಧಿಕೃತ ಚಾಲನೆ; ಸಿ.ಟಿ.ರವಿ ಮಾಲಾಧಾರಣೆ – ಜಿಲ್ಲಾದ್ಯಂತ ಹೈ ಅಲರ್ಟ್‌

    ಕಾಫಿನಾಡ ದತ್ತಜಯಂತಿಗೆ ಅಧಿಕೃತ ಚಾಲನೆ; ಸಿ.ಟಿ.ರವಿ ಮಾಲಾಧಾರಣೆ – ಜಿಲ್ಲಾದ್ಯಂತ ಹೈ ಅಲರ್ಟ್‌

    ಚಿಕ್ಕಮಗಳೂರು: ತಾಲೂಕಿನ ದತ್ತಪೀಠದಲ್ಲಿ ನಡೆಯುವ ದತ್ತ ಜಯಂತಿ (Datta Jayanthi) ಕಾರ್ಯಕ್ರಮಕ್ಕೆ ಇಂದು (ಭಾನುವಾರ) ಅಧಿಕೃತ ಚಾಲನೆ ದೊರೆತಿದೆ.‌ ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಮಾಜಿ ಶಾಸಕ ಸಿ.ಟಿ.ರವಿ (C.T.Ravi) ಜೊತೆ 300 ಕ್ಕೂ ಅಧಿಕ ದತ್ತ ಭಕ್ತರು ಮಾಲಾಧಾರಣೆ ಮಾಡುವ ಮೂಲಕ 10 ದಿನಗಳ ದತ್ತಜಯಂತಿ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆತಿದೆ.

    ಕಳೆದ ವರ್ಷಕ್ಕಿಂತ ಈ ಬಾರಿ ಭಾರೀ ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ದತ್ತ ಭಕ್ತರು ಮಾಲಾಧಾರಣೆ ಮಾಡಿದ್ದಾರೆ. ಇಂದಿನಿಂದ 10 ದಿನಗಳ ಕಾಲ ಕಾಫಿನಾಡು ಬೂದಿ ಮುಚ್ಚಿದ ಕೆಂಡದಂತಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿ ಹದ್ದಿನ ಕಣ್ಣಿಟ್ಟಿದೆ. ಇದನ್ನೂ ಓದಿ: ಖಾಸಗಿ ದೇವಾಲಯಗಳನ್ನು ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಗೆ ತೆಗೆದುಕೊಳ್ಳಲ್ಲ: ರಾಮಲಿಂಗಾ ರೆಡ್ಡಿ ಸ್ಪಷ್ಟನೆ

    ಇದೇ 24ರ ಭಾನುವಾರದಂದು ನಗರದಲ್ಲಿ ಸಾವಿರಾರು ಮಹಿಳೆಯರು ಬೃಹತ್ ಸಂಕೀರ್ತನ ಯಾತ್ರೆ ನಡೆಸಿ ದತ್ತಪೀಠದಲ್ಲಿ ಹೋಮ-ಹವನ ನಡೆಸುವ ಮೂಲಕ ಅನುಸೂಯ ಜಯಂತಿ ಆಚರಿಸಲಿದ್ದಾರೆ. ಡಿ.25 ರ ಸೋಮವಾರದಂದು ಚಿಕ್ಕಮಗಳೂರು ನಗರದಲ್ಲಿ ದತ್ತಭಕ್ತರು ಹಾಗೂ ಸಾರ್ವಜನಿಕರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು 20 ಸಾವಿರಕ್ಕೂ ಅಧಿಕ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

    ಡಿ.26 ರಂದು ರಾಜ್ಯದ ಮೂಲೆ ಮೂಲೆಗಳಿಂದ ಬರುವ 25,000ಕ್ಕೂ ಅಧಿಕ ದತ್ತ ಭಕ್ತರು ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ. ಕೊನೆ ಮೂರು ದಿನ ದತ್ತಜಯಂತಿಯ ಸೂಕ್ಷ್ಮ ದಿನವಾಗಿದ್ದು ಜಿಲ್ಲಾದ್ಯಂತ ಸಾವಿರಾರು ಪೊಲೀಸರ ಹದ್ದಿನ ಕಣ್ಣಿಡಲಿದ್ದಾರೆ. ಇಂದಿನಿಂದ 10 ದಿನಗಳ ಕಾಲ ಚಿಕ್ಕಮಗಳೂರು ಬೂದಿ ಮುಚ್ವಿದ ಕೆಂಡದಂತಿರಲಿದೆ. ಇದನ್ನೂ ಓದಿ: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ – ಪ್ರಿನ್ಸಿಪಾಲ್, ವಾರ್ಡನ್‌, ಡಿ-ಗ್ರೂಪ್‌ ನೌಕರರ ಅಮಾನತಿಗೆ ಸೂಚನೆ

  • ಈ ದೇಶದ ಸಂಪತ್ತು ಭಾರತಕ್ಕೆ ದ್ರೋಹ ಬಗೆಯುವವರಿಗೆ ಅಲ್ಲ: ಸಿಎಂಗೆ ಸಿ.ಟಿ.ರವಿ ಟಾಂಗ್

    ಈ ದೇಶದ ಸಂಪತ್ತು ಭಾರತಕ್ಕೆ ದ್ರೋಹ ಬಗೆಯುವವರಿಗೆ ಅಲ್ಲ: ಸಿಎಂಗೆ ಸಿ.ಟಿ.ರವಿ ಟಾಂಗ್

    ಮಂಗಳೂರು: ಈ ದೇಶದ ಸಂಪತ್ತು ಭಾರತೀಯರಿಗೆ ಸೇರಿದ್ದು, ಭಾರತಕ್ಕೆ ದ್ರೋಹ ಬಗೆಯುವವರಿಗೆ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಸಿ.ಟಿ.ರವಿ (C.T.Ravi) ಟಾಂಗ್ ಕೊಟ್ಟರು.

    ಮಂಗಳೂರಿನಲ್ಲಿ (Mangaluru) ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿಕೆ ಅಪಾಯಕಾರಿ. ಈ ಮಾನಸಿಕತೆಯಿಂದಲೇ ದೇಶ ವಿಭಜನೆಗೆ ಕಾರಣವಾಗಿದ್ದು, ಈ ಹೇಳಿಕೆ ಕೋಮುವಾದ ನೀತಿಯ ನಿದರ್ಶನ. ಓಲೈಕೆ ರಾಜಕಾರಣ ವೋಟ್ ಬ್ಯಾಂಕ್‌ಗಾಗಿ ಇಂತಹ ಅಪಾಯಕಾರಿ ಹೇಳಿಕೆ. ಈ ದೇಶದ ಸಂಪತ್ತು ಭಾರತೀಯರಿಗೆ ಸೇರಿದ್ದು. ಭಾರತೀಯತೆಯನ್ನ ಒಪ್ಪಿದವರಿಗೆ ಸೇರಿದ್ದು. ಭಾರತದಲ್ಲೇ ಇದ್ದು ಭಾರತ ದೇಶಕ್ಕೆ ದ್ರೋಹ ಬಗೆಯುವವರಿಗೆ ಅಲ್ಲ. ದೇಶದ ಸಂಪತ್ತಿನ ಮೊದಲ ಹಂಚಿಕೆ ಬಡವರಿಗೆ ಆಗಬೇಕು, ಅದು ನಮ್ಮ ನೀತಿ. ಈ ಓಲೈಕೆಯ ರಾಜನೀತಿಯ ಪರಿಣಾಮ ಕೋಟ್ಯಂತರ ಜನ ನಿರ್ವಸತಿಯಾಗೋದಕ್ಕೆ ಕಾರಣವಾಗಿದ್ದು. ಕಾಂಗ್ರೆಸ್ ಇಸ್ ರಿಯಲ್ ಕಮ್ಯುನಲ್ ಪಾರ್ಟಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿಯವರಿಗೆ ನನ್ನ ಮೇಲೆ ಅಷ್ಟೊಂದು ದ್ವೇಷವೇ: ಪ್ರಿಯಾಂಕ್ ಖರ್ಗೆ ಪ್ರಶ್ನೆ

    ಮುಖ್ಯಮಂತ್ರಿ ಭಾಗವಹಿಸಿದ್ದ ಹುಬ್ಬಳ್ಳಿಯ ಸಭೆಯಲ್ಲಿ ಐಸೀಸ್ ಏಜೆಂಟ್ ಇದ್ದರು ಎಂಬ ಯತ್ನಾಳ್ ಆರೋಪ ಬಗ್ಗೆ ಮಾತನಾಡಿ, ಯತ್ನಾಳ್ ಅವರು ಸುಮ್ಮನೆ ಆರೋಪ ಮಾಡಿದ್ದಾರೆ ಅಂತಾ ಅನ್ನಿಸೋದಿಲ್ಲ. ಈ ವಿಷಯದ ಬಗ್ಗೆ ಸಿಬಿಐ ಹಾಗೂ ಎನ್‌ಐಎ ತನಿಖೆ ನಡೆಸುವ ಅವಶ್ಯಕತೆಯಿದೆ. ಅ ಕಾರ್ಯಕ್ರಮದಲ್ಲಿ ಯರ‍್ಯಾರು ಇದ್ದರು, ಅವರ ಹಿನ್ನೆಲೆ ಏನು ಅನ್ನೋದರ ಬಗ್ಗೆ ಗಂಭೀರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

    ಸೋಮಣ್ಣ ಅಸಮಾಧಾನ ವಿಚಾರದ ಬಗ್ಗೆ ಮಾತನಾಡಿ, ಸಿದ್ದಗಂಗಾ ಮಠದಲ್ಲಿ ಇವತ್ತು ಗುರುಭವನದ ಉದ್ಘಾಟನೆ. ಗುರುಭವನದ ಉದ್ಘಾಟನೆಗೆ ಬಿಜೆಪಿಯವರನ್ನು ಕರೆದಿದ್ದಾರೆ. ಹಾಗೆಯೇ ಆ ಜಿಲ್ಲೆಯ ಕಾಂಗ್ರೆಸ್ ನಾಯಕರನ್ನೂ ಕರೆದಿದ್ದಾರೆ. ಕೇವಲ ಕಾಂಗ್ರೆಸ್‌ನವರನ್ನೇ ಕರೆದಿದ್ದಾರೆ ಅನ್ನೋದು ತಪ್ಪು ಮಾಹಿತಿ. ನನಗೂ ಕಾರ್ಯಕ್ರಮದ ಆಮಂತ್ರಣ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್, ರಾಜಣ್ಣ ಅದೇ ಜಿಲ್ಲೆಯವರು ಎಂದು ಕರೆದಿದ್ದಾರೆ. ಸೋಮಣ್ಣ ಬಿಜೆಪಿ ಬಿಡ್ತಾರೆ ಅನ್ನೋದು ತಪ್ಪು ಮಾಹಿತಿ. ಪಾರ್ಟಿ ಹೇಳಿದ್ದಕ್ಕೆ ಅವರೂ ಎರಡು ಕಡೆ ಸ್ಪರ್ಧೆ ಮಾಡಿದ್ದಾರೆ. ಅವರು ಬಿಜೆಪಿ ಬಿಡ್ತಾರೆ ಅನ್ನೋದು ಉಹಾಪೋಹ ಎಂದರು. ಇದನ್ನೂ ಓದಿ: ಕರ್ನಾಟಕದಿಂದ ಸೋನಿಯಾ ಗಾಂಧಿ ಸಂಸತ್ತಿಗೆ! – ಹೈಕಮಾಂಡ್‌ ಮುಂದೆ ಡಿಕೆಶಿ ಪ್ರಸ್ತಾಪ

    ಸೋಮಣ್ಣ ಅವರು ದೆಹಲಿಗೆ ಯಾವಾಗ ಹೋಗ್ತಾರೆ ಅನ್ನೋ ಬಗ್ಗೆ ನನಗೆ ಮಾಹಿತಿ ಇಲ್ಲ. ಬಿಜೆಪಿಗೆ ಬರುವವರು ಕೇವಲ ರಾಜಕೀಯ ಕಾರಣಕ್ಕೆ ಬರಲ್ಲ. ಬಿಜೆಪಿಯ ವಿಚಾರಧಾರೆ ಒಪ್ಪಿಕೊಂಡು ಬರುತ್ತಾರೆ. ಪಂಚರಾಜ್ಯ ಚುನಾವಣೆಯಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು 28 ಕ್ಷೇತ್ರವನ್ನೂ ಗೆಲ್ಲುತ್ತೇವೆ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಇರುತ್ತೆ ಅನ್ನೋ ವಿಶ್ವಾಸ ಕಾಂಗ್ರೆಸ್‌ನವರಿಗೇ ಇಲ್ಲ. ಹಲವು ನಾಯಕರು ಬಂಡಾಯ ಎದ್ದಿದ್ದಾರೆ. ಬಸವರಾಜ ರಾಯರೆಡ್ಡಿ, ಬಿ.ಆರ್.ಪಾಟೀಲ್ ಬಂಡಾಯ ಎದ್ದಿದ್ದಾರೆ. ಪತ್ರ ಚಳುವಳಿ ಮಾಡ್ತಾಯಿದ್ದಾರೆ. ಅದನ್ನ ನಾವು ಹೇಳಿಕೊಟ್ಟಿದ್ದು ಅಲ್ಲ. ಕಾಂಗ್ರೆಸ್‌ನವರೇ ಹೇಳ್ತಾರೆ ಈ ಹಾಳಾದ ಸರ್ಕಾರ ಯಾಕ್ ಬಂತೋ ಏನು ಎಂದು. ಒಂದು ರೂಪಾಯಿ ಕೆಲಸ ಆಗ್ತಿಲ್ಲ ಅಂತಾ ಕಾಂಗ್ರೆಸ್‌ನವರೇ ಬೈತಾಯಿದ್ದಾರೆ. ಇದು ನನ್ನ ಮಾತಲ್ಲ ಕಾಂಗ್ರೆಸ್ಸಿಗರ ಮಾತು ಎಂದು ಲೇವಡಿ ಮಾಡಿದರು.

  • ವಿಜಯೇಂದ್ರಗೆ ಹಾರ ಹಾಕಿ, ಶಾಲು ಹೊದಿಸಿ ತಬ್ಬಿಕೊಂಡು ಶುಭಕೋರಿದ ಸಿ.ಟಿ.ರವಿ

    ವಿಜಯೇಂದ್ರಗೆ ಹಾರ ಹಾಕಿ, ಶಾಲು ಹೊದಿಸಿ ತಬ್ಬಿಕೊಂಡು ಶುಭಕೋರಿದ ಸಿ.ಟಿ.ರವಿ

    ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಬಿ.ವೈ.ವಿಜಯೇಂದ್ರ (Vijayendra) ಅವರನ್ನು ಮಾಜಿ ಸಚಿವ ಸಿ.ಟಿ.ರವಿ ಅಭಿನಂದಿಸಿದ್ದಾರೆ.

    ಸೋಮವಾರ ವಿಜಯೇಂದ್ರ ಅವರ ನಿವಾಸಕ್ಕೆ ಆಗಮಿಸಿದ ಸಿ.ಟಿ.ರವಿ (C.T.Ravi) ಅವರು ನೂತನ ಅಧ್ಯಕ್ಷರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಶುಭಕೋರಿದ್ದಾರೆ. ಇದರ ಫೋಟೋಗಳನ್ನು ವಿಜಯೇಂದ್ರ ಅವರು ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಪಟಾಕಿ ಸೌಂಡ್ ಜೋರು; ಕಣ್ಣಿಗೆ ಹಾನಿಯಾಗಿ 25ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ

    ಇಂದು ನಮ್ಮ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಸಚಿವರಾದ ಸಿ.ಟಿ.ರವಿ ಅವರನ್ನು ಭೇಟಿಯಾಗಿ ದೀಪಾವಳಿ ಹಬ್ಬದ ಶುಭಕೋರಿ, ಅವರ ಸಲಹೆ ಹಾಗೂ ಮಾರ್ಗದರ್ಶನ ಕೋರಲಾಯಿತು ಎಂದು ವಿಜಯೇಂದ್ರ ಬರೆದುಕೊಂಡಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸಿ.ಟಿ.ರವಿ ಅವರು ಸ್ಥಾನ ಕೈತಪ್ಪಿದ್ದಕ್ಕೆ ನಿರಾಸೆಗೊಂಡಿದ್ದರು ಎನ್ನಲಾಗಿತ್ತು. ಇವರ ಜೊತೆಗೆ ಆಕಾಂಕ್ಷಿಗಳಾಗಿದ್ದ ವಿ.ಸೋಮಣ್ಣ, ಅರವಿಂದ್‌ ಬೆಲ್ಲದ್‌ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಬೇಡ ಅಂದ್ರೆ ಮನೆಯಲ್ಲಿರ್ತೀನಿ – ಸಿ.ಟಿ ರವಿ

    ಸ್ಥಾನ ಕೈತಪ್ಪಿದ್ದಕ್ಕೆ ನನಗೆ ಬೇಸರವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಸಿ.ಟಿ.ರವಿ ಕೊನೆಗೂ ವಿಜಯೇಂದ್ರರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ. ಇದರ ನಡುವೆ ಅಸಮಾಧಾನಿತ ನಾಯಕರನ್ನು ಸಮಾಧಾನ ಪಡಿಸುವ ಕಾರ್ಯವನ್ನು ಬಿ.ಎಸ್‌.ಯಡಿಯೂರಪ್ಪ ಮಾಡುತ್ತಿದ್ದಾರೆ ಎನ್ನಲಾಗಿದೆ. ಎಲ್ಲರಿಗೂ ಫೋನ್‌ ಕರೆ ಮಾಡಿ ಪಕ್ಷ ಸಂಘಟನೆಗೆ ಒಗ್ಗಟ್ಟಾಗಿರೋಣ ಎಂಬ ಸಂದೇಶವನ್ನು ಬಿಎಸ್‌ವೈ ರವಾನಿಸುತ್ತಿದ್ದಾರೆ.